ಮಾದನೂರು ಶ್ರೀವಿಷ್ಣು ತೀರ್ಥರು
Madanuru Sri Vishnu Tirtharu
Sri Vishnu Tirthara - Moola Brindavana at Madanuru
ಶ್ರೀ ವಿಷ್ಣುತೀರ್ಥರು, ಮಾದನೂರು
ಮಾದನೂರು ಶ್ರೀವಿಷ್ಣು ತೀರ್ಥರು ಮಹಾನ್ ತಪಸ್ವಿಗಳು.
Vishnu thirtharu: (1756 – 1806) This Year -- This Year Aradhane -- Sunday 15th February 2026
ಮಾಘ ಬಹುಳ ತ್ರಯೋದಶಿ ದಿನದಂದು ಅವರ ಆರಾಧನೆಯನ್ನು ಆಚರಿಸಲಾಗುತ್ತದೆ. ಅವರ ಬೃಂದಾವನ ಮದನೂರಿನಲ್ಲಿದೆ. (ಮದನೂರು ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿದೆ. ಕೊಪ್ಪಳದಿಂದ ಮದನೂರು ಆರು ಮೈಲಿ ದೂರದಲ್ಲಿದೆ - 30 ನಿಮಿಷಗಳ ಪ್ರಯಾಣ.
ವಿಷ್ಣುತೀರ್ಥಃ
ಕಲ್ಪವೃಕ್ಷೋ ವಿಷ್ಣುತೀರ್ಥಶ್ಚ ಕಾಮಧೃಕ್ ।
ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ
ಕಾಮದಃ ।।
viShNutIrthaH kalpavRukShO viShNutIrthaSca kAmadhRuk |
cintAmaNirviShNutIrthO yatIndraH kAmadaH ||
ಯಸ್ಯ ಪ್ರಚಂಡತಪಸಾ
ಶೃತಿಗೀತವೃತ್ತಸ್ತುಷ್ಟೋ ಹರಿ: ಕಿಲ ವಶಂ ವದತಾಪಮಾಪ |
ಶ್ರೀಮಧ್ವಸನ್ಮತ ಪಯೋನಿಧಿ
ಪೂರ್ಣಚಂದ್ರ: ಶ್ರೀವಿಷ್ಣುತೀರ್ಥ
ಮುನಿರಾದ್ಮಾತನೋತು
||
yasya prachanDatapasaa shrutigItavRuttastuShTHO hari: kila vashaM vadataapamaapa |
shrImadhvasanmata payOnidhi pUrNachandra: shrIviShNutIrtha muniraadmaatanOtu ||
ರುದ್ರಾಂಶರು. ಅಪರೋಕ್ಷ ಜ್ಞಾನಿಗಳು. ಲೌಕಿಕ ಸಂಪತ್ತು ತೃಣೀಕರಿಸಿದವರು. ವಿರಕ್ತ ಶಿಖಾಮಣಿಗಳು. ಅಡವಿಯಲ್ಲಿದ್ದು ಶಾಸ್ತ್ರ ಅಧ್ಯಯನ ಅಧ್ಯಾಪನ ಮಾಡಿದರು. ಗ್ರಂಥ ರಚಿಸಿದರು.
Madanuru Mutt Entrance
ಅಡವಿ ಆಚಾರ್ಯರೆಂದೇ ಪ್ರಸಿದ್ಧರಾದರು. ಜಯತೀರ್ಥರೆಂಬುದು
ಪೂರ್ವಾಶ್ರಮದ ಹೆಸರು.
ಸದಾ ಸಾಧಕರು. ಶಿಷ್ಯರ, ಸಾತ್ವಿಕರ ಉದ್ಧಾರ, ಪರಮ ಪುರುಷಾರ್ಥ
ಅವರ ಗುರಿ.
ಶಿಷ್ಯರ ಹಿತಚಿಂತಕರು. ದೂರದಲ್ಲಿದ್ದಾಗ ಶಿಷ್ಯರ ಹಿತಬಯಸಿ ಪತ್ರ ಬರೆಯುತ್ತಾರೆ.
ಪ್ರೀತಿಯಿಂದ ತುಂಬಿದ ಉಪದೇಶ ಆಜ್ಞೆಗಿಂತ ಹೆಚ್ಚೇ ಸರಿ. ಅದಕ್ಕಾಗಿ
ಆಜ್ಞಾಪತ್ರವದು.
ಸುಪ್ರಸಿದ್ಧ. ವೇಳೆಯ ಸದುಪಯೋಗ, ಸಾಧನೆಯ ಬಗೆ ಹೇಗೆ,
ಅದರಲ್ಲಿ ಹೇಳುತ್ತಾರೆ. ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಅಷ್ಟೂಂದು ಅಮೂಲ್ಯ
ಪತ್ರ.
ಶ್ರೀವಿಷ್ಣುತೀರ್ಥರು ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಅಂತಃಕರಣ ತುಂಬಿ ಹೇಳುತ್ತಾರೆ..
ಬೆಳಿಗ್ಗೆ ಸೂರ್ಯೋದಯಕ್ಕೆ ೨ ಗಂಟೆ ಮೊದಲು ಅಂದರೆ ಪ್ರಾತಃ ೪ ಗಂಟೆಗೆ ಎದ್ದೇಳಿ. ಸುಮಾರು ಎರಡೂವರಿ
ಗಂಟೆ- ಮೊದಲು ಶಾಸ್ತ್ರ ಅಧ್ಯಯನ ನಂತರ ಓದಿದ್ದು ಚಿಂತನ.ಮುಂದೆ ಬೆಳಿಗ್ಗೆ ೬
ರಿಂದ ಸಂಜೆ ೬ ರವರೆಗೆ ೧೨ ಗಂಟೆ ಹಗಲು. ಸ್ನಾನ, ಸಂಧ್ಯಾ, ಜಪ, ಪೂಜೆಗಾಗಿ ಎರಡೂವರೆ
ಗಂಟೆ. ಭೋಜನ, ಅಲ್ಪವಿರಾಮ
ಒಂದೂವರಿಗಂಟೆ . ಉಳಿದ ಎಂಟು ಗಂಟೆ ಶ್ರವಣ, ಮನನ, ಅಧ್ಯಯನಾದಿ ಮಾಡಿರಿ.
ಆಮೇಲೆ ಸಾಯಂಸಂಧ್ಯಾ ಜಪ ತಪಾದಿ. ರಾತ್ರಿ ಭೋಜನಾದಿ. ಜೊತೆಗೆ ಮೂರು ಗಂಟೆ ಪುಸ್ತಕ ಅವಲೋಕನ. ನಿದ್ರೆ ಬಂದು ಕಣ್ಣು ಮುಚ್ಚುವವರೆಗೆ. ನಂತರ ಅವಶ್ಯವಿದ್ದಷ್ಟು ಸುಮಾರು ಆರುಗಂಟೆ ನಿದ್ರೆ ಸಾಕು.
ಹೀಗೆ ತಮ್ಮ ಯೋಗ್ಯತಾನುಸಾರ ವ್ಯಾಸಂಗ ಮಾಡಬೇಕು. ಸತತ ಅಧ್ಯಯನಶೀಲರಾಗಿರಿ. ಏನು ಮಾಡಲು
ಕೊಟ್ಟಿದ್ದಾನೋ ದೇವರು ಅದನ್ನು ಸರಿಯಾಗಿ ಮಾಡಿ. ನಿರಂತರ
ಪ್ರಯತ್ನವಿರಲಿ. ಸಿಕ್ಕಿದ್ದರಲ್ಲಿ, ಸಿಕ್ಕಷ್ಟರಲ್ಲಿ
ಸಂತುಷ್ಟರಾಗಿರಿ. ಸಂತೃಪ್ತರಾಗಿರಿ.
ಮಾನವ ಜನ್ಮ ಬಂಗಾರದ ಅವಕಾಶ. ಭರತಖಂಡ ಸಾಧನ ಭೂಮಿ. ವ್ಯರ್ಥ ಮಾಡಬೇಡಿ. ಪಾರಮಾರ್ಥಿಕ ಸಾಧನೆ
ಸದಾ ಮಾಡಿ. ಬೆಳೆಯೊಡನೆ ಕಳೆ. ಲೌಕಿಕ ತಾನೇ ಬಂದೀತು. ಪರರಲ್ಲಿ ಅಶನ, ವಸನ, ಮಾನ, ಮರ್ಯಾದೆ ಇವೆಲ್ಲ ಅನರ್ಥಅಲ್ಲ ಪುರುಷಾರ್ಥ. ಕಿಂಚಿತ್ ಓದಿ ಅಹಂ ಪಡಬೇಡಿ. ನನ್ನಂಥ ಪಂಡಿತ ಇನ್ನೊಬ್ಬನಿಲ್ಲ ಎನ್ನಬೇಡಿ.
another View
Sri Vishnu Tirtha is a Rudra Amsha. During his lifetime, he profoundly completed the entire “Sri Nyaya Sudha Mangala” 108 times.
Works by Sri Madanuru Vishnu Tirtharu :
1. Adhyaatmruta Rasa Ranjani
2. Bimbastuti
3. Muktamaala
4. Rama Stotra
5. Sumadhwa Vijaya Prameya Phalamaalika
6. Nyaayasudhaa stotra
7. Srikrishnaastaka (Antya kaala smarane)
8. BimbaarpaNa vidhi
9. Bhagavata Dharma stotra
10. Atma sukha bodhini patrika
11. Achyutaananta stotra
12. Sri Jayatirthashtaka
13. Sri Jayatirtha Stotra
14. Upadesha Stotra
15. Aajnaa patra
16. ShoDashi
17. Chaturdashi
18. Srimad Bhagavatha Saaroddaara
19. Srimad Bhagavatha Dhruta saara
20. Dhyaana snaana vidhi
Brindavana Darshana
Brindavana:
His Aradhana is Celebrated on Magha Bahula Trayodashi day. His Brindâvana is located at Madanur. (Madanur is in Koppal district, Karnataka. From Koppal, Madanur is SIX ( 6 Miles ) Miles or 10 Kms away and 30 minutes journey.
ಯಸ್ಯ ಪ್ರಚಂಡತಪಸಾ ಶೃತಿಗೀತವೃತ್ತಸ್ತುಷ್ಟೋ ಹರಿ: ಕಿಲ ವಶಂ ವದತಾಪಮಾಪ |
ಶ್ರೀಮಧ್ವಸನ್ಮತ ಪಯೋನಿಧಿ ಪೂರ್ಣಚಂದ್ರ: ಶ್ರೀವಿಷ್ಣುತೀರ್ಥ ಮುನಿರಾದ್ಮಾತನೋತು ||
ಶ್ರೀ
ಕೃಷ್ಣಾರ್ಪಣಮಸ್ತು
ವರದ ವಿಷ್ಣು ತೀರ್ಥ| ನೀ ಕೊಡು ಪುರುಷಾರ್ಥ||
ಶ್ರೀ ವಿಷ್ಣು ತೀರ್ಥ ಗುರುಭ್ಯೋ ನಮಃ
---------------------- Hari Om -------------------





No comments:
Post a Comment