ಶನಿಶ್ಚರಿ ಅಮಾವಾಸ್ಯೆ, / ಫಾಲ್ಗುಣ ಅಮಾವಾಸ್ಯೆ, / ಯುಗಾದಿ ಅಮಾವಾಸ್ಯೆ
Shanischari - Phalguna - Ugadi Amavasya
ವೈದಿಕ ಕ್ಯಾಲೆಂಡರ್ ಪ್ರಕಾರ, ಚೈತ್ರ ಅಮಾವಾಸ್ಯೆ ತಿಥಿ ಮಾರ್ಚ್ 28 ರಂದು ಸಂಜೆ 07:55 ಕ್ಕೆ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ಮರುದಿನ ಅಂದರೆ ಮಾರ್ಚ್ 29 ರಂದು ಸಂಜೆ 04:27 ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ, ಶನಿ ಅಮಾವಾಸ್ಯೆಯನ್ನು ಮಾರ್ಚ್ 29 ರಂದು ಆಚರಿಸಲಾಗುತ್ತದೆ. ಇದನ್ನು ಶನಿಶ್ಚರಿ ಅಮಾವಾಸ್ಯೆ, ಫಾಲ್ಗುಣ ಅಮಾವಾಸ್ಯೆ, ಯುಗಾದಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ಶನಿ
ಅಮಾವಾಸ್ಯೆಯ ದಿನದಂದು ನಾವು
ಅಪ್ಪಿತಪ್ಪಿಯೂ ಮಾಂಸ, ಮದ್ಯ
ಸೇರಿದಂತೆ ಇನ್ನಿತರ ಮಾದಕ
ವಸ್ತುಗಳನ್ನು ಕೂಡ ಸೇವಿಸಬಾರದು.
ಶನಿ ಅಮಾವಾಸ್ಯೆಯ
ದಿನದಂದು ನಾವು ಇವುಗಳನ್ನು ಸೇವನೆ
ಮಾಡುವುದರಿಂದ ಶನಿದೇವನ ಕೋಪಕ್ಕೆ
ಗುರಿಯಾಗಬೇಕಾಗುತ್ತದೆ.
ಇದರಿಂದ ನಮಗೆ
ಶನಿಯು ಶಿಕ್ಷೆಯನ್ನು ನೀಡಬಹುದು.
ಈ
ದಿನ ಯಾವುದೇ ಹಸು, ನಾಯಿ
ಅಥವಾ ಕಾಗೆಗೆ ಅಪ್ಪಿತಪ್ಪಿಯೂ
ಹಾನಿ ಮಾಡಬೇಡಿ. ಅವರಿಗೆ
ಏನಾದರೂ ಹಾನಿಯಾದರೆ ಶನಿ ದೇವರು
ಕೋಪಗೊಳ್ಳುತ್ತಾನೆ. ಶನಿ
ಅಮವಾಸ್ಯೆಯ ದಿನ ಜನರು ಕೂದಲು,
ಗಡ್ಡ ಮತ್ತು
ಉಗುರುಗಳನ್ನು ಕತ್ತರಿಸಬಾರದು.
ಈ ತಪ್ಪನ್ನು
ಮಾಡುವುದರಿಂದ ಶನಿ ದೋಷ ಉಂಟಾಗುತ್ತದೆ.
ಈ ದಿನ ಸಾಧ್ಯವಾದರೆ
ಬಡವರಿಗೆ, ನಿರ್ಗತಿಕರಿಗೆ
ಹಾಗೂ ಅಗತ್ಯವಿರುವವರಿಗೆ ನಿಮ್ಮ
ಕೈಲಾದಷ್ಟು ಸಹಾಯ ಮಾಡಿ.
ಶನಿ
ಅಮಾವಾಸ್ಯೆಯ ದಿನದಂದು ಕಬ್ಬಿಣದ
ವಸ್ತುಗಳು ಮತ್ತು ಶನಿಗೆ ಸಂಬಂಧಿಸಿದ
ಇನ್ನಾವುದೇ ವಸ್ತುಗಳನ್ನು
ಖರೀದಿಸಬಾರದು. ಈ
ಅಮವಾಸ್ಯೆಯಂದು ಹಿರಿಯರನ್ನು
ಅಗೌರವಿಸಬೇಡಿ ಅಥವಾ ಈ ದಿನ
ಯಾರೊಂದಿಗೂ ವಾದ ವಿವಾದ ಮಾಡಲು
ಹೋಗಬೇಡಿ. ಬದಲಾಗಿ
ಈ ದಿನ ಶನಿಗೆ ಸಂಬಂಧಿಸಿದ ವಸ್ತುಗಳನ್ನು
ಇತರರಿಗೆ ದಾನವಾಗಿಡ ನೀಡಬಹುದು.
ಶನಿ
ಅಮಾವಾಸ್ಯೆಯಂದು ಬಡವರಿಗೆ ಕಪ್ಪು
ಎಳ್ಳು, ಕಪ್ಪು
ಕಂಬಳಿ ಮತ್ತು ಕಪ್ಪು ಬಟ್ಟೆಗಳನ್ನು
ದಾನ ಮಾಡಿ. ಇದರೊಂದಿಗೆ
ನೀವು ಕಪ್ಪು ನಾಯಿಗೆ ಸಾಸಿವೆ
ಎಣ್ಣೆಯೊಂದಿಗೆ ಬ್ರೆಡ್ ಅಥವಾ
ರೊಟ್ಟಿಯನ್ನು ತಿನ್ನಿಸಿ.
ಅಂದರೆ ಬ್ರೆಡ್
ಅಥವಾ ರೊಟ್ಟಿಗೆ ಸಾಸಿವೆ ಎಣ್ಣೆಯನ್ನು
ಹಚ್ಚಿ ಅದನ್ನು ನಾಯಿಗಳಿಗೆ
ಅದರಲ್ಲೂ ಕಪ್ಪು ನಾಯಿಗಳಿಗೆ
ತಿನ್ನಲು ನೀಡುವುದು ಮಂಗಳಕರವಾಗಿರುತ್ತದೆ.
ಹೀಗೆ ಮಾಡುವುದರಿಂದ
ಶನಿದೇವನು ಸಂತೋಷಪಡುತ್ತಾನೆ.
ಶನಿ
ಅಮಾವಾಸ್ಯೆಯ ದಿನದಂದು ಸಾಧ್ಯವಾದರೆ
ಪವಿತ್ರ ನದಿಗಳಲ್ಲಿ ನದಿ ಸ್ನಾನವನ್ನು
ಮಾಡಬೇಕು. ಹಾಗೂ
ಇದರೊಂದಿಗೆ ನಾವು ಶನಿದೇವನ ವಿಗ್ರಹ
ಅಥವಾ ಫೋಟೋದ ಮುಂದೆ ಸಾಸಿವೆ
ಎಣ್ಣೆಯ ದೀಪವನ್ನು ಹಚ್ಚಿಡಬೇಕು.
ಈ ದೀಪಕ್ಕೆ
ಎಣ್ಣೆಯನ್ನು ಹಾಕುವಾಗ ಅದರಲ್ಲಿ
ಕಪ್ಪು ಎಳ್ಳು ಮತ್ತು ಉದ್ದನ್ನು
ಹಾಕಿ ನಂತರ ದೀಪವನ್ನು ಬೆಳಗಬೇಕು.
ಇದರಿಂದ ಶನಿಯು
ಸಂತುಷ್ಟನಾಗಿ ನಿಮ್ಮ ದೋಷಗಳನ್ನು
ದೂರ ಮಾಡುತ್ತಾನೆ. ಸಂಜೆ
ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ
ದೀಪವನ್ನು ಬೆಳಗಿಸಿ, ಅದರ
ಸುತ್ತಲೂ ಏಳು ಬಾರಿ ಪ್ರದಕ್ಷಿಣೆ
ಹಾಕಿ. ಈ
ದಿನ ಶಮಿ ವೃಕ್ಷವನ್ನು ಪೂಜಿಸುವುದರಿಂದಲೂ
ಫಲ ಸಿಗುತ್ತದೆ.
------------ Hari Om ------------
No comments:
Post a Comment