Saturday, October 7, 2023

Pitru Dosha - Reasons & its Solutions

 

Pitru Dosha – Reasons & its Solutions

ಪಿತೃದೋಷದ ಕಾರಣಗಳು ಮತ್ತು ಅದಕ್ಕೆ ಪರಿಹಾರೋಪಾಯಗಳು



. ಪಿತೃದೋಷ 



ಪಿತೃದೋಷವನ್ನು ದೇವರ ಕ್ರೋಧದಷ್ಟೇ ಬಲಿಷ್ಠವೆಂದು ತಿಳಿಯಲಾಗುತ್ತದೆ. ದೇವರು ಕೋಪಗೊಂಡರೆ, ಎಲ್ಲೆಡೆಯೂ ಬರಗಾಲ ಬರುತ್ತದೆ. ಆದರೆ ಪಿತೃಗಳು ಕೋಪಗೊಂಡರೆ ಮನೆಯಲ್ಲಿ ಬರಗಾಲ ಬರುತ್ತದೆ, ಅಲ್ಲದೇ ರೋಗರುಜಿನ, ಕಾರಣವಿಲ್ಲದೇ ಕಿರಿಕಿರಿಯಾಗುವುದು, ಊಟ ಮಾಡುವಾಗ ಜಗಳವಾಗುವುದು ಮತ್ತು ಆಹಾರ ಸೇವಿಸಲು ಆಗದಿರುವುದು ಮುಂತಾದ ತೊಂದರೆಗಳಾಗುತ್ತವೆ. ಒಂದು ರೀತಿಯಲ್ಲಿ ಮತಿಭ್ರಷ್ಟನಾಗುತ್ತಾನೆ. ಸಂತಾನವಾಗುವುದಿಲ್ಲ ಅಥವಾ ಪ್ರಖರ ಪಿತೃದೋಷವಿದ್ದಲ್ಲಿ ಅಂಗವಿಕಲ ಮಕ್ಕಳು ಜನಿಸುತ್ತಾರೆ. ಮಕ್ಕಳು ಸರಿಯಾಗಿ ವರ್ತಿಸುವುದಿಲ್ಲ. ತಂದೆ-ತಾಯಿಯವರ ಮಾತನ್ನು ಕೇಳುವುದಿಲ್ಲ ಮುಂತಾದ ತೊಂದರೆಗಳಾಗುತ್ತವೆ.

 

 ಈ ಕಾರಣದಿಂದ ಪ್ರತಿಯೊಬ್ಬರೂ ತಪ್ಪದೇ ವರ್ಷದಲ್ಲಿ ಒಮ್ಮೆಯಾದರೂ ಪಿತೃಗಳ ಹೆಸರಿನಲ್ಲಿ ಶ್ರಾದ್ಧವನ್ನು ಮಾಡಬೇಕು. ಶ್ರಾದ್ಧವನ್ನು ಮಾಡಲು ಅಸಾಧ್ಯವಾಗಿದ್ದರೆ, ನದಿಯ ನೀರಿನಲ್ಲಿ ಮೊಸರನ್ನವನ್ನು ಬಿಡಬೇಕು ಅಥವಾ ಮನೆಯಲ್ಲಿಯೇ ಊಟದ ಮೊದಲು ಅನ್ನದ ತುತ್ತನ್ನು ಇಟ್ಟು ನಮ್ರತೆಯಿಂದ ಕೈ ಜೋಡಿಸಿ ಪ್ರಾರ್ಥಿಸಬೇಕು. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಾತೃ-ಪಿತೃ ಪೂಜೆಗೆ ಅತ್ಯಂತ ಮಹತ್ವವಿದೆ. ಹಾಗೆಯೇ ಹಿಂದಿನ ಎರಡು ಪೀಳಿಗೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪಿತೃವರ್ಗ ಯಾವ ಲೋಕದಲ್ಲಿರುತ್ತಾರೆಯೋ, ಅದನ್ನು ‘ಪಿತೃಗಳ ಜಗತ್ತು ಅಥವಾ ‘ಪಿತೃಲೋಕ ಎನ್ನುತ್ತಾರೆ. ಅವರು ಯಾವಾಗಲೂ ಮುಕ್ತಿಯ ದಾರಿಯನ್ನು ನೋಡುತ್ತಾ ಅಲ್ಲಿ ಅಲೆಯುತ್ತಿರುತ್ತಾರೆ.


ಹಾಗೆಯೇ ಅವರು ತಮ್ಮ ಮುಂದಿನ ಪೀಳಿಗೆಯ ಕಾರ್ಯಕ್ಷಮತೆ ಮತ್ತು ಜಯ-ಅಪಜಯವನ್ನು ನೋಡುತ್ತಿರುತ್ತಾರೆ. ಅವರನ್ನು ಸ್ಮರಿಸಿ ಶ್ರಾದ್ಧಾನುಸಾರ ಯಾರು ಅನ್ನದಾನ ಮಾಡುತ್ತಾರೆಯೋ, ಅವರ ಕಲ್ಯಾಣವಾಗುತ್ತದೆ. ತಾಯಿ-ಅಜ್ಜಿ-ಮುತ್ತಜ್ಜಿ ಇವರಿಗಾಗಿ ವೃದ್ಧ ಸ್ತ್ರೀಯರಿಗೆ ಅನ್ನ ಮತ್ತು ಸೀರೆ- ರವಿಕೆಯನ್ನು ದಾನ ಮಾಡಬೇಕು ಮತ್ತು ಹಸುವಿಗೆ ಘ್ರಾಸವನ್ನು ನೀಡಬೇಕು. ಕೆಲವು ಪೂರ್ವಜರು ಯಾರಿಗಾದರೂ ನೋಯಿಸಿರುತ್ತಾರೆ. ಅವರ ಮನೆ, ಆಸ್ತಿಪಾಸ್ತಿ ಅಥವಾ ಹಣವನ್ನು ಕಬಳಿಸುವುದು, ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುವುದು, ಯಾರಿಗಾದರೂ ಮೋಸ ಮಾಡಿ ಅವರಿಗೆ ತುತ್ತು ಅನ್ನಕ್ಕೂ ತತ್ವಾರ ಮಾಡುವುದು, ಯಾವುದೇ ಹಿರಿಯರಿಗೆ ಅನ್ನ-ನೀರು ಮತ್ತು ಔಷಧಿಯನ್ನು ನೀಡದೇ ಅವರು ಚಡಪಡಿಸಿ ಮರಣ ಹೊಂದುವುದು ಈ ರೀತಿಯ ತೊಂದರೆಯನ್ನು ನೀಡಿರುತ್ತಾರೆ

 

ಆ ಎಲ್ಲ ಶಾಪಗಳು ಮುಂದಿನ ಜನ್ಮದ ಪೀಳಿಗೆಯವರೆಗೆ ತೊಂದರೆ ಮತ್ತು ಭೋಗ ಈ ಸ್ವರೂಪದಲ್ಲಿ ಬರುತ್ತದೆ. ಮನೆತನದಲ್ಲಿ ಯಾರಾದರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಯಾರಾದರೂ ನೇಣು ಹಾಕಿಕೊಂಡು ಅಥವಾ ಅಪಘಾತದಿಂದ ಸಾವನ್ನಪ್ಪಿದ್ದರೆ, ಇಂತಹವರ ಮನೆಯಲ್ಲಿ ಒಂದು ಪೀಳಿಗೆ ಬಿಟ್ಟು ಮುಂದಿನ ಪೀಳಿಗೆಯವರು ಭಯಂಕರ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇವೆಲ್ಲವೂ ಪಿತೃದೋಷವಾಗಿದೆ. ಅವೆಲ್ಲವೂ ಕರ್ಮವಾಗಿ ಅಡ್ಡಬಂದು ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಪ್ರಾಮಾಣಿಕ ಮನುಷ್ಯರ ಅಂತರಂಗ ಪಿತೃಗಳಿಗೆ ಕಾಣಿಸುತ್ತದೆ. ಇದರಿಂದ ಅವರ ವಿಷಯದಲ್ಲಿ ಕೆಟ್ಟ ಮಾತುಗಳನ್ನಾಡಬಾರದು. ಯಾರ ಮೇಲಾದರೂ ಪಿತೃಗಳು ಪ್ರಸನ್ನವಾಗಿದ್ದರೆ ಅವರ ಮನೆಯಲ್ಲಿ ಸುಖಸಮೃದ್ಧಿ ತುಂಬಿ ತುಳುಕುತ್ತದೆ.

 


 

. ಜಾತಕದಲ್ಲಿ ಪಿತೃದೋಷದ ಲಕ್ಷಣಗಳು

ಕೆಳಗೆ ಕಾಣಿಸಿರುವ ಲಕ್ಷಣಗಳಿದ್ದರೆ ‘ವ್ಯಕ್ತಿಗೆ ಪಿತೃದೋಷ ಇದೆ ಎಂದು ತಿಳಿಯಬೇಕು.

೨ ಅ. ಶಾರೀರಿಕ

. ಶರೀರಕ್ಕೆ ತೀವ್ರ ರೋಗ, ಅನಾರೋಗ್ಯವುಂಟಾಗುವುದು, ಮನೆಯಲ್ಲಿ ಯಾರಿಗಾದರೂ ಅನಾರೋಗ್ಯದ ತೊಂದರೆಯಾಗುವುದು.

. ವಿಷಕಾರಿ ಸರ್ಪಕಡಿತಕ್ಕೆ ಒಳಗಾಗುವುದು.

೨ ಆ. ಮಾನಸಿಕ

. ಮನಸ್ಸು ಮತ್ತು ಶರೀರ ಅಸ್ವಸ್ಥ ವಾಗಿರುವುದು

. ಮನಸ್ಸು ಅಶಾಂತವಾಗಿರುವುದು, ಭಯವೆನಿಸುವುದು, ಬೆಚ್ಚಿ ಬೀಳುವುದು, ಬಡಬಡಿಸುವುದು, ಭಾಸವಾಗುವುದು.

. ನದಿ ಅಥವಾ ಸಮುದ್ರವನ್ನು ನೋಡಿ ತೊಂದರೆಯೆನಿಸುವುದು.

. ದುಃಸ್ವಪ್ನಗಳು ಬೀಳುವುದು, ನಿದ್ರೆ ಯಿಲ್ಲದಿರುವುದು, ರಾತ್ರಿ ಹೆದರುವುದು

. ಪೂಜೆಪುನಸ್ಕಾರ, ದಾನಧರ್ಮ, ಕುಲಧರ್ಮ, ಕುಲಾಚಾರ ಇವುಗಳನ್ನು ಆಚರಿಸಲು ಅಡಚಣೆ ಬರುವುದು, ಅವುಗಳಲ್ಲಿ ಮನಸ್ಸು ಏಕಾಗ್ರವಾಗದಿರುವುದು, ಅವುಗಳ ಮೇಲೆ ವಿಶ್ವಾಸವಿಲ್ಲದಿರುವುದು

೨ ಇ. ಕೌಟುಂಬಿಕ

. ಮನೆಯಲ್ಲಿ ನೀರು ಸರಬರಾಜು ಕಡಿಮೆಯಾಗುವುದು.

. ದಾಂಪತ್ಯದಲ್ಲಿ ಸುಖ-ಸಮಾಧಾನವಿಲ್ಲದಿರುವುದು

. ಮನೆಯಲ್ಲಿ ಶುಭಕಾರ್ಯ ನಿಶ್ಚಿತವಾಗದಿರುವುದು ಅಥವಾ ವಿವಾಹಕಾರ್ಯದಲ್ಲಿ ಅಡಚಣೆಗಳು ಎದುರಾಗುವುದು.

. ವಾರಸುದಾರದ ಹಕ್ಕು ಹೋಗುವುದು

. ಜನರೊಂದಿಗೆ ಜಗಳವಾಡುವುದು ಅಥವಾ ವಿವಾದಗಳಾಗುವುದು

. ಕೋರ್ಟ್-ಕಚೇರಿಯ ತೊಂದರೆ ಆರಂಭವಾಗುವುದು

೨ ಈ. ಆರ್ಥಿಕ

. ನೌಕರಿಯಲ್ಲಿ ಅಥವಾ ವ್ಯವಹಾರದಲ್ಲಿ ಸ್ಥಿರತೆಯುಂಟಾಗದೇ ಮೇಲಿಂದ ಮೇಲೆ ಬದಲಾವಣೆಯಾಗುವುದು

. ಸಾಲ ಆಗುವುದು, ಹಣ ಸಾಕಾಗದಿರುವುದು, ಮನೆಯಲ್ಲಿ ಧನ-ಧಾನ್ಯ ಕಡಿಮೆಯಾಗುವುದು.

. ಕುಟುಂಬದ ಪೋಷಣೆಯ ಕಾಳಜಿಯೆನಿಸುವುದು.


. ಪಿತೃ ಉಪಾಸನೆ ಹೇಗೆ ಮಾಡಬೇಕು?

೩ ಅ. ಶ್ರಾದ್ಧವನ್ನು ಮಾಡುವುದು : ‘ಶ್ರದ್ಧಯಾ ಕ್ರಿಯತೇ ತತ್ ಶ್ರಾದ್ಧಮ್ | ಅಂದರೆ ‘ಶ್ರದ್ಧೆಯಿಂದ ಪಿತೃಗಳಿಗೆ ವಿಧಿವತ್ ಹವಿರ್ಯುಕ್ತ ಪಿಂಡಪ್ರಧಾನ ಮುಂತಾದ ಕರ್ಮಗಳನ್ನು ಮಾಡುವುದಕ್ಕೆ ‘ಶ್ರಾದ್ಧವೆನ್ನುತ್ತಾರೆ. ‘ಶ್ರಾದ್ಧದಲ್ಲಿ ಮಂತ್ರಸಹಿತ ಪಿಂಡದಾನ ಮತ್ತು ಸಜ್ಜನರಿಗೆ ಭೋಜನ ಈ ಕರ್ಮಗಳು ಮುಖ್ಯವಾಗಿರುತ್ತದೆ.


೩ ಆ. ನಾರಾಯಣ ನಾಗಬಲಿ, ತ್ರಿಪಿಂಡಿ ಮತ್ತು ತೀರ್ಥಶ್ರಾದ್ಧ : ಅಖಂಡ ೫ ವರ್ಷ ಮನೆಯಲ್ಲಿ ಪೂರ್ವಜರ ಶ್ರಾದ್ಧವಾಗದಿದ್ದರೆ ಅವರು ನಾರಾಯಣ ನಾಗಬಲಿ, ತ್ರಿಪಿಂಡಿ (ಮೂರು ಪಿಂಡಗಳ ಶ್ರಾದ್ಧ ವಿಧಿ) ಮತ್ತು ತೀರ್ಥಶ್ರಾದ್ಧವನ್ನು ಮಾಡಿದಲ್ಲಿ ಪಿತೃದೋಷದ ಶಾಂತಿಯಾಗಿ ಪಿತೃಗಣಗಳ ಶುಭ-ಆಶೀರ್ವಾದ ಮತ್ತು ಪುಣ್ಯ ಲಭಿಸುತ್ತದೆ.


೩ ಇ. ನಿಯಮಿತವಾಗಿ ಶ್ರಾದ್ಧಾದಿ ಕರ್ಮಗಳನ್ನು ಮಾಡುವುದರಿಂದ ಆಗುವ ಲಾಭಗಳು : ಯಾರು ನಿಯಮಿತವಾಗಿ ಶಾದ್ಧಾದಿ ಕರ್ಮಗಳನ್ನು ಮಾಡುತ್ತಾರೆಯೋ, ಅವರಿಗೆ ಪಿತೃಗಳು ಸಂತುಷ್ಟಗೊಳ್ಳುವುದರಿಂದ ಆಯುಷ್ಯ, ಕೀರ್ತಿ, ಬಲ, ತೇಜ, ಧನ, ಪುತ್ರ, ಸಂಸಾರಸುಖ, ಆರೋಗ್ಯ ಸನ್ಮಾನ ಇತ್ಯಾದಿ ವಿಷಯಗಳು ಲಭಿಸುತ್ತವೆ. ಆಧಿಭೌತಿಕ ಸ್ಥೂಲ ರಾಜ್ಯದ ಸಂಚಾಲಕರು ಮತ್ತು ಕುಲದ ನಿತ್ಯ ರಕ್ಷಕರು ಈ ಪಿತೃಗಳೇ ಆಗಿದ್ದಾರೆ. ಆದುದರಿಂದ ಪಿತೃಗಳ ತೃಪ್ತಿಯಿಂದ ಐಹಿಕ ಸುಖ ಲಭಿಸುತ್ತದೆ. ಪಿತೃಗಳ ಆಶೀರ್ವಾದವಿಲ್ಲದೇ ಆಧ್ಯಾತ್ಮಿಕ ಪ್ರಗತಿ ಮತ್ತು ಇಷ್ಟ ದೇವತೆಗಳ ಕೃಪಾಪ್ರಾಪ್ತಿಯಲ್ಲಿಯೂ ಅಡಚಣೆಗಳು ನಿರ್ಮಾಣವಾಗುತ್ತವೆ. ಆದುದರಿಂದ ಪಿತೃಗಳ ತೃಪ್ತಿಗೆ ಆಗ್ರ ಸ್ಥಾನವಿದೆ. ಮೊದಲು ಪಿತೃಗಳಿಗೆ, ಬಳಿಕ ಕುಲದೇವಿ-ದೇವತೆಗಳು, ತದನಂತರ ಇಷ್ಟ ದೇವತೆಯ ಕೃಪೆ ಹೀಗೆ ಅನುಕ್ರಮವಿದೆ. ಸ್ವಲ್ಪದರಲ್ಲಿ ಮಹತ್ವದ್ದೆಂದರೆ ಪಾರಲೌಕಿಕ ಸುಖ ಪಡೆಯಲು ಪಿತೃಗಳೇ ಕಾರಣಕರ್ತರಾಗಿರುತ್ತಾರೆ.


೩ ಈ. ಋಣಗಳು : ದೇವಋಣ, ಋಷಿಋಣ, ಪಿತೃಋಣ, ಮನುಷ್ಯಋಣ ಮತ್ತು ಭೂತಋಣ

೩ ಈ ೧. ಪಂಚ ಮಹಾಯಜ್ಞ : ಪ್ರತಿಯೊಬ್ಬ ವ್ಯಕ್ತಿ (ಜೀವಾತ್ಮಾ) ಜನಿಸಿದ ಬಳಿಕ ಅವನು ೫ ಋಣಗಳನ್ನು (ಸಾಲ) ಜೊತೆಯಲ್ಲಿ ಪಡೆದುಕೊಂಡೆ ಜನಿಸುತ್ತಾನೆ. ಪಡೆದ ಜನ್ಮದಿಂದ ಈ ೫ ಋಣಗಳಿಂದ ಮುಕ್ತರಾಗಬೇಕಾಗಿರುತ್ತದೆ. ಈ ಐದು ಋಣಗಳಿಂದ ಮುಕ್ತರಾಗಲು ‘ಪಂಚ ಮಹಾಯಜ್ಞ ಮಾಡಬೇಕಾಗಿರುತ್ತದೆ. ಪಂಚ ಮಹಾಯಜ್ಞ ಈ ಕೆಳಗೆ ತಿಳಿಸಿರುವಂತೆ ಮಾಡಬೇಕಾಗಿರುತ್ತದೆ. ಕುಟುಂಬದಲ್ಲಿರುವ ಯಾರಾದರೂ ಸ್ತ್ರೀ, ಪುರುಷರು ಅಥವಾ ಮಗ ಅಂದರೆ ಕುಟುಂಬದ ಎಲ್ಲ ಸದಸ್ಯರಿಗಾಗಿ ಈ ಕಾರ್ಯಕ್ರಮವನ್ನು ಮಾಡಿದರೂ ಒಳ್ಳೆಯದು.


೩ ಈ ೧ ಅ. ದೇವಯಜ್ಞ : ಪ್ರತಿದಿನ ಬೆಳಗ್ಗೆ ಒಂದು ಚಮಚ ಶುದ್ಧ ಆಕಳ ತುಪ್ಪದ ನೀಲಾಂಜನವನ್ನು ಅಥವಾ ಕಾಲುದೀಪವನ್ನು ದೇವರ ಮುಂದೆ ಹಚ್ಚಬೇಕು. ಹಾಗೆಯೇ ದೀಪವನ್ನು ಮೃತ ವ್ಯಕ್ತಿಯ ಛಾಯಾಚಿತ್ರದ ಎದುರಿಗೆ ಹಚ್ಚಬೇಕು ಅಥವಾ ಹಸುವಿನ ಸೆಗಣಿಯ ಬೆರಣಿಯನ್ನು ತುಪ್ಪ- ಕರ್ಪೂರ-ಧೂಪ, ಸ್ವಲ್ಪ ಅಕ್ಕಿ ಇತ್ಯಾದಿಗಳಿಂದ ಸಣ್ಣ ಯಜ್ಞವನ್ನು ಮಾಡಬೇಕು.


೩ ಈ ೧ ಆ. ಋಷಿಗಣ : ನಿತ್ಯ ನಿಯಮದಿಂದ ಮಂತ್ರ್ರಜಪ, ನಾಮಸ್ಮರಣೆ, ಭಜನೆ, ಹರಿಪಾಠದಂತೆ ಪಠಣ, ಶ್ಲೋಕಪಠಣ, ಗ್ರಂಥ ಪಾರಾಯಣ ಮಾಡಬೇಕು. ಪ್ರತಿದಿನ ಹಸುವಿಗೆ ಹುಲ್ಲು ಮತ್ತು ಆಹಾರವನ್ನು ನೀಡಬೇಕು.


೩ ಈ ೧ ಇ. ಪಿತೃಯಜ್ಞ :


ಒಂದು ವರ್ಷ ಕಾಲಾವಧಿಗಾಗಿ ಪ್ರತಿದಿನ ಊಟದ ಮೊದಲು ಮಧ್ಯಾಹ್ನ ೧೨ ಗಂಟೆಯ ಮೊದಲು ಕಾಗೆ, ಹಸು ಅಥವಾ ನಾಯಿಗೆ ಒಂದು ತುತ್ತು ಅನ್ನದಾನವನ್ನು ಮಾಡಬೇಕು. ಹಸಿದವರಿಗೆ ಅನ್ನದಾನ ಮಾಡಬೇಕು.

೩ ಈ ೧ ಈ. ಮನುಷ್ಯಯಜ್ಞ : ಮನೆಗೆ ಬರುವ ಅತಿಥಿಗಳಿಗೆ ನೀರು, ಪಾನೀಯ ಅಥವಾ ಆಹಾರ ನೀಡಬೇಕು.


೩ ಈ ೧ ಉ. ಭೂತಯಜ್ಞ :


ಪಶು-ಪಕ್ಷಿ, ಇರುವೆ, ಗುಬ್ಬಿ, ಪಾರಿವಾಳ ಮುಂತಾದವುಗಳಿಗೆ ಅನ್ನ-ಧಾನ್ಯ ನೀಡಬೇಕು. ಇವೆಲ್ಲ ಯಜ್ಞಗಳನ್ನು ಮಾಡಿದಲ್ಲಿ ಎಲ್ಲ ದೋಷಗಳೂ ಕಡಿಮೆಯಾಗುತ್ತದೆ. ಪ್ರತಿದಿನ ಪಿತೃ ಉಪಾಸನೆಯಾಗುತ್ತದೆ. ಜನ್ಮಲಗ್ನ ಅಥವಾ ರಾಶಿ ಕುಂಡಲಿಯಲ್ಲಿ ಪಂಚಮದಲ್ಲಿ ಅಥವಾ ನವಮದಲ್ಲಿ ಕೇತು, ಅಷ್ಟಮದಲ್ಲಿ ಅಥವಾ ದ್ವಾದಶದಲ್ಲಿ ಗುರು ಅಥವಾ ಪೀಡಿತ ರವಿ ಅಥವಾ ಚಂದ್ರ ಈ ಪ್ರಕಾಶಿತ ಗ್ರಹಗಳು, ಕುಂಡಲಿಯಲ್ಲಿ ರವಿ-ಕೇತು, ಗುರು-ರಾಹು ಪೀಡಿತ ಇತ್ಯಾದಿ ಲಕ್ಷಣಗಳಿದ್ದರೆ ಪಿತೃದೋಷ ಜಾತಕದಲ್ಲಿ ಕಂಡುಬರುತ್ತದೆ. ಪ್ರಖರ ಪಿತೃದೋಷದಿಂದ ಮುಖ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಕಣ್ಣುಗಳ ಕೆಳಗೆ ಕಪ್ಪು ವೃತ್ತ ಬರುತ್ತದೆ ಮತ್ತು ತುಟಿಗಳೂ ನಿಸ್ತೇಜಗೊಂಡು ಕಪ್ಪಾಗಿರುವಂತೆ ಕಂಡುಬರುತ್ತದೆ. ಅಮಾವಾಸ್ಯೆ ಹತ್ತಿರ ೧-೨ ದಿನಗಳ ಹಿಂದೆ-ಮುಂದೆ ವಾಸಿಸುತ್ತಿರುವ ಮನೆಯಲ್ಲಿ ಒಂದು ರೀತಿಯ ಚಡಪಡಿಕೆ, ಉದಾಸೀನತೆ ಅಥವಾ ಅಸ್ವಸ್ಥತೆ ಭಾಸವಾಗುತ್ತದೆ. ಮಧ್ಯಾಹ್ನ ೧೨ ರಿಂದ ೧ ಗಂಟೆಯ ಕಾಲಾವಧಿಯಲ್ಲಿ ಮನೆಯ ಹತ್ತಿರ ಕಾಗೆ ಬಹಳ ಕೂಗಿ ಮನೆಯೆದುರು ಬರುತ್ತದೆ. ಇಂತಹ ಸಮಯದಲ್ಲಿ ಪಿತೃದೋಷಕ್ಕಾಗಿ ಉಪಾಸನೆ ಮಾಡಬೇಕು.


. ಪಿತೃದೋಷಕ್ಕಾಗಿ ಉಪಾಸನೆ ಮಾಡುವುದರಿಂದ ಆಗುವ ಲಾಭಗಳು :


ಪಿತೃದೋಷದಿಂದ ಆಗುವ ತೊಂದರೆಗಳು ದೂರವಾಗುತ್ತವೆ. ಯಾವುದೇ ಸುಂದರ, ಸುಶಿಕ್ಷಿತ ಯುವತಿಯ ತಂದೆ-ತಾಯಿ ಆರ್ಥಿಕವಾಗಿ ಸುದೃಢರಾಗಿದ್ದರೂ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಮದುವೆಯಾಗುವುದಿಲ್ಲ, ಕುಲದೇವಿಯ ಸೇವೆಯನ್ನು ಮಾಡಿದರೂ ಮಾರ್ಗ ದೊರಕುವುದಿಲ್ಲ. ಇಂತಹ ಸಮಯದಲ್ಲಿ ಮುಖ್ಯವಾಗಿ ಪಿತೃ ದೋಷ ಕಾರಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪಿತೃದೋಷದ ನಾರಾಯಣ ನಾಗಬಲಿಯ ಪೂಜೆಯನ್ನು ಮಾಡುವುದರಿಂದ ಅಪೇಕ್ಷಿತಗಿಂತ ಒಳ್ಳೆಯ ವರ ದೊರೆತು ಕಡಿಮೆ ಖರ್ಚಿನಲ್ಲಿ ವಿವಾಹ ವಾಗುತ್ತದೆ. ಪ್ರತಿದಿನ ರಾಮರಕ್ಷಾ, ಮಾರುತಿ ಸ್ತ್ರೋತ್ರ, ಶ್ಲೋಕ, ಪ್ರಾರ್ಥನೆ ಹರಿಪಾಠ ಗ್ರಂಥಪಠಣವನ್ನು ಮಾಡಬೇಕು. ಇದರಿಂದ ಮಾನಸಿಕ ಸಮಾಧಾನ ಮತ್ತು ಆರೋಗ್ಯ ಲಭಿಸುತ್ತದೆ.

 

------------- Hari Om -------------














No comments:

Post a Comment