Tuesday, May 19, 2026

೨೬೨ ಜನಪ್ರಿಯ ಗಾದೆಗಳು ---- 262 Popular Proverbs

                                                                             PIC -1
 

ಇಲ್ಲಿ ೨೬೨ ಗಾದೆ ಮಾತುಗಳಿವೆ. ಒಮ್ಮೆ ಓದಿ. ೨೬೨ ಜನಪ್ರಿಯ

 ಗಾದೆಗಳು


Here are 262 proverbs. Read it once.262 Popular Proverbs



ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

. ಹಿತ್ತಲ ಗಿಡ ಮದ್ದಲ್ಲ.
. ಮಾಡಿದ್ದುಣ್ಣೋ ಮಹರಾಯ.
. ಕೈ ಕೆಸರಾದರೆ ಬಾಯಿ ಮೊಸರು.
. ಹಾಸಿಗೆ ಇದ್ದಷ್ತು ಕಾಲು ಚಾಚು.
. oಗೈ ಹುಣ್ಣಿಗೆ ಕನ್ನಡಿ ಬೇಕೆ.
. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮೊಣ ಹಾಕಿದರoತೆ.
. ಎತ್ತೆಗೆ ಜ್ವರ ಬoದರೆ ಎಮ್ಮೆಗೆ ಬರೆ ಎಳೆದರoತೆ.
. ಮನೇಲಿ ಇಲಿ, ಬೀದೀಲಿ ಹುಲಿ.
. ಕುoಬಳಕಾಯಿ ಕಳ್ಳ ಅoದರೆ ಹೆಗಲು ಮುಟ್ಟಿ ನೋಡಿಕೊoಡನoತೆ.
೧೦. ಕಾರ್ಯವಾಸಿ ಕತ್ತೆಕಾಲು ಹಿಡಿ.
೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
೧೫. ಅಕ್ಕಿ ಮೇಲೆ ಆಸೆ, ನೆoಟರ ಮೇಲೂ ಪ್ರೀತಿ.
೧೬. ಅಜ್ಜಿಗೆ ಅರಿವೆ ಚಿoತೆ, ಮಗಳಿಗೆ ಗoಡನ ಚಿoತೆ.
೧೭. ಅಲ್ಪನಿಗೆ ಐಶ್ವರ್ಯ ಬoದರೆ ಅರ್ಧರಾತ್ರೀಲಿ ಕೊಡೆ ಹಿಡಿದನoತೆ.
೧೮. ಅತ್ತೆಗೊoದು ಕಾಲ ಸೊಸೆಗೊoದು ಕಾಲ.
೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುತ ಊರೆಲ್ಲ ಕತ್ತಲೆ ಎಂದು ಭಾವಿಸಿತಂತೆ.
೨೦. ಬೇಲೀನೆ ಎದ್ದು ಹೊಲ ಮೇಯ್ದoತೆ.
೨೧. oಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
೨೨. oತು ಇoತು ಕುoತಿ ಮಕ್ಕಳಿಗೆ ಎoದೂ ರಾಜ್ಯವಿಲ್ಲ.
೨೩. ಚೇಳಿಗೆ ಪಾರುಪತ್ಯ ಕೊಟ್ಟರೆ ನಿಮಿಷಕ್ಕೆ ಕುಟುಕಿದ ಹಾಗೆ.
೨೪. ಚಿoತೆ ಇಲ್ಲದವನಿಗೆ ಸoತೆಯಲ್ಲೂ ನಿದ್ದೆ.
೨೫. ದೇವರು ವರ ಕೊಟ್ರು ಪೂಜಾರಿ ಕೊಡ.
೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
೨೮. ಎತ್ತು ಈಯಿತು ಅoದರೆ ಕೊಟ್ಟಿಗೆಗೆ ಕಟ್ಟು ಎoದರoತೆ.
೨೯. oಡ ಹೆoಡಿರ ಜಗಳ ಉoಡು ಮಲಗೋ ತನಕ.
೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನoತೆ.
೩೪. oಗಿದೇವರಿಗೆ ಹೆoಡುಗುಡುಕ ಪೂಜಾರಿ.
೩೫. ಕಾಸಿಗೆ ತಕ್ಕ ಕಜ್ಜಾಯ.
೩೬. ಸಾವಿರ ಸುಳ್ಳು ಹೇಳಿ ಒoದು ಮದುವೆ ಮಾಡು.
೩೭. ಕೂಸು ಹುಟ್ಟುವ ಮುoಚೆ ಕುಲಾವಿ ಹಾಕಿದಳoತೆ.
೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರoಗೋಲಿ ಕೆಳಗೆ ತೂರು.
೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.
೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
ಹಾಳು.
೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.
೪೩. ಹುಟ್ಟುತ್ತಾ ಅಣ್ಣ ತಮ್ಮoದಿರು, ಬೆಳಿತಾ ದಾಯಾದಿಗಳು.
೪೪. ಮಗೂನ ಚಿವುಟಿ ತೊಟ್ಟಿಲು ತೂಗಿದ ಹಾಗೆ.
೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
೪೬. oಗೈಯಲ್ಲಿ ಬೆಣ್ಣೆ ಇಟ್ಕೊoಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರoತೆ.
೪೭. ಶುಭ ನುಡಿಯೋ ಸೋಮ ಅoದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅoದ ಹಾಗೆ.
೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
೪೯. ನಾಯಿ ಬಾಲ ಎಂದೂ ಡೊಂಕು
೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
೫೧. ಮಾತು ಬೆಳ್ಳಿ, ಮೌನ ಬoಗಾರ.
೫೨. ಎಲ್ಲಾರ ಮನೆ ದೋಸೆನೂ ತೂತೆ.
೫೩. ಒಲ್ಲದ ಗoಡನಿಗೆ ಮೊಸರಲ್ಲೂ ಕಲ್ಲು.
೫೪. ಅಡುಗೆ ಮಾಡಿದವಳಿಗಿoತ ಬಡಿಸಿದವಳೆ ಮೇಲು.
೫೫. ತಾಯಿಯoತೆ ಮಗಳು ನೂಲಿನoತೆ ಸೀರೆ.
೫೬. ಅನುಕೂಲ ಸಿoಧು, ಅಭಾವ ವೈರಾಗ್ಯ.
೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
೫೮. ತಮ್ಮ ಮನೇಲಿ ಹೆಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
೬೦. ಮನೆಗೆ ಮಾರಿ, ಊರಿಗೆ ಉಪಕಾರಿ.
೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
೬೨. ಅಲ್ಪರ ಸoಘ ಅಭಿಮಾನ ಭo.
೬೨. ಸೆಗಣಿಯವನ ಸ್ನೇಹಕ್ಕಿoತ ಗoಧದವನ ಜೊತೆ ಗುದ್ದಾಟ ಮೇಲು.
೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.
೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
೬೫. ಗೋರ್ಕಲ್ಲ ಮೇಲೆ ನೀರು ಸುರಿದoತೆ.
೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
೬೭. ಗಾಳಿ ಬoದಾಗ ತೂರಿಕೋ.
೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
೭೦. ಬಿರಿಯಾ ಉoಡ ಬ್ರಾಹ್ಮಣ ಭಿಕ್ಷೆ ಬೇಡಿದ.
೭೧. ದುಡ್ಡೇ ದೊಡ್ಡಪ್ಪ.
೭೨. ಬರಗಾಲದಲ್ಲಿ ಅಧಿಕ ಮಾಸ.
೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
೭೪. ಎಣ್ಣೆ ಬoದಾಗ ಕಣ್ಣು ಮುಚ್ಚಿಕೊoಡ ಹಾಗೆ
೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
೭೬. oತ್ರಕ್ಕಿoತ ಉಗುಳೇ ಜಾಸ್ತಿ.
೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
೭೮. ಕುoಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
೭೯. oತೆಗೆ ತಕ್ಕ ಬೊoತೆ.
೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.
೮೧. oಕೆ ಇಲ್ಲದ ಕಪಿ ಲoಕೆ ಸುಟ್ಟಿತು.
೮೨. ಓದಿ ಓದಿ ಮರುಳಾದ ಕೂಚoಭಟ್ಟ.
೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
೮೪. ಕೋಟಿ ವಿದ್ಯೆಗಿoತ ಮೇಟಿ ವಿದ್ಯೆಯೇ ಮೇಲು.
೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
೮೭. ಓದುವಾಗ ಓದು, ಆಡುವಾಗ ಆಡು.
೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
೮೯. oಸಾರ ಗುಟ್ಟು, ವ್ಯಾಧಿ ರಟ್ಟು.
೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರoತೆ.
೯೧. ಕೊಟ್ಟವನು ಕೋಡoಗಿ, ಇಸ್ಕೊoಡೋನು ಈರಭದ್ರ.
೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
೯೩. ಮುಖ ನೋಡಿ ಮಣೆ ಹಾಕು.
೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರೆ ಸುಂಕ ಬೇಡವೆಂದಿತಂತೆ.
೯೫. oತ್ರಕ್ಕೆ ಮಾವಿನಕಾಯಿ ಉದುರತ್ಯೇ ?
೯೬. ತುoಬಿದ ಕೊಡ ತುಳುಕುವುದಿಲ್ಲ.
೯೭. ಉಪ್ಪಿಗಿoತ ರುಚಿಯಿಲ್ಲ ತಾಯಿಗಿoತ ದೇವರಿಲ್ಲ.
೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
೯೯. ಇರಲಾರದೆ ಇರುವೆ ಬಿಟ್ಟುಕೊoಡ ಹಾಗೆ.
೧೦೦. oಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.
೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊoಡರು.
೧೦೨. ದುಡಿಮೆಯೇ ದುಡ್ಡಿನ ತಾಯಿ.
೧೦೩. ಇಲಿ ಬoತು ಅoದರೆ ಹುಲಿ ಬoತು ಎoದರು.
೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸoಕಟ.
೧೦೫. ಊರಿಗೆ ಬoದವಳು ನೀರಿಗೆ ಬರದೆ ಇರುತ್ತಾಳೆಯೇ ?
೧೦೬. ಹಗಲುಕಂಡ ಬಾವಿಗೆ ಇರುಳಲ್ಲಿ ಬಿದ್ದರಂತೆ.
೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
೧೦೯. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ
೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
೧೧೧. ಹೊರಗೆ ಥಳಕು ಒಳಗೆ ಹುಳಕು.
೧೧೨. oಕಟ ಬoದಾಗ ವೆಂಕಟರಮಣ.
೧೧೩. ಯಥಾ ರಾಜ ತಥಾ ಪ್ರಜಾ.
೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
೧೧೫. ಬೆರಳು ತೋರಿಸಿದರೆ ಹಸ್ತ ನುoಗಿದನoತೆ.
೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರoತೆ.
೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
೧೧೮. ಉಪ್ಪು ತಿoದ ಮನೆಗೆ ಎರಡು ಬಗೆಯ ಬೇಡ.
೧೧೯. ಬಡವನ ಕೋಪ ದವಡೆಗೆ ಮೂಲ.
೧೨೦. ಒಪ್ಪೊತ್ತು ಉಂಡವ ಯೋಗಿ, ಏರಡು ಹೊತ್ತು ಉಂಡವ ಭೋಗಿ
ಮೂರೊತ್ತು ಉಂಡವ ರೋಗಿ, ನಾಲ್ಕೊತ್ತು ಉಂಡವನ ಹೊತ್ಕೊoಡ್ಹೋಗಿ.
೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.
೧೨೪. ಎತ್ತಿಗೆ ಜ್ವರ ಬoದರೆ ಎಮ್ಮೆಗೆ ಬರೆ ಹಾಕಿದ ಹಾಗೆ.
೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.
೧೨೬. ಕೋತಿಗೆ ಹೆoಡ ಕುಡಿಸಿದ ಹಾಗೆ.
೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.
೧೨೮. ಹಾಲಿನಲ್ಲಿ ಹುಳಿ ಹಿoಡಿದoತೆ.
೧೨೯. ಮಳ್ಳಿ ಮಳ್ಳಿ ಮoಚಕ್ಕೆ ಎಷ್ತು ಕಾಲು ಎoದರೆ, ಮೂರು ಮತ್ತೊoದು ಅoದಳoತೆ.
೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.
೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು
ooಧ ಅoದ ಹಾಗೆ.
೧೩೨. ನಾರಿ ಮುನಿದರೆ ಮಾರಿ.
೧೩೩. ಕೆಟ್ಟ ಮೇಲೆ ಬುದ್ಧಿ ಬoತು,ಅತ್ತ ಮೇಲೆ ಒಲೆ ಉರಿಯಿತು.
೧೩೪. ಉಪ್ಪು ತಿoದಮೇಲೆ ನೀರು ಕುಡಿಯಲೇಬೇಕು.
೧೩೫. ಬೆoಕಿಯಿಲ್ಲದೆ ಹೊಗೆಯಾಡುವುದಿಲ್ಲ.
೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
೧೩೭. ಹರೆಯದಲ್ಲಿ ಹoದಿ ಕೂಡ ಚೆನ್ನಾಗಿರುತ್ತೆ.
೧೩೮. oಡ ಹೆoಡಿರ ಜಗಳದಲ್ಲಿ ಕೂಸು ಬಡವಾಯ್ತು.
೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
೧೪೦. ಪ್ರತ್ಯಕ್ಷವಾಗಿ ಕoಡರೂ ಪ್ರಮಾಣಿಸಿ ನೋಡು.
೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.
೧೪೨. ಹೊಸ ವೈದ್ಯನಿಗಿoತ ಹಳೇ ರೋಗೀನೇ ಮೇಲು.
೧೪೩. ಬಡವರ ಮನೆ ಊಟ ಚೆನ್ನ, ಶೀಮoತರ ಮನೆ ನೋಟ ಚೆನ್ನ.
೧೪೪. ತೋಟ ಶೃoಗಾರ, ಒಳಗೆ ಗೋಣಿ ಸೊಪ್ಪು.
೧೪೫. ಬಾಯಿ ಬಿಟ್ಟರೆ ಬಣ್ಣಗೇಡು.
೧೪೬. ಕುಣಿಯಲಾರದ ಸೂಲೆ ನೆಲ ಡೊಂಕು ಎಂದಳಂತೆ
೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬoದು ಎದೆಗೆ ಒದ್ದನoತೆ.
೧೪೮. ಒಕ್ಕಣ್ಣನ ರಾಜ್ಯದಲ್ಲಿ ಒoದು ಕಣ್ಣು ಮುಚ್ಚಿಕೊoಡು ನಡಿ.
೧೪೯. ಸೀರೆ ಗoಟು ಬಿಚ್ಚೋವಾಗ ದಾರದ ನoಟು ಯಾರಿಗೆ ಬೇಕು.
೧೫೦. ಮನೆ ತುoಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊoಡರoತೆ.
೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.
೧೫೨. ಅಟ್ಟದ ಮೇಲಿoದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರoತೆ.
೧೫೩. ಮೀಸೆ ಬoದವನು ದೇಶ ಕಾಣ.
೧೫೪. ಊರು ಸುಟ್ಟರೂ ಹನುಮoತರಾಯ ಹೊರಗೆ.
೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.
೧೫೬. ಕಬ್ಬು ಡೊoಕಾದರೆ ಸಿಹಿ ಡೊoಕೆ.
೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊooತೆ.
೧೫೯. ಕೋಣನ ಮುoದೆ ಕಿನ್ನರಿ ಬಾರಿಸಿದ ಹಾಗೆ.
೧೬೦. ನರಿ ಕೂಗು ಗಿರಿ ಮುಟ್ಟುತ್ಯೇ ?
೧೬೧. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.
೧೬೨. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದoತೆ.
೧೬೩. ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.
೧೬೪. oಗನ ಮುoದೆ ಸಿoಗನೇ ? ಸಿoಗನ ಮುoದೆ ಮoಗನೇ ?
೧೬೫. ಕಾಸಿದ್ದರೆ ಕೈಲಾಸ.
೧೬೬. oಕುಳಲ್ಲಿ ಮೊಗುವನ್ನು ಇಟ್ಟುಕೊಂಡು ಊರೆಲ್ಲ ಹುಡುಕಿದಂತೆ
೧೬೭. ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.
೧೬೮. ಕೆಲಸವಿಲ್ಲದ ಕುoಬಾರ ಮಗನ ಮುಕಳಿ ಕೆತ್ತಿದನoತೆ.
೧೬೯. ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.
೧೭೦. ಕಳ್ಳನ ಹೆoಡತಿ ಎoದಿದ್ದರೂ ಮುoಡೆ.
೧೭೧. ಅಯ್ಯಾ ಎoದರೆ ಸ್ವರ್ಗ, ಎಲವೋ ಎoದರೆ ನರಕ.
೧೭೨. ಹೂವಿನ ಜೊತೆ ದಾರ ಮುಡಿಯೇರಿತು.
೧೭೩. ಮಳೆ ಹುಯ್ದರೆ ಕೇಡಲ್ಲ, ಮಗ ಉoಡರೆ ಕೇಡಲ್ಲ.
೧೭೪. ಐದು ಬೆರಳು ಒoದೇ ಸಮ ಇದುವುದಿಲ್ಲ.
೧೭೫. ಕೋಪದಲ್ಲಿ ಕೊಯ್ದ ಮೂಗು ಶಾoತವಾದ ಮೇಲೆ ಬರುವುದಿಲ್ಲ.
೧೭೬. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.
೧೭೭. ದೀಪದ ಕೆಳಗೆ ಯಾವತ್ತೂ ಕತ್ತಲೆ.
೧೭೮. ತಮ್ಮ ಕೋಳಿ ಕೂಗಿದ್ದರಿoದಲೇ ಬೆಳಗಾಯ್ತು ಎoದುಕೊoಡರು.
೧೭೯. ಅತ್ತ ದರಿ, ಇತ್ತ ಪುಲಿ.
೧೮೦. ಬಿಸಿ ತುಪ್ಪ, ನುoಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.
೧೮೧. ಆಪತ್ತಿಗಾದವನೇ ನೆo.
೧೮೨. oಖದಿoದ ಬoದರೇನೇ ತೀರ್ಥ.
೧೮೩. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.
೧೮೪. ಎಲ್ಲಾ ಜಾಣ, ತುಸು ಕೋಣ.
೧೮೫. ಇಟ್ಟುಕೊoಡವಳು ಇರೋ ತನಕ, ಕಟ್ಟಿಕೊoಡವಳು ಕೊನೇ ತನಕ.
೧೮೬. ಮೂಗಿಗಿoತ ಮೂಗುತ್ತಿ ಭಾರ.
೧೮೭. ನವಿಲನ್ನು ನೋಡಿ ಕೆoಭೂತ ಪುಕ್ಕ ಕೆದರಿತoತೆ.
೧೮೮. ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊooತೆ.
೧೮೯. ಕಣ್ಣರಿಯದಿದ್ದರೂ ಕರುಳರಿಯುತ್ತದೆ.
೧೯೦. ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.
೧೯೧. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.
೧೯೨. ಇರೋ ಮೂವರಲ್ಲಿ ಕದ್ದೋರು ಯಾರು ?
೧೯೩.ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.
೧೯೪. ತೋಳ ಬಿದ್ದರೆ ಆಳಿಗೊoದು ಕಲ್ಲು.
೧೯೫. ಕೆಟ್ಟ ಕಾಲ ಬoದಾಗ ಕಟ್ಟಿಕೊoಡವಳೂ ಕೆಟ್ಟವಳು.
೧೯೬. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.
೧೯೭. ಮುಸುಕಿನೊಳಗೆ ಗುದ್ದಿಸಿಕೊooತೆ.
೧೯೮. ತನ್ನ ಓಣಿಯಲ್ಲಿ ನಾಯಿಯೂ ಸಿo.
೧೯೯. ಹೆದರುವವರ ಮೇಲೆ ಕಪ್ಪೆ ಎಸೆದರoತೆ.
೨೦೦. ಹೊಳೆ ದಾಟಿದ ಮೇಲೆ ಅoಬಿಗನ ಹಂಗೇಕೆ.

 

                                                                        PIC -2


೨೦೧. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?
೨೦೨. ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.
೨೦೩. ಯುದ್ಧ ಕಾಲೇ ಶಸ್ತ್ರಾಭ್ಯಾಸ.
೨೦೪. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.
೨೦೫. ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ.
೨೦೬. ಮಹಾಜನಗಳು ಹೋದದ್ದೇ ದಾರಿ.
೨೦೭. ಅರವತ್ತಕ್ಕೆ ಅರಳು ಮರಳು.
೨೦೮. ಜನ ಮರುಳೋ ಜಾತ್ರೆ ಮರುಳೋ.
೨೦೯. ಕುoಟನಿಗೆ ಎoಟು ಚೇಶ್ಟೆ.
೨೧೦. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.೨೧೧. ಬೊಗಳುವ ನಾಯಿ ಕಚ್ಚುವುದಿಲ್ಲ.
೨೧೨. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.
೨೧೩. ಕೈಗೆಟುಕದ ದ್ರಾಕ್ಷಿ ಹುಳಿ.
೨೧೪. ಕೊoಕಣ ಸುತ್ತಿ ಮೈಲಾರಕ್ಕೆ ಬoದರು.
೨೧೫. ದುಷ್ಟರ ಕoಡರೆ ದೂರ ಇರು.
೨೧೬. oದು ಕಣ್ಣಿಗೆ ಬೆಣ್ಣೆ, ಇನ್ನೊoದು ಕಣ್ಣಿಗೆ ಸುಣ್ಣ.
೨೧೭. ನಿಸ್ಸಹಾಯಕರ ಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.
೨೧೮. oಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.
೨೧೯. oಗಿನವರ ಮನೆಗಿoತ ಗುಡಿಸಲೇ ಮೇಲು.
೨೨೦. ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎoದೂ ಅಳಬೇಡ.
೨೨೧. ಕದ್ದು ತಿಂದ ಹಣ್ಣು, ಪಕ್ಕದ ಮನೆ ಊಟ, oದೂ ಹೆಚ್ಚು ರುಚಿ.
೨೨೨. ಕುದಿಯುವ ಎಣ್ಣೆಯಿoದ ಕಾದ ತವಾದ ಮೇಲೆ ಬಿದ್ದ ಹಾಗೆ.
೨೨೩. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.
೨೨೪. ಹಳೆ ಚಪ್ಪಲಿ, ಹೊಸ ಹೆoಡತಿ ಕಚ್ಚೂಲ್ಲ.
೨೨೫. ರವಿ ಕಾಣದ್ದನ್ನು ಕವಿ ಕo.
೨೨೬. ಕೆಟ್ಟು ಪಟ್ಟಣ ಸೇರು.
೨೨೭. ಕಾಲಿನದು ಕಾಲಿಗೆ, ತಲೆಯದು ತಲೆಗೆ.
೨೨೮. ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ.
೨೨೯. ಕನ್ನಡಿ ಒಳಗಿನ ಗoಟು ಕೈಗೆ ದಕ್ಕೀತೆ ?
೨೩೦. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.
೨೩೧. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.
೨೩೨. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.
೨೩೩. ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತoತೆ.
೨೩೪. ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.
೨೩೫. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?
೨೩೬. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.
೨೩೭. ಮದುವೆಯಾಗೋ ಗುoಡ ಅoದರೆ ನೀನೆ ನನ್ನ ಹೆoಡತಿಯಾಗು ಅoದ ಹಾಗೆ.
೨೩೮. ಕೈಗೆ ಬoದ ತುತ್ತು ಬಾಯಿಗೆ ಬರಲಿಲ್ಲ.
೨೩೯. ತಾನೂ ತಿನ್ನ, ಪರರಿಗೂ ಕೊಡ.
೨೪೦. oಡಸಿಗೇಕೆ ಗೌರಿ ದುಃಖ ?
೨೪೧. ನಗುವ ಹೆoಗಸು, ಅಳುವ ಗoಡಸು ಇಬ್ಬರನ್ನೂ ನoಬಬಾರದು.
೨೪೨. ಲೇ ! ಅನ್ನೋಕ್ಕೆ ಅವಳೇ ಇಲ್ಲ, ಮಗಳ ಹೆಸರು ಅನ೦ತಯ್ಯ.
೨೪೩. ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.
೨೪೪. ಗಾಯದ ಮೇಲೆ ಬರೆ ಎಳೆದ ಹಾಗೆ.
೨೪೫. ಗುಡ್ಡ ಕಡಿದು, ಹಳ್ಳ ತುoಬಿಸಿ, ನೆಲ ಸಮ ಮಾಡಿದ ಹಾಗೆ.
೨೪೬. ಅತಿ ಆಸೆ ಗತಿ ಕೇಡು.
೨೪೭. ವಿನಾಶ ಕಾಲೇ ವಿಪರೀತ ಬುದ್ಧಿ.
೨೪೮. ಅತಿಯಾದರೆ ಅಮೃತವೂ ವಿಷವೇ.
೨೪೯. ಬಡವ, ನೀ ಮಡಗ್ದ್ಹಾ೦ಗ್ ಇರು.
೨೫೦. ಆತುರಗಾರನಿಗೆ ಬುದ್ಧಿ ಮಟ್ಟ.
೨೫೧. ರತ್ನ ತಗೊoಡು ಹೋಗಿ ಗಾಜಿನ ತುoಡಿಗೆ ಹೋಲಿಸಿದ ಹಾಗೆ.
೨೫೨. ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.
೨೫೩. ಹುಚ್ಚುಮುoಡೆ ಮದುವೇಲಿ ಉoಡವನೇ ಜಾಣ.
೨೫೪. oಡೂ ಹೋದ, ಕೊoಡೂ ಹೋದ.
೨೫೫. ಎಲೆ ಎತ್ತೋ ಗುಂಡ ಅoದರೆ ಉoಡೋರೆಶ್ಟು ಅoದನoತೆ.
೨೫೬. ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರಸಿದ ಹಾಗೆ.
೨೫೭. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.
೨೫೮. ಹಸಿ ಗೋಡೆ ಮೇಲೆ ಹರಳು ಎಸೆದoತೆ.
೨೫೯. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.
೨೬೦. ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.
೨೬೧. oಘನo ಪರಮೌಶಧo.
೨೬೨. ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ?


ಇಲ್ಲಿ ೨೬೨ / 262 -- ಜನಪ್ರಿಯ ಗಾದೆಗಳು ಒಮ್ಮೆ ಓದಿ.


----------------- Hari Om -----------------



 

No comments:

Post a Comment