Friday, February 27, 2026

ಕಿತ್ತಳೆಹಣ್ಣು ---- Orange Fruit

 

                                                               Kittale Hannu or Orange

 

ಕಿತ್ತಳೆಹಣ್ಣು ---- Orange Fruit

ಕಿತ್ತಳೆ ಹಣ್ಣು ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ದಿನನಿತ್ಯದ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಕಿತ್ತಳೆ ಹಣ್ಣಿನ ಮುಖ್ಯ.

ಕಿತ್ತಳೆ ಯಲ್ಲಿ ಕೊಡಗಿನ ಕಿತ್ತಳೆ ಹೆಚ್ಚು ಒಳ್ಳೆಯದು

ಸಿಪ್ಪೆಯನ್ನು ಒತ್ತಿದಾಗ ಇದರಿಂದ ದ್ರವರೂಪದ ಸಿಟ್ರಿಕ್ ಆಸಿಡ್ ಬರುತ್ತದೆ ಸಣ್ಣವರಿದ್ದಾಗ ಕಣ್ಣಿಗೆ ಸಿಡಿಸಿ ಜೊತೆಗೆ ಬೇರೆಯವರಿಗೂ ಸಿಡಿಸಿ ನಗುವುದು ಮತ್ತು ಅಳುವುದು ಎರಡು ಮಾಡಿರುವ ಅನುಭವಗಳು ಇನ್ನು ಹಚ್ಚ ಹಸಿರು.

 

                                                   Kittale Hannu

  

ಉಪಯೋಗಗಳು:

1) ರೋಗನಿರೋಧಕ ಶಕ್ತಿ ಹೆಚ್ಚಳ: ವಿಟಮಿನ್ ಸಿ ಹೇರಳವಾಗಿದ್ದು, ಶೀತ, ಕೆಮ್ಮು ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡಲು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

2) ಹೃದಯದ ಆರೋಗ್ಯ: ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶವು ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯವಾಗಿಡುತ್ತದೆ.

3) ಜೀರ್ಣಕ್ರಿಯೆ ಸುಧಾರಣೆ: ಫೈಬರ್ ಅಂಶವು ಮಲಬದ್ಧತೆಯನ್ನು ತಡೆಗಟ್ಟಿ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

4) ತ್ವಚೆಯ ಸೌಂದರ್ಯ: ಕಿತ್ತಳೆಯಲ್ಲಿರುವ ವಿಟಮಿನ್ ಸಿ ಮತ್ತು ಇ ಅಂಶಗಳು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಿ, ಯೌವನಯುತ ಚರ್ಮವನ್ನು ನೀಡುತ್ತದೆ. ಕಿತ್ತಳೆ ಸಿಪ್ಪೆಯ ಪುಡಿಯನ್ನು ಫೇಸ್ ಪ್ಯಾಕ್ ಆಗಿ ಬಳಸಬಹುದು.

5) ಕಿಡ್ನಿ ಕಲ್ಲುಗಳ ನಿವಾರಣೆ: ಕಿತ್ತಳೆಯಲ್ಲಿರುವ ಸಿಟ್ರಿಕ್ ಆಮ್ಲವು ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ.

6) ಕಣ್ಣಿನ ದೃಷ್ಟಿ: ಕ್ಯಾರೋಟಿನ್ ಮತ್ತು ವಿಟಮಿನ್ ಎ ಅಂಶವು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.

7) ತೂಕ ನಿಯಂತ್ರಣ: ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಇರುವುದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

8) ಕಿತ್ತಳೆ ಬೀಜಗಳು ಆರೋಗ್ಯಕರ ಕೊಬ್ಬುಗಳು, ಖನಿಜಗಳು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ.

9) ಇದರ ಎಲೆ ಅರೆದು ತಲೆಗೆ ಹಚ್ಚಿ ಘಂಟೆ ಕಾಲ ಬಿಟ್ಟು ತೊಳೆಯಿರಿ ತಲೆಯ ಹೇನು ನಿವಾರಣೆಯಾಗುತ್ತದೆ.

10) ಬೇರು ಕಿತ್ತು ನಿಂಬೆ ರಸ ಸೇರಿಸಿ ಒಂದು ಚಮಚ ತೈದು ತೆಗೆದುಕೊಂಡರೆ ವಾಂತಿ ನಿಲ್ಲುತ್ತದೆ.

11) ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಆರಂಭದಿಂದಲೂ ಉಸಿರಾಟದ ತೊಂದರೆಯ ಚಿಕಿತ್ಸೆಗೆ ಬಳಸುತ್ತಾರೆ. ಅಸ್ತಮಾ ಶೀತದಂತಹ ಸಮಸ್ಯೆಗಳು ಇದ್ದವರು ಈ ಸಿಪ್ಪೆಯನ್ನು ಸೇವಿಸುವುದರಿಂದ ಎದೆಯಲ್ಲಿ ಗಟ್ಟಿಯಾಗಿರುವ ಕಫವನ್ನು ಕರಗಿಸಿ ದೇಹದಿಂದ ಹೊರಗೆ ಹಾಕುವಲ್ಲಿ ಸಹಾಯಕಾರಿಯಾಗುತ್ತದೆ.

 

                                                       Orange Fruit Peel

 

12) ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ, ಮುಖದ ಪ್ಯಾಕ್ ( Face pack ) ಆಗಿ ಬಳಸಬಹುದು, ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. 



ಕಿತ್ತಳೆ ತಿನ್ನುವ ಮೊದಲು ತಿಳಿದುಕೊಳ್ಳಬೇಕಾದದ್ದು

ಕಿತ್ತಳೆ ಹಣ್ಣುಗಳು ಸಾಮಾನ್ಯವಾಗಿ ಆರೋಗ್ಯಕರ ಮತ್ತು ತಿನ್ನಲು ಸುರಕ್ಷಿತ. ಕಿತ್ತಳೆ ತಿನ್ನುವುದು ಮತ್ತು ಕಿತ್ತಳೆ ರಸ ಕುಡಿಯುವುದರಿಂದ ಕೆಲವು ಅಪಾಯಗಳು ಉಂಟಾಗಬಹುದು, ಅವುಗಳೆಂದರೆ:

ಎದೆಯುರಿ ಮುಂತಾದ ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (GERD) ಲಕ್ಷಣಗಳನ್ನು ಉಲ್ಬಣಗೊಳಿಸುವುದು .

ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ, ಆದರೆ ಅಪರೂಪ. ಕೆಲವು ಔಷಧಿಗಳೊಂದಿಗೆ ಸಂವಹನ ನಡೆಸಿ ನೀವು ಕಾಲಾನಂತರದಲ್ಲಿ ಸಕ್ಕರೆ ಯುಕ್ತ ಹೆಚ್ಚು ಜ್ಯೂಸ್ ಕುಡಿದರೆ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

-------------- Hari Om ---------------


 

 

 

No comments:

Post a Comment