Pitru Loka , Day & Night Calculation
ಪಿತೃಪಕ್ಷದಲ್ಲಿನ ಶಾದ್ಧ or Pitru Loka , Human Days &
Night Calculations.
ಹಿಂದೂ ಧರ್ಮದಲ್ಲಿ ಹೇಳಿದಂತೆ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ
ಒಂದೆಂದರೆ ‘ದೇವಋಣ, ಋಷಿಋಣ, ಪಿತೃಋಣ ಹಾಗೂ ಸಮಾಜಋಣ ಈ
ನಾಲ್ಕೂ ಋಣಗಳನ್ನು ತೀರಿಸುವುದು. ಇವುಗಳಲ್ಲಿ ಪಿತೃಋಣವನ್ನು ತೀರಿಸಲು
‘ಶ್ರಾದ್ಧ ಮಾಡುವುದು ಅಗತ್ಯವಾಗಿರುತ್ತದೆ. ತಾಯಿ-ತಂದೆ ಹಾಗೂ ಆಪ್ತರ
ಮೃತ್ಯುವಿನ ಬಳಿಕದ ಅವರ ಪ್ರವಾಸ ಸುಖಮಯ ಹಾಗೂ ದುಃಖವಿಲ್ಲದಂತೆ
ಸಾಗಲಿ, ಅವರಿಗೆ ಸದ್ಗತಿ ಸಿಗಲಿ ಎಂದು ಮಾಡುವ ಸಂಸ್ಕಾರವೆಂದರೆ ‘ಶ್ರಾದ್ಧ.
ಶ್ರಾದ್ಧದಲ್ಲಿನ ಮಂತ್ರೋಚ್ಛಾರಗಳಲ್ಲಿ ಪಿತೃಗಳಿಗೆ ಗತಿ ಸಿಗುವ ಸೂಕ್ಷ್ಮ ಶಕ್ತಿ
ಸಮಾವೇಶಗೊಂಡಿರುತ್ತದೆ. ಶ್ರಾದ್ಧದಲ್ಲಿ ಪಿತೃಗಳಿಗೆ ಹವಿರ್ಭಾಗ ನೀಡುವುದರಿಂದ
ಅವರು ಸಂತುಷ್ಟರಾಗುತ್ತಾರೆ ತದ್ವಿರುದ್ಧ ಶ್ರಾದ್ಧ ಮಾಡದಿದ್ದರೆ ಪಿತೃಗಳ ಇಚ್ಛೆ
ಅತೃಪ್ತವಾಗಿ ಉಳಿಯುವುದರಿಂದ ಹಾಗೂ ಇಂತಹ ವಾಸನಾಯುಕ್ತ ಪಿತೃಗಳು
ಕೆಟ್ಟ ಶಕ್ತಿಗಳ ನಿಯಂತ್ರಣಕ್ಕೊಳಗಾಗಿ ಅವರ ಗುಲಾಮರಾಗುವುದರಿಂದ ಕೆಟ್ಟ
ಶಕ್ತಿಗಳು ಪಿತೃಗಳನ್ನು ಬಳಸಿಕೊಂಡು ಕುಟುಂಬದವರಿಗೆ ತೊಂದರೆ ನೀಡುವ
ಸಾಧ್ಯತೆ ಹೆಚ್ಚಿರುತ್ತದೆ.
ಶ್ರಾದ್ಧದಿಂದ ಪಿತೃಗಳು ಈ ತೊಂದರೆಗಳಿಂದ ಮುಕ್ತರಾಗಿ ಹಾಗೂ ನಮ್ಮ
ಜೀವನವೂ ಸಹನೀಯವಾಗುತ್ತದೆ.
ಇತರ ಸಂಸ್ಕಾರಗಳಂತೆಯೇ ‘ಶ್ರಾದ್ಧ ಸಂಸ್ಕಾರವೂ ಅತ್ಯಾವಶ್ಯಕವಾಗಿದೆ. ೧೪
ಸಪ್ಟೆಂಬರ್ ರಿಂದ ೨೮ ಸಪ್ಟೆಂಬರ್ ೨೦೧೯ ಈ ಅವಧಿಯಲ್ಲಿ ಪಿತೃಪಕ್ಷವಿದೆ. ಈ
ನಿಮಿತ್ತ ಶ್ರಾದ್ಧದ ಲೇಖನವನ್ನು ನೀಡುತ್ತಿದ್ದೇವೆ.
ಹಿಂದೂ
ಧರ್ಮಕ್ಕನುಸಾರ ಮಾಡಲಾಗುವ
ಶ್ರಾದ್ಧದ ವೈಜ್ಞಾನಿಕತೆ !
೧. ‘ಪಿತೃಲೋಕ
ಇದು ಚಂದ್ರಲೋಕದ ಹಿಂಭಾಗದಲ್ಲಿದೆ, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
೨. ಪಿತೃಗಳ ಹಗಲು ಹಾಗೂ ರಾತ್ರಿ
ವಿಧೂರ್ಧ್ವಭಾಗೇ ಪಿತರೋ ವಸನ್ತಃ ಸ್ವಾಧಃ ಸುಧಾದೀಧಿತಿಮಾಮನನ್ತಿ | ಪಶ್ಯನ್ತಿ
ತೇಽರ್ಕಂ ನಿಜಮಸ್ತಕೋರ್ಧ್ವೇ ದರ್ಶೇ ಯತೋಽಸ್ಮಾದ್ದ್ಯುದಲಂ ತದೈಷಾಮ್ || –
ಸಿದ್ಧಾನ್ತಶಿರೋಮಣಿ, ಗೋಲಾಧ್ಯಾಯ, ತ್ರಿಪ್ರಶ್ನವಾಸನಾ, ಶ್ಲೋಕ ೧೩
ಅರ್ಥ : ಚಂದ್ರನ ಹಿಂಭಾಗದಲ್ಲಿ ಪಿತೃಗಳ ನಿವಾಸವಿರುತ್ತದೆ. ಪಿತೃಗಳ
ಕೆಳಭಾಗದಲ್ಲಿ ಚಂದ್ರನ ತೇಜವಿರುತ್ತದೆ. ಅಮಾವಾಸ್ಯೆಯಂದು (ಚಂದ್ರನು ಪೃಥ್ವಿ
ಹಾಗೂ ಸೂರ್ಯನ ಮಧ್ಯದಲ್ಲಿರುತ್ತಾನೆ. ಆಗ ಪಿತೃಗಳ ಜೊತೆಗೆ ತಲೆಯ ಮೇಲೆ
ಚಂದ್ರನು ಬಂದಿರುತ್ತಾನೆಂದು, ಅಮಾವಾಸ್ಯೆಯು ಪಿತೃಗಳ ಮಧ್ಯಾಹ್ನದ
ಸಮಯವಾಗಿರುತ್ತದೆ. (ಹುಣ್ಣಿಮೆಯಂದು ಚಂದ್ರ ಹಾಗೂ ಸೂರ್ಯನ ನಡುವೆ
ಪೃಥ್ವಿ ಇರುತ್ತದೆ. ಆದ್ದರಿಂದ ಚಂದ್ರಲೋಕದಲ್ಲಿ ಮಧ್ಯ ರಾತ್ರಿಯಾಗಿರುತ್ತದೆ.)
೩. ಪಿತೃಗಳ ಮಧ್ಯಾಹ್ನ
ಪಿತ್ರ್ಯೇ ರಾತ್ರ್ಯಹನೀ ಮಾಸಃ ಪ್ರವಿಭಾಗಸ್ತು ಪಕ್ಷಯೋಃ | ಕರ್ಮಚೇಷ್ಟಾಸ್ವಹಃ ಕೃಷ್ಣ
ಶುಕ್ಲಃ ಸ್ವಪ್ನಾಯ ಶರ್ವರೀ || – ಮನಸ್ಮೃತಿ ಅಧ್ಯಾಯ ೧, ಶ್ಲೋಕ ೬೬
ಅರ್ಥ : ಅಮಾವಾಸ್ಯೆಯಂದು ಚಂದ್ರ ಹಾಗೂ ಸೂರ್ಯನು ಒಂದೇ
ರಾಶಿಯಲ್ಲಿರುತ್ತಾರೆ. ಸೂರ್ಯನು ಆಗ ಸರಿಯಾಗಿ ಚಂದ್ರನ ಮೇಲಿರುತ್ತಾನೆ. ಆ
ಸಮಯವೆಂದರೆ ಪಿತೃಗಳಿಗೆ ಮಧ್ಯಾಹ್ನವಾಗಿರುತ್ತದೆ.
೩ ಅ. ಅಮಾವಾಸ್ಯೆಯಂದು ಪಿತೃಗಳಿಗೆ ಭೋಜನ ನೀಡುವ ಮಹತ್ವ :
ಅಮಾವಾಸ್ಯೆಯಂದು ಚಂದ್ರ ಹಾಗೂ ಸೂರ್ಯ ಒಂದೇ ರಾಶಿಯಲ್ಲಿರುವುದರಿಂದ
ಪ್ರತೀ ಅಮಾವಾಸ್ಯೆಗೆ ಪಿತೃಗಳಿಗೆ ಬ್ರಾಹ್ಮಣರ ಮಾಧ್ಯಮದಿಂದ ಅನ್ನ ಅಥವಾ
ಭೋಜನ ನೀಡುವುದರಿಂದ ಪಿತೃಗಳಿಗೆ ಪ್ರತಿದಿನ ಮಧ್ಯಾಹ್ನ ಭೋಜನ ನೀಡಿದಂತೆ
ಆಗುತ್ತದೆ.
೪. ತಿಥಿಗಳ ಸಂಬಂಧ ಚಂದ್ರನೊಂದಿಗಿರುತ್ತದೆ; ಆದ್ದರಿಂದ ಅಮಾವಾಸ್ಯೆಗೆ
ಪಿತೃಗಳ ಮಧ್ಯಾಹ್ನ ಹಾಗೂ ಹುಣ್ಣಿಮೆಯಂದು ಪಿತೃಗಳಿಗೆ
ಮಧ್ಯರಾತ್ರಿಯಾಗಿರುತ್ತದೆ.
೫. ಪಿತೃಗಳು ಸೂಕ್ಷ್ಮ ಆತ್ಮಸ್ವರೂಪದಲ್ಲಿರುತ್ತಾರೆ; ಆದ್ದರಿಂದ ಅವರಿಗೆ
ಭೋಜನವೂ ಸೂಕ್ಷ್ಮವಾಗಿಯೇ ಬೇಕಾಗಿರುತ್ತದೆ.
೬. ದೇವತೆಗಳಿಗೆ ಅಗ್ನಿಯ ಮಾಧ್ಯಮದಿಂದ ಹವಿಸ್ಸನ್ನು ಸಮರ್ಪಿಸಿದ ಬಳಿಕ ಆಗುವ
ಪ್ರಕ್ರಿಯೆ !
ದೇವತೆಗಳು ಸೂಕ್ಷ್ಮವಾಗಿರುತ್ತಾರೆ; ಆದ್ದರಿಂದ ಅವರಿಗೂ ಸೂಕ್ಷ್ಮ ಭೋಜನವೇ
ಬೇಕಾಗಿರುತ್ತದೆ. ನಾವು ಶಾಸ್ತ್ರಕ್ಕನುಸಾರ ದೇವತೆಗಳ ಮುಖ ಸ್ವರೂಪವಾಗಿರುವ
ಅಗ್ನಿಯನ್ನು ಮಾಧ್ಯಮವಾಗಿಸಿಕೊಂಡು ಸ್ಥೂಲದಲ್ಲಿನ ಹವಿಸ್ಸನ್ನು ಸ್ವಾಹಾಕಾರ
ಮಾಡಿ ಅಗ್ನಿಯಲ್ಲಿ ಸಮರ್ಪಿಸುತ್ತೇವೆ. ಅಗ್ನಿಯು ಆ ಅನ್ನವನ್ನು ಸೂಕ್ಷ್ಮ ಮಾಡಿ
ಸ್ವತಃ ಶಾಂತವಾಗಿ ಸೂಕ್ಷ್ಮವಾಗುತ್ತದೆ. ಅಗ್ನಿಯನ್ನು ಮಹಾಗ್ನಿಯು ಆಕರ್ಷಿಸುತ್ತದೆ
ಹಾಗೂ ಮಹಾಗ್ನಿಯನ್ನು ಸೂಕ್ಷ್ಮ ಹವಿಸ್ಸಿನೊಂದಿಗೆ ಸೂರ್ಯನು
ಸೆಳೆದುಕೊಳ್ಳುತ್ತಾನೆ. ಸೂರ್ಯನು ಅದರಿಂದ ಸೂಕ್ಷ್ಮ ಅನ್ನವನ್ನು ತೆಗೆದುಕೊಂಡು
ಸಂಬಂಧಪಟ್ಟ ಸೂಕ್ಷ್ಮ ದೇವತೆಗಳಿಗೆ ನೀಡುತ್ತಾನೆ. ಇದರಿಂದ ದೇವತೆಗಳು
ತೃಪ್ತರಾಗುತ್ತಾರೆ. ದೇವತೆಗಳು ತೃಪ್ತರಾಗುವುದರಿಂದ ಅವರ ಅಂಗವಾಗಿರುವ
ಜಗತ್ತು ಕೂಡ ತೃಪ್ತವಾಗುತ್ತದೆ; ಏಕೆಂದರೆ ಅವರೇ ಜಗತ್ತಿನ ಸ್ವಾಮಿ ಹಾಗೂ
ಸಂರಕ್ಷಕರಾಗಿರುತ್ತಾರೆ.
೭. ಸೂಕ್ಷ್ಮೀಕೃತ ಅನ್ನ ಸಿಗುವುದರ ಮಹತ್ವ
೭ ಅ. ಜೀವನದಲ್ಲಿ ವ್ಯಕ್ತಿಗಳಿಗೆ ಸೂಕ್ಷ್ಮದಲ್ಲಿನ ಅನ್ನ ಸಿಗದಿದ್ದರೆ ಶರೀರದಲ್ಲಿ
ತೊಂದರೆಯು ಪ್ರಾರಂಭವಾಗುತ್ತದೆ : ನಮ್ಮ ಆತ್ಮಕ್ಕೆ ಒಂದು ವೇಳೆ ಸ್ಥೂಲದಿಂದ
ಸೂಕ್ಷ್ಮೀಕೃತ ಅನ್ನ ಸಿಗದಿದ್ದರೆ ಆಗ ಆ ಆತ್ಮಸ್ವಾಮಿಕ ಶರೀರದಲ್ಲಿ (ಶರೀರದ ಸ್ವಾಮಿ
ಆತ್ಮವಾಗಿರುವುದು) ತೊಂದರೆ ಪ್ರಾರಂಭವಾಗುತ್ತದೆ, ಅಂದರೆ ಶರೀರವು ದುರ್ಬಲ
ಹಾಗೂ ಅಸ್ವಸ್ಥವಾಗುತ್ತದೆ.
೭ ಆ. ದೇವತೆಗಳಿಗೆ ಸೂಕ್ಷ್ಮೀಕೃತ ಅನ್ನ ಸಿಗದಿದ್ದರೆ ಅತಿವೃಷ್ಟಿ, ಅನಾವೃಷ್ಟಿ
ಇತ್ಯಾದಿ ತೊಂದರೆಗಳು ಪ್ರಾರಂಭವಾಗುವುದು : ದೇವತೆಗಳಿಗೆ ಸೂಕ್ಷ್ಮೀಕೃತ ಅನ್
ನ ಸಿಗದಿದ್ದರೆ ಅವರ ದೇವಸ್ವಾಮಿಕ ಜಗತ್ತಿನಲ್ಲಿ (ಜಗತ್ತಿನಲ್ಲಿ ದೇವರ
ರಾಜ್ಯಭಾರವಿರುವುದು) ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಬರಗಾಲ ಇತ್ಯಾದಿ
ತೊಂದರೆಗಳು ಪ್ರಾರಂಭವಾಗುತ್ತದೆ. ಇದರಿಂದಲೂ ಸೃಷ್ಟಿಯು
ಕಾಂತಿಹೀನವಾಗುತ್ತದೆ.
೭ ಇ. ಪಿತೃಗಳಿಗೆ ಸೂಕ್ಷ್ಮ ಅನ್ನ ಸಿಗದಿದ್ದರೆ ಕುಟುಂಬ ಸ್ವರೂಪ ಶರೀರದಲ್ಲಿ
ತೊಂದರೆಗಳು ಪ್ರಾರಂಭವಾಗುವುದು : ಒಂದು ವೇಳೆ ಮೃತರಾದ ಬಳಿಕ
ಸೂಕ್ಷ್ಮಗೊಂಡ ನಮ್ಮ ಪಿತೃಗಳಿಗೆ ಸೂಕ್ಷ್ಮ ಅನ್ನ ಸಿಗದಿದ್ದರೆ ಅವರ ಕುಟುಂಬರೂಪಿ
ಶರೀರದಲ್ಲಿ ತೊಂದರೆ ಪ್ರಾರಂಭವಾಗುತ್ತದೆ ಹಾಗೂ ಕುಟುಂಬವು
ಕಳೆಗುಂದಿದಂತಾಗುತ್ತದೆ.
೮. ಬ್ರಾಹ್ಮಣ ಭೋಜನ ನೀಡಿದ ಬಳಿಕ ಆ ಅನ್ನವು ಪಿತೃಗಳವರೆಗೆ ತಲುಪುವ
ಪ್ರಕ್ರಿಯೆ
೮ ಅ. ಜ್ಞಾನವೃದ್ಧ ಹಾಗೂ ತಪೋವೃದ್ಧ ಬ್ರಾಹ್ಮಣರ ಮುಖದಿಂದ ಅವರ
ಜಠರಾಗ್ನಿಗೆ ಆಹುತಿ ನೀಡುವುದು
ವಿಧ್ಯಾತಪಃ ಸಮೃದ್ಧೇಶು ಹುತಂ ವಿಪ್ರಮುಖಾಗ್ನಿಶು | ಮನುಸ್ಮೃತಿ, ಅಧ್ಯಾಯ ೩
ಶ್ಲೋಕ ೯೮
ಅರ್ಥ : ಜ್ಞಾನವೃದ್ಧ ಹಾಗೂ ತಪೋವೃದ್ಧರಾಗಿರುವ ಬ್ರಾಹ್ಮಣರ ಮುಖದಿಂದ
ಅವರ ಜಠರಾಗ್ನಿಗೆ ಆಹುತಿ ನೀಡುವುದು.
೮ ಆ. ಅಗ್ನಿಯ ಮುಖದಿಂದ ದೇವತೆಗಳು ಹಾಗೂ ಪಿತೃಗಳು ತಮ್ಮ ಅನ್ನವನ್ನು
ಗ್ರಹಣ ಮಾಡುವುದು
ಯಸ್ಯಾಸ್ಯೇನ ಸದಾಶ್ನನ್ತಿ ಹವ್ಯಾನಿ ತ್ರಿದಿವೌಕಸಃ | ಕವ್ಯಾನಿ ಚೈವ ಪಿತರಃ ಕಿ
ಭೂತಮಧಿಕಂ ತತಃ || – ಮನುಸ್ಮೃತಿ, ಅಧ್ಯಾಯ ೧, ಶ್ಲೋಕ ೯೫
ಅರ್ಥ : ಅಗ್ನಿಯ ಮುಖದಿಂದ ದೇವತೆಗಳು ಹಾಗೂ ಪಿತೃಗಳು ತಮ್ಮ ಅನ್ನವನ್ನು
ಗ್ರಹಣ ಮಾಡುತ್ತಾರೆ.
೮ ಇ. ಬ್ರಾಹ್ಮಣರ ಉದರಾಗ್ನಿಯಲ್ಲಿ ಪಿತೃಗಳ ಹೆಸರಿನಲ್ಲಿ ನೀಡಿರುವ ಅನ್ನವನ್ನು
ಪಿತೃಗಳು ಗ್ರಹಣ ಮಾಡುವ ಸೂಕ್ಷ್ಮ ಪ್ರಕ್ರಿಯೆ : ಬ್ರಾಹ್ಮಣರ ಉದರಾಗ್ನಿಯಲ್ಲಿ
ಪಿತೃಗಳ ಹೆಸರಿನಲ್ಲಿ ನೀಡಿರುವ ಅನ್ನವನ್ನು ಅವರ ವೈಶ್ವಾನರ ಅಗ್ನಿಯು
ಸೂಕ್ಷ್ಮವಾಗಿಸುತ್ತದೆ. ಆ ಅಗ್ನಿಯನ್ನು ಮಹಾಗ್ನಿಯು ಆಕರ್ಷಿಸುತ್ತದೆ ಹಾಗೂ
ಅದನ್ನು ಸೂಕ್ಷ್ಮಅನ್ನ ಸಹಿತ ಸೂರ್ಯನು ಸೆಳೆದುಕೊಳ್ಳುತ್ತಾನೆ. ಸೂರ್ಯನವರೆಗೆ
ತಲುಪಿದ ಆ ಸೂಕ್ಷ್ಮ ಅನ್ನವನ್ನು ಸೂರ್ಯನ ಸುಶುಮ್ನಾ ಕಿರಣಗಳ ಮೂಲಕ
ಚಂದ್ರನು ಸೆಳೆದುಕೊಳ್ಳುತ್ತಾನೆ. ನಂತರ ಆ ಅನ್ನದ ಮೇಲಿರುವ ನಮ್ಮ ಸೂಕ್ಷ್ಮ
ಪಿತೃಗಳು ಅದನ್ನು ಸೆಳೆದುಕೊಳ್ಳುತ್ತಾರೆ. ಅನ್ನದಿಂದ ತೃಪ್ತರಾದ ಪಿತೃಗಳು ನಮ್ಮ
ಕುಟುಂಬದ ಸಂರಕ್ಷಕರೆಂಬ ಸಂಬಂಧದಿಂದ ಸುಖಸಮೃದ್ಧಿ ನೀಡುತ್ತಾರೆ.
೮ ಈ. ಶ್ರಾದ್ಧ-ಭೋಕ್ತ ಬ್ರಾಹ್ಮಣನ ಅಗ್ನಿಯು ಮಂದವಾಗಬಾರದೆಂದು
ಧರ್ಮಶಾಸ್ತ್ರದಲ್ಲಿ ಅವನಿಗೆ ಅನೇಕ ನಿಯಮಗಳನ್ನು ಹಾಕಿರುವುದು : ಶ್ರಾದ್ಧ-
ಭೋಕ್ತ ಬ್ರಾಹ್ಮಣನ ಅಗ್ನಿ ಮಂದವಾಗಬಾರದೆಂದು ಮತ್ತು ಅದರಿಂದ
ಮಹಾಗ್ನಿಯವರೆಗೆ ತಲುಪಿಸಲು ಯಾವುದೇ ಅಡಚಣೆ ಬರಬಾರದೆಂದು;
ಧರ್ಮಶಾಸ್ತ್ರದಲ್ಲಿ ಶ್ರಾದ್ಧ-ಭೋಕ್ತ ಬ್ರಾಹ್ಮಣರಿಗೆ ಅನೇಕ ನಿಯಮಗಳನ್ನು
ಹಾಕಿಕೊಡಲಾಗಿದೆ. ಬ್ರಾಹ್ಮಣನಿಗೆ ಆ ದಿನ ರಾತ್ರಿ ಮೈಥುನ ನಿಷಿದ್ಧ ಎಂದು
ಹೇಳಲಾಗಿದೆ, ಇದು ಅದರಲ್ಲಿನ ಗೂಢ (ರಹಸ್ಯ)ವಾಗಿದೆ. ವೇದಶಾಸ್ತ್ರ ಪಾರಂಗತ
ಸದಾಚಾರಿ ಬ್ರಾಹ್ಮಣರಲ್ಲಿಯೇ ಈ ಅಗ್ನಿಯಿರುತ್ತದೆ. ಉಳಿದ ಬ್ರಾಹ್ಮಣರಲ್ಲಿನ
ಉದರಾಗ್ನಿಗೆ ‘ಅಗ್ನಿದೇವ (ಭವಿಷ್ಯಪುರಾಣ, ಬ್ರಾಹ್ಮಪರ್ವ, ಅಧ್ಯಾಯ ೧೩, ಶ್ಲೋಕ
೩೬) ಎಂದು ಹೇಳದೇ ‘ಭಸ್ಮೀಭೂತ, ಎಂದು ಹೇಳಲಾಗಿದೆ.
ನಶ್ಯನ್ತಿ ಹವ್ಯಕವ್ಯಾನಿ ನರಾಣಾಮ್ ಅವಿಜಾನತಾಮ್ | ಭಸ್ಮೀಭೂತೇಶು ವಿಪ್ರೇಶು
ಮೋಹಾತ್ ದತ್ತಾನಿ ದಾತೃಭಿಃ || – ಮನುಸ್ಮೃತಿ, ಅಧ್ಯಾಯ ೩, ಶ್ಲೋಕ ೯೭
ಅರ್ಥ : ಅಪಾತ್ರರಾಗಿರುವ ‘ಭಸ್ಮೀಭೂತ ಬ್ರಾಹ್ಮಣರಿಗೆ ಅವಿವೇಕದಿಂದ ದಾನ
ನೀಡಿರುವ ಹವಿಸ್ಸು (ದೇವರಿಗೋಸ್ಕರದ ಆಹುತಿ) ಹಾಗೂ ಕವ್ಯಗಳು
(ಪಿತೃಗಳಿಗೋಸ್ಕರ ಆಹುತಿ) ನಾಶವಾಗುತ್ತವೆ.
ಬ್ರಾಹ್ಮಣಸ್ತವನಧಿಯಾನಸ್ತೃಣಾಗ್ನಿರಿವ ಶಾಮ್ಯತಿ | ತಸ್ಮೈ ಹವ್ಯಂ ನ ದಾತವ್ಯಂ ನಹಿ
ಭಸ್ಮನಿ ಹೂಯತೆ || – ಮನುಸ್ಮೃತಿ, ಅಧ್ಯಾಯ ೩, ಶ್ಲೋಕ ೧೬೮
ಅರ್ಥ : ವೇದಗಳ ಅಧ್ಯಯನ ಮಾಡದಿರುವ ಬ್ರಾಹ್ಮಣರ ಅಗ್ನಿಯು (ತೇಜ) ಹುಲ್ಲಿನ
ಅಗ್ನಿಯಂತೆ ತಕ್ಷಣ ಶಾಂತವಾಗುತ್ತದೆ. ಆದ್ದರಿಂದ ಅಂತಹ ಬ್ರಾಹ್ಮಣರಿಗೆ
ಹವಿಸ್ಸನ್ನು ನೀಡಬಾರದು; ಏಕೆಂದರೆ ಯಾರೂ ಭಸ್ಮಕ್ಕೆ ಆಹುತಿ ನೀಡುವುದಿಲ್ಲ.
ಇದಾಯಿತು ಮಾಸಿಕ ಶ್ರಾದ್ಧದ ರಹಸ್ಯ !
೯. ಪಿತೃಲೋಕದಿಂದ ಬೇರೆಕಡೆಗೆ ಹೋಗಿರುವ, ಅಂದರೆ ಪುನರ್ಜನ್ಮ ಪಡೆದಿರುವ
ಪಿತೃಗಳಿಗೆ ನಿತ್ಯ-ಪಿತೃಗಳ ಮೂಲಕ ಸೂಕ್ಷ್ಮ ಅನ್ನವು ತಲುಪಿಸಲಾಗುವುದು
ಕ್ಷಯಾಹ ತಿಥಿಯಂದೂ ಶ್ರಾದ್ಧವನ್ನು ಮಾಡುತ್ತಾರೆ; ಏಕೆಂದರೆ ಪಿತೃಗಳು
ಚಂದ್ರಲೋಕದಲ್ಲಿ ಆ ತಿಥಿಯಂದು ಅದೇ ಸ್ಥಾನದಲ್ಲಿ ಸ್ಥಿತರಾಗಿರುತ್ತಾರೆ. ಒಂದು
ವೇಳೆ ಅವರು ಪಿತೃಲೋಕದಿಂದ ಬೇರೆ ಕಡೆಗೆ ಹೋಗಿದ್ದರೆ, ಅಂದರೆ ಅವರ
ಪುನರ್ಜನ್ಮವಾಗಿದ್ದರೂ ನಮ್ಮ ನಿತ್ಯ-ಪಿತೃಗಳಾದ ವಸು, ರುದ್ರ ಹಾಗೂ ಆದಿತ್ಯ ಆ
ಅನ್ನವನ್ನು ಪ್ರಾಪ್ತ ಮಾಡಿಕೊಂಡು ಅದರ ಫಲವನ್ನು ಪಿತೃಗಳವರೆಗೆ
ತಲುಪಿಸುತ್ತಾರೆ; ಆದ್ದರಿಂದ ನಾವು ಪಿತಾ, ಪಿತಾಮಹ, ಪ್ರಪಿತಾಮಹರನ್ನು
ಅನುಕ್ರಮವಾಗಿ ವಸು, ರುದ್ರ, ಆದಿತ್ಯರ ಸ್ವರೂಪದಲ್ಲಿ ಸಂಕಲ್ಪಗೊಳಿಸುತ್ತೇವೆ.
‘ನಾವು ನಮ್ಮ ಪಿತೃಗಳಿಗೆ ಆ ಕವ್ಯ (ಪಿತೃಗಳಿಗೆ ನೀಡಲಾಗುವ ಅನ್ನಪಿಂಡ) ಎಂಬ
ನಿತ್ಯ-ಪಿತೃಗಳ ಮೂಲಕ ಕಳುಹಿಸುತ್ತೇವೆ, ಎಂದು ಇದರ ಅರ್ಥವಾಗುತ್ತದೆ. ಅವರು
ಸರ್ವಜ್ಞರಾಗಿರುವುದರಿಂದ ಆ ಅನ್ನಕ್ಕೆ ‘ತತ್ತಧ್ಯೋನಿ ಮಾಡಿ, ಅಂದರೆ ಉಪಯುಕ್ತ
ಮಾಡಿ ಆಯಾ ಪಿತೃಗಳಿಗೆ ಕಳುಹಿಸುತ್ತಾರೆ.
೧೦. ಪಾರ್ವಣ ಶ್ರಾದ್ಧ ಅಂದರೆ ಪಿತೃಗಳ ಹಬ್ಬವಾಗಿದ್ದು ಪಿತೃಗಳು ಯಾವುದೇ
ಸಮಯದಲ್ಲಿ ಭೋಜನ ಮಾಡಬಹುದು.
ಈಗ ಶಾರದಿಕ ಶ್ರಾದ್ಧದ ರಹಸ್ಯವನ್ನು ತಿಳಿದುಕೊಳ್ಳೋಣ. ಶಾರದಿಕ ಶ್ರಾದ್ಧಕ್ಕೆ
‘ಪಾರ್ವಣ ಶ್ರಾದ್ಧ ಎಂದು ಹೇಳುತ್ತಾರೆ. ಪ್ರತೀ ಅಮಾವಾಸ್ಯೆಯ ಅಪರಾಹ್ನದ
ಸಮಯದಲ್ಲಿ ನಾವು ಮೃತ ಪಿತೃಶ್ರಾದ್ಧ ಮಾಡುವುದರಿಂದ ಸ್ಥೂಲದಿಂದ
ಸೂಕ್ಷ್ಮವಾದ ಪಿತೃಗಳಿಗೆ ಪ್ರತಿದಿನ ಮಧ್ಯಾಹ್ನದ ಸಮಯದಲ್ಲಿ ಅವರ ಸೂಕ್ಷ್ಮ ಅಂಶ
ಪ್ರಾಪ್ತವಾಗುತ್ತದೆ. ಶಾರದಿಕ ಶ್ರಾದ್ಧ ಅಥವಾ ಪಾರ್ವಣ ಶ್ರಾದ್ಧದ ದಿನವೆಂದರೆ
ಪಿತೃಗಳಿಗೆ ಹಬ್ಬವೇ ಆಗಿರುತ್ತದೆ. ಈ ದಿನಗಳಂದು ಪಿತೃಗಳು ಯಾವುದೇ
ಸಮಯದಲ್ಲಿ ಭೋಜನ ಮಾಡುತ್ತಾರೆ, ಉದಾ. ಕೃಷ್ಣಜನ್ಮದ ಉತ್ಸವದ ದಿನದಂದು
ಭಕ್ತರಿಗೆ ನಡುರಾತ್ರಿಯಲ್ಲಿಯೂ ಭೋಜನ ಪ್ರಾಪ್ತವಾಗುತ್ತದೆ, ಅದೇ ರೀತಿ
ಅಶ್ವಯುಜ ಮಾಸದಲ್ಲಿ ಪಿತೃಗಳ ಹಬ್ಬದ ದಿನವಾಗಿರುವುದರಿಂದ ಅವರಿಗೆ ಈ
ದಿನದಂದು ಮಧ್ಯಾಹ್ನಕ್ಕಿಂತ ಬೇರೆ ಸಮಯದಲ್ಲಿಯೂ ಭೋಜನ ಸಿಗುತ್ತದೆ. ಈ
ದಿನದಂದು ಚಂದ್ರನು ಪೃಥ್ವಿಗೆ ಸಮೀಪವಿರುತ್ತಾನೆ.
೧೧. ಮನುಷ್ಯ ಹಾಗೂ ಪಿತೃಗಳ ಕಾಲ
೧೧ ಅ. ಮನುಷ್ಯನ ಶುಕ್ಲ ಹಾಗೂ ಕೃಷ್ಣ ಪಕ್ಷ ಹಾಗೂ ಪಿತೃಗಳ ಪಕ್ಷದ ವೇಳಾಪಟ್ಟಿ
ಇದು ಮೃತಕ ಶ್ರಾದ್ಧದ ರಹಸ್ಯವಾಗಿದೆ, ವಿರೋಧಕರು ಇದನ್ನು ತಿಳಿದುಕೊಳ್ಳದೇ
ಅಜ್ಞಾನಿಗಳಂತಿದ್ದು ತಮ್ಮ ಅಲ್ಪಬುದ್ಧಿಯನ್ನು ದರ್ಶಿಸುತ್ತಾರೆ. ಅಗ್ನಿಯು
ಪಿತೃಲೋಕದಲ್ಲಿನ ಪಿತೃಗಳಿಗೆ ಸೂಕ್ಷ್ಮ ಹವ್ಯವನ್ನು ಸಮರ್ಪಿಸುತ್ತದೆ. ಇದಕ್ಕೆ ಕೆಳಗೆ
ನೀಡಿದ ವೇದಮಂತ್ರವೂ ಸಾಕ್ಷಿಯಾಗಿದೆ.
ಯೇ ಅಗ್ನಿದಗ್ಧಾ ಯೇ ಅನಗ್ನಿದಗ್ಧಾ ಮಧ್ಯೆ ದಿವಃ ಸ್ವಧಯಾ ಮಾದಯನ್ತೇ | ತ್ವಂ
ತಾನ್ ವೇತ್ಥ ಯದಿ ತೆ ಜಾತವೇದಃ ಸ್ವಧಯಾ ಯಜ್ಞಂ ಸ್ವಧಿತಿಂ ಜುಶನ್ತಾಮ್ ||
ಅಥರ್ವವೇದ, ಕಾಂಡ ೧೮, ಸೂಕ್ತ ೨ ಮಂತ್ರ ೩೫
ಅರ್ಥ : ಮೃತ್ಯುವಿನ ಬಳಿಕ ಅಗ್ನಿಸಂಸ್ಕಾರವಾಗಿರುವ ಹಾಗೂ ಆಗದಿರುವ, ಹೀಗೆ
ಇಂದಿನ ತನಕ ನಮ್ಮ ಯಾರೆಲ್ಲಾ ಪಿತೃಗಳು ಆಗಿ ಹೋದರೋ, ಅವರು ನಾವು
ಮಾಡಿದ ಪಿಂಡದಾನದಿಂದ ಅಥವಾ ತರ್ಪಣದಿಂದ ತೃಪ್ತರಾಗುತ್ತಾರೆ.
ಅಗ್ನಿದೇವನಿಗೆ ಆ ಎಲ್ಲಾ ಪಿತೃಗಳ ಪರಿಚಯವಿದೆ. ಹೇ ಅಗ್ನಿದೇವಾ, ನಾವು
ಮಾಡುತ್ತಿರುವ ಈ ಯಜ್ಞಾದಿ ಕಾರ್ಯ (ಪಿತೃಗಳ ತನಕ ತಲುಪಲಿ ಹಾಗೂ ಅವರಿಗೆ
ಅವರ ಪಾಲು) ಗ್ರಹಿಸಲು ಸಾಧ್ಯವಾಗಲಿ.
೧೨. ವೇದ ಹಾಗೂ ಶ್ರಾದ್ಧ ಇವುಗಳಲ್ಲಿ ಬಂದಿರುವ ‘ಪಿತೃ ಶಬ್ದವು ಮೃತ-
ಪಿತೃವಾಚಕವಾಗಿರುವುದು
ಪಿತೃಣಾಂ ಲೋಕಮಪಿ ಗಚ್ಛನ್ತು ಯೇ ಮೃತಾಃ | – ಅಥರ್ವವೇದ, ಕಾಂಡ ೧೨,
ಸೂಕ್ತ ೨, ಮಂತ್ರ ೪೫
ಅರ್ಥ : ಯಾರು ಮೃತರಾಗಿರುವರೋ, ಅವರು ಪಿತೃಲೋಕಕ್ಕೆ ಹೋಗಲಿ.
೧೩. ಮಂತ್ರ ಹಾಗೂ ಸಹಾಯಕ ಘಟಕಗಳಿಂದ ಸಾಮಗ್ರಿಗಳಲ್ಲಿ ಆಕರ್ಷಣೆ ಮತ್ತು
ವಿಕರ್ಷಣ ಶಕ್ತಿಯು ನಿರ್ಮಾಣವಾಗುವುದು ಹಾಗೂ ಅದು
ಚಂದ್ರಕಾಂತಮಣಿಯಂತೆ ಯಂತ್ರವಾಗುವುದು ಆ ಮಂತ್ರದಲ್ಲಿನ ಸಹಾಯಕ ಘಟಕವು
ಹಾಲು, ತುಪ್ಪ, ಅಕ್ಕಿ, ಜೇನು, ಎಳ್ಳು, ಬೆಳ್ಳಿ, ದರ್ಭೆ, ತುಳಸೀದಳ, ನೀರು ಹಾಗೂ
ಮಾಡಿರುವ ಸಂಕಲ್ಪವಿರುತ್ತದೆ. ಪಿತೃಗಳ ಪ್ರತಿನಿಧಿಯಾಗಿ ಮಗ ಅಥವಾ ಮೊಮ್ಮಗನು
ಈ ಪದಾರ್ಥಗಳನ್ನು ಸ್ಪರ್ಶಿಸಿ ಅಲ್ಲಿಯೇ ಕುಳಿತುಕೊಳ್ಳುತ್ತಾನೆಂದು ಈ ಎಲ್ಲ
ಸಾಮಗ್ರಿಗಳು ಚಂದ್ರಕಾಂತ ಮಣಿಯಂತೆ ಯಂತ್ರವಾಗುತ್ತದೆ. ಅವುಗಳಲ್ಲಿ ಆಕರ್ಷಣ
ಹಾಗೂ ವಿಕರ್ಷಣ ಶಕ್ತಿಯು ನಿರ್ಮಾಣವಾಗುತ್ತದೆ.
೧೪. ಯಜ್ಞೋಪವೀತವನ್ನು ಬಲ ಭುಜದಲ್ಲಿಡುವುದರ ಅವಶ್ಯಕತೆ
ಪಿತೃಕರ್ಮದ ಸಮಯದಲ್ಲಿ ಯಜ್ಞೋಪವೀತವನ್ನು (ಜನಿವಾರ) ಬಲ ಭುಜದಲ್ಲಿ
ಧರಿಸುವುದು ಅಗತ್ಯವಾಗಿದೆ. ಅದರ ಹಿಂದಿನ ಕಾರಣಗಳನ್ನು ಈ ಕೆಳಗೆ
ನೀಡಲಾಗಿದೆ.
ಅ. ಶಾರೀರಿಕ ಹಾಗೂ ಮಾನಸಿಕ ಶಕ್ತಿಗಳ ದಿಕ್ಕು ಪಿತೃಲೋಕದಿಂದ ದಕ್ಷಿಣದ ಕಡೆ
(ಬಲ ಬದಿಗೆ (ಟಿಪ್ಪಣಿ ೧)) ಹೋಗುವುದಿರುತ್ತದೆ. ಈ ಶಕ್ತಿಗೆ ಯಜ್ಞೋಪವೀತವು
ವೇಗ ನೀಡುವುದು
ಆ. ಶಾರೀರಿಕ ಹಾಗೂ ಮಾನಸಿಕ ಶಕ್ತಿಯನ್ನು ಸೂರ್ಯ ಕಿರಣಗಳೊಂದಿಗೆ ಒಂದು
ದಿಕ್ಕಿಗೆ (ಬಲ ಬದಿಗೆ (ಟಿಪ್ಪಣಿ ೧)) ಕಳುಹಿಸುವುದು.
ಇ. ವೈದಿಕ ವಿಧಿಯಂತೆ ಅವಿಗುಣ (ದೋಷರಹಿತ) ಕರ್ಮದ ಮಾಧ್ಯಮದಿಂದ
ವಿಶುದ್ಧ ಅಪೂರ್ವದ ನಿರ್ಮಾಣವಾಗಿ, ಅಂದರೆ ಅವರ ವಾಸನೆಯನ್ನು
ತೃಪ್ತಗೊಳಿಸಿ ದಕ್ಷಿಣ ದಿಕ್ಕಿಗೆ (ಬಲ ಬದಿಗೆ (ಟಿಪ್ಪಣಿ ೧)) ಇರುವ
ಪಿತೃಲೋಕದಲ್ಲಿರುವ ಪಿತೃಗಳ ತನಕ ಆ ಶಕ್ತಿಯು ತಕ್ಷಣ ತಲುಪಿಸುವುದು (ಟಿಪ್ಪಣಿ
೧ – ವಿಜ್ಞಾನಿಗಳು ‘ಧಾರ್ಮಿಕ ವಿಧಿ ಮಾಡುವವರು ಪೂರ್ವಕ್ಕೆ ಮುಖ ಮಾಡಿ
ಕುಳಿತುಕೊಂಡಿದ್ದಾರೆ, ಎಂದು ಗಮನದಲ್ಲಿಟ್ಟು ದಕ್ಷಿಣ ಬದಿ ಎಂಬ ಶಬ್ದವನ್ನು
‘ಬಲಗಡೆ ಎಂಬ ಅರ್ಥದಲ್ಲಿ ತೆಗೆದುಕೊಂಡಿದ್ದಾರೆ; ಏಕೆಂದರೆ
ಪೂರ್ವಾಭಿಮುಖವಾಗಿರುವಾಗ ಬಲಗೈ ಬದಿಯಲ್ಲಿ ದಕ್ಷಿಣ ದಿಕ್ಕು ಬರುತ್ತದೆ.
ಆದ್ದರಿಂದ ಸಂಸ್ಕೃತದಲ್ಲಿ ಬಲ ಬದಿಗೆ ‘ದಕ್ಷಿಣ ದಿಕ್ಕು ಎಂದು ಹೇಳಲಾಗುತ್ತದೆ.
ಮೇಲೆ ಉಲ್ಲೇಖ ಮಾಡಿರುವ ‘ದಕ್ಷಿಣ ಶಬ್ದವು ದಿಶಾವಾಚಕವಾಗಿದೆ. ಇದಕ್ಕೆ
ಬಲಬದಿಗೆ ಎಂದು ಅರ್ಥ ತೆಗೆದುಕೊಳ್ಳಲು ಆಗುವುದಿಲ್ಲ.) ಇದರಲ್ಲಿ ಪಿತೃಗಳಿಗೂ
ಆವಾಹನೆಯಿರುತ್ತದೆ; ಆದ್ದರಿಂದ ಅವರ ನಿದ್ರೆಯ ಸಮಯದಲ್ಲಿ ಅವರನ್ನು
ಕರೆಯಬಾರದು. ಅವರ ನಿದ್ರೆಯ ಕಾಲಾವಧಿಯು ಶುಕ್ಲ ಪಕ್ಷವಾಗಿರುತ್ತದೆ. ಶಾರದಿಕ
ಪಾರ್ವಣ ಶ್ರಾದ್ಧ ಹಾಗೂ ಕ್ಷಯಾಹ ತಿಥಿಗಳನ್ನು ಬಿಟ್ಟು ಅವರು
ನಿದ್ರಾವಸ್ಥೆಯಲ್ಲಿರುತ್ತಾರೆ. ಆದ್ದರಿಂದ ಅವರು ನಮ್ಮ ಆವಾಹನೆಯನ್ನು
ಕೇಳಿಸಿಕೊಳ್ಳುವುದಿಲ್ಲ. ಬ್ರಾಹ್ಮಣರು ಮಾಧ್ಯಮವಾಗಿರುವುದರಿಂದ ಪಿತೃಗಳು
ಕೆಲವೊಮ್ಮೆ ತಮ್ಮ ಉಪದೇಶವನ್ನೂ ಅವರ ಮಾಧ್ಯಮದಿಂದ ಹೇಳುತ್ತಾರೆ.
ಆದ್ದರಿಂದ ನಮ್ಮ ಅನೇಕ ಇಚ್ಛೆ ಆಕಾಂಕ್ಷೆಗಳು (ಮನೋಕಾಮನೆಗಳು)
ಈಡೇರುತ್ತದೆ.
--------------- Hari Om --------------
No comments:
Post a Comment