Thursday, June 2, 2022

35 Food Habit Sutras for a Healthy Living



 35 Food Habit Sutras for a Healthy Living


*ಸುಖ ಜೀವನಕ್ಕೆ 35 ಆರೋಗ್ಯ ಸೂತ್ರಗಳು...* ‌

ಸಂಪೂರ್ಣವಾಗಿ ಆರೋಗ್ಯಕರವಾದ ಜೀವನವನ್ನು ಹೊಂದ ಬಯಸುವವರು ಈ ಕೆಳಗೆ ತಿಳಿಸಲಾದ 35 ಸೂತ್ರಗಳನ್ನು ಪಾಲಿಸಿ.  

ಇಂದಿನ ಪೀಳಿಗೆಯ ಜನಾಂಗ ಇದನ್ನು ಮರೆತಿರಬಹುದು.


ಅದಕ್ಕೇ ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ‌ ‌ ‌ 

 
1.
ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು. Get Up early at 4.30 am.


2.
ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.


3.
ಐಸ್ ಕ್ರೀಂ ತಿನ್ನಲೇ ಬಾರದು.


4.
ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.


5.
ತಂಪು ಪಾನೀಯವನ್ನು ಸೇವಿಸಲೇ ಬಾರದು.


6.
ಮಾಡಿದ ಅಡುಗೆ ಬಿಸಿಯಾಗಿರುವಾಗಲೇ 40 ನಿಮಿಷಗಳ ಒಳಗೆ ತಿನ್ನಬೇಕು.


7.
ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.


8.
ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.


9.
ಬೆಳಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು. 


10.
ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.


11.
ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.

 

 


 


12.
ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.


13.
ಕುಳಿತುಕೊಂಡು ಊಟ ಮಾಡಬೇಕು.


14.
ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.


15.
ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.


16.
ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.


17.
ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.


18.
ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.


19.
ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.


20.
ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.


21.
ರಾತ್ರಿ ಊಟದ ನಂತರ ಒಂದು ಕಿ.ಮೀ ದೂರ ನಡೆಯಬೇಕು.


22.
ರಾತ್ರಿ ಊಟವಾದ ಒಂದು ಗಂಟೆಯ ನಂತರ ಹಾಲು ಕುಡಿಯಬೇಕು.

 


 


23.
ರಾತ್ರಿ ವೇಳೆ ಲಸ್ಸಿ, ಮಜ್ಜಿಗೆ ಕುಡಿಯಬಾರದು.


24.
ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.


25.
ರಾತ್ರಿ 9-10 ಗಂಟೆಯೊಳಗೆ ಮಲಗಬೇಕು.


26.
ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.


27.
ರಾತ್ರಿ ಸಲಾಡ್ ತಿನ್ನಬಾರದು.


28.
ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.


29.
ಟೀ,ಕಾಫೀ ಕುಡಿಯದಿರಲು ಪ್ರಯತ್ನಿಸಿ.


30.
ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.


31.
ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.


32.
ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು. 


33.
ಜೂನ್ ನಿಂದ ಸೆಪ್ಟೆಂಬರ್( ಮಳೆಗಾಲ)ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.


34.
ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.


35.
ಊಟ ಮಾಡುವಾಗ ನೀರು ಕುಡಿಯ ಬಾರದು. ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು.

 

                                          ------------- Hari Om -------------

Thursday, May 26, 2022

Power Of Anna Dana

 

ಅನ್ನದಾನದ ಮಹಿಮೆ


Annadanada Mahime or Power of Annadana

 


                                                   Pic-1

 

ಸತ್ಯಜಿತ್‌ ಎಂಬ ಬ್ರಾಹ್ಮಣ.ಸದಾಚಾರ ಸಂಪನ್ನ.ಗಂಗಾನದಿಯ ಭಕ್ತ. ಎಲ್ಲಿ ಯಾವ ತೀರ್ಥ ಕ್ಷೇತ್ರ ಹೋದರು ಯಾವ ನದಿಗಳು ಕಂಡರು ಗಂಗಾ ದೇವಿಯ ಸ್ಮರಣೆ.ನಿತ್ಯ ತೀರ್ಥ ಯಾತ್ರೆ ನಿರತ.


ಗಂಗಾ ಸ್ನಾನ ಮಾಡಬೇಕು ಎಂಬುವ ಹಂಬಲ.ಅದಕ್ಕೆ ಹೊರಟ.
ಕುರುಕ್ಷೇತ್ರ ವೆನ್ನುವ ಊರಿಗೆ ಬರುತ್ತಾನೆ.
ದಣಿದ ಆತನಿಗೆ ಯಾರಾದರೂ ಬ್ರಾಹ್ಮಣ ಕುಟುಂಬ ಯಾತ್ರಿಕರಿಗೆ ಊಟ ಹಾಕುವ ಕುಟುಂಬದ ಬಗ್ಗೆ ಅಲ್ಲಿ ಇದ್ದ ಜನರಿಗೆ ಕೇಳಿದ.


ಆ ಗ್ರಾಮದ ಜನರು ಸತ್ಯಕೇತು ಎನ್ನುವ ಬ್ರಾಹ್ಮಣ ನಿತ್ಯ ಅನ್ನದಾನ ಮಾಡುತ್ತಾ ಇದ್ದಾನೆ.ಅವನಲ್ಲಿ ನೀವು ಹೋಗಿ ನಿಮ್ಮ ಹಸಿವಿನ ಭಾದೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಅಂತ ಹೇಳುತ್ತಾರೆ.
ತಕ್ಷಣ ಅವನ ಮನೆಗೆ ಬರುತ್ತಾನೆ. ಬಂದಂತಹ ಅತಿಥಿ ಯನ್ನು ನೋಡಿ ಸತ್ಯಕೇತು ಬಹು ಸಂತಸಗೊಂಡು


"
ನಿಮ್ಮಂತಹ ಮಹಾತ್ಮರ, ಭಗವಂತನ ಭಕ್ತರ ,ಆಗಮನ ನನ್ನ ಜನ್ಮಾಂತರದ ಪುಣ್ಯ ದ ಫಲ.ನಮ್ಮ ಪಿತೃ ದೇವತೆಗಳು,
ಇಂದು ಸಂತೃಪ್ತಿ ಹೊಂದುವರು...


ಅವರ ಅಂತರ್ಯಾಮಿಯಾದ ಶ್ರೀ ಹರಿಯು ಸಂಪ್ರಸನ್ನ ಆಗುವನು..ಏಳಿ.!!.ತಮ್ಮ ಸ್ನಾನ ಆಹ್ನೀಕ ಗಳನ್ನು ಮುಗಿಸಿಕೊಂಡು ಭೋಜನ ಮಾಡಲು ಅದರ ಸಿದ್ದರಾಗಿ ಎಂದು ಕೈ 🙏ಮುಗಿದು ವಿಜ್ಞಾಪಿಸಿದ.


ಸತ್ಯಜಿತ್‌ ಎನ್ನುವ ಬ್ರಾಹ್ಮಣ ಅವನ ಮಾತಿಗೆ ಸಂತಸಗೊಂಡು
"
ಅಯ್ಯಾ! ಸತ್ಯಕೇತು! ಎಲ್ಲಾ ಕಡೆಯಿಂದ ಹಾರಿ ಬರುವ ಪಕ್ಷಿಗಳಿಗೆ ವೃಕ್ಷಗಳು ಹೇಗೆ ಆಶ್ರಯ ನೀಡುವದೋ, ಅದೇ ರೀತಿಯಲ್ಲಿ ನೀನು ಬರುವಂತಹ ಯಾತ್ರಿಕರಿಗೆ ಆಶ್ರಯ ದಾತ ನಾಗಿದ್ದೀ.ನಿನ್ನಂತಹ ಗೃಹಸ್ಥ ಇನ್ನೊಬ್ಬ ಇಲ್ಲ. ಅದಿರಿಲಿ.
ನೀನು ಗಂಗಾಸ್ನಾನ ಮಾಡಿರುವೆಯಾ?? ಎಂದು ಕೇಳಿದ.


ಅದಕ್ಕೆ ಸತ್ಯಕೇತು
"
ಕ್ಷಮಿಸಿ!!. ನಾನು ಇದುವರೆಗೆ ಗಂಗಾಸ್ನಾನ ಮಾಡಿಲ್ಲ.ನಾನು ಗಂಗಾ ಸ್ನಾನ ಮಾಡಲು ಹೊರಟರೆ ಇಲ್ಲಿ ನಿತ್ಯ ಬರುವ ಯಾತ್ರಿಕರಿಗೆ ತೊಂದರೆ ಆಗುತ್ತದೆ... ಮತ್ತು
ನನ್ನ ಅನ್ನದಾನ ಮಾಡುವ ಸಂಕಲ್ಪ ನಿಂತು ಹೋಗುತ್ತದೆ.ಹಾಗಾಗಿ ಹೋಗಿಲ್ಲ.
ಎಂದು ಉತ್ತರ ಕೊಟ್ಟ.

 


                                                                   Pic-2

ಈ ಮಾತನ್ನು ಕೇಳಿ ಸತ್ಯಜಿತ್‌.


ಛೇ!!!ಗಂಗಾ ಸ್ನಾನ ಮಾಡದ ನಿನ್ನ ಮುಖ ದರುಶನ,ನಿನ್ನ ಮನೆಯ ಭೋಜನ ಆತಿಥ್ಯ ಎಲ್ಲಾ ನಿಷಿದ್ಧ..
ತಿಳಿಯದೆ ನಿನ್ನ ಮನೆಗೆ ಬಂದೆ.. ಎಂದು
ಅವನ ಮನೆಯ ಆತಿಥ್ಯ ನಿರಾಕರಿಸಿ, ಅವನಿಗೆ ನಿಂದಿಸಿ ಹಾಗೇ ಹೊರಟ...
ಗಂಗಾನದಿಯ ದಡವನ್ನು ಸೇರಿದ...


ನೋಡುತ್ತಾನೆ ಸುತ್ತಲೂ ಬರಿಯ ಮರುಳು.ಎಲ್ಲಾ ಕಡೆ ಉಸುಕು..
ಒಂದು ಹನಿ ಸಹ ಗಂಗಾ ನದಿಯ ಕಾಣುತ್ತಾ ಇಲ್ಲ.
ಅಮ್ಮಾ!!ಗಂಗಾ ಮಾತೆ!! ನಾನು ಏನು ಅಪರಾಧ ಮಾಡಿಲ್ಲ. ಯಾಕೇ ನಿನ್ನ ದರುಶನ, ಸ್ನಾನ ನನಗೆ ಇಲ್ಲ.ದಯವಿಟ್ಟು ಕೃಪೆ ತೋರು ಅಂತ ಅಲ್ಲಿ ಬಿದ್ದು ಗೋಳಾಡಿದ.
"
ಎಲೈ ಮೂಢ!!..


ಸತ್ಯಕೇತು ವಿನ ಮನೆಯ ಅನ್ನವನ್ನು ತಿರಸ್ಕರಿಸಿ, ಅವನನ್ನು ನಿಂದಿಸಿ ಬಂದ ಕಾರಣದಿಂದ ನಿನಗೆ ನಾನು ಒಲಿಯುವದಿಲ್ಲ".
"
ಅನ್ನದಾನ ಕ್ಕೆ ಸಮನಾದ ದಾನ ಇನ್ನೊಂದು ಇಲ್ಲ"...

 


                                                                           Pic-3

ನಿತ್ಯ ಅನ್ನದಾನ ಮಾಡುತ್ತಾ, 


ಯಾತ್ರೆ ಮಾಡಿದರೆ ಚ್ಯುತಿ ಆಗುವುದೆಂದು ಗಂಗಾ ಸ್ನಾನ ಮಾಡದೇ ಮನೆಯಲ್ಲಿ ಬಂದಂತಹ ಅತಿಥಿ ಗಳ ಸತ್ಕಾರ ಮಾಡಿ ಅವರನ್ನು ಸಂತಸ ಪಡಿಸುವ ಸತ್ಯಕೇತು ಎಂಬ ಸಜ್ಜನ ವ್ಯಕ್ತಿಯ ಮನಸ್ಸು ನೋಯಿಸಿ ,ಅವನ ಆತಿಥ್ಯ ತಿರಸ್ಕರಿಸಿದ ಪಾಪಕ್ಕೆ ಇದು ಶಿಕ್ಷೆ.ಹೋಗಿ ಅವನ ಮನೆಯ ಆತಿಥ್ಯ ಸ್ವೀಕರಿಸಿ ಬಾ "ಎಂದು ಗಂಗಾದೇವಿಯು ಆದೇಶಿಸಿದಳು.
ತಾಯಿಯ ಆದೇಶದಂತೆ ಬೇಗನೆ ಅವನ ಮನೆಗೆ ಸೇರಿಕೊಂಡ.


ಬಂದಂತಹ‌ ಅತಿಥಿ ಊಟ ಮಾಡದೆ ಹೊರಟ ಎನ್ನುವ ದುಃಖ ದಿಂದ😢 ಸತ್ಯಕೇತು ಹಾಗೇ ಕುಳಿತಿದ್ದ...
ಮತ್ತೆ ತಿರುಗಿ ಬಂದ ಬ್ರಾಹ್ಮಣ ನಿಗೆ ಮತ್ತೆ ಉಪಚಾರ ಮಾಡಿ ಭೋಜನ ಮಾಡಿಸಿ ಕಳುಹಿಸಿದ.
ಹೋಗುವ ಮುಂಚೆ "ಅನ್ನದಾನದ ಮಹಿಮೆಯನ್ನು ತಿಳಿಯದೇ ನಿಮಗೆ ನಿಂದಿಸಿದೆ‌.
ನನ್ನ ಕ್ಷಮಿಸಿ" ಅಂತ ಹೇಳಿ ಅವನ ಅಪ್ಪಣೆ ಪಡೆದು ಗಂಗಾನದಿಯ ಕಡೆ ಬರುತ್ತಾನೆ.....
ತುಂಬಿ ಹರಿಯುವ ಗಂಗೆಯ ಪ್ರವಾಹವನ್ನು ಕಂಡು ಸಂತಸ ಪಟ್ಟ. ಗಂಗೆಯಲ್ಲಿ ಮಿಂದು ಪುನೀತನಾದ..

ಎಲ್ಲಾ ದಾನಗಳಿಗಿಂತ ಅನ್ನದಾನ ಶ್ರೇಷ್ಠ.ಅನ್ನ ಪ್ರಾಣ.ಅನ್ನದಾನ ಮಾಡುವವನು ಹಸಿದವರಿಗೆ ಪ್ರಾಣದಾನ ಮಾಡಿದಂತೆ…


ಹೀಗೆ ಸರ್ವಭೂತಗಳಿಗು ಅನ್ನ ಪ್ರಾಣ ದಾಯಕ.ಇಂತಹ ಅನ್ನದಾನವನ್ನು ಯಾರು ಮಾಡುತ್ತಾರೆ ಅವರು ಉತ್ತಮ ಲೋಕವನ್ನು ಹೊಂದುವರು ಮತ್ತು ಭಗವಂತನ ಅನುಗ್ರಹ ಕ್ಕೆ ಪಾತ್ರರಾಗುವರು".

 


                                                            Pic-4

🙏ಶ್ರೀ ಕೃಷ್ಣಾರ್ಪಣಮಸ್ತು🙏
ಅನ್ನದಿಂದಲಿ ಬಂದ ಘನ್ನ ದುರಿತ ಹರ|
ಅನ್ನದಿಂದಲಿ ಸರ್ವ ಪುಣ್ಯ ಫಲಿಸುವದು|.
ಅನ್ನದಾನಕ್ಕಿಂತ ಇನ್ನೂ ಮಿಗಿಲು ಇಲ್ಲ|.
ಅನಂತ ಮೂರುತಿ ವಿಜಯವಿಠ್ಠಲರೇಯ|
ತನ್ನವನಿವನೆಂದು ಮನ್ನಿಸಿ ಪೊರೆವ||


🙏
ಶ್ರೀ ಕಪಿಲಾಯನಮಃ🙏

 

  ------------ Hari Om ------------



 

Tuesday, April 5, 2022

ShubaKruta Nama Samvatsara - UGADI - Hindu New Year

 

Shubha Kruta Nama Samvatsara – New Year UGADI - ( 02-April 2022 to 21st March 2023 )

 

                                                       Lord Vishnu or Hari


This New Year is being Celebrated by mainly in Karnataka , Telangana and AndraPradesh States and as Gudi Padva in Maharashtra in India.

 

ಶ್ರೀ ಶುಭಕೃತುನಾಮ ಸಂವತ್ಸರದ ಆಗಮನವು
ಪ್ರತಿಯೊಬ್ಬರಿಗೂ,
ಶು ಶುಭ್ರ ಮನದ ಶುಭದ ಆನಂದ,
ಭ ಭಕ್ತಿ, ಶ್ರಧ್ದೆಯ ಸಂಭ್ರಮದಿಂದ
ಕೃ ಕೃಷ್ಣ ಪರಮಾತ್ಮನ ಆರಾಧನೆಯನ್ನು
ತು ತುಳಸಿ ದಳಗಳಿಂದ ಅರ್ಚಿಸಿ
ನಾ ನಾಮ ಸ್ಮರಣೆಯನ್ನು
ಮ ಮನಃಪೂರ್ವಕವಾಗಿ ಮಾಡಿ
ಜಗದೊಡೆಯನ ಅನುಗ್ರಹದಿಂದ
ಸಂತಸ, ಸಂಭ್ರಮ, ಸಂತೃಪ್ತಿಯನ್ನು
ಪಡೆದು ಜನ್ಮ ಸಾರ್ಥಕವಾಗಲಿ.


2 - 4 -2022
ಇಂದಿನಿಂದ 21-03-2023

ಶುಭಕೃತ್ ನಾಮ ಸಂವತ್ಸರ ಆರಂಭ

ಸಂವತ್ಸರದ ಮೊದಲ ಹಬ್ಬ.
ಹೊರಗೆಲ್ಲೂ ಹೋಗದೆ ಮನೆಯಲ್ಲಿಯೇ ಇದ್ದು, ಇದ್ದುದರಲ್ಲಿಯೇ ಸರಳವಾಗಿ ಹಬ್ಬವನ್ನಾಚರಿಸಿ,ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ.

ಶುಭಕೃತ್ ನಾಮ ಸಂವತ್ಸರದ ಯುಗಾದಿಯ ಶುಭಾಶಯಗಳು.

ಶತಾಯುರ್ವಜ್ರ ದೇಹಾಯ
ಸರ್ವ ಸಂಪತ್ಕರಾಯ ಚ|
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ ||

ಯುಗಾದಿಯ ದಿನ ಪಂಚಾಂಗಕ್ಕೆ ಪೂಜೆ ಮಾಡಿ,
ಮೇಲಿನ ಶ್ಲೋಕ ಹೇಳಿ ಬೇವು ಬೆಲ್ಲ ಸವಿಯಬೇಕು.

ಈ ಸಂವತ್ಸರದಲ್ಲಿ ನಿಮಗೆಲ್ಲರಿಗೂ ಬೇವಿಗಿಂತಲೂ,ಸಿಹಿಯ ಬೆಲ್ಲದ ಸವಿ ಫಲಗಳೇ ಲಭಿಸಲಿ.

ಸರ್ವೇವೈ ಸುಖಿನಸ್ಸಂತು
ಸರ್ವೇಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ದುಃಖಭಾಗ್ಭವೇತ್ ||

ಎಲ್ಲರೂ ಸುಖವಾಗಿರಲಿ.
ಎಲ್ಲರೂ ಕಷ್ಟ-ತಾಪತ್ರಯಗಳಿಲ್ಲದೆ ನೆಮ್ಮದಿಯಿಂದ ಇರುವಂತಾಗಲಿ.
ಎಲ್ಲರಿಗೂ ಎಲ್ಲೆಡೆಗಳಿಂದ ಮಂಗಳಕರವಾದ ಒಳಿತೇ ಕಾಣಿಸಲಿ.
ಯಾರೊಬ್ಬರೂ ದುಃಖಭಾಗಿಗಳಾಗದಿರಲಿ.

ಕಾಲೇ ವರ್ಷಂತು ಪರ್ಜನ್ಯಃ
ಪೃಥಿವೀ ಸಸ್ಯ ಶಾಲಿನೀ |
ದೇಶೋsಯಂ ಕ್ಷೋಭ ರಹಿತಃ
ಸಾತ್ವಿಕಾಃ ಸಂತು ನಿರ್ಭಯಾಃ ||

ಸಕಾಲದಲ್ಲಿ ಸಾಕಷ್ಟು ಮಳೆ ಸುರಿಯಲಿ.
ಭೂಮಿಯು ಪೈರು-ಪಚ್ಚೆಗಳಿಂದ ತುಂಬಿರಲಿ.
ಈದೇಶವು ಬಾಧೆ-ಕ್ಷೋಭೆಗಳಿಲ್ಲದ್ದಾಗಲಿ.
ಸಾತ್ವಿಕ ಸಜ್ಜನರು ಭಯಮುಕ್ತರಾಗಿ ಜೀವಿಸಲಿ.

ಪ್ಲವನಾಮ ಸಂವತ್ಸರದಲ್ಲಿ ಬಂದ ಸಕಲ ಪ್ಲವ ವನ್ನು *ಶುಭಕೃತ್ ನಾಮ ಸಂವತ್ಸರವು ದೂರಮಾಡಲಿ.

ಎಲ್ಲರಿಗೂ ನೂತನ ಶುಭಕೃತ್ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು..
ಶುಭವಾಗಲಿ.


ಬೇವು ಎಷ್ಟೇ ಕಹಿಯಿದ್ದರೂ ಅದರ ರೋಗ ನಿರೋಧಕ ಶಕ್ತಿ ಮಹತ್ವದ್ದು.
ಹಾಗೆಯೇ ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂಕಷ್ಟಗಳು ಮನಸ್ಸನ್ನು ಧೃಡಪಡಿಸಿ ಸಾಗುವುದನ್ನು ಕಲಿಸುತ್ತದೆ.


ಬೆಲ್ಲ ಎಷ್ಟೇ ಸಿಹಿಯೆನಿಸಿದರೂ ನಿರಂತರ ಸ್ವೀಕರಿಸಲಾಗುವುದಿಲ್ಲ..
ಹಾಗೂ ಕಹಿಯ ರುಚಿ ಅನುಭವ ಇಲ್ಲದಿದ್ದರೇ ಸಿಹಿಯ ಬೆಲೆಯ ಆನಂದಿಸಲಾಗುವುದಿಲ್ಲ. ಸಿಹಿ-ಕಹಿ ಇವೆರಡೂ ಜೀವನಕ್ಕೆ ಧಾವಿಸಿದರೂ ಬೆಲ್ಲದಂಥ ಮನಸ್ಸು ನಮ್ಮದಾಗಿ ಕಹಿಯನ್ನೂ ಸಹ ಸಿಹಿಯಾಗಿ ಪರಿವರ್ತಿಸುವ ಆಶಯದೊಡನೆ ಈ ನೂತನ ಶುಭಕೃತ್ ವರ್ಷವನ್ನು ಪ್ರಾರಂಭಿಸೋಣ.


ಶ್ರೀ ಹರಿ ವಾಯು ಗುರುಗಳ ಅನುಗ್ರಹ ಸದಾ ನಮ್ಮೆಲ್ಲರ ಮೇಲೆ ಇರಲೆಂದು ಪ್ರಾರ್ಥನೆ ಮಾಡುತ್ತಾ.. ..ಸುಖವಾಗಲಿ ಬಹು ದುಃಖವಾಗಲಿ ಸಖ ನೀನಾಗಿರು ಪಾಂಡುರಂಗ.

 

                                                            another picture of the Lord

 

Let Lord Hari Vayu give us with their Blessings to beget Happiness and Prosperity to All.


                                            ------------ Hari Om ------------ 

Wednesday, March 30, 2022

Elders Value in any Home

 Elders Value in any Home

 

 


 

ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ,
ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ ೩೫ – 35 ನಿಯಮ ಪಾಲಿಸಬೇಕು:-


1.
ಅವರ ಮುಂದೆ ಕುಳಿತಾಗ ಫೋನ್ ಗಳನ್ನು ದೂರವಿಡಿ
2.
ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ ಮಧ್ಯದಲ್ಲೇ ನಿಲ್ಲಿಸಬೇಡಿ.
3.
ಅವರ ಅಭಿಪ್ರಾಯ ಒಪ್ಪಿಕೊಳ್ಳಿ
4.
ಅವರ ಜೊತೆ ಮಾತಾಡುವಾಗ ಚಿತ್ತವಿಡಿ
5.
ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ
6.
ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ
7.
ದುಖ:ದ ವಿಷಯ ಆದಷ್ಟು ಅವೈಡ್ ಮಾಡಿ
8.
ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಮಾತ್ರ ಮಾತಾಡಿ
9.
ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ
10.
ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ
11.
ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ
12.
ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ
13.
ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ
14.
ಅವರ ಮಾತನ್ನು ತೆಗಳಬೇಡಿ.
15.
ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ.
16.
ಅವರ ವಯಸ್ಸಿಗೆ ಬೆಲೆಕೊಡಿ.
17.
ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ
18.
ಅವರ ಮುಂದೆ ಮೊಮ್ಮಕ್ಕಳನ್ನು ಹೊಡೆಯಬೇಡಿ
19.
ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.
20.
ಅವರ ಮುಂದೆ ಜೋರಾಗಿ ಮಾತನಾಡಬೇಡಿ


21.
ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ
22.
ಅವರಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ
23.
ಅವರ ನ್ಯೂನ್ಯತೆಯನ್ನು ಪದೇ ಪದೇ ಎತ್ತಿ ತೋರಿಸಬೇಡಿ.
24.
ಸಣ್ಣ ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.
25.
ಅವರು ಮಾಡಿದ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ
26.
ನಿಮ್ಮ ಕಷ್ಟಗಳನ್ನು ಆದಷ್ಟು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.
27.
ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ
28.
ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.
29.
ಹೋಗುವಾಗ ಬರುವಾಗ ಭೆಟ್ಟಿಯಾಗಿ ಆಶೀರ್ವಾದ ಪಡೆಯಿರಿ
30.
ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ
31.
ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ
32.
ದಿನಕ್ಕೆ ಕನಿಷ್ಟ 1ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ
33.
ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ
34.
ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ
35.
ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯಲೋಪದ ಬಗ್ಗೆ ಯೋಚಿಸಬೇಡಿ.
ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ, ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ.



ಕೃಷ್ಣಾರ್ಪಣಮಸ್ತು

Monday, February 21, 2022

Benefits of Bhajane or Bhajans-- ಭಜನೆ

Benefits of Bhajane / ಭಜನೆ

 

 

                      Pic -1

     

ಭಜನೆ ಎಂಬ ಮೂರಕ್ಷರಕ್ಕೆ ಬಹಳ ಮಹತ್ವವಿದ್ದು, ನಮ್ಮಿಂದ ಮನಃಪೂರ್ವಕವಾಗಿ ದೇವರಿಗೆ ನೀಡುವಂತಹ ಒಂದು ಸಂಪತ್ತು ಇದ್ದರೆ ಅದು ಭಜನೆ. ಭಜನೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದರೆ, ಭಗವಂತನಿಗೆ ಅತಕ್ಕಿಂತ ದೊಡ್ಡ ಹರಕೆಯಿಲ್ಲ.

ಪುರಂದರದಾಸರು , ಕನಕದಾಸರು ಭಜನೆಯಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು.


ಭಜನೆಯಿಂದ ಮನೆಯ ಎಲ್ಲಾ ಸದಸ್ಯರಲ್ಲೂ ಆಧ್ಯಾತ್ಮಿಕ ಭಾವನೆ ಬೆಳೆಯುತ್ತದೆ. ಭಜನೆಯಿಂದ ಮನೆಯ ವಿಭಜನೆಯಿಲ್ಲ.



ಭಜನೆ ಹೇಳುತ್ತಾ ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ಭಾಗ್ಯ, ಅನೇಕ ಕಾಯಿಲೆಗಳನ್ನು ಶಮನ ಮಾಡಬಲ್ಲ ಪರಿಣಾಮಕಾರಿ ವ್ಯಾಯಾಮ ಎನಿಸಿದೆ.
ಹೃದಯ ರೋಗ ಮತ್ತು ಅಸ್ತಮಾ ಶ್ವಾಸಕೋಶದ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.


ಚಪ್ಪಾಳೆ ಯನ್ನು ತಟ್ಟುವಾಗ ನಾವು ಲಯಬದ್ಧವಾಗಿ ತಾಳ ಹಾಕುತ್ತೇವೆ. ಈ ಶಬ್ದವು ಕೂಡ ನಮಗೆ ಬಹಳ ಉಪಯೋಗಿಯಾಗಿದೆ. ಈ ಲಯಬದ್ಧವಾಗಿ ಪುನರಾವರ್ತಿಯಾಗುವ ಶಬ್ದವು ನಮ್ಮಲ್ಲಿ ಒಂದು ವಿಧವಾದ ಶಿಸ್ತನ್ನು ಉಂಟು ಮಾಡುತ್ತದೆ. ಇದರಿಂದ ನಮ್ಮ ಏಕಾಗ್ರತೆಯು ಹೆಚ್ಚುತ್ತದೆ.

 

                                                                             Pic-2


 

ಹೀಗಾಗಿಯೇ ನಾವು ಭಜನೆ ಮಾಡುವಾಗ ತಾಳಕ್ಕೆ ತಕ್ಕಂತೆ ಚಪ್ಪಾಳೆ ತಟ್ಟುತ್ತೇವೆ. ಇದರಿಂದ ಕ್ರಮೇಣ ನಮ್ಮ ಮನಸ್ಸು ಶಿಸ್ತಿನಿಂದ ಭಜನೆಯಲ್ಲಿ ಏಕಾಗ್ರಗೊಂಡು ತಲ್ಲಿನವಾಗುತ್ತದೆ. ಇದರ ಮಹತ್ವ ಅರಿತು ಏನೋ ನಮ್ಮ ಪೂರ್ವಿಕರು ಭಜನೆಯ ಜೊತೆಗೆ ಚಪ್ಪಾಳೆಯನ್ನು ಸೇರಿಸಿ ನಮ್ಮನ್ನು ಸುಲಭವಾಗಿ ಬಾಹ್ಯ ಜಗತ್ತನ್ನು ಮರೆತು ದೇವರನಾಮ ಹಾಡುವಂತೆ ಮಾಡಿದ್ದು.


ಜೀರ್ಣಾಂಗ ತೊಂದರೆಗಳನ್ನೆದುರಿಸುತ್ತಿರುವ ಜನರಿಗೆ ಪರಿಣಾಮಕಾರಿ ಪರಿಹಾರ.

ಚಪ್ಪಾಳೆ, ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಬಲಪಡಿಸುವ ಮೂಲಕ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 


                                                                        Pic-3

ಪ್ರತಿದಿನ ಚಪ್ಪಾಳೆ ತಟ್ಟುವುದು ಅಧಿಕ ರಕ್ತದೊತ್ತಡ, ಮಧುಮೇಹ, ಖಿನ್ನತೆ, ಸಂಧಿವಾತ, ತಲೆನೋವು, ನಿದ್ರಾಹೀನತೆ ಮತ್ತು ಕೂದಲು ನಷ್ಟದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಲಾಭಕರವಾಗಿರುತ್ತದೆ.



ಚಪ್ಪಾಳೆ ತಟ್ಟುವುದರಿಂದ ನಮ್ಮ ಕೈಗಳಲ್ಲಿ ಇರುವ ನರಗಳು ಹಾಗೂ ನಮ್ಮ ಮೆದುಳಿನ ಸಂವೇದನಾ ಗ್ರಾಹಕಗಳು ಸಕ್ರಿಯಗೊಳುತ್ತವೆ. ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ.

 

ಇದರಿಂದಾಗಿ ನಮ್ಮ ದೇಹದ ಅನೇಕ ಭಾಗಗಳು ಕ್ರಿಯಾಶೀಲವಾಗುತ್ತವೆ. ಹೀಗಾಗಿ ನಿಂತಲ್ಲಿಯೇ ನಾವು ನಮ್ಮ ದೈಹಿಕ ವ್ಯಾಯಾಮಕ್ಕೆ ಒಂದು ವ್ಯತ್ಯಾಸದ ಸ್ಪರ್ಶ ಕೊಡುತ್ತೇವೆ.
ನಾವು ಚಪ್ಪಾಳೆ ತಟ್ಟುವಾಗ ಬಿರುಸಿನಿಂದ ಎರಡು ಕೈಗಳನ್ನು ತಟ್ಟುವಾಗ ನಮ್ಮ ಅಂಗೈ ಹಾಗೂ ಬೆರಳುಗಳ "ಪ್ರೆಶರ್ ಪಾಯಂಟ್ಸ್" ಸಕ್ರಿಯಗೊಳ್ಳುತ್ತವೆ. ಇದರಲ್ಲಿ ವಿಸ್ಮಯಕಾರಿ ಅಂಶವೆಂದರೆ ನಮ್ಮ ದೇಹದ ಎಲ್ಲ ಮುಖ್ಯಭಾಗಗಳಾದ ಮೆದುಳು, ಹಣೆ, ಕಣ್ಣು, ಮೂಗು, ಗಂಟಲು, ಶ್ವಾಸಕೋಶ, ಹೊಟ್ಟೆ, ಹೃದಯ, ಯಕೃತ್, ಗರ್ಭಕೋಶ, ಕರುಳು, ಕಾಲು ಇತ್ಯಾದಿ ಎಲ್ಲ ಅಂಗಗಳಿಗೆ ಸೇರುವ "ಪ್ರೆಶರ್ ಪಾಯಂಟ್ಸ್" ನಮ್ಮ ಅಂಗೈ ಹಾಗೂ ಬೆರಳಿನಲ್ಲಿ ಇವೆ.
ಚಪ್ಪಾಳೆ ಮಕ್ಕಳ ಕಲಾ ಕೌಶಲಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ-

 

                                                                     Pic-4

 

ಅಚ್ಚುಕಟ್ಟಾದ ಕೈಬರಹ, ಕಡಿಮೆ ಕಾಗುಣಿತ ದೋಷ, ಇತ್ಯಾದಿ ಇತರರನ್ನು ಹುರಿದುಂಬಿಸುವ ಸಂಕೇತವಾಗಿ ತಟ್ಟುವ ಚಪ್ಪಾಳೆಯಿಂದ ಅದ್ಭುತವಾದ ಆರೋಗ್ಯ ಲಾಭಗಳನ್ನು ಪಡೆಯಿರಿ. ಇನ್ನು ನಮಗಾಗಿಯೂ ಸಹ ಚಪ್ಪಾಳೆ ತಟ್ಟಲು ಪ್ರಾರಂಭಿಸೋಣ. ಇದರಿಂದ ಇತರರನ್ನು ಪ್ರೋತ್ಸಾಹಿಸಿದಂತೆಯೂ ಆಯಿತು ಹಾಗೆಯೇ ನಮ್ಮ ಆರೋಗ್ಯ ವೃದ್ಧಿಯೂ ಆಯಿತು.

ಹೀಗೆ ನಮ್ಮ ಸ್ವಾಮಿಕಾರ್ಯ ಸ್ವಕಾರ್ಯ ಎರಡೂ ಆಯಿತು.

 

------------ Hari Om -----------



Thursday, January 27, 2022

Achyutashtakam

Achyutashtakam

 

                                 Lord - Achyuta

ಅಚ್ಯುತಾಷ್ಟಕಂ


ಅಚ್ಯುತಂ ಕೇಶವಂ ರಾಮನಾರಾಯಣಂ
ಕೃಷ್ಣದಾಮೋದರಂ ವಾಸುದೇವಂ ಹರಿಂ ।
ಶ್ರೀಧರಂ ಮಾಧವಂ ಗೋಪಿಕಾ ವಲ್ಲಭಂ
ಜಾನಕೀನಾಯಕಂ ರಾಮಚಂದ್ರಂ ಭಜೇ ॥ 1 ॥

ಅಚ್ಯುತಂ ಕೇಶವಂ ಸತ್ಯಭಾಮಾಧವಂ
ಮಾಧವಂ ಶ್ರೀಧರಂ ರಾಧಿಕಾ ರಾಧಿತಂ ।
ಇಂದಿರಾಮಂದಿರಂ ಚೇತಸಾ ಸುಂದರಂ
ದೇವಕೀನಂದನಂ ನಂದಜಂ ಸಂದಧೇ ॥ 2 ॥

ವಿಷ್ಣವೇ ಜಿಷ್ಣವೇ ಶಂಕನೇ ಚಕ್ರಿಣೇ
ರುಕ್ಮಿಣೀ ರಾಗಿಣೇ ಜಾನಕೀ ಜಾನಯೇ ।
ವಲ್ಲವೀ ವಲ್ಲಭಾಯಾರ್ಚಿತಾ ಯಾತ್ಮನೇ
ಕಂಸ ವಿಧ್ವಂಸಿನೇ ವಂಶಿನೇ ತೇ ನಮಃ ॥ 3 ॥

ಕೃಷ್ಣ ಗೋವಿಂದ ಹೇ ರಾಮ ನಾರಾಯಣ
ಶ್ರೀಪತೇ ವಾಸುದೇವಾಜಿತ ಶ್ರೀನಿಧೇ ।
ಅಚ್ಯುತಾನಂತ ಹೇ ಮಾಧವಾಧೋಕ್ಷಜ
ದ್ವಾರಕಾನಾಯಕ ದ್ರೌಪದೀರಕ್ಷಕ ॥ 4 ॥

ರಾಕ್ಷಸ ಕ್ಷೋಭಿತಃ ಸೀತಯಾ ಶೋಭಿತೋ
ದಂಡಕಾರಣ್ಯಭೂ ಪುಣ್ಯತಾಕಾರಣಃ ।
ಲಕ್ಷ್ಮಣೋನಾನ್ವಿತೋ ವಾನರೈಃ ಸೇವಿತೋ
ಅಗಸ್ತ್ಯ ಸಂಪೂಜಿತೋ ರಾಘವಃ ಪಾತು ಮಾಂ ॥ 5 ॥

ಧೇನುಕಾರಿಷ್ಟಕಾಽನಿಷ್ಟಿಕೃದ್-ದ್ವೇಷಿಹಾ
ಕೇಶಿಹಾ ಕಂಸಹೃದ್-ವಂಶಿಕಾವಾದಕಃ ।
ಪೂತನಾಕೋಪಕಃ ಸೂರಜಾಖೇಲನೋ
ಬಾಲಗೋಪಾಲಕಃ ಪಾತು ಮಾಂ ಸರ್ವದಾ ॥ 6 ॥

ಬಿದ್ಯುದುದ್-ಯೋತವತ್-ಪ್ರಸ್ಫುರದ್-ವಾಸಸಂ
ಪ್ರಾವೃಡಂ-ಭೋದವತ್-ಪ್ರೋಲ್ಲಸದ್-ವಿಗ್ರಹಂ ।
ವಾನ್ಯಯಾ ಮಾಲಯಾ ಶೋಭಿತೋರಃ ಸ್ಥಲಂ
ಲೋಹಿತಾಙ್-ಘಿದ್ವಯಂ ವಾರಿಜಾಕ್ಷಂ ಭಜೇ ॥ 7 ॥

ಕುಂಚಿತೈಃ ಕುಂತಲೈ ಭ್ರಾಜಮಾನಾನನಂ
ರತ್ನಮೌಳಿಂ ಲಸತ್-ಕುಂಡಲಂ ಗಂಡಯೋಃ ।
ಹಾರಕೇಯೂರಕಂ ಕಂಕಣ ಪ್ರೋಜ್ಜ್ವಲಂ
ಕಿಂಕಿಣೀ ಮಂಜುಲಂ ಶ್ಯಾಮಲಂ ತಂ ಭಜೇ ॥ 8 ॥

ಅಚ್ಯುತಸ್ಯಾಷ್ಟಕಂ ಯಃ ಪಠೇದಿಷ್ಟದಂ
ಪ್ರೇಮತಃ ಪ್ರತ್ಯಹಂ ಪೂರುಷಃ ಸಸ್ಪೃಹಂ ।
ವೃತ್ತತಃ ಸುಂದರಂ ಕರ್ತೃ ವಿಶ್ವಂಭರಃ
ತಸ್ಯ ವಶ್ಯೋ ಹರಿ ರ್ಜಾಯತೇ ಸತ್ವರಂ ॥

 

             --------------- Hari Om --------------

 


 

Thursday, December 30, 2021

Mritunjaya Maha Mantra

 Mritunjaya Maha Mantra

 

                                                                       Lord Shiva
 

 

ಮಹಾ ಮೃತ್ಯುಂಜಯ ಮಂತ್ರ

 

ಬಹುತೇಕರು ಮೃತ್ಯುಂಜಯ ಮಹಾ ಮಂತ್ರವನನ್ನು ಪ್ರತಿದಿನ ಪಠನೆ ಮಾಡುವ ಅಭ್ಯಾಸ ರೂಢಿಸಿಕೊಂಡಿರುವುದು ಉತ್ತಮ ಮಾರ್ಗವೇ ಸರಿ.
ಅದು ಬೆಳಗಿನ ಜಾವ ಅಥವ ರಾತ್ರಿ ಮಲಗುವ ಮೊದಲು ಕನಿಷ್ಠ ಹನ್ನೊಂದು ಬಾರಿ ಪಠನೆ ಮಾಡುವುದು ಸಾಮಾನ್ಯ ಕ್ರಮ.

ಈ ಮಂತ್ರವನ್ನು ಪಠನ ಮಾಡುವುದು ಒಂದು ಭಾಗವಾದರೆ, ಅದರ ಅರ್ಥ ತಿಳಿದು ಪಠನೆ ಮಾಡುವುದು ಮತ್ತೊಂದು ಭಾಗ, ಇದರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಮತ್ತು ಫಲವೂ ಅಧಿಕ.



ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ|
ಊರ್ವಾರು ಕಮಿವ ಬಂಧನಾತ್‌ ಮೃತ್ಯೋಮೃಕ್ಷೀಯ ಮಾಮೃತಾತ್‌||



||ಮೃತ್ಯುಂಜಯ ಮಂತ್ರದಲ್ಲಿ ಬರುವ 'ಉರ್ವಾರು' (ಸೌತೆಕಾಯಿಯ) ಸಂಭಂದ ಹೇಗೆ ಎಂಬುದನ್ನು ತಿಳಿಯೋಣ.||
ಓಂ = ಪ್ರಣವ
ತ್ರಯಂಬಕಂ ಮೂರು ಕಣ್ಣಿನ ಪರಮೇಶ್ವರನೇ...
ಯಜಾಮಹೇ = ಪೂಜನೀಯನೇ....
ಸುಗಂಧಿಂ = ಸುಗಂಧದಿಂದ ಕೂಡಿದ,
ಪುಷ್ಟಿ ವರ್ಧನಂ = ಇಷ್ಟ ಕಾಮ್ಯ, ಆರೋಗ್ಯವು ವೃದ್ಧಿಯಾಗಲಿ
(
ಊರ್ವಾರುಕಮಿವ ಬಂಧನಾತ್ ಹೇಗೆ ಸೌತೆಕಾಯಿಯ ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ ಆ ರೀತಿಯಲ್ಲಿ.....
ಮೃತ್ಯೋಮೃಕ್ಷೀ = ಅಂತಹ ಮೃತ್ಯುವಿನಿಂದ, ಮುಕ್ತಿ ದೊರೆಯಲಿ.
ಮಾಮೃತಾತ್ ಅಮೃತತ್ವವನ್ನು ಪಡಯುವಂತಾಗಲಿ.

ಇಲ್ಲಿ "ಊರ್ವಾರು ಕಮಿಕ ಬಂಧನದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರಣೆಯ ಅಗತ್ಯವಿದೆ. ಆ ಅದ್ಭುತ ವಿವರಣೆಯನ್ನು ನೋಡೋಣ.

ಪರಶಿವನೇ......
ಈ ಜಗತ್ತಿನೊಂದಿಗೆ ನಮ್ಮ ಬಂಧನವು ಹೇಗಿರಬೇಕು ಎಂದರೆ, ಸೌತೆಕಾಯಿಯು ತನ್ನ ಬಳ್ಳಿಯೊಂದಿಗೆ ಎಷ್ಟು ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ, ಅದೇ ರೀತಿಯಲ್ಲಿ ಈ ಲೌಕಿಕ ಜಗತ್ತಿನೊಂದಿಗಿನ ನಮ್ಮ ಬಂಧನವು ಸಾಕು ಎಂಬ ಅರ್ಥ ಅಧ್ಬುತ.

|
ಅದು ಹೇಗೆಂಬುದನ್ನು ನೋಡೋಣ |

ನಾವು ಇಲ್ಲಿ ಗಮನಿಸಬೇಕಾದದ್ದು, ಗಿಡದ ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳಿಗೂ ಮತ್ತು ಅದೇರೀತಿ ಬಳ್ಳಿಯಿಂದ ಬೆಳೆಯುವ ಸೌತೆಕಾಯಿಗೂ ಕಾಣುವ ವ್ಯತ್ಯಾಸ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದಾಗ......!


1. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸುವಾಗ, ಕಾಯಿಯ ಜೊತೆ ಬಳ್ಳಿಯ ತೊಟ್ಟು ಅಂಟಿಕೊಂಡು ಬರುವುದಿಲ್ಲ, ಅದು ಗಿಡದ ಬಳ್ಳಿಯೊಂದಿಗೆ ಗಿಡದಲ್ಲೇ ಉಳಿಯುತ್ತದೆ.


2. ಆದರೆ, ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳು ಬಳ್ಳಿಯ ತೊಟ್ಟು ಕಾಯಿಯೊಂದಿಗೆ ಗಟ್ಟಿಯಾಗಿ ಅಂಟಿಕೊಂಡಿವುದನ್ನು ನಾವು ಗಮನಿದ್ದೇವೆ.


3.
ಗಿಡದ ಬಳ್ಳಿಯಿಂದ ಉತ್ಪತ್ತಿಯಾದ ತರಕಾರಿಗಳನ್ನು ಮಾರುಕಟ್ಟೆಯಿಂದ ತರುವಾಗ ಕುಂಬಳಕಾಯಿ, ಹೀರೇಕಾಯಿ, ಸೋರೇಕಾಯಿ ಮುಂತಾದವುಗಳು ತೊಟ್ಟಿನ ಸಮೇತ ಕೊಳ್ಳುತ್ತೇವೆ. ಆದರೆ ತೊಟ್ಟಿನೊಂದಿಗೆ ಇರುವ ಸೌತೆಕಾಯಿ ಮಾರುಕಟ್ಟೆಯಲ್ಲಿ ದೊರೆಯುವುದು ಅತಿ ವಿರಳ..!
ಕಾರಣ....! ಸೌತೆಕಾಯಿ ಮತ್ತು ಅದರ ಗಿಡದ ಬಳ್ಳಿಯ ಸಂಭಂದ ಬಹಳ ಸೂಕ್ಷ್ಮ. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸು ಸಮಯದಲ್ಲಿ, ಕಾಯಿಯೊಂದಿಗೆ ಅಂಟಿಕೊಂಡಿದ್ದ ಅದರ ತೊಟ್ಟು ಬಳ್ಳಿಯಲ್ಲೇ ಉಳಿಯುತ್ತದೆ ಎನ್ನುವ ಅಧ್ಬುತವಾದ ವಿವರಣೆ.


ಅದೇ ರೀತಿಯಲ್ಲಿ ಲೌಕಿಕ ಜಗತ್ತಿನ ನಮ್ಮ ಬಂಧನಗಳು ಇರಬೇಕು ಎಂಬ ಸಂದೇಶ.

ಮೃತ್ಯುಂಜಯ ಮಂತ್ರವನ್ನು ಪ್ರತಿದಿನವೂ ಹೇಳುವುದು ಮೃತ್ಯುವನ್ನು ಜಯಿಸುವ ಕಾರಣಕ್ಕಾಗಿ ಅಲ್ಲ. ಮೃತ್ಯುವು ಸುಲಭವಾಗಿ, ರೋಗ ರುಜಿನಗಳಿಲ್ಲದೆ ಅನಾಯಾಸವಾಗಿ ಬರಲಿ ಎಂಬ ಅರ್ಥ.


ಇದನ್ನೇ ಗುರು ದ್ರೋಣಾಚಾರ್ಯರೂ ಸಹಾ....
"ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ, ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಲಂ ಎಂದು ತಿಳಿಸಿದ್ದು.


ಮಾನವರಾಗಿ ಜನಿಸಿದ ನಾವು ಈ ಲೌಕಿಕ ಜಗತ್ತಿನೊಂದಿಗೆ ಅತಿ ಸೂಕ್ಷ್ಮವಾದ, ಕನ ಮೋಹದ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು. ಅತಿಯಾದ ಗಟ್ಟಿ ಬಂಧನಗಳಿಗೆ ಅಂಟಿಕೊಂಡಾಗ, ಅನಭವಿಸುವ ನೋವೇ ಹೆಚ್ಚು,

 

                                                                   another Picture


The less attached YOU are, the more peaceful YOU are.


ಎನ್ನುವುದನ್ನು ಸರಳವಾಗಿ ವಿವರಿಸಲಾಗಿದೆ.

"
ಹರ ಹರ ಮಹಾದೇವ, ಶಂಭೋ ಶಂಕರ

ಧರ್ಮೋ ರಕ್ಷತಿ ರಕ್ಷಿತಃ


------------ Hari Om -----------

                                                   

Wednesday, November 3, 2021

Deepavali Day – Water storing & Bathing Festival

 


                              Festival of Lights



Deepavali Day – Water storing & Bathing 

Festival


ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು


1) ಹಂಡೆತುಂಬಿ ಕಾಯಿಸಿ ಸ್ನಾನ ಮಾಡುವ ಅನುಕೂಲ ಇದ್ದವರು ಅದನ್ನು ತಿಕ್ಕಿ ತೊಳೆದು ಅಲಂಕರಿಸಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗ ತುಂಬಿ ಇಡಿ.

2)
ಅನಂತರ ಬಾವಿ ಇದ್ದವರು ತಮ್ಮ ಮನೆಯ ಸಂಪ್ರದಾಯದಂತೆ ನೀರು ಸೇದಿ ತಂದು ಒಂದು ಕಲಶದಲ್ಲಿ ದೇವರ ಕೊಣೆಯೊಳಗೋ ಹೊರಗೋ ಶುದ್ಧವಾದ ಜಾಗದಲ್ಲೋ ಇಡಿ

3)
ತಂಡುಲಾಕ್ಷತೆ, ಹೂವು, ಹಣ್ಣು , ಗಂಧ, ಅರಸಿಣ ಪುಡಿ, ಕುಂಕುಮ ಇತ್ಯಾದಿ ಸಿದ್ಧಪಡಿಸಿ.

4)
ಮಂತ್ರಾಕ್ಷತೆ , ಹೂವು ಕೈಯಲ್ಲಿ ಹಿಡಿದು ನೀರು ತುಂಬಿದ ಕಲಶದಲ್ಲಿ ತನ್ನ ಅಂಗುಷ್ಟದಿಂದ ಗಂಗೆಗೆ ಜನ್ಮವಿತ್ತ ರಮಾಪತಿ ತ್ರಿವಿಕ್ರಮನನ್ನು ಅವಾಹಿಸಿ.


ಮಮ ಗುರ್ವಂತರ್ಗತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಗಂಗಾಜನಕಂ ರಮಾಸಹಿತ ತ್ರಿವಿಕ್ರಮಂ ಆವಾಹಯಾಮಿ. ಪ್ರಸೀದ ಪ್ರಸೀದ ಭಗವನ್ ಆಗಚ್ಛ ಆಗಚ್ಛ ಎಂದು ಕಲಶದಲ್ಲಿ ಹೂವು ಅಕ್ಷತೆ ಹಾಕಿ.


ನಂತರ ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಸ್ನಾನ, ವಸ್ತ್ರ, ಯಜ್ನೋಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ, ಮಂಗಲಾರತಿ, ಮಂತ್ರಪುಷ್ಪ, ನಮಸ್ಕಾರ ಅರ್ಪಿಸಿ.

5)
ನಂತರ ಅಕ್ಷತೆ ಹೂವು ಕೈಯಲ್ಲಿ ಹಿಡಿದುಕೊಂಡು ಕಲಶದಲ್ಲಿ ಗಂಗಾದೇವಿಯನ್ನು ಅವಾಹಿಸಿ
ಗಂಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತೀ|
ನರ್ಮದೇ ಸಿಂಧು ಕಾವೇರೀ ಜಲೇ$ಸ್ಮಿನ್ ಸನ್ನಿಧಿಮ್ ಕುರು||
ಕಲಶಮಧ್ಯೆ ತ್ರಿವಿಕ್ರಮ ರೂಪಿಣಃ ಪುತ್ರಿಮ್ ಗಂಗಾಂ ಆವಾಹಯಾಮಿ
ಎಂದು ಅಕ್ಷತೆ ಹೂವು ಹಾಕಿ ಮುಂದಿನ ಮಂತ್ರಗಳಿಂದಲೂ ಕಲಶದಲ್ಲಿ ಅಕ್ಷತೆ ಹಾಕಿ
ಭೂ: ಗಂಗಾಂ ಆವಾಹಯಾಮಿ, ಭುವಃ ಗಂಗಾಂ ಆವಾಹಯಾಮಿ, ಸ್ವ: ಗಂಗಾಂ ಆವಾಹಯಾಮಿ, ಭೂರ್ಭುವಸ್ವ: ಗಂಗಾಂ ಆವಾಹಯಾಮಿ.

ಆ ನಂತರ ಮೇಲೆ ಹೇಳಿದಂತೆ ಅಸನದಿಂದ ವಸ್ತ್ರವನ್ನು ಅರ್ಪಿಸಿ ಹರಿದ್ರಾ, ಕುಂಕುಮ, ಗಂಧ , ಪುಷ್ಪ ಅರ್ಪಿಸಿ

6)
ಈ ಕೆಳಗಿನ ನಾಮಗಳಿಂದ ಅಕ್ಷತೆ ಹಾಕಿ


ನಂದಿನ್ಯೈ ನಮಃ, ನಲಿನ್ಯೆ ನಮಃ, ಸೀತಾಯೈ ನಮಃ , ಮಾಲತ್ಯೈ ನಮಃ , ಮಲಾಪಹಾಯೈ ನಮಃ, ವಿಷ್ಣುಪಾದಾಬ್ಜ ಸಂಭೂತಾಯೈ ನಮಃ, ಗಂಗಾಯೈ ನಮಃ, ತ್ರಿಪಥಗಾಮಿನ್ಯೈ ನಮಃ , ಭಾಗೀರಥ್ಯೈ ನಮಃ, ಭೋಗವತ್ಯೈ ನಮಃ, ಜಾಹ್ನವ್ಯೈ ನಮಃ, ತ್ರಿದಶೇಶ್ವರ್ಯೈ ನಮಃ, ಗಂಗಾಭಾಗೀರಥ್ಯೆ ನಮಃ

7)
ಧೂಪವನ್ನು ತೋರಿಸಿ


ವನಸ್ಪತ್ಯುದ್ಭವೋ ದಿವ್ಯೋ ಗಂಧಾಢ್ಯೋ ಗಂಧ ಉತ್ತಮಃ |
ಆಘ್ರೇಯಃ ಸರ್ವದೇವಾನಾ೦ ಧೂಪೋ$ಯಂ ಪ್ರತಿಗೃಹ್ಯತಾಮ್ ||

8)
ಸಾಜ್ಯ೦ ತ್ರಿವರ್ತಿಸಂಯುಕ್ತ೦ ವಹ್ನಿನಾ ದ್ಯೋತಿತಂ ಮಯಾ|
ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ||
ಎನ್ನುತ್ತಾ ಮೂರು ಬತ್ತಿಯ ಆರತಿ ತೋರಿಸಿ ನಂದಿಸಿ



9)
ಹಣ್ಣು ಕಾಯಿ ಮತ್ತು ಅನುಕೂಲ ಇದ್ದಲ್ಲಿ ಇತರ ನೈವೇದ್ಯಗಳನ್ನು ಮೊದಲು ತ್ರಿವಿಕ್ರಮ ದೇವರಿಗೆ ಅರ್ಪಿಸಿ ಅನಂತರ ರಮಾದೇವಿ , ಮುಖ್ಯಪ್ರಾಣ ದೇವರಿಗೆ ಅರ್ಪಿಸಿ. ಇದರೊಳಗಿಂದ ಸ್ವಲ್ಪ ಬೇರೊಂದು ತಟ್ಟೆಯಲ್ಲಿ ಬಡಿಸಿ ಭಾಗೀರಥಿ ದೇವಿಗೆ ಅದನ್ನು ನಿವೇದಿಸಿ.



10)
ತದನಂತರ ಕರ್ಪೂರ ಹಾಕಿ ಮಹಾಮಂಗಳಾರತಿ ಮೊದಲು ತ್ರಿವಿಕ್ರಮ ದೇವರು ನಂತರ ರಮಾದೇವಿ ಪ್ರಾಣದೇವರಿಗೆ ತೋರಿಸಿ ಭಾಗೀರಥಿಗೆ ತೋರಿಸಿ. 



11)
ನಾರಾಯಣಾಯ ವಿದ್ಮಹೇ ವಾಸುದೇವಾಯ ದೀಮಹಿ ತನ್ನೋ ವಿಷ್ಣು: ಪ್ರಚೋದಯಾತ್
ಎನ್ನುತ್ತಾ ತ್ರಿವಿಕ್ರಮ ದೇವರಿಗೆ ಮಂತ್ರಪುಷ್ಪಾ೦ಜಲಿ ಅರ್ಪಿಸಿ. 



12)
ಭಾಗೀರಥೀ ದೇವಿಯನ್ನು ಪ್ರಾರ್ಥಿಸಿ


ಹೇ ಗಂಗೇ! ತವ ಕೋಮಲಾಂಘ್ರಿ ನಲಿನಂ ರಂಭೋರು ನೀವಿಲಸತ್
ಕಾಂಚೀದಾಮ ತನೂದರಂ ಘನಕುಚ ವ್ಯಾಕೀರ್ಣಹಾರಂ ವಪು: |
ಸನ್ಮುದ್ರಾ೦ಗದ ಕಂಕಣಾವೃತಕರ೦ ಸ್ಮೇರಂ ಸ್ಫುರತ್ಕುಂಡಲಂ
ಸಾರಂಗಾಕ್ಷಿ ಜಲಾನ್ಯದಿಂದುರುಚಯೇ ಜಾನಂತಿ ತೇ$ನ್ಯೇ ಜಲಾತ್ |
ಪ್ರಾರ್ಥನಾಂ ಸಮರ್ಪಯಾಮಿ ಎನ್ನುತ್ತ ಅಕ್ಷತೆ ಹಾಕಿ ನಮಸ್ಕರಿಸಿ.

13)
ತದನಂತರ ಯಸ್ಯ ಸ್ಮೃತ್ಯಾ ಶ್ಲೋಕ ಹೇಳಿ


ಅನೇನ ಅಸ್ಮದ್ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಗಂಗಾಜನಕ ಶ್ರೀರಮಾತ್ರಿವಿಕ್ರಮ ರೂಪಿ ಶ್ರೀಲಕ್ಷ್ಮೀನಾರಾಯಣ: ಪ್ರೀಯತಾಂ ಪ್ರೀತೋ ಭಾವತು ತತ್ ಸರ್ವಂ ಶ್ರೀಕೃಷ್ಣಾರ್ಪಣಾಮಸ್ತು ಎಂದು ಅರ್ಪಿಸಿ.



14)
ಈಗ ಆ ಕಲಶದ ನೀರನ್ನು ಗಂಟೆ, ಜಾಗಟೆ, ಶಂಖಾದಿ ವಾದ್ಯ ಪುರಸ್ಸರ ತುಂಬಿಟ್ಟ ಹಂಡೆಯಲ್ಲಿ ಹಾಕಿ



15)
ಸೂರ್ಯಾಸ್ತದ ನಂತರ ಇಂದಿನಿಂದ ಆಕಾಶದೀಪವನ್ನು ಹಚ್ಚಬೇಕು.


ಒಬ್ಬ ಮನುಷ್ಯನ ಎತ್ತರದಷ್ಟು ಒಂದು ಕೋಲನ್ನು ಅಂಗಳದಲ್ಲಿ ನೆಟ್ಟು (ಬಿದಿರಿನ ಕೋಲು ಉಪಯೋಗಿಸಬಾರದು) ಆ ಕೋಲಿನ ತುದಿಯಲ್ಲಿ ಅಷ್ಟದಲ ಕಮಲಾಕಾರದಲ್ಲಿ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನೂ ಮಧ್ಯೆ ಒಂದು ದೊಡ್ಡ ದೀಪವನ್ನೂ ಹಚ್ಚಬೇಕು. ಎಳ್ಳೆಣ್ಣೆ ಬಿಟ್ಟು ಬೇರೆ ಎಣ್ಣೆ ಉಪಯೋಗಿಸಬಾರದು.
ಇದನ್ನು ಒಂದು ತಿಂಗಳು ಹಚ್ಚಬೇಕು.



16)
ಹಾಗೆಯೇ ಮನೆಯ ಹೊರಗೆ ಎತ್ತರದಲ್ಲಿ ಯಮದೇವರಿಗೆ ಕೂಡಾ ಇಂದು ಒಂದು ದೀಪ ಹಚ್ಚಬೇಕು.


---------- Happy Deepavali -----------