Tuesday, December 27, 2022

Garuda Purana - a Gist on Non Performance of any Functions upon a Death for 1 Year - Valid Reasons Given

 

Garuda Purana - a Gist on Non Performance of any Functions

upon a Death for 1 Year - Valid Reasons Given.

 


                                          Lord Vishnu


ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ?

ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ? 😨

"
ಮನುಷ್ಯನು" ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಿಸಬೇಕಾಗುತ್ತದೆ

ಅವು


) ಮಲಿನ ಷೋಡಶ


) ಮಧ್ಯಮ ಷೋಡಶ

 
) ಉತ್ತಮ ಷೋಡಶ


ಎಂಬುದಾಗಿ ಮೂರು ವಿಭಾಗಗಳು .


ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ "ಮಲಿನ ಷೋಡಶ" ಎಂದು ಹೆಸರು .

"
ಮೊದಲನೆಯ ಪಿಂಡವನ್ನು ವಿಷ್ಣುವಿಗೆ" "ಎರಡನೆಯದನ್ನು ಶಿವನಿಗೆ" , "ಮೂರನೆಯದನ್ನು ಯಮನ ಕುಟುಂಬದವರಿಗೆ" , "ನಾಲ್ಕನೆಯದನ್ನು ಚಂದ್ರನಿಗೆ ," "ಐದನೆಯದನ್ನು ಅಗ್ನಿಗೆ ," "ಆರನೆಯದನ್ನು ಕವ್ಯವಾಹನಿಗೆ ," "ಏಳನೆಯದನ್ನು ಕಾಲನಿಗೆ ," "ಎಂಟನೆಯದನ್ನು ರುದ್ರನಿಗೆ ," "ಒಂಬತ್ತನೆಯದನ್ನು ಪರಮ ಪುರುಷನಿಗೆ", "ಹತ್ತನೆಯದನ್ನು ಪ್ರೇತಕ್ಕೆ" , "ಹನ್ನೊಂದನೆಯ ದನ್ನು ವಿಷ್ಣುವಿಗೆ" , "ಹನ್ನೆರಡನೆಯದನ್ನು ಬ್ರಹ್ಮನಿಗೆ ," "ಹದಿಮೂರನೆಯದನ್ನು ವಿಷ್ಣುವಿಗೆ ", "ಹದಿನಾಲ್ಕನೆಯದನ್ನು ಶಿವನಿಗೆ ", "ಹದಿನೈದನೆಯದನ್ನು ಯಮನಿಗೆ ", ಮತ್ತು "ಹದಿನಾರನೆಯದನ್ನು ತತ್ಪುರುಷನಿಗೆ"

ಕೊಡಬೇಕು,,, ಹೀಗೆ ""ಹದಿನಾರು ಪಿಂಡದಾನಗಳು



ಮಧ್ಯಮ ಷೋಡಶ ಎನಿಸಿಕೊಳ್ಳುವವು .



ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ |
ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ ||
ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್|
ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ ||



ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ನ್ಯೂನ ಷಾಣ್ಮಾಸಿಕಕ್ಕೆ (ಐದೂವರೆ ತಿಂಗಳಿಗೆ ) 1 , ಮತ್ತು ನ್ಯೂನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) ( 1 ) ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು .



ಇವುಗಳು ಉತ್ತಮ ಷೋಡಶ ಎಂದು ಕರೆಸಿಕೊಳ್ಳುವವು .



ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ "ಸೌಮ್ಯ" ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ ಉತ್ತಮ ಷೋಡಶ ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ .



ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ .



ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿವೆ , ಉತ್ಸವಾದಿಗಳನ್ನು ಮಾಡಬಾರದು .



ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ.



ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ .



ಹೀಗಾಗಿ ಕನ್ಯಾದಾನ ಮಾತ್ರ ಬರ್ತದೆ . ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವುದಿಲ್ಲಾ ,



ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡು ಮಗನ ಮದುವೆಯಾಗಲಿ , ಮುಂಜಿಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ .



ಹೀಗಾಗಿ ತೀರಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿವೆ , ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ .



-------------- Hari Om --------------





No comments:

Post a Comment