Monday, September 7, 2026

ನೆಲದ ಮೇಲೆ ಕುಳಿತು ಊಟ ಮಾಡುವುದರ ಲಾಭಗಳು -- Benefits of eating while sitting on the floor

                                                               Having Food on the Floor
 

ನೆಲದ ಮೇಲೆ ಕುಳಿತು ಊಟ ಮಾಡುವುದರ ಲಾಭಗಳು

Benefits of eating while sitting on the
floor

ಊಟ ಮಾಡುವುದು ಕೇವಲಒಂದುಚಟುವಟಿಕೆಎಂದಾಗಿರುವ ಈ ಕಾಲದಲ್ಲಿ ನೆಲದ ಮೇಲೆ ಕುಳಿತು ಊಟಮಾಡುವುದು ಎಂದರೆ ಕಷ್ಟದ ಕೆಲಸದಂತಾಗಿದೆ.ಅದರಲ್ಲೂ ಯುವಕರಲ್ಲಿಅಸಡ್ಡೆಯ ಜೊತೆಗೆ ಅಸಾಧ್ಯದ ಭಾವನೆಯೇ ಎದ್ದು ಕಾಣುತ್ತದೆ ಈಗಿನ ಜೀವನ ಶೈಲಿಯಲ್ಲಿ ಮನೆಮಂದಿಯೆಲ್ಲಾ ಒಟ್ಟಿಗೆ ಊಟಕ್ಕೆ ಕೂರುವುದು ಎಂದರೆ ಅದು ಎಲ್ಲರ ಸೌಭಾಗ್ಯವೆ ಸರಿ.


ನಮ್ಮ ಸನಾತನ ಧರ್ಮದಲ್ಲಿ ಊಟ ಎಂದರೆ ಅದೊಂದು ಗೌರವ ಪೂರ್ವಕವಾಗಿ ನಡೆಸುವ ದೈನಂದಿನ ಯಜ್ಞವಿದ್ದಂತೆ.ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಕ್ರಿಯೆ ಅಲ್ಲ.ನೆಲದ ಮೇಲೆ ಪದ್ಮಾಸನದಲ್ಲಿ {ಸುಖಾಸನ}ಕುಳಿತು ಕೈ ಮುಗಿದು ಪ್ರಾರ್ಥಿಸಿ , ನಿಶ್ಚಿಂತೆಯಿಂದ ಬರಿಗೈಯಲ್ಲಿ ಸೇವಿಸುವ ಆಹಾರನಮ್ಮ ಜಠರಕ್ಕೆ, ಅಷ್ಟೇ ಅಲ್ಲದೆ ಆತ್ಮಕ್ಕೂ ತೃಪ್ತಿ ನೀಡುವುದು .ಊಟದ ನಂತರ "ಅನ್ನ ದಾತೋ ಸುಖೀ ಭವ" ಎಂಬ ಒಂದು ವ್ಯಾಖ್ಯಾನ ಅಡಿಗೆ ತಯಾರಿಸಿದವರ ಪಾಲಿಗೆ ಸಾರ್ಥಕತೆಯ ಅನುಭವನೀಡುತ್ತದೆ.

 

                                                                PIC-1

 

ನೆಲದ ಮೇಲೆ ಕುಳಿತು ಊಟ ಮಾಡುವುದರ ಹಿಂದಿನ ವೈಜ್ಞಾನಿಕ

 ವಿಚಾರ

The scientific reason behind eating while sitting on the floor.


1) ಯೋಗಾಸನದಲ್ಲಿ ಪ್ರಮುಖ ಆಸನವಾದ ಪದ್ಮಾಸನದಲ್ಲಿ ಕುಳಿತಾಗ ನಮ್ಮ ಕಿಬ್ಬೊಟ್ಟೆಯ ಮೇಲಿನ ಭಾಗಗಳೆಲ್ಲವೂ ಬೆನ್ನು ಹುರಿಯ ಸಹಾಯದಿಂದ ನೇರವಾಗುತ್ತದೆ ಹಾಗು ಪೆಲ್ವಿಕ್ ಸ್ನಾಯುಗಳು ಹಿಗ್ಗುತ್ತದೆ.ಇದರಿಂದ ನಮ್ಮ ಜೀರ್ಣಾಂಗ ವ್ಯೂಹವು ಉತ್ತಮ ಸ್ಥಿತಿಯನ್ನು ತಲುಪಿ ಜೀರ್ಣಕ್ಕೆ ಸಹಕರಿಸುತ್ತದೆ.


2) ನೆಲದ ಮೇಲೆಕುಳಿತಾಗ ಮನಸ್ಸು ಪ್ರಶಾಂತಗೊಳ್ಳುತ್ತದೆ ಹಾಗು ಸ್ಥಿರತೆಯನ್ನು ವೃದ್ಧಿಗೊಳಿಸಿ ಆಹಾರದತ್ತ ಗಮನಹರಿಸಲು ಸಾಧ್ಯವಾಗುತ್ತದೆ.

3) ನಮ್ಮಕುಟುಂಬದಸದಸ್ಯರೊಡನೆ ಸಮಯ ಕಳೆಯಲು ಇದೊಂದು ಸುಯೋಗವಿದ್ದಂತ್ತೆ.ಎಲ್ಲರ ಅಭಿರುಚಿ ತಿಳಿಯುವ ವೇದಿಕೆಯೂ ಹೌದು.

4) ಕೆಲವು ಅಧ್ಯಯನಗಳ ಪ್ರಕಾರ ಕೆಳಗೆಕೂತು ಊಟಮಾಡುವವರು ಯಾವುದೇ ಸಹಾಯವಿಲ್ಲದೆ ಏಳಲು ಶಕ್ತರಾಗಿದಲ್ಲಿ ಅವರ ಆಯಸ್ಸು ವೃದ್ಧಿಸುತ್ತದೆ.


5) ಮೊಣಕೈ ಹಾಗು ಕಾಲುಗಳಿಗೆ ವ್ಯಾಯಾಮ ದೊರೆಯುತ್ತದೆ,ಇದರಿಂದ ಸಂಧಿವಾತ ಹಾಗು ಓಸ್ಟಿಯೋಪೋರೆಸಿಸ್ಕಾಯಿಲೆಗಳನ್ನು ತಡೆಯಬಹುದು.


6) ಬರಿಗೈಯಲ್ಲಿ ಊಟ ಮಾಡುವಾಗ ನಮ್ಮ ಐದು ಬೆರಳುಗಳು ಸೇರಿ ಒಂದು ಮುದ್ರೆ ರಚನೆಗೊಳ್ಳು ತ್ತದೆ ಇದು ಪಂಚೇಂದ್ರಿಯಗಳನ್ನು ಪ್ರೇರೇಪಿಸಿ ಮೆದುಳಿಗೆ ಸಂದೇಶ ರವಾನಿಸುತ್ತದೆ,ಆಗ ಜೀರ್ಣ ಕ್ರಿಯೆಗೆ ಬೇಕಾದ ಜೀರ್ಣರಸಗಳು, ಸಹಜವಾಗಿ ಬಿಡುಗಡೆಗೊಳ್ಳುತ್ತದೆ.


7) ಕೈಯಲ್ಲಿ ತಿನ್ನುವಾಗ ಆಹಾರದ ಬಿಸಿಹಾಗೂಮೃದುತ್ವ ನಮ್ಮ ಗಮನಕ್ಕೆ ಬರುತ್ತದೆ.


8) ವೈದಿಕ ಶಾಸ್ತ್ರದ ಪ್ರಕಾರ ನಮ್ಮ ಕೈ ಬೆರಳುಗಳು ಪಂಚ ತತ್ವಗಳಿಂದಕೂಡಿದೆಹೆಬ್ಬೆರಳು-ಅಗ್ನಿ,ತೋರುಬೆರಳು ವಾಯು, ಮಧ್ಯಬೆರಳು-ಆಕಾಶ,ಉಂಗುರ ಬೆರಳು -ಭೂಮಿ,ಕಿರುಬೆರಳು - ನೀರು.


9) ಊಟ ಮಾಡುವಾಗ ಬಾಗಿ ಏಳುವಪರಿಆಹಾರವನ್ನು ಸುಲಭವಾಗಿ ಜಠರಕ್ಕೆ ಜಾರಲು ಸಹಕರಿಸುತ್ತದೆ, ಹಾಗೂ ಆರೋಗ್ಯ ವೃದ್ಧಿಯಾಗಿ ದೀರ್ಘಾಯುಷ್ಯನ್ನು ಪಡೆಯಬಹುದು.


------------------------ Hari Om --------------------------

 
 

No comments:

Post a Comment