Thursday, September 18, 2025

Mahalaya AmavasyaTarpana Vidhi - ಮಹಾಲಯ ಅಮಾವಾಸ್ಯೆಯ ತರ್ಪಣ ವಿಧಿ

 

ಮಹಾಲಯ ಅಮಾವಾಸ್ಯೆಯ ತರ್ಪಣ ವಿಧಿ


Mahalaya Amavasya Tarpana Ritual
 
Tarpana Vidhi 
 

ಪಿತೃಪಕ್ಷ ---- ಮಹಾಲಯ ಅಮವಾಸ್ಯ


ಈ ಮಹಾಲಯ ಕಾಲದಲ್ಲಿ ಮನೆಯಲ್ಲಿ ಗತಿಸಿದ ನಮ್ಮ ಎಲ್ಲಾ ಹಿರಿಯರಿಗೆ (ಪಿತೃಗಳಿಗೆ) ಗೌರವವನ್ನು ಕೊಡುವುದು ನಮ್ಮ ಆದ್ಯ ಕರ್ತವ್ಯ. ಅವರೆಲ್ಲರಿಗೂ ತರ್ಪಣದ ಮುಖಾಂತರ ಆರಾಧನೆಯನ್ನು ನಡೆಸುವುದು ಶಾಸ್ತ್ರಸಮ್ಮತ

ತರ್ಪಣ ಎಂದರೆ ತೃಪ್ತಿಪಡಿಸುವ ಪ್ರಕ್ರಿಯೆ.
ಗತಿಸಿ ಹೋದ ನಮ್ಮ ಸರ್ವ ಪಿತೃಗಳಿಗೂ
ಗೋತ್ರ ನಾಮ ಉಚ್ಚಾರ ಮಾಡುತ್ತಾ ನೆನಪಿಸಿಕೊಳ್ಳುವ
ಭಾವನಾತ್ಮಕವಾದ ಒಂದು ಆರಾಧನೆ


ಮನೆಯಲ್ಲಿಯೇ ಸುಲಭವಾಗಿ ತರ್ಪಣವನ್ನು ಕೊಡಲು ಈ ತರ್ಪಣ ವಿಧಿಯನ್ನು ಕೊಡಲಾಗಿದೆ

ಆಚಮನ 2 ಸಲ

ಆಚಮನಮ್

ಓಂ ಶ್ರೀ ಕೇಶವಾಯ ಸ್ವಾಹಾ
ಓಂ ಶ್ರೀ ನಾರಾಯಣಾಯ ಸ್ವಾಹಾ
ಶ್ರೀ ಮಾಧವಾಯ ಸ್ವಾಹಾ
ಶ್ರೀ ಗೋವಿಂದಾಯ ನಮಃ
ಓಂ ಶ್ರೀ ವಿಷ್ಣವೇ ನಮಃ
ಓಂ ಶ್ರೀ ಮಧುಸೂದನಾಯ ನಮಃ
ಓಂ ಶ್ರೀ ತ್ರಿವಿಕ್ರಮಾಯ ನಮಃ
ಓಂ ಶ್ರೀ ವಾಮನಾಯ ನಮಃ
ಓಂ ಶ್ರೀ ಶ್ರೀಧರಾಯ ನಮಃ
ಶ್ರೀ ಹೃಷಿಕೇಶಾಯ ನಮಃ
ಓಂ ಶ್ರೀ ಪದ್ಮನಾಭಾಯ ನಮಃ
ಓಂ ಶ್ರೀ ದಾಮೋದರಾಯ ನಮಃ
ಓಂ ಶ್ರೀ ಸಂಕರ್ಷಣಾಯ ನಮಃ
ಐಓಂ ಶ್ರೀ ವಾಸುದೇವಾಯ ನಮಃ
ಓಂ ಶ್ರೀ ಪ್ರದ್ಯುಮ್ಯಾಯ ನಮಃ
ಓಂ ಶ್ರೀ ಅನಿರುದ್ಧಾಯ ನಮಃ
ಓಂ ಶ್ರೀ ಪುರುಷೋತ್ತಮಾಯ ನಮಃ
ಓಂ ಶ್ರೀ ಅಧೋಕ್ಷಜಾಯ ನಮಃ
ಓಂ ಶ್ರೀ ನಾರಸಿಂಹಾಯ ನಮಃ
ಓಂ ಶ್ರೀ ಅಚ್ಯುತಾಯ ನಮಃ
ಓಂ ಶ್ರೀ ಜನಾರ್ದನಾಯ ನಮಃ
ಓಂ ಶ್ರೀ ಉಪೇಂದ್ರಾಯ ನಮಃ
ಓಂ ಶ್ರೀ ಹರಯೇ ನಮಃ
ಓಂ ಶ್ರೀ ಕೃಷ್ಣಾಯ ನಮಃ


ಪುನರಾಚಮನಮ್


[ ಪುನಃ ಆಚಮನ ಮಾಡುವುದು] ---- 2 ಸಲ



ಪ್ರಾಣಾಯಾಮಃ


ಓಂ | ಪ್ರಣವಸ್ಯ | ಪರಮೇಷ್ಠಿ | ಪರಬ್ರಹ್ಮ ಋಷಿಃ | ಪರಮಾತ್ಮಾ ದೇವತಾ | ದೈವೀಗಾಯತ್ರೀ ಛಂದಃ | ಪ್ರಾಣಾಯಾಮೇ ವಿನಿಯೋಗಃ||

ಓಂ ಭೂಃ || ಓಂ ಭುವಃ || ಓಂ ಸ್ವಃ || ಓಂ ಮಹಃ || ಓಂ ಜನಃ ||ಓಂ ತಪಃ || ಓಂ ಸತ್ಯಮ್ ||
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||

ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಃ ಸ್ವರೋಮ್ | (ಕಣ್ಣಿಗೆ ನೀರನ್ನು ಹಚ್ಚಿಕೊಳ್ಳುವುದು).

 

                                                               Dharbe Pavitra

 

ಪವಿತ್ರ ಇದ್ದಲ್ಲಿ ಧರಿಸುವುದು

ದೇಶಕಾಲೌ ಸಂಕೀರ್ತ್ಯ , ಶ್ರೀ ವಿಷ್ಣು ಪ್ರೇರಣಯಾ , ಶ್ರೀ ವಿಷ್ಣು ಪ್ರೀತ್ಯರ್ಥಂ ದೇವ - ಋಷಿ - ಆಚಾರ್ಯ - ಪಿತೃ ತರ್ಪಣಾಖ್ಯಂ ಕರ್ಮ ಕರಿಷ್ಯೇ (ಪಿತೃ ತರ್ಪಣ ಅಧಿಕಾರ ಇದ್ದವರಿಗೆ ಮಾತ್ರ)ಎಂದು ನೀರು ಬಿಡುವುದು.


ತೀರ್ಥವನ್ನು ತೆಗೆದುಕೊಂಡು ಅದರಲ್ಲಿ ನಿರ್ಮಾಲ್ಯ ಮತ್ತು ಹೂವನ್ನು, ಎರಡು ಚಿಕ್ಕ ದರ್ಬೆಯನ್ನು ತೀರ್ಥದಲ್ಲಿ ಹಾಕಿ( ದರ್ಬೆ ಇದ್ದಲ್ಲಿ ಮಾತ್ರ) ಬ್ರಹ್ಮಾಂಜಲಿ ಮಾಡಿಕೊಂಡು{ ಬಲಕೈನ್ನು ಮೇಲ್ಮುಖವಾಗಿ ಎಡಗೈಯನ್ನು ಕೆಳಮುಖವಾಗಿ ಬಲಗಾಲ ಮೇಲೆ ಇಟ್ಟುಕೊಂಡು} ಗಾಯತ್ರಿ ಮಂತ್ರ ದಿಂದ ಅಭಿ ಮಂತ್ರಣ ಮಾಡಿ. ನಂತರ ಅಭಿ ಮಂತ್ರಣ ಮಾಡಿದ ತೀರ್ಥದಿಂದ ಮೊದಲಿಗೆ ದೇವ ತರ್ಪಣ.

 

|| ದೇವತರ್ಪಣಮ್ ||

(ವಿಧಿಃ - ಪ್ರಾಙ್ಮುಖಃ ಸವ್ಯೇನ ಕುಶಾಗ್ರೈಃ ಅಂಗುಲ್ಯಗ್ರೈ: ದೇವ ತೀರ್ಥೇನ ಶಾಲಗ್ರಾಮತೀರ್ಥೋದಕಿನ ಏಕೈಕಮಂಜಲಿಂ ದದ್ಯಾತ್ .)


ಪೂರ್ವಾಭಿಮುಖವಾಗಿ ಕುಳಿತುಕೊಂಡು
ಬಲಗೈಯಲ್ಲಿ ನಿರ್ಮಾಲ್ಯ ಹೂವು


ಮನೆಯ ದೇವರ ಕೋಣೆಯಲ್ಲಿ ದೇವರಿಗೆ ಇಟ್ಟಂತಹ ಹೂವು ಮತ್ತು ತುಳಸಿಯನ್ನು ತೆಗೆದುಕೊಳ್ಳುವುದು) ಹಿಡಿದುಕೊಂಡು

೧ ತೀರ್ಥದೇವತಾ ......... ಸ್ತೃಪ್ಯಂತು
೨ ಅಗ್ನಿ...........ಸ್ತೃಪ್ಯಂತು
೩ ವಿಷ್ಣು ..... ಸ್ತೃಪ್ಯಂತು
೪ ಪ್ರಜಾಪತಿ ... ...ಸ್ತೃಪ್ಯಂತು
೫ ಬ್ರಹ್ಮಾ ........ ತೃಪ್ಯತು
೬ ವೇದಾ ......... ಸ್ತೃಪ್ಯಂತು
೭ ದೇವಾ ......... ಸ್ತೃಪ್ಯಂತು
೮ ಋಷಯ ....... ಸ್ತೃಪ್ಯಂತು
೯ ಸರ್ವಾಣಿಛಂದಾಂಸಿ ........ತೃಪ್ಯಂತು
೧೦ ಓಂಕಾರ ........ಸ್ತೃಪ್ಯಂತು
೧೧ ವಷಟ್ಕಾರ........ಸ್ತೃಪ್ಯಂತು
೧೨ ವ್ಯಾಹೃತಯ.......... ಸ್ತೃಪ್ಯಂತು
೧೩ ಸಾವಿತ್ರೀ ..........ತೃಪ್ಯತು
೧೪ ಯಜ್ಞಾ........... ಸ್ತೃಪ್ಯಂತು
೧೫ ದ್ಯಾವಾಪೃಥಿವೀ .........ತೃಪ್ಯತಾಂ
೧೬ ಅಂತರಿಕ್ಷಂ.......... ತೃಪ್ಯತು
೧೭ಅಹೋರಾತ್ರಾಣಿ .....ತೃಪ್ಯಂತು
೧೮ಸಾಂಖ್ಯಾ.......... ಸ್ತೃಪ್ಯಂತುl
೧೯ಸಿದ್ಧಾ .........ಸ್ತೃಪ್ಯಂತು
೨೦ ಸಮುದ್ರಾ ..........ಸ್ತೃಪ್ಯಂತು
೨೧ ನದ್ಯ............ ಸ್ತೃಪ್ಯಂತುp
೨೨ ಗಿರಯ ಸ್ತೃಪ್ಯಂತು
೨೩ಕ್ಷೇತ್ರೌಷಧಿ ವನಸ್ಪತಿ ಗಂಧರ್ವ ಅಪ್ಸರಸ... .ಸ್ತೃಪ್ಯಂತು
೨೪ ನಾಗ .........ಸ್ತೃಪ್ಯಂತು
೨೫ ವಯಾಂಸಿ......... ಸ್ತೃಪ್ಯಂತು
೨೬ ಗಾವ ......... ಸ್ತೃಪ್ಯಂತು
೨೭ಸಾಧ್ಯಾ ....... ಸ್ತೃಪ್ಯಂತು
೨೮ ವಿಪ್ರಾ........... ಸ್ತೃಪ್ಯಂತು
೨೯ಯಕ್ಷಾ ..........ಸ್ತೃಪ್ಯಂತು
೩೦ ರಕ್ಷಾಂಸಿ ..........ಸ್ತೃಪ್ಯಂತು
೩೧ ಭೂತಾನಿ.......... ಸ್ತೃಪ್ಯಂತು
೩೨ ಏವಮಂತಾನಿ........ ಸ್ತೃಪ್ಯಂತು.

 

                                                                   Tarpana Ritual Types

 

 

ಋಷಿ ತರ್ಪಣಮ್

ಉತ್ತರಾಭಿಮುಖವಾಗಿ ಉಪವೀತವನ್ನು ಋಷಿ ಮಾಲೆ ಅಂದರೆ ಮಾಲಾಕಾರವಾಗಿ ಹಾಕಿಕೊಂಡು ಎರಡಾವರ್ತಿ (ಎರಡು ಸಲ) ತರ್ಪಣವನ್ನು ಋಷಿಗಳಿಗೆ ಕೊಡುವುದು

೧ ಶತರ್ಚಿನ.......ಸ್ತೃಪ್ಯಂತು
೨ ಮಾಧ್ಯಮಾ ..........ಸ್ತೃಪ್ಯಂತು
೩ ಗೃತ್ಸಮದ.........ಸ್ತೃಪ್ಯತು
೪ ವಿಶ್ವಾಮಿತ್ರ ....... ಸ್ತೃಪ್ಯತು
೫ ವಾಮದೇವ..............ಸ್ತೃಪ್ಯತು
೬ ಅತ್ರಿ . ...........ಸ್ತೃಪ್ಯತು
೭ ಭರದ್ವಾಜ ... ......ಸ್ತೃಪ್ಯತು
೮ ವಸಿಷ್ಠ .........ಸ್ತೃಪ್ಯತು
೯ ಪ್ರಗಾಥಾ .........ಸ್ತೃಪ್ಯಂತು
೧೦ ಪಾವಮಾನ್ಯ......... ಸ್ತೃಪ್ಯಂತು
೧೧ ಕ್ಷುದ್ರಸೂಕ್ತಾ ......... ಸ್ತೃಪ್ಯಂತು
೧೨ ಮಹಾಸೂಕ್ತಾ ........ಸ್ತೃಪ್ಯಂತು



ಆಚಾರ್ಯ ತರ್ಪಣಂ

ವಿಧಿಃ - ದಕ್ಷಿಣಾಭಿಮುಖಃ ಕುಶಮೂಲಾಗ್ರೆ ; ತರ್ಜನ್ಯಂಗುಷ್ಠ ಮಧ್ಯ ಪಿತೃತೀರ್ಥೇನ ಸಕೃನ್ಮಂತ್ರೇಣ ತ್ರೀನ್ ತ್ರೀನ್ ಅಂಜಲೀನ್ ದದ್ಯಾತ್)


ದಕ್ಷಿಣಾಭಿಮುಖವಾಗಿ ಜನಿವಾರವನ್ನು ಅಂಗುಷ್ಟ ದಲ್ಲಿ ಹಿಡಿದುಕೊಂಡು ಮೂರು ಸಲ ತರ್ಪಣವನ್ನು ಕೊಡುವುದು

೧.ಸುಮಂತು - ಜೈಮಿನಿ - ವೈಶಂಪಾಯನ - ಪೈಲ - ಸೂತ್ರ ಭಾಷ್ಯ -ಭಾರತ - ಮಹಾಭಾರತ – ಧರ್ಮಾಚಾರ್ಯ..... ಸ್ತೃಪ್ಯಂತು
೨.ಜಾನಂತಿ - ಬಾಹವಿ - ಗಾರ್ಗ್ಯ - ಗೌತಮ - ಶಾಕಲ್ಯ - ಬಾಭ್ರವ್ಯ -ಮಾಂಡವ್ಯ - ಮಾಂಡೂಕೇಯಾ
........ಸ್ತೃಪ್ಯಂತು
೩ ಗರ್ಗೀವಾಚಕ್ನವಿ........ ತೃಪ್ಯತು
೪ ವಡವಾಪ್ರಾತೀಥೆಯೀ .......ತೃಪ್ಯತು
೫ ಸುಲಭಾಮೈತ್ರೇಯೀ ........ತೃಪ್ಯತು
೬ ಕಹೋಳಂ ...........ತರ್ಪಯಾಮಿ
೭ ಕೌಷೀತಕಂ ........ತರ್ಪಯಾಮಿ
೮ ಮಹಾಕೌಷೀತಕಂ......... ತರ್ಪಯಾಮಿ
೯ ಪೈಂಗ್ಯಂ .........ತರ್ಪಯಾಮಿ
೧೦ ಮಹಾಪೈಂಗ್ಯಂ ........ತರ್ಪಯಾಮಿ
೧೧ ಸುಯಜ್ಞಂ " ........ತರ್ಪಯಾಮಿ
೧೨ ಸಾಂಖ್ಯಾಯನಂ........ತರ್ಪಯಾಮಿ
೧೩ .ಐತರೇಯಂ ತರ್ಪಯಾಮಿ
೧೪ ಮಹೈತರೇಯಂ........ ತರ್ಪಯಾಮಿ
೧೫ ಶಾಕಲಂ........ತರ್ಪಯಾಮಿ
೧೬ ಬಾಷ್ಕಲಂ .......ತರ್ಪಯಾಮಿ
೧೭ ಸುಜಾತವಸಕ್ತ್ರಂ ........ತರ್ಪಯಾಮಿ
೧೮ ಔದವಾಹಿಂ ........ತರ್ಪಯಾಮಿ
೧೯ ಮಹೌದವಾಹಿಂ.........ತರ್ಪಯಾಮಿ
೨೦ ಸೌಜಾಮಿಂ......ತರ್ಪಯಾಮಿ
೨೧ ಶೌನಕಂ ........ತರ್ಪಯಾಮಿ
೨೨ ಆಶ್ವಲಾಯನಂ......... ತರ್ಪಯಾಮಿ


ಯೇಚಾನ್ಯೇ ಆಚಾರ್ಯಾಸ್ತೇ ಸರ್ವೆ
ತೃಪ್ಯಂತು ತೃಪ್ಯಂತು ತೃಪ್ಯಂತು



                                                       Vishnu Pada at Gaya Kshetra

 

ಪಿತೃ ತರ್ಪಣ


ಕೈಯಲ್ಲಿರುವ ನಿರ್ಮಾಲ್ಯ ದರ್ಬೆಯನ್ನು ಕೆಳಗಿಟ್ಟು ತಿಲವನ್ನು ಬಲಗೈಯಲ್ಲಿ ಹಾಕಿಕೊಂಡು ಅಪಸವ್ಯ ಮಾಡಿಕೊಂಡು ದಕ್ಷಿಣಾಭಿಮುಖವಾಗಿ ನಾಮ ಗೋತ್ರ ಉಚ್ಚಾರ ಮಾಡಿಕೊಂಡು ಅಂಗುಷ್ಟ ತೋರುಬೆರಳು ಮಧ್ಯದಿಂದ ತರ್ಪಣವನ್ನು ಕೊಡುವುದು

ತಂದೆ .......3 ವಸು
ಅಜ್ಜ .........3 ರುದ್ರ
ಮುತ್ತಜ್ಜ......3 ಆದಿತ್ಯ

ತಾಯಿ.......3
ಅಜ್ಜಿ (ತಂದೆಯ ತಾಯಿ).......3
ಮುತ್ತಜ್ಜಿ (ತಂದೆಯ ತಂದೆಯ ತಾಯಿ)....3

(
ತಂದೆಯ ಎರಡನೇ ಹೆಂಡತಿ ಇದ್ದಲ್ಲಿ)......

ಇನ್ನು ಎಲ್ಲರಿಗೂ ಒಂದೇ ಸಲ ತರ್ಪಣ ಕೊಡುವುದು

ಅಮ್ಮನ ತಂದೆ......
ಅಮ್ಮನ ತಂದೆಯ ತಂದೆ..
ಅಮ್ಮನ ಅಜ್ಜನ ತಂದೆ....

ಅಮ್ಮನ ಅಮ್ಮ
ಅಮ್ಮನ ಅಜ್ಜಿ
ಅಮ್ಮನ ಮುತ್ತಜ್ಜಿ

ಹೆಂಡತಿ ....ಮಗ....ಮಗಳು

ತಂದೆಯ ಕಡೆಯಿಂದ


ನಿಮ್ಮ ದೊಡ್ಡಪ್ಪ -ಹೆಂಡತಿ-ಮಕ್ಕಳು (ತಂದೆಯ ಅಣ್ಣ)
ನಿಮ್ಮ ಚಿಕ್ಕಪ್ಪ -ಹೆಂಡತಿ-ಮಕ್ಕಳು (ತಂದೆಯ ತಮ್ಮ)
ನಿಮ್ಮ ತಂದೆಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು

ನಿಮ್ಮ ಒಡಹುಟ್ಟಿದವರು


ನಿಮ್ಮ ಅಣ್ಣ ಅಥವಾ ತಮ್ಮ ಅವರ ಹೆಂಡತಿ ಮತ್ತು ಮಕ್ಕಳು
ನಿಮ್ಮ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು

ತಾಯಿಯ ಕಡೆಯಿಂದ


ತಾಯಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು ಮಕ್ಕಳು
ತಾಯಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮಕ್ಕಳು

ಹೆಂಡತಿ ಕಡೆಯಿಂದ


ಹೆಂಡತಿಯ ತಂದೆ-ತಾಯಿ
ಹೆಂಡತಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು
ಹೆಂಡತಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು

ಮಾತೃ ಸಂಬಂಧಿನಾಂ
ಪಿತೃ ಸಂಬಂಧಿನಾಂ

ಗುರು ಸಪತ್ನೀಕಂ (ವಿದ್ಯೆ ಕೊಟ್ಟ ಗುರು)
ಆಚಾರ್ಯಾಂ (ಸಪತ್ನೀಕಂ ಪುರೋಹಿತರು ಇತ್ಯಾದಿ)
ಸ್ವಾಮಿನಂ ಸಪತ್ನೀಕಂ (ಪೋಷಕರು ಮಾಲೀಕರು)
ಸಖಾಯಾಂ ಸಪತ್ನೀಕಂ( ಸ್ನೇಹಿತರು)

ಜನಿವಾರವನ್ನು ಸವ್ಯ ಮಾಡಿ

ಸೂತ್ರ ನಿಷ್ಪೀಡನಂ


ಜನಿವಾರವನ್ನು ಮಾಲಾಕಾರವಾಗಿ ಮಾಡಿ ನೀವು ಬಿಟ್ಟಂತಹ ತರ್ಪಣದ ನೀರಿನಲ್ಲಿ ಒಮ್ಮೆ ಮುಳುಗಿಸಿ ಅದನ್ನು ಹಿಂಡಬೇಕು
ಪೂರ್ವಕ್ಕೆ ಮುಖ ಮಾಡಿಕೊಂಡು ಹೂವು ಮತ್ತು ನಿರ್ಮಾಲ್ಯ ವನ್ನು ತೆಗೆದುಕೊಂಡು ಕೃಷ್ಣಾರ್ಪಣ ಮಾಡಿ

ಕಾಯೇನ ವಾಚಾ ಮನಸೇಂದ್ರಿಯೆರ್ವಾ ಬುದ್ಧಾತ್ಮನಾವಾ ಪ್ರಕೃತೇ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ |


ಅನೇನ ದೇವ-ಋಷಿ-ಆಚಾರ್ಯ-ಪಿತೃ ತರ್ಪಣೇನ ಭಗವಾನ್ ಶ್ರೀ ಜನಾರ್ದನ-ವಾಸುದೇವಮೂರ್ತಿ ಪ್ರಿಯತಾಮ ಪ್ರೀತೋ ಭವತು ಶ್ರೀಕೃಷ್ಣಾರ್ಪಣಮಸ್ತು

ಎಂದುಚ್ಚರಿಸಿ ಪವಿತ್ರ ಹಾಕಿಕೊಂಡಲ್ಲಿ ಗಂಟುನ್ನು ಬಿಚ್ಚಿ ನೀರಿನಲ್ಲಿ ಹಾಕಿ ಆಚಮನ ಮಾಡುವುದು

ನ್ಯೂಯಾತಿರಿಕ್ತ ದೋಷ ಪ್ರಾಯಶ್ಚಿತಾರ್ಥಂ
ನಾಮ ತ್ರಯ ಜಪ ಮಹಂ ಕರಿಷ್ಯೇ
ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ ಎಂದುಚ್ಚರಿಸುವುದು .

ಸರ್ವ ಪಿತೃ ರನ್ನು ಈ ಕೆಳಗಿನ ಪ್ರಾರ್ಥನೆಯ ಮುಖಾಂತರ ಮನಸ್ಸಿನಿಂದ ಪ್ರಾರ್ಥನೆ ಮಾಡುವುದು
ಗತಿಸಿದ ಹಿರಿಯರ ಅನುಗ್ರಹದಿಂದ ವಂಶವು ಅಭಿವೃದ್ಧಿಯಾಗುತ್ತದೆ.


                                                       Feeding the Crow - its Importance


ಪಿತೃಪ್ರಾರ್ಥನೆ :


ಅಮೂರ್ತಾನಾಂ ಸುಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್ |
ನಮಸ್ಯಾಮಿ ಸದಾ ಭಕ್ತ್ಯಾ ಧ್ಯಾಯಿನಾಂ ಯೋಗಚಕ್ಷುಸಾಮ್ ||
ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ |
ನಮಃ ಸ್ವಧಾಯೈ ಸ್ವಾಹಾಯೈ ನಿತ್ಯಮೇವ ನಮೋ ನಮಃ


ಓಂ ನಮ: ಪಿತ್ರೇ ಜನ್ಮ ದಾತ್ರೇ
ಸರ್ವ ದೇವ ಮಯಾಯ ಚ |
ಸುಖದಾಯ ಪ್ರಸನ್ನಾಯ
ಸುಪ್ರೀತಾಯ ಮಹಾತ್ಮನೇ ||

 
ಸರ್ವ ಯಜ್ಞ ಸ್ವರೂಪಾಯ
ಸ್ವರ್ಗಾಯ ಪರಮೇಷ್ಠಿನೇ |
ಸರ್ವ ತೀರ್ಥಾವಲೋಕಾಯ
ಕರುಣಾ ಸಾಗರಾಯ ಚ ||

ನಮ: ಸದಾsಶುತೋಷಾಯ
ಶಿವ ರೂಪಾಯ ತೇ ನಮ: |
ಸದಾsಪರಾಧ ಕ್ಷಮಿನೇ
ಸುಖಾಯ ಸುಖದಾಯ ಚ ||

ದುರ್ಲಭಂ ಮಾನುಷಮಿದಂ
ಯೇನ‌ ಲಬ್ಧಂ ಮಯಾ ವಪು: |
ಸಂಭಾವನೀಯಂ ಧರ್ಮಾರ್ಥೇ
ತಸ್ಮೈ ಪಿತ್ರೇ ನಮೋ ನಮ: ||

ತೀರ್ಥ ಸ್ನಾನ ತಪೋ ಹೋಮ
ಜಪಾದಿ ಯಸ್ಯ ದರ್ಶನಂ |
ಮಹಾಗುರೋಶ್ಚ ಗುರುವೇ
ತಸ್ಮೈ ಪಿತ್ರೇ ನಮೋ ನಮ: ||

ಯಸ್ಯ ಪ್ರಣಾಮಸ್ತವನಾತ್
ಕೋಟಿಶ: ಪಿತೃ ತರ್ಪಣಂ |
ಅಶ್ವಮೇಧ ಶತೈಸ್ತುಲ್ಯಂ
ತಸ್ಮೈ ಪಿತ್ರೇ ನಮೋ ನಮ:



ನಿಮಗೂ ಮತ್ತು ನಿಮ್ಮವರಿಗೂ ಪಿತೃದೇವತೆಗಳ ಆಶೀರ್ವಾದ ಸದಾ ದೊರೆಯಲಿ.


------------ Hari Om ------------


 


 




 

 


 


Tuesday, September 16, 2025

Kari Mani --Black Bead

 

ಕರಿಮಣಿ / Black Beads

 


                                     Kari Mani Male

 

ಕರಿಮಣಿ ಸರವನ್ನು ಧರಿಸುವುದರಿಂದ ಆಗುವ ಪ್ರಯೋಜನವೇನು?

ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕಲ್ಲ, ಅದಕ್ಕೆ ವಿಶೇಷ ಹಿನ್ನೆಲೆ ಇದೆ.

ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ.


ಮದುವೆಯ ಸಾಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗರ, ಹೂವು ನೀಡಲಾಗುವುದು ಅದು ಗೃಹಿಣಿಗೆ ಸೌಭಾಗ್ಯಕರವಾದವು.

ಮಂಗಳ ಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ - ಅದರಲ್ಲಿ ಮಾಂಗಲ್ಯ ಯಾವುದು?


ಮಾಂಗಲ್ಯ ಧಾರಣದ ಸಂಪ್ರದಾಯ ಹೇಗೆ ಬಂತು?


ಬಂಗಾರದ ಒಡವೆಯಲ್ಲಿ ಕರಿಮಣಿಗಳೇಕೆ?


ಕರಿಮಣಿಸರದಲ್ಲಿ ಹವಳವೇಕೆ? ಎಂಬುದನ್ನು ನೋಡೋಣ.


                                                             Kari Mani - Mangala Suthra

 

ಆದಿಶಂಕರ ರು ರಚಿಸಿದ ಸೌಂದರ್ಯ ಲಹರಿಯಲ್ಲಿ, ಶಿವನು ಪಾರ್ವತಿಗೆ ಮಂಗಲ ಸೂತ್ರವನ್ನು ಕಟ್ಟಿದನೆಂದಿದೆ.


ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿವೆ.


ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಲ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ.


ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿ ಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ. ಕರಿಮಣಿಗಳನ್ನು
ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು, ಗಂಡಿನ ಕುಟುಂಬವೆಂಬ ಸೂತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿ ಕೊಳ್ಳ ಬೇಕು/ ಹೊಂದಿ ಕೊಳ್ಳುತ್ತಾಳೆ ಎಂಬ ಆಶಯಕ್ಕೆ ಹೋಲಿಸುತ್ತಾರೆ.

ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿ ಕೊಳ್ಳುತ್ತದೆ.


ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿ ಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಉಣ್ಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ.


ಮಂಗಲ ಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ, ಮತ- ಪಂಥಗಳಿಗೆ ಅನುಸಾರವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳೂ ಕಂಡು ಬರುತ್ತವೆ.
ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳ ತಾಳಿ, ಕಾಯಸ್ಥ/
ಮರಾಠಾ ಸ್ತ್ರೀಯರಿಗೆ ಒಂದು ಪದಕದ ತಾಳಿ,
ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ, ವೈಢೂರ್ಯಗಳಿರುವ ತಾಳಿ - ಹೀಗೆ ವೈವಿಧ್ಯಗಳು.

 

                                                                               Pic -1

 

ವೀರಶೈವ ಸ್ತ್ರೀಯರು ತಾಳಿಯೊಂದಿಗೇ ಲಿಂಗದ ಕರಂಡಕವನ್ನು ಕಟ್ಟಿ ಕೊಳ್ಳುವುದೂ ಇದೆ.
ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹದ ನಂತರ ತಾಳಿ/ ಕರಿಮಣಿ ಸರ ಧರಿಸುತ್ತಾರೆ.

ಗೃಹಿಣಿಯರು ಇಂದು ಸೌಭಾಗ್ಯಕರವಾದ ಇವುಗಳನ್ನು ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ಕೆಲವರು ಕರಿಮಣಿಯನ್ನು ಆಗಾಗ ಬಿಚ್ಚಿಟ್ಟು ಹೊರಗೆ ಹೋಗುವಾಗ ಧರಿಸುತ್ತಿದ್ದಾರೆ.
ಆದರೆ ಅವುಗಳಿಗಿರುವ ಮಹತ್ವವನ್ನು, ಸಂಪ್ರದಾಯವನ್ನು ಎತ್ತಿ ಹಿಡಿಯುವ ಗೌರವಾರ್ಹ ಆಗುವಂತಹ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿಯು ಪೂಜನೀಯಳು ಆಗುತ್ತಾಳೆ.


ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿ ಕೊಳ್ಳ ಬೇಕೆಂಬುದನ್ನು ಉಲ್ಲೇಖಿಸಲಾಗಿದೆ.

 

                                                                                  Pic-2

 

ರಾಶಿಗಳಿಗೆ ಕರಿಮಣಿಗಳ ಸಂಖ್ಯೆ:

ಮೇಷ ರಾಶಿಗೆ- 21 ಮಣಿಗಳು.
ವೃಷಭ ರಾಶಿಗೆ- 40 ಮಣಿಗಳು.
ಮಿಥುನ ರಾಶಿಗೆ- 34 ಮಣಿಗಳು.
ಕಟಕ ರಾಶಿಗೆ- 20 ಮಣಿಗಳು.
ಸಿಂಹ ರಾಶಿಗೆ- 18 ಮಣಿಗಳು.
ಕನ್ಯಾ ರಾಶಿಗೆ- 34 ಮಣಿಗಳು.
ತುಲಾ ರಾಶಿಗೆ- 40 ಮಣಿಗಳು.
ವೃಶ್ಚಿಕ ರಾಶಿಗೆ- 21 ಮಣಿಗಳು.
ಧನುಸ್ಸು ರಾಶಿಗೆ- 32 ಮಣಿಗಳು.
ಮಕರ ರಾಶಿಗೆ- 38 ಮಣಿಗಳು.
ಕುಂಭ ರಾಶಿಗೆ- 38 ಮಣಿಗಳು.
ಮೀನ ರಾಶಿಗೆ- 32 ಮಣಿಗಳು.


-------------- Hari Om ------------


 


  

 

Monday, September 15, 2025

Lord Hayagriva - ಹಯಗ್ರೀವ ಅವತಾರ

 

                                                         Lord Hayagriva with Laxmi Devi

 

ಹಯಗ್ರೀವ ಅವತಾರ / Lord Hayagriva

 

ಒಮ್ಮೆ ವಿಷ್ಣು ಸುಮಾರು 10000 ವರ್ಷಗಳ ಕಾಲ ಯುದ್ಧ ಮಾಡುವ ಪರಿಸ್ಥಿತಿ ಬಂದಿತು. ಧೀರ್ಘಾವಧಿಯ ಯುದ್ಧದಿಂದಾಗಿ ವಿಷ್ಣುಗೆ ಆಯಾಸವಾಗಿ ಯುದ್ಧ ಸಾಕು ಎನಿಸಿ, ದಣಿ ವಾರಿಸಿಕೊಳ್ಳಲು ಮಲಗಬೇಕೆಂದು ತನ್ನ ಧನುಸ್ಸನ್ನು ಪಕ್ಕ ದಲ್ಲಿಟ್ಟುಕೊಂಡು ಧನುಸ್ಸಿನ ಮೇಲೆ ತನ್ನ ಕುತ್ತಿಗೆಯನ್ನು ಒರಗಿಸಿ ಕೊಂಡು ಮಲಗಿ ಗಾಡ ನಿದ್ರೆಗೆ ಜಾರಿದ. ರಾಕ್ಷಸರು ಇನ್ನೂ ಯುದ್ಧ ಮಾಡುತ್ತಿರುವ ಸಮಯದಲ್ಲೇ ಶ್ರೀ ಹರಿ ಈ ರೀತಿ ಯೋಗ ನಿದ್ರೆಗೆ ಜಾರಿದರೆ ಗತಿ ಏನು? ಎಂದು ದೇವತೆಗಳು ಚಿಂತಿಸಿ ಶ್ರೀಹರಿಯನ್ನು ಎಚ್ಚರಗೊಳಿಸಬೇಕು ಎಂದು ಬ್ರಹ್ಮನ ಜೊತೆ ಬಂದು ಹರಿಯನ್ನು ಪ್ರಾರ್ಥಿಸಿ ಎಚ್ಚರಿಸಲು ಪ್ರಯತ್ನಿಸಿದರು.


ಆದರೆ ಶ್ರೀ ಹರಿ ಎಚ್ಚರಗೊಳ್ಳಲಿಲ್ಲ ಪುನಃ ಜೋರಾಗಿ ಕೂಗಿದರು, ಶಂಖ ಊದಿದರು, ಗಂಟೆ ಬಾರಿಸಿದರು ವಿಷ್ಣು ಏಳಲಿಲ್ಲ, ಆಗ ಬ್ರಹ್ಮ “ಗುಂಗರಿ” ಎಂಬ ಕೊರೆಯುವ ಕೀಟವನ್ನು ಸೃಷ್ಟಿ ಮಾಡಿದ. ಅದಕ್ಕೆ ಹೇಳಿದ ನೀನು ಹೋಗಿ ವಿಷ್ಣು ತಲೆ ಒರಗಿಸಿಕೊಂಡ ಧನುಸ್ಸಿಗೆ ಎಳೆದು ಬಿಗಿದು ಕಟ್ಟಿದ ಹಗ್ಗವನ್ನು ಕೊರೆದು ಕತ್ತರಿಸು. ಆಗ ಧನುಸ್ಸು ಅಗಲವಾಗಿ ವಿಷ್ಣು ತಲೆ ಎತ್ತಬೇಕಾಗುತ್ತೆ ಎಚ್ಚರಗೊಳ್ಳುತ್ತಾನೆ ಎಂದು ಹೇಳಿದ.


                                                                     Lord Hayagriva

 

 ಆದರೆ ಗುಂಗುರಿ ಹೇಳಿತು ನಾನು ಯಾಕೆ ವಿಷ್ಣು ವನ್ನು ಎಬ್ಬಿಸಬೇಕು. ಅಷ್ಟು ಚೆನ್ನಾಗಿ ನಿದ್ರೆ ಮಾಡಿರುವ ವಿಷ್ಣುವನ್ನು ನೋಡುವುದು ಬಿಟ್ಟು ಎಬ್ಬಿಸುವುದು ಸರಿಯಲ್ಲ ಎಂದಿತು. ಪುನಃ
ಬ್ರಹ್ಮ “ಗುಂಗರಿ” ಕೀಟಕ್ಕೆ ಹೇಳಿದ, ನೋಡು ಈ ಕೆಲಸ ಅಗತ್ಯವಾಗಿ ಆಗಬೇಕಿದೆ. ನೀನು ವಿಷ್ಣುವಿನ ಬಿಲ್ಲಿನ ಹಗ್ಗವನ್ನು ತುಂಡರಿಸಿ ಎಬ್ಬಿಸಿದರೆ, ಋಷಿಮುನಿಗಳು ಯಜ್ಞ ಯಾಗಾದಿಗಳನ್ನು ಮಾಡಿ ದೇವತೆಗಳಿಗೆ ಅರ್ಪಿಸುವ ಹವಿಸ್ಸನಲ್ಲಿ ಆಚೆ, ಈಚೆ ಸ್ವಲ್ಪ ಉದುರುವ ಹವಿಸ್ಸು ನಿನಗೆ ಸೇರಲಿ ಎಂದು ಆಶೀರ್ವಾದ ಮಾಡುತ್ತೇವೆ. ನಿನಗೆ ಯಾವತ್ತೂ ಹವಿಸ್ಸೀನ ಕೊರತೆಯಾಗುವುದಿಲ್ಲ ಎಂದನು. ದೇವತೆ ಗಳಿಗೆ ಕೊಡಬೇಕಾದ ಹವಿಸ್ಸು ತನಗೆ ಸಿಗುತ್ತದೆ ಎಂಬ ಆಸೆಯಿಂದ ಬ್ರಹ್ಮ ಹೇಳಿದ ಕೆಲಸಕ್ಕೆ ಒಪ್ಪಿಕೊಂಡು ಹೋಗಿ ವಿಷ್ಣು ಮಲಗಿದ ಬಿಲ್ಲಿಗೆ ಕಟ್ಟಿದ ಹಗ್ಗವನ್ನು ಗುಂಗರಿ ಕೊರೆದು ತುಂಡು ಮಾಡುತ್ತದೆ. ಹೀಗೆ ತುಂಡು ಮಾಡಿದ ತಕ್ಷಣವೇ ಆಚಾತುರ್ಯ ನಡೆದು ಹೋಯಿತು. ಕತ್ತರಿಸಿದ ಹಗ್ಗ ಚಂಗನೆ ಹಾರಿದಂತೆ ಒಂದೇ ಹೊಡೆತಕ್ಕೆ ಹೋಗಿದ್ದು ವಿಷ್ಣುವಿನ ಕತ್ತನ್ನು ಹಾರಿಸಿಕೊಂಡು ಹೋಯಿತು.

ಇದನ್ನು ಕಂಡು ಬ್ರಹ್ಮನಿಗೆ, ದೇವತೆಗಳಿಗೆ ಗಾಬರಿಯಾಯಿತು. ಕುತ್ತಿಗೆ ಇಲ್ಲದ ವಿಷ್ಣುವಿನ ವಿಗ್ರಹವನ್ನು ನೋಡುವುದಾದರೂ ಹೇಗೆ?ಮುಂದಿನ ಗತಿಯೇನು? ಎಲ್ಲರೂ ಗಾಬರಿಯಾದರು. ಸಾಮಾನ್ಯವಾಗಿ ಸಮಸ್ಯೆಗಳು ಬಂದಾಗ ಎಲ್ಲರೂ ವಿಷ್ಣುವಿನ ಬಳಿ ಬರುತ್ತಿದ್ದರು. ಆದರೆ ವಿಷ್ಣುವಿನ ಕುತ್ತಿಗೆ ಕತ್ತರಿಸಿ ಹೋಗಿರುವಾಗ, ಈಗ ಯಾರನ್ನು ಪ್ರಾರ್ಥನೆ ಮಾಡಬೇಕು ಎಂದು ದೇವತೆಗಳು ಚಿಂತಿಸಿದರು.
ಆಗ ಬ್ರಹ್ಮ ಮತ್ತು ದೇವಾದಿ ದೇವತೆಗಳೆಲ್ಲ, ವೇದೋಪಾಸನೆಯನ್ನು ಮಾಡಿರುವ ಜಗದ್ಧಾತ್ರಿಯನ್ನು ಪ್ರಾರ್ಥಿಸಬೇಕು ಎಂದು, ಎಲ್ಲರೂ ಭಕ್ತಿಯಿಂದ ದೇವಿಯಲ್ಲಿ ಪ್ರಾರ್ಥಿಸಿದರು. ಪ್ರಾರ್ಥನೆಗೆ ಒಲಿದ ದೇವಿ ಪ್ರತ್ಯಕ್ಷಳಾಗಿ ದೇವತೆಗಳಿಗೆ ಹೇಳಿದಳು ನೀವು ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ ಇದೊಂದು ಮಹಾಲೇಲೆ ಕಾರ್ಯ ಕಾರಣಕ್ಕಾಗಿಯೇ ನಡೆದಿರುವುದು. ಇದು ನಿಮ್ಮಿಂದ ಆದ ತಪ್ಪಲ್ಲ ಬಹಳ ಹಿಂದೆ ಬಂದು ಘಟನೆ ನಡೆದಿದ್ದು ಅದಕ್ಕೆ ಸಂಬಂಧಪಟ್ಟಿದೆ.‌ ಎಂದು ಆ ಘಟನೆ ಯನ್ನು ಹೇಳತೊಡಗಿದಳು.

ಒಮ್ಮೆ ವಿಷ್ಣು ಸುಂದರವಾಗಿ ಕಾಣುವ ಲಕ್ಷ್ಮಿಯನ್ನು ನೋಡಿ ಅಭಿಮಾನ ಹಾಗೂ ಸಂತೋಷದಿಂದ ನಕ್ಕನಂತೆ, ‌ ಇದನ್ನು ನೋಡಿದ ಲಕ್ಷ್ಮಿ ನನ್ನ ನೋಡಿ ಏಕೆ ನಕ್ಕಿರಿ ಎಂದು ಕೇಳಿದಾಗ ವಿಷ್ಣು ಏನೂ ಇಲ್ಲ ಹಾಗೆ ಸುಮ್ಮನೆ ಎಂದನಂತೆ. ತನ್ನಷ್ಟಕ್ಕೆ ತಾನೇ ಅಂದುಕೊಂಡ ಲಕ್ಷ್ಮಿ ಬಹುಶಃ ನಾನು ಚೆನ್ನಾಗಿಲ್ಲದಿರಬಹುದು ಅದನ್ನು ನೋಡಿ ನಕ್ಕಿರಬೇಕು. ಇಲ್ಲದಿದ್ದರೆ ಸುಮ್ಮ ಸುಮ್ಮನೆ ನಗಲು ಕಾರಣವೇನು? ಹಾಗಂದುಕೊಳ್ಳುತ್ತಿದ್ದಂತೆ ಅವಳಲ್ಲಿ ತಾಮಸ ಜಾಗೃತವಾಗಿ ಕೋಪ ಬಂದು, ನನ್ನನ್ನು ನೋಡಿ ನಕ್ಕ ನಿನ್ನ ತಲೆ ಬಿದ್ದು ಹೋಗಲಿ ಎಂದು ವಿಷ್ಣುವಿಗೆ ಶಾಪ ಕೊಟ್ಟಳು. 

 

                                                             Another picture of the Lord

 

ಆ ಶಾಪದ ಕಾರಣದಿಂದ ವಿಷ್ಣುವಿನ ತಲೆ ಬಿದ್ದುಹೋಗಿದೆ. ಇದು ಆಗಿದ್ದು ಸಹ ಮುಂದೆ ನಡೆವ ಲೀಲೆಗಾಗಿ ಎಂದು ಮುಂದುವರೆಸಿ, ಕೆಲವೇ ಸಮಯದಲ್ಲಿ ‘ಹಯಗ್ರಿವ’ ಎಂಬ ರಾಕ್ಷಸ ಹುಟ್ಟಿ, ಅವನು ವರಗಳನ್ನು ಪಡೆಯಲು, ದೇವಿಗೆ ಅತ್ಯಮೂಲ್ಯವಾದ ಏಕಾಕ್ಷರಿ ಸ್ವರೂಪ ಮಂತ್ರ ಪಠಿಸುತ್ತಾ ಉಪವಾಸ ಹಾಗೂ ಜಿತೇಂದ್ರಿಯ ಗೆದ್ದವನಾಗಿ ಕಠಿಣ ತಪಸ್ಸು ಮಾಡಿದಾಗ ನಾನು ಪ್ರತ್ಯಕ್ಷವಾಗಬೇಕಾಯಿತು. ವರ ಕೇಳು ಎಂದಾಗ ನನಗೆ ಮೃತ್ಯು ಬರುವುದು ಬೇಡ ಎಂದು ಕೇಳಿದಾಗ ದೇವಿ ಹೇಳಿದಳು ಮೃತ್ಯು ಎಲ್ಲರಿಗೂ ಬರುತ್ತದೆ. ಅದು ಸಾಧ್ಯವಿ ಲ್ಲ ಇದರ ಬದಲಿಗೆ ಬೇರೆ ವರ ಕೇಳು ಎಂದಾಗ, ‌ ನಾನು ಸಾಯುವುದೇ ಇದ್ದರೆ ನನ್ನದೇ ರೂಪವಾದ ಹಯಗ್ರೀವದಿಂದ ಸಾಯುವಂತಾಗಲಿ ಎಂದು ವರ ಕೇಳಿದ ಅದನ್ನು ಅನುಗ್ರಹಿಸಿದ್ದೇನೆ.



ಈಗಂತೂ ದುಷ್ಟ, ಶಕ್ತಿವಂತ, ಬಲಶಾಲಿ ವರಗಳನ್ನು ಪಡೆದ ರಾಕ್ಷಸನನ್ನು ಸಂಹಾರ ಮಾಡಲು ಸಾಮಾನ್ಯರಿಂದ ಸಾಧ್ಯವಿಲ್ಲ, ಇದಕ್ಕಾಗಿ ಒಂದು ಲೀಲಾ ನಾಟಕ ನಡೆಯ ಬೇಕಿತ್ತು ಆ ಕಾರಣಕ್ಕಾಗಿ ಇದು ನಡೆದಿದೆ ಎಂದು ಹೇಳಲು, ಕೇಳಿದ ಬ್ರಹ್ಮನಿಗೆ ಅರ್ಥವಾಗಿ ಯೋಗಶಕ್ತಿಯಿಂದ ಕುದುರೆ ತಲೆಯನ್ನು ತಂದು ವಿಷ್ಣುವಿನ ತಲೆಗೆ ಜೋಡಿಸಿದಾಗ ವಿಷ್ಣುವಿಗೆ ‘ಹಯಗ್ರೀವ’ (ಕುದುರೆ) ರೂಪ ಬಂದಿತು. ಈ ಕಾರಣ ಕ್ಕಾಗಿ ವಿಷ್ಣು ನಿಮಿತ್ತ ಮಾತ್ರಕ್ಕೆ ಹಯಗ್ರೀವ ಅವತಾರ ಎತ್ತ ಬೇಕಾಯಿತು.


ವಿಷ್ಣು ತಾಳಿದ ಅವತಾರಗಳಲ್ಲಿ ರಾಮಾವತಾರ ಕೃಷ್ಣ ಅವತಾರ ಇವೆರಡು ಪೂರ್ಣ ಅವತಾರಗಳು. ಪರಶುರಾಮ ಅವತಾರವು ಇಷ್ಟಲ್ಲದಿದ್ದರೂ ವಿಸ್ತಾರವಾಗಿದೆ. ಮತ್ಸ್ಯ, ಕೂರ್ಮ, ವರಾಹ , ನರಸಿಂಹ, ವಾಮನ ಮುಂತಾದ ಅವತಾರಗಳು ನಿಮಿತ್ತಾವತಾರ ಆಗಿವೆ) ಹಯಗ್ರೀವ ಅವತಾರ ತಾಳಿದ ಮಹಾವಿಷ್ಣು‌ ಈ ರೂಪದಿಂದ ಹಯಗ್ರೀವ ರಾಕ್ಷಸನೊಡನೆ ಯುದ್ಧ ಮಾಡಿ ಹಯಗ್ರೀವನನ್ನು ಸಂಹರಿಸಿ, ಅವನು ಬ್ರಹ್ಮನಿಂದ ಅಪಹರಿಸಿಕೊಂಡು ಹೋಗಿದ್ದ ವೇದಗಳನ್ನೆಲ್ಲ ಮರಳಿ ತಂದನು.

ದೇವರು ಕೂಡ ಶಾಪ ಕರ್ಮದ ನಿಯಮಗಳಿಗೆ ಭದ್ಧರಾಗಿರುತ್ತಾರೆ. ವಿಷ್ಣು ತನ್ನ ತಲೆ ಕಳೆದುಕೊಂಡು ಜ್ಞಾನರೂಪವಾದ ಹಯಗ್ರೀವ ರೂಪದಲ್ಲಿ ಮತ್ತೆ ಜನಿಸಿದರು ಎಂಬುದು ಜ್ಞಾನವು ಶರೀರಕ್ಕಿಂತ ಶ್ರೇಷ್ಠ ಎಂಬುದರ ಸಂಕೇತವಿರಬಹುದು.

ಶ್ರೀನಾಥ ಗೋವಿಂದ ಆನಂದ ಮೂರುತಿಗೆ
ಮಾಲಿನಿ ಮಣಿಯರು ಬೆಳಗುವೆವು ಆರತಿಯ!!

ವೇದಗಳನ್ನೊದ್ಧಾರ ಗೈದ ಚಿನ್ಮಯನಿಗೆ
ಆದಿ ಮೂರುತಿ ನಮ್ಮ ಮುದ್ದು ಶ್ರೀ ಕೃಷ್ಣನಿಗೆ!!

ನೀರೊಳಿರುತಿಹ ನಾರಿ ವಸ್ತ್ರಗಳನಪಹರಿಸಿ
ಚೋರತನದಲ್ಲಿ ಮರವನೇರಿದ ಮುರಹರಿಗೆ!!

ಹತಾವತಾರನಿಗೆ ರುಕ್ಮಿಣಿ ರಮಣನಿಗೆ
ಮತ್ತೆ ದೇವಕಿ ದೇವಿ ಸುತನಾದ ಶ್ರೀಹರಿಗೆ!!

Let Lord Laxmi Hayagriva Bless us ALL

------------- Hari Om ------------


 


 

 

 

Saturday, September 6, 2025

Anantha Padmanabha Swamy

 

ಅನಂತ ಪದ್ಮನಾಭ ವ್ರತದ ಕಥೆ

Story of Sri Lord AnanthaNabha Pooja

 


                            Sri Anantha Padmanabha

  

ನೈಮಿಷಾರಣ್ಯದಲ್ಲಿ ಶೌನಕಾದಿಗಳಿಗೆ ಸೂತ ಮಹರ್ಷಿಗಳು ಈ ಕಥೆಯನ್ನು ಹೇಳುತ್ತಾರೆ. ಪೂರ್ವದಲ್ಲಿ ಭಾಗೀರಥಿ ನದಿಯ ತೀರದಲ್ಲಿ ಧರ್ಮಾಸಕ್ತನಾಗಿ,ತಮ್ಮಿಂದ ರೂಡಗೂಡಿ ಅರಣ್ಯವಾಸ ಮಾಡುತ್ತಿರುವ ಧರ್ಮರಾಜನು ಅತ್ಯಂತ ಕಷ್ಟಪಡುತ್ತಿದ್ದನು. ಆ ಸಮಯಕ್ಕೆ ಅಲ್ಲಿಗೆ ಮಹಾನುಭಾವನಾಗಿ ಬಂದ ಶ್ರೀಕೃಷ್ಣನಿಗೆ ನಮಸ್ಕರಿಸಿದ ಯುಧಿಷ್ಠಿರನು, ಕರುಣಾ ಮೂರ್ತಿಯಾದ ಶ್ರೀಕೃಷ್ಣನೇ, ನನ್ನ ಸಹೋದರರೊಂದಿಗೆ, ವನವಾಸದಿಂದ ಅತ್ಯಂತ ದುಃಖ ಅನುಭವಿಸುತ್ತಿದ್ದೇವೆ. ಈ ಕಷ್ಟಗಳಿಂದ ಪಾರಾಗುವ ಯಾವುದಾದರೂ ವ್ರತವಿದ್ದರೆ ಹೇಳು ಎಂದು ಕೇಳಿದಾಗ, ಶ್ರೀಕೃಷ್ಣನು ಧರ್ಮರಾಯ ಕೇಳು ಪುರುಷರಿಗೂ, ಸ್ತ್ರೀಯರಿಗೂ, ಸಕಲ ಕಾಮ್ಯ ಸಿದ್ದಿ ಕೊಡುವ 'ಅನಂತ ವ್ರತ' ವೆಂಬ ಒಂದು ವ್ರತವಿದೆ. ಈ ವ್ರತವನ್ನು ಭಾದ್ರಪದ ಮಾಸದಲ್ಲಿ ಶುಕ್ಲ ಪಕ್ಷದ ಚತುರ್ದಶಿಯಂದು ಮಾಡಬೇಕು ಎಂದು ಹೇಳಲು ಧರ್ಮರಾಯನು ಆ ವ್ರತ ಕಥೆಯನ್ನು ಹೇಳು ಎಂದು ಕೃಷ್ಣನಿಗೆ ಹೇಳುತ್ತಾನೆ.

ಕೃತಯುಗದಲ್ಲಿ ಸುಮಂತನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನು ವಸಿಷ್ಠ ಗೋತ್ರ ದವನು. ಅಧ್ಯಯನ ಶಾಸ್ತ್ರ ಸಂಪನ್ನನೂ ಆಗಿದ್ದನು. ಆತನು ಭೃಗು ಮಹರ್ಷಿಗಳ ಮಗಳಾದ 'ದೀಕ್ಷಾ' ಎಂಬ ಕನ್ಯೆಯನ್ನು ವಿವಾಹವಾಗಿದ್ದನು. 'ದೀಕ್ಷಾ' ದೇವಿಯು ಗರ್ಭವತಿಯಾಗಿ ಸಕಲ ಗುಣವುಳ್ಳ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮಗುವಿಗೆ 'ಶೀಲೆ' ಎಂದು ಹೆಸರಿಟ್ಟರು. ದೀಕ್ಷಾ ದೇವಿಯು ಅತೀ ಜ್ವರದ ತಾಪದಿಂದ ಮೃತಪಟ್ಟಳು. ಆಗ ಸುಮಂತನು ಯಜ್ಞ ಯಾಗ ಕಾರ್ಯಗಳಿಗೆ ತೊಂದರೆಯಾಗಬಾರದೆಂದು 'ಕರ್ಕಶ' ಎಂಬ ಕನ್ಯೆಯನ್ನು ವಿವಾಹವಾದನು. ಬಹಳ ಕ್ರೂರ ಸ್ವಭಾವ ಗುಣವುಳ್ಳ ಅವಳು ಜಗಳ ಗಂಟಿಯೂ ಆಗಿದ್ದಳು.

ಮಗಳಾದ 'ಶೀಲೆ'ಯು ವಿವಾಹಯೋಗ್ಯಳಾದಾಗ ಸುಮಂತನು ಮಗಳನ್ನು ಮಹಾಮಹಿಮರಾದ 'ಕೌಂಡಿನ್ಯ' ಋಷಿಗಳಿಗೆ ಕೊಟ್ಟು ವಿವಾಹ ಮಾಡಿದನು. ಗಂಡನ ಮನೆಗೆ ಕಳುಹಿಸುವಾಗ, ಅಳಿಯನಿಗೆ ಕೊಡತಕ್ಕ ವಸ್ತ್ರಾಭರಣಗಳನ್ನು ಸ್ವಲ್ಪ ಕೊಡಬೇಕೆಂದು ಪತ್ನಿಯನ್ನು ಕೇಳಿದಾಗ ಅತಿ ನಿಷ್ಠುರವಾಗಿ ಕೊಡಲು ಏನೂ ಇಲ್ಲ ಎಂದಳು. ಬೇರೆ ದಾರಿ ಕಾಣದೆ ಸುಮಂತನು ಮದುವೆಗೆಂದು ತಂದ ಉಳಿದ ಸ್ವಲ್ಪ ಹಿಟ್ಟನ್ನು ಕೊಟ್ಟು ಅಳಿಯ ಮಗಳನ್ನು ಕಳುಹಿಸಿದನು. ಕೌಂಡಿನ್ಯನು ಸದಾಚಾರ ಸಂಪತ್ತುಳ್ಳ ಪತ್ನಿಯೊಡನೆ ಬಂಡಿಯಲ್ಲಿ ಕುಳಿತು ತನ್ನ ಆಶ್ರಮಕ್ಕೆ ಹೊರಟನು. 

 

                                                       Sri Anantha Padmanabha Swamy

 

ಹೋಗುವಾಗ ದಾರಿ ಮಧ್ಯದಲ್ಲಿ ಒಂದು ನದಿ ತೀರದಲ್ಲಿ ಬಂಡಿಯನ್ನು ನಿಲ್ಲಿಸಿ,
ಮಧ್ಯಾಹ್ನವಾದ್ದರಿಂದ ಮಾಧ್ಯಾಹ್ನಿಕವನ್ನು ಮಾಡುವುದಕ್ಕಾಗಿ ಕೌಂಡಿನ್ಯರು ನದಿಯ ಕಡೆಗೆ ಹೊರಟರು. ಆ ದಿವಸ 'ಅನಂತ ಚತುರ್ದಶಿ' ಆದುದರಿಂದ ಅನೇಕ ಮಂದಿ ಮಹಿಳೆಯರು ಕೆಂಪು ಸೀರೆಗಳನ್ನು ಉಟ್ಟುಕೊಂಡು ಬಹಳ ಶ್ರದ್ಧಾ ಭಕ್ತಿಯಿಂದ ಅನಂತಪದ್ಮನಾಭ ಸ್ವಾಮಿಯನ್ನು ಪೂಜೆ ಮಾಡುತ್ತಿದ್ದರು. ಕೌಂಡಿನ್ಯ ರ ಸತಿಯಾದ ಶೀಲೆಯು ಅದನ್ನು ನೋಡಿ, ಅವರ ಸಮೀಪಕ್ಕೆ ಹೋಗಿ, " ಮಾತೆಯರೇ, ನೀವು ಮಾಡುತ್ತಿರುವ ಪೂಜೆ ಯಾವುದು, ಯಾವ ದೇವರನ್ನು ಪೂಜಿಸುತ್ತಿದ್ದೀರಿ, ಇದರ ಹೆಸರೇನು, ನನಗೂ ಸ್ವಲ್ಪ ಹೇಳಿ" ಎಂದು ಕೇಳಿದಳು.

ಆ ಮಹಿಳೆಯರು, "ನಾವು ಅನಂತನನ್ನು ಪೂಜಿಸುತ್ತಿರುವೆವು. ಇಂದು ಭಾದ್ರಪದ ಶುಕ್ಲ ಚತುರ್ದಶಿ. ಈ ದಿನ ಮಹಾವಿಷ್ಣುವನ್ನು ಅನಂತ ಮತ್ತು ಯಮುನೆಯ ರೊಡನೆ ಪೂಜಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುವುದು" ಇದನ್ನು ತಿಳಿದು ಸಂತಸಗೊಂಡ ಶೀಲೆಯು ಅವರ ಸಹಾಯದಿಂದ ವ್ರತವನ್ನು ಮಾಡಿ ಅನಂತನ ದಾರವನ್ನು ಕೈಗೆ ಕಟ್ಟಿಕೊಂಡು ದಾರಿಯಲ್ಲಿ ಆಹಾರಕ್ಕಾಗಿ ತಂದಿದ್ದ ಹಿಟ್ಟನ್ನು ಬ್ರಾಹ್ಮಣರಿಗೆ ಕೊಟ್ಟು ಪತಿಗೆ ಸ್ವಲ್ಪ ಆಹಾರವನ್ನು ಕೊಟ್ಟು ಉಳಿದ ಸ್ವಲ್ಪವನ್ನು ತಾನು ಸೇವಿಸಿ ಸಂತುಷ್ಟಳಾಗಿ ತನ್ನ ಪತಿಯೊಡನೆ ಆಶ್ರಮಕ್ಕೆ ಬಂದಳು. ಆಶ್ರಮಕ್ಕೆ ಹೋದ ತಕ್ಷಣವೇ ಅನಂತಸ್ವಾಮಿಯ ಅನುಗ್ರಹದಿಂದ ಅನಂತವಾದ ಸರ್ವೋತ್ತಮನಾದ ಲೋಕ ಸಮ್ಮತವಾದ ಅಷ್ಟೈಶ್ವರ್ಯಗಳು ವ್ರತಮಹಿಮೆಯಿಂದ ದೊರಕಿತು. ಕೌಂಡಿನ್ಯ ಮಹಾಮುನಿಯ ಆಶ್ರಮವು ಸಕಲ ಐಶ್ವರ್ಯ ಗಳಿಂದಲೂ ಧನ ಧಾನ್ಯ ಗಳಿಂದಲೂ ಅತಿಥಿ ಸತ್ಕಾರದಿಂದ ಕೂಡಿ ಅಧಿಕವಾಗಿ ಪ್ರಜ್ವಲಿಸಿತು. ಶೀಲೆಯು ಸಕಲ ಸರ್ವಾಭರಣಗಳನ್ನು ಧರಿಸಿ ಸಾವಿತ್ರಿಗೆ ಸಮಾನಳಾದಳು. ಇದನ್ನು ನೋಡಿದ ಬಂಧುಗಳು ಅನಂತಪದ್ಮನಾಭನ ಅನುಗ್ರಹದಿಂದ ಈಕೆ ಇಷ್ಟು ಸಂತೋಷದಿಂದ ಇದ್ದಾಳೆ ಎಂದು ಮಾತಾಡಿಕೊಳ್ಳುತ್ತಿದ್ದರು. 



                                                         another picture of the Lord 


 

ಹೀಗಿರುವಾಗ ಒಮ್ಮೆ ಕೌಂಡಿನ್ಯ ರು ಪತ್ನಿಯ ಕೈಯಲ್ಲಿದ್ದ ಕೆಂಪು ದಾರವನ್ನು ನೋಡಿ, ಅದು ಏನೆಂದು ಕೇಳಲು ಆಕೆಯು ಅನಂತ ವ್ರತದ ವಿಚಾರವನ್ನು ತಿಳಿಸಿ ವ್ರತದ ಫಲವಾಗಿ ಸ್ವಾಮಿಯ ಅನುಗ್ರಹದಿಂದ ತಮಗೆ ಧನಧಾನ್ಯ ಐಶ್ವರ್ಯಗಳು ದೊರಕಿದೆ ಎಂದಳು. ಇದನ್ನು ಕೇಳಿ ಕೋಪಗೊಂಡ ಕೌಂಡಿನ್ಯ ರು ತಮಗೆ ದೊರಕಿರುವ ಸಕಲಧನ ಧಾನ್ಯವು, ತಮ್ಮ ತಪಸ್ಸಿನ ಸಾಧನೆಯ ಫಲವೆಂದು ನುಡಿದು, ಪತ್ನಿಯ ಕೈಯಲ್ಲಿದ್ದ ದಾರವನ್ನು ಕಿತ್ತು ಹತ್ತಿರದಲ್ಲಿದ್ದ ಬೆಂಕಿಗೆ ಹಾಕುತ್ತಾರೆ. ಶೀಲೆಯು ತಕ್ಷಣ ಭಯದಿಂದ ಓಡಿ ಬಂದು ದಾರವನ್ನು ತೆಗೆದು ಹಾಲಿನಲ್ಲಿ ಹಾಕಿ ರಕ್ಷಿಸಿದಳು.( ಸಾಧಾರಣವಾಗಿ ಹೆಣ್ಣುಮಕ್ಕಳು ಯಾವುದೇ ವ್ರತ ಕಥೆ ಗಳನ್ನು ಮಾಡಿ ದಾರವನ್ನು ಕಟ್ಟಿಕೊಂಡು ಅದನ್ನು ವಿಸರ್ಜಿಸಿದಾಗ ಹಾಲಿನಲ್ಲಿ ಅದ್ದಿ ಹಾಲು ಬರುವ ಗಿಡಗಳ ಮೇಲೆ ಹಾಕುತ್ತೇವೆ.ಹಾಲು ಬರುವ ಗಿಡ ಎಂದರೆ, ನಂಜುಬಟ್ಟಲು, ಹೂವಿನ ಗಿಡ.) ಕೌಂಡಿನ್ಯ ರ ಈ ಕೃತ್ಯದಿಂದಾಗಿ ಅವರ ಐಶ್ವರ್ಯ ದಿನೇ ದಿನೆ ನಶಿಸಿ ಹೋಯಿತು. ಇದನ್ನು ಅರಿತ ಕೌಂಡಿನ್ಯರು ತಮ್ಮ ಅಹಂಕಾರದಿಂದ ಈ ರೀತಿ ಆಯಿತು ಎಂದು ತಿಳಿದು, ಬಹಳ ನೊಂದು ಅನಂತನಿಗಾಗಿ ಕಾಡಿನಲ್ಲಿ ಅಲೆದಾಡಿ ಹುಡುಕಾಟ ನಡೆಸುತ್ತಾರೆ. ಬಹಳ ಕಷ್ಟಪಟ್ಟು ನೊಂದು-ಬೆಂದ ನಂತರ ಅವರ ನಿಷ್ಠೆ ಭಕ್ತಿಗೆ ಮೆಚ್ಚಿ 'ಅನಂತನು' ಅವರಿಗೆ ದರ್ಶನ ಕೊಟ್ಟು ಆಶೀರ್ವದಿಸುತ್ತಾನೆ. ನಂತರ ಕೌಂಡಿನ್ಯ ರು ಅನಂತನ ವ್ರಥವನ್ನು ಆಚರಿಸಿ ಅದರ ಪ್ರಭಾವದಿಂದ ಇಷ್ಟಾರ್ಥಗಳನ್ನು ಪಡೆದು, ಸಕಲ ಸಂಪತ್ತನ್ನು ಅನುಭವಿಸಿ, ಇಹಪರ ದಲ್ಲಿ ಮೋಕ್ಷವನ್ನು ಹೊಂದಿ ಈಗಲೂ ಉಡುರಾಶಿಗಳ ಮಧ್ಯದಲ್ಲಿ 'ಪುನರ್ವಸು ನಕ್ಷತ್ರ ವಾಗಿ' ಪ್ರಕಾಶಿಸುತ್ತಿದ್ದಾರೆ.

ಭವಿಷ್ಯೋತ್ತರಪುರಾಣದಲ್ಲಿ ಈ ಕಥೆಯಿಂದ ಅನಂತಪದ್ಮನಾಭ ಸ್ವಾಮಿಯ ಮಹಾತ್ಮೆಯನ್ನು ಅಲ್ಪನೂ ಕಲ್ಪನಾಗುವ ವ್ರತವಾಗಿದ್ದು, ಅನಂತ ವರಗಳನ್ನು ಕರುಣಿಸುವ 'ಅನಂತಪದ್ಮನಾಭ ಮಹಾವಿಷ್ಣುವು ಪದ್ಮನಾಭ ನಾಗಿ ಅನಂತನಲ್ಲಿ ಮಿಲನ ವಾದ ವ್ರತ ವಾಗಿದೆ. ಇದನ್ನು 'ಮೋಕ್ಷ ವ್ರತ'ಎಂದು ಕರೆಯುತ್ತಾರೆ. ಈ ವ್ರತವು ವನವಾಸ ದಲ್ಲಿರುವ ಪಾಂಡವರಿಗೆ ಶ್ರೀಕೃಷ್ಣನು ಹೇಳಿ ಧರ್ಮರಾಜ ನಿಂದ ವ್ರತವನ್ನು ಮಾಡಿಸಿ ಅವರ ವಿಜಯಕ್ಕೆ ಕಾರಣವಾಯಿತೆಂದು ಹೇಳುತ್ತಾರೆ. ಅಗಸ್ತ್ಯ ಮಹರ್ಷಿಗಳಿಂದ ಆಚರಿಸಲ್ಪಟ್ಟ ಈ ವ್ರತವನ್ನು ಜನಕ, ಸಗರ, ದಿಲೀಪ, ಹರಿಶ್ಚಂದ್ರ, ಭರತಾದಿಗಳು ಆಚರಿಸಿ ಅದರ ಪ್ರಭಾವದಿಂದ ರಾಜ್ಯವನ್ನು ಸುಖದಿಂದ ಪರಿಪಾಲಿಸಿ ಖ್ಯಾತರಾದರು.

"ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ,
ಸರ್ವದೇವ ನಮಸ್ಕಾರಃ ಕೇಶವ ಪ್ರತಿಗಚ್ಛತಿ.
ಸರ್ವೇಪಿ ಸುಖಿನಃ ಸಂತು ಸರ್ವೇ ಸಂತು ನಿರಾಮಯ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್"

ಆಕಾಶದಿಂದ ಬಿದ್ದ ನೀರು ಸಾಗರವನ್ನು ಸೇರುವಂತೆ ಎಲ್ಲಾ ದೇವತೆಗಳಿಗೂ ಮಾಡಿದ ನಮಸ್ಕಾರ ಕೇಶವನನ್ನು ಸೇರುತ್ತದೆ. ಎಲ್ಲರೂ ಸುಖಿಗಳಾಗಿರಲಿ, ಸರ್ವರೂ ನಿರೋಗಿಗಳಾಗಲಿ, ಎಲ್ಲರೂ ಒಳ್ಳೆಯದನ್ನು ನೋಡಲಿ, ಯಾರೊಬ್ಬರೂ ದುಃಖವನ್ನು ಕಾಣದಿರಲಿ.


ಓಂ ನಮೋ ಭಗವತೇ ವಾಸುದೇವಾಯ.


-------------- Hari Om --------------



Friday, September 5, 2025

Lalitha Saptami - ಲಲಿತ ಸಪ್ತಮಿ

 

ಲಲಿತ ಸಪ್ತಮಿ / Lalitha Saptami

 


                                      Sri Lalitha Devi

 

 

ಈ ವ್ರತದ ಪೂಜೆ ವಿಧಾನ, ವ್ರತ ಕಥೆ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ.


ಹಿಂದಿ ಕ್ಯಾಲೆಂಡರ್ ಪ್ರಕಾರ, ಲಲಿತ ಸಪ್ತಮಿ ವ್ರತವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ಆಚರಿಸಲಾಗುತ್ತದೆ. ಈ ವ್ರತವನ್ನು ಸಂತಾನ ಸಪ್ತಮಿ ವ್ರತ ಎಂದೂ ಕರೆಯುತ್ತಾರೆ.ಈ ವ್ರತವನ್ನು ಆಚರಿಸುವುದರಿಂದ ಮಕ್ಕಳಿಲ್ಲದ ದಂಪತಿಗಳು ಕುಟುಂಬದ ಮೌಲ್ಯವನ್ನು ಹೆಚ್ಚಿಸುವ ಮಕ್ಕಳನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಇದರೊಂದಿಗೆ, ಈ ಉಪವಾಸವನ್ನು ಮಕ್ಕಳ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿಯೂ ಆಚರಿಸಲಾಗುತ್ತದೆ. ಹಾಗಾದರೆ ಈ ವ್ರತದ ಪೂಜೆ ವಿಧಾನ, ವ್ರತ ಕಥೆ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ.

ಲಲಿತ ಸಪ್ತಮಿ ಪೂಜೆ ವಿಧಾನ ಹೇಗಿರಬೇಕು


ಲಲಿತ ಸಪ್ತಮಿಯಂದು ವ್ರತವನ್ನು ಮಾಡುತ್ತಿದ್ದರೆ, ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮತ್ತು ಗಣೇಶನ ಧ್ಯಾನ ಮಾಡಿ. ಇದರ ನಂತರ, ಗಣೇಶ, ಲಲಿತಾ ದೇವತೆ, ಮಾತಾ ಪಾರ್ವತಿ, ಶಕ್ತಿ, ಶಿವ ಮತ್ತು ಶಾಲಿಗ್ರಾಮವನ್ನು ಸರಿಯಾದ ರೀತಿಯಲ್ಲಿ ಪೂಜಿಸಿ. ದೇವರಿಗೆ ತೆಂಗಿನಕಾಯಿ, ಅಕ್ಕಿ, ಅರಿಶಿನ, ಶ್ರೀಗಂಧದ ತಿಲಕ, ಗುಲಾಬಿ ಬಣ್ಣ, ಹೂವುಗಳು ಮತ್ತು ಹಾಲನ್ನು ಪ್ರಸಾದವಾಗಿ ನೀಡಿ. ಹೆಚ್ಚಿನ ಜನರು ಹೂವುಗಳನ್ನು ಮಾತ್ರ ನೀಡುತ್ತಾರೆ. ಪೂಜೆಯ ಸಮಯದಲ್ಲಿ ಮೌಲಿಯನ್ನು ಇಟ್ಟುಕೊಳ್ಳಿ. ಪೂಜೆ ಮುಗಿದ ನಂತರ, ನಿಮ್ಮ ಮಣಿಕಟ್ಟಿನ ಮೇಲೆ ಈ ದಾರವನ್ನು ಕಟ್ಟಿಕೊಳ್ಳಿ. ಈ ಉಪವಾಸವನ್ನು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಆಚರಿಸಲಾಗುತ್ತದೆ.

ಲಲಿತ ಸಪ್ತಮಿ ವ್ರತ ಕಥೆ ಹೀಗಿದೆ


ಪೌರಾಣಿಕ ಗ್ರಂಥಗಳಲ್ಲಿ, ಸಂತಾನ ಸಪ್ತಮಿ ಎಂದೂ ಕರೆಯಲ್ಪಡುವ ಲಲಿತ ಸಪ್ತಮಿ ಋಷಿ ಲೋಮೇಶನ ಬಾಯಿಂದ ಕೇಳಿಬಂದಿದೆ. ದಂತಕಥೆಯ ಪ್ರಕಾರ ಅಯೋಧ್ಯೆಯ ರಾಜ ನಹುಷನ ಪತ್ನಿ ಚಂದ್ರಮುಖಿಗೆ ಒಬ್ಬ ಸ್ನೇಹಿತನಿದ್ದ. ಅವಳ ಹೆಸರು ರೂಪಮತಿ. ಆಕೆ ನಗರದ ಬ್ರಾಹ್ಮಣನ ಪತ್ನಿ. ಸಹೋದರಿಯರಿಬ್ಬರ ನಡುವೆ ಸಾಕಷ್ಟು ಪ್ರೀತಿ ಇತ್ತು. ಒಮ್ಮೆ ಇಬ್ಬರೂ ಸರಯೂ ನದಿ ತೀರದಲ್ಲಿ ಸ್ನಾನ ಮಾಡಲು ಹೋದರು, ಅಲ್ಲಿ ಅನೇಕ ಮಹಿಳೆಯರು ಸಂತಾನದ ಉಪವಾಸವನ್ನು ಆಚರಿಸುತ್ತಿದ್ದರು. ಋಷಿ ಲೋಮೇಶನ ಬಾಯಿಂದ ಕಥೆಯನ್ನು ಕೇಳಿದ, ಈ ಇಬ್ಬರು ಸ್ನೇಹಿತರು ಸಹ ಸಂತಾನವನ್ನು ಪಡೆಯುವ ಸಲುವಾಗಿ ಈ ಉಪವಾಸವನ್ನು ಆಚರಿಸಲು ನಿರ್ಧರಿಸಿದರು, ಆದರೆ ಮನೆಗೆ ಬಂದ ನಂತರ ಇಬ್ಬರೂ ಮರೆತುಹೋದರು. ಸ್ವಲ್ಪ ಸಮಯದ ನಂತರ ಇಬ್ಬರೂ ಸತ್ತರು ಮತ್ತು ಇಬ್ಬರೂ ಪ್ರಾಣಿಗಳಾಗಿ ಜನಿಸಿದರು. ಅನೇಕ ಜನ್ಮಗಳ ನಂತರ, ಇಬ್ಬರೂ ಮತ್ತೊಮ್ಮೆ ಮನುಷ್ಯ ಜನ್ಮವನ್ನು ಪಡೆದ ನಂತರ ಅವರನ್ನು ಈಶ್ವರಿ ಮತ್ತು ಭೂಷಣ ಎಂದು ಕರೆಯಲಾಯಿತು.

ಈಶ್ವರಿ ರಾಜನ ಪತ್ನಿ ಮತ್ತು ಭೂಷಣ ಬ್ರಾಹ್ಮಣನ ಪತ್ನಿ


ಈಶ್ವರಿ ರಾಜನ ಹೆಂಡತಿ ಮತ್ತು ಭೂಷಣ ಬ್ರಾಹ್ಮಣನ ಪತ್ನಿಯಾದಳು. ಇಬ್ಬರಿಗೂ ಈ ಜನ್ಮದಲ್ಲಿಯೂ ತುಂಬಾ ಪ್ರೀತಿ ಸಿಕ್ಕಿತು. ಈ ಜನ್ಮದಲ್ಲಿ ಭೂಷಣ ಹಿಂದಿನ ಜನ್ಮದ ಕಥೆಯನ್ನು ನೆನಪಿಸಿಕೊಂಡಳು, ಆದ್ದರಿಂದ ಅವಳು ಸಪ್ತಮಿಯಂದು ಉಪವಾಸ ವ್ರತ ಮಾಡಿದಳು, ಈ ಕಾರಣದಿಂದಾಗಿ ಅವಳು ಎಂಟು ಗಂಡು ಮಕ್ಕಳನ್ನು ಪಡೆದಳು, ಆದರೆ ಈಶ್ವರಿ ಈ ಉಪವಾಸ ವ್ರತವನ್ನು ಆಚರಿಸಲಿಲ್ಲ, ಆದ್ದರಿಂದ ಆಕೆಗೆ ಯಾವುದೇ ಮಕ್ಕಳು ಜನಿಸಲಿಲ್ಲ. ಇದರಿಂದಾಗಿ ಅವಳು ಭೂಷಣಳ ಬಗ್ಗೆ ಅಸೂಯೆ ಪಟ್ಟಳು.

ಅವಳು ಭೂಷಣಳ ಪುತ್ರರನ್ನು ಅನೇಕ ವಿಧಗಳಲ್ಲಿ ಕೊಲ್ಲಲು ಪ್ರಯತ್ನಿಸಿದಳು. ಆದರೆ ಭೂಷಣಳ ಉಪವಾಸದ ಪರಿಣಾಮದಿಂದ ಅವಳ ಪುತ್ರರಿಗೆ ಯಾವುದೇ ಹಾನಿಯಾಗಲಿಲ್ಲ. ದಣಿದ ಈಶ್ವರಿ ಭೂಷಣಳಿಗೆ ತನ್ನ ಅಸೂಯೆ ಮತ್ತು ಆಕೆಯ ಕೃತ್ಯದ ಬಗ್ಗೆ ಹೇಳಿದಳು ಮತ್ತು ಕ್ಷಮೆಯನ್ನೂ ಕೇಳಿದಳು. ನಂತರ ಭೂಷಣ ಅವಳಿಗೆ ಹಿಂದಿನ ಜನ್ಮದ ಬಗ್ಗೆ ನೆನಪಿಸಿದಳು ಮತ್ತು ಸಂತಾನ ಸಪ್ತಮಿಯ ಉಪವಾಸವನ್ನು ಆಚರಿಸಲು ಸಲಹೆ ನೀಡಿದಳು. ಈಶ್ವರಿ ಪೂರ್ಣ ವಿಧಿಗಳೊಂದಿಗೆ ಉಪವಾಸ ಮಾಡಿ ಸುಂದರ ಮಗನನ್ನು ಪಡೆದಳು. ಈ ಕಥೆಯನ್ನು ಓದುವ ಮತ್ತು ಕೇಳುವ ದಂಪತಿಗಳು ಕುಟುಂಬದ ಮೌಲ್ಯವನ್ನು ಹೆಚ್ಚಿಸುವ ಮಗುವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.



ಲಲಿತ ಸಪ್ತಮಿ ವ್ರತದ ಮಹತ್ವ


ಲಲಿತ ಸಪ್ತಮಿ ವ್ರತವನ್ನು ಬೃಂದಾವನದ ಗೋಪಿಯಾಗಿರುವ ರಾಧಾ ದೇವಿಯ ಸ್ನೇಹಿತೆ ಲಲಿತಾಗೆ ಅರ್ಪಿಸಲಾಗಿದೆ. ಶ್ರೀ ಕೃಷ್ಣನು ಹೇಳಿದ ಮೇಲೆ ಈ ಉಪವಾಸವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಈ ಉಪವಾಸವನ್ನು ಆಚರಿಸುವ ಮೂಲಕ, ನವವಿವಾಹಿತ ದಂಪತಿಗಳು ಆರೋಗ್ಯವಂತ ಮತ್ತು ಸುಂದರ ಮಕ್ಕಳನ್ನು ಹೊಂದುತ್ತಾರೆ ಎನ್ನುವ ನಂಬಿಕೆಯಿದೆ. ಇದಲ್ಲದೇ, ಈ ಉಪವಾಸವನ್ನು ಮಗುವಿನ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಕೂಡ ಆಚರಿಸಲಾಗುತ್ತದೆ.



ಲಲಿತಾ ಸಹಸ್ರನಾಮದ ಉಲ್ಲೇಖ


ಬ್ರಹ್ಮಾಂಡ ಪುರಾಣದಲ್ಲಿ, ಲಲಿತೋಪಾಖ್ಯಾನ ಎಂಬ ಬಿರುದನ್ನು ಲಲಿತಾ ಸಹಸ್ರನಾಮ ಸ್ತೋತ್ರಕ್ಕೆ ನೀಡೆಲಾಗಿದೆ. ಭಗವಾನ್ ವಿಷ್ಣುವಿನ ಅವತಾರವಾದ ಹಯಗ್ರೀವನು ಇದನ್ನು ಮೊದಲು ಅಗಸ್ತ್ಯ ಋಷಿಗೆ ಹೇಳಿಕೊಟ್ಟು ಕಲಿಸಿದನು. ಇದರ ಪ್ರಯೋಜನವು ಅಪಾರವಾಗಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಏಳನೆಯ ದಿನವೇ ಲಲಿತ ಸಪ್ತಮಿಯ ಶುಭ ದಿನ. ಲಲಿತಾ ದೇವಿ ಅಂದರೆ ತಾಯಿ ತ್ರಿಪುರ ಸುಂದರಿ. ಈಕೆಯ ಒಂದು ಸಾವಿರ ಹೆಸರುಗಳನ್ನು ಪಠಿಸುವುದರಿಂದ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ. ಹೌದು, ಆದರೆ ನೀವು ಅದನ್ನು ಪಠಿಸಿದಾಗಲೆಲ್ಲಾ ಅದನ್ನು ಪೂರ್ಣ ನಂಬಿಕೆ ಮತ್ತು ಗೌರವದಿಂದ ಪಠಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ..


-------------- Hari Om -------------