Wednesday, September 28, 2022

NavaRatri -- Nava Durga pooja Festival

NavaRatri -- Nava Durga Pooja Festival

 

                                          Nava Durga Devi

 

 

Nava Durga Devi ---- ಒಂಬತ್ತು ನವ ದುರ್ಗೆಯರು



ದೇವಿಯನ್ನು ನವರಾತ್ರಿಯಂದು ನವದುರ್ಗೆಯಾಗಿ ಒಂಬತ್ತು ನಾಮ ರೂಪಗಳಲ್ಲಿ ಆರಾಧಿಸುತ್ತೇವೆ.

ಮೊದಲನೆಯ ದಿನದಿಂದ ಕೊನೆಯ ದಿನದವರೆಗೂ ಪಾಲಿಸುವ ಆರಾಧನೆಯ ಕ್ರಮ ಹೀಗಿದೆ.



. ಶೈಲಪುತ್ರಿ : ಪರ್ವತರಾಜನ ಮಗಳಾದ ಶೈಲಪುತ್ರಿ ನಂದಿಯ ಮೇಲೆ ಕುಳಿತು ತ್ರಿಶೂಲ ಖಡ್ಗಗಳನ್ನು ಹಿಡಿದು ಆರಾಧಕರಿಗೆ ಸ್ಫೂರ್ತಿ ಉಲ್ಲಾಸಗಳನ್ನು ಅನುಗ್ರಹಿಸುತ್ತಾಳೆ.



. ಬ್ರಹ್ಮಚಾರಿಣಿ : ಶಿವನನ್ನು ಒಲಿಸಲು ಪಾರ್ವತಿ ತೀವ್ರ ತಪಸ್ಸನ್ನು ಕೈಗೊಂಡಳು. ಜಪಮಾಲಾ, ಕಾಮಂಡಲುಧಾರಿಯಾದ ಬ್ರಹ್ಮಚಾರಿಣಿ ಸಾಧಕರಿಗೆ ಬ್ರಹ್ಮಜ್ಞಾನ ಕರುಣಿಸುತ್ತಾಳೆ.



. ಚಂದ್ರಘಂಟಾ : ಶಿವನನ್ನು ವರಿಸಿದ ನಂತರ, ದುರ್ಗೆ ತಂಪಾದ ಚಂದ್ರನಂತೆ ಪ್ರಕಾಶಮಾನಲಾಗುತ್ತಾಳೆ. ದಶಾಭುಜಗಳುಳ್ಳ ಸಿಂಹವಾಹಿನಿ ಪರಮ ಶಾಂತಿ ಮತ್ತು ಕಲ್ಯಾನಗಳನ್ನು ನೀಡುತ್ತಾಳೆ. ಸಾಧಕರ ಸಂಶಯ ನಿವಾರಣೆ, ಪಾಪವಿಮೋಚನೆ ಮತ್ತು ವಿಘ್ನ ನಿರ್ಮೂಲನೆ ಇವಳ ಪ್ರಥಮ ಕರ್ತವ್ಯಗಳು.



. ಕುಷ್ಮಾಂಡಾ : ಆನಂದಭರಿತ ದೇವಿಯ ಮಂದಸ್ಥಿತದಿಂದ ಸೃಜನಿಸಿತು. ದಶಾಭುಜಲಾದ ಕುಷ್ಮಾಂಡಾ ರೋಗ ದುಃಖಗಳನ್ನು ನಿವಾರಿಸಿ, ಆರೋಗ್ಯ, ಬಾಲ, ದೀರ್ಘಾ ಆಯಸ್ಸು, ಸರ್ವಾಖ್ಯಾತಿಗಳನ್ನು ಪ್ರಸಾದಿಸುತ್ತಾಳೆ.



. ಸ್ಕಂದಮಾತಾ : ಸುಬ್ರಹ್ಮಣ್ಯನ ತಾಯಿ. ಚತುರ್ಭುಜ ಸಿಂಹವಾಹಿನಿಯಾದ ದೇವಿಯ ಮಡಿಲಲ್ಲಿ ಸ್ಕಂದ ವಿರಾಜಿಸುತ್ತಿದ್ದಾನೆ. ಈ ರೂಪವನ್ನು ಆರಾಧಿಸಿದರೆ, ನಮ್ಮಲ್ಲಿರುವ ದೈವತ್ವವನ್ನು ಪೂಷಿಸುತ್ತಾಳೆ.



. ಕಾತ್ಯಾಯನಿ : ನಿಷ್ಕಳಂಕಳು. ಮಹಿಷಾಸುರನನ್ನು ವಧಿಸಿದ ಚತುರ್ಭುಜ ಕಾತ್ಯಾಯನಿ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಕರುಣಿಸಿ ಕಾಪಾಡುತ್ತಾಳೆ.



. ಕಾಲರಾತ್ರಿ : ಕಾಲವನ್ನು ಜಯಿಸಿದವಳು. ಈ ರೂಪದಲ್ಲಿ ನೋಡಲು ಭಯಂಕರವಾದ ದೇವಿಯು ನಮ್ಮನ್ನು ಕಾಲಚಕ್ರದಿಂದ ಬಿಡುಗಡೆ ಮಾಡುತ್ತಾಳೆ.



. ಮಹಾಗೌರಿ : ಶಿವನ ಒಲವಿಂದ ಕಾಂತಿಯುತವಾದ ದೇವಿ. ನಂದಿಯ ಮೇಲೆ ಕುಳಿತು ನಮ್ಮ ಗೊಂದಲವನ್ನು ನಿವಾರಿಸುತ್ತಾಳೆ.



. ಸಿದ್ಧಿಧಾತ್ರಿ : ಶಿವನ ಅರ್ಧಾಂಗಿಯಾದ ದೇವಿ ಭಕ್ತರಿಗೆ ಪರಿಪೂರ್ಣತೆಯನ್ನು ಕರುಣಿಸುತ್ತಾಳೆ.

 

 

Navaratri – The 9 Days of Durga Pooja and other Details



ನವರಾತ್ರಿ ಮೊದಲದಿನ – 1St Day


ದೇವಿ: ಮಾಹೇಶ್ವರಿ
ನೈವೇದ್ಯ: ಖಾರ ಹುಗ್ಗಿ
ಹೂವು: ಮಲ್ಲಿಗೆ
ತಿಥಿ: ಪಾಡ್ಯ
ರಾಗ: ತೋಡಿ


ಶ್ಲೋಕ: ಓಂ ಶ್ವೇತವರ್ಣೀಯಾ ವಿದ್ವಮೇ ಶೂಲ ಹಸ್ತಾಯ ಧೀಮಹಿ ತನ್ನೋ ಮಾಹೇಶ್ವರಿ ಪ್ರಚೊದಯಾತ್



ನವರಾತ್ರಿ ದಿನ ೨ -- 2nd Day


ದೇವಿ: ಕೌಮಾರಿ
ತಿಥಿ: ಬಿದಿಗೆ
ಹೂವು: ಕಣಗಲೆ
ನೈವೇದ್ಯ: ಪುಳಿಯೋಗರೆ
ರಾಗ: ಕಲ್ಯಾಣಿ


ಶ್ಲೋಕ: ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್



ನವರಾತ್ರಿ ದಿನ ೩ -- 3rd Day


ದೇವಿ: ವಾರಾಹಿ
ತಿಥಿ: ತದಿಗೆ
ಹೂವು: ಸಂಪಿಗೆ
ನೈವೇದ್ಯ: ಸಿಹಿ ಹುಗ್ಗಿ
ರಾಗ ಕಾಂಭೋಧಿ


ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ
ಧೀಮಹಿ ತನ್ನೋ ವಾರಾಹಿ ಪ್ರಚೋದಯತ್



ನವರಾತ್ರಿ ದಿನ ೪ -- 4th Day


ದೇವಿ: ಲಕ್ಷ್ಮೀ
ಹೂವು: ಜಾಜಿ
ತಿಥಿ: ಚತುರ್ಥಿ
ರಾಗ: ಭೈರವಿ
ನೈವೇದ್ಯ ಬೆಲ್ಲದಾನ್ನ


ಶ್ಲೋಕ: ಓಂ‌ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್



ನವರಾತ್ರಿ ದಿನ ೫ -- 5th Day


ದೇವಿ: ವೈಷ್ಣವಿ
ಹೂವು: ಪಾರಿಜಾತ
ನೈವೇದ್ಯ: ಮೊಸರನ್ಬ
ತಿಥಿ: ಪಂಚಮಿ
ರಾಗ:ಪಂಚಮ ವರ್ಣ ಕೀರ್ತನೆ


ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್



ನವರಾತ್ರಿ ದಿನ ೬ -- 6th Day


ದೇವಿ: ಇಂದ್ರಾಣಿ
ಹೂವು: ದಾಸವಾಳ
ನೈವೇದ್ಯ: ತೆಂಗಿನಕಾಯಿ ಅನ್ನ
ತಿಥಿ: ಷಷ್ಠಿ
ರಾಗ: ನೀಲಾಂಬರಿ


ಶ್ಲೋಕ: ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್



ನವರಾತ್ರಿ ದಿನ ೭ – 7th Day


ದೇವಿ: ಸರಸ್ವತಿ
ಹೂವು: ಮಲ್ಲಿಗೆ ಮತ್ತು ಮೊಲ್ಲೆ
ತಿಥಿ: ಸಪ್ತಮಿ
ನೈವೇದ್ಯ: ನಿಂಬೆಹಣ್ಣಿನ ಅನ್ನ
ರಾಗ: ಬಿಲ್ಲ್ಹಾರಿ


ಶ್ಲೋಕ: ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿ
ತನ್ನೋ ವಾಣಿ ಪ್ರಚೋದಯಾತ್



ನವರಾತ್ರಿ ದಿನ ೮ -- 8th Day


ದೇವಿ: ದುರ್ಗಾ
ಹೂವು: ಗುಲಾಬಿ
ನೈವೇದ್ಯ: ಪಾಯಸಾನ್ನ
ತಿಥಿ: ಅಷ್ಟಮಿ
ರಾಗ: ಪುನ್ನಗವರಾಲಿ


ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್



ನವರಾತ್ರಿ ದಿನ ೯ – 9th Day


ದೇವಿ : ಜಾಮುಂಡ
ಹೂವು: ತಾವರೆ
ನೈವೇದ್ಯ: ಕ್ಷೀರಾನ್ನ
ತಿಥಿ: ನವಮಿ
ರಾಗ: ವಸಂತ


ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ ಪ್ರಚೋದಯಾತ್.



ವಿಜಯ ದಶಮಿ


ದೇವಿ: ವಿಜಯ
ಹೂವು: ಮಲ್ಲಿಗೆ, ಗುಲಾಬಿ
ನೈವೇದ್ಯ : ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ

ಶ್ಲೋಕ: ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್

ಎಲ್ಲರಿಗೂ ನವರಾತ್ರಿ ಹಾಗೂ ವಿಜಯದಶಮಿ ಯ ಶುಭಾಶಯಗಳು. ಆ ಮಹಾ ಮಹಿಮಳು ತಮ್ಮ ಸಂಸಾರಕ್ಕೆ ಸುಖ ಸೌಭಾಗ್ಯ,ಆಯುರ್ ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ.

 

----------- Hari Om ------------


 

No comments:

Post a Comment