Lord Rama & Sita Devi
ಶ್ರೀರಾಮ ರಾಮ ರಾಮೇತಿ ----- ಜೈ ಶ್ರೀ ರಾಮ
ಸಾವಿರ ನಾಮಕ್ಕೆ
ಬದಲಾಗಿ ಒಂದೇ ಹೆಸರು ಹೇಳಿದರೆ
ಸಾಕೆಂಬ ಮಂತ್ರವಿದ್ದರೆ ಹೇಳಿ
ಎನ್ನುತ್ತಾಳೆ ಪಾರ್ವತಿ.
"
ಜೈ ಶ್ರೀ
ರಾಮ"
Shiva Pooje by Lord Rama
ವಿಷ್ಣು ಸಹಸ್ರನಾಮದಲ್ಲೊಂದು ಪ್ರಸಂಗ:
ಕೈಲಾಸದಲ್ಲಿ
ಪಾರ್ವತಿ ಪೂಜಾ ನಿರತಳಾಗಿದ್ದಾಗ
ಈಶ್ವರ ಬರುತ್ತಾನೆ. ಗಂಡನನ್ನು
ಸ್ವಾಗತಿಸದ ಹೆಂಡತಿಯ ಬಗ್ಗೆ
ಸಿಟ್ಟು ಬರುತ್ತದೆ ಈಶ್ವರನಿಗೆ.
ಆದರೆ
ಹೆಂಡತಿಯೆದುರಿಗೆ ತೋರಿಸಿಕೊಳ್ಳುವಂತಿಲ್ಲ.
ಪೂಜೆ ಮುಗಿಸಿ
ಬಂದ ಪಾರ್ವತಿಯನ್ನು ಈಶ್ವರ ಏನು
ಮಾಡ್ತಿದ್ದೆ ಎಂದು ಜೋರಾಗಿ
ಕೇಳುತ್ತಾನೆ. ಶಾಂತವಾಗಿಯೇ
ಪಾರ್ವತಿ ಹೇಳುತ್ತಾಳೆ "
ವಿಷ್ಣು ಸಹಸ್ರ
ನಾಮ ಹೇಳುತ್ತಿದ್ದೆ"ಈಶ್ವರ
ನಕ್ಕು ಬಿಡುತ್ತಾನೆ.
ಸಹಸ್ರನಾಮದ
ಅಗತ್ಯವೇಯಿಲ್ಲ. ಒಂದೇ
ಹೆಸರಿಗೇಕೆ ಮತ್ತೆ ಸಾವಿರ ಹೆಸರು?
ಒಂದು ಹೆಸರೇ
ಸಾಕು.
ಪಾರ್ವತಿ ಕೇಳುತ್ತಾಳೆ:
"ಕೇನೋಪಾಯೇನ
ಲಘುನಾಂ ವಿಷ್ಣೋರ್ನಾಮ ಸಹಸ್ರಕಂ
ಪಠ್ಯತೇ
ಪಂಡಿತೈರ್ನಿತ್ಯಂ ಶ್ರೋತ್ರುಮಿಚ್ಯಾಮ್ಯಹಂ
ಪ್ರಭೋ"
ಸಾವಿರ
ನಾಮಕ್ಕೆ ಬದಲಾಗಿ ಒಂದೇ ಹೆಸರು
ಹೇಳಿದರೆ ಸಾಕೆಂಬ ಮಂತ್ರವಿದ್ದರೆ
ಹೇಳಿ ಎನ್ನುತ್ತಾಳೆ ಪಾರ್ವತಿ.
ಈಶ್ವರ
ಹೇಳುತ್ತಾನೆ:
"ಶ್ರೀರಾಮ
ರಾಮ ರಾಮೇತಿ ರಮೇ ರಾಮೇ ಮನೋರಮೇ.
ಸಹಸ್ರನಾಮ
ತತ್ತುಲ್ಯಂ ರಾಮನಾಮವರಾನನೇ"
"Shri Rama Rama Rameti Rame RAame Manorame. Sahasranama Tattulyam RamanamavaranaNe"
ಅಂದರೆ ಶ್ರೀರಾಮ ಎಂಬ ಒಂದೇ ಪದ ಸಹಸ್ರ ನಾಮಗಳಿಗೆ ಸಮ ಎನ್ನುತ್ತಾನೆ. ಇದನ್ನೇ ದಾಸಶ್ರೇಷ್ಟ ಪುರಂದರ ದಾಸರು ತಮ್ಮ ರಾಮಮಂತ್ರವ ಜಪಿಸೋ ಗೀತೆಯಲ್ಲಿ "ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ.. ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ" ಎಂದದ್ದು.
Sri Ramana Alankara
ಶೃಂಗಾರಂ
ಕ್ಷಿತಿ ನಂದಿನೀ ವಿಹರಣೇ ವೀರಂ
ಧನುರ್ಭಂಜನೇ.
ಕಾರುಣ್ಯಂ
ಬಲಿಬೋಜನೇದ್ಭುತರಸಂ ಸಿಂಧೌ
ಗಿರಿಸ್ಥಾಪನೇ.
ಹಾಸ್ಯಂ
ಶೂರ್ಪಣಕಾ ಮುಖೇ ಭಯಮಘೇ
ಭೀಭತ್ಸಮನ್ಯಾಮುಖೇ.
ರೌದ್ರಂ
ರಾವಣಭಂಜನೇ ಮುನಿಜನೇ ಶಾಂತಂ
ವಪುಃ ಪಾತು ನಃ
ಅಂತಹ
ಮರ್ಯಾದಪುರುಷೋತ್ತಮ,
ನವರಸಗಳ
ಮೂರ್ತರೂಪನಾದ ಶ್ರೀರಾಮಚಂದ್ರ
ಪ್ರಭು ನಮ್ಮನ್ನು,
ಭುವಿಯನ್ನಾವರಿಸಿರುವ
ಕಾರ್ಮೋಡಗಳಿಂದ ನಮ್ಮನ್ನು
ಕಾಪಾಡಲಿ.
--------------------- Hari Om -------------------



No comments:
Post a Comment