Tuesday, December 27, 2022

Garuda Purana - a Gist on Non Performance of any Functions upon a Death for 1 Year - Valid Reasons Given

 

Garuda Purana - a Gist on Non Performance of any Functions

upon a Death for 1 Year - Valid Reasons Given.

 


                                          Lord Vishnu


ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ?

ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ? 😨

"
ಮನುಷ್ಯನು" ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಿಸಬೇಕಾಗುತ್ತದೆ

ಅವು


) ಮಲಿನ ಷೋಡಶ


) ಮಧ್ಯಮ ಷೋಡಶ

 
) ಉತ್ತಮ ಷೋಡಶ


ಎಂಬುದಾಗಿ ಮೂರು ವಿಭಾಗಗಳು .


ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ "ಮಲಿನ ಷೋಡಶ" ಎಂದು ಹೆಸರು .

"
ಮೊದಲನೆಯ ಪಿಂಡವನ್ನು ವಿಷ್ಣುವಿಗೆ" "ಎರಡನೆಯದನ್ನು ಶಿವನಿಗೆ" , "ಮೂರನೆಯದನ್ನು ಯಮನ ಕುಟುಂಬದವರಿಗೆ" , "ನಾಲ್ಕನೆಯದನ್ನು ಚಂದ್ರನಿಗೆ ," "ಐದನೆಯದನ್ನು ಅಗ್ನಿಗೆ ," "ಆರನೆಯದನ್ನು ಕವ್ಯವಾಹನಿಗೆ ," "ಏಳನೆಯದನ್ನು ಕಾಲನಿಗೆ ," "ಎಂಟನೆಯದನ್ನು ರುದ್ರನಿಗೆ ," "ಒಂಬತ್ತನೆಯದನ್ನು ಪರಮ ಪುರುಷನಿಗೆ", "ಹತ್ತನೆಯದನ್ನು ಪ್ರೇತಕ್ಕೆ" , "ಹನ್ನೊಂದನೆಯ ದನ್ನು ವಿಷ್ಣುವಿಗೆ" , "ಹನ್ನೆರಡನೆಯದನ್ನು ಬ್ರಹ್ಮನಿಗೆ ," "ಹದಿಮೂರನೆಯದನ್ನು ವಿಷ್ಣುವಿಗೆ ", "ಹದಿನಾಲ್ಕನೆಯದನ್ನು ಶಿವನಿಗೆ ", "ಹದಿನೈದನೆಯದನ್ನು ಯಮನಿಗೆ ", ಮತ್ತು "ಹದಿನಾರನೆಯದನ್ನು ತತ್ಪುರುಷನಿಗೆ"

ಕೊಡಬೇಕು,,, ಹೀಗೆ ""ಹದಿನಾರು ಪಿಂಡದಾನಗಳು



ಮಧ್ಯಮ ಷೋಡಶ ಎನಿಸಿಕೊಳ್ಳುವವು .



ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ |
ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ ||
ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್|
ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ ||



ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ನ್ಯೂನ ಷಾಣ್ಮಾಸಿಕಕ್ಕೆ (ಐದೂವರೆ ತಿಂಗಳಿಗೆ ) 1 , ಮತ್ತು ನ್ಯೂನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) ( 1 ) ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು .



ಇವುಗಳು ಉತ್ತಮ ಷೋಡಶ ಎಂದು ಕರೆಸಿಕೊಳ್ಳುವವು .



ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ "ಸೌಮ್ಯ" ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ ಉತ್ತಮ ಷೋಡಶ ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ .



ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ .



ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿವೆ , ಉತ್ಸವಾದಿಗಳನ್ನು ಮಾಡಬಾರದು .



ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ.



ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ .



ಹೀಗಾಗಿ ಕನ್ಯಾದಾನ ಮಾತ್ರ ಬರ್ತದೆ . ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವುದಿಲ್ಲಾ ,



ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡು ಮಗನ ಮದುವೆಯಾಗಲಿ , ಮುಂಜಿಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ .



ಹೀಗಾಗಿ ತೀರಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿವೆ , ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ .



-------------- Hari Om --------------





Sunday, November 6, 2022

Parijatha

Parijatha   -- ಪಾರಿಜಾತ


 

 

ಪುಷ್ಪ ಗಳಲ್ಲಿ ಶ್ರೇಷ್ಠವಾದ ಹೂ ಪಾರಿಜಾತ – Parijatha – The Best Flower & its significance


Among all the Flowers Parijatha flower is considered to be the Best and Powerful. It has been described in Old Indian Scriptures of several thousands of Years ago.


ಸಮುದ್ರ ಮಥನ ಸಮಯದಲ್ಲಿ ಪಾರಿಜಾತ ಗಿಡ ಉದ್ಭವಿಸಿತು. ಪಾರಿಜಾತ ಗಿಡವನ್ನು ಇಂದ್ರನು ತಂದು ತನ್ನ ಉದ್ಯಾನವನದಲ್ಲಿ ನೆಡುತ್ತಾನೆ. ಆದ್ದರಿಂದ ಇದು ಸ್ವರ್ಗ ಲೋಕದ ಹೂವು, ದೇವಲೋಕದ ಪುಷ್ಪ ,ಎಂದು ಪ್ರಸಿದ್ಧಿ ಪಡೆದಿದೆ. ಹರಿವಂಶ ಪುರಾಣದಲ್ಲಿ ಇದನ್ನು ಕಲ್ಪವೃಕ್ಷ ಎಂದು ಕರೆಯಲಾಗಿದೆ. ಸಮುದ್ರ ಮಥನದಲ್ಲಿ ದೊರೆತ ಕಾರಣ ಪಾರಿಜಾತ ದೈವಿಕ ಶಕ್ತಿಯುಳ್ಳ ಮರ ಎಂದು ನಂಬಲಾಗಿದೆ.


ಪೌರಾಣಿಕ_ಹಿನ್ನೆಲೆ:- ತ್ರೇತಾಯುಗದಲ್ಲಿ ಸೀತಾಮಾತೆಗೆ ಪಾರಿಜಾತದ ಹೂಗಳು ಎಂದರೆ ಬಹಳ ಪ್ರಿಯ, ರಾಮ ಲಕ್ಷ್ಮಣರ ಜೊತೆ ವನವಾಸದಲ್ಲಿದ್ದಾಗ, ಪಾರಿಜಾತದ ಹೂವುಗಳನ್ನು ಬಿಡಿಸಿ ಮಾಲೆ ಮಾಡಿಕೊಂಡು ಇಷ್ಟಪಟ್ಟು ಧರಿಸುತ್ತಿದ್ದಳಂತೆ. ಹಾಗಾಗಿ ಈ ಹೂವನ್ನು ಶೃಂಗಾರ ಹಾರ- ಹರ ಸಿಂಗಾರ ಎಂದು ಕರೆಯುತ್ತಾರೆ

 


ಇನ್ನೊಂದು ಕಥೆಯ ಪ್ರಕಾರ ಇಂದ್ರನು ಸ್ವರ್ಗದಲ್ಲಿ ಪಾರಿಜಾತ ಗಿಡವನ್ನು ನೆಟ್ಟ ಮೇಲೆ ಸುಗಂಧಭರಿತ ಸುಂದರವಾದ ಹೂಗಳು ಗಿಡದ ತುಂಬಾ ಅರಳಿದ ಪುಷ್ಪವನ್ನು ನೋಡುವುದೇ ಒಂದು ಸೊಬಗು. ಒಮ್ಮೆ ದ್ವಾರಕಾದಲ್ಲಿ ಕೃಷ್ಣ ರುಕ್ಮಿಣಿ‌ಯರು ಉಯ್ಯಾಲೆಯಲ್ಲಿ ಜೊತೆಯಾಗಿ ಕುಳಿತಿರುವಾಗ, ನಾರದರು ಸುಂದರವಾದ ಪಾರಿಜಾತದ ಹೂವಿನ ಮಾಲೆಯೊಂದಿಗೆ ಬಂದು ಶ್ರೀಕೃಷ್ಣನಿಗೆ ಕೊಡುಗೆಯಾಗಿ ಕೊಟ್ಟರು. ಕೃಷ್ಣನು ಅದನ್ನು ಪ್ರೀತಿಯಿಂದ ತನ್ನ ಪಟ್ಟದ ರಾಣಿ ರುಕ್ಮಿಣಿಗೆ ಹಾಕಿ ಸಂತೋಷ ಪಟ್ಟನು. ರುಕ್ಮಿಣಿ ಕೊರಳಲ್ಲಿ ಹಾರವನ್ನು ನೋಡಿದ ನಾರದರು, ಮಾತೇ ಈ ಪಾರಿಜಾತವನ್ನು ಧರಿಸಿದ ನೀವು, ಕೃಷ್ಣನ ಉಳಿದೆಲ್ಲ ಪತ್ನಿಯರಿಗಿಂತ ಸುಂದರವಾಗಿ ಕಾಣುತ್ತೀರಿ ಎಂದರು. ಈ ವಿಷಯ ಅಂತಪುರದಲ್ಲಿದ್ದ ಕೃಷ್ಣನ ಪ್ರೀತಿಯ ಪತ್ನಿ ಸತ್ಯಭಾಮೆಗೆ ತಿಳಿಯಿತು. ಅವಳು ಕೃಷ್ಣನಲ್ಲಿ, ನನಗೆ ಪಾರಿಜಾತ ಪುಷ್ಪದ ಮರವೇ ಬೇಕು ಎಂದು ಹಠ ಹಿಡಿಯುತ್ತಾಳೆ. ಕೃಷ್ಣನು ಸ್ವರ್ಗದ ಸ್ವತ್ತು ನಾವು ಭೂಲೋಕಕ್ಕೆ ತರಬಾರದು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಶ್ರೀಕೃಷ್ಣನು ಸತ್ಯಭಾಮಾ ಸಹಿತ ಸ್ವರ್ಗಲೋಕಕ್ಕೆ ಹೋಗಿ ಪಾರಿಜಾತ ವೃಕ್ಷ ಕೊಡುವಂತೆ ಇಂದ್ರನನ್ನು ಕೇಳುತ್ತಾನೆ. ಇಂದ್ರನು ಕೊಡುವುದಿಲ್ಲ ಎಂದಾಗ ಕೃಷ್ಣನು, ಇಂದ್ರ ನೊಂದಿಗೆ ಯುದ್ಧ ಮಾಡಿ ಇಂದ್ರನು ಸೋತು, ಮನಸ್ಸಿಲ್ಲದ ಮನಸ್ಸಿನಿಂದ ಪಾರಿಜಾತ ವೃಕ್ಷವನ್ನು ಕೃಷ್ಣನಿಗೆ ಕೊಡುತ್ತಾನಂತೆ. ಸ್ವರ್ಗದ ಸ್ವತ್ತನ್ನು ಭೂಲೋಕಕ್ಕೆ ಭಾಗ ಮಾಡುವುದು ಇಂದ್ರನಿಗೆ ಇಷ್ಟವಿರಲಿಲ್ಲ. ಕೃಷ್ಣನು ಪಾರಿಜಾತವನ್ನು ಭೂಲೋಕಕ್ಕೆ ತಂದ ಮೇಲೆ, ಬಹಳ ಬೇಸರಗೊಂಡ ಇಂದ್ರನು, ಪಾರಿಜಾತ ವೃಕ್ಷದ ಹೂಗಳು ರಾತ್ರಿ ಮಾತ್ರ ಅರಳಲಿ ಸೂರ್ಯೋದಯವಾಗುತ್ತಿದ್ದಂತೆ
ಬಾಡಿ ಉದುರಿ ಕೆಳಗೆ ಬೀಳಲಿ ಎಂದು ಶಾಪ ಕೊಟ್ಟನು. ಇತ್ತ ಶ್ರೀಕೃಷ್ಣನು ಸತ್ಯಭಾಮಾಗೆ ಬುದ್ಧಿ ಕಲಿಸಬೇಕೆಂದು ಪಾರಿಜಾತ ಗಿಡವನ್ನು ಸತ್ಯಭಾಮೆ ಇಷ್ಟದಂತೆ ಅವಳ ಮನೆಯಂಗಳದಲ್ಲಿ ನೆಟ್ಟನು. ಅದರ ಹೂವುಗಳನ್ನು ಪಟ್ಟದರಸಿ ರುಕ್ಮಿಣಿ ಮನೆಯಂಗಳದಲ್ಲಿ ಬೀಳುವಂತೆ ಮಾಡುತ್ತಾನೆ. ಈ ಉದುರಿದ ಹೂಗಳನ್ನೆಲ್ಲ ಆರಿಸಿಕೊಂಡು ರುಕ್ಮಿಣಿ ದೇವರ ಪೂಜೆಗೆ ಹಾಗೂ ತನ್ನ ಅಲಂಕಾರಕ್ಕೆ ಉಪಯೋಗಿಸುತ್ತಿದ್ದಳು. ಉದುರಿದ ಹೂವುಗಳನ್ನು ದೇವರಿಗೆ ಏರಿಸುವುದಿಲ್ಲ ಆದರೆ, ಉದುರಿ ಬಿದ್ದ ಹೂವನ್ನು, ದೇವರಿಗೆ ಅಲಂಕರಿಸುವ ಪುಷ್ಪಗಳಲ್ಲಿ ಪಾರಿಜಾತ ಮತ್ತು ರಂಜದ ಹೂವುಗಳು ಶ್ರೇಷ್ಠವಾದುದು ಎಂದು ಪರಿಗಣಿಸಿದ್ದಾರೆ.(ರಂಜದ ಹೂವನ್ನು ಬಕುಳ ಪುಷ್ಪವೆಂದು ಕರೆಯುತ್ತಾರೆ.



ಈ ಪಾರಿಜಾತದ ಹೂವಿನ ಕುರಿತು ಇನ್ನೂ ಒಂದು ದಂತ ಕಥೆ ಇದೆ:- 


ಪಾರಿಜಾತಕ ಎಂಬ ಸುಂದರ ರಾಜಕುಮಾರಿ ಇದ್ದಳು. ಅವಳು ಆಕಾಶದಲ್ಲಿ ಬೆಳಗುವ ಸೂರ್ಯನನ್ನು ತುಂಬಾ ಇಷ್ಟಪಟ್ಟಳು. ಆದರೆ ಸೂರ್ಯದೇವ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ಬೇಸರಗೊಂಡ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಆ ಬೂದಿಯ ರಾಶಿಯಲ್ಲಿ ಹುಟ್ಟಿದ ಗಿಡವೇ ಈ ಪಾರಿಜಾತ ವೃಕ್ಷ. ಈ ಗಿಡದಲ್ಲಿ ಅರಳಿದ ಪಾರಿಜಾತಕ ರಾಜಕುಮಾರಿ ಹೂವುಗಳಿಗೆ, ಬೆಳಿಗ್ಗೆ ಸುಂದರವಾಗಿ ಅರಳಿ, ತಾನು ಇಷ್ಟಪಟ್ಟು ಪ್ರೀತಿಸಿದ ಸೂರ್ಯನ ಮುಖವನ್ನು ನೋಡಿದ ಕೂಡಲೇ ಅವಳಿಗೆ ನೋವಾಗುತ್ತಿತ್ತು. ಆದ ಕಾರಣ ಪಾರಿಜಾತ ಸೂರ್ಯಾಸ್ತದ ಮೇಲೆ ಅರಳಿ ಸೂರ್ಯೋದಯದ ಬೆಳಗಿನ ಸಮಯ ಬೇಸರದಿಂದ ಬಾಡಿ ಉದುರಿ ಬೀಳುತ್ತದೆ ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ, ಪಾರಿಜಾತ ಪ್ರೇಮಿಗಳ ಮರ, ದುಃಖ ಕೊಡುವ ಮರ ಎಂದು ಹೇಳುತ್ತಾರೆ.



ಇಂತಹ ಸುಗಂಧಭರಿತ ಸುಂದರವಾದ ಪಾರಿಜಾತದ ಮರದ ಬೇರು, ಎಲೆ, ತೊಗಟೆ, ಹೂವು, ಎಲ್ಲವೂ ಔಷಧಯುಕ್ತವಾಗಿದೆ. ಸುಗಂಧವನ್ನು ಈ ಹೂವಿನಿಂದಲೇ ತಯಾರಿಸುತ್ತಾರೆ. ಬಿಳಿ ಮೋಹಕ ಬಣ್ಣದ ದಳ ಹಾಗೂ ಕಿತ್ತಲೆ ಬಣ್ಣದ ತೊಟ್ಟಿರುವ ಈ ಹೂವು ನಕ್ಷತ್ರದಂತೆ ಎಲ್ಲರನ್ನು ಆಕರ್ಷಿಸುತ್ತಿದೆ. ಸ್ವರ್ಗದ 5 ವೃಕ್ಷಗಳಲ್ಲಿ ಪಾರಿಜಾತವು ಒಂದು, (ಅಶ್ವತ್ತ, ಅರಳಿ ಅಥವಾ ಅರಣಿ, ಅತ್ತಿಮರ, ಶಮೀವೃಕ್ಷ , ಪಾರಿಜಾತ, ) ಪಾರಿಜಾತದ ಎಲೆಗಳು ತಂಪಾಗಿರುವ ಕಾರಣ, ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಉರಿ, ಊತ, ತುರಿಕೆಗೆ, ಪಾರಿಜಾತ ಎಲೆಗಳಿಂದ ತಯಾರಿಸಿದ ಎಣ್ಣೆ ಬಳಸು ವುದರಿಂದ ಕಡಿಮೆಯಾಗುತ್ತದೆ. ಮತ್ತು ಮಲಬದ್ಧತೆ ,ಜಾಂಡಿಸ್, ಪಿತ್ತ ಮುಂತಾದ ತೊಂದರೆಗಳಿಗೆ ಇದರ ಬೀಜವನ್ನು ಔಷಧಿಯಾಗಿ ಬಳಸುತ್ತಾರೆ. ಹೀಗೆ ಹಲವಾರು ಔಷಧಿಗೆ ಉಪಯುಕ್ತವಾಗಿದೆ, ಇದರ ತೊಗಟೆ ಜ್ವರಕ್ಕೆ ಉತ್ತಮವಾದ ಔಷಧಿ.



ಈ ಎಲ್ಲಾ ಗುಣಗಳಿಂದಾಗಿ ಪಾರಿಜಾತ ಮರ ಹಾಗೂ ಬಿಡುವ ಹೂಗಳು ಭಾರತೀಯರಿಗೆ ಮಹತ್ವಪೂರ್ಣವಾದ, ಪವಿತ್ರ ಸಂಕೇತದ ವೃಕ್ಷವಾಗಿದೆ.


ಆದಕಾರಣ ಅಯೋದ್ಯದಲ್ಲಿ ರಾಮಮಂದಿರದ ಭೂಮಿ ಪೂಜೆಯಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪಾರಿಜಾತದ ಸಸಿಯನ್ನು ನೀಡುವುದರ ಮೂಲಕ ಕಾರ್ಯವನ್ನು ಸಂಪನ್ನ ಗೊಳಿಸಿದರು. ಇದು ಸೀತಾಮಾತೆಗೆ ಬಹಳ ಪ್ರಿಯವಾದ ಹೂವು ಆದಕಾರಣ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ ಶುಭ ಸಂಕೇತವಾಗಿ ಈ ಸಸಿಯನ್ನು ನೆಡಲಾಯಿತು.



ಅಚ್ಯುತಂ ಕೇಶವಂ ರಾಮ ನಾರಾಯಣಂ ಕೃಷ್ಣ ದಾಮೋದರಂ ವಾಸುದೇವಂ ಹರಿಂ!
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕಿ ನಾಯಕಂ ರಾಮಚಂದ್ರಂ ಭಜೆ ! 

 

Medicinal Values of Parijatha Tree its Leaf , Bark , Stem , Seeds and Flower

The Juice of its Leaves is bitter and saline in taste and

 provides effective relief in the treatment of several types

 of inflammation and fever including malaria, intermittent

 fever, common cough and cold.

    The juice of its Leaves when mixed with a little sugar

     is a good medicine for treatment of stomach ailments

     of children.


    In the treatment of skin diseases and constipation, the

     seeds of the Parijatha tree are used.

    The plant is also useful for dyeing. The flowers can be

     used as a source of yellow dye for clothes. They are

     also used to make perfume owing to its rich aroma.

    The leaves are anti-bacterial, anti-inflammatory, anti-

    pyretic, anti-oxidative and anti-fungal.

    The flowers are diuretic, anti-oxidative, anti-

    inflammatory and sedative.

    The flower oil is also very prominently used as a 

    perfume.

The flower has a very strong fragrance, hence is used for

 making incense sticks.

------- Hari Om -------


 


Wednesday, October 12, 2022

Durga Temple in Yelahanka New Town

 

 

                                               Sri Durga, Ganesha & Subramanya temple

 

This Durga Temple is in Udaya Layout 2 furlong from Yelahanka New Town Bus stand and
very Powerful and it has a Blissful Look and after the Darshan one has their own Satisfying Experiences,and Devi Blesses all the Devotees.

During this Navaratri Festival different Alankaras were Done for all the 9 Days and on 10 th Day of  Vijaya Dasami  also. 

 

ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರಯಂಬಿಕೇ ಗೌರಿ ನಾರಾಯಣೀ ನಮೋಸ್ತುತೆ.

 

                                                                             1st Day
 
                                                                   Kumkuma alankara

 

                                                                            2nd Day

                                                                     Chandana alankara

 

                                                                          3rd Day 

                                                                      Pushpa alankara

 

                                                                         4th Day

                                                                      Dhruvya alankara

 

                                                                          5th day

 

                                                                   Ardha Nariswara alankara

 

 

                                                                             6th Day


 

                                                                       Patregala alankara

 

                                                                        7th Day

                                                                   Saraswati devi alankara

 

                                                                          8th Day


 

                                                                       Kali alankara

 

                                                                            9th Day

                                                                       Saregala alankara


ಯಾ ದೇವಿ ಸರ್ವ ಭೂತೇಷು, ಮಾತ್ರಿ ರೂಪೇಣಾ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಬುದ್ಧಿ ರೂಪೇಣಾ ಸಂಗ್ಸ್ತಿತ

ಯಾ ದೇವಿ ಸರ್ವ ಭೂತೇಷು, ಶಾಂತಿ ರೂಪೇಣಾ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಶಕ್ತಿ ರೂಪೇಣಾ ಸಂಗ್ಸ್ತಿತ
ನಮಸ್ತಸೈ, ನಮಸ್ತಸೈ, ನಮಸ್ತಸೈ, ನಮೋ ನಮಃ

 


                                                             Vijaya Dasami Day
 

                                                                     another picture
                       

                                                                 Sri Chandrasekhar sharma - Archakaru
 


Please if you all happen to pass through Yelahanka new Town please do visit to this temple and Get Durga devi' s Blessings.

------------------ Hari Om ----------------
 

 

 

 


 

 

 

Wednesday, September 28, 2022

NavaRatri -- Nava Durga pooja Festival

NavaRatri -- Nava Durga Pooja Festival

 

                                          Nava Durga Devi

 

 

Nava Durga Devi ---- ಒಂಬತ್ತು ನವ ದುರ್ಗೆಯರು



ದೇವಿಯನ್ನು ನವರಾತ್ರಿಯಂದು ನವದುರ್ಗೆಯಾಗಿ ಒಂಬತ್ತು ನಾಮ ರೂಪಗಳಲ್ಲಿ ಆರಾಧಿಸುತ್ತೇವೆ.

ಮೊದಲನೆಯ ದಿನದಿಂದ ಕೊನೆಯ ದಿನದವರೆಗೂ ಪಾಲಿಸುವ ಆರಾಧನೆಯ ಕ್ರಮ ಹೀಗಿದೆ.



. ಶೈಲಪುತ್ರಿ : ಪರ್ವತರಾಜನ ಮಗಳಾದ ಶೈಲಪುತ್ರಿ ನಂದಿಯ ಮೇಲೆ ಕುಳಿತು ತ್ರಿಶೂಲ ಖಡ್ಗಗಳನ್ನು ಹಿಡಿದು ಆರಾಧಕರಿಗೆ ಸ್ಫೂರ್ತಿ ಉಲ್ಲಾಸಗಳನ್ನು ಅನುಗ್ರಹಿಸುತ್ತಾಳೆ.



. ಬ್ರಹ್ಮಚಾರಿಣಿ : ಶಿವನನ್ನು ಒಲಿಸಲು ಪಾರ್ವತಿ ತೀವ್ರ ತಪಸ್ಸನ್ನು ಕೈಗೊಂಡಳು. ಜಪಮಾಲಾ, ಕಾಮಂಡಲುಧಾರಿಯಾದ ಬ್ರಹ್ಮಚಾರಿಣಿ ಸಾಧಕರಿಗೆ ಬ್ರಹ್ಮಜ್ಞಾನ ಕರುಣಿಸುತ್ತಾಳೆ.



. ಚಂದ್ರಘಂಟಾ : ಶಿವನನ್ನು ವರಿಸಿದ ನಂತರ, ದುರ್ಗೆ ತಂಪಾದ ಚಂದ್ರನಂತೆ ಪ್ರಕಾಶಮಾನಲಾಗುತ್ತಾಳೆ. ದಶಾಭುಜಗಳುಳ್ಳ ಸಿಂಹವಾಹಿನಿ ಪರಮ ಶಾಂತಿ ಮತ್ತು ಕಲ್ಯಾನಗಳನ್ನು ನೀಡುತ್ತಾಳೆ. ಸಾಧಕರ ಸಂಶಯ ನಿವಾರಣೆ, ಪಾಪವಿಮೋಚನೆ ಮತ್ತು ವಿಘ್ನ ನಿರ್ಮೂಲನೆ ಇವಳ ಪ್ರಥಮ ಕರ್ತವ್ಯಗಳು.



. ಕುಷ್ಮಾಂಡಾ : ಆನಂದಭರಿತ ದೇವಿಯ ಮಂದಸ್ಥಿತದಿಂದ ಸೃಜನಿಸಿತು. ದಶಾಭುಜಲಾದ ಕುಷ್ಮಾಂಡಾ ರೋಗ ದುಃಖಗಳನ್ನು ನಿವಾರಿಸಿ, ಆರೋಗ್ಯ, ಬಾಲ, ದೀರ್ಘಾ ಆಯಸ್ಸು, ಸರ್ವಾಖ್ಯಾತಿಗಳನ್ನು ಪ್ರಸಾದಿಸುತ್ತಾಳೆ.



. ಸ್ಕಂದಮಾತಾ : ಸುಬ್ರಹ್ಮಣ್ಯನ ತಾಯಿ. ಚತುರ್ಭುಜ ಸಿಂಹವಾಹಿನಿಯಾದ ದೇವಿಯ ಮಡಿಲಲ್ಲಿ ಸ್ಕಂದ ವಿರಾಜಿಸುತ್ತಿದ್ದಾನೆ. ಈ ರೂಪವನ್ನು ಆರಾಧಿಸಿದರೆ, ನಮ್ಮಲ್ಲಿರುವ ದೈವತ್ವವನ್ನು ಪೂಷಿಸುತ್ತಾಳೆ.



. ಕಾತ್ಯಾಯನಿ : ನಿಷ್ಕಳಂಕಳು. ಮಹಿಷಾಸುರನನ್ನು ವಧಿಸಿದ ಚತುರ್ಭುಜ ಕಾತ್ಯಾಯನಿ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಕರುಣಿಸಿ ಕಾಪಾಡುತ್ತಾಳೆ.



. ಕಾಲರಾತ್ರಿ : ಕಾಲವನ್ನು ಜಯಿಸಿದವಳು. ಈ ರೂಪದಲ್ಲಿ ನೋಡಲು ಭಯಂಕರವಾದ ದೇವಿಯು ನಮ್ಮನ್ನು ಕಾಲಚಕ್ರದಿಂದ ಬಿಡುಗಡೆ ಮಾಡುತ್ತಾಳೆ.



. ಮಹಾಗೌರಿ : ಶಿವನ ಒಲವಿಂದ ಕಾಂತಿಯುತವಾದ ದೇವಿ. ನಂದಿಯ ಮೇಲೆ ಕುಳಿತು ನಮ್ಮ ಗೊಂದಲವನ್ನು ನಿವಾರಿಸುತ್ತಾಳೆ.



. ಸಿದ್ಧಿಧಾತ್ರಿ : ಶಿವನ ಅರ್ಧಾಂಗಿಯಾದ ದೇವಿ ಭಕ್ತರಿಗೆ ಪರಿಪೂರ್ಣತೆಯನ್ನು ಕರುಣಿಸುತ್ತಾಳೆ.

 

 

Navaratri – The 9 Days of Durga Pooja and other Details



ನವರಾತ್ರಿ ಮೊದಲದಿನ – 1St Day


ದೇವಿ: ಮಾಹೇಶ್ವರಿ
ನೈವೇದ್ಯ: ಖಾರ ಹುಗ್ಗಿ
ಹೂವು: ಮಲ್ಲಿಗೆ
ತಿಥಿ: ಪಾಡ್ಯ
ರಾಗ: ತೋಡಿ


ಶ್ಲೋಕ: ಓಂ ಶ್ವೇತವರ್ಣೀಯಾ ವಿದ್ವಮೇ ಶೂಲ ಹಸ್ತಾಯ ಧೀಮಹಿ ತನ್ನೋ ಮಾಹೇಶ್ವರಿ ಪ್ರಚೊದಯಾತ್



ನವರಾತ್ರಿ ದಿನ ೨ -- 2nd Day


ದೇವಿ: ಕೌಮಾರಿ
ತಿಥಿ: ಬಿದಿಗೆ
ಹೂವು: ಕಣಗಲೆ
ನೈವೇದ್ಯ: ಪುಳಿಯೋಗರೆ
ರಾಗ: ಕಲ್ಯಾಣಿ


ಶ್ಲೋಕ: ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್



ನವರಾತ್ರಿ ದಿನ ೩ -- 3rd Day


ದೇವಿ: ವಾರಾಹಿ
ತಿಥಿ: ತದಿಗೆ
ಹೂವು: ಸಂಪಿಗೆ
ನೈವೇದ್ಯ: ಸಿಹಿ ಹುಗ್ಗಿ
ರಾಗ ಕಾಂಭೋಧಿ


ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ
ಧೀಮಹಿ ತನ್ನೋ ವಾರಾಹಿ ಪ್ರಚೋದಯತ್



ನವರಾತ್ರಿ ದಿನ ೪ -- 4th Day


ದೇವಿ: ಲಕ್ಷ್ಮೀ
ಹೂವು: ಜಾಜಿ
ತಿಥಿ: ಚತುರ್ಥಿ
ರಾಗ: ಭೈರವಿ
ನೈವೇದ್ಯ ಬೆಲ್ಲದಾನ್ನ


ಶ್ಲೋಕ: ಓಂ‌ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್



ನವರಾತ್ರಿ ದಿನ ೫ -- 5th Day


ದೇವಿ: ವೈಷ್ಣವಿ
ಹೂವು: ಪಾರಿಜಾತ
ನೈವೇದ್ಯ: ಮೊಸರನ್ಬ
ತಿಥಿ: ಪಂಚಮಿ
ರಾಗ:ಪಂಚಮ ವರ್ಣ ಕೀರ್ತನೆ


ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್



ನವರಾತ್ರಿ ದಿನ ೬ -- 6th Day


ದೇವಿ: ಇಂದ್ರಾಣಿ
ಹೂವು: ದಾಸವಾಳ
ನೈವೇದ್ಯ: ತೆಂಗಿನಕಾಯಿ ಅನ್ನ
ತಿಥಿ: ಷಷ್ಠಿ
ರಾಗ: ನೀಲಾಂಬರಿ


ಶ್ಲೋಕ: ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್



ನವರಾತ್ರಿ ದಿನ ೭ – 7th Day


ದೇವಿ: ಸರಸ್ವತಿ
ಹೂವು: ಮಲ್ಲಿಗೆ ಮತ್ತು ಮೊಲ್ಲೆ
ತಿಥಿ: ಸಪ್ತಮಿ
ನೈವೇದ್ಯ: ನಿಂಬೆಹಣ್ಣಿನ ಅನ್ನ
ರಾಗ: ಬಿಲ್ಲ್ಹಾರಿ


ಶ್ಲೋಕ: ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿ
ತನ್ನೋ ವಾಣಿ ಪ್ರಚೋದಯಾತ್



ನವರಾತ್ರಿ ದಿನ ೮ -- 8th Day


ದೇವಿ: ದುರ್ಗಾ
ಹೂವು: ಗುಲಾಬಿ
ನೈವೇದ್ಯ: ಪಾಯಸಾನ್ನ
ತಿಥಿ: ಅಷ್ಟಮಿ
ರಾಗ: ಪುನ್ನಗವರಾಲಿ


ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್



ನವರಾತ್ರಿ ದಿನ ೯ – 9th Day


ದೇವಿ : ಜಾಮುಂಡ
ಹೂವು: ತಾವರೆ
ನೈವೇದ್ಯ: ಕ್ಷೀರಾನ್ನ
ತಿಥಿ: ನವಮಿ
ರಾಗ: ವಸಂತ


ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ ಪ್ರಚೋದಯಾತ್.



ವಿಜಯ ದಶಮಿ


ದೇವಿ: ವಿಜಯ
ಹೂವು: ಮಲ್ಲಿಗೆ, ಗುಲಾಬಿ
ನೈವೇದ್ಯ : ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ

ಶ್ಲೋಕ: ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್

ಎಲ್ಲರಿಗೂ ನವರಾತ್ರಿ ಹಾಗೂ ವಿಜಯದಶಮಿ ಯ ಶುಭಾಶಯಗಳು. ಆ ಮಹಾ ಮಹಿಮಳು ತಮ್ಮ ಸಂಸಾರಕ್ಕೆ ಸುಖ ಸೌಭಾಗ್ಯ,ಆಯುರ್ ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ.

 

----------- Hari Om ------------


 

Monday, August 22, 2022

Word power in Vishnu Sahasranama

 Word power in Vishnu Sahasranama


Every Word or Names in the Vishnu Sahasranama has an

Unique Meaning and its Power.

 

                                    

                                          Lord Vishnu
 


ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ 

ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ...🕉️🚩



ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀಪಾದ ರಾಮಾನುಜರ ಬಳಿ ದೂರು ಕೊಟ್ಟರು.



ಇದನ್ನು ಕೇಳಿದ ಶ್ರೀಪಾದ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..

ವಿಚಾರ ತಿಳಿದ ಶ್ರೀಪಾದ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು...



ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |



*
ಭೂತಕೃದ್ಭೂತಭೃದ್ಭಾವೋ ... *ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ... ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು* *ಭೂತ-ಭೃತ್:*
ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ *ಶ್ರೀ ಭೂತ-ಭೃತ್ಯಯೇ ನಮಃ** ಅನ್ನುವಂತೆ ಉಪದೇಶಿಸಿದರು..

 

                                                                    another Picture


ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು...



ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ ....



ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..



ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು ಪಠಿಸಲು ಸಮಯವಿಲ್ಲದೆ ಇದ್ದರೆ ದಿನಕ್ಕೊಮ್ಮೆಯಾದರು ಕೇಳಿ ಸಾಕು...

 

                                                                               Pic 1


                                                               ||
ಜೈ ಶ್ರೀ ಮನ್ನಾರಾಯಣ||

 

                                                          -------------- Hari Om -------------