Vishwaroopa Darshana
ವಿಶ್ವರೂಪ ದರ್ಶನ – Vishwaroopa Darshana
ಶ್ರೀ ಕೃಷ್ಣನ ವಿಶ್ವರೂಪ ದರ್ಶನ
Sri Krishnas Vishwaroopa Darshana
ಶ್ರೀ
ಕೃಷ್ಣನ ಮೊದಲ ಸಾರ್ವತ್ರಿಕ ದರ್ಶನ
ಇಲ್ಲಿದೆ.
ಭಗವಂತನ
ವಿಶ್ವರೂಪ:
ಶ್ರೀಕೃಷ್ಣನ ಮೊದಲ ವಿಶ್ವರೂಪವನ್ನು ತಾಯಿ ಯಶೋಧ ತೊಡೆಯ ಮೇಲೆ ಮಲಗಿ ಹಾಲು ಕುಡಿಯುತ್ತಿದ್ದಾಗ ಆಕಳಿಸಿದ ಕಂದನ ಬಾಯಿಯಲ್ಲಿ ಬ್ರಹ್ಮಾಂಡವನ್ನೇ ನೋಡುತ್ತಾಳೆ. ಇನ್ನೊಂದು ಸಲ ಮಕ್ಕಳೊಂದಿಗೆ ಆಡುತ್ತಿದ್ದಾಗ ಮಣ್ಣು ತಿಂದ ಎಂದು ಹುಡುಗರು ತಾಯಿ ಯಶೋದೆಗೆ ಹೇಳಿದಾಗ, ಯಶೋಧ ಬಂದು, ಮಣ್ಣು ಏಕೆ ತಿಂದೆ ಎಂದು ಗದರಿದಾಗ ಇಲ್ಲ ಎಂದು ಎರಡು ಮೂರು ಸಲ ಹೇಳಿದರು ನಂಬದಿದ್ದಾಗ, ನೋಡು ಬೇಕಾದರೆ ಎಂದು ಕೃಷ್ಣನು ತನ್ನ ಬಾಯಿ ಕಳೆಯುತ್ತಾನೆ. ಆಗ ಯಶೋದೆಗೆ ಅಲ್ಲಿ ಬ್ರಹ್ಮಾಂಡವೇ ಕಾಣುತ್ತದೆ. ಕೃಷ್ಣನ ಮೊದಲ ವಿಶ್ವರೂಪ ದರ್ಶನ.
ಕೃಷ್ಣ
ದೊಡ್ಡವನಾದ ಮೇಲೆ ಕೌರವ ಪಾಂಡವರ
ನಡುವೆ ಸಂಧಿಕಾರ್ಯ ಮಾಡಲು
ಹಸ್ತಿನಾಪುರಕ್ಕೆ ರಾಯಭಾರಿಯಾಗಿ
ಬರುತ್ತಾನೆ. ಕೃಷ್ಣನ
ಹಿತೋಪದೇಶ ಕೌರವರಿಗೆ ಬೇಕಾಗಿರಲಿಲ್ಲ.
ಮಾತಿಗೆ ಮಾತು
ಬೆಳೆದು ದುರ್ಯೋಧನ ಕೃಷ್ಣನನ್ನು
ಬಂಧಿಸಲು ಪಿತೂರಿ ಮಾಡುತ್ತಾನೆ.
ಆಗ ಕೃಷ್ಣನು
ನನ್ನನ್ನು ನೀನು ಬಂಧಿಸಲಾಗುವುದಿಲ್ಲ
. ನೀನು
ಚಿಟಿಕೆ ಹೊಡೆಯುವಷ್ಟರಲ್ಲಿ
ಭೂಮಂಡಲವನ್ನೇ ನಾಶ ಮಾಡುತ್ತೇನೆ
ಎಂದು ತನ್ನ ವಿಶ್ವ ರೂಪವನ್ನು
ತೋರಿಸುತ್ತಾನೆ. ಇದನ್ನು
ಭೀಷ್ಮ, ದ್ರೋಣ,
ವಿದುರ ,ಸಂಜಯ,
ಇವರುಗಳಿಗೆ,
ಹಾಗೂ ಪ್ರಾರ್ಥನೆಯ
ಮೇರೆಗೆ ಧೃತರಾಷ್ಟ್ರ ನಿಗೂ
'ವಿಶ್ವರೂಪ'
ದರ್ಶನ
ಅನುಗ್ರಹಿಸುತ್ತಾನೆ.
ಸೂರ್ಯಕಿರಣ
ಪ್ರಭೆಯ ಪ್ರಕಾಶವನ್ನು ಉಳಿದವರು
ಬರೀಗಣ್ಣಿನಿಂದ ನೋಡಲಾಗದೆ ಕಣ್ಣು
ಮುಚ್ಚಿದರು.
ನಂತರ
ಕುರುಕ್ಷೇತ್ರದ ಯುದ್ಧದ ಆರಂಭದಲ್ಲಿ
ಶೋಕ ಮೋಹಿತನಾಗಿ ಅರ್ಜುನ ಯುದ್ಧ
ಮಾಡಲು ಒಪ್ಪುವುದಿಲ್ಲ.
ಕೃಷ್ಣನು
ಅವನಿಗೆ ಆತ್ಮ ತತ್ವವನ್ನು ವಿವರಿಸಿ,
ಗೀತೋಪದೇಶ
ಮಾಡುತ್ತಾನೆ. ವಿಭೂತಿಗಳನ್ನು
ವಿವರಿಸಿದಾಗ, ಅವುಗಳನ್ನು
ತಾನು ಕಣ್ಣಾರೆ ನೋಡಬೇಕೆಂದು
ಅರ್ಜುನನು ಶ್ರೀಕೃಷ್ಣನ ಮುಂದೆ
ಕೈಮುಗಿದು ದೈನ್ಯತೆಯಿಂದ
ಬೇಡುತ್ತಾನೆ. ಭಗವಂತನ
ಅಪರಿಮಿತ ದರ್ಶನವನ್ನು,
ಪರಿಮಿತವಾದ
ಮನಸ್ಸಿನಿಂದ ನೋಡಬೇಕು,
ಮನಸ್ಸಿನ
ತುಂಬಾ ಭಗವಂತ ನಿನ್ನ ರೂಪವನ್ನು
ತುಂಬಿಕೊಳ್ಳುವುದು ಹೇಗೆ ?
ಎಂದು ಕೇಳಿದಾಗ,
ಸ್ವತಃ ಕೃಷ್ಣನೇ
ಆಶ್ವಾಸನೆ ಕೊಡುತ್ತಾನೆ.
another Picture
ಅರ್ಜುನ ನಿನ್ನಲ್ಲಿ ಇರುವ ಸಂಶಯಗಳಿಗೆ ನಾನು ಸ್ಪಷ್ಟವಾಗಿ ತಿಳಿಸುತ್ತೇನೆ. "
"ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾ ಪರ್ಯುಪಾಸತೇ ತೇಷಾಂ ನಿತ್ಯಾ ಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ"
ಕೃಷ್ಣ ಹೇಳಿರುವಂತೆ (ಅನನ್ಯವಾದ ಮನಸ್ಸಿನಿಂದ ಯಾರು ನನ್ನ ಸದಾ ಚಿಂತನೆ ಮಾಡುತ್ತಾರೋ ಅಂತಹ ನಿತ್ಯ ಯುಕ್ತರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.) ನೀನು ನನ್ನಲ್ಲಿ ಆಸಕ್ತಿ ಹೊಂದಿದವನಾಗಿ, ನನ್ನನ್ನೇ ಮನದಲ್ಲಿ ನಂಬಿ, ನನ್ನನ್ನೆ ತಿಳಿದವನಾಗಿ, ನನ್ನನ್ನೆ ಪೂಜಿಸಿ, ಸ್ತುತಿಸಿ, ಭಜಿಸಿ, ಆರಾಧಿಸುವನಾದರೆ, ನೀನು ಸರಿಯಾದ ರೀತಿಯಲ್ಲಿ ನನ್ನ ಸಮಗ್ರ ರೂಪವನ್ನು ತಿಳಿದುಕೊಳ್ಳುತ್ತೀ. ನಿನಗೆ ನಂಬಿಕೆ ಆಸಕ್ತಿ ಇರುವುದಾದರೆ, ನಿನಗೆ ಯಾವ ಅನುಮಾನಗಳು ಇರದಂತೆ ನನ್ನನ್ನು ತಿಳಿದುಕೊಳ್ಳುತ್ತಿ , ಎಂದು ಸಾಕ್ಷಾತ್ ಕೃಷ್ಣನಿಂದಲೆ ಅರ್ಜುನ ಈ ಮಾತುಗಳನ್ನು ಕೇಳುತ್ತಾನೆ. ಕೃಷ್ಣನನ್ನು ತಿಳಿಯುವುದಾದರೆ, ವೇದ ಸಾಹಿತ್ಯ ಗಳಿಂದ, ಭಗವದ್ಗೀತೆಯಿಂದ, ಅಥವಾ ನೇರವಾಗಿ ಕೇಳಿದರೆ ಅಂತಹ ಸೌಭಾಗ್ಯಕ್ಕೆ ಎಣೆಯುಂಟೇ, ಕೃಷ್ಣನ ಕಥೆ, ವಿಚಾರಗಳನ್ನು, ಯಾರೋ ಹೇಳುವುದನ್ನು ಕೇಳಿಯೇ ಮನಸ್ಸಿಗೆ ಸಂತೋಷ ಸಿಗುವುದಾದರೆ ಸ್ವತಹ ಕೃಷ್ಣನಿಂದಲೇ ಈ ಮಾತನ್ನು ಕೇಳಿದ ಅರ್ಜುನನು ಅದೆಷ್ಟು ಪುಣ್ಯವಂತ. ತಾನೇ ಶ್ರೇಷ್ಠ ಎಂದುಕೊಂಡಿದ್ದ ಅರ್ಜುನನಿಗೆ ಭಗವಂತನು ಈ ಮೂಲಕ ಕಣ್ಣು ತೆರೆಸಿದ್ದಾನೆ.
ಜ್ಞಾನವನ್ನು
ಪುಸ್ತಕದಿಂದ ಅಥವಾ ಜೀವನದ ಅನುಭವದಿಂದ
ತಿಳಿಯುವಂತಹದು. ಜೀವನಕ್ಕೆ
ಅಳವಡಿಸಿಕೊಂಡರೆ ಅದು ವಿಜ್ಞಾನ.
ಯಾವುದೇ
ಜ್ಞಾನವನ್ನು ವಿಜ್ಞಾನದ ಸಹಿತ
ವಿಷಯವನ್ನು ಪೂರ್ತಿ ತಿಳಿದುಕೊಂಡಮೇಲೆ,
ಬಾಕಿ
ತಿಳಿದುಕೊಳ್ಳಬೇಕಾದುದು
ಇರುವುದಿಲ್ಲವೋ ಅಂತಹ ಜ್ಞಾನವನ್ನು
ವಿಜ್ಞಾನ ಯುಕ್ತವಾಗಿ ನಿನಗೆ
ಹೇಳುತ್ತೇನೆ. ಜ್ಞಾನ-ವಿಜ್ಞಾನ
ಸಮ ಪ್ರಮಾಣದಲ್ಲಿ ಬೆರೆಯುತ್ತದೆಯೋ
ಆಗ ಭಗವಂತನ ಪೂರ್ಣ ದರ್ಶನ
ನಿನಗಾಗುತ್ತದೆ. ಈ
ಜಗತ್ತಿನ ಸರ್ವಸ್ವವೂ ನಾನೇ ಆದಿ-
ಮಧ್ಯ-ಅಂತ್ಯ,
ಎಲ್ಲವೂ ನಾನೇ.
ಆಗ ಅರ್ಜುನನು,
ಕೃಷ್ಣಾ ನಿನ್ನ
ಗುಪ್ತವಾದ ಆಧ್ಯಾತ್ಮಿಕ ಉಪದೇಶದಿಂದ
ನನ್ನ ಅಜ್ಞಾನವನ್ನು ದೂರ ಮಾಡಿದೆ.
ನಿನ್ನಿಂದ
ಪ್ರಾಣಿಗಳ ಉತ್ಪತ್ತಿ ಮತ್ತು
ಜಗತ್ತಿನ ಪ್ರಳಯದ ಬಗ್ಗೆ ಹಾಗೂ
ನಿನ್ನ ಅವಿನಾಶಿ ಮಹಿಮೆಯನ್ನು
ತಿಳಿದುಕೊಂಡೆ. ಪುರುಷೋತ್ತಮ
ಸಕಲ ಜೀವಿಗಳ ಉತ್ಪತ್ತಿ ಮತ್ತು
ನಶಿಸುವುದರ ಬಗ್ಗೆ ನಾನು ನಿನ್ನಿಂದ
ವಿವರವಾಗಿ ಕೇಳಿದೆನು.
ಕೊನೆಯಿಲ್ಲದ
ಮಹಿಮೆಗಳನ್ನು ಕೂಡ ಕೇಳಿದೆನು.
ನಿನ್ನನ್ನು
ನೀನು ಇರುವ ಹಾಗೆಯೇ ವರ್ಣಿಸಿರುವೆ.
ಅದನ್ನು
ನೇರವಾಗಿ ನಾನು ನೋಡಲು ನನಗೆ
ಸಾಧ್ಯವಿದೆ ಎಂದು ನಿನಗೆ ಅನಿಸುವುದಾದರೆ
ನಿನ್ನ ದಿವ್ಯವಾದ ರೂಪವನ್ನು
ನನಗೆ ತೋರಿಸು ಎಂದು ಅರ್ಜುನನ
ದೈನ್ಯತೆಯಿಂದ ಕೇಳಿದನು.
ಅರ್ಜುನನ ಮಾತುಗಳನ್ನು ಕೇಳಿ ಕೃಷ್ಣನು ಪ್ರಸನ್ನನಾದನು. ಪಾರ್ಥ ನನ್ನ ಲಕ್ಷಾಂತರ ಬಣ್ಣಗಳು, ಆಕಾರಗಳು, ವಿಧ ವಿಧವಾದ ದಿವ್ಯ ರೂಪಗಳನ್ನು ನೋಡು ಎಂದು, ಹೂಂಕರಿಸುತ್ತಿದ್ದಂತೆ, ಆದಿತ್ಯರು, ವಸುಗಳು, ರುದ್ರರು, ಅಶ್ವಿನಿ ಕುಮಾರರು, ಮತ್ತು ಎಲ್ಲಾ ವಾಯು ದೇವತೆಗಳು, ಹಿಂದೆ ಯಾರೂ ನೋಡಿರದ ಅದ್ಭುತಗಳು, ಅರ್ಜುನ ನೀನು ಏನನ್ನು ಅಪೇಕ್ಷಿಸುತ್ತೀಯೋ, ಅವನ್ನೆಲ್ಲಾ ನೋಡು, ಆದರೆ ಅರ್ಜುನ ನಿನ್ನ ಈಗಿನ ಕಣ್ಣುಗಳಿಂದ ನನ್ನನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ ದಿವ್ಯವಾದ ದೃಷ್ಟಿಯನ್ನು ಕೊಡುತ್ತೇನೆ. ನನ್ನ ಯೋಗ ಶಕ್ತಿಯನ್ನು ನೋಡು. ಕೃಷ್ಣ ಹೀಗೆ ಹೇಳಿ ನಂತರ ಅರ್ಜುನನಿಗೆ ತನ್ನ ದಿವ್ಯವಾದ ವಿಶ್ವ ರೂಪವನ್ನು ತೋರಿಸಿದನು.
ಅನೇಕ
ಮುಖಗಳು, ಕಣ್ಣುಗಳು,
ಅನೇಕ ಆಶ್ಚರ್ಯಕರವಾದ
ದರ್ಶನಗಳು, ಅನೇಕ
ದಿವ್ಯಾಭರಣಗಳು, ಅನೇಕ
ಆಯುಧಗಳು, ಅನೇಕ
ದಿವ್ಯ ಹಾರಗಳು,ಧರಿಸಿದ
ದಿವ್ಯವಸ್ತ್ರಗಳು, ದಿವ್ಯ
ಸುಗಂಧಗಳು, ಎಲ್ಲವು
ಸಾವಿರ ಕೋಟಿ ಲಕ್ಷದ ವಜ್ರದಷ್ಟು
ಪ್ರಕಾಶವಾಗಿ ಹೊಳೆಯುತ್ತಿತ್ತು.
ಆದಿ ಅಂತ್ಯಗಳಿಲ್ಲದ
ವಿಶ್ವದೆಲ್ಲೆಡೆ ವ್ಯಾಪಿಸಿತ್ತು.
ಭಗವಂತನ
ತೇಜಸ್ಸು ಸಹಸ್ರಾರು ಸೂರ್ಯಪ್ರಕಾಶ
ದಷ್ಟಿತ್ತು. ವಿಭಜಿತವಾದ
ಸಂಪೂರ್ಣ ವಿಶ್ವವನ್ನು ಒಂದೇ ಕಡೆ
ನೋಡಿದನು. ಇಂತಹವಿಸ್ಮಯಗಳನ್ನು
ನೋಡಿ ದಿಗ್ಭ್ರಮೆಗೊಳಗಾಗಿ
ತಲ್ಲಣಗೊಂಡು, ಭಾವೋದ್ವೇಗದಿಂದ
ರೋಮಾಂಚನಗೊಂಡನು. ಪರಮಪುರುಷ
ಶ್ರೇಷ್ಠನಾದ ಭಗವಂತನನ್ನೇ
ನೋಡುತ್ತಾ ದೇವ ದೇವೋತ್ತಮನನ್ನು
ಪ್ರಾರ್ಥಿಸುತ್ತಾ, ಅರ್ಜುನನು
ತಲೆಬಾಗಿ ನಮಸ್ಕರಿಸಿ,
ಕೈಮುಗಿದು
ಹೀಗೆ ಹೇಳಿದನು.
PIC-1
ಪ್ರಭುವೇ ಎಲ್ಲಾ ದೇವತೆಗಳು, ಕಮಲದ ಮೇಲೆ ಕುಳಿತ ಬ್ರಹ್ಮನನ್ನು, ಶಿವನನ್ನು, ಮಹರ್ಷಿಗಳು ಮತ್ತು ದಿವ್ಯ ಸರ್ಪಗಳು, ಅನೇಕ ತೋಳುಗಳು ಕಣ್ಣುಗಳು, ಹೊಟ್ಟೆಗಳು, ಮುಖಗಳನ್ನು ನೋಡಿದೆನು, ಆದರೆ ಆದಿ, ಮಧ್ಯ ಮತ್ತು ಅಂತ್ಯ ಯಾವುದು ಕಾಣುವುದಿಲ್ಲ. ಹೊಳೆಯುವ ಕಿರೀಟ, ಗದೆ, ಚಕ್ರ, ಪ್ರಜ್ವಲಿಸುತ್ತಿರುವ ಸೂರ್ಯನ ಪ್ರಕಾಶದಿಂದ ನಿನ್ನನ್ನು , ನಿನ್ನ ವಿರಾಟ್ ರೂಪವನ್ನು, ನೋಡಲು ಕಷ್ಟವಾಗಿದೆ. ಮೂರು ಲೋಕಗಳನ್ನು ನಿನ್ನೊಳಗೆ ಅಡಗಿಸಿಕೊಂಡು, ಭೂಮ್ಯಾ ಕಾಶಗಳನ್ನೆಲ್ಲಾ ವ್ಯಾಪಿಸಿರುವ ನಿನ್ನನ್ನು ನೋಡಲು ದೇವಾನು ದೇವತೆಗಳೆಲ್ಲರ ನೆರೆದಿದ್ದಾರೆ. ನಿನ್ನ ಅಪರಿಮಿತ ಮಹಿಮೆಗಳನ್ನು ತಿಳಿಯದೆ ಗೆಳೆಯನೆಂದು ಭಾವಿಸಿ, ಯಾವುದನ್ನು ಪ್ರೀತಿಯಿಂದಲೋ, ಪ್ರಮಾದದಿಂದಲೊ, ಅರಿಯದೆ, ಯೋಚಿಸದೆ ಹೇಳಿದ್ದೆನೋ, ಎಲ್ಲವಕ್ಕೂ ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ. ಸಕಲ ಲೋಕಗಳಿಗೆ ತಂದೆ ನೀನು, ಪೂಜನೀಯನು, ಪರಮಗುರುವು, ದೇವರಿಗೆಲ್ಲಾ ದೇವನು, ಮಹಿಮಾನ್ವಿತನು, ನೀನೇ ಆಗಿರುವೆ ನಿನಗೆ ಸಮಾನರು, ಶ್ರೇಷ್ಠರು ಮೂರು ಲೋಕದಲ್ಲಿ ಯಾರೂ ಇಲ್ಲ .ಆದ್ದರಿಂದ, ತಂದೆಯು ಮಗನನ್ನು, ಸ್ನೇಹಿತ ಸ್ನೇಹಿತನನ್ನು, ಪ್ರಿಯಕರನು ಪ್ರಿಯತಮೆಯನ್ನು, ಕ್ಷಮಿಸುವಂತೆ ನನ್ನನ್ನು ಕ್ಷಮಿಸು. ಎಂದು ಭಕ್ತಿಯಿಂದ ನಮಸ್ಕರಿಸಿದನು.
ಕೃಷ್ಣನು,
ತನ್ನ ಭಯಾನಕವಾದ
ವಿಶ್ವ ರೂಪವನ್ನು ಸಂಹರಿಸಿ,
ಮುಕುಟವನ್ನು
ಧರಿಸಿದ, ಶಂಖ,
ಚಕ್ರ
,ಗದಾದಾರಿಯಾಗಿ,
ಚತುರ್ಭುಜನಾದ
ಮಂದಸ್ಮಿತ ಮುಗುಳುನಗೆಯ ದರ್ಶನ
ಕೊಟ್ಟನು. ಅರ್ಜುನ
ಯಾರು ನನಗಾಗಿ ಕರ್ಮಗಳನ್ನು
ಮಾಡುವನೋ, ನನ್ನನ್ನು
ಪರಮಾತ್ಮನೆಂದು ಪರಿಗಣಿಸಿ ನನ್ನ
ಭಕ್ತಿಸೇವೆಯಲ್ಲಿ ತೊಡಗುವನೋ,
ಕಾಮ್ಯ ಕರ್ಮಗಳಿಂದ
ಮತ್ತು ಊಹಾತ್ಮಕ ಚಿಂತನೆಗಳಿಂದ
ಮುಕ್ತ ನಾಗಿರುವನೋ, ಸಕಲ
ಜೀವಿಗಳ ಮಿತ್ರನೋ, ಅವನು
ನನ್ನಲ್ಲಿಗೆ ಬರುತ್ತಾನೆ.
ಎಂದು ಶ್ರೀಕೃಷ್ಣ
ಅಭಯ ನೀಡಿ ಅರ್ಜುನನಿಗೆ
ಯುದ್ಧೋತ್ಸಾಹವನ್ನು ತುಂಬಿ,
ಯುದ್ಧಕ್ಕೆ
ಸಿದ್ಧನಾದನು. 🪻ಓಂ
ತತ್ಸದಿತಿ ಶ್ರೀಮದ್ಭಗವದ್ಗೀತಾಸು
ಉಪನಿಷತ್ಸು ಬ್ರಹ್ಮವಿದ್ಯಾಯಾಂ
ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ
ಸಂವಾದೆ ವಿಶ್ವರೂಪದರ್ಶನ ಯೋಗೋ
ನಾಮ ಏಕಾದಶೋಧ್ಯಾಯ.
ಶ್ರೀಕೃಷ್ಣಾರ್ಪಣಮಸ್ತು
---------------------
Hari Om ---------------------



No comments:
Post a Comment