Sunday, July 6, 2025

Ashada Ekadasi

 

                                                                       Lord Vishnu

                                                   

ಪ್ರಥಮ ಏಕಾದಶಿ ---- Ashada Ekadasi

ಓಂ ಗಂ ಗಣಪತಯೇ ನಮಃ
ಓಂ ಶ್ರೀ ಗುರುಭ್ಯೋ ನಮಃ ಹರಿ: ಓಂ
ಓಂ ಲಕ್ಷ್ಮೀನಾರಾಯಣಾಯ ನಮಃ.

 

                                                                  Ashada Ekadasi


ಹಿಂದೂಗಳಿಗೆ ಆಷಾಢ ಮಾಸದ ( ಜೂನ್- ಜುಲೈ) ಶುಕ್ಲ ಪಕ್ಷದ (11ನೇ ದಿನ) ಏಕಾದಶಿ ಪ್ರಮುಖವಾದದ್ದು (06/07/2025). ಈ ಏಕಾದಶಿಯನ್ನು ಮಹಾ ಏಕಾದಶಿ, ಶಯನಿ, ಪ್ರಥಮ, ಪದ್ಮ ದೇವಶಯನಿ ಹಾಗೂ ಕಾಮಿಕ ಏಕಾದಶಿ ಇಂಥ ಹೆಸರುಗಳಿಂದ ಕರೆಯುತ್ತಾರೆ. ಹಿಂದೂಗಳಿಗೆ ಪವಿತ್ರವಾದ ದಿನ. ಉಳಿದೆಲ್ಲ ಏಕಾದಶಿಗಳು ವೈಷ್ಣವರಿಗೆ ವಿಶೇಷವಾಗಿದೆ ಎಂದುಕೊಂಡರೂ ಆಷಾಢ ಮಾಸದ ‘ಪ್ರಥಮ ಏಕಾದಶಿ’ ಯನ್ನು ಸಾರ್ವತ್ರಿಕ ಏಕಾದಶಿ ದಿನವನ್ನಾಗಿ ಆಚರಿಸುತ್ತಾರೆ



                                                                  Sri Vittala & Rukmayi

 

 ಪ್ರಥಮ ಏಕಾದಶಿಯ ಕಥೆ:

ಪೂರ್ವದಲ್ಲಿ ಸತ್ಯಸಾಪೇಕ್ಷಪುರಿ ಎಂಬ ಊರಿನಲ್ಲಿ ಮಹಾವಿಷ್ಣುವಿನ ಪರಮ ಭಕ್ತನಾದ ‘ವೀರಸೇನ’ನೆಂಬ ಕ್ಷತ್ರಿಯನು ಮತ್ತು ಅದೇ ಊರಿನಲ್ಲಿ ಮಕ್ಕಳಿಗೆ ವೇದ ಪಾಠಗಳನ್ನು ಹೇಳಿಕೊಡುವ ‘ಸದ್ಬುದ್ದಿ’ ಎಂಬ ಬ್ರಾಹ್ಮಣನು ವಾಸವಾಗಿದ್ದರು. ಆದರೆ ಕ್ಷತ್ರಿಯನಿಗೆ ತಾನೊಬ್ಬ ಬಲಾಢ್ಯ ವೀರ ಸೇನಾನಿ ಎಂಬ ಅಹಂಕಾರ, ಅದೇ ರೀತಿ ಬ್ರಾಹ್ಮಣಗೆ ತಾನು ವೇದ- ಮಂತ್ರಗಳನ್ನು ತಿಳಿದ ವೇದಾಂಗ ಪಂಡಿತ ಎಂಬ ಅಹಂಕಾರ ಮನದಲ್ಲಿ ತುಂಬಿತ್ತು.

ಹೀಗಿರುವಾಗ ಒಂದು ದಿನ ರಾಜ ಕಾರ್ಯದ ನಿಮಿತ್ತ ವೀರಸೇನ ತನ್ನ ರಥದಲ್ಲಿ ಹೋಗುತ್ತಿರುವ ಮಾರ್ಗದಲ್ಲಿ, ಬಿಸಿಲಲ್ಲಿ ನಡೆದು ಬರುತ್ತಿದ್ದ ‘ಸದ್ಬುದ್ಧಿ’ ಬ್ರಾಹ್ಮಣನನ್ನು ಕಂಡು ವಿಚಾರಿಸಿ ಅವರು ಎಲ್ಲಿಗೆ ಹೋಗಬೇಕು ತಿಳಿದುಕೊಂಡು ತನ್ನ ರಥದಲ್ಲಿಯೇ ಬಿಡುವುದಾಗಿ ಹೇಳಿ ಕೂರಿಸಿಕೊಂಡನು.

ಹಾಗೆ ಹೋಗುತ್ತಿರುವಾಗ ಮಾರ್ಗದಲ್ಲಿ ಇಬ್ಬರೂ ಮಾತುಕತೆ ಆಡುತ್ತ ಹೋಗುತ್ತಿದ್ದರು. ಸಾಮಾನ್ಯ ವಿಚಾರಗಳಿಂದ ಶುರುವಾದ ಮಾತು ಒಂದು ಹಂತದಲ್ಲಿ, ಜ್ಞಾನಬಲ ದೊಡ್ಡದೋ, ಅಥವಾ ಕ್ಷಾತ್ರಬಲ ದೊಡ್ಡದೋ ಎಂಬ ಚರ್ಚೆಗೆ ತಿರುಗಿತು. ಇಬ್ಬರೂ ಮಾತನಾಡುವ ಭರದಲ್ಲಿ ಮಾತಿಗೆ ಮಾತು ಬೆಳೆದು ಕ್ಷತ್ರಿಯನಾದ ವೀರಸೇನನಿಗೆ, ಸದ್ಬುದ್ಧಿ ಬ್ರಾಹ್ಮಣನ ಮೇಲೆ ಕೋಪ ಬಂದು ಆದೇಶದಲ್ಲಿ ತನ್ನ ಬಾಹುಬಲ ತೋರಿಸಿದಾಗ ಬ್ರಾಹ್ಮಣ ಹತನಾದನು.

 
ತಕ್ಷಣ ವೀರಸೇನನಿಗೆ ತನ್ನ ಹೀನ ಕೃತ್ಯ ಕಂಡು ಅವನಿಗೆ ನಾಚಿಕೆಯಾಗಿ, ಬಂದು ಗ್ರಾಮಸ್ಥರಲ್ಲಿ ಕ್ಷಮೆ ಯಾಚಿಸಿ ಬ್ರಾಹ್ಮಣ ಅಂತಿಮ ಕ್ರಿಯೆಗಳನ್ನು ತಾನೇ ಮಾಡುವು ದಾಗಿ ವಚನವಿತ್ತು. ಭೋಜನ- ದಾನ ಸತ್ಕಾರ ಸ್ವೀಕರಿಸಲು ತನ್ನ ಮನೆಗೆ ಬರ ಬೇಕೆಂದು ವೀರಸೇನನು ಕೈಮುಗಿದು ಬ್ರಾಹ್ಮಣರನ್ನು ಆಹ್ವಾನಿಸಿದನು. ಆದರೆ ಬ್ರಾಹ್ಮಣರು ಅವನ ಆಹ್ವಾನವನ್ನು ನಿರಾಕರಿಸಿದರು. ಕಾರಣ ಕೇಳಲು, ವೀರ ಸೇನಾ ನೀನು ‘ಸದ್ಬುದ್ಧಿ’ ಒಬ್ಬ ಬ್ರಾಹ್ಮಣನಾಗಿದ್ದ ಆತನನ್ನು ಕೊಂದು ಬ್ರಹ್ಮಹತ್ಯಾ ದೋಷ ನಿನಗೆ ಬಂದಿದೆ. ನಿನ್ನ ಮನೆಯಲ್ಲಿ ಬ್ರಾಹ್ಮಣರಾದ ನಾವು ಭೋಜನ ಮಾಡುವುದು ಅಸಾಧ್ಯ ಆದ್ದರಿಂದ ಬರುವುದಿಲ್ಲ ಎಂದರು

 

                                                         Lord Vishnu the Supreme God

  

ವೀರಸೇನನು ಪುನಃ ಬ್ರಾಹ್ಮಣರಿಗೆ ಕೈಮುಗಿದು, ಸ್ವಾಮಿ ನಾನು ಒಂದು ಕ್ಷಣ ಮತಿಹೀನ ನಾಗಿ ಈ ಕೃತ್ಯ ಎಸಗಿದೆ. ವಿಪ್ರರಾದ ನೀವು ಕ್ಷಮೆ ಮಾಡಿ ದಯವಿಟ್ಟು ಇದಕ್ಕೊಂದು ಪರಿಹಾರ ತಿಳಿಸಿ ಎಂದು ಪ್ರಾರ್ಥಿಸಿದನು. ಬ್ರಾಹ್ಮಣರು ಗಮನವಿಟ್ಟು ಕೇಳು ವೀರಸೇನಾ, ಕ್ಷತ್ರಿಯ ನಾದವನು ಧರ್ಮಸಂರಕ್ಷಣೆಯನ್ನು ಮಾಡಬೇಕು. ಅದನ್ನು ಬಿಟ್ಟು ಬಲಹೀನರ ಮೇಲೆ ದಬ್ಬಾಳಿಕೆಯನ್ನು ಮಾಡಿದ್ದು ಅಪರಾಧವಾಗಿದೆ ಆದರೂ ಅದಕ್ಕಾಗಿ ನೀನು ಪಶ್ಚಾತಾಪ ಪಟ್ಟಿರುವ ಕಾರಣ ಕ್ಷಮೆ ಇದೆ.

ಈಗ ಬ್ರಾಹ್ಮಣನನ್ನು ಕೊಂದ ಪರಿಹಾರಕ್ಕಾಗಿ ಅಮಾವಾಸ್ಯೆಯ ನಂತರ ಆಷಾಡಮಾಸ ದ ಕೃಷ್ಣ ಪಕ್ಷದ ‘ಏಕಾದಶಿ’ ಯಂದು, ವಿಧಿ ವಿಧಾನಗಳಿಗನುಸಾರ ( ದಿನವಿಡೀ) ನಿರಶನ ಉಪವಾಸ ಮಾಡುವುದರಿಂದ ಬ್ರಹ್ಮ ಹತ್ಯಾ ದೋಷವು ನಿವಾರಣೆಯಾಗಿ ನಿನ್ನ ಪಾಪಗಳು ನಾಶವಾಗುವವು ಎಂದು ಹೇಳಿದರು.

ಬ್ರಾಹ್ಮಣರ ಮಾತಿನಂತೆ ವೀರಸೇನನು ಯಥಾವತ್ತಾಗಿ ‘ಕಾಮಿಕ’ ಏಕಾದಶಿ ಯನ್ನು ವಿಧಿ ವಿಧಾನಗಳ ಅನುಸಾರ ವ್ರತವನ್ನು ಆಚರಿಸಿ ಬ್ರಾಹ್ಮಣರು ಸಂತುಷ್ಟರಾಗು ವಂತೆ ಭೋಜನವನ್ನು ಹಾಗೂ ದಾನ ಗಳನ್ನು ಮಾಡಿ ಮಹಾ ವಿಷ್ಣುವಿನ ಕೃಪೆಗೆ ಪಾತ್ರನಾಗಿ ಬ್ರಹ್ಮ ಹತ್ಯಾ ದೋಷದಿಂದ ಮುಕ್ತನಾದನು ಎಂಬ ಈ ಕಥೆಯನ್ನು ದೇವವ್ರತ ಭೀಷ್ಮರು ನಾರದರಿಗೆ ಹೇಳಿದರು ಎಂದು ಶ್ರೀ ಕೃಷ್ಣನು ಅರ್ಜುನನಿಗೆ
ತಿಳಿಸಿದನು

 

 

                                                                               Pic - 1

 

ಹಾಗೆ ಪ್ರಥಮ ಏಕಾದಶಿ ಕುರಿತು ಹೇಳುತ್ತಾ, ಆಷಾಡ ಮಾಸದ ಕೃಷ್ಣ ಪಕ್ಷದ ಏಕಾದಶಿ ಅಂದರೆ ಈ ಕಾಮಿಕ ಏಕಾದಶಿಯ ಅಧಿಪತಿ ‘ವಾಮನದೇವ’ ರಾಗಿದ್ದು ಈ ದಿನ ನಿರಶನದಿಂದಿದ್ದು ಉಪವಾಸ ವ್ರತವನ್ನು ಆಚರಿಸಬೇಕು. ಏಕಾದಶಿ ಹಿಂದಿನ ದಶಮಿಯಂದು ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸಿ ಸ್ನಾನ ಮಾಡಿ ಭಗವಂತನ ಮುಂದೆ ‘ವಾಮನದೇವ’ ರನ್ನು ಸ್ಮರಿಸುತ್ತಾ,

ಆದ್ಯಸ್ತಿತ್ವಾ ನಿರಾಹಾರ: ಶ್ವೋಭೋತೇ
ಪರಮೇಶ್ವರ ಭೋಕ್ಷ್ಯಾಮಿ, ಪುಂಡರಿಕಾಕ್ಷ
ಅಸ್ಮಿನ್ ಕಾಮಿಕಾ ಏಕಾದಶಿ ವ್ರತೇ

ಎಂದು ಹೇಳಿಕೊಂಡು ವ್ರತ ಮಾಡುವ ಸಂಕಲ್ಪ ಮಾಡಬೇಕು.

ದಶಮಿ ದಿನ ಬೆಳಗ್ಗೆ ಒಂದು ಸಲ ಸಾತ್ವಿಕ ಭೋಜನ ಸ್ವೀಕರಿಸಿ ನಂತರ ಉಪವಾಸ
ಆರಂಭಿಸಿ ಏಕಾದಶಿ ದಿನ ಪೂರ್ಣ ಉಪವಾಸದಿಂದ ಇದ್ದು ವ್ರತದ ಸಮಯದಲ್ಲಿ ಶಂಕ ಚಕ್ರ ಗದಾ ಪದ್ಮ ಪಾಣಿಯಾದ ವಿಷ್ಣುವನ್ನು ವಿಶೇಷವಾಗಿ ತುಳಸಿಯಿಂದ ಪೂಜಿಸಬೇಕು. ದ್ವಾದಶಿ ದಿನ ಬೆಳಿಗ್ಗೆ ಸ್ನಾನ ಮಾಡಿ ನಿತ್ಯ ಕರ್ಮ ಮುಗಿಸಿ, ಭಗವಂತನನ್ನು ಧ್ಯಾನಿಸಿ ಧೂಪ ದೀಪ ನೈವೇದ್ಯಗಳನ್ನು ಮಾಡಿ ಬಳಿಕ ದ್ವಾದಶಿ ತಿಥಿ ಪಾರಣೆ ಮಾಡುವುದರೊಂದಿಗೆ ಏಕಾದಶಿ ವ್ರತವನ್ನು ಶ್ರದ್ಧೆ ಭಕ್ತಿಯಿಂದ ಭಗವಂತನ ನಾಮ ಸ್ಮರಣೆ ಮಾಡುತ್ತಾ ಆಚರಿಸಬೇಕು.

ಈ ಏಕಾದಶಿ ಚಾತುರ್ಮಾಸ ಅವಧಿಯ ಆರಂಭವನ್ನು ಸೂಚಿಸುತ್ತದೆ.


ಆಷಾಡ ಮಾಸದ ದೇವಶಯನಿ ಏಕಾದಶಿಯಂದ ಮಹಾವಿಷ್ಣು ತನ್ನ ಸೃಷ್ಟಿಯ ಸಂಪೂರ್ಣ ಜವಾಬ್ದಾರಿಯನ್ನು ಶಿವನಿಗೆ ಕೊಟ್ಟು ತಿಂಗಳು ಯೋಗ ನಿದ್ರೆಗೆ ಜಾರುತ್ತಾನೆ. ಆದ್ದರಿಂದ ಇದನ್ನು ದೇವಶಯನಿ ಅಥವಾ ಹರಿ ಶಯನಿ ಏಕಾದಶಿ ಎಂದು ಕರೆಯುತ್ತಾರೆ ನಾಲ್ಕು ತಿಂಗಳು ಕಳೆದ ಮೇಲೆ ಬರುವ ಪ್ರಬೋಧಿನಿ ಅಥವಾ ಕಾರ್ತಿಕ ಮಾಸದ ಏಕಾದಶಿ ಎಂದು ಎಚ್ಚರಗೊಳ್ಳುತ್ತಾನೆ ಮತ್ತು ಶಿವನಿಂದ ಸೃಷ್ಟಿ ಕಾರ್ಯ ತೆಗೆದುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ.‌

 

                                                                         another Picture

 

ಇದರಿಂದ ಬ್ರಹ್ಮ ಹತ್ಯಾದಿ ಪಾಪಗಳೆಲ್ಲ ನಾಶವಾಗಿ ಇಹಲೋಕದಲ್ಲಿ ಸುಖವನ್ನು ಅನುಭವಿಸಿ ಜೀವಾತ್ಮರು ಕೊನೆಗೆ ವಿಷ್ಣು ಲೋಕಕ್ಕೆ ಹೋಗುತ್ತಾರೆ. ಹಾಗೂ ಶ್ರೇಷ್ಠವಾದ ಕಾಮಿಕ ಏಕಾದಶಿಯ ಮಹಿಮೆಯನ್ನು ಕೇಳುವುದರಿಂದ, ಓದುವುದ ರಿಂದ ಹೇಳುವುದರಿಂದ, ವಾಜಪೇಯಿ ಯಾಗದ ಫಲವನ್ನು ಪಡೆದು ಜನರು ಸ್ವರ್ಗವನ್ನು ಪಡೆಯುತ್ತಾರೆ. ಎಂದು ಶ್ರೀ ಕೃಷ್ಣನು ಪ್ರಥಮ ಏಕಾದಶಿ ವ್ರತೋ ಪದೇಶವನ್ನು ಅರ್ಜುನನಿಗೆ ತಿಳಿಸಿದನು.

 
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಧಾರಂ ಗಗನಸದೃಶಂ ಮೇಘವರ್ಣಂ ಶುಭಾಗಂ!

ಲಕ್ಷ್ಮಿಕಾಂತಂ ಕಮಲನಯನಂ ಯೋಗಿಬಿರ್ಧ್ಯಾ ನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕ ನಾಥಂ.


------------- Hari Om -------------

 
  

 


                                          



 

No comments:

Post a Comment