Saturday, October 5, 2024

Navaratri -- Akanda Jyothi or Deepa

 

ಅಖಂಡ ಜ್ಯೋತಿ or ದೀಪ ------ Akanda Jyothi or Deepa


Rules & Regulation’s of One must be follow while Burning Akanda Jyothi Lamp 

 

                                                     Akanda Jyothi or Deepa


 

ನವರಾತ್ರಿಯ ಸಮಯಯಲ್ಲಿ "ಅಖಂಡ ಜ್ಯೋತಿ" ಬೆಳಗುವುದೇಕೆ ? ಈ ಧಾರ್ಮಿಕ ನಿಯಮಗಳನ್ನು ಪಾಲಿಸಲೇಬೇಕು

ನವರಾತ್ರಿಯ ಸಮಯದಲ್ಲಿ ಬಹುತೇಕ ಮನೆಗಳಲ್ಲಿ ಅಖಂಡ ಜ್ಯೋತಿ ಬೆಳಗುತ್ತಿರುತ್ತದೆ. ಅಖಂಡ ಜ್ಯೋತಿ ಎಂದರೆ ಹಚ್ಚಿದ ದೀಪ 9 ದಿನಗಳ ಕಾಲ ನಿರಂತರವಾಗಿ ಉರಿಯುತ್ತಲೇ ಇರಬೇಕು. ಅಖಂಡ ಜ್ಯೋತಿ ಬೆಳಗಿದರೆ ಮನೆಗೆ ಬಹಳ ಒಳ್ಳೆಯದು, ಆದರೆ ಅಷ್ಟೇ ಎಚ್ಚರಿಕೆವಹಿಸಬೇಕಾಗಿದೆ, ಯಾರಾದರೂ ಒಬ್ಬರು ಮನೆಯಲ್ಲಿ ದೀಪ ಕೆಡದಂತೆ ಜಾಗ್ರತೆವಹಿಸಬೇಕು.

ಅಖಂಡ ಜ್ಯೋತಿಯ ಮಹತ್ವ :


ಅಖಂಡ ಜ್ಯೋತಿಯನ್ನು ಒಂಭತ್ತು ದಿನಗಳವರೆಗೆ ಬೆಳಗುವುದರಿಂದ ದೇವಿಯ ಕೃಪೆ ಆ ಮನೆಯ ಮೇಲಿರುತ್ತದೆ. ಇದರಿಂದ ನಿಮ್ಮ ಎಲ್ಲಾ ಕಾರ್ಯದಲ್ಲಿ ಯಶಸ್ಸು ಪಡೆಯುತ್ತೀರಿ, ದೇವಿಯ ಕೃಪೆಯಿಂದಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ, ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುವುದು.

 

                                                                                Pic -1

 

 

ನವರಾತ್ರಿ ಅಖಂಡ ಜ್ಯೋತಿ ಹೇಗೆ ಹಚ್ಚಬೇಕು ?


ಅಖಂಡ ಜ್ಯೋತಿಗೆ ನೀವು ದಪ್ಪವಾದ ಬತ್ತಿ ಬಳಸಬೇಕು
ಹಿತ್ತಾಳೆ, ತಾಮ್ರ, ಬೆಳ್ಳಿ ಅಥವಾ ಮಣ್ಣಿನ ದೀಪ ಬೆಳಗಿಸಬಹುದು
ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಹಸುವಿನ ಶುದ್ಧ ತುಪ್ಪ ಬಳಸಬಹುದು


ಅಖಂಡ ಜ್ಯೋತಿ ಹಚ್ಚಿಡುವ ಕಡೆ ಸ್ವಚ್ಛ ಮಾಡಿ ಅಲ್ಲಿ ಅಷ್ಟದಳ ಬರೆದು, ಅದರಲ್ಲಿ ದೀಪವನ್ನು ಇಡಬೇಕು. ದುರ್ಗಾ ದೇವಿಯ ಬಲಭಾಗದಲ್ಲಿ ದೀಪವನ್ನು ಹಚ್ಚಬೇಕು, ಎಡಭಾಗದಲ್ಲಿ ಪೂಜೆಗೆಬಳಸುವ ಎಣ್ಣೆಯನ್ನು ಇಡಬೇಕು. ಎಣ್ಣೆ ದೀಪವಾದರೆ ಅಷ್ಟ ದಳದ ಎಡಭಾಗದ ತುಪ್ಪದ ದೀಪವಾದರೆ ಅಷ್ಟದಳದ ಬಲಭಾಗ ಹಚ್ಚಿಡಬೇಕು.


ದೇವಿ ಮಂತ್ರವನ್ನು ಹೇಳುತ್ತಾ ಶುಭ ಸಮಯದಲ್ಲಿ ದೀಪವನ್ನು ಬೆಳಗಿಸಬೇಕು.


ಏನು ಮಾಡಬೇಕು ?


ತುಂಬಾ ಭಕ್ತಿ ಹಾಗೂ ಶ್ರದ್ಧೆಯಿಂದ ದೀಪವನ್ನು ಹಚ್ಚಬೇಕು


ಬತ್ತಿ ದಪ್ಪವಾಗಿರಬೇಕು, ಒಂಭತ್ತು ದಿನಗಳು ಬರುವಷ್ಟು ಉದ್ದವಿರಬೇಕು


ದೀಪ ಯಾವಾಗಲೂ ಬೆಳಗುವಂತೆ ನೋಡಿಕೊಳ್ಳಿ


ಎಣ್ಣೆ ಅಥವಾ ತುಪ್ಪ ಕಡಿಮೆಯಾಗಲು ಬಿಡಬೇಡಿ, ದೀಪಕ್ಕೆ ಆಗಾಗ ಹಾಕುತ್ತಲೇ ಇರಿ,

ರಾತ್ರಿಯಲ್ಲೂ ಅಷ್ಟೇ.


ಅವಶ್ಯಕತೆ ಇದ್ದರೆ, ಅಖಂಡ ದೀಪವನ್ನು ಗಾಜಿನಿಂದ ಮುಚ್ಚಿ ಮಾಡಿ, ಇದರಿಂದ ಗಾಳಿ ಬೀಸಿದಾಗ ಆರುವುದಿಲ್ಲ ಬತ್ತಿಯನ್ನು ಸರಿಪಡಿಸುವಾಗ, ಎಣ್ಣೆ ಹಾಕುವಾಗ ಬತ್ತಿ ಕೆಡದಂತೆ ನೋಡಿಕೊಳ್ಳಿ.
9 ದಿನಗಳು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು.

 

                                                                          Pic-2

 

 

ದೀಪವನ್ನು ಊದಿ ಕೆಡಿಸಬಾರದು, ಮಕ್ಕಳು ಅದರ ಸುತ್ತ ಆಡದಂತೆ ಜಾಗ್ರತೆವಹಿಸಿ


ಗಟ್ಟಿ ತುಪ್ಪವನ್ನು ಹಾಕಬೇಡಿ, ಕರಗಿಸಿ ಹಾಕಿದರೆ ಒಳ್ಳೆಯದು
ದೀಪದ ಪಕ್ಕದ ಗೋಡೆ ಟಾಯ್ಲೆಟ್‌, ಬಾತ್‌ರೂಂ ಆಗಿರಬಾರದು
ಅಖಂಡ ಜ್ಯೋತಿ ಹಚ್ಚಿದ ಮೇಲೆ ಅದರ ಬಗ್ಗೆ ನಿರ್ಲಕ್ಷ್ಯ ಮಾಡಲೇಬೇಡಿ.
ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್ ಬಳಸಬಾರದು
ಇಟ್ಟ ದೀಪವನ್ನು 9 ದಿನಗಳವರೆಗೆ ಅಲುಗಾಡಿಸಬಾರದು
ದಂಪತಿಗಳು 9 ದಿನ ವ್ರತ ನಿಯಮ ಪಾಲಿಸಬೇಕು, ದೈಹಿಕ ಸಂಪರ್ಕ ಮಾಡಬಾರದು.

 

Happy Navaratri    _--- Hari Om -----

 

 



No comments:

Post a Comment