ಶ್ರೀ ಮಧ್ವಾಚಾರ್ಯರು ಮತ್ತು ಹರಿದಾಸ ಸಾಹಿತ್ಯ
Sri Madhwacharya
ಶ್ರೀಯುತ ಮಧ್ವಾಚಾರ್ಯರನ್ನು ಹರಿದಾಸರೆಲ್ಲರೂ ಪ್ರೇರಕ ಶಕ್ತಿ ದಾಸ ಶ್ರೇಷ್ಠರು ಎಂದೇ ಐತಿಹಾಸಿಕ ಗ್ರಂಥಗಳಲ್ಲಿ ದಾಖಲು ಮಾಡಿದ್ದಾರೆ. ಭಗವಂತನನ್ನು ಕಾಣುವ ಮತ್ತು ಭಗವಂತನ ಅಸ್ಮಿತೆಯನ್ನು ಭಕ್ತಿ ಮಾರ್ಗದ ಮೂಲಕ ಜನಸಾಮಾನ್ಯರಿಗೆ ಶ್ರೀಯುತ ಮಧ್ವಾಚಾರ್ಯರು ತಿಳಿಸಿದರು. ಅದರಲ್ಲೂ ಅವರಿಂದ ರಚಿತವಾದ ದ್ವಾದಶಸ್ತೋತ್ರ ಹರಿದಾಸರಿಗೆ ತಮ್ಮ ಕಾವ್ಯ ಪ್ರತಿಭೆಯ ಮೂಲ ಆಧಾರ ಕಾವ್ಯವಾಗಿದೆ. ದ್ವಾರಕೆಯ ಕೃಷ್ಣನನ್ನು ಕಂಡಾಗ ಮಧ್ವಾಚಾರ್ಯರು ಹಾಡಿ ಕುಣಿದ ದ್ವಾದಶ ಸ್ತೋತ್ರ ಭಕ್ತಿ ಭಾವ ಗೀತೆ ಸ್ಪೂರ್ತಿ ಪ್ರದಾಯಕ ಆಗಿತ್ತು. ಶ್ರೀಯುತ ಮಧ್ವಾಚಾರ್ಯರು 1236 ಜನಿಸಿದವರು ಸಂಗೀತದಲ್ಲಿ ಬಹಳ ಸಾಧನೆ ಮಾಡಿದ್ದರು. ಅವರ ಸಂಗೀತ ನಾದಕ್ಕೆ ಇಡೀ ಸಭೆಯೇ ಮೈಮರೆಯುತ್ತಿದ್ದು ಸಂಗೀತ ಸಾಗರದಲ್ಲಿ ಭಕ್ತರು ಮಿಂದೆದ್ದು ಪವಿತ್ರ ಆಗಿದ್ದರು.
ಶ್ರೀ
ಮಧ್ವಾಚಾರ್ಯರ ಈ ಭಕ್ತಿಪ್ರಧಾನ
ಜೀವನ ಹರಿದಾಸರಿಗೆ ಕನ್ನಡದಲ್ಲಿ
ತಮ್ಮ ಕೃತಿಗಳನ್ನು ಕೀರ್ತನೆಗಳನ್ನು
ರಚಿಸುವುದಕ್ಕೆ ಆದರ್ಶಮಯವಾಗಿತ್ತು.
ಆಚಾರ್ಯರು
ಕನ್ನಡದಲ್ಲಿ ಕೃತಿ ಕೀರ್ತನೆಗಳನ್ನು
ರಚಿಸಿದ ದಾಖಲೆ ಇತಿಹಾಸದಲ್ಲಿ
ಸಿಕ್ಕಿಲ್ಲ. ಅದು
ಸಿಕ್ಕಿಲ್ಲ ಎಂದು ಅವರು ಕೃತಿಗಳನ್ನು
ರಚಿಸಿಲ್ಲ ಎಂದು ಹೇಳಲು ಆಗುವುದಿಲ್ಲ.
ಇದು ಸಂಶೋಧಕರ
ತೀರ್ಮಾನಕ್ಕೆ ಬಿಟ್ಟ ವಿಷಯ
ಆಗಿದೆ.ಅವರ
ನೇರ ಶಿಷ್ಯರಾದ ಹೃಷಿಕೇಶ ತೀರ್ಥರು
ತುಳು ಭಾಷೆಯಲ್ಲಿ ಮಧ್ವರ ಗ್ರಂಥಗಳನ್ನು
ಲಿಪಿ ಬದ್ಧ ಗೊಳಿಸಿದ್ದಾರೆ.
ಆಚಾರ್ಯ ಮಧ್ವರ
ಇನ್ನೊಬ್ಬ ನೇರ ಶಿಷ್ಯರು ನರಹರಿ
ತೀರ್ಥರ ಆರು ಕನ್ನಡದ ಕೃತಿಗಳು
ಸಿಕ್ಕಿದೆ ಎಂದು ಇತಿಹಾಸಕಾರರು
ತಿಳಿಸುತ್ತಾರೆ.
ಶ್ರೀಯುತ ಮಧ್ವಾಚಾರ್ಯರು ಯಕ್ಷಗಾನದಲ್ಲಿ ಭಾಗವತದ ಆಟಗಳನ್ನು ಆಡಿಸಲು ಸ್ಪೂರ್ತಿ ಆಗಿದ್ದರು. ಮಹಾಭಾರತ ರಾಮಾಯಣದ ಕಥೆಗಳನ್ನು ಯಕ್ಷಗಾನದಲ್ಲಿ ಅಳವಡಿಸಲು ಪ್ರೋತ್ಸಾಹ ನೀಡಿದರು. ವಸ್ತುಸ್ಥಿತಿ ಇದು ಆಗಿರಬೇಕಾದರೆ ಆಚಾರ್ಯ ಮಧ್ವರು ಕನ್ನಡದಲ್ಲಿ ಕೃತಿ ರಚಿಸಿಲ್ಲ ಎಂದರೆ ಆ ಕಾಲದ ಇತಿಹಾಸಕ್ಕೆ ಲೋಪ ಮಾಡಿದಂತೆ ಆಗುವುದು.
ಕಾಲಗರ್ಭದ
ಇತಿಹಾಸದಲ್ಲಿ 800 ವರ್ಷಗಳ
ಕೆಳಗೆ ಈ ಘಟನೆಗಳು ನಡೆದಿವೆ.
ಸಾಕಷ್ಟು ಕಾಲ
ಸಂದಿದೆ. ಆದರೆ
ಅವರು ರಚಿಸಿರಬಹುದು ಅವು ನಮಗೆ
ಲಭ್ಯವಾಗದೇ ಇರಬಹುದು ಎನ್ನುವುದು
ಅನೇಕ ಪ್ರಾಜ್ಞರ ಭಾವನೆ ಆಗಿದೆ.
ಅಷ್ಟೇ ಏಕೆ
ಆಚಾರ್ಯ ಮಧ್ವರ ನಂತರ ಬಂದ ಅನೇಕ
ಹರಿದಾಸರ ಕೃತಿ ಕೀರ್ತನೆಗಳು
ಇಂದಿಗೂ ಲಭ್ಯ ಇಲ್ಲ.
ಹಾಗಿರಬೇಕಾದರೆ
ಮಧ್ವಾಚಾರ್ಯರು ರಚಿಸಿರಬಹುದಾದ
ಸಂಪೂರ್ಣ ಕೃತಿ ಎಲ್ಲವೂ ಸಿಕ್ಕಿಲ್ಲ.
ಇದನ್ನು
ಸಂಶೋಧಕರ ಮರ್ಜಿಗೆ ಬಿಡುವುದು
ಒಳ್ಳೆಯದು ಎನ್ನುವುದು ಉತ್ತಮ
ತೀರ್ಮಾನ ಎನಿಸುತ್ತದೆ.
sri Ananda Tirtharu
ಪ್ರಾಜ್ಞರು ಗಮನಿಸಿದಂತೆ ಆಚಾರ್ಯ ಮಧ್ವರು ದೇಶ ಕಂಡ ಅಂದಿನ ಕಾಲದಲ್ಲಿ ಶ್ರೇಷ್ಠ ಸಂನ್ಯಾಸಿಗಳಲ್ಲಿ ಪ್ರಮುಖರಾಗಿದ್ದರು. ಅವರೊಂದಿಗೆ ಅಂದಿನ ಕಾಲದ ವಿವಿಧ ಮತ ಪಂಥಗಳ ಅನೇಕ ದೊಡ್ಡ ದೊಡ್ಡ ವಿದ್ವಾಂಸರು ಪಂಡಿತರು ಅವರ ಸಂಪರ್ಕದಲ್ಲಿದ್ದರು. ಅವರೊಂದಿಗೆ ವಾದ-ವಿವಾದ ಸ್ನೇಹ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದರು.
ಆಚಾರ್ಯ
ಮಧ್ವರು ಕೇವಲ ದೊಡ್ಡ ದೊಡ್ಡ
ಪಂಡಿತರು ಮತ್ತು ವಿದ್ವಾಂಸರೊಂದಿಗೆ
ಮಾತ್ರ ಸ್ನೇಹ ಸಲಿಗೆಯಿಂದ
ಇರುತ್ತಿರಲಿಲ್ಲ ಜನಸಾಮಾನ್ಯರ
ಬಳಿಯೂ ಸಹ ಅಷ್ಟೇ ಗೌರವ ಪ್ರೀತಿ
ವಿಶ್ವಾಸಗಳಿಂದ ನಡೆದುಕೊಳ್ಳುತ್ತಿದ್ದರು.ಅವರ
ಭಕ್ತಿ ಭಾವನೆಗಳಿಗೆ ಪೂರ್ವಕವಾಗಿ
ಸ್ಪಂದಿಸುತ್ತಿದ್ದರು.
ಜನಸಾಮಾನ್ಯರು
ನೇರವಾಗಿ ಅವರೊಂದಿಗೆ ತಮ್ಮ
ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು.ಅವರ
ಆಶೀರ್ವಾದ ಮತ್ತು ಕೃಪೆಗೆ
ಪಾತ್ರರಾಗಲು ಇಷ್ಟಪಡುತ್ತಿದ್ದರು.
ಆಚಾರ್ಯ
ಮಧ್ವರು ಜನಸಾಮಾನ್ಯರಲ್ಲಿ
ಭಕ್ತಿಭಾವ ಜಾಗೃತ ಮಾಡಲಿಕ್ಕಾಗಿಯೇ
ಅವತರದ ಪ್ರಮುಖ ಕಾರಣಗಳಲ್ಲಿ
ಒಂದು ಎಂಬುದು ಎಲ್ಲರಿಗೂ ತಿಳಿದಿರುವ
ವಿಷಯವೇ ಆಗಿದೆ. ಇಂತಹ
ಭಾವನೆ ಇರುವ ಆಚಾರ್ಯ ಮಧ್ವರು
ಜನಸಾಮಾನ್ಯರು ಬಳಸುತ್ತಿದ್ದ
ಕನ್ನಡದ ಭಾಷೆಯಲ್ಲಿ ಕೃತಿ
ಕೀರ್ತನೆಗಳು ರಚಿಸಿಲ್ಲ ಎಂದರೆ
ನಂಬುವುದು ಕಷ್ಟವೆ ಆಗುತ್ತದೆ.
ಈ ಎಲ್ಲಾ
ಕಾರಣಗಳಿಂದ ಮಧ್ವಾಚಾರ್ಯರು ಕೃತಿ
ಕನ್ನಡದಲ್ಲಿ ಬಂದಿರಬಹುದು ಆದರೆ
ನಮಗೆ ಸಿಕ್ಕಿಲ್ಲ ಎನ್ನುವುದೇ
ಸತ್ಯವಾದ ಮಾತು ಎನ್ನುವುದು
ಪ್ರಾಜ್ಞರ ಅನಿಸಿಕೆ ಆಗಿದೆ .
ಗುರು
ಮಧ್ವಾಚಾರ್ಯರಿಂದ ಗೀತಗತಿ ಪಡೆದ
ಹರಿದಾಸ ಸಾಹಿತ್ಯವು ನರಹರಿತೀರ್ಥರಿಂದ
ಆರಂಭವಾಯಿತಾದರೂ, ಅದು
ಇನ್ನೂ ಶೈಶಾವಸ್ಥೆಯಲ್ಲಿ ಇತ್ತು.
ಶ್ರೀ ಪಾದರಾಜರಿಂದ
ಅದಕ್ಕೆ ಮಠ ಮಂದಿರಗಳಲ್ಲಿ ಮಹತ್ವ
ದೊರೆಯಿತು. ಅಲ್ಲಿಯವರೆಗೂ
ಕನ್ನಡಕ್ಕೆ ಮಾನ್ಯತೆ ಇರಲಿಲ್ಲ.
ಜನಸಾಮಾನ್ಯರಿಂದ
ಮತ್ತು ಅವರು ಆಡುವ ಭಾಷೆಯಿಂದ
ದೂರವಾದ ಯಾವುದೇ ಮತ ಪಂಥ ಅದರ
ರಸಮೃತ ಜನಜೀವನದಲ್ಲಿ ಬೆರೆಯಲು
ಸಾಧ್ಯವೇ ಇಲ್ಲ ಎಂಬುದನ್ನು
ಶ್ರೀಪಾದರಾಜರು ಮನಗಂಡರು.ಈ
ದಿಶೆಯಲ್ಲಿ ಸುತ್ತಲೂ ಇದ್ದ ಎಲ್ಲಾ
ಪಟ್ಟಪದ್ರ ಹಿತಾಸಕ್ತಿ ಮನಸ್ಸುಗಳನ್ನು
ಮೆಟ್ಟಿ ನಿಂತರು. ಕೇವಲ
ಸಸಿಯ ರೂಪದಲ್ಲಿ ಇದ್ದ ಹರಿದಾಸ
ಸಾಹಿತ್ಯಕ್ಕೆ ನೀರು ಗೊಬ್ಬರ
ಹಾಕಿ ಪ್ರಬಲವಾಗಿ ಗಟ್ಟಿಯಾಗಿ
ಬೆಳೆಯಲು ತಕ್ಕ ವಾತಾವರಣ ನಿರ್ಮಿಸಿದರು.
Pic -1
ಮುಂದೆ ವ್ಯಾಸರಾಯದಿಂದ ಪ್ರೇರೇಪಿತವಾದ ದಾಸ ಕೂಟ ಇನ್ನಷ್ಟು ಮತ್ತಷ್ಟು ಹರಿದಾಸ ಸಾಹಿತ್ಯವನ್ನು ದಿಗಂತದ ಎತ್ತರಕ್ಕೆ ಬೆಳೆಸಿದರು. ಹರಿದಾಸ ಸಾಹಿತ್ಯಕ್ಕೆ ಪ್ರಬುದ್ಧ ಪಾತ್ರವನ್ನು ಪುರಂದರದಾಸರಿಂದ ಸಾತ್ವಿಕತೆಯ ತಾತ್ವಿಕ ಯಶಸ್ಸು ವಿಜಯದಾಸರಿಂದ ಗಾಂಭೀರ್ಯತೆ ಮತ್ತು ಮಾಧುರ್ಯ ಜಯಶೀಲತೆಯ ಸಾಹಿತ್ಯ ಜಗನ್ನಾಥದಾಸರಿಂದ ಎತ್ತರದ ಮಜಲನ್ನು ಮುಟ್ಟಿತು.
ವಾದಿರಾಜರಂತೂ ವ್ಯಾಸ ಕೂಟ ಮತ್ತು ದಾಸ ಕೂಟಗಳ ನಡುವೆ ಸುಸಂಸ್ಕೃತ ಸೇತುವೆಯಂತೆ ಕಾರ್ಯನಿರ್ವಹಿಸಿದರು. ಆನೆ ನಡೆದದ್ದೇ ದಾರಿ ಎಂಬಂತೆ ಹರಿದಾಸರ ನಡೆದದ್ದಲ್ಲ ಜಾಗವೆಲ್ಲ ತೀರ್ಥಯಾತ್ರೆ, ಅವರ ಸಕಲ ಎಲ್ಲ ಕರ್ಮಗಳು ಹರಿ ಸೇವೆಗೆ ಮೀಸಲು ಆಗಿದೆ. ಹರಿಯ ಹುಚ್ಚು ಹಿಡಿಸಿಕೊಂಡ ಹಲ ಕೆಲವು ಹರಿ ದಾಸರಿಗೆ ಅಪರೋಕ್ಷ ಜ್ಞಾನವು ಸಿದ್ಧಿಸಿತ್ತು. ಅದರ ಪ್ರಸಾದದ ಫಲ ಶೈಕ್ಷಣಿಕ ಸಮಾಜ ದಕ್ಕಿಸಿಕೊಂಡಿತು.
ಇಂತಹ
ಹರಿದಾಸರ ಸಾಹಿತ್ಯ ವೈವಿಧ್ಯಮಯವಾಗಿ
ಸಾಹಿತ್ಯಲೋಕವನ್ನು ಅಲಂಕರಿಸಿದ್ದು
ಜನಸಾಮಾನ್ಯರಿಗೆ ಭಕ್ತಿಯ ರಸಪಾಕದ
ಅಮೃತವನ್ನೇ ಕುಡಿಸಿತು.
ಕೀರ್ತನೆಗಳು
, ಸುಳಾದಿಗಳು
, ಉಗಭೋಗಗಳು
, ದಂಡಕ
ಮುಂಡಿಗೆಗಳು ರಸದೌತಣವನ್ನೇ
ಬಡಿಸಿದವು. ಇನ್ನು
ಕಾವ್ಯ ಪ್ರಭೇದಗಳಲ್ಲಿ ವೃತ್ತನಾಮ
ತ್ರಿಪದಿ ಚೌಪದಿ ಷಟ್ಪದಿ ಸುವ್ವಾಲಿ
ಕಂದಪದ್ಯ ವೈಶಿಷ್ಟತೆ ಸಾಹಿತ್ಯದಲ್ಲಿ
ಮೂಡಿ ಬಂದಿತು. ಈ
ಸಾಹಿತ್ಯ ಭಕ್ತಿಯ ಕಣಜವೇ ಆಗಿದೆ.
ಧರ್ಮ ಶ್ರದ್ಧೆ
ಆತ್ಮ ಉದ್ಧಾರಾಕ್ಕಾಗಿ ಭಾವ
ಶುದ್ದಿಗಾಗಿ ಮನಶುದ್ದಿಗಾಗಿ
ಕಡೆಗೆ ಹೃದಯ ಶುದ್ದಿಗಾಗಿ ಹರಿದಾಸ
ಸಾಹಿತ್ಯ ಉತ್ತಮ ಕೊಡುಗೆಯಾಗಿ
ಸಮಾಜಕ್ಕೆ ಸಿಕ್ಕಿದೆ. ಅದು
ಎಲ್ಲರಲ್ಲಿಯೂ ಎಲ್ಲೆಡೆಯೂ
ಸುಸಂಸ್ಕೃತ ಜೀವನ ತಂದು ಕೊಡುತ್ತದೆ
ಯಾವುದೇ ಸಂಶಯ ಇರುವುದಿಲ್ಲ.
ಕನ್ನಡ
ನಾಡಿಗೆ ಕೀರ್ತಿ ಮತ್ತು ಹೆಮ್ಮೆಯ
ಆಸ್ತಿ ಎನಿಸಿದ ಶ್ರೀ ಮಧ್ವಾಚಾರ್ಯರನ್ನು
ವಿಶ್ವಗುರು ಎಂದು ಅವರ ಭಕ್ತರು
ಅಭಿಮಾನಿಗಳು ಗುರುತಿಸುತ್ತಾರೆ.
ಏಕೆಂದರೆ
ಆಚಾರ್ಯ ಶ್ರೀ ಮಧ್ವರು ಬೋಧಿಸಿದ
ತತ್ವ ಆದರ್ಶ ಸಿದ್ಧಾಂತಗಳು
ಸರ್ವಮಾನ್ಯ ಆಗಿದೆ.ಅವು
ಯಾವುದೋ ಒಂದು ಮತ ಅಥವಾ ಪಂಥಕ್ಕೆ
ಸೀಮಿತವಾಗಿಲ್ಲ. ಸಮಸ್ತ
ಮಾನವ ಕುಲಕ್ಕೆ ಅವು ಮಾರ್ಗದರ್ಶನ
ಮಾಡುತ್ತದೆ.
ಇಂತಹ ಮಧ್ವಾಚಾರ್ಯರ ಜಯಂತಿ ವಿಜಯದಶಮಿ ಹಬ್ಬದ ದಿವಸವೇ ಆಗಿದೆ. ಅವರು ಸಮಸ್ತ ಹಿಂದೂ ಸಮಾಜಕ್ಕೆ ಅಷ್ಟೇ ಅಲ್ಲ ಇಡೀ ಮನುಕುಲಕ್ಕೆ ಮಾರ್ಗದರ್ಶನ ಮಾಡಿದ್ದಾರೆ.
Hanuma -- Bhima --- Madhwa
ಇಂತಹ ಶ್ರೀ ಮಧ್ವಾಚಾರ್ಯ ಗುರುಗಳನ್ನು ಹಲವು ಕೆಲವು ಮತಾಂಧ ಶಕ್ತಿಗಳು, ಮಠದಲ್ಲಿ ಮಡಿಯ ನೆಪದಲ್ಲಿ ಕಟ್ಟಿ ಹಾಕುವ ಪ್ರಯತ್ನ ಹಿಂದೆ ಮಾಡಿದ್ದಾರೆ ಈಗಲೂ ಮಾಡುತ್ತಿದ್ದಾರೆ ಬಹುಶಃ ಮುಂದೆಯೂ ಮಾಡಬಹುದು. ಆದರೆ ಇಂತಹ ಯಾವ ಬಂಧನಗಳಿಂದ ಮಧ್ವಾಚಾರ್ಯರ ವಿಶ್ವ ಮಾನವ ಪ್ರೀತಿಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಅವರ ವಿಚಾರ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ.
ಆದರೂ ಇತ್ತೀಚೆಗೆ ಹಲವು ವರ್ಷಗಳಿಂದ ಅನೇಕ ಮಾಧ್ಯ ತತ್ವಶಾಸ್ತ್ರದಲ್ಲಿ ಮತ್ತು ಸಂಪ್ರದಾಯದಲ್ಲಿ ಸಂಶೋಧನೆ ಮಾಡಿದ ವಿದ್ವಾಂಸರು ಪಂಡಿತರು ಆಚಾರ್ಯ ಶ್ರೀ ಮಧ್ವರನ್ನು ಮತ್ತು ಅವರ ಗ್ರಂಥಗಳನ್ನು ವಿಶ್ವಮಟ್ಟಕ್ಕೆ ಪರಿಚಯ ಮಾಡುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿಯ
ಅಷ್ಟಮಠಗಳಲ್ಲಿ ಪ್ರಖ್ಯಾತವಾದ
ಪುತ್ತಿಗೆ ಮಠ ಅದರ ಶ್ರೀ ಪಾದಂಗಳವರು
ಒಬ್ಬ ಸ್ವಾಮೀಜಿಯಾಗಿ ವಿಶ್ವಪರ್ಯಾಟನೆ
ಮಾಡುತ್ತಾ ವಿದೇಶಗಳಲ್ಲಿ ಕೃಷ್ಣಮಠ
ಕಟ್ಟಿ ಶ್ರೀ ಮಧ್ವಾಚಾರ್ಯರ ಮತ್ತು
ಅವರ ಗ್ರಂಥಗಳನ್ನು ಸತತವಾಗಿ
ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಉಡುಪಿಯ
ಅಷ್ಟಮಠಗಳನ್ನು ಸ್ವತಹ ಶ್ರೀ
ಮದ್ವಾಚಾರ್ಯರೇ ಶ್ರೀ ಕೃಷ್ಣನ
ಸೇವೆಗಾಗಿ ಕಟ್ಟಿದರು.
ಅಲ್ಲಿಂದ
ಇಲ್ಲಿಯವರೆಗೂ ಪ್ರತಿಯೊಂದೂ
ಅಷ್ಟಮಠವು ಕ್ರಮಬದ್ಧವಾಗಿ
ಶ್ರೀಕೃಷ್ಣನ ಸೇವೆ ಮಾಡುತ್ತ--
ಪೂಜೆಯ ಸೇವಾ
ಅವಧಿ ಎರಡು ವರ್ಷ ಇರುತ್ತದೆ.
ಶ್ರೀ
ಕೃಷ್ಣಾರ್ಪಣಮಸ್ತು --- ಹರೇ
ಶ್ರೀನಿವಾಸ.
---------- Hari Om -------