Thursday, May 26, 2022

Power Of Anna Dana

 

ಅನ್ನದಾನದ ಮಹಿಮೆ


Annadanada Mahime or Power of Annadana

 


                                                   Pic-1

 

ಸತ್ಯಜಿತ್‌ ಎಂಬ ಬ್ರಾಹ್ಮಣ.ಸದಾಚಾರ ಸಂಪನ್ನ.ಗಂಗಾನದಿಯ ಭಕ್ತ. ಎಲ್ಲಿ ಯಾವ ತೀರ್ಥ ಕ್ಷೇತ್ರ ಹೋದರು ಯಾವ ನದಿಗಳು ಕಂಡರು ಗಂಗಾ ದೇವಿಯ ಸ್ಮರಣೆ.ನಿತ್ಯ ತೀರ್ಥ ಯಾತ್ರೆ ನಿರತ.


ಗಂಗಾ ಸ್ನಾನ ಮಾಡಬೇಕು ಎಂಬುವ ಹಂಬಲ.ಅದಕ್ಕೆ ಹೊರಟ.
ಕುರುಕ್ಷೇತ್ರ ವೆನ್ನುವ ಊರಿಗೆ ಬರುತ್ತಾನೆ.
ದಣಿದ ಆತನಿಗೆ ಯಾರಾದರೂ ಬ್ರಾಹ್ಮಣ ಕುಟುಂಬ ಯಾತ್ರಿಕರಿಗೆ ಊಟ ಹಾಕುವ ಕುಟುಂಬದ ಬಗ್ಗೆ ಅಲ್ಲಿ ಇದ್ದ ಜನರಿಗೆ ಕೇಳಿದ.


ಆ ಗ್ರಾಮದ ಜನರು ಸತ್ಯಕೇತು ಎನ್ನುವ ಬ್ರಾಹ್ಮಣ ನಿತ್ಯ ಅನ್ನದಾನ ಮಾಡುತ್ತಾ ಇದ್ದಾನೆ.ಅವನಲ್ಲಿ ನೀವು ಹೋಗಿ ನಿಮ್ಮ ಹಸಿವಿನ ಭಾದೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಅಂತ ಹೇಳುತ್ತಾರೆ.
ತಕ್ಷಣ ಅವನ ಮನೆಗೆ ಬರುತ್ತಾನೆ. ಬಂದಂತಹ ಅತಿಥಿ ಯನ್ನು ನೋಡಿ ಸತ್ಯಕೇತು ಬಹು ಸಂತಸಗೊಂಡು


"
ನಿಮ್ಮಂತಹ ಮಹಾತ್ಮರ, ಭಗವಂತನ ಭಕ್ತರ ,ಆಗಮನ ನನ್ನ ಜನ್ಮಾಂತರದ ಪುಣ್ಯ ದ ಫಲ.ನಮ್ಮ ಪಿತೃ ದೇವತೆಗಳು,
ಇಂದು ಸಂತೃಪ್ತಿ ಹೊಂದುವರು...


ಅವರ ಅಂತರ್ಯಾಮಿಯಾದ ಶ್ರೀ ಹರಿಯು ಸಂಪ್ರಸನ್ನ ಆಗುವನು..ಏಳಿ.!!.ತಮ್ಮ ಸ್ನಾನ ಆಹ್ನೀಕ ಗಳನ್ನು ಮುಗಿಸಿಕೊಂಡು ಭೋಜನ ಮಾಡಲು ಅದರ ಸಿದ್ದರಾಗಿ ಎಂದು ಕೈ 🙏ಮುಗಿದು ವಿಜ್ಞಾಪಿಸಿದ.


ಸತ್ಯಜಿತ್‌ ಎನ್ನುವ ಬ್ರಾಹ್ಮಣ ಅವನ ಮಾತಿಗೆ ಸಂತಸಗೊಂಡು
"
ಅಯ್ಯಾ! ಸತ್ಯಕೇತು! ಎಲ್ಲಾ ಕಡೆಯಿಂದ ಹಾರಿ ಬರುವ ಪಕ್ಷಿಗಳಿಗೆ ವೃಕ್ಷಗಳು ಹೇಗೆ ಆಶ್ರಯ ನೀಡುವದೋ, ಅದೇ ರೀತಿಯಲ್ಲಿ ನೀನು ಬರುವಂತಹ ಯಾತ್ರಿಕರಿಗೆ ಆಶ್ರಯ ದಾತ ನಾಗಿದ್ದೀ.ನಿನ್ನಂತಹ ಗೃಹಸ್ಥ ಇನ್ನೊಬ್ಬ ಇಲ್ಲ. ಅದಿರಿಲಿ.
ನೀನು ಗಂಗಾಸ್ನಾನ ಮಾಡಿರುವೆಯಾ?? ಎಂದು ಕೇಳಿದ.


ಅದಕ್ಕೆ ಸತ್ಯಕೇತು
"
ಕ್ಷಮಿಸಿ!!. ನಾನು ಇದುವರೆಗೆ ಗಂಗಾಸ್ನಾನ ಮಾಡಿಲ್ಲ.ನಾನು ಗಂಗಾ ಸ್ನಾನ ಮಾಡಲು ಹೊರಟರೆ ಇಲ್ಲಿ ನಿತ್ಯ ಬರುವ ಯಾತ್ರಿಕರಿಗೆ ತೊಂದರೆ ಆಗುತ್ತದೆ... ಮತ್ತು
ನನ್ನ ಅನ್ನದಾನ ಮಾಡುವ ಸಂಕಲ್ಪ ನಿಂತು ಹೋಗುತ್ತದೆ.ಹಾಗಾಗಿ ಹೋಗಿಲ್ಲ.
ಎಂದು ಉತ್ತರ ಕೊಟ್ಟ.

 


                                                                   Pic-2

ಈ ಮಾತನ್ನು ಕೇಳಿ ಸತ್ಯಜಿತ್‌.


ಛೇ!!!ಗಂಗಾ ಸ್ನಾನ ಮಾಡದ ನಿನ್ನ ಮುಖ ದರುಶನ,ನಿನ್ನ ಮನೆಯ ಭೋಜನ ಆತಿಥ್ಯ ಎಲ್ಲಾ ನಿಷಿದ್ಧ..
ತಿಳಿಯದೆ ನಿನ್ನ ಮನೆಗೆ ಬಂದೆ.. ಎಂದು
ಅವನ ಮನೆಯ ಆತಿಥ್ಯ ನಿರಾಕರಿಸಿ, ಅವನಿಗೆ ನಿಂದಿಸಿ ಹಾಗೇ ಹೊರಟ...
ಗಂಗಾನದಿಯ ದಡವನ್ನು ಸೇರಿದ...


ನೋಡುತ್ತಾನೆ ಸುತ್ತಲೂ ಬರಿಯ ಮರುಳು.ಎಲ್ಲಾ ಕಡೆ ಉಸುಕು..
ಒಂದು ಹನಿ ಸಹ ಗಂಗಾ ನದಿಯ ಕಾಣುತ್ತಾ ಇಲ್ಲ.
ಅಮ್ಮಾ!!ಗಂಗಾ ಮಾತೆ!! ನಾನು ಏನು ಅಪರಾಧ ಮಾಡಿಲ್ಲ. ಯಾಕೇ ನಿನ್ನ ದರುಶನ, ಸ್ನಾನ ನನಗೆ ಇಲ್ಲ.ದಯವಿಟ್ಟು ಕೃಪೆ ತೋರು ಅಂತ ಅಲ್ಲಿ ಬಿದ್ದು ಗೋಳಾಡಿದ.
"
ಎಲೈ ಮೂಢ!!..


ಸತ್ಯಕೇತು ವಿನ ಮನೆಯ ಅನ್ನವನ್ನು ತಿರಸ್ಕರಿಸಿ, ಅವನನ್ನು ನಿಂದಿಸಿ ಬಂದ ಕಾರಣದಿಂದ ನಿನಗೆ ನಾನು ಒಲಿಯುವದಿಲ್ಲ".
"
ಅನ್ನದಾನ ಕ್ಕೆ ಸಮನಾದ ದಾನ ಇನ್ನೊಂದು ಇಲ್ಲ"...

 


                                                                           Pic-3

ನಿತ್ಯ ಅನ್ನದಾನ ಮಾಡುತ್ತಾ


ಯಾತ್ರೆ ಮಾಡಿದರೆ ಚ್ಯುತಿ ಆಗುವುದೆಂದು ಗಂಗಾ ಸ್ನಾನ ಮಾಡದೇ ಮನೆಯಲ್ಲಿ ಬಂದಂತಹ ಅತಿಥಿ ಗಳ ಸತ್ಕಾರ ಮಾಡಿ ಅವರನ್ನು ಸಂತಸ ಪಡಿಸುವ ಸತ್ಯಕೇತು ಎಂಬ ಸಜ್ಜನ ವ್ಯಕ್ತಿಯ ಮನಸ್ಸು ನೋಯಿಸಿ ,ಅವನ ಆತಿಥ್ಯ ತಿರಸ್ಕರಿಸಿದ ಪಾಪಕ್ಕೆ ಇದು ಶಿಕ್ಷೆ.ಹೋಗಿ ಅವನ ಮನೆಯ ಆತಿಥ್ಯ ಸ್ವೀಕರಿಸಿ ಬಾ "ಎಂದು ಗಂಗಾದೇವಿಯು ಆದೇಶಿಸಿದಳು.
ತಾಯಿಯ ಆದೇಶದಂತೆ ಬೇಗನೆ ಅವನ ಮನೆಗೆ ಸೇರಿಕೊಂಡ.


ಬಂದಂತಹ‌ ಅತಿಥಿ ಊಟ ಮಾಡದೆ ಹೊರಟ ಎನ್ನುವ ದುಃಖ ದಿಂದ😢 ಸತ್ಯಕೇತು ಹಾಗೇ ಕುಳಿತಿದ್ದ...
ಮತ್ತೆ ತಿರುಗಿ ಬಂದ ಬ್ರಾಹ್ಮಣ ನಿಗೆ ಮತ್ತೆ ಉಪಚಾರ ಮಾಡಿ ಭೋಜನ ಮಾಡಿಸಿ ಕಳುಹಿಸಿದ.
ಹೋಗುವ ಮುಂಚೆ "ಅನ್ನದಾನದ ಮಹಿಮೆಯನ್ನು ತಿಳಿಯದೇ ನಿಮಗೆ ನಿಂದಿಸಿದೆ‌.
ನನ್ನ ಕ್ಷಮಿಸಿ" ಅಂತ ಹೇಳಿ ಅವನ ಅಪ್ಪಣೆ ಪಡೆದು ಗಂಗಾನದಿಯ ಕಡೆ ಬರುತ್ತಾನೆ.....
ತುಂಬಿ ಹರಿಯುವ ಗಂಗೆಯ ಪ್ರವಾಹವನ್ನು ಕಂಡು ಸಂತಸ ಪಟ್ಟ. ಗಂಗೆಯಲ್ಲಿ ಮಿಂದು ಪುನೀತನಾದ..

ಎಲ್ಲಾ ದಾನಗಳಿಗಿಂತ ಅನ್ನದಾನ ಶ್ರೇಷ್ಠ.ಅನ್ನ ಪ್ರಾಣ.ಅನ್ನದಾನ ಮಾಡುವವನು ಹಸಿದವರಿಗೆ ಪ್ರಾಣದಾನ ಮಾಡಿದಂತೆ…


ಹೀಗೆ ಸರ್ವಭೂತಗಳಿಗು ಅನ್ನ ಪ್ರಾಣ ದಾಯಕ.ಇಂತಹ ಅನ್ನದಾನವನ್ನು ಯಾರು ಮಾಡುತ್ತಾರೆ ಅವರು ಉತ್ತಮ ಲೋಕವನ್ನು ಹೊಂದುವರು ಮತ್ತು ಭಗವಂತನ ಅನುಗ್ರಹ ಕ್ಕೆ ಪಾತ್ರರಾಗುವರು".

 


                                                            Pic-4

🙏ಶ್ರೀ ಕೃಷ್ಣಾರ್ಪಣಮಸ್ತು🙏
ಅನ್ನದಿಂದಲಿ ಬಂದ ಘನ್ನ ದುರಿತ ಹರ|
ಅನ್ನದಿಂದಲಿ ಸರ್ವ ಪುಣ್ಯ ಫಲಿಸುವದು|.
ಅನ್ನದಾನಕ್ಕಿಂತ ಇನ್ನೂ ಮಿಗಿಲು ಇಲ್ಲ|.
ಅನಂತ ಮೂರುತಿ ವಿಜಯವಿಠ್ಠಲರೇಯ|
ತನ್ನವನಿವನೆಂದು ಮನ್ನಿಸಿ ಪೊರೆವ||


🙏
ಶ್ರೀ ಕಪಿಲಾಯನಮಃ🙏

 

  ------------ Hari Om ------------



 

No comments:

Post a Comment