ರಾಮ -- Rama && ರಾಮ ನಾಮ ಸ್ಮರಣೆ
Power of Rama Nama Reciting
ರಾಮ
ಎನ್ನುವ ಹೆಸರು ಧಾರ್ಮಿಕವಾಗಿ
ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.
“ರಾಮ”
ಕೇವಲ ಎರಡಕ್ಷರದ ಪದವಲ್ಲ.ಅಲೌಕಿಕ
ಸಂತೋಷ,ಶಾಂತಿ,ಜೀವನ
ಹಾಗೂ ಧರ್ಮ ಇವು “ರಾಮ” ಶಬ್ದಕ್ಕಿರುವ
ಅರ್ಥಗಳು. ”ಓಂ
ನಮೋ ನಾರಾಯಣಾಯ” ಎಂಬ ನಾರಾಯಣ
ಮಂತ್ರದಲ್ಲಿರುವ “ರಾ” ಹಾಗೂ ”ಓಂ
ನ”ಮ:” ಶಿವಾಯ
ಎಂಬ ಪಂಚಾಕ್ಷರಿ ಮಂತ್ರದ “ಮ”
ಅಕ್ಷರಗಳಿಂದ “ರಾಮ” ಶಬ್ದ
ವ್ಯುತ್ಪನ್ನಗೊಂಡಿದೆ.ಹಾಗಾಗಿ
“ರಾಮ” ಎಂಬುದು ನಾರಾಯಣ ಹಾಗೂ
ಈಶ್ವರರ ಸ್ವರೂಪ.ಹಾಗಾಗಿ
“ರಾಮ” ಎಂಬುದು ದಿವ್ಯಮಂತ್ರ.ವೇದಗಳ
ಜ್ಞಾನವಿಲ್ಲದೆಯೂ ಮೋಕ್ಷವನ್ನು
ತೋರಿಸುವ ಮಾರ್ಗ.ರಾಮನಾಮ
ಜಪಿಸುವವನಿಗೆ ಸರ್ವದುಃಖಗಳಿಂದ
ವಿಮೋಚನೆ.
ಹಿಂದಿನಕಾಲದಲ್ಲಿ
ಪರಸ್ಪರರು ಭೇಟಿಯಾದಾಗ “ರಾಮ್
ರಾಮ್” ಎನ್ನುವ ಪದ್ಧತಿಯಿತ್ತು.”ರಾಮ”
ಶಬ್ದವನ್ನು ಬಿಡಿಸಿದಾಗ ಮೂರು
ಅಕ್ಷರಗಳು ಸಿಗುತ್ತವೆ.ರ್+ಆ+ಮ್..
“ರ” ವ್ಯಂಜನಗಳಲ್ಲಿ
ಇಪ್ಪತ್ತೇಳನೆಯದು. “ಆ”
ಸ್ವರಗಳಲ್ಲಿ ಎರಡನೆಯದು.
“ಮ್” ವ್ಯಂಜನಗಳಲ್ಲಿ
ಇಪ್ಪತ್ತೈದನೆಯದು.
ಇಪ್ಪತ್ತೇಳು+ಎರಡು+ಇಪ್ಪತ್ತೈದು
= ಐವತ್ತನಾಲ್ಕು.
”ರಾಮ್ ರಾಮ್”
ಎಂದರೆ ಐವತ್ತನಾಲ್ಕು +
ಐವತ್ತನಾಲ್ಕು
= ನೂರಾಎಂಟು.
ನೂರಾಎಂಟು
ನಮಗೆ ಪವಿತ್ರ ಸಂಖ್ಯೆ.ಜಪಮಾಲೆಯಲ್ಲಿರುವ
ಮಣಿಗಳ ಸಂಖ್ಯೆ.ಜಪಮಾಲೆಯನ್ನು
ಹಿಡಿದು ನೂರಾಎಂಟು ಬಾರಿ ಜಪ
ಮಾಡಬೇಕಿಂದಿಲ್ಲ.
”ರಾಮ ರಾಮ” ಎಂದರೆ ಸಾಕು, ಒಂದು ಮಾಲೆ ಜಪವನ್ನು ಮಾಡಿದ ಫಲ ಸಿಗುತ್ತದೆ..!!
“ಏಹಿ ಮಹಂ ರಘುಪತಿ ನಾಮ ಉದಾರಾ ಅತಿಪಾವನ ಪುರಾನ ಶ್ರುತಿ ಸಾರಾ | ಮಂಗಲ ಭವನ ಅಮಂಗಲ ಹಾರೀ ಉಮಾ ಸಹಿತ ಜೇಹಿ ಜಪತ ಪುರಾರೀ ||
“ರಾಮ”
ಎಂಬುದು ರಘುಪತಿಯ ಉದಾರನಾಮ.ಅದು
ಅತ್ಯಂತ ಪವಿತ್ರ ಹೆಸರು.ವೇದ-ಪುರಾಣಗಳ
ಸಾರ.ಸಕಲ
ಕಲ್ಯಾಣಗಳ ಭವನ.ಅಮಂಗಲಗಳ
ಹರಣ.ಈ
ರಾಮನಾಮವನ್ನು ಪಾರ್ವತಿ ಸಹಿತ
ಪರಮೇಶ್ವರ ಸದಾ ಜಪಿಸುತ್ತಿರುತ್ತಾನೆ.
“ರಾಮ”ವೆಂಬ
ಪವಿತ್ರನಾಮ ಸದಾ ನಮ್ಮ
ಮನದಲ್ಲಿರಲಿ.ಶ್ರೀರಾಮನ
ಅನುಗ್ರಹ ಸದಾ ನಮಗಿರಲಿ.
"ರಾಮ
ನಾಮ"
ಜಪಿಸಿದರೆ
ಈ ಅಚ್ಚರಿಯ ಬದಲಾವಣೆಗಳು ನಿಮ್ಮಲ್ಲಿ
ಉಂಟಾಗುವುದು.
"ರಾ"
ಮತ್ತು "ಮ"
ಎನ್ನುವ ಎರಡು
ವಿಭಿನ್ನ ಅಕ್ಷರವನ್ನು ಒಟ್ಟಿಗೆ
ಸೇರಿಸಿದಾದ ದೈವ ಪ್ರಜ್ಞೆಯ
ಅರ್ಥವನ್ನು ನೀಡುತ್ತದೆ.
ರಾಮ ಎನ್ನುವ
ಎರಡಕ್ಷರವು ವಿಷ್ಣುವಿನ ಏಳನೇ
ಅವತಾರದ ರೂಪ. ಜಗತ್ಪಾಲಕನ
ಈ ಹೆಸರನ್ನು ಜಪಿಸಿದರೆ ಮನಸ್ಸು
ಮತ್ತು ಹೃದಯ ಅಸಾಧಾರಣ ಸಂತೋಷಕ್ಕೆ
ಒಳಗಾಗುವುದು.
ಜೊತೆಗೆ
ಸಾಕಷ್ಟು ಪಾಪಗಳು ತೊಳೆದು ಪುಣ್ಯ
ಪ್ರಾಪ್ತಿಯಾಗುವುದು.
ಅರಿಯದೆ ಮಾಡಿದ
ತಪ್ಪುಗಳು ನಮ್ಮಿಂದ ದೂರವಾಗುತ್ತವೆ.
ರಾಮ ಎನ್ನುವ
ಹೆಸರು ಧಾರ್ಮಿಕವಾಗಿ ಸಾಕಷ್ಟು
ಮಹತ್ವವನ್ನು ಪಡೆದುಕೊಂಡಿದೆ.
ಹಾಗಾಗಿ ರಾಮ
ನಾಮವನ್ನು ಜಪಿಸಿದರೆ ಏನೆಲ್ಲಾ
ಪ್ರಯೋಜನಗಳಿವೆ ಎನ್ನುವುದನ್ನು
ವಿವರಿಸಲಾಗಿದೆ.
"ರಾಮ ನಾಮ" ಸ್ಮರಣೆ:
ದಶರಥ
ಮತ್ತು ಕೌಸಲ್ಯೆಯ ಮಗನಾಗಿ ಜನಿಸಿದ
ಸರ್ವೋಚ್ಚ ಮನೋಭಾವದ ಮಾನವನ
ಅವತಾರವೇ "ಶ್ರೀರಾಮ"ನ
ಅವತಾರ. ಪ್ರಕೃತಿಯಲ್ಲಿ
ಎಲ್ಲೆಡೆ ರಾಮನು ಇರುತ್ತಾನೆ.
ಆದರೆ ಅವನನ್ನು
ನಾವು ತೆರೆದ ಕಣ್ಣಿನಿಂದ ನೋಡಲು
ಸಾಧ್ಯವಿಲ್ಲ. ಆದರೆ
ಆಂತರಿಕ ಕಣ್ಣುಗಳಿಂದ ರಾಮನನ್ನು
ಕಾಣಬಹುದು.
ಆತ್ಮ
ಶುದ್ಧಿಯಿಂದ ರಾಮನನ್ನು ಕಂಡರೆ
ಜನ್ಮವು ಪಾವನವಾಗುವುದು.
ನಿಸ್ವಾರ್ಥ
ಭಾವನೆಯಿಂದ ರಾಮನ ನಾಮ ಸ್ಮರಣೆ
ಮಾಡಿದರೆ ಜೀವನವು ಬೆಳಗುವುದು.
ಅಜ್ಞಾನ ಹಾಗೂ
ಅತಿ ಆಸೆಯಿಂದ ಕೂಡಿದ ನಮ್ಮ ಕತ್ತಲ
ಬದುಕಿಗೆ ಶ್ರೀ ರಾಮನು ಜ್ಞಾನ
ಹಾಗೂ ಅರಿವಿನ ಬೆಳಕು ಚೆಲ್ಲುವುದರ
ಮೂಲಕ ಬದುಕನ್ನು ಬೆಳಗುವನು.
ಮಹಾನ್
ದೈವ ಪುರುಷ "ಶ್ರೀರಾಮ":
ಮಾನವನ
ಅವತಾರವನ್ನು ತಾಳಿ, ಮನುಕುಲದ
ನಡುವೆಯೇ ಇದ್ದು, ಕಷ್ಟ
ಕಾರ್ಪಣ್ಯಗಳನ್ನು ಅನುಭವಿಸಿದ
ದೇವ ರೂಪ "ರಾಮ".
ತನ್ನ ನಿಷ್ಕಲ್ಮಶವಾದ
ಮನಸ್ಸಿನಿಂದ ಪಾಲಕರನ್ನು ಹಾಗೂ
ಸಮಾಜವನ್ನು ಗೌರವಿಸಿದನು.
ತನ್ನ ಪ್ರಜೆಗಳಿಗೆ
ಸದಾ ಸಂತೋಷದ ಜೀವನವನ್ನು
ಕರುಣಿಸಿದನು.
ದುಷ್ಟ
ರಾವಣನನ್ನು ಸೋಲಿಸಿ, ಇತರರಿಗೆ
ಕೆಟ್ಟದನ್ನು ಮಾಡಿದರೆ ಜೀವನದಲ್ಲಿ
ಕೆಟ್ಟದ್ದೇ ಸಂಭವಿಸುವುದು
ಎನ್ನುವುದನ್ನು ತೋರಿಸಿಕೊಟ್ಟ
ಮಹಾನ್ ದೈವ ಪುರುಷ ಶ್ರೀರಾಮ.
ಶ್ರೀರಾಮನ
ನಾಮ ಸ್ಮರಣೆಯನ್ನು ಮಾಡಿದರೆ
ಮನುಕುಲದ ಜೀವನವು ಹಸನಾಗುವುದು.
ರಾಮನಲ್ಲಿ
ಭಕ್ತಿ ಹಾಗೂ ನಂಬಿಕೆಯಿಟ್ಟು
ನಡೆದರೆ ಜೀವನವು ಸದಾ ಸಂತೃಪ್ತಿಯಿಂದ
ಕೂಡಿರುವುದು.
"ರಾಮನು"
ಸರ್ವಶಕ್ತನು:
ಭಗವಾನ್
ಶ್ರೀರಾಮನು ಸರ್ವಾಂತರ್ಯಾಮಿ.
ಅವನಿಗೆ ಅನೇಕ
ಹೆಸರುಗಳಿಂದ ಕರೆಯಲಾಗುವುದು.
ರಾಮನ ಹೆಸರುಗಳು
ಬ್ರಹ್ಮಾಂಡದಲ್ಲಿ ಅತ್ಯಂತ ಬಲವಾದ
ಮತ್ತು ಸಕಾರಾತ್ಮಕ ಕಂಪನಗಳಿಂದ
ಕೂಡಿದೆ. ರಾಮನ
ನಾಮಗಳನ್ನು ಜಪಿಸಿದರೆ ನಮ್ಮಲ್ಲಿಯೂ
ಸಕಾರಾತ್ಮಕ ಬದಲಾವಣೆಗಳು ಆಂತರಿಕವಾಗಿ
ಉಂಟಾಗುತ್ತವೆ.
ಜೊತೆಗೆ
ಮಾನಸಿಕವಾಗಿ ನಿರಾಳತೆ ಹಾಗೂ
ನೆಮ್ಮದಿ ದೊರೆಯುವುದು.
ರಾಮ ನಾಮದ
ಧ್ಯಾನ ಮಾಡಿದರೆ ವ್ಯಕ್ತಿಯು
ಜೀವನದಲ್ಲಿ ಸರ್ವೋಚ್ಚ ಮನೋಭಾವವನ್ನು
ಪಡೆದುಕೊಳ್ಳುವನು. ಮನುಷ್ಯನಲ್ಲಿ
ಸಾಮಾನ್ಯವಾಗಿ ಕೋಪ, ದ್ವೇಷ,
ಸಿಟ್ಟು ಹಾಗೂ
ವಿನಾಶದ ಪ್ರವೃತ್ತಿ ಇರುತ್ತದೆ.
ಇವನ ಈ ಕೆಟ್ಟ
ಗುಣಗಳೆ ಬಹುತೇಕ ಸಂದರ್ಭದಲ್ಲಿ
ದಾರಿ ತಪ್ಪುವಂತೆ ಪ್ರೇರೇಪಿಸುತ್ತವೆ.
ಹಾಗಾಗಿ
ಮನುಷ್ಯ ಮೊದಲು ತನ್ನ ಭಾವನೆ ಹಾಗೂ
ಸಂವೇದನೆಗಳ ಮೇಲೆ ಹತೋಟಿಯನ್ನು
ಹೊಂದಬೇಕು. ಆಗಲೇ
ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ.
ರಾಮನ ನಾಮ
ಜಪಿಸಿದರೆ ವ್ಯಕ್ತಿ ತನ್ನಲ್ಲಿರುವ
ಕೆಟ್ಟ ಹಾಗೂ ವಿನಾಶಕಾರಿ ಶಕ್ತಿಯಿಂದ
ಮುಕ್ತನಾಗಿ, ತನ್ನಲ್ಲಿ
ರಚನಾತ್ಮಕ ಶಕ್ತಿಯ ಹರಿವನ್ನು
ಪಡೆದುಕೊಳ್ಳುವನು.
ನಿತ್ಯವೂ
ರಾಮ ನಾಮ ಜಪ ಮಾಡಿದರೆ ವ್ಯಕ್ತಿ
ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು
ಪಡೆದುಕೊಳ್ಳುವನು. ಅಲ್ಲದೆ
ಆತಂಕ, ಖಿನ್ನತೆಯಂತಹ
ಮಾನಸಿಕ ಕಾಯಿಲೆಗಳು ದೂರವಾಗುತ್ತವೆ.
ರಾಮನ ನಾಮವು
ದೇಹದಲ್ಲಿ ಗಮನಾರ್ಹ ಕಂಪನ
ಉಂಟಾಗುವುದು. ಇದು
ನಿದ್ರೆಯ ನರ ಕೋಶಗಳನ್ನು
ಪ್ರಚೋದಿಸುವುದು.
ಉಪ
ಪ್ರಜ್ಞೆಯ ಮನಸ್ಸಿನ ಭಾಗವನ್ನು
ಆಹ್ವಾನಿಸುತ್ತದೆ. ನಿರ್ಧಾರ
ತೆಗೆದುಕೊಳ್ಳುವ ಸಾಮರ್ಥ್ಯವನ್ನು
ಸುಧಾರಿಸುವುದು. ಜೊತೆಗೆ
ಹೆಚ್ಚು ಸೃಜನಶೀಲರಾಗಿ ಹಾಗೂ
ಕಾರ್ಯ ಪ್ರವೃತ್ತರಾಗಿ ಇರಲು
ಸಹಾಯ ಮಾಡುವುದು.
Lord Anjaneya
"ಹನುಮಂತನು" ಅಪಾರ ಶಕ್ತಿಯನ್ನು ಪಡೆದನು:
ಹನುಮಂತನು
"ಶ್ರೀ
ರಾಮನ" ಪರಮ
ಭಕ್ತ. ಪುರಾಣ
ಇತಿಹಾಸದಲ್ಲಿ ಹನುಮಂತನಿಗೆ
ಸಂಬಂಧಿಸಿದಂತೆ ಅನೇಕ ಸಾಹಸ ಕಥೆಗಳು
ಇರುವುದನ್ನು ನಾವು ಕಾಣಬಹುದು.
ಹನುಮಂತನು
"ರಾಮ
ನಾಮ" ಜಪ
ಮಾಡುವುದರಿಂದ ಅನೇಕ ಶಕ್ತಿಯನ್ನು
ಪಡೆದುಕೊಳ್ಳುತ್ತಿದ್ದನು.
ದ್ರೋಣಗಿರಿ
ಪರ್ವತವನ್ನು ಹಿಮಾಲಯದಿಂದ ಲಂಕೆಗೆ
ಸ್ಥಳಾಂತರಿಸಲು ಸಹಾಯ ಮಾಡಿದ
ಶಕ್ತಿ "ರಾಮ"
ನಾಮದಿಂದ
ಪಡೆದುಕೊಂಡಿದ್ದನ್ನು ಎಂದು
ಹೇಳಲಾಗುವುದು. ಆತ್ಮ
ಮತ್ತು ಕರ್ಮಗಳ ಶುದ್ಧಿಗೆ "ರಾಮ
ನಾಮ" ಜಪವನ್ನು
ಮಾಡುವುದು ಸುಲಭ ಮಾರ್ಗ ಎನ್ನಲಾಗುವುದು.
------------------ Hari Om ----------------


No comments:
Post a Comment