Wednesday, October 25, 2023

Seege Gowri Vritha

 

ಸೀಗೆ ಗೌರೀವ್ರತ / Seege Gowri Vritha


From 26th October 2023 to 30th October 2023 ( 5 Days )

 

 

Seege Gowri Vritha 

 

ಆಶ್ವಿನ - ಶುಕ್ಲ - ದ್ವಾದಶಿಯಿಂದ ಆರಂಭಿಸಿ ಪೂರ್ಣಿಮಾ ಪರ್ಯಂತವಾಗಿ ಐದು ದಿನಗಳವರೆಗೂ ಸೀಗೆ ಗೌರಿವ್ರತವನ್ನು ಆಚರಿಸುವ ಪದ್ಧತಿಯಿದೆ. ಇದೊಂದು ಸಾಂಪ್ರದಾಯಿಕ ವ್ರತವಾಗಿದೆ. ಇದನ್ನು ಆಚರಿಸುವ ಕ್ರಮವು ಹೀಗಿದೆ –



ಆಶ್ವಿನ-ದ್ವಾದಶಿಯಂದು ಮರದಿಂದ ಏಳು ಸುತ್ತುಗಳುಳ್ಳ ಗೋಪುರಾಕಾರವಾಗಿ (ಹನುಮನ ಬಾಲವನ್ನು ಒಂದರ ಮೇಲೊಂದು ಪೇರಿಸಿದಂತೆ) ತಯಾರಿಸಿದ್ದು, ಒಂಭತ್ತು ಸುತ್ತುಗಳುಳ್ಳ ಮತ್ತೊಂದನ್ನು ತಯಾರಿಸಿ. ಶಂಕರ, ಗೌರಿಯನ್ನು ಆವಾಹಿಸಬೇಕು. ಒಂಭತ್ತು ಹಾಗೂ ಏಳು ಸುತ್ತುಗಳಲ್ಲಿ ಒಂದು ಅರಷಿಣ ಇನ್ನೊಂದು ಕುಂಕುಮ ಬಣ್ಣವಿರಬೇಕು.  

 

ಇವುಗಳನ್ನು ಮಣ್ಣಿನಿಂದಲೂ ತಯಾರಿಸಿ ಪೂಜಿಸುವವರಿದ್ದಾರೆ. ಮರದಿಂದ ತಯಾರಿಸಿದರೆ ಪ್ರತಿವರ್ಷವೂ ತಯಾರಿಸುವ ತೊಂದರೆ ಇರುವುದಿಲ್ಲ. ಮರದಿಂದ ತಯಾರಿಸಿದ ಗೋಪುರಗಳ ಮೇಲೆ ಒಂದು ಕೊಂತಿಯನ್ನು ಇಟ್ಟಿರಬೇಕು. ಇವುಗಳ ಮುಂದೆ ಮಣ್ಣಿನಿಂದ ತಯಾರಾದ ಸಣ್ಣ ಸಣ್ಣ ಹೂಜೀ ಆಕಾರದ ಕೊಂತಿಗಳನ್ನು ಇಟ್ಟಿರಬೇಕು. ಇವುಗಳನ್ನು ಇಟ್ಟು ಗೌರೀ ಶಂಕರನನ್ನು ಆವಾಹಿಸಿ ಪೂಜಿಸಬೇಕು.



ಪ್ರತಿದಿನ ಸಂಜೆ ನೈವೇದ್ಯಕ್ಕಾಗಿ ತಿಂಡಿತಿನಿಸುಗಳನ್ನು ಮಾಡಿ, ಅದನ್ನು ಚಿಕ್ಕ ಚಿಕ್ಕ ಮಕ್ಕಳಿಗೆ ಕೊಡಬೇಕು. ಪ್ರತಿದಿವಸವೂ ಸಂಜೆ ಹಾಡು ಆರತಿಯಾಗಬೇಕು. ದೀಪದ ಆರತಿಯನ್ನು ಇಲ್ಲಿ ಎತ್ತಬಾರದು. ಕೊಬ್ಬರಿ ಸಕ್ಕರೆ, ಬೆಲ್ಲ ಕೊಬ್ಬರಿ, ಕಳ್ಳೆಹಿಟ್ಟು, ತುಪ್ಪ, ಸಕ್ಕರೆ ಇವುಗಳನ್ನು ತಟ್ಟೆಯಲ್ಲಿ ದೀಪದಾಕಾರ ಮಾಡಿ ಆರತಿಯನ್ನು ಎತ್ತಿ ಚಿಕ್ಕ ಮಕ್ಕಳಿಗೆ ಕೊಡುವುದು. ವಿವಾಹವಾದ ಮೇಲೆ ಮಂಗಳ ಗೌರಿಯು ವ್ರತವಿದ್ದಂತೆ ಮದುವೆಗೆ ಮುನ್ನ ಗೌರಿಯ ಅನುಗ್ರಹಕ್ಕಾಗಿ ಮಾಡುವ ವ್ರತವಿದು 

ಸೀಗೆ ಪೂರ್ಣಿಮೆ ದಿನ ನದಿಯ ತೀರ, ಬಾವಿ, ಸರೋವರ ಇವುಗಳಲ್ಲಿ ಯಾವುದಾದರೊಂದು ಸ್ಥಳಕ್ಕೆ ವಾದ್ಯ ಸಹಿತವಾಗಿ ಸೀಗೆ ಗೌರಿಯನ್ನು ಕರೆದುಕೊಂಡು ಹೋಗಿ ಅವಲಕ್ಕಿ ಮೊಸರು ನಿವೇದಿಸಿ, ವಿಶೇಷ ಪೂಜೆಯನ್ನು ಮಾಡಿ, ಮುತ್ತೈದೆಯರಿಗೆ ಅವಲಕ್ಕಿ ಪ್ರಸಾದವನ್ನು ನೀಡಿ, ಆ ಮಣ್ಣಿನ ಚಿಕ್ಕ ಚಿಕ್ಕ ಕೊಂತಿಗಳನ್ನು ನೀರಿನಲ್ಲಿ ವಿಸರ್ಜಿಸಬೇಕು. ಮರದ ಗೌರಿಯನ್ನು ನದಿಯಾದರೆ ಸ್ನಾನ ಮಾಡಿಸಿ ತರುವುದು.

 

--------------- Hari Om ---------------



 


No comments:

Post a Comment