ಶ್ರೀ ಪುರಂದರದಾಸರು ------ Sri Purandara dasaru
Sri Purandara Dasaru
ಮನ್ಮನೋಭೀಷ್ಟವರದಂ
ಸರ್ವಾಭೀಷ್ಟ ಫಲಪ್ರದಮ್ l
ಪುರಂದರಗುರುಂ
ವಂದೇ ದಾಸಶ್ರೇಷ್ಠಮ್ ದಯಾನಿಧಿಮ್
ll
ನಾರದ
ಮುನಿ ಹರಿಯಾಜ್ಞೆಯಿಂದಲಿ ಪುರಂದರ
ದಾಸರಾಗಿ ಜನಿಸಿದ|
ದಾಸವರ್ಯರಿಗೊಂದಿಪೆ||
ನಾರಾಯಣನ
ದಿವ್ಯ ನಾಮದ ಮಹಿಮೆ ಮೂರು ಲೋಕಗಳಲ್ಲಿ
ಹರುಹಿದ|
ದಾಸ
ವರ್ಯರಿಗೊಂದಿಪೆ|
ದಾಸವರ್ಯರ
ಪಾದಕ್ಕೆರಗಿ ಜನ್ಮಾಂತರದ ದೋಷವ
ಪರಿಹರಿಸಿಕೊಂಬೆ||
ದಾಸರೆಂದರೆ
ಪುರಂದರ ದಾಸರಯ್ಯ -----
ಇಂದು ಅವರ
ಆರಾಧನಾ ದಿನ - 29th
January 2025
Pic - 1
ಪುರಂದರಗಡದಲ್ಲಿ
ವರದಪ್ಪನಾಯಕ ಮತ್ತು ಲಕ್ಷ್ಮಮ್ಮ
ಎನ್ನುವ ದಂಪತಿಗಳಿಗೆ
ಅವರ
ಮಗನಾಗಿ ಜನಿಸಿ ಶ್ರೀನಿವಾಸ ಎಂಬ
ನಾಮದಿಂದ ಪ್ರಸಿದ್ಧಿಯಾದರು.
ಶ್ರೀ
ಕೃಷ್ಣ ದೇವರಾಯನ ಕಾಲದಲ್ಲಿ
ಅರಮನೆಗೆ ವಜ್ರ ವೈಡೂರ್ಯ ಮುಂತಾದ
ಆಭರಣಗಳನ್ನು ನೇರವಾಗಿ ಮಾರಾಟ
ಮಾಡುವದು ಇವರ ವೃತ್ತಿ.
ಆಭರಣಗಳನ್ನು
ಮಾರಾಟ ಮಾಡುತ್ತಾ ಇದ್ದರಿಂದ
ನವಕೋಟಿ ನಾರಾಯಣ ಎನ್ನುವ ಹೆಸರು
ಬಂತು.
ದ್ರವ್ಯದ
ಈ ಸಂಬಂಧ ಇವರಿಂದ ಕಡಿದು ಹಾಕುವುದಕ್ಕೆ
ಶ್ರೀ ಹರಿ ವೃದ್ದ ಬ್ರಾಹ್ಮಣ ನಾಗಿ
ರೂಪ ಧರಿಸಿ ತನ್ನ ಮಗನ ಮುಂಜಿಗೊಸ್ಕರ
ಹಣ ಕೇಳುವ ದಕ್ಕೆ ಯಾಚಕನಂತೆ ಆರು
ತಿಂಗಳು ಅವರ ಅಂಗಡಿಗೆ ತಿರುಗುತ್ತಾನೆ.
ಆದರು ಅವರು
ಕೊಡಲಿಲ್ಲ. ಭಗವಂತ
ಬಿಡಲಿಲ್ಲ. ಕೊನೆಗೆ
ಶೀನಪ್ಪ ನಾಯಕರಿಗೆ ಬೇಸರವಾಗಿ
ಸವಕಳಿ ಹೊಂದಿದ ನಾಣ್ಯಗಳು ಇರುವ
ಚೀಲವನ್ನು ಭಗವಂತನ ಮುಂದೆ ಹಾಕಿ
ಇದರಲೊಂದು ದುಡ್ಡು ತೆಗೆದುಕೊಂಡು
ಹೋಗು ಅಂತ ಹೇಳಿದರು.
ಭಗವಂತನು
ಅದರಲ್ಲಿ ಯಾವುದೇ ಹಣ ತೆಗದುಕೊಳ್ಳದೇ
ನೇರವಾಗಿ ಅವರ ಪತ್ನಿಯಾದ ಸರಸ್ವತಿ
ಬಾಯಿಯ ಬಳಿ ದ್ರವ್ಯ ಸಹಾಯವನ್ನು
ಯಾಚಿಸಿದಾಗ ಆ ಹೆಣ್ಣು ಮಗಳು ತನ್ನ
ಬಳಿ ಇದ್ದ ಮುತ್ತಿನ ಮೂಗುತಿಯನ್ನು
ಭಗವಂತನಿಗೆ ದಾನ ಮಾಡುತ್ತಾಳೆ
ಮತ್ತೆ ಆ ಮೂಗುತಿಯನ್ನು ಮಾರಾಟ
ಮಾಡಲು ಅವರ ಅಂಗಡಿಗೆ ಭಗವಂತನು
ಹೋದಾಗ,ಇದು
ತಮ್ಮ ಪತ್ನಿಯ ಮೂಗುತಿ ಅಂತ ಸಂದೇಹ
ಬಂದು ಅಲ್ಲಿ ಅಂಗಡಿಯಲ್ಲಿ ಆ
ಬ್ರಾಹ್ಮಣ ರೂಪಿ ಪರಮಾತ್ಮನನ್ನು
ಕೂಡಿಸಿ ಆ ಮುತ್ತಿನ ಮೂಗುತಿಯನ್ನು
ಭದ್ರವಾಗಿ ಪೆಟ್ಟಿಗೆಯಲ್ಲಿ
ಇಟ್ಟು ಮನೆಗೆ ಬಂದು ಹೆಂಡತಿಗೆ
ಕೇಳಿದಾಗ
ಆ
ಹೆಣ್ಣು ಮಗಳು ದಾನ ಕೊಟ್ಟ ವಿಷಯ
ತಿಳಿದರೆ ಇನ್ನೂ ದೊಡ್ಡ ಹಗರಣವಾಗಬಹುದು!!
ದಾನ
ಮಾಡಿದ್ದು ಗೊತ್ತಾಗಬಾರದು.ಈ
ರೀತಿಯಲ್ಲಿ ಅಪಮಾನ ಆಗುವದರ ಬದಲು
ಸಾಯುವದೇ ಮೇಲೆಂದು ವಿಷವನ್ನು
ಕುಡಿಯಲು ಬಟ್ಟಲು ಎತ್ತಿದಾಗ
ಶ್ರೀ ಹರಿ ಅದರಲ್ಲಿ ಮೂಗುತಿ
ಹಾಕುತ್ತಾನೆ... ತಕ್ಷಣ
ತಮ್ಮ ಪತಿಗೆ ಬಂದು ತೋರಿಸಲು,
ಅದನ್ನು
ತೆಗೆದುಕೊಂಡು ಅಂಗಡಿಗೆ ಬಂದಾಗ
ಅಲ್ಲಿ ಪೆಟ್ಟಿಗೆ ಯಲ್ಲಿ ಮೂಗುತಿ
ಇರುವದಿಲ್ಲ.ಮತ್ತು
ಬ್ರಾಹ್ಮಣ ಸಹ ಮಾಯವಾಗಿದ್ದ.
Pic -2
ಬಹು ಸೋಜಿಗದಿಂದ
ಹೆಂಡತಿಗೆ ಕೇಳಿದಾಗ ನಡೆದ ಸಂಗತಿ
ತಿಳಿದು, ತಮ್ಮ
ಸಂಪತ್ತಿನ ಮೇಲೆ ವಿರಕ್ತ ರಾಗಿ
ಎಲ್ಲಾ ಸಮಸ್ತ ಆಸ್ತಿಯನ್ನು ದಾನ
ಮಾಡಿ ಕುಟುಂಬ ಸಮೇತರಾಗಿ ಪಂಡರಿನಾಥನ
ಬಳಿ ಬರುತ್ತಾರೆ. ಪಾಂಡುರಂಗ
ನ ಬಳಿ ಬಂದಾಗ ಸ್ವಪ್ನದಲ್ಲಿ
ಶ್ರೀವಿಠ್ಠಲದೇವರು ಬಂದು
ವಿಜಯನಗರ
ದಲ್ಲಿ ಇರುವ ಶ್ರೀವ್ಯಾಸರಾಯರು
ನಿನಗೆ ಗುರುಗಳು. ಅವರ
ಬಳಿ ಅಂಕಿತ ತೆಗೆದುಕೊಂಡು ನನ್ನ
ದಾಸನಾಗು ಎಂದು ಸೂಚಿಸಲು ವಿಜಯನಗರ
ಕ್ಕೆ ಬಂದು ಗುರು ವ್ಯಾಸರಾಯರಿಂದ
* ಪುರಂದರ
ವಿಠ್ಠಲ * ಎಂಬ
ಅಂಕಿತ ತೆಗೆದುಕೊಂಡು ಅನೇಕ
ಕೃತಿಗಳನ್ನು ರಚಿಸಿದ್ದಾರೆ.
ಒಟ್ಟು
4,75,೦೦೦
ಕೃತಿಗಳನ್ನು ದಾಸರು ರಚಿಸಿದ್ದಾರೆ.
5ಲಕ್ಷ
ಕೃತಿಗಳನ್ನು ರಚಿಸಬೇಕೆಂಬ ಸಂಕಲ್ಪ.
ಆದರೇನು
ಮಾಡುವದು.ಹರಿ
ಇಚ್ಚೆ. ಉಳಿದ
25,೦೦೦
ಕೃತಿಗಳನ್ನು ತಮ್ಮ ಮಕ್ಕಳಾದ
ಗುರು ಮಧ್ವ ಪತಿಗೆ ಮುಂದಿನ ಜನ್ಮ
ದಲ್ಲಿ ರಚಿಸಿ ಪರಿಪೂರ್ಣ ಗೊಳಿಸಲು
ಹೇಳುತ್ತಾರೆ.
ಅವರೇ
ಮುಂದೆ ಶ್ರೀವಿಜಯದಾಸರಾಗಿ ಅವತರಿಸಿ
ಅದನ್ನು ಸಂಪೂರ್ಣಗೊಳಿಸುತ್ತಾರೆ.
ಶ್ರೀಪುರಂದರ
ದಾಸರು ತಮ್ಮ ಕೊನೆಯ ಕಾಲದಲ್ಲಿ
ವಿಜಯನಗರ ದಲ್ಲಿ ವಾಸವಾಗಿದ್ದು
ಶಾ.ಶಕ
ರಕ್ತಾಕ್ಷಿ ಸಂವತ್ಸರ ಪುಷ್ಯ
ಬಹುಳ ಅಮವಾಸ್ಯೆ ಭಾನುವಾರ
ಶುಭದಿನದಂದು ತಮ್ಮ ಅವತಾರವನ್ನು
ಸಮಾಪ್ತಗೊಳಿಸಿದರು.
ರಾಯರ
ಭಾಗ್ಯವಿದು ಪುರಂದರ ರಾಯರ
ಭಾಗ್ಯವಿದು|
ಶ್ರೀಯರಸನ
ಪ್ರಿಯ ಪುರಂದರ ರಾಯರ ಭಾಗ್ಯವಿದು||
ನಾರದ
ಮುನಿ ಕರದಲಿ ವೀಣಾ ಧಾರಿಯಾಗಿ
ಧರಾತಳದೊಳಗೆ|
ಶ್ರೀ
ರಮಣನ ವಿಸ್ತರಾ ಮಹಿಮೆಯನು|
ಬೀರುತ
ಭವ ಮಂದಿರ ಪೊಕ್ಕಾ||
ದಾಸೋತ್ತಮರ
ವಿಶೇಷ ಮಹಿಮೆಗಳ
ನೇಸು
ಜನ್ಮದಿ ಪೇಳಲೊಶವಲ್ಲ|
ವಾಸುದೇವ
ಪ್ರಾಣೇಶ ವಿಠ್ಠಲ|
ಪ್ರಕಾಶಿಪ
ಮನದಲ್ಲಿ ಇವರ ನಂಬಿದರೆ||
Purandara Dasara Mantapa in Hampi
ಶ್ರೀಪುರಂದರದಾಸರು 'ದಾಸನೆಂತಾಗುವೆನು ಧರೆಯೊಳಗೆ ನಾನು' ಎಂದು ತಮ್ಮ ಅಳಲನ್ನು ತೋಡಿಕೊಂಡರು. ತಮ್ಮ ಮನೋಧರ್ಮ, ಸಾಧನೆಗೆ ಬಂದ ಅಡ್ಡಿಗಳನ್ನು ತೋಲಗಿಸಿಕೊಂಡು ಆಡಿದ ಮಾತು.
Pic - 4
ದಾಸನ್ನ
ಮಾಡಿಕೊ ಎನ್ನ ಸ್ವಾಮಿ l
ಸಾಸಿರ
ನಾಮದ ವೆಂಕಟರಮಣ ll ಪ
ll
ಹೇ
ಸ್ವಾಮಿ ! ನೀನು
ಈಶ, ಅದಕ್ಕೇ
ನನ್ನನ್ನು ದಾಸನನ್ನಾಗಿಸಿಕೊಂಡು
ಉದ್ಧರಿಸೆಂದು ಬೇಡಿದರು ದಾಸರು.
'ದಾಸನ್ನ
ಮಾಡಿಕೊ ಎನ್ನ' ಈ
ಕೂಗು ಎಲ್ಲ ಸಜ್ಜನರದ್ದಾಗಲೆಂದು
ದಾಸರು ಸೂಚಿಸುವರು. ಇದಕ್ಕೆ
ಕಾರಣ ಕೊಡದೆ ಸುಮ್ಮನಾಗಲಿಲ್ಲ
ದಾಸರು. ನನ್ನ
ದುರಿತರಾಶಿಗಳೆಲ್ಲವನು ಕಳಿ ಎಂದು
ಪ್ರಾರ್ಥಿಸುವರು.
ದುರುಳ
ಬುದ್ಧಿಗಳನ್ನೆಲ್ಲ ಬಿಡಿಸೋ
ನಿನ್ನ
ಕರುಣ
ಕವಚವೆನ್ನ ಹರಣಕ್ಕೆ ತೊಡಿಸೊ
ಚರಣ
ಸೇವೆ ಎನಗೆ ಕೊಡಿಸೊ ಅಭಯ
ಕರಪುಷ್ಪ
ಎನ್ನಯ ಶಿರದೊಳು ಮುಡಿಸೊ ll
1 ll
ಜೀವನವನ್ನು
ಸನ್ಮಾರ್ಗದಲ್ಲಿ ರೂಪಿಸಿಕೊಳ್ಳಲು
ಆಡಿದ ಮಾತುಗಳಿವು. 'ನಾನು
ನಿಜಾರ್ಥದಲ್ಲಿ ದಾಸನೆನಿಸಲು,
ನನ್ನಲ್ಲಿರುವ
ದೋಷಗಳನ್ನು ನೀನೇ ನಿವಾರಿಸು'
ಎನ್ನುವರು.
ಭಗವಂತನ
ಕರುಣೆಯ ಕವಚ ಹರಣಕ್ಕೆ (ಪ್ರಾಣಕ್ಕೆ)
ಇರಲಿ ಎನ್ನುವರು.
ಜೊತೆಗೆ
ಭಯಗ್ರಸ್ತನಾದ ನನಗೆ ನಿನ್ನ ಅಭಯ
ಹಸ್ತವಿರಲೆನ್ನುವರು.
Pic -5
ದೃಢಭಕ್ತಿ
ನಿನ್ನಲ್ಲಿ ಬೇಡಿ ದೇವ
ಅಡಿಗೆರಗುವೆನಯ್ಯ
ಅನುದಿನ ಪಾಡಿ l
ಕಡೆಗಣ್ಣಲೇಕೆನ್ನ
ನೋಡಿ ಬಿಡುವೆ l
ಕೊಡು
ನಿನ್ನ ಧ್ಯಾನವ ಮನ ಶುಚಿ ಮಾಡಿ
ll 2 ll
ಶ್ರೀಹರಿಯ
ಒಲುಮೆ ಬೇಕಾದಲ್ಲಿ ಅವನಲ್ಲಿ
ಅಚಲವಾದ, ನೀರ್ವ್ಯಾಜಭಕ್ತಿ
ಇರಬೇಕು. ಮಹಾತ್ಮ್ಯಜ್ಞಾನಪೂರ್ವಕದ
ಭಕ್ತಿಬೇಕು. ಅದನ್ನೂ
ನೀನೆ ದಯಪಾಲಿಸು ಎಂದರು.
ಶುದ್ಧಮನಸ್ಕನಾಗಿ
ಮಾಡುವ ಸಾಧನೆ ಮಾತ್ರ ಫಲದಾಯಕ.
ಅದನ್ನೇ
ಬೇಡುವರು.
Pic - 6
ಮೊರೆಹೊಕ್ಕವರ
ಕಾಯ್ವ ಬಿರುದು ನೀ
ಮರೆಯದಲೆ
ರಕ್ಷಣೆ ಮಾಡೆನ್ನ ಪೊರೆದು
ದುರಿತ
ರಾಶಿಗಳೆಲ್ಲ ತರಿದು ಸ್ವಾಮಿ
ಪುರಂದರವಿಟ್ಠಲ
ಕರುಣದಿ ಕರೆದು ll 3 ll -
ಶ್ರೀಪುರಂದರದಾಸರು.
'ಶ್ರೀಹರಿ
ಭಕ್ತವತ್ಸಲ, ಅನಿಮಿತ್ತಬಂಧು,
ಕರುಣಾಸಾಗರ,
ದಯಾಮಯ,
ಪರಮಾಪ್ತ
ಇಂತೆಲ್ಲಾ ವಾಸ್ತವಿಕೆ ಇರಲು
ನನ್ನನ್ನು ನಿನ್ನ ಭಕ್ತನೆಂದು
ಪರಿಗಣಿಸಿ ರಕ್ಷಿಸು ದೇವ'
ಎಂದು ಕೇಳುವರು.
ಇದಕ್ಕೆಲ್ಲಾ
ಮೊದಲು ನನ್ನನ್ನು ದಾಸನನ್ನಾಗಿ
ಸ್ವೀಕರಿಸು ಎಂದು. ಈ
ಕೊರಗು ಜೊತೆಗೆ ಕೂಗು ನಮ್ಮದಾಗಬೇಕು.
ಆಗ ಮಾತ್ರ
ತೇರ್ಗಡೆ - ಉದ್ಧಾರ.
ಶ್ರೀ ಕೃಷ್ಣಾರ್ಪಣಮಸ್ತು -------- Hari Om -------