Tuesday, April 5, 2022

ShubaKruta Nama Samvatsara - UGADI - Hindu New Year

 

Shubha Kruta Nama Samvatsara – New Year UGADI - ( 02-April 2022 to 21st March 2023 )

 

                                                       Lord Vishnu or Hari


This New Year is being Celebrated by mainly in Karnataka , Telangana and AndraPradesh States and as Gudi Padva in Maharashtra in India.

 

ಶ್ರೀ ಶುಭಕೃತುನಾಮ ಸಂವತ್ಸರದ ಆಗಮನವು
ಪ್ರತಿಯೊಬ್ಬರಿಗೂ,
ಶು ಶುಭ್ರ ಮನದ ಶುಭದ ಆನಂದ,
ಭ ಭಕ್ತಿ, ಶ್ರಧ್ದೆಯ ಸಂಭ್ರಮದಿಂದ
ಕೃ ಕೃಷ್ಣ ಪರಮಾತ್ಮನ ಆರಾಧನೆಯನ್ನು
ತು ತುಳಸಿ ದಳಗಳಿಂದ ಅರ್ಚಿಸಿ
ನಾ ನಾಮ ಸ್ಮರಣೆಯನ್ನು
ಮ ಮನಃಪೂರ್ವಕವಾಗಿ ಮಾಡಿ
ಜಗದೊಡೆಯನ ಅನುಗ್ರಹದಿಂದ
ಸಂತಸ, ಸಂಭ್ರಮ, ಸಂತೃಪ್ತಿಯನ್ನು
ಪಡೆದು ಜನ್ಮ ಸಾರ್ಥಕವಾಗಲಿ.


2 - 4 -2022
ಇಂದಿನಿಂದ 21-03-2023

ಶುಭಕೃತ್ ನಾಮ ಸಂವತ್ಸರ ಆರಂಭ

ಸಂವತ್ಸರದ ಮೊದಲ ಹಬ್ಬ.
ಹೊರಗೆಲ್ಲೂ ಹೋಗದೆ ಮನೆಯಲ್ಲಿಯೇ ಇದ್ದು, ಇದ್ದುದರಲ್ಲಿಯೇ ಸರಳವಾಗಿ ಹಬ್ಬವನ್ನಾಚರಿಸಿ,ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ.

ಶುಭಕೃತ್ ನಾಮ ಸಂವತ್ಸರದ ಯುಗಾದಿಯ ಶುಭಾಶಯಗಳು.

ಶತಾಯುರ್ವಜ್ರ ದೇಹಾಯ
ಸರ್ವ ಸಂಪತ್ಕರಾಯ ಚ|
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ ||

ಯುಗಾದಿಯ ದಿನ ಪಂಚಾಂಗಕ್ಕೆ ಪೂಜೆ ಮಾಡಿ,
ಮೇಲಿನ ಶ್ಲೋಕ ಹೇಳಿ ಬೇವು ಬೆಲ್ಲ ಸವಿಯಬೇಕು.

ಈ ಸಂವತ್ಸರದಲ್ಲಿ ನಿಮಗೆಲ್ಲರಿಗೂ ಬೇವಿಗಿಂತಲೂ,ಸಿಹಿಯ ಬೆಲ್ಲದ ಸವಿ ಫಲಗಳೇ ಲಭಿಸಲಿ.

ಸರ್ವೇವೈ ಸುಖಿನಸ್ಸಂತು
ಸರ್ವೇಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ದುಃಖಭಾಗ್ಭವೇತ್ ||

ಎಲ್ಲರೂ ಸುಖವಾಗಿರಲಿ.
ಎಲ್ಲರೂ ಕಷ್ಟ-ತಾಪತ್ರಯಗಳಿಲ್ಲದೆ ನೆಮ್ಮದಿಯಿಂದ ಇರುವಂತಾಗಲಿ.
ಎಲ್ಲರಿಗೂ ಎಲ್ಲೆಡೆಗಳಿಂದ ಮಂಗಳಕರವಾದ ಒಳಿತೇ ಕಾಣಿಸಲಿ.
ಯಾರೊಬ್ಬರೂ ದುಃಖಭಾಗಿಗಳಾಗದಿರಲಿ.

ಕಾಲೇ ವರ್ಷಂತು ಪರ್ಜನ್ಯಃ
ಪೃಥಿವೀ ಸಸ್ಯ ಶಾಲಿನೀ |
ದೇಶೋsಯಂ ಕ್ಷೋಭ ರಹಿತಃ
ಸಾತ್ವಿಕಾಃ ಸಂತು ನಿರ್ಭಯಾಃ ||

ಸಕಾಲದಲ್ಲಿ ಸಾಕಷ್ಟು ಮಳೆ ಸುರಿಯಲಿ.
ಭೂಮಿಯು ಪೈರು-ಪಚ್ಚೆಗಳಿಂದ ತುಂಬಿರಲಿ.
ಈದೇಶವು ಬಾಧೆ-ಕ್ಷೋಭೆಗಳಿಲ್ಲದ್ದಾಗಲಿ.
ಸಾತ್ವಿಕ ಸಜ್ಜನರು ಭಯಮುಕ್ತರಾಗಿ ಜೀವಿಸಲಿ.

ಪ್ಲವನಾಮ ಸಂವತ್ಸರದಲ್ಲಿ ಬಂದ ಸಕಲ ಪ್ಲವ ವನ್ನು *ಶುಭಕೃತ್ ನಾಮ ಸಂವತ್ಸರವು ದೂರಮಾಡಲಿ.

ಎಲ್ಲರಿಗೂ ನೂತನ ಶುಭಕೃತ್ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು..
ಶುಭವಾಗಲಿ.


ಬೇವು ಎಷ್ಟೇ ಕಹಿಯಿದ್ದರೂ ಅದರ ರೋಗ ನಿರೋಧಕ ಶಕ್ತಿ ಮಹತ್ವದ್ದು.
ಹಾಗೆಯೇ ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂಕಷ್ಟಗಳು ಮನಸ್ಸನ್ನು ಧೃಡಪಡಿಸಿ ಸಾಗುವುದನ್ನು ಕಲಿಸುತ್ತದೆ.


ಬೆಲ್ಲ ಎಷ್ಟೇ ಸಿಹಿಯೆನಿಸಿದರೂ ನಿರಂತರ ಸ್ವೀಕರಿಸಲಾಗುವುದಿಲ್ಲ..
ಹಾಗೂ ಕಹಿಯ ರುಚಿ ಅನುಭವ ಇಲ್ಲದಿದ್ದರೇ ಸಿಹಿಯ ಬೆಲೆಯ ಆನಂದಿಸಲಾಗುವುದಿಲ್ಲ. ಸಿಹಿ-ಕಹಿ ಇವೆರಡೂ ಜೀವನಕ್ಕೆ ಧಾವಿಸಿದರೂ ಬೆಲ್ಲದಂಥ ಮನಸ್ಸು ನಮ್ಮದಾಗಿ ಕಹಿಯನ್ನೂ ಸಹ ಸಿಹಿಯಾಗಿ ಪರಿವರ್ತಿಸುವ ಆಶಯದೊಡನೆ ಈ ನೂತನ ಶುಭಕೃತ್ ವರ್ಷವನ್ನು ಪ್ರಾರಂಭಿಸೋಣ.


ಶ್ರೀ ಹರಿ ವಾಯು ಗುರುಗಳ ಅನುಗ್ರಹ ಸದಾ ನಮ್ಮೆಲ್ಲರ ಮೇಲೆ ಇರಲೆಂದು ಪ್ರಾರ್ಥನೆ ಮಾಡುತ್ತಾ.. ..ಸುಖವಾಗಲಿ ಬಹು ದುಃಖವಾಗಲಿ ಸಖ ನೀನಾಗಿರು ಪಾಂಡುರಂಗ.

 

                                                            another picture of the Lord

 

Let Lord Hari Vayu give us with their Blessings to beget Happiness and Prosperity to All.


                                            ------------ Hari Om ------------ 

No comments:

Post a Comment