Saturday, March 29, 2025

Shanischari Amavasya-29th March 2025

ಶನಿಶ್ಚರಿ ಅಮಾವಾಸ್ಯೆ, / ಫಾಲ್ಗುಣ ಅಮಾವಾಸ್ಯೆ, / ಯುಗಾದಿ ಅಮಾವಾಸ್ಯೆ


                                                Shanischari - Phalguna - Ugadi Amavasya

 

ವೈದಿಕ ಕ್ಯಾಲೆಂಡರ್ ಪ್ರಕಾರ, ಚೈತ್ರ ಅಮಾವಾಸ್ಯೆ ತಿಥಿ ಮಾರ್ಚ್ 28 ರಂದು ಸಂಜೆ 07:55 ಕ್ಕೆ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ಮರುದಿನ ಅಂದರೆ ಮಾರ್ಚ್ 29 ರಂದು ಸಂಜೆ 04:27 ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ, ಶನಿ ಅಮಾವಾಸ್ಯೆಯನ್ನು ಮಾರ್ಚ್ 29 ರಂದು ಆಚರಿಸಲಾಗುತ್ತದೆ. ಇದನ್ನು ಶನಿಶ್ಚರಿ ಅಮಾವಾಸ್ಯೆ, ಫಾಲ್ಗುಣ ಅಮಾವಾಸ್ಯೆ, ಯುಗಾದಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ.



ಶನಿ ಅಮಾವಾಸ್ಯೆಯ ದಿನದಂದು ನಾವು ಅಪ್ಪಿತಪ್ಪಿಯೂ ಮಾಂಸ, ಮದ್ಯ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ಕೂಡ ಸೇವಿಸಬಾರದು. ಶನಿ ಅಮಾವಾಸ್ಯೆಯ ದಿನದಂದು ನಾವು ಇವುಗಳನ್ನು ಸೇವನೆ ಮಾಡುವುದರಿಂದ ಶನಿದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದರಿಂದ ನಮಗೆ ಶನಿಯು ಶಿಕ್ಷೆಯನ್ನು ನೀಡಬಹುದು.



ಈ ದಿನ ಯಾವುದೇ ಹಸು, ನಾಯಿ ಅಥವಾ ಕಾಗೆಗೆ ಅಪ್ಪಿತಪ್ಪಿಯೂ ಹಾನಿ ಮಾಡಬೇಡಿ. ಅವರಿಗೆ ಏನಾದರೂ ಹಾನಿಯಾದರೆ ಶನಿ ದೇವರು ಕೋಪಗೊಳ್ಳುತ್ತಾನೆ. ಶನಿ ಅಮವಾಸ್ಯೆಯ ದಿನ ಜನರು ಕೂದಲು, ಗಡ್ಡ ಮತ್ತು ಉಗುರುಗಳನ್ನು ಕತ್ತರಿಸಬಾರದು. ಈ ತಪ್ಪನ್ನು ಮಾಡುವುದರಿಂದ ಶನಿ ದೋಷ ಉಂಟಾಗುತ್ತದೆ. ಈ ದಿನ ಸಾಧ್ಯವಾದರೆ ಬಡವರಿಗೆ, ನಿರ್ಗತಿಕರಿಗೆ ಹಾಗೂ ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.



ಶನಿ ಅಮಾವಾಸ್ಯೆಯ ದಿನದಂದು ಕಬ್ಬಿಣದ ವಸ್ತುಗಳು ಮತ್ತು ಶನಿಗೆ ಸಂಬಂಧಿಸಿದ ಇನ್ನಾವುದೇ ವಸ್ತುಗಳನ್ನು ಖರೀದಿಸಬಾರದು. ಈ ಅಮವಾಸ್ಯೆಯಂದು ಹಿರಿಯರನ್ನು ಅಗೌರವಿಸಬೇಡಿ ಅಥವಾ ಈ ದಿನ ಯಾರೊಂದಿಗೂ ವಾದ ವಿವಾದ ಮಾಡಲು ಹೋಗಬೇಡಿ. ಬದಲಾಗಿ ಈ ದಿನ ಶನಿಗೆ ಸಂಬಂಧಿಸಿದ ವಸ್ತುಗಳನ್ನು ಇತರರಿಗೆ ದಾನವಾಗಿಡ ನೀಡಬಹುದು.



ಶನಿ ಅಮಾವಾಸ್ಯೆಯಂದು ಬಡವರಿಗೆ ಕಪ್ಪು ಎಳ್ಳು, ಕಪ್ಪು ಕಂಬಳಿ ಮತ್ತು ಕಪ್ಪು ಬಟ್ಟೆಗಳನ್ನು ದಾನ ಮಾಡಿ. ಇದರೊಂದಿಗೆ ನೀವು ಕಪ್ಪು ನಾಯಿಗೆ ಸಾಸಿವೆ ಎಣ್ಣೆಯೊಂದಿಗೆ ಬ್ರೆಡ್ ಅಥವಾ ರೊಟ್ಟಿಯನ್ನು ತಿನ್ನಿಸಿ. ಅಂದರೆ ಬ್ರೆಡ್‌ ಅಥವಾ ರೊಟ್ಟಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿ ಅದನ್ನು ನಾಯಿಗಳಿಗೆ ಅದರಲ್ಲೂ ಕಪ್ಪು ನಾಯಿಗಳಿಗೆ ತಿನ್ನಲು ನೀಡುವುದು ಮಂಗಳಕರವಾಗಿರುತ್ತದೆ. ಹೀಗೆ ಮಾಡುವುದರಿಂದ ಶನಿದೇವನು ಸಂತೋಷಪಡುತ್ತಾನೆ.



ಶನಿ ಅಮಾವಾಸ್ಯೆಯ ದಿನದಂದು ಸಾಧ್ಯವಾದರೆ ಪವಿತ್ರ ನದಿಗಳಲ್ಲಿ ನದಿ ಸ್ನಾನವನ್ನು ಮಾಡಬೇಕು. ಹಾಗೂ ಇದರೊಂದಿಗೆ ನಾವು ಶನಿದೇವನ ವಿಗ್ರಹ ಅಥವಾ ಫೋಟೋದ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿಡಬೇಕು. ಈ ದೀಪಕ್ಕೆ ಎಣ್ಣೆಯನ್ನು ಹಾಕುವಾಗ ಅದರಲ್ಲಿ ಕಪ್ಪು ಎಳ್ಳು ಮತ್ತು ಉದ್ದನ್ನು ಹಾಕಿ ನಂತರ ದೀಪವನ್ನು ಬೆಳಗಬೇಕು. ಇದರಿಂದ ಶನಿಯು ಸಂತುಷ್ಟನಾಗಿ ನಿಮ್ಮ ದೋಷಗಳನ್ನು ದೂರ ಮಾಡುತ್ತಾನೆ. ಸಂಜೆ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ, ಅದರ ಸುತ್ತಲೂ ಏಳು ಬಾರಿ ಪ್ರದಕ್ಷಿಣೆ ಹಾಕಿ. ಈ ದಿನ ಶಮಿ ವೃಕ್ಷವನ್ನು ಪೂಜಿಸುವುದರಿಂದಲೂ ಫಲ ಸಿಗುತ್ತದೆ.

 


                                                                   Shanischari Amavasya

------------ Hari Om ------------

 

Tuesday, March 18, 2025

Sri Vyasarajaru

 

ಶ್ರೀ ವ್ಯಾಸರಾಜರು ------ Sri Vyasarajaru

 


                              Sri Vyasarajaru

 

ಅರ್ಥಿಕಲ್ಪಿತ ಕಲ್ಪೋಯಂ ಪ್ರತ್ಯರ್ಥಿ ಗಜಕೇಸರಿ| ವ್ಯಾಸತೀರ್ಥಯತಿರ್ಭೂಯಾತ್ ಅಸ್ಮದಿಷ್ಟಾರ್ಥ ಸಿದ್ಧಯೇ||

ನಮೋ ವ್ಯಾಸ ಮುನೀಂದ್ರಾಯ ಭಕ್ತಾಭೀಷ್ಟಪ್ರದಾಯಿನೇ| ನಮತಾಂ ಕಲ್ಪತರುವೇ ಭಜತಾಂ ಕಾಮಾಧೇನುವೇ||

ಈಸು ಮುನಿಗಳಿದ್ದೇನು ಮಾಡಿದರು ವ್ಯಾಸ ಮುನಿ ಮಧ್ವಮತವನ್ನುದ್ದರಿಸಿದರು

ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು | ಶ್ರೀ ವ್ಯಾಸಮುನಿರಾಯರ ಸನ್ಯಾಸದಿರವ ||

ಒಂದು ಯುಗವೇ ಈದಿನ ಶುರುವಾಯಿತು ಅದು ಕಲಿಯುಗದಲ್ಲಿ ಒಂದು ಯುಗ

 ಸುವರ್ಣಯುಗ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಅವತಾರವಾದ ದಿನಗತ್ತಿಗೆ 

ಶ್ರೀ ವಿಜಯೀಂದ್ರತೀರ್ಥರನ್ನು, ಪುರಂದರದಾಸರನ್ನು, ಕನಕದಾಸರಂತಹ ಮಹಾ

ಜ್ಞಾನಿಗಳನ್ನು ಕೊಟ್ಟ ಆ ಮಹಾ ಯತಿಗಳು🙏 ಅವತವಸರಿಸಿದ ದಿನ.

 

ಶ್ರೀಮಧ್ವಾಚಾರ್ಯರ ಸತ್ಸಿದ್ಧಾಂತವನ್ನು ಎತ್ತಿಹಿಡಿದು ಮಹಾಮಹಾ ವಾದಿಗಳನ್ನು 

ಗೆದ್ದು ಶ್ರೀ ಕೃಷ್ಣದೇವರಾಯನಂತಹ ಚಕ್ರವರ್ತಿಗಳನ್ನು ಪೋಷಿಸುತ್ತಾ 

 "ಚಂದ್ರಿಕಾ", "ನ್ಯಾಯಾಮೃತ" ಮತ್ತು "ತರ್ಕತಾಂಡವ" ದಂತಹ ಮೇರುಕೃತಿ 

ರಚಿಸಿ ಸದಾ ಶ್ರೀಮೂಲಗೋಪಾಲಕೃಷ್ಣ ದೇವರನ್ನ ಪೂಜಿಸುತ್ತಾ ಅವನ 

ಅನುಗ್ರಹದಿಂದ ಜನರಿಗೆ ಕಷ್ಟಗಳನ್ನು ಪರಿಹರಿಸುವಂತೆ ಸೂರ್ಯನ ಉದಯವಾದ

 ದಿನ ನಮ್ಮೆಲ್ಲ ಮಹಾಭಾಗ್ಯ ಎನ್ನುವಂಥವರು ನಮ್ಮ ಕುಲಗುರುಗಳಾದ ಶ್ರೀ 

ವ್ಯಾಸರಾಜ ಗುರುಸಾರ್ವಭೌಮರ 574ನೇ ವರ್ಧಂತಿ ಮಹೋತ್ಸವ.

ಶ್ರೀಕೃಷ್ಣಾರ್ಪಣಮಸ್ತು  ------- Hari Om -------

 

ಶ್ರೀ ವ್ಯಾಸರಾಜರ ಮೂಲ ಬೃಂದಾವನ, ನವ ಬೃಂದಾವನ ಆನೆಗುಂದಿ.

 

                                                    Moola Brindavana

 

ಶ್ರೀ ವ್ಯಾಸರಾಜರ ಆಶ್ರಮದ ಗುರುಗಳಾದ ಶ್ರೀ ಬ್ರಹ್ಮಣ್ಯ ತೀರ್ಥರು ಒಮ್ಮೆ ಬನ್ನೂರು ಪ್ರಾಂತ್ಯದಲ್ಲಿ ಸಂಚಾರದಲ್ಲಿ ಇದ್ದಾಗ ವಿಚಿತ್ರ ಘಟನೆ ನಡೆಯಿತು. ರಾಮಾಚಾರ್ಯ ಎಂಬ ಒಬ್ಬ ಪೌಷ್ಟಿಕ ವಂಶದ ಬ್ರಾಹ್ಮಣ ಸಪತ್ನೀಕನಾಗಿ ಗಂಗಾ ಸ್ನಾನಕ್ಕೆ ತೆರಳುತ್ತಾ ಇವರು ನೆಲೆಸಿದ್ದ ಸ್ಥಳದ ಬಳಿ ಬರುವ ವೇಳೆಗೆ ವಿಚಿತ್ರ ಜ್ವರ ಒಂದರ ಬಾಧೆಗೆ ತುತ್ತಾಗಿ ಅಸು ನೀಗಿದ. ವ್ಯಥಿತಳಾದ ಆತನ ಪತ್ನಿ ಪತಿಯೊಂದಿಗೆ ಸಹಗಮನವನ್ನು ಮಾಡಲು ನಿಶ್ಚಯಿಸಿದಳು. ಯಾವುದೇ ಕಾರ್ಯಕ್ಕೂ ಗುರುಹಿರಿಯರ ಅಪ್ಪಣೆ ಪಡೆಯುವುದು ಶಾಸ್ತ್ರದ ವಿಧಿ.


ಬ್ರಹ್ಮಣ್ಯ ತೀರ್ಥ ರಂತಹ ಮಹಾ ತಪಸ್ವಿಗಳು ಸನಿಹದಲ್ಲೆ ಬಿಡಾರ ಮಾಡಿರುವುದನ್ನು ತಿಳಿದು ಹಾಗೆ ಅನುಮತಿ ಪಡೆಯಲೆಂದು ಅವರ ಬಳಿಗೆ ತೆರಳಿ, ನಮಸ್ಕರಿಸಿದಳು. ತಪೋನಿಧಿಯಾದ ಶ್ರೀ ಬ್ರಹ್ಮಣ್ಯತೀರ್ಥರ ಮುಖದಿಂದ ಅನುಗ್ರಹ ವಚನ ಹೊರಹೊಮ್ಮಿತು. " ದೀರ್ಘ ಸುಮಂಗಲೀಭವ " . ಅಲ್ಲಿದ್ದವರಿಗೆ ಅಚ್ಚರಿಯೇ ಅಚ್ಚರಿ. ಅವಳು ತನ್ನ ಪರಿಸ್ಥಿತಿಯನ್ನು ವಿಜ್ಞಾಪಿಸಿಕೊಂಡಳು. ಶ್ರೀ ಬ್ರಹ್ಮಣ್ಯ ತೀರ್ಥರು ಖಚಿತವಾಗಿ ನುಡಿದರು.

                                                           Yantrodaraka Anjaneya

 

ಇದು ನಮ್ಮ ಮಾತಲ್ಲ ನಮ್ಮ ಆರಾಧ್ಯ ಮೂರ್ತಿ ನುಡಿಸಿದ ಅನುಗ್ರಹ ಸಂದೇಶ. ಅದೆಂದೂ ಸುಳ್ಳಾಗದು. ನಿನ್ನ ಪತಿಯು ಬದುಕುವನು ಶತಾಯುಷಿ ಆಗಿ ಬಾಳುವನು, ಅವನಿಂದ ನಿನಗೆ ಇಬ್ಬರು ಪುತ್ರರು ಜನಿಸುವರು. ಅವರಲ್ಲಿ ಹಿರಿಯನನ್ನು ನಮಗೆ ಒಪ್ಪಿಸಬೇಕು " ಸಾಧ್ವಿಗೆ ರೋಮಾಂಚನ, ಪತಿಯೊಂದಿಗೆ ಪುತ್ರರು ಲಭಿಸುವ ಅಪೂರ್ವ ಅನುಗ್ರಹ. ಅವರು ಮಂತ್ರಿಸಿ ನೀಡಿದ ಉದಕ ವನ್ನು ಸ್ವೀಕರಿಸಿ ಪತಿಯ ಮೃತದೇಹದ ಮೇಲೆ ಪ್ರೋಕ್ಷಣೆ ಮಾಡಿದಳು. ಅದ್ಭುತ ಪವಾಡ ನಡೆದೇ ಹೋಯಿತು. ನೂರಾರು ಜನ ನೋಡುತ್ತಿದ್ದಂತೆ ವಿಪ್ರ ಮತ್ತೆ ಬದುಕಿದ

 

                                                        Sri Vyasarajaru or Vyasatirtha

 

ಸಕಾಲದಲ್ಲಿ ಸಾಧ್ವಿ ಗಂಡು ಮಗುವನ್ನು ಹೆತ್ತಳು. ಆಗ ಮತ್ತೊಂದು ಆಶ್ಚರ್ಯ ಕಾದಿತ್ತು. ಶ್ರೀ ಬ್ರಹ್ಮಣ್ಯ ತೀರ್ಥರ ಆದೇಶದಂತೆ ಸ್ವರ್ಣ ಪಾತ್ರೆಯೊಂದಿಗೆ ಅವರ ಕಡೆಯ ಜನರು ಬಂದಿದ್ದರು. ಭೂ ಸ್ಪರ್ಶವಿಲ್ಲದೆ ಮಗು ಸ್ವರ್ಣ ಪಾತ್ರೆಯಲ್ಲಿ ಜನಿಸಿತು. ಈ ಮಗುವನ್ನು ಶ್ರೀ ಬ್ರಹ್ಮಣ್ಯ ತೀರ್ಥರು ತಮ್ಮ ಬಳಿ ತರಿಸಿಕೊಂಡು, ತಮ್ಮ ಸ್ವಹಸ್ತದಿಂದ ಅದನ್ನು ಕಣ್ವ ನದಿಯಲ್ಲಿ ತೊಳೆದು, ಭಗವಂತನಿಗೆ ಅಭಿಷೇಕಿಸಿದ ಹಾಲನ್ನು ಪಾನ ಮಾಡಿಸುತ್ತಾ ಪೋಷಿಸತೊಡಗಿದರು. ಆ ಮಗುವನ್ನು ತೊಳೆದ ಸ್ಥಳ " ಬಿಳಿಕಲ್ಲುಮಡು " ಎಂಬ ಹೆಸರಿನಿಂದ ಇಂದೂ ಶ್ರೀ ಕ್ಷೇತ್ರ ಅಬ್ಬೂರಿನಲ್ಲಿ ಪ್ರಸಿದ್ಧವಾಗಿದೆ.


ಹೆತ್ತ ತಂದೆ ತಾಯಿಗಳಿಗೂ ಅಸಾಧ್ಯ ಎನಿಸುವ ನಿರ್ಮಲ ಪ್ರೀತಿ ವಾತ್ಸಲ್ಯದಿಂದ ಮಗು ಬೆಳೆಯಿತು, 5ನೇ ವರ್ಷದಲ್ಲಿ ಉಪನಯನ ಆಯಿತು, ಏಳನೇ ವರ್ಷಕ್ಕೆ ಶ್ರೀ ಬ್ರಹ್ಮಣ್ಯ ತೀರ್ಥರು ಸನ್ಯಾಸ ದೀಕ್ಷೆಯನ್ನು ಇತ್ತು " ಶ್ರೀ ವ್ಯಾಸ ತೀರ್ಥ " ಎಂದು ನಾಮಕರಣ ಮಾಡಿದರು

                                                       sri Vyasarajaru on Kings Durbar

 

ಮುಂದೆ ಶ್ರೀ ವ್ಯಾಸರಾಜರು ಮಾಡಿದ ಸಾಧನೆ ಇತಿಹಾಸ. ಶ್ರೀ ಶ್ರೀಪಾದರಾಜರ ಬಳಿ ಅಧ್ಯಯನ, 12 ವರ್ಷಗಳ ಕಾಲ ತಿರುಪತಿ ತಿಮ್ಮಪ್ಪನನ್ನು ಅರ್ಚಿಸಿದ ಅಪೂರ್ವ ದಾಖಲೆ, ವಿಜಯನಗರದ ಅರಸು ಮನೆತನಕ್ಕೆ ರಾಜಗುರು ಪದವಿ, ನ್ಯಾಯಾಮೃತ, ತರ್ಕತಾಂಡವ, ತಾತ್ಪರ್ಯ ಚಂದ್ರಿಕಾ ಮುಂತಾದ ಗ್ರಂಥಗಳ ರಚನೆ, ಶ್ರೀ ಪುರಂದರ ದಾಸರು, ಶ್ರೀ ಕನಕದಾಸರು ಮೊದಲಾದವರಿಗೆ ಹರಿದಾಸ ದೀಕ್ಷೆ , ಶ್ರೀ ವಾದಿರಾಜರು, ಶ್ರೀ ವಿಜಯೇಂದ್ರ ತೀರ್ಥರು ಮೊದಲಾದ ಮಹಾನ್ ಯತಿವರೇಣ್ಯರಿಗೆ ವಿದ್ಯಾ ಗುರುತ್ವ , ಶ್ರೀ ಕೃಷ್ಣದೇವರಾಯನ ಕುಹು ಯೋಗ ಪರಿಹಾರ, ಅದೇ ರಾಜನಿಂದ ಎರಡು ಬಾರಿ ರತ್ನಾಭಿಷೇಕದ ಗೌರವ , ಸುಮಾರು 732 ಮುಖ್ಯಪ್ರಾಣ ದೇವರ ಪ್ರತಿಷ್ಠೆ ಹೀಗೆ ಶ್ರೀ ವ್ಯಾಸರಾಜರ ಸಾಧನೆಗಳ ಪಟ್ಟಿ ವರ್ಣನಾತೀತ

 

                                                                             Pic - 1

 

ಶ್ರೀ ಮಧ್ವ ಸಿದ್ಧಾಂತದ ಚಿಂತಾಮಣಿ ಎಂಬುದೇ ಇವರ ಖ್ಯಾತಿ

 

                                                                           Pic -2 

ಇಂತಹ ಅವತಾರ ಪುರುಷ ರನ್ನು ಜಗತ್ತಿಗೆ ನೀಡಿದ ಅಬ್ಬೂರಿನ ಸೂರ್ಯಾಂಶ ಸಂಭೂತರಾದ ಶ್ರೀ ಬ್ರಹ್ಮಣ್ಯ ತೀರ್ಥರ ಪಾತ್ರ ಅತ್ಯಂತ ಮಹತ್ವ ಪೂರ್ಣವಾದುದು. ತತ್ವ ಚಿಂತಕರಿಗೆ ತತ್ವ ಚಿಂತಾಮಣಿಯಂತಹ ತಾರ್ಕಿಕ ಗ್ರಂಥವನ್ನು ಸಂಪೂರ್ಣ ಖಂಡಿಸಿದ ಚಿಂತಾಮಣಿ ವ್ಯಕ್ತಿತ್ವದ ಶ್ರೀ ವ್ಯಾಸರಾಜರನ್ನು ಜಗತ್ತಿಗೆ ನೀಡಿದ ಕೀರ್ತಿ ಶ್ರೀ ಬ್ರಹ್ಮಣ್ಯ ತೀರ್ಥರದ್ದು

 

                                                                          Pic - 3

 

ಸಕಲ ಆಸ್ತಿಕರಿಗೆ, ಮಾಧ್ವರಿಗೆ ಶ್ರೀ ವ್ಯಾಸರಾಜರ ಮೂಲ ವೃಂದಾವನ ಇರುವ ನವ ಬೃಂದಾವನ ಕ್ಷೇತ್ರವು ಅತ್ಯಂತ ಪಾವನವಾಗಿದೆ. ಇವರ ಸ್ತೋತ್ರ ಪಾರಾಯಣ, ಬೃಂದಾವನ ದರ್ಶನ, ಇವರ ನಾಮ ಸ್ಮರಣೆಯಿಂದ ಸಕಲ ಇಷ್ಟಾರ್ಥ ಸಿದ್ದಿ. ಈ ದಿನ ನವ ಬೃಂದಾವನ ಕ್ಷೇತ್ರದಲ್ಲಿ ಇವರ ಮಧ್ಯಾರಾಧನೆ ಬಹಳ ವೈಭವದಿಂದ ನಡೆಯುತ್ತದೆ.

 

                                                                           Pic - 4


 

ಸಾವಿರಾರು ಭಕ್ತರು ಶ್ರೀ ರಾಜರ ದರ್ಶನವನ್ನು ಮಾಡಿ ಅವರ ಪ್ರಸಾದವನ್ನು ಸ್ವೀಕರಿಸಿ ಧನ್ಯರಾಗುತ್ತಾರೆ. ಶ್ರೀ ಪ್ರಹ್ಲಾದ ರಾಜರ, ಶ್ರೀ ವ್ಯಾಸರಾಜರ, ಮಂತ್ರಾಲಯ ಶ್ರೀ ರಾಯರ ಅನುಗ್ರಹ ಈ ಕ್ಷೇತ್ರದಲ್ಲಿ ಆಗುತ್ತದೆ. ನಿಸ್ಸಂಶಯವಾಗಿಯೂ


ಓಂ ಶ್ರೀ ಪ್ರಹ್ಲಾದ ರಾಜಾಯ ನಮ:
ಓಂ ಶ್ರೀ ವ್ಯಾಸರಾಜಾಯ ನಮ:
ಓಂ ಶ್ರೀ ಗುರು ರಾಘವೇಂದ್ರಾಯ ನಮಃ.

 

---------- Hari Om ----------



 

 

 




 


Monday, March 17, 2025

Sri Vadiraja Tirtharu

 



                        Sri Vadiraja Tirtharu

ತಪೋವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರಾನಹಮ್ |
ವಾದಿರಾಜ ಗುರೂನ್ ವಂದೆ ಹಯಗ್ರೀವ ಪದಾಶ್ರಯಾನ್ ||

ಪಂಚವೃಂದಾವನೋಪಾಸನ ಫಲ



17/03/2025 ತ್ರೈಲೋಕ್ಯಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ವಿಶೇಷ ಲೇಖನ ಮಹಿಮೆ..



ಶ್ರೀ ಗುರುರಾಜರ ಉಪಾಸನೆ ಮಾಡತಕ್ಕವರು ,ಧವಳಗಂಗೆಯಲ್ಲಿ ತ್ರಿಕಾಲ ಸ್ನಾನ ಶ್ರೀ ತ್ರಿವಿಕ್ರಮಾದಿ ದರ್ಶನ, ಬೃಂದಾವನ ಸೇವಾ ,ವಾದಿರಾಜ ಕವಚಾದಿ ಪಾರಾಯಣ. ಪುನಶ್ಚರಣಗಳನ್ನೇ ನಿತ್ಯವೂ. ಭಕ್ತಿಯಿಂದ ಆಚರಿಸುತ್ತಾರೆ. ಸಕಲಾರಿಷ್ಟ ನಿವಾರಕವೂ ಸಕಲಾಭೀಷ್ಟ ಸಾಧಕವು ಆಗಿರುವ ಶ್ರೀ ಬೃಂದಾವನದ ಮೃತ್ತಿಕಾ ಲೇಪನ- ತೀರ್ಥಪ್ರಾಶನ ಪ್ರಸಾದ ಸ್ವೀಕಾರ ಮಾಡಿ ಅನೇಕನೇಕ ಜನರು ಅಸಾಧ್ಯ ರೋಗಗಳಿಂದಲೂ ರಾಕ್ಷಸ ಪಿಶಾಚಾದಿ ಉಪಾಹತಿಗಳಿಂದಲೂ ಮುಕ್ತರಾಗಿದ್ದಾರೆ .ಎಷ್ಟೋ ಸೇವಕರು ಸ್ವಪ್ನದಲ್ಲಿ ತಮ್ಮ ಇಷ್ಟ ಸೂಚನೆಯಾಗುವಂತಹ. ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಎಷ್ಟೋ ಸಂತಾನಾಭಿಲಾಷಿಗಳು ,ಸಂತಾನವನ್ನು ಪಡೆದಿರುತ್ತಾರೆ. ಅಭಕ್ತರಾದವರು. ಸೇವೆಗೆಂದು ಬಂದು ಅನೇಕ ಅನರ್ಥಕ್ಕೆ. ಗುರಿಯಾದವರು. ಹಲವರಿರುತ್ತಾರೆ.



ಈ ಕ್ಷೇತ್ರದಲ್ಲಿ. ಸಾಕ್ಷಾತ್ ವಾದಿರಾಜರು.ಒಂದಂಶದಿಂದಿದ್ದು . ಭಕ್ತರನ್ನು. ಅನುಗ್ರಹಿಸುವುದು ಮಾತ್ರವಲ್ಲದೆ. ಎಲ್ಲೆಲ್ಲಿ ತಮ್ಮ ಭಕ್ತರು. ತಮ್ಮನ್ನು ನಂಬಿರುವವರೋ ಅಲ್ಲಲ್ಲಿ ಸನ್ನಿಹಿತರಾಗಿ. ಅವರ ಮನೋರಥ ಸಿದ್ದಿಯನ್ನು. ಸಾಧಿಸಿಕೊಡುತ್ತಾರೆ. ಶ್ರೀ ಭೂತರಾಜರು ಬೃಂದಾವನ ಸಮೀಪದಲ್ಲಿ ವಾಸ ಮಾಡುತ್ತಾ. ಭಕ್ತ ಜನರಿಗೆ ಇಷ್ಟಾರ್ಥವನ್ನು ಕೊಡುವುದು ಮಾತ್ರವಲ್ಲದೆ. ನಂಬಿದವರ ಬಳಿಯಲ್ಲಿಯೂ. ಸಂಹಿತರಾಗಿ ಅವರ ಕಾಮಿತಗಳನ್ನು. ದಯಪಾಲಿಸುತ್ತಾರೆಂಬುದು ಈಗಲೂ ಪ್ರತ್ಯಕ್ಷ ಸಿದ್ಧವಾಗಿದೆ. ಈಗಲೂ ಈ ಮಹನೀಯರ. ಪೀಠಾದಿರೂಢರು ,ನಂಬಿದ ಅನೇಕ ಭಕ್ತರು.



ಶ್ರೀ ವಾದಿರಾಜ ಗುರುವರ ಮತ್ತು ಶ್ರೀ ಭೂತರಾಜರ. ಅನುಗ್ರಹದಿಂದ. ಶ್ರೀ ವೃಂದಾವನದ ಮೃತ್ತಿಕಾಮಾತ್ರವನ್ನು ಕೊಡುತ್ತಲೂ . ಅಥವಾ. ಶ್ರೀ ವಾದಿರಾಜ ಕವಚಾದಿಗಳನ್ನು. ಪಠಣ ಮಾಡುತ್ತಲೂ. ಜನರ ಕಷ್ಟಗಳನ್ನು ಪರಿಹರಿಸಿ. ಇಷ್ಟವನ್ನು ಸಾಧಿಸಿ ಕೊಡುತ್ತಾರೆ. ಭಕ್ತ ಜನರು. ಶ್ರೀ ವಾದಿರಾಜರ ಮೃತ್ತಿಕಾಲಂಕೃತವಾದ. ಬೃಂದಾವನವನ್ನು ಮಾಡಿಕೊಂಡು ತಮ್ಮ ತಮ್ಮ . ಸ್ಥಳಗಳಲ್ಲಿಯೇ ಸೇವಿಸಿ ಇಷ್ಟಾರ್ಥ ಗಳನ್ನು ಪಡೆಯುತ್ತಾರೆ .



ಶ್ರೀ ಗುರುರಾಜರ ಸಂಕಲ್ಪದಂತೆ. ಪ್ರತಿ ವರ್ಷವೂ ಸೋಂದಾ ಕ್ಷೇತ್ರದಲ್ಲಿ. ಪಾಲ್ಗುಣ ಮಾಸದಲ್ಲಿ ಜರುಗುವ ಉತ್ಸವಕ್ಕೆ ಆ ಮಠಾಧಿಪತಿಗಳಾದ ಶ್ರೀಗಳವರು ಅಲ್ಲಿಗೆ ಹೋಗಿ ಮಹಾಸಂಭ್ರಮದಿಂದ ಉತ್ಸವವನ್ನು ನೆರವೇರಿಸುತ್ತಾರೆ .ಶ್ರೀ ವಾದಿರಾಜತೀರ್ಥರ ಪುಣ್ಯದಿನವಾದ ಫಾಲ್ಗುಣ ಕೃಷ್ಣ ತೃತೀಯಾ ತಿಥಿಯಲ್ಲಿ ಪೂಜಾನಂತರ ವೃಂದಾವನದ ಹತ್ತಿರ ಮುತ್ತಿನ ಕಿರೀಟ ,ಚಿನ್ನದ ಚಾಮರ ,ಕಾವಿಶಾಟಿ ,ಸ್ವರ್ಣಪಾದುಕೆಗಳನಿಟ್ಟು ,ಗುರುಪೂಜೆ ಮಾಡಿ ಲಿಂಗಾಯತಗುರುವಿಗೆ ಮಾಡಿಸಿದ ಅಪಮಾನದ ಗುರುತಿಗಾಗಿ ಹೆಂಗಸರಿಂದ ಗೋಧಿ ಕಣಕ ಕುಟ್ಟಿಸುವ ಸಂಪ್ರದಾಯವಿದೆ .ಆ ಪೀಠಾರೂಢರು ಎಲ್ಲಿದ್ದರೂ ಶ್ರೀ ಗುರುರಾಜರ ಪುಣ್ಯದಿನದಲ್ಲಿ ಶ್ರೀ ಸ್ವರ್ಣಪಾದುಕೆಯ ಮುಂದುಗಡೆ ಕಣಕ ಕುಟ್ಟುವುದು ನಡೆಯತಕ್ಕದ್ದು .


ಶ್ರೀ ಕೃಷ್ಣಾರ್ಪಣಮಸ್ತು    ---------- Hari Om ----------

Saturday, March 1, 2025

Sri Raghavendra Akshara Maalika Stothra

 

ಶ್ರೀ ರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ


Sri Raghavendra Akshara Maalika Stothra

 


                               Sri Raghavendra 


ಅಕ್ಷರಮಾಲಿಕಾ ಸ್ತೋತ್ರದ ಅರ್ಥ ಮತ್ತು ಮಹತ್ವ:


ಶ್ರೀರಾಘವೇಂದ್ರ ಸ್ವಾಮಿ ಅನುಗ್ರಹವನ್ನು ಪಡೆದುಕೊಳ್ಳುವ ಅತ್ಯಂತ ಸರಳ ವಿಧಾನವೆಂದರೆ ಅದುವೇ ರಾಯರ ಮಂತ್ರ ಮತ್ತು ಸ್ತೋತ್ರಗಳ ಪಠಣ. ರಾಯರ ಅದ್ಭುತ ಮಂತ್ರಗಳಲ್ಲಿ ಅಕ್ಷರಮಾಲಿಕಾ ಸ್ತೋತ್ರವೂ ಒಂದು. ಈ ಅಕ್ಷರಮಾಲಿಕಾ ಸ್ತೋತ್ರ ಎಂದರೇನು..? ಈ ಸ್ತೋತ್ರದ ಮಹತ್ವವೇನು..?


ರಾಘವೇಂದ್ರ ಸ್ವಾಮಿಗಳಿಗೆ ಸಮರ್ಪಿತವಾದ ಅಕ್ಷರಮಾಲಿಕಾ ಸ್ತೋತ್ರವು 51+1 ಸಾಲುಗಳನ್ನೊಳಗೊಂಡ ಸ್ತೋತ್ರವಾಗಿದೆ. ಈ ಸ್ತೋತ್ರವನ್ನು ಶ್ರೀ ಸೊಂಡೂರು ಕೃಷ್ಣಾವಧೂತರು ರಚಿಸಿದ್ದಾರೆ.


ಈ ಸ್ತೋತ್ರದ ವಿಶೇಷತೆಯೇನೆಂದರೆ ಈ ಸ್ತೋತ್ರದ 51 +1 ಸಾಲುಗಳ ಆರಂಭವು ಅಥವಾ ಮೊದಲ ಅಕ್ಷರವು ಕನ್ನಡ ವರ್ಣಮಾಲೆಯ ಅಕ್ಷರಗಳೊಂದಿಗೆ ಪ್ರಾರಂಭವಾಗುತ್ತದೆ. ಉದಾಹರಣೆಗೆ ಸ್ತೋತ್ರದ ಮೊದಲ ಸಾಲು ಅ ಅಕ್ಷರದಿಂದ ಆರಂಭವಾದರೆ ಎರಡನೇ ಸಾಲು ಆ ಹೀಗೆ.


ರಾಯರ ಆಶೀರ್ವಾದಕ್ಕಾಗಿ ನಾವು ಈ ಸ್ತೋತ್ರವನ್ನು ಪಠಿಸಬಹುದು. ಸ್ತೋತ್ರ ಹೀಗಿದೆ ನೋಡಿ..


ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಆನಂದರೂಪಾಯ ನಂದಾತ್ಮಜ ಶ್ರೀಪದಾಂಭೋಜಭಾಜೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಇಷ್ಟಪ್ರದಾನೇನ ಕಷ್ಟಪ್ರಹಾಣೇನ ಶಿಷ್ಟಸ್ತುತ ಶ್ರೀಪದಾಂಭೋಜ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಈಡೇ ಭವತ್ಪಾದ ಪಾಥೋಜಮಾಧ್ಯಾಯ ಭೂಯೋಽಪಿ ಭೂಯೋ ಭಯಾತ್ ಪಾಹಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಉಗ್ರಂ ಪಿಶಾಚಾದಿಕಂ ದ್ರಾವಯಿತ್ವಾಶು ಸೌಖ್ಯಂ ಜನಾನಾಂ ಕರೋಶೀಷ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಊರ್ಜತ್ ಕೃಪಾಪೂರ ಪಾಥೋನಿಧೇಮಂಕ್ಷು ತುಷ್ಟೋಽನುಗೃಹ್ಣಾಸಿ ಭಕ್ತ್ವಾನ್ ವಿಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಋಜೂತ್ತಮ ಪ್ರಾಣ ಪಾದಾರ್ಚನಪ್ರಾಪ್ತ ಮಾಹಾತ್ಮ್ಯ ಸಂಪೂರ್ಣ ಸಿದ್ಧೇಶ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಋಭುಸ್ವಭಾವಾಪ್ತ ಭಕ್ತೇಷ್ಟಕಲ್ಪದ್ರು ರೂಪೇಶ ಭೂಪಾದಿ ವಂದ್ಯ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||
ೠದ್ಧಂ ಯಶಸ್ತೇ ವಿಭಾತಿ ಪ್ರಕೃಷ್ಟಂ ಪ್ರಪನ್ನಾರ್ತಿಹಂತರ್ಮಹೋದಾರ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ||

ಕ್ಲಿಪ್ತಾತಿ ಭಕ್ತೌಘ ಕಾಮ್ಯಾರ್ಥ ದಾತರ್ಭವಾಂಬೋಧಿ ಪಾರಂಗತ ಪ್ರಾಜ್ಞ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೦ ||

 



                                                                   Sri Raghavendra Swamy 

 

ಏಕಾಂತ ಭಕ್ತಾಯ ಮಾಕಾಂತ ಪಾದಾಬ್ಜ ಉಚ್ಚಾಯ ಲೋಕೇ ನಮಸ್ತೇ ವಿಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೧ ||

ಐಶ್ವರ್ಯಭೂಮನ್ ಮಹಾಭಾಗ್ಯದಾಯಿನ್ ಪರೇಶಾಂ ಚ ಕೃತ್ಯಾದಿ ನಾಶಿನ್ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೨ ||

ಓಂಕಾರ ವಾಚ್ಯಾರ್ಥಭಾವೇನ ಭಾವೇನ ಲಬ್ಧೋದಯ ಶ್ರೀಕ ಯೋಗೀಶ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೩ ||

ಔರ್ವಾನಲಪ್ರಖ್ಯ ದುರ್ವಾದಿದಾವಾನಲೈಃ ಸರ್ವತಂತ್ರ ಸ್ವತಂತ್ರೇಶ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೪ ||

ಅಂಭೋಜಸಂಭೂತಮುಖ್ಯಾಮರಾರಾಧ್ಯ ಭೂನಾಥ ಭಕ್ತೇಶ ಭಾವಜ್ಞ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೫ ||

ಅಸ್ತಂಗತಾನೇಕಮಾಯಾದಿ ವಾದೀಶ ವಿದ್ಯೋತಿತಾಶೇಷ ವೇದಾಂತ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೬ ||

ಕಾಮ್ಯಾರ್ಥದಾನಾಯ ಬದ್ಧಾದರಾಶೇಷ ಲೋಕಾಯ ಸೇವಾನುಸಕ್ತಾಯ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೭ ||

ಖದ್ಯೋತಸಾರೇಷು ಪ್ರತ್ಯರ್ಥಿಸಾರ್ಥೇಶು ಮಧ್ಯಾಹ್ನ ಮಾರ್ತಾಂಡ ಬಿಂಬಾಭ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೮ ||

ಗರ್ವಿಷ್ಠ ಗರ್ವಾಂಬುಶೋಷಾರ್ಯಮಾತ್ಯುಗ್ರ ನಮ್ರಾಂಬುಧೇರ್ಯಾಮಿನೀ ನಾಥ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೯ ||

ಘೋರಾಮಯಧ್ವಾಂತ ವಿಧ್ವಂಸನೋದ್ದಾಮ ದೇದೀಪ್ಯ ಮಾನಾರ್ಕ ಬಿಂಬಾಭ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೦ ||

 


                                                                      another Picture


ಙಣತ್ಕಾರದಂಡಾಂಕ ಕಾಷಾಯವಸ್ತ್ರಾಂಕ ಕೌಪೀನ ಪೀನಾಂಕ ಹಂಸಾಂಕ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೧ ||

ಚಂಡೀಶ ಕಾಂಡೇಶ ಪಾಖಂಡ ವಾಕ್ಕಾಂಡ ತಾಮಿಶ್ರಮಾರ್ತಾಂಡ ಪಾಷಂಡ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೨ ||

ಛದ್ಮಾಣುಭಾಗಂ ನವಿದ್ಮಸ್ತ್ವದಂತಃ ಸುಸದ್ಮೈವ ಪದ್ಮಾವಧಸ್ಯಾಸಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೩ ||

ಜಾಡ್ಯಂಹಿನಸ್ತ್ವಿಜ್ವರಾರ್ಶಃಕ್ಷಯಾದ್ಯಾಶು ತೇ ಪಾದ ಪದ್ಮಾಂಬುಲೇಶೋಽಪಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೪ ||

ಝಶಧ್ವಜೀಯೇಷ್ವಲಭ್ಯೋರುಚೇತಃ ಸಮಾರೂಢಮಾರೂಢ ವಕ್ಷೋಂಗ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೫ ||

ಞಾಂಚಾವಿಹೀನಾಯ ಯಾದೃಚ್ಛಿಕ ಪ್ರಾಪ್ತ ತುಷ್ಟಾಯ ಸದ್ಯಃ ಪ್ರಸನ್ನೋಽಸಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೬ ||

ಟೀಕಾರಹಸ್ಯಾರ್ಥ ವಿಖ್ಯಾಪನಗ್ರಂಥ ವಿಸ್ತಾರ ಲೋಕೋಪಕರ್ತಃ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೭ ||

ಠಂಕುರ್ವರೀಣಾಮ ಮೇಯಪ್ರಭಾವೋದ್ಧರಾಪಾದ ಸಂಸಾರತೋ ಮಾಂ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೮ ||

ಡಾಕಿನ್ಯಪಸ್ಮಾರ ಘೋರಾಧಿಕೋಗ್ರ ಗ್ರಹೋಚ್ಚಾಟನೋದಗ್ರ ವೀರಾಗ್ರ್ಯ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೯ ||

ಢಕ್ಕಾಧಿಕಧ್ವಾನ ವಿದ್ರಾವಿತಾನೇಕ ದುರ್ವಾದಿಗೋಮಾಯು ಸಂಘಾತ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೦ ||

 


                                               Rayara Moola Brindavana at Mantralaya


ಣಾತ್ಮಾದಿಮಾತ್ರರ್ಣಲಕ್ಷ್ಯಾರ್ಥಕ ಶ್ರೀಪತಿಧ್ಯಾನಸನ್ನದ್ಧಧೀಸಿದ್ಧ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೧ ||

ತಾಪತ್ರಯ ಪ್ರೌಢ ಬಾಧಾಭಿಭೂತಸ್ಯ ಭಕ್ತಸ್ಯ ತಾಪತ್ರಯಂ ಹಂಸಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೨ ||

ಸ್ಥಾನತ್ರಯಪ್ರಾಪಕಜ್ಞಾನದಾತಸ್ತ್ರಿಧಾಮಾಂಘ್ರಿಭಕ್ತಿಂ ಪ್ರಯಚ್ಛ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೩ ||

ದಾರಿದ್ರ್ಯ ದಾರಿದ್ರ್ಯ ಯೋಗೇನ ಯೋಗೇನ ಸಂಪನ್ನ ಸಂಪತ್ತಿ ಮಾ ದೇಹಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೪ ||

ಧಾವಂತಿ ತೇ ನಾಮಧೇಯಾಭಿ ಸಂಕೀರ್ತನೇನೈನ ಸಾಮಾಶು ವೃಂದಾನಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೫ ||

ನಾನಾ ವಿಧಾನೇಕ ಜನ್ಮಾದಿ ದುಃಖೌಘತಃ ಸಾಧ್ವಸಂಸಂಹರೋದಾರ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೬ ||

ಪಾತಾ ತ್ವಮೇವೇತಿ ಮಾತಾ ತ್ವಮೇವೇತಿ ಮಿತ್ರಂ ತ್ವಮೇವೇತ್ಯಹಂ ವೇದ್ಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೭ ||

ಫಾಲಸ್ಥದುರ್ದೈವವರ್ಣಾವಳೀಕಾರ್ಯಲೋಪೇಽಪಿ ಭಕ್ತಸ್ಯ ಶಕ್ತೋಽಸಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೮ ||

ಬದ್ಧೋಸ್ಮಿ ಸಂಸಾರ ಪಾಶೇನ ತೇಽಂಘ್ರಿಂ ವಿನಾನ್ಯಾ ಗತಿರ್ನೇತ್ಯಮೇಮಿ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩೯ ||

ಭಾವೇ ಭಜಾಮೀಹ ವಾಚಾ ವದಾಮಿ ತ್ವದೀಯಂ ಪದಂ ದಂಡವನ್ನೌಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೦ ||

ಮಾನ್ಯೇಷು ಮಾನ್ಯೋಽಸಿ ಮತ್ಯಾ ಚ ಧೃತ್ಯಾ ಚ ಮಾಮದ್ಯಮಾನ್ಯಂ ಕುರುದ್ರಾಗ್ವಿಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೧ ||

ಯಂಕಾಮಮಾಕಾಮಯೇ ತಂ ನ ಚಾಪಂ ತತಸ್ತ್ವಂ ಶರಣ್ಯೋ ಭವೇತ್ಯೇಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೨ ||

ರಾಜಾದಿ ವಶ್ಯಾದಿ ಕುಕ್ಷಿಂಭರಾನೇಕಚಾತುರ್ಯವಿದ್ಯಾಸು ಮೂಢೋಽಸ್ಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೩ ||

 

                                                              Rayaru performing Pooja

 

ಲಕ್ಷ್ಯೇಶು ತೇ ಭಕ್ತವರ್ಗೇಶು ಕುರ್ವೇಕಲಕ್ಷ್ಯಂ ಕೃಪಾಪಾಂಗಲೇಶಸ್ಯ ಮಾಂ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೪ ||

ವಾರಾಂಗನಾದ್ಯೂತಚೌರ್ಯಾನ್ಯ ದಾರಾರತತ್ವಾದ್ಯವದ್ಯತ್ವತೋ ಮಾಂ ಪ್ರಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೫ ||

ಶಕ್ತೋ ನ ಶಕ್ತಿಂ ತವ ಸ್ತೋತುಮಾಧ್ಯಾತುಮೀದೃಕ್ವಹಂ ಕರೋಮೀಶ ಕಿಂ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೬ ||

ಷಡ್ವೈರಿವರ್ಗಂ ಮಮಾರಾನ್ನಿರಕುರ್ವಮಂದೋಹರೀರಾಂಘ್ರಿರಾಗೋಽಸ್ತುಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೭ ||

ಸನ್ಮಾರ್ಗಸಚ್ಛಾಸ್ತ್ರ ಸತ್ಸಂಗ ಸದ್ಭಕ್ತಿ ಸುಜ್ಞಾನ ಸಂಪತ್ತಿ ಮಾದೇಹಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೮ ||

ಹಾಸ್ಯಾಸ್ಪದೋಽಹಂ ಸಮಾನೇಷ್ಟಕೀರ್ತ್ಯಾ ತಂವಾಂಘ್ರಿಂ ಪ್ರಪನ್ನೋಽಸ್ಮಿ ಸಂರಕ್ಷ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪೯ ||

ಲಕ್ಷ್ಮೀ ವಿಹೀನತ್ವ ಹೇತೋಃ ಸ್ವಕೀಯೈಃ ಸುದೂರೀಕೃತೋಸ್ಮ್ಯದ್ಯ ವಾಚ್ಯೋಽಸ್ಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫೦ ||

ಕ್ಷೇಮಂಕರಸ್ತ್ವಂ ಭವಾಂಭೋಧಿ ಮಜ್ಜಜ್ಜನಾನಾಮಿತಿ ತ್ವಾಂ ಪ್ರಪನ್ನೋಽಸ್ಮಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫೧ ||

ಕೃಷ್ಣಾವಧೂತೇನ ಗೀತೇನ ಮಾತ್ರಕ್ಷರಾದ್ಯೇನ ಗಾಥಾಸ್ತವೇನೇಢ್ಯ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫೨ |


--------- Hari Om ----------