Monday, March 17, 2025

Sri Vadiraja Tirtharu

 



                        Sri Vadiraja Tirtharu

ತಪೋವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರಾನಹಮ್ |
ವಾದಿರಾಜ ಗುರೂನ್ ವಂದೆ ಹಯಗ್ರೀವ ಪದಾಶ್ರಯಾನ್ ||

ಪಂಚವೃಂದಾವನೋಪಾಸನ ಫಲ



17/03/2025 ತ್ರೈಲೋಕ್ಯಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ವಿಶೇಷ ಲೇಖನ ಮಹಿಮೆ..



ಶ್ರೀ ಗುರುರಾಜರ ಉಪಾಸನೆ ಮಾಡತಕ್ಕವರು ,ಧವಳಗಂಗೆಯಲ್ಲಿ ತ್ರಿಕಾಲ ಸ್ನಾನ ಶ್ರೀ ತ್ರಿವಿಕ್ರಮಾದಿ ದರ್ಶನ, ಬೃಂದಾವನ ಸೇವಾ ,ವಾದಿರಾಜ ಕವಚಾದಿ ಪಾರಾಯಣ. ಪುನಶ್ಚರಣಗಳನ್ನೇ ನಿತ್ಯವೂ. ಭಕ್ತಿಯಿಂದ ಆಚರಿಸುತ್ತಾರೆ. ಸಕಲಾರಿಷ್ಟ ನಿವಾರಕವೂ ಸಕಲಾಭೀಷ್ಟ ಸಾಧಕವು ಆಗಿರುವ ಶ್ರೀ ಬೃಂದಾವನದ ಮೃತ್ತಿಕಾ ಲೇಪನ- ತೀರ್ಥಪ್ರಾಶನ ಪ್ರಸಾದ ಸ್ವೀಕಾರ ಮಾಡಿ ಅನೇಕನೇಕ ಜನರು ಅಸಾಧ್ಯ ರೋಗಗಳಿಂದಲೂ ರಾಕ್ಷಸ ಪಿಶಾಚಾದಿ ಉಪಾಹತಿಗಳಿಂದಲೂ ಮುಕ್ತರಾಗಿದ್ದಾರೆ .ಎಷ್ಟೋ ಸೇವಕರು ಸ್ವಪ್ನದಲ್ಲಿ ತಮ್ಮ ಇಷ್ಟ ಸೂಚನೆಯಾಗುವಂತಹ. ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಎಷ್ಟೋ ಸಂತಾನಾಭಿಲಾಷಿಗಳು ,ಸಂತಾನವನ್ನು ಪಡೆದಿರುತ್ತಾರೆ. ಅಭಕ್ತರಾದವರು. ಸೇವೆಗೆಂದು ಬಂದು ಅನೇಕ ಅನರ್ಥಕ್ಕೆ. ಗುರಿಯಾದವರು. ಹಲವರಿರುತ್ತಾರೆ.



ಈ ಕ್ಷೇತ್ರದಲ್ಲಿ. ಸಾಕ್ಷಾತ್ ವಾದಿರಾಜರು.ಒಂದಂಶದಿಂದಿದ್ದು . ಭಕ್ತರನ್ನು. ಅನುಗ್ರಹಿಸುವುದು ಮಾತ್ರವಲ್ಲದೆ. ಎಲ್ಲೆಲ್ಲಿ ತಮ್ಮ ಭಕ್ತರು. ತಮ್ಮನ್ನು ನಂಬಿರುವವರೋ ಅಲ್ಲಲ್ಲಿ ಸನ್ನಿಹಿತರಾಗಿ. ಅವರ ಮನೋರಥ ಸಿದ್ದಿಯನ್ನು. ಸಾಧಿಸಿಕೊಡುತ್ತಾರೆ. ಶ್ರೀ ಭೂತರಾಜರು ಬೃಂದಾವನ ಸಮೀಪದಲ್ಲಿ ವಾಸ ಮಾಡುತ್ತಾ. ಭಕ್ತ ಜನರಿಗೆ ಇಷ್ಟಾರ್ಥವನ್ನು ಕೊಡುವುದು ಮಾತ್ರವಲ್ಲದೆ. ನಂಬಿದವರ ಬಳಿಯಲ್ಲಿಯೂ. ಸಂಹಿತರಾಗಿ ಅವರ ಕಾಮಿತಗಳನ್ನು. ದಯಪಾಲಿಸುತ್ತಾರೆಂಬುದು ಈಗಲೂ ಪ್ರತ್ಯಕ್ಷ ಸಿದ್ಧವಾಗಿದೆ. ಈಗಲೂ ಈ ಮಹನೀಯರ. ಪೀಠಾದಿರೂಢರು ,ನಂಬಿದ ಅನೇಕ ಭಕ್ತರು.



ಶ್ರೀ ವಾದಿರಾಜ ಗುರುವರ ಮತ್ತು ಶ್ರೀ ಭೂತರಾಜರ. ಅನುಗ್ರಹದಿಂದ. ಶ್ರೀ ವೃಂದಾವನದ ಮೃತ್ತಿಕಾಮಾತ್ರವನ್ನು ಕೊಡುತ್ತಲೂ . ಅಥವಾ. ಶ್ರೀ ವಾದಿರಾಜ ಕವಚಾದಿಗಳನ್ನು. ಪಠಣ ಮಾಡುತ್ತಲೂ. ಜನರ ಕಷ್ಟಗಳನ್ನು ಪರಿಹರಿಸಿ. ಇಷ್ಟವನ್ನು ಸಾಧಿಸಿ ಕೊಡುತ್ತಾರೆ. ಭಕ್ತ ಜನರು. ಶ್ರೀ ವಾದಿರಾಜರ ಮೃತ್ತಿಕಾಲಂಕೃತವಾದ. ಬೃಂದಾವನವನ್ನು ಮಾಡಿಕೊಂಡು ತಮ್ಮ ತಮ್ಮ . ಸ್ಥಳಗಳಲ್ಲಿಯೇ ಸೇವಿಸಿ ಇಷ್ಟಾರ್ಥ ಗಳನ್ನು ಪಡೆಯುತ್ತಾರೆ .



ಶ್ರೀ ಗುರುರಾಜರ ಸಂಕಲ್ಪದಂತೆ. ಪ್ರತಿ ವರ್ಷವೂ ಸೋಂದಾ ಕ್ಷೇತ್ರದಲ್ಲಿ. ಪಾಲ್ಗುಣ ಮಾಸದಲ್ಲಿ ಜರುಗುವ ಉತ್ಸವಕ್ಕೆ ಆ ಮಠಾಧಿಪತಿಗಳಾದ ಶ್ರೀಗಳವರು ಅಲ್ಲಿಗೆ ಹೋಗಿ ಮಹಾಸಂಭ್ರಮದಿಂದ ಉತ್ಸವವನ್ನು ನೆರವೇರಿಸುತ್ತಾರೆ .ಶ್ರೀ ವಾದಿರಾಜತೀರ್ಥರ ಪುಣ್ಯದಿನವಾದ ಫಾಲ್ಗುಣ ಕೃಷ್ಣ ತೃತೀಯಾ ತಿಥಿಯಲ್ಲಿ ಪೂಜಾನಂತರ ವೃಂದಾವನದ ಹತ್ತಿರ ಮುತ್ತಿನ ಕಿರೀಟ ,ಚಿನ್ನದ ಚಾಮರ ,ಕಾವಿಶಾಟಿ ,ಸ್ವರ್ಣಪಾದುಕೆಗಳನಿಟ್ಟು ,ಗುರುಪೂಜೆ ಮಾಡಿ ಲಿಂಗಾಯತಗುರುವಿಗೆ ಮಾಡಿಸಿದ ಅಪಮಾನದ ಗುರುತಿಗಾಗಿ ಹೆಂಗಸರಿಂದ ಗೋಧಿ ಕಣಕ ಕುಟ್ಟಿಸುವ ಸಂಪ್ರದಾಯವಿದೆ .ಆ ಪೀಠಾರೂಢರು ಎಲ್ಲಿದ್ದರೂ ಶ್ರೀ ಗುರುರಾಜರ ಪುಣ್ಯದಿನದಲ್ಲಿ ಶ್ರೀ ಸ್ವರ್ಣಪಾದುಕೆಯ ಮುಂದುಗಡೆ ಕಣಕ ಕುಟ್ಟುವುದು ನಡೆಯತಕ್ಕದ್ದು .


ಶ್ರೀ ಕೃಷ್ಣಾರ್ಪಣಮಸ್ತು    ---------- Hari Om ----------

No comments:

Post a Comment