Tuesday, March 18, 2025

Sri Vyasarajaru

 

ಶ್ರೀ ವ್ಯಾಸರಾಜರು ------ Sri Vyasarajaru

 


                              Sri Vyasarajaru

 

ಅರ್ಥಿಕಲ್ಪಿತ ಕಲ್ಪೋಯಂ ಪ್ರತ್ಯರ್ಥಿ ಗಜಕೇಸರಿ| ವ್ಯಾಸತೀರ್ಥಯತಿರ್ಭೂಯಾತ್ ಅಸ್ಮದಿಷ್ಟಾರ್ಥ ಸಿದ್ಧಯೇ||

ನಮೋ ವ್ಯಾಸ ಮುನೀಂದ್ರಾಯ ಭಕ್ತಾಭೀಷ್ಟಪ್ರದಾಯಿನೇ| ನಮತಾಂ ಕಲ್ಪತರುವೇ ಭಜತಾಂ ಕಾಮಾಧೇನುವೇ||

ಈಸು ಮುನಿಗಳಿದ್ದೇನು ಮಾಡಿದರು ವ್ಯಾಸ ಮುನಿ ಮಧ್ವಮತವನ್ನುದ್ದರಿಸಿದರು

ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು | ಶ್ರೀ ವ್ಯಾಸಮುನಿರಾಯರ ಸನ್ಯಾಸದಿರವ ||

ಒಂದು ಯುಗವೇ ಈದಿನ ಶುರುವಾಯಿತು ಅದು ಕಲಿಯುಗದಲ್ಲಿ ಒಂದು ಯುಗ

 ಸುವರ್ಣಯುಗ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಅವತಾರವಾದ ದಿನಗತ್ತಿಗೆ 

ಶ್ರೀ ವಿಜಯೀಂದ್ರತೀರ್ಥರನ್ನು, ಪುರಂದರದಾಸರನ್ನು, ಕನಕದಾಸರಂತಹ ಮಹಾ

ಜ್ಞಾನಿಗಳನ್ನು ಕೊಟ್ಟ ಆ ಮಹಾ ಯತಿಗಳು🙏 ಅವತವಸರಿಸಿದ ದಿನ.

 

ಶ್ರೀಮಧ್ವಾಚಾರ್ಯರ ಸತ್ಸಿದ್ಧಾಂತವನ್ನು ಎತ್ತಿಹಿಡಿದು ಮಹಾಮಹಾ ವಾದಿಗಳನ್ನು 

ಗೆದ್ದು ಶ್ರೀ ಕೃಷ್ಣದೇವರಾಯನಂತಹ ಚಕ್ರವರ್ತಿಗಳನ್ನು ಪೋಷಿಸುತ್ತಾ 

 "ಚಂದ್ರಿಕಾ", "ನ್ಯಾಯಾಮೃತ" ಮತ್ತು "ತರ್ಕತಾಂಡವ" ದಂತಹ ಮೇರುಕೃತಿ 

ರಚಿಸಿ ಸದಾ ಶ್ರೀಮೂಲಗೋಪಾಲಕೃಷ್ಣ ದೇವರನ್ನ ಪೂಜಿಸುತ್ತಾ ಅವನ 

ಅನುಗ್ರಹದಿಂದ ಜನರಿಗೆ ಕಷ್ಟಗಳನ್ನು ಪರಿಹರಿಸುವಂತೆ ಸೂರ್ಯನ ಉದಯವಾದ

 ದಿನ ನಮ್ಮೆಲ್ಲ ಮಹಾಭಾಗ್ಯ ಎನ್ನುವಂಥವರು ನಮ್ಮ ಕುಲಗುರುಗಳಾದ ಶ್ರೀ 

ವ್ಯಾಸರಾಜ ಗುರುಸಾರ್ವಭೌಮರ 574ನೇ ವರ್ಧಂತಿ ಮಹೋತ್ಸವ.

ಶ್ರೀಕೃಷ್ಣಾರ್ಪಣಮಸ್ತು  ------- Hari Om -------

 

ಶ್ರೀ ವ್ಯಾಸರಾಜರ ಮೂಲ ಬೃಂದಾವನ, ನವ ಬೃಂದಾವನ ಆನೆಗುಂದಿ.

 

                                                    Moola Brindavana

 

ಶ್ರೀ ವ್ಯಾಸರಾಜರ ಆಶ್ರಮದ ಗುರುಗಳಾದ ಶ್ರೀ ಬ್ರಹ್ಮಣ್ಯ ತೀರ್ಥರು ಒಮ್ಮೆ ಬನ್ನೂರು ಪ್ರಾಂತ್ಯದಲ್ಲಿ ಸಂಚಾರದಲ್ಲಿ ಇದ್ದಾಗ ವಿಚಿತ್ರ ಘಟನೆ ನಡೆಯಿತು. ರಾಮಾಚಾರ್ಯ ಎಂಬ ಒಬ್ಬ ಪೌಷ್ಟಿಕ ವಂಶದ ಬ್ರಾಹ್ಮಣ ಸಪತ್ನೀಕನಾಗಿ ಗಂಗಾ ಸ್ನಾನಕ್ಕೆ ತೆರಳುತ್ತಾ ಇವರು ನೆಲೆಸಿದ್ದ ಸ್ಥಳದ ಬಳಿ ಬರುವ ವೇಳೆಗೆ ವಿಚಿತ್ರ ಜ್ವರ ಒಂದರ ಬಾಧೆಗೆ ತುತ್ತಾಗಿ ಅಸು ನೀಗಿದ. ವ್ಯಥಿತಳಾದ ಆತನ ಪತ್ನಿ ಪತಿಯೊಂದಿಗೆ ಸಹಗಮನವನ್ನು ಮಾಡಲು ನಿಶ್ಚಯಿಸಿದಳು. ಯಾವುದೇ ಕಾರ್ಯಕ್ಕೂ ಗುರುಹಿರಿಯರ ಅಪ್ಪಣೆ ಪಡೆಯುವುದು ಶಾಸ್ತ್ರದ ವಿಧಿ.


ಬ್ರಹ್ಮಣ್ಯ ತೀರ್ಥ ರಂತಹ ಮಹಾ ತಪಸ್ವಿಗಳು ಸನಿಹದಲ್ಲೆ ಬಿಡಾರ ಮಾಡಿರುವುದನ್ನು ತಿಳಿದು ಹಾಗೆ ಅನುಮತಿ ಪಡೆಯಲೆಂದು ಅವರ ಬಳಿಗೆ ತೆರಳಿ, ನಮಸ್ಕರಿಸಿದಳು. ತಪೋನಿಧಿಯಾದ ಶ್ರೀ ಬ್ರಹ್ಮಣ್ಯತೀರ್ಥರ ಮುಖದಿಂದ ಅನುಗ್ರಹ ವಚನ ಹೊರಹೊಮ್ಮಿತು. " ದೀರ್ಘ ಸುಮಂಗಲೀಭವ " . ಅಲ್ಲಿದ್ದವರಿಗೆ ಅಚ್ಚರಿಯೇ ಅಚ್ಚರಿ. ಅವಳು ತನ್ನ ಪರಿಸ್ಥಿತಿಯನ್ನು ವಿಜ್ಞಾಪಿಸಿಕೊಂಡಳು. ಶ್ರೀ ಬ್ರಹ್ಮಣ್ಯ ತೀರ್ಥರು ಖಚಿತವಾಗಿ ನುಡಿದರು.

                                                           Yantrodaraka Anjaneya

 

ಇದು ನಮ್ಮ ಮಾತಲ್ಲ ನಮ್ಮ ಆರಾಧ್ಯ ಮೂರ್ತಿ ನುಡಿಸಿದ ಅನುಗ್ರಹ ಸಂದೇಶ. ಅದೆಂದೂ ಸುಳ್ಳಾಗದು. ನಿನ್ನ ಪತಿಯು ಬದುಕುವನು ಶತಾಯುಷಿ ಆಗಿ ಬಾಳುವನು, ಅವನಿಂದ ನಿನಗೆ ಇಬ್ಬರು ಪುತ್ರರು ಜನಿಸುವರು. ಅವರಲ್ಲಿ ಹಿರಿಯನನ್ನು ನಮಗೆ ಒಪ್ಪಿಸಬೇಕು " ಸಾಧ್ವಿಗೆ ರೋಮಾಂಚನ, ಪತಿಯೊಂದಿಗೆ ಪುತ್ರರು ಲಭಿಸುವ ಅಪೂರ್ವ ಅನುಗ್ರಹ. ಅವರು ಮಂತ್ರಿಸಿ ನೀಡಿದ ಉದಕ ವನ್ನು ಸ್ವೀಕರಿಸಿ ಪತಿಯ ಮೃತದೇಹದ ಮೇಲೆ ಪ್ರೋಕ್ಷಣೆ ಮಾಡಿದಳು. ಅದ್ಭುತ ಪವಾಡ ನಡೆದೇ ಹೋಯಿತು. ನೂರಾರು ಜನ ನೋಡುತ್ತಿದ್ದಂತೆ ವಿಪ್ರ ಮತ್ತೆ ಬದುಕಿದ

 

                                                        Sri Vyasarajaru or Vyasatirtha

 

ಸಕಾಲದಲ್ಲಿ ಸಾಧ್ವಿ ಗಂಡು ಮಗುವನ್ನು ಹೆತ್ತಳು. ಆಗ ಮತ್ತೊಂದು ಆಶ್ಚರ್ಯ ಕಾದಿತ್ತು. ಶ್ರೀ ಬ್ರಹ್ಮಣ್ಯ ತೀರ್ಥರ ಆದೇಶದಂತೆ ಸ್ವರ್ಣ ಪಾತ್ರೆಯೊಂದಿಗೆ ಅವರ ಕಡೆಯ ಜನರು ಬಂದಿದ್ದರು. ಭೂ ಸ್ಪರ್ಶವಿಲ್ಲದೆ ಮಗು ಸ್ವರ್ಣ ಪಾತ್ರೆಯಲ್ಲಿ ಜನಿಸಿತು. ಈ ಮಗುವನ್ನು ಶ್ರೀ ಬ್ರಹ್ಮಣ್ಯ ತೀರ್ಥರು ತಮ್ಮ ಬಳಿ ತರಿಸಿಕೊಂಡು, ತಮ್ಮ ಸ್ವಹಸ್ತದಿಂದ ಅದನ್ನು ಕಣ್ವ ನದಿಯಲ್ಲಿ ತೊಳೆದು, ಭಗವಂತನಿಗೆ ಅಭಿಷೇಕಿಸಿದ ಹಾಲನ್ನು ಪಾನ ಮಾಡಿಸುತ್ತಾ ಪೋಷಿಸತೊಡಗಿದರು. ಆ ಮಗುವನ್ನು ತೊಳೆದ ಸ್ಥಳ " ಬಿಳಿಕಲ್ಲುಮಡು " ಎಂಬ ಹೆಸರಿನಿಂದ ಇಂದೂ ಶ್ರೀ ಕ್ಷೇತ್ರ ಅಬ್ಬೂರಿನಲ್ಲಿ ಪ್ರಸಿದ್ಧವಾಗಿದೆ.


ಹೆತ್ತ ತಂದೆ ತಾಯಿಗಳಿಗೂ ಅಸಾಧ್ಯ ಎನಿಸುವ ನಿರ್ಮಲ ಪ್ರೀತಿ ವಾತ್ಸಲ್ಯದಿಂದ ಮಗು ಬೆಳೆಯಿತು, 5ನೇ ವರ್ಷದಲ್ಲಿ ಉಪನಯನ ಆಯಿತು, ಏಳನೇ ವರ್ಷಕ್ಕೆ ಶ್ರೀ ಬ್ರಹ್ಮಣ್ಯ ತೀರ್ಥರು ಸನ್ಯಾಸ ದೀಕ್ಷೆಯನ್ನು ಇತ್ತು " ಶ್ರೀ ವ್ಯಾಸ ತೀರ್ಥ " ಎಂದು ನಾಮಕರಣ ಮಾಡಿದರು

                                                       sri Vyasarajaru on Kings Durbar

 

ಮುಂದೆ ಶ್ರೀ ವ್ಯಾಸರಾಜರು ಮಾಡಿದ ಸಾಧನೆ ಇತಿಹಾಸ. ಶ್ರೀ ಶ್ರೀಪಾದರಾಜರ ಬಳಿ ಅಧ್ಯಯನ, 12 ವರ್ಷಗಳ ಕಾಲ ತಿರುಪತಿ ತಿಮ್ಮಪ್ಪನನ್ನು ಅರ್ಚಿಸಿದ ಅಪೂರ್ವ ದಾಖಲೆ, ವಿಜಯನಗರದ ಅರಸು ಮನೆತನಕ್ಕೆ ರಾಜಗುರು ಪದವಿ, ನ್ಯಾಯಾಮೃತ, ತರ್ಕತಾಂಡವ, ತಾತ್ಪರ್ಯ ಚಂದ್ರಿಕಾ ಮುಂತಾದ ಗ್ರಂಥಗಳ ರಚನೆ, ಶ್ರೀ ಪುರಂದರ ದಾಸರು, ಶ್ರೀ ಕನಕದಾಸರು ಮೊದಲಾದವರಿಗೆ ಹರಿದಾಸ ದೀಕ್ಷೆ , ಶ್ರೀ ವಾದಿರಾಜರು, ಶ್ರೀ ವಿಜಯೇಂದ್ರ ತೀರ್ಥರು ಮೊದಲಾದ ಮಹಾನ್ ಯತಿವರೇಣ್ಯರಿಗೆ ವಿದ್ಯಾ ಗುರುತ್ವ , ಶ್ರೀ ಕೃಷ್ಣದೇವರಾಯನ ಕುಹು ಯೋಗ ಪರಿಹಾರ, ಅದೇ ರಾಜನಿಂದ ಎರಡು ಬಾರಿ ರತ್ನಾಭಿಷೇಕದ ಗೌರವ , ಸುಮಾರು 732 ಮುಖ್ಯಪ್ರಾಣ ದೇವರ ಪ್ರತಿಷ್ಠೆ ಹೀಗೆ ಶ್ರೀ ವ್ಯಾಸರಾಜರ ಸಾಧನೆಗಳ ಪಟ್ಟಿ ವರ್ಣನಾತೀತ

 

                                                                             Pic - 1

 

ಶ್ರೀ ಮಧ್ವ ಸಿದ್ಧಾಂತದ ಚಿಂತಾಮಣಿ ಎಂಬುದೇ ಇವರ ಖ್ಯಾತಿ

 

                                                                           Pic -2 

ಇಂತಹ ಅವತಾರ ಪುರುಷ ರನ್ನು ಜಗತ್ತಿಗೆ ನೀಡಿದ ಅಬ್ಬೂರಿನ ಸೂರ್ಯಾಂಶ ಸಂಭೂತರಾದ ಶ್ರೀ ಬ್ರಹ್ಮಣ್ಯ ತೀರ್ಥರ ಪಾತ್ರ ಅತ್ಯಂತ ಮಹತ್ವ ಪೂರ್ಣವಾದುದು. ತತ್ವ ಚಿಂತಕರಿಗೆ ತತ್ವ ಚಿಂತಾಮಣಿಯಂತಹ ತಾರ್ಕಿಕ ಗ್ರಂಥವನ್ನು ಸಂಪೂರ್ಣ ಖಂಡಿಸಿದ ಚಿಂತಾಮಣಿ ವ್ಯಕ್ತಿತ್ವದ ಶ್ರೀ ವ್ಯಾಸರಾಜರನ್ನು ಜಗತ್ತಿಗೆ ನೀಡಿದ ಕೀರ್ತಿ ಶ್ರೀ ಬ್ರಹ್ಮಣ್ಯ ತೀರ್ಥರದ್ದು

 

                                                                          Pic - 3

 

ಸಕಲ ಆಸ್ತಿಕರಿಗೆ, ಮಾಧ್ವರಿಗೆ ಶ್ರೀ ವ್ಯಾಸರಾಜರ ಮೂಲ ವೃಂದಾವನ ಇರುವ ನವ ಬೃಂದಾವನ ಕ್ಷೇತ್ರವು ಅತ್ಯಂತ ಪಾವನವಾಗಿದೆ. ಇವರ ಸ್ತೋತ್ರ ಪಾರಾಯಣ, ಬೃಂದಾವನ ದರ್ಶನ, ಇವರ ನಾಮ ಸ್ಮರಣೆಯಿಂದ ಸಕಲ ಇಷ್ಟಾರ್ಥ ಸಿದ್ದಿ. ಈ ದಿನ ನವ ಬೃಂದಾವನ ಕ್ಷೇತ್ರದಲ್ಲಿ ಇವರ ಮಧ್ಯಾರಾಧನೆ ಬಹಳ ವೈಭವದಿಂದ ನಡೆಯುತ್ತದೆ.

 

                                                                           Pic - 4


 

ಸಾವಿರಾರು ಭಕ್ತರು ಶ್ರೀ ರಾಜರ ದರ್ಶನವನ್ನು ಮಾಡಿ ಅವರ ಪ್ರಸಾದವನ್ನು ಸ್ವೀಕರಿಸಿ ಧನ್ಯರಾಗುತ್ತಾರೆ. ಶ್ರೀ ಪ್ರಹ್ಲಾದ ರಾಜರ, ಶ್ರೀ ವ್ಯಾಸರಾಜರ, ಮಂತ್ರಾಲಯ ಶ್ರೀ ರಾಯರ ಅನುಗ್ರಹ ಈ ಕ್ಷೇತ್ರದಲ್ಲಿ ಆಗುತ್ತದೆ. ನಿಸ್ಸಂಶಯವಾಗಿಯೂ


ಓಂ ಶ್ರೀ ಪ್ರಹ್ಲಾದ ರಾಜಾಯ ನಮ:
ಓಂ ಶ್ರೀ ವ್ಯಾಸರಾಜಾಯ ನಮ:
ಓಂ ಶ್ರೀ ಗುರು ರಾಘವೇಂದ್ರಾಯ ನಮಃ.

 

---------- Hari Om ----------



 

 

 




 


No comments:

Post a Comment