Navagraha
ನವಗ್ರಹ ಸ್ತೋತ್ರ ---- Navagraha Stothra
ಸೂರ್ಯ
ಗ್ರಹ ಮಂತ್ರ
ಓಂ
ಜಪಾಕುಸುಮ ಸಂಕಾಶಂ । ಕಾಶ್ಯಪೇಯಂ
ಮಹಾದ್ಯುತಿಂ ।
ತಮೋsರಿಮ್
ಸರ್ವಪಾಪಘ್ನಮ್ । ಪ್ರಣತೋsಸ್ಮಿ
ದಿವಾಕರಂ
ಭಾವಾರ್ಥ
: ದಾಸವಾಳ
ಹೂಗಳಂತೆ ಕಂಗೊಳಿಸುವ,
ಕಶ್ಯಪನ
ಮಗನಾದ, ಶತ್ರುವೋ
ಎಂಬಂತೆ ಕತ್ತಲನ್ನು ಅಟ್ಟುವ,
ಸಕಲ
ಪಾಪಗಳನ್ನು ಪರಿಹರಿಸುವ ದಿವಾಕರನಿಗೆ
ನಮಸ್ಕರಿಸುತ್ತೇನೆ.
ಚಂದ್ರ
ಗ್ರಹ ಮಂತ್ರ
ಓಂ
ದಧಿಶಂಖತುಷಾರಾಭಂ ।
ಕ್ಷೀರೋದಾರ್ಣವ ಸಂಭವಮ್।
ನಮಾಮಿ
ಶಶಿನಂ ಸೋಮಂ । ಶಂಬೋರ್ಮುಕುಟ
ಭೂಷಣಂ ।।
ಭಾವಾರ್ಥ
: ಮೊಸರು,
ಶ೦ಖ,
ಹಿಮದ೦ತೆ
ಹೊಳೆಯುವ; ಕ್ಷೀರಸಾಗರದಿಂದ
ಹೊರಹೊಮ್ಮಿದ, ಕಾಂತಿಯುಕ್ತನಾದ,
ಮಹಾದೇವನ
ಶಿರಸ್ಸನ್ನು ಅಲಂಕರಿಸಿರುವ
ಚಂದ್ರದೇವನಿಗೆ ನಮಸ್ಕರಿಸುತ್ತೇನೆ.
ಕುಜ
ಗ್ರಹ ಮಂತ್ರ
ಓಂ
ಧರಣೀಗರ್ಭ ಸಂಭೂತಂ । ವಿದ್ಯುತ್
ಕಾಂತಿ ಸಮಪ್ರಭಮ್ ।
ಕುಮಾರಂ
ಶಕ್ತಿ ಹಸ್ತಾಂಚ । ಮಂಗಳಂ
ಪ್ರಣಮಾಮ್ಯಹಮ್ ।।
ಭಾವಾರ್ಥ
: ಧರಣೀದೇವಿಯ
ಗರ್ಭದಲ್ಲಿ ಜನಿಸಿದ,
ವಿದ್ಯುತ್
ಕಾಂತಿಗೆ ಸಮನಾದ ಪ್ರಭಾವಳಿಯುಳ್ಳ,
ಶಕ್ತ್ಯಾಯುಧದಿಂದ
ಶೋಭಿಸುವ, ತರುಣನಾದ
ಮಂಗಳನಿಗೆ (ಕುಜ
/ ಅಂಗಾರಕ)
ನಮಸ್ಕರಿಸುತ್ತೇನೆ.
ಬುಧ
ಗ್ರಹ ಮಂತ್ರ
ಓಂ
ಪ್ರಿಯಂಗುಕಾಲಿಕ ಶ್ಯಾಮಂ ।
ರೂಪೇಣಾಮ್ ಪ್ರತಿಮಂ ಬುಧಮ್
।
ಸೌಮ್ಯಮ್
ಸೌಮ್ಯ ಗುಣೋಪೇತಂ । ತಮ್ ಬುಧಮ್
ಪ್ರಣಮಾಮ್ಯಹಮ್ ।।
ಭಾವಾರ್ಥ
: ಪ್ರಿಯ೦ಗು
ಲತೆಯ ಚಿಗುರಿನ೦ತೆ ಶ್ಯಾಮವರ್ಣದವನೂ
ಸುಂದರನೂ ಸೌಮ್ಯಗುಣಸಂಪನ್ನನೂ
ಆದ ಬುಧ ದೇವನನ್ನು ನಮಸ್ಕರಿಸುತ್ತೇನೆ.
ಗುರು
ಗ್ರಹ ಮಂತ್ರ
ಓಂ
ದೇವಾನಾಮ್ ಚ ಋಷಿಣಾಮ್ ಚ । ಗುರುಮ್
ಕಾಂಚನ ಸನ್ನಿಭಮ್ ।
ಬುದ್ಧಿ
ಭೂತಂ ತ್ರಿಲೋಕೇಶಂ । ತಮ್ ನಮಾಮಿ
ಬೃಹಸ್ಪತಿಮ್ ।।
ಭಾವಾರ್ಥ
: ದೇವತೆಗಳಿಗೂ
ಋಷಿಗಳಿಗೂ ಪ್ರಿಯನಾದ,
ಚಿನ್ನದ೦ತೆ
ಹೊಳೆಯುವ, ಮೂರುಲೋಕಗಳಲ್ಲೂ
ಸಾಟಿಯಿಲ್ಲದಷ್ಟು ಬುದ್ಧಿಮತ್ತೆ
ಹೊಂದಿರುವ ಬೃಹಸ್ಪತಿಗೆ
ನಮಸ್ಕರಿಸುತ್ತೇನೆ.
ಶುಕ್ರ
ಗ್ರಹ ಮಂತ್ರ
ಓಂ
ಹಿಮಕುಂದ ಮೃಣಾಲಾಭಂ ।
ದೈತ್ಯಾನಾಮ್ ಪರಮಮ್ ಗುರುಮ್
।
ಸರ್ವಶಾಸ್ತ್ರ
ಪ್ರವಕ್ತಾರಮ್ । ಭಾರ್ಗವಂ
ಪ್ರಣಮಾಮ್ಯಹಮ್ ।।
ಭಾವಾರ್ಥ
: ಹಿಮದ
ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ
ಹಾಗೆ ಶೋಭಿಸುವ, ದೈತ್ಯರ
ಪರಮಗುರುವಾದ, ಸಕಲ
ಶಾಸ್ತ್ರ ಪರಿಣತನಾದ,
ಭೃಗು
ಮಹರ್ಷಿಯ ಕುಲದವನಾದ ಶುಕ್ರನಿಗೆ
ನಮಸ್ಕರಿಸುತ್ತೇನೆ.
ಶನಿ
ಗ್ರಹ ಮಂತ್ರ
ಓಂ
ನೀಲಾಂಜನ್ ಸಮಾಭಾಸಂ । ರವಿಪುತ್ರಂ
ಯಮಾಗ್ರಜಮ್ ।
ಛಾಯಮಾರ್ತಾಂಡ
ಸಮಭೂತಂ । ತಮ್ ನಮಾಮಿ ಶನೈಶ್ಚರಮ್
।।
ಭಾವಾರ್ಥ
: ನೀಲವರ್ಣದಿಂದ
ಶೋಭಿಸುವ, ಸೂರ್ಯದೇವನ
ಮಗನೂ ಯಮನ ಹಿರಿಯ ಸಹೋದರನೂ ಆದ
ಛಾಯಾಪುತ್ರ ಶನಿದೇವನಿಗೆ
ನಮಸ್ಕರಿಸುತ್ತೇನೆ.
ರಾಹು
ಗ್ರಹ ಮಂತ್ರ
ಓಂ
ಅರ್ಧಕಾಯಂ ಮಹಾವೀರ್ಯಮ್ ।
ಚಂದ್ರಾದಿತ್ಯ ವಿಮರ್ದನಂ
।
ಸಿಂಹಿಕಾ ಗರ್ಭಸಂಭೂತಂ
। ತಮ್ ರಾಹುಮ್ ಪ್ರಣಮಾಮ್ಯಹಮ್
।।
ಭಾವಾರ್ಥ
: ಅರ್ಧ
ದೇಹವನ್ನು ಹೊಂದಿದ್ದರೂ ವೀರನಾದ,
ಸೂರ್ಯ
ಚಂದ್ರರನ್ನು ಗ್ರಹಣದ ಮೂಲಕ
ಪೀಡಿಸುವ, ಸಿಂಹಿಕೆಯ
ಮಗನಾದ ರಾಹುವಿಗೆ ನಮಸ್ಕರಿಸುತ್ತೇನೆ.
ಕೇತು
ಗ್ರಹ ಮಂತ್ರ
ಓಂ
ಪಲಾಶಪುಷ್ಪ ಸಂಕಾಶಂ । ತಾರಕಾಗ್ರಹ
ಮಸ್ತಕಂ ।
ರೌದ್ರಂ
ರೌದ್ರಾತ್ಮಕಂ ಘೋರಂ । ತಮ್ ಕೇತುಂ
ಪ್ರಣಮಾಮ್ಯಹಮ್ ।।
ಭಾವಾರ್ಥ
: ಪಲಾಶ
ಹೂವಿನ೦ತೆ ಕೆ೦ಪಾದ,
ನಕ್ಷತ್ರ
ಹಾಗೂ ಗ್ರಹಗಳ ನೆತ್ತಿಯಲ್ಲಿ
ಶೋಭಿಸುವ, ಅತ್ಯ೦ತ
ರೌದ್ರನಾದ ಹಾಗೂ ಘೋರನಾದ ಕೇತುವಿಗೆ
ನನ್ನ ಪ್ರಣಾಮಗಳು.
ನಮಃ ಸೂರ್ಯಾಯ
ಸೋಮಾಯ ಮಂಗಲಾಯ ಬುಧಾಯ ಚ|
ಗುರು
ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ
ನಮಃ ||
ಇತಿ
ವ್ಯಾಸಮುಖೋದ್ಗೀತಂ ಯಃ ಪಠೇತ್
ಸುಸಮಾಹಿತಃ|
ದಿವಾ
ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ
||
Sage Veda Vyasa
ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಅಥವಾ ರಾತ್ರಿ ವೇಳೆ ಏಕಾಗ್ರತೆ ಯಿಂದ ಪಠಿಸಿದರೆ ಉತ್ತಮ ಫಲಗಳು ದೊರೆಯುವು.
Pic-2
ನವಗ್ರಹ
ಶ್ಲೋಕಗಳು ಅದರ ಭಾವಾರ್ಥ ಸಹಿತ
ವಿವರಿಸಲಾಗಿದೆ .
ಸನ್ಮಾನ್ಯಆಸ್ತಿಕ
ಶ್ರದ್ಧಾವಂತರು ಮನುಷ್ಯಪ್ರಯತ್ನದ
ಜೊತೆ ಗ್ರಹಬಲಕ್ಕಾಗಿ ಈ ಮಂತ್ರಗಳನ್ನು
ಪಠಿಸುವುದರಿಂದ ಉತ್ತಮ ಫಲ
ಕಂಡುಕೊಳ್ಳಬಹುದಾಗಿದೆ
ಶುಭಮಸ್ತಃ
-------------- Hari Om --------------




No comments:
Post a Comment