ಸಫಲಾ ಏಕಾದಶೀ Saphala Ekadasi -- 7th January 2024
Hari Smarane Mado Nirantara
ಇಂದಿನ ದಿನ ಇರುವ ಈ ಸಫಲಾ ಏಕಾದಶಿಯ ವಿಶೇಷ ಮಹತ್ತ್ವವನ್ನು ಗ್ರಂಥಗಳಲ್ಲಿ ಮತ್ತು ಪುರಾಣಗಳಲ್ಲಿ ಹೇಳಲಾಗಿದೆ. ಈ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಮತ್ತು ಸಾವಿರಾರು ವರ್ಷಗಳ ತಪಸ್ಸಿಗೆ ಸಮಾನವಾದ ಪುಣ್ಯ ಫಲವನ್ನು ಪಡೆಯುತ್ತಾನೆ.
ಯುಧಿಷ್ಠಿರನ ಕೋರಿಕೆಯ ಮೇರೆಗೆ ಶ್ರೀಕೃಷ್ಣನು ಏಕಾದಶೀ ಉಪವಾಸದ ವಿಧಿ ವಿಧಾನಗಳು ತನಗೆ ತೃಪ್ತಿಯನ್ನು ನೀಡುವಷ್ಟು ಯಾವುದೇ ದೊಡ್ಡ ಯಜ್ಞಗಳೂ ನೀಡಲಾರವು ಎನ್ನುವುದನ್ನು ತಿಳಿಸುವನು. ಇದು ಪದ್ಮ ಪುರಾಣದ ವಚನ. ಸಫಲಾ ಏಕಾದಶಿಯು ಕಲ್ಯಾಣ ಮತ್ತು ಅದೃಷ್ಟವನ್ನು ದಯಪಾಲಿಸುತ್ತದೆ ಎಂದು ಪರಿಗಣಿಸಲಾಗಿದೆ ಮತ್ತು ಈ ದಿನದಂದು ಪ್ರಾಮಾಣಿಕ ಹೃದಯದಿಂದ ವಿಷ್ಣುವನ್ನು ಆರಾಧಿಸಿದರೆ ವೈಕುಂಠ ಧಾಮ ಪ್ರಾಪ್ತಿಯಾಗುತ್ತದೆ.
ಈ ಉಪವಾಸದ ಪರಿಣಾಮದಿಂದಾಗಿ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಮತ್ತು ನಕಾರಾತ್ಮಕ ವಿಚಾರಗಳು ಕೊನೆಗೊಳ್ಳುತ್ತದೆ ಎನ್ನುವ ನಂಬಿಕೆಯೂ ಇದೆ.
Saphala Ekadasi
ಸಫಲ
ಏಕಾದಶಿ
ಸಫಲಾ
ಏಕಾದಶಿ ವ್ರತ ವಿಧಾನ
ಸಫಲಾ
ಏಕಾದಶಿಯ ದಿನ ಬ್ರಾಹ್ಮೀ ಮುಹೂರ್ತದಲ್ಲಿ
ಎದ್ದು ಶೌಚವಿಧಿಯನ್ನು ಪೂರೈಸಿ,
ಪ್ರಾತಃ
ಸ್ತೋತ್ರ ಪಠನಾನಂತರ ಸ್ನಾನ
ಸಂಧ್ಯಾದಿಗಳ ಪೂರೈಸಿ ವಿಷ್ಣುವನ್ನು
ಧ್ಯಾನಿಸಿ, ಉಪವಾಸ
ವ್ರತವನ್ನು ಕೈಗೊಳ್ಳಿ.
ಪೂಜೆಗಾಗಿ,
ವಿಷ್ಣುವನ್ನು
ಪೂಜಿಸಬೇಕು.
ಏಕಾದಶಿಯಂದು
ಯಾರು ಉಪವಾಸ ಇರುತ್ತಾರೋ ಅವರು
ಸದಾ ಒಳ್ಳೆಯ ನಡತೆಯನ್ನು ಅನುಸರಿಸಬೇಕು.
ವ್ರತವನ್ನು
ಆಚರಿಸುವವರು ದಶಮಿಯ ದಿನದಿಂದ
ವಿಷ್ಣುವನ್ನು ಮನಸ್ಸಿನಲ್ಲಿ
ಧ್ಯಾನಿಸಬೇಕು.ಅಂದೇ
ದಿನತ್ರಯ ವ್ರತದ ಸಂಕಲ್ಪ ಮಾಡಬೇಕು.
ಏಕಾದಶಿಯ
ದಿನ ಹಾಸಿಗೆಯ ಮೇಲೆ ಮಲಗದೇ ನೆಲದ
ಮೇಲೆ ಮಲಗಿ ರಾತ್ರಿ ಜಾಗರಣೆ
ಮಾಡಬೇಕು.
ದ್ವಾದಶೀ
ಒಂದು ಭೋಜನ ಮಾತ್ರ. ರಾತ್ರಿ
ದೇವರನ್ನು ಮಲಗಿಸಿ ಈ ದಿನತ್ರಯ
ವ್ರತವನ್ನು ಪರಮಾತ್ಮನಿಗರ್ಪಿಸಬೇಕು.
ಶ್ರೀಮಧ್ವೇಶಾರ್ಪಣಮಸ್ತು ------------- Hari Om --------------
No comments:
Post a Comment