Yoga Narasimha at Narasimha Teertha - Mulubagilu
ಮುಳಬಾಗಿಲಿನ ನರಸಿಂಹತೀರ್ಥದಲ್ಲಿರುವ ಶ್ರೀ ಶ್ರೀಪಾದರಾಜ
ಮಠದ ಸುಪ್ರಸಿದ್ಧ ಶ್ರೀ ಯೋಗಾನರಸಿಂಹದೇವರು.
The famous Sri Yoganarasimha Deva of the
Sri SriPadaraja Mutt located in the Narasimha Theertha of Mulbagal.
ನರಸಿಂಹಾವತಾರ -- ಒಂದು ವಿವರಣೆ
ಹಿರಣ್ಯಾಕ್ಷ
ಮತ್ತು ಹಿರಣ್ಯಕಶಿಪು ಈ ದೈತ್ಯರಿಬ್ಬರೂ
ಕಶ್ಯಪ ದಿತಿಯರ ಪುತ್ರರು,
ಭೂಮಿಯನ್ನು
ರಸಾತಳಕ್ಕೆ ಕೊಂಡು ಹೋಗಿದ್ದ
ಹಿರಣ್ಯಾಕ್ಷನನ್ನು ಭಗವಂತನು
ವರಾಹನಾಗಿ ಸಂಹರಿಸಿ.
ಭೂದೇವಿಯನ್ನು
ಉದ್ದರಿಸಿದನು. ತಮ್ಮನ
ಮರಣದಿಂದ ದುಃಖಿತನಾದ ಹಿರಣ್ಯಕಶಿಪು
ಭಗವಂತನನ್ನು ವಿರೋಧಿಸ ತೊಡಗಿದನು.
ತಾನು ಅಜೇಯನಾಗಲು,
ಮರಣವೇ ಬಾರದಿರಲೆಂದು
ಘೋರವಾದ ತಪಸ್ಸನ್ನು ಮಾಡಿ,
ಅವನು ದೇವತೆ,
ಮನುಷ್ಯ,
ಪಶು, ಪಕ್ಷಿ
ಮುಂತಾದ ಯಾರಿಂದಲೂ ಮರಣಬಾರದಂತಹ
ವರವನ್ನು ಪಡೆದು ವರಗರ್ವಿತನಾದನು.
ಹಿರಣ್ಯಕಶಿಪು
ಮೂರು ಲೋಕಕ್ಕೆ ಒಡೆಯನಾದನು.
ದೇವ-ದಾನವರೇ
ಆದಿ.ಎಲ್ಲರೂ
ಅವನಿಗೆ ಹೆದರುತ್ತಿದ್ದರು.
ಅವನ ಆಳ್ವಿಕೆಯಲ್ಲಿ
ತ್ರಿಲೋಕವೇ ತಲ್ಲಣಗೊಂಡಿತು.
ಅವನ ರಾಜ್ಯದಲ್ಲಿ
ಯಾರೂ ದೇವರ ಹೆಸರು ಹೇಳುವಂತಿರಲಿಲ್ಲ.
ಯಜ್ಞ ಪೂಜೆ
ಮಾಡುವಂತಿಲ್ಲ. ಎಲ್ಲ
ಕಡೆಗಳಲ್ಲಿ ಹಾ-ಹಾಕಾರ
ತುಂಬಿಹೋಯಿತು. ಸಜ್ಜನರು,
ಸಂತ-ಮಹಾತ್ಮರು,
ದುಃಖಿತರಾದರು.
ದೇವತೆಗಳೂ ಕೂಡ
ಕಂಗೆಟ್ಟು ಜಗತ್ಪತ್ತಿಯಾದ
ನಾರಾಯಣನಲ್ಲಿ ಶರಣಾಗಿ ಲೋಕೋದ್ಧಾರಕ್ಕಾಗಿ
ಪ್ರಾರ್ಥಿಸಿದರು. ಇವರ
ಪ್ರಾರ್ಥನೆಯಿಂದ ಪ್ರಸನ್ನಗೊಂಡ
ಸ್ವಾಮಿಯು - ಹಿರಣ್ಯಕಶಿಪುವನ್ನು
ವಧಿಸುವುದಾಗಿ ಭರವಸೆಯನ್ನಿತ್ತನು.
ದೈತ್ಯರಾಜ
ಹಿರಣ್ಯಕಶಿಪುವಿನ ಅನ್ಯಾಯ-ಅನಾಚಾರ
ಬೆಳೆಯುತ್ತಲೇಹೋಯಿತು.
ಅವನಿಗೆ ಪ್ರಹ್ಲಾದನೆಂಬ
ಓರ್ವ ಮಗನಿದ್ದನು.
ಗರ್ಭದಲ್ಲಿರುವಾಗಲೇ
ಅವನಿಗೆ ನಾರದರ ಅನುಗ್ರಹವಾಗಿತ್ತು.
ಅವನಲ್ಲಿ
ಬಾಲ್ಯದಿಂದಲೇ ಸಹಜವಾದ ಹರಿಭಕ್ತಿ,
ಭಗವತ್ಪ್ರೇಮ
ಅಂಕುರಿಸಿತ್ತು. ಅದರಿಂದಾಗಿ
ಅವನು ಬಾಲ್ಯಚಾಪಲ್ಯ ಆಟ-ಓಟಗಳಲ್ಲಿ
ಕಾಲ ಕಳೆಯದೆ ಯಾವಾಗಲು ಭಗವಂತನ
ಸ್ಮರಣೆಯಲ್ಲೇ ಇರುತ್ತಿದ್ದನು.
ಪಾಠಶಾಲೆಯಲ್ಲಿಯೂ
ಜೊತೆಯ ದೈತ್ಯ ಬಾಲಕರಿಗೆ ಉಪದೇಶವನ್ನು
ಮಾಡುತ್ತಾ ಅವರಿಂದಲೂ ದೇವರ ಭಜನೆ
ಮಾಡಿಸುತ್ತಿದ್ದನು.
ಒಂದು
ದಿನ ಹಿರಣ್ಯಕಶಿಪು ಪ್ರಹ್ಲಾದನನ್ನು
ಕರೆಸಿ, ಮಗು!
ನೀನು ಏನು
ಓದುತ್ತಿರುವೆ? ಓದಿದುದರೊಳು
ಒಳ್ಳೆಯ ಒಂದು ಮಾತು ಹೇಳು,
ಎಂದು ಕೇಳಿದನು.
ಆಗ ಬಾಲಕ ಪ್ರಹ್ಲಾದನು
ವಿನಮ್ರನಾಗಿ. 'ಅಪ್ಪಾ
! ನವವಿಧ
ಭಕ್ತಿಯಿಂದ ಹರಿಯನ್ನು ಸೇವಿಸುವುದೇ
ಎಲ್ಲಕ್ಕಿಂತ ಒಳ್ಳೆಯಮಾತಾಗಿದೆ.
ಭಗವಂತನ
ನಾಮಸ್ಮರಣೆಗಿಂತ ಉತ್ತಮ ವಾದುದು
ಬೇರೆ ಏನೂ ಇಲ್ಲ' ಎಂದು
ಹೇಳಲು-ಹಿರಣ್ಯಕಶಿಪು
ಕ್ರೋಧಗೊಂಡು ಅವನನ್ನು ಕೊಲ್ಲಲು
ಅನೇಕ ಉಪಾಯವನ್ನು ಮಾಡಿದನು.
another Photo
ವಿಷ ಉಣಿಸಿದನು,
ಪರ್ವತದಿಂದ
ತಳ್ಳಿಸಿದನು, ಕೈ
ಕಾಲು ಕಟ್ಟಿ ಸಮುದ್ರಕ್ಕೆಸೆದನು,
ಬೆಂಕಿಯಿಂದ
ಸುಡಲು ಪ್ರಯತ್ನಿಸಿದನು.
ವಿಷಸರ್ಪಗಳಿಂದ
ಕಚ್ಚಿಸಲು ಪ್ರಯತ್ನಿಸಿದನು ಆದರೆ
ಪ್ರಹ್ಲಾದನಿಗೆ ಏನೂ ಆಗದೆ ಹರಿನಾಮವೇ
ಅವನನ್ನು ಕಾಪಾಡಿತು.
ಇದನ್ನರಿತ
ಹಿರಣ್ಯಕಶಿಪು ಇಷ್ಟೊಂದು ಮರಣಾಂತಿಕ
ಕಷ್ಟಕೊಟ್ಟರೂ ಇವನು ಸಾಯುವುದಿಲ್ಲವಲ್ಲ
ಎಂದು ಯೋಚಿಸಿ ಅವನನ್ನು ಕರೆಸಿ
ಕೇಳಿದನು
ಎಲೈ
ದೈತ್ಯಕುಲ ಕುಠಾರಾ ! ನೀನು
ಯಾರ ಬಲದ ಭರವಸೆಯಿಂದ ನನಗೆ
ವಿರುದ್ದವಾದ ಕಾರ್ಯವನ್ನು
ಮಾಡುತ್ತಿರುವೆ ? ಯಾವಾಗಲು
ಕೊಂಡಾಡುವ ಆ ಹರಿ ನಿನಗೇನಾಗಬೇಕು
? ಗುರುವೋ,
ಬಂಧುವೋ ಯಾರು
? ಆಗ
ಪ್ರಹ್ಲಾದನು ನಿಭರ್ಯನಾಗಿ ಅಪ್ಪಾ!
ಅವನು ಎಲ್ಲವೂ
ಆಗಿದ್ದಾನೆ. ಅಷ್ಟೇ
ಅಲ್ಲ ಅವನು ಪರಮಸುಹೃದಯಿ ಪರಮಪ್ರೇಮಿ,
ಪರಮಾತ್ಮನಾಗಿದ್ದಾನೆ.
ಆಗ ಹಿರಣ್ಯಕಶಿಪು
ಭಾರೀ ಸಿಟ್ಟುಗೊಂಡು ಹಾಗಾದರೆ
ಅವನೆಲ್ಲಿ ಇರುವನು ? ಎಂದು
ಗದರಿಸಿ ಕೇಳಿದಾಗ ಭಕ್ತ ಪ್ರಹ್ಲಾದನು
– 'ಅವನಿಲ್ಲದ
ಜಾಗವೇ ಇಲ್ಲ, ಅವನು
ಎಲ್ಲೆಲ್ಲೂ ಇದ್ದಾನೆ ?
ನಿನ್ನಲ್ಲೂ
ಇದ್ದಾನೆ' ಎಂದು
ಹೇಳಿದನು. ದೈತ್ಯನು
ಹಾಗಾದರೆ ಈ ಸಭಾಸ್ತಂಭದಲ್ಲಿ
ಇರುವನೆ ?' ಏಕಿಲ್ಲ!
ಎಲ್ಲೆಲ್ಲೂ ಇರುವವನು ಸ್ತಂಭದಲ್ಲೂ ಇದ್ದಾನೆ. ಆಗ ಹಿರಣ್ಯಕಶಿಪು ಸಿಟ್ಟಿನಿಂದ ಕೆಂಡಾಮಂಡಲನಾಗಿ ಆ ಕಂಭವನ್ನು ತನ್ನ ಕತ್ತಿಯಿಂದ ಜಡಿಯಲು, ಶ್ರೀಹರಿಯು ನರಸಿಂಹರೂಪವನ್ನು ಧರಿಸಿ ಆ ಕಂಭದಿಂದ ಪ್ರಕಟಗೊಂಡನು. ತನ್ನ ಭಕ್ತನಿಗೆ ಕಷ್ಟ ಕೊಡುತ್ತಿರುವ ದೈತ್ಯನಾದ ಹಿರಣ್ಯಕಪುವಿನ ಹೊಟ್ಟೆಯನ್ನು ತನ್ನ ಉಗುರುಗಳಿಂದಲೇ ಸೀಳಿ ಕೊಂದು ಹಾಕಿದನು. ಹಾಗೂ ತನ್ನ ಪರಮ ಭಕ್ತನಾದ ಪ್ರಹ್ಲಾದನನ್ನು ಪ್ರೇಮದಿಂದ ಎತ್ತಿಕೊಂಡು, ಮುದ್ದಾಡಿ, ಹರಸಿದನು.
ಸರ್ವವ್ಯಾಪಿಯಾದ
ಭಗವಾನ್ ಶ್ರೀ ನರಸಿಂಹದೇವರನ್ನು
ನಾವೆಲ್ಲರೂ
ಕಾಯಾ ವಾಚಾ ಮನಸಾ ಸ್ಮರಿಸುತ್ತಾ ನಮಸ್ಕರಿಸೋಣ.
-------------- Hari Om --------------


No comments:
Post a Comment