Guru Pushya Yoga
ಗುರು-ಪುಷ್ಯ ಅಮೃತ ಸಿದ್ಧಿ ಯೋಗ / Guru Pushya Amrita Siddi
Yoga
ಇದೇ ಜನವರಿ 25, ಗುರುವಾರ. ಪುಷ್ಯ ನಕ್ಷತ್ರ ಗುರುವಾರದ ದಿನ ಬಂದಿದೆ.
ನಕ್ಷತ್ರ ಪ್ರಾರಂಭ ಸಮಯ : ಗುರುವಾರ ಹಗಲು 08:15 ಗಂಟೆಯಿಂದ
ನಕ್ಷತ್ರ ಮುಗಿಯುವ ಸಮಯ : ಶುಕ್ರವಾರ ಹಗಲು 10:27 ಗಂಟೆಯವರೆಗೆ
👉 ಈ ದಿನ ಗುರು ದತ್ತಾತ್ರೇಯ, ದಕ್ಷಿಣಾಮೂರ್ತಿ, ಬೃಹಸ್ಪತಿ, ರಾಘವೇಂದ್ರ, ಸಾಯಿಬಾಬಾ ಮಂತ್ರ ಅಥವಾ ಸ್ತೋತ್ರ ಗಳನ್ನು ಜಪ - ಪಾರಾಯಣ ಮಾಡಿ. ಈ ದೇವರ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯಿರಿ.
👉 ಜಾತಕದಲ್ಲಿ ಗುರು ಪೀಡಿತನಾಗಿದ್ದರೆ ಅಥವಾ ಬಲಹೀನನಾಗಿದ್ದರೆ ಅಥವಾ ಪ್ರಸ್ತುತ ಗುರುಬಲ ಇಲ್ಲದ ರಾಶಿಗಳು (ಮೇಷ, ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ, ಕುಂಭ) ಪರಿಹಾರ ಮಾಡಿಕೊಳ್ಳುವುದು ಪರಿಣಾಮಕಾರಿ. ವಿಶೇಷವಾಗಿ ಮೇಷ, ವೃಷಭ, ಕಟಕ ಮತ್ತು ಮಕರ ರಾಶಿ ಸಂಜಾತರು.
👉 ಗುರುವಿನ ಅನುಗ್ರಹ ಹೊಂದಲು ಈ ದಿನ - ಕಡಲೆಬೇಳೆ, ಹಳದಿ ಹೂವುಗಳು, ಹಳದಿ ಹಣ್ಣುಗಳು, ಹಳದಿ ಅಥವಾ ಕೇಸರಿ ವಸ್ತ್ರ, ದೇವತಾ ಮೂರ್ತಿ ಅಥವಾ ಪೋಟೋ, ಧಾರ್ಮಿಕ ಗ್ರಂಥಗಳು, ಹಳದಿ ಸಿಹಿ ತಿನಿಸುಗಳು.... ಇತ್ಯಾದಿ ವಸ್ತುಗಳನ್ನು ದಕ್ಷಿಣೆ ಸಹಿತವಾಗಿ - ಗುರು ಅಥವಾ ಗುರು ಸಮಾನರಾದವರಿಗೆ ದಾನ ಮಾಡಿ.
👉 ಈ ದಿನ ಗುರು ಸೇವೆ ಮಾಡಿ, ಗುರುಗಳ ಆಶೀರ್ವಾದ ಪಡೆಯಿರಿ.
-------------- Hari Om --------------
No comments:
Post a Comment