Wednesday, April 15, 2020

Powerful Mantra for Curing any Disease

Powerful Mantra for Curing any Disease


                                                            Lord Achyutha

This is a Powerful Mantra which wards off all diseases please recite at least 108 times after having bath in the morning.
 
 
ಶ್ರೀಪುಂಡರೀಕಾಕ್ಷಾಯ ನಮಃ



ಮುಂದಿನ ಶ್ಲೋಕಗಳನ್ನು ಪಾರಾಯಣ ಮಾಡುವುದು.

*
ಸಮಸ್ತ-ದುರಿತ-ವ್ಯಾಧಿ
ಸಂಘ-ಧ್ವಂಸ-ಪಟೀಯಸೇ।*
*
ಅಚ್ಯುತಾನಂತ-ಗೋವಿಂದ
ನಾಮ್ನೇ ಧಾಮ್ನೇ ನಮೋ ನಮಃ॥*
*
ಅಚ್ಯುತಾನಂತ-ಗೋವಿಂದ
ನಾಮೋಚ್ಚಾರಣ-ಭೀಷಿತಾಃ ।*
*
ನಶ್ಯಂತಿ ಸಕಲಾ ರೋಗಾಃ
ಸತ್ಯಂ ಸತ್ಯಂ ವದಾಮ್ಯಹಂ!!*


ಇರುವಲ್ಲಿಯೇ ಎಲ್ಲರೂ 108 ಬಾರಿ ಪಾರಾಯಣ ಮಾಡಿ.


                                                                  Lord Krishna


                                                        Lord Govinda ( Venkateswara )


This is a Powerful Mantra which wards off all diseases please recite at least 108 times after having bath in the morning many have blessed with this mantra.

                             ---------- Hari Om ---------
 
 

Tuesday, March 10, 2020

35 Health Tips

35 Health Tips 



 

ನಮ್ಮೆಲ್ಲರ ಆರೋಗ್ಯದ ಗುಟ್ಟು ಈ 35 ಸೂತ್ರಗಳಲ್ಲಡಗಿದೆ
 
 ಸಂಪೂರ್ಣವಾಗಿ ಆರೋಗ್ಯಕರವಾದ ಜೀವನವನ್ನು ಹೊಂದ ಬಯಸುವವರು ಈ ಕೆಳಗೆ ತಿಳಿಸಲಾದ 35 ಸೂತ್ರಗಳನ್ನು ಪಾಲಿಸಿ. ಇಂದಿನ ಪೀಳಿಗೆಯ ಜನಾಂಗ ಇದನ್ನು ಮರೆತಿರಬಹುದು. ಅದಕ್ಕೇ ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ‌


1. ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು.

2. ನಿದ್ದೆಯಿಂದೆ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.

3. ಐಸ್ ಕ್ರೀಂ ತಿನ್ನಲೇ ಬಾರದು.

4. ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.

5. ತಂಪು ಪಾನೀಯವನ್ನು ಸೇವಿಸಲೇ ಬಾರದು.

6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ40 ನಿಮಿಷಗಳ ಒಳಗೆ ತಿನ್ನಬೇಕು.

7.
ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.

8. ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.

9. ಬೆಳಿಗ್ಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.

10. ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.

11. ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.

12. ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.

13. ಕುಳಿತುಕೊಂಡು ಊಟ ಮಾಡಬೇಕು.

14.
ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.

15. ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.

16. ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.

17. ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.

18. ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.

19. ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.

20. ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.

21. ರಾತ್ರಿ ಊಟದ ನಂತರ ಒಮದು ಕಿ.ಮೀ ದೂರ ನಡೆಯಬೇಕು.

22. ರಾತ್ರಿ ಊಟವಾದ ಒಮದು ಗಂಟೆಯ ನಂತರ ಹಾಲು ಕುಡಿಯಬೇಕು.

23. ರಾತ್ರಿವೇಳೆ ಲಸ್ಸೀ, ಮಜ್ಜಿಗೆ ಕುಡಿಯ ಬಾರದು.

24. ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.

25. ರಾತ್ರಿ 9-10 ಗಂಟೆಗೆ ಮಲಗಬೇಕು.

26. ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.

27. ರಾತ್ರಿ ಸಲಾಡ್ ತಿನ್ನಬಾರದು.

28. ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.

29. ಟೀ, ಕಾಫೀ ಕುಡಿಯದಿರಲು ಪ್ರಯತ್ನಿಸಿ.

30. ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.

31. ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.

32. ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು.

33. ಜೂನ್ ನಿಂದ ಸೆಪ್ಟೆಂಬರ್ ( ಮಳೆಗಾಲ) ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.

34. ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.

35. ಊಟಮಾಡುವಾಗ ನೀರು ಕುಡಿಯ ಬಾರದು.

ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು.



----------- Hari Om ------------

Thursday, February 6, 2020

Ashwatha Tree or Peepul Tree or Arali Mara - King of Trees - Powerful tree


Ashwatha Tree or Peepul Tree or Arali Mara - King of Trees - Powerful tree

ಅಶ್ವತ್ಥಮರ
-----------------------------------

                                                                 Ashwatha Tree 


🍃 ಅಶ್ವತ್ಥಮರದಲ್ಲಿ ಭಗವಂತನು ಹಯಗ್ರೀಯ ರೂಪದಿಂದ ವಿಶೇಷವಾಗಿ ಅಭಿವ್ಯಕ್ತನಾಗಿ ಈ ಮರವು ಉಳಿದೆಲ್ಲಾ ಮರಗಳಿಗಿಂತ ಹೆಚ್ಚು ಯೋಗ್ಯವೆಂದು ತೋರಿಸುತ್ತಾನೆ .

🍃
ಅಶ್ವತ್ಥ ವೃಕ್ಷದ ಮಧ್ಯಭಾಗದಲ್ಲಿ ವಿಷ್ಣು, ತುದಿಯಲ್ಲಿ ರುದ್ರ, ಮೂಲಭಾಗದಲ್ಲಿ ಬ್ರಹ್ಮ ದೇವರು ನೆಲೆಸಿರುವರು.

🍃
ಅಶ್ವತ್ಥಮರದ ದರ್ಶನ ಪಾಪನಾಶಕ, ಸ್ಪರ್ಶ ಶ್ರೀಕಾರಕ , ಪ್ರದಕ್ಷಿಣೆ ಆಯುಷ್ಯಕಾರಕ ಎಂದು ಪದ್ಮ ಪುರಾಣ ಹೇಳುತ್ತದೆ.

🍃
ಪ್ರತಿದಿನ ಈ ವೃಕ್ಷದ ಸ್ಪರ್ಶ ನಿಷಿದ್ಧ ಶನಿವಾರದಂದು ಮಾತ್ರ ಸ್ಪರ್ಶಿಸಬೇಕೆಂದು ಧರ್ಮಶಾಸ್ತ್ರಗಳು ವಿಧಿಸುತ್ತವೆ.

🍃
ಸಂಧ್ಯಾಕಾಲದಲ್ಲಿ ಸೂರ್ಯಾಸ್ತವಾದ ಮೇಲೆ ಪ್ರದಕ್ಷಿಣೆ ಮಾಡಬಾರದು ಎಂದು ಪದ್ಮಪುರಾಣ ಹೇಳುತ್ತದೆ

🍃
ಏಳು ಪ್ರದಕ್ಷಿಣೆ ಮಾಡಿದರೆ 10,000 ಗೋದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ಬೇರೆ ಯಾವ ವೃಕ್ಷವು ಇಷ್ಟು ಪುಣ್ಯಪ್ರದವಲ್ಲ.

🍃
ಅಶ್ವತ್ಥ ಮರವನ್ನು ನೆಟ್ಟರೆ ಮೂರು ಸಂಪಿಗೆ ಮತ್ತು ಎಕ್ಕೆಗಿಡ, ಏಳು ಆಲದಮರ , ಎಂಟು ಬಿಲ್ವಪತ್ರೆಗಿಡ , ಮತ್ತು ನಿಂಬೆಮರ ನೆಟ್ಟಷ್ಟು ಫಲ.

🍃
ಜಲಾಶಯ , ನದಿ ಸಮೀಪದಲ್ಲಿ ಅಶ್ವತ್ಥಮರವನ್ನು ನೆಟ್ಟರೆ ಪಿತೃಗಳಿಗೆ ಬಹಳ ತೃಪ್ತಿಯಿಗುತ್ತದೆ. ಅದರ ಎಲೆಗಳು ಪರ್ವಕಾಲದಲ್ಲಿ ನೀರಿನಲ್ಲಿ ಬಿದ್ದಾಗಲೆಲ್ಲಾ ಪಿಂಡ ಸಮಾನವಾಗಿ ಪಿತೃಗಳಿಗೆ ಅಕ್ಷಯಲೋಕಗಳನ್ನು ಕೊಡುತ್ತದೆ.



Ashwatha Tree Leaves


Trimurti Gods reside on this tree ( Brahma in Roots & Vishnu in Middle Stem & Shiva on Top )
Among trees, the Aswatha is the most important. In most of the places, an idol or murthy of Serpent God is consecrated below this tree. In Kerala and Tamil Nadu the family which plants the tree does sacred thread ceremony to the tree and then conducts its marriage with the Neem tree. Most of the Serpent Temples in Karnataka and over South India and Ganesha temples in Tamil Nadu are constructed below this tree.

Moola Mantra:

ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ
ಅಗ್ರತಃ ಶಿವರೂಪಾಯ ಅಶ್ವತ್ಥಾಯ ನಮೋ ನಮಃ

Moolatho Brahma roopaya, madhyatho Vishnu roopine,
Agratha Shiva roopaya Vruksha rajaya they namah||
 
मूलतो ब्रह्मरूपाय मध्यतो विष्णुरूपिणे।
अग्रतः शिवरूपाय अश्वत्थाय नमो नमः।। 
 
5 Mantras associated with Ashwatha Tree or Vruksha

) ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತೋ ರುದ್ರರೂಪಾಯ ವೃಕ್ಷರಾಜಾಯ ತೇ ನಮಃ ||
) ಅಶ್ವತ್ಥ ಹುತಭುಕ್ ವ್ಯಾಸೋ ಗೋವಿಂದಸ್ಯ ಸದಾಶ್ರಯಃ |
ಅಶೇಷಂ ಹರ ಮೇ ಶೋಕಂ ವೃಕ್ಷರಾಜ ನಮೋಸ್ತುತೇ ||
) ಅಮಂಗಲಾನಾಂ ಶಮನೀಂ ಶಮನೀಂ ದುಷ್ಕ್ರತಸ್ಯ ಚ |
ದುಸ್ವಪ್ನನಾಶಿನೀಂ ಧನ್ಯಾಂ ಪ್ರಪದ್ಯೇಹಂ ಶಮೀಂ ಶುಭಾಮ್|
ಶಮಿ ಶಮಯ ಮೇ ಪಾಪಂ ಶಮಿ ಶತ್ರುವಿನಾಶಿನಿ |
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನಿ ||
) ದೇವಕಿಸುತಗೋವಿಂದ ದೇವದೇವ(ವಾಸುದೇವ) ಜಗತ್ಪತೇ |
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ||
) ಹಿಮವತ್ಯುತ್ತರೇ ಪಾರ್ಶ್ವೇ ಸುರಸಾ ನಾಮ ಯಕ್ಷಿಣೀ |
ತಸ್ಯಾಃ ಸ್ಮರಣ ಮಾತ್ರೇಣ ವಿಶಲ್ಯಾ ಗರ್ಬಿಣೀ ಭವೇತ್ ||

1) moolatO brahmaroopAya madhyatO viShNuroopiNE |
agratO rudraroopAya vRukSharAjAya tE namaH ||
2) ashwattha hutaBuk vyAsO gOviMdasya sadAshrayaH |
ashEShaM hara mE shOkaM vRukSharAja namOstutE ||
3) amaMgalAnAM shamanIM shamanIM duShkratasya cha |
duswapnanAshinIM dhanyAM prapadyEhaM shamIM shubhAm|
shami shamaya mE paapaM shami shatruvinaashini |
arjunasya dhanurdhaari rAmasya priyadarshini ||
4) dEvakisutagOviMda dEvadEva(vAsudEva) jagatpatE |
dEhi mE tanayaM kRuShNa tvAmahaM sharaNaM gataH ||
5) himavatyuttarE pArshvE surasA nAma yakShiNI |
tasyAH smaraNa mAtrENa vishalyA garbiNI bhavEt ||



Purport or Meaning of the Aswatha Mantra’s:

Moolatho Brahma roopaya, madhyatho Vishnu roopine,
Agratha Shiva roopaya Vruksha rajaya they namah|| 1
 
My salutations to the king of trees.
Whose root is the form of Brahma,
Middle is the form of Lord Vishnu,
And top is the form of Lord Shiva.

Aswatha sarva papani satha janma arjithanicha,
Nudhaswa mama vrakshendra, sarva aiswarya pradho bhava|| 2
 
The holy fig(banyan) tree pushes away, all sins earned,
In several hundred births, and Oh king of trees,
Please grant me all different types of wealth.

Ayurbalam yaso varcha, praja pasu vasooni cha,
Brahma prajnam cha medham cha thwam nodehi Vanaspathe|| 3
 
Would you not give me, Oh product of the forest.
Long life, fame, splendour, children, cattle and riches,
As also knowledge of God and intellectual wisdom.

Sathatham varuno raksheth thwamarad vrushtirasrayedh,
Parithasthwam nishevantham thrunani sukhamasthu they|| 4
 
You are always protected by Varuna as you are rain dependent,
And you do not allow any grass to grow in the shade round you.


                                                      another Picture of Ashwatha tree
Akshi spandham bhujaspandham duswapnam dhurvichinthanam,
Sathroonam cha samuthanam hyaswastha samaya Prabho|| 5
 
Oh Lord Aswatha, please control pain in the eye,
Pain of hands, bad dreams, bad and evil thoughts,
And help me in destruction of my enemies.

Aswathaya varenyaya sarva aiswarya pradhayine,
Namo duswapna nasaya, suswapna phala dhayine|| 6
 
Oh Aswatha who blesses us and grants all type of wealth,
My salutations to you, who destroys bad dreams and grants good dreams.

Yaam drushtwa muchythe rogai,
Sprushtwa papapai pramuchyathe,
Yad ashrayath chiran jeevi,
Tham Aswatham namamyaham|| 7
 
I salute that Aswatha,
Seeing which diseases flee,
Touching which sins are destroyed,
And surrendering to which,
You get long healthy life.

Aswatha sumaha bhaga, subhaga, Priya Darshana
Ishta kamam cha may dehi shatrubhyascha parabhavam|| 8
 
Oh great Lord Aswatha, who is pretty and looks pretty,
Please fulfill all my desires and give disappointment to my enemies.

Aayu prajam dhanam dhanyam soubhagyam sarva sampadam,
Dehi deva maha Vruksha, thwam aham saranam gatha|| 9
 
I surrender fully to you and,
So be pleased to give, oh great tree,
Long life, sons, wealth, cereals,
Great luck all types of wealth.


Rig yajur sama manthrathma, sarva roopi, parathpara,
Aswatho Veda moolo asou rishibhi prochyathe sada|| 10
 
 
Great sages go in search of Aswatha,
As it is the soul of Rig, Yajur and sama Vedas,
And takes all forms, greater than the greatest,
And is the root of all the three Vedas.



Brahmaha guruha chaiva daridhro vyadhi peeditha,
Aavarthya laksha sankhyam tham sthothram yedath sukhee bhavth|| 11
 
If this prayer is repeated one hundred thousand times,
Even those cursed by Brahma or the teacher,
And those who are poor and diseased,
Would get cured of all ills and lead a pleasant life.

Vyaktha avyaktha swaroopaya, srushti sthithyantha karine,
Adhi madhyanth soonyaya vishtarasravase nama|| 12
 
Salutations to the very stable one,
Who has clear and unclear forms,
Who creates, looks after and destroys,
And who does not have beginning, middle and end.

Ravim rava vadharaogye,
Shivam some Shivaya cha,
Shakthim bhoume jayarthi cha,
Vanijyarthi budhe sarana|| 13
 
Gurou gurum cha Vidhyarthi,
Dhanarthi bhargave sriyam,
Sarva dukha vimoksharthee,
Sarvesam mandha vasare|| 14
 
Sarvada sarva devam scha,
Viseshanmada somayo,
Aswatha roopino deva,
Vruksha rajo prapoojayeth|| 15
 
 
Go round on Sundays and worshiping Sun to get heath,
Go round on Mondays and
worshiping Shiva to get pleasant life,
Go round on Tuesdays and
worshiping Parvathi to get victory
Go round on Wednesdays and
worshiping Devas, to get luck in business,
Go round on Thursdays and
Worshiping Guru to get good knowledge
Go round on Fridays and
worshiping Goddess Lakshmi to get wealth
Go round on Saturdays and
worshiping the greatest god to get rid of all sorrow.
Always all gods especially Saturn and the moon
Worship the God in the form of Aswatha
And offer prayers to this Lord of all trees.


-------- - Hari Om --------

Sunday, January 5, 2020

Ga-Kara Ganapathi Astothara

Sri Ga-kara Ganapathi Astothara



                                                           

ಶ್ರೀ ಗಕಾರ ಗಣಪತಿ ಅಷ್ಟೋತ್ತರದ ಮಹತ್ವಗಳು”


ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ದರೂ ಸಮಯ ಸಂಧರ್ಭಗಳು ತುಂಬಾ ತೊಂದರೆ ಕೊಡುತ್ತವೆ.. ತಮ್ಮ ಕೆಲಸಗಳು ಯಾವುದೂ ನಡೆಯುವುದಿಲ್ಲ , ಎಲ್ಲಾ ಕಡೆಯೂ ನಷ್ಟ ಅವಮಾನಗಳೇ ಜಾಸ್ತಿಯಾಗಿರುತ್ತವೆ..

ಇಂತಹ ಸಂಧರ್ಭದಲ್ಲಿ ಮನುಷ್ಯ ದೇವರ ಮೊರೆಹೋಗುತ್ತಾನೆ..

ಇಂತಹ ಸಂದರ್ಭಗಳಲ್ಲಿ ” ಶ್ರೀ ವಿನಾಯಕ”ನನ್ನು ಪೂಜಿಸಿ “ಗಕಾರ ಗಣಪತಿ” ಅಷ್ಟೋತ್ತರ ಓದಿದರೆ ಸಕಲ ಕಷ್ಟಗಳೂ ಗಣಪತಿ ದೇವರ ದಯೆಯಿಂದ ನಿವಾರಣೆಯಾಗಿ, ಶುಭವಾಗುತ್ತದೆ..

ಶ್ರೀ ಗಣಪತಿ ಅಷ್ಟೋತ್ತರದಲ್ಲಿ ಬಹಳ ತರಹ ಇದೆ.. ಅದರಲ್ಲಿ ” ಗಕಾರ ಗಣಪತಿ ಅಷ್ಟೋತ್ತರ ಬಲು ವಿಶೇಷವಾದುದು ಮತ್ತು ಶಕ್ತಿಯುತವಾದುದು..”!

ಇದನ್ನು ಯಾರು ಬೇಕಾದರೂ ಪೂಜಾಕಾಲದಲ್ಲಿ ಓದಬಹುದು..

ಶ್ರೀ ಗಕಾರ ಗಣಪತಿ ಅಷ್ಟೋತ್ತರ ಓದಿ ಪೂಜಿಸುವವರಿಗೆ ಬಹಳ ಬೇಗ ಫಲ ಸಿಗುವುದು..”!

ಶ್ರೀ ಗಕಾರ ಗಣಪತಿ ” ಅಷ್ಟೋತ್ತರವನ್ನು

ಭಾನುವಾರ ಓದಿದರೆ “ಕೆಲಸದ ತೊಂದರೆಗಳು, ಕಿರುಕುಳ ನಿವಾರಣೆಯಾಗುತ್ತದೆ..”!

ಸೋಮವಾರ ಓದಿದರೆ ಮಾನಸಿಕ ನೆಮ್ಮದಿ ದೊರೆತು ನೆಮ್ಮದಿಯಿಂದ ಇರುತ್ತಾರೆ.. ಜೀವನದಲ್ಲಿನ ಜಿಗುಪ್ಸೆ ದೂರವಾಗುತ್ತದೆ..

ಮಂಗಳವಾರ ಓದಿದರೆ ” ಗೃಹಕಲಹ”, ದಾಂಪತ್ಯ ಕಲಹ, ಅನುಮಾನಗಳು ನಿವಾರಣೆಯಾಗುತ್ತದೆ..

ಬುಧವಾರ ಓದಿದರೆ “ವಿದ್ಯಾವಂತರೂ, ಜ್ಞಾನಿಗಳೂ ಆಗುತ್ತಾರೆ, ವಿದ್ಯಾಭ್ಯಾಸದಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ..

ಗುರುವಾರ ಓದಿದರೆ ನೀವು ಮಾಡುವ ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನಡೆಯುತ್ತವೆ.., ಶುಭ ಕಾರ್ಯಗಳು ನಡೆಯುತ್ತವೆ..

ಶುಕ್ರವಾರ ಓದಿದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ, ಮನೆಯು ಅಭಿವೃದ್ಧಿಯಾಗುತ್ತದೆ..

ಶನಿವಾರ ಓದಿದರೆ ಸಮಸ್ತ ಸಾಲದ ಬಾಧೆ ನಿವಾರಣೆಯಾಗುತ್ತದೆ ಹಾಗೂ ನಿಮಗೆ ಬರಬೇಕಾದ ಹಣ ಬಹಳ ಬೇಗ ಬರುವುದು..

ವಿದ್ಯಾರ್ಥಿಗಳು ಓದಿ, ಜಪಮಾಡಿದರೆ ಬಹಳ ವಿದ್ಯಾವಂತರಾಗುತ್ತಾರೆ, ಉತ್ತಮವಾದ ಯಶಸ್ಸು ದೊರೆಯುತ್ತದೆ..

ಸಂತಾನವಿಲ್ಲದವರು ಓದಿದರೆ ಸತ್ಸಂತಾನ ಪ್ರಾಪ್ತಿಯಾಗುತ್ತದೆ..

ವಿವಾಹಪೇಕ್ಷೆ” ಇದ್ದವರು ಓದಿದರೆ ವಿವಾಹವಾಗಿ ಜೀವನ ಚೆನ್ನಾಗಿರುತ್ತದೆ..


||
ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ ||

ಓಂ ಗಕಾರರೂಪಾಯ ನಮಃ
ಓಂ ಗಂಬೀಜಾಯ ನಮಃ
ಓಂ ಗಣೇಶಾಯ ನಮಃ
ಓಂ ಗಣವಂದಿತಾಯ ನಮಃ
ಓಂ ಗಣಾಯ ನಮಃ
ಓಂ ಗಣ್ಯಾಯ ನಮಃ
ಓಂ ಗಣನಾತೀತಸದ್ಗುಣಾಯ ನಮಃ
ಓಂ ಗಗನಾದಿಕಸೃಜೇ ನಮಃ
ಓಂ ಗಂಗಾಸುತಾಯ ನಮಃ
ಓಂ ಗಂಗಾಸುತಾರ್ಚಿತಾಯ ನಮಃ
ಓಂ ಗಂಗಾಧರಪ್ರೀತಿಕರಾಯ ನಮಃ
ಓಂ ಗವೀಶೇಡ್ಯಾಯ ನಮಃ
ಓಂ ಗದಾಪಹಾಯ ನಮಃ
ಓಂ ಗದಾಧರಸುತಾಯ ನಮಃ
ಓಂ ಗದ್ಯಪದ್ಯಾತ್ಮಕಕವಿತ್ವದಾಯ ನಮಃ
ಓಂ ಗಜಾಸ್ಯಾಯ ನಮಃ
ಓಂ ಗಜಲಕ್ಷ್ಮೀಪತೇ ನಮಃ
ಓಂ ಗಜಾವಾಜಿರಥಪ್ರದಾಯ ನಮಃ
ಓಂ ಗಂಜಾನಿರತಶಿಕ್ಷಾಕೃತಯೇ ನಮಃ
ಓಂ ಗಣಿತಙ್ಞಾಯ ನಮಃ
ಓಂ ಗಂಡದಾನಾಂಚಿತಾಯ ನಮಃ
ಓಂ ಗಂತ್ರೇ ನಮಃ
ಓಂ ಗಂಡೋಪಲಸಮಾಕೃತಯೇ ನಮಃ
ಓಂ ಗಗನವ್ಯಾಪಕಾಯ ನಮಃ
ಓಂ ಗಮ್ಯಾಯ ನಮಃ
ಓಂ ಗಮನಾದಿವಿವರ್ಜಿತಾಯ ನಮಃ
ಓಂ ಗಂಡದೋಷಹರಾಯ ನಮಃ
ಓಂ ಗಂಡಭ್ರಮದ್ಭ್ರಮರಕುಂಡಲಾಯ ನಮಃ
ಓಂ ಗತಾಗತಙ್ಞಾಯ ನಮಃ
ಓಂ ಗತಿದಾಯ ನಮಃ
ಓಂ ಗತಮೃತ್ಯವೇ ನಮಃ
ಓಂ ಗತೋದ್ಭವಾಯ ನಮಃ
ಓಂ ಗಂಧಪ್ರಿಯಾಯ ನಮಃ
ಓಂ ಗಂಧವಾಹಾಯ ನಮಃ
ಓಂ ಗಂಧಸಿಂಧುರಬೃಂದಗಾಯ ನಮಃ
ಓಂ ಗಂಧಾದಿಪೂಜಿತಾಯ ನಮಃ
ಓಂ ಗವ್ಯಭೋಕ್ತ್ರೇ ನಮಃ
ಓಂ ಗರ್ಗಾದಿಸನ್ನುತಾಯ ನಮಃ
ಓಂ ಗರಿಷ್ಠಾಯ ನಮಃ
ಓಂ ಗರಭಿದೇ ನಮಃ
ಓಂ ಗರ್ವಹರಾಯ ನಮಃ
ಓಂ ಗರಳಿಭೂಷಣಾಯ ನಮಃ
ಓಂ ಗವಿಷ್ಠಾಯ ನಮಃ
ಓಂ ಗರ್ಜಿತಾರಾವಾಯ ನಮಃ
ಓಂ ಗಭೀರಹೃದಯಾಯ ನಮಃ
ಓಂ ಗದಿನೇ ನಮಃ
ಓಂ ಗಲತ್ಕುಷ್ಠಹರಾಯ ನಮಃ
ಓಂ ಗರ್ಭಪ್ರದಾಯ ನಮಃ
ಓಂ ಗರ್ಭಾರ್ಭರಕ್ಷಕಾಯ ನಮಃ
ಓಂ ಗರ್ಭಾಧಾರಾಯ ನಮಃ
ಓಂ ಗರ್ಭವಾಸಿಶಿಶುಙ್ಞಾನಪ್ರದಾಯ ನಮಃ
ಓಂ ಗರುತ್ಮತ್ತುಲ್ಯಜವನಾಯ ನಮಃ
ಓಂ ಗರುಡಧ್ವಜವಂದಿತಾಯ ನಮಃ
ಓಂ ಗಯೇಡಿತಾಯ ನಮಃ
ಓಂ ಗಯಾಶ್ರಾದ್ಧಫಲದಾಯ ನಮಃ
ಓಂ ಗಯಾಕೃತಯೇ ನಮಃ
ಓಂ ಗದಾಧರಾವತಾರಿಣೇ ನಮಃ
ಓಂ ಗಂಧರ್ವನಗರಾರ್ಚಿತಾಯ ನಮಃ
ಓಂ ಗಂಧರ್ವಗಾನಸಂತುಷ್ಟಾಯ ನಮಃ
ಓಂ ಗರುಡಾಗ್ರಜವಂದಿತಾಯ ನಮಃ
ಓಂ ಗಣರಾತ್ರಸಮಾರಾಧ್ಯಾಯ ನಮಃ
ಓಂ ಗರ್ಹಣಾಸ್ತುತಿಸಾಮ್ಯಧಿಯೇ ನಮಃ
ಓಂ ಗರ್ತಾಭನಾಭಯೇ ನಮಃ
ಓಂ ಗವ್ಯೂತಿದೀರ್ಘತುಂಡಾಯ ನಮಃ
ಓಂ ಗಭಸ್ತಿಮತೇ ನಮಃ
ಓಂ ಗರ್ಹಿತಾಚಾರದೂರಾಯ ನಮಃ
ಓಂ ಗರುಡೋಪಲಭೂಷಿತಾಯ ನಮಃ
ಓಂ ಗಜಾರಿವಿಕ್ರಮಾಯ ನಮಃ
ಓಂ ಗಂಧಮೂಷವಾಜಿನೇ ನಮಃ
ಓಂ ಗತಶ್ರಮಾಯ ನಮಃ
ಓಂ ಗವೇಷಣೀಯಾಯ ನಮಃ
ಓಂ ಗಹನಾಯ ನಮಃ
ಓಂ ಗಹನಸ್ಥಮುನಿಸ್ತುತಾಯ ನಮಃ
ಓಂ ಗವಯಚ್ಛಿದೇ ನಮಃ
ಓಂ ಗಂಡಕಭಿದೇ ನಮಃ
ಓಂ ಗಹ್ವರಾಪಥವಾರಣಾಯ ನಮಃ
ಓಂ ಗಜದಂತಾಯುಧಾಯ ನಮಃ
ಓಂ ಗರ್ಜದ್ರಿಪುಘ್ನಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಗಜಚರ್ಮಾಮಯಚ್ಛೇತ್ರೇ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಗಣಾರ್ಚಿತಾಯ ನಮಃ
ಓಂ ಗಣಿಕಾನರ್ತನಪ್ರೀತಾಯ ನಮಃ
ಓಂ ಗಚ್ಛತೇ ನಮಃ
ಓಂ ಗಂಧಫಲೀಪ್ರಿಯಾಯ ನಮಃ
ಓಂ ಗಂಧಕಾದಿರಸಾಧೀಶಾಯ ನಮಃ
ಓಂ ಗಣಕಾನಂದದಾಯಕಾಯ ನಮಃ
ಓಂ ಗರಭಾದಿಜನುರ್ಹರ್ತ್ರೇ ನಮಃ
ಓಂ ಗಂಡಕೀಗಾಹನೋತ್ಸುಕಾಯ ನಮಃ
ಓಂ ಗಂಡೂಷೀಕೃತವಾರಾಶಯೇ ನಮಃ
ಓಂ ಗರಿಮಾಲಘಿಮಾದಿದಾಯ ನಮಃ
ಓಂ ಗವಾಕ್ಷವತ್ಸೌಧವಾಸಿನೇ ನಮಃ
ಓಂ ಗರ್ಭಿತಾಯ ನಮಃ
ಓಂ ಗರ್ಭಿಣೀನುತಾಯ ನಮಃ
ಓಂ ಗಂಧಮಾದನಶೈಲಾಭಾಯ ನಮಃ
ಓಂ ಗಂಡಭೇರುಂಡವಿಕ್ರಮಾಯ ನಮಃ
ಓಂ ಗದಿತಾಯ ನಮಃ
ಓಂ ಗದ್ಗದಾರಾವಸಂಸ್ತುತಾಯ ನಮಃ
ಓಂ ಗಹ್ವರೀಪತಯೇ ನಮಃ
ಓಂ ಗಜೇಶಾಯ ನಮಃ
ಓಂ ಗರೀಯಸೇ ನಮಃ
ಓಂ ಗದ್ಯೇಡ್ಯಾಯ ನಮಃ
ಓಂ ಗತಭಿದೇ ನಮಃ
ಓಂ ಗದಿತಾಗಮಾಯ ನಮಃ
ಓಂ ಗರ್ಹಣೀಯಗುಣಾಭಾವಾಯ ನಮಃ
ಓಂ ಗಂಗಾದಿಕಶುಚಿಪ್ರದಾಯ ನಮಃ
ಓಂ ಗಣನಾತೀತವಿದ್ಯಾಶ್ರೀಬಲಾಯುಷ್ಯಾದಿದಾಯಕಾಯ ನಮಃ

||
ಇತಿ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ || 

 

ಒಂದು ಒಳ್ಳೆಯ ವಿಷಯವನ್ನು ನಾವು ಒಬ್ಬರೇ ಪ್ರಯೋಜನ ಪಡಿಸಿಕೊಳ್ಳುವುದಕ್ಕಿಂತಾ ನಾಲ್ಕು ಜನರಿಗೆ ತಿಳಿಸಿದರೆ ನಮಗೆ ಹೆಚ್ಚಿನ ಫಲ ದೊರಕುತ್ತದೆ.

----------- Hari Om ----------

Monday, December 30, 2019

Speciality food in Indian Railways

Speciality food in Indian Railways

Food at Indian Railway Stations

Speciality Food at Indian Railway Stations 
 
Some stations on Indian Railways are famous for their Regional specialty Food items available there. Below follows a list of some of them are divided in 5 Blocks.

NORTH INDIA -- Railway Junctions / Stations

1)Agra - Petha (candied pumpkin)
2)New Delhi - Aloo chat (tangy potato snack)
3)Amritsar - Lassi, Aloo paratha
4)Varanasi - Seasonal amrud fruit (Guava)
5)Gorakhpur - Rabdi (a sweet made of milk and sugar)
6)Guwahati - Lal Chai (Assam blend Tea)
7)Lucknow - Shahi Biryani & Sadella Laddu
8)MughalSarai -- Rumali Roti & Aloo bajji & Puri Sabji
9)Bareilly -- Moong dhall Pakodi
10)Patna – Litti Choka
11)Jallandhar -- Choley Bature
12)Kharagpur Jn -- Dum Aloo & Aloo Tikki
13)Amritsar -- Lassi
14)Bilaspur -- Samosa
15)Old Delhi -- Bread pakoda
16)Allahabad - Motichur ladoos & Guava fruits
17)Ambala - Aloo paratha & Channa Kulcha & Masala Milk
18)Dehradun - Salted cucumber
19)Mathura Jn -- Peda (Kesar)
20)Tundla Jn -- Aloo Tikki
21)Varanasi -- Rabri (sweet dish) & Lassi
22)Ludhiana -- Badam Milk
23)Bhatinda -- Alo Parathas with Sweet curd & Pudina chutneys
24)Panipat -- Bread Pakoras
25)Naseerabad Cantt -- Kachories
26)Dudhnoi station -- Saulor pitha - a Rice Dish
27)Sandila Station -- Laddu's

SOUTH INDIA -- Railway Junctions / Stations

1)Bangalore - Vada Sambar, fresh fruit juices
2)Haveri - Savanur Khara
3)Hubli - Curd Rice (yogurt Rice) with onions, chilly peppers & pickles)
4)Mysore - Dosa & Mysore pak sweet
5)Tiruchirapalli - Bondas in several variations
6)Hyderabad - Chicken biryani
7)Calicut (Kozhikode) - Dal vada & Halwa and Banana chips
8)Quilon - Rasam
9)Mangalore - Egg Biryani
10)Ernakulam - Fried yellow Bananas
11)Guntakal - Mango jelly
12)Chennai Central - Idli, Dosa's , Murukku
13)Rameshwaram - IdiAppam (Rice Noodles)
14)Karajgi - Hot Idli and Vadas
15)Trivandram -- Appam with Coconut Milk
16)Guntakkal -- Utappam & Pongal & Mango Jelly
17)Dharmavaram -- Dal vada & Masala Vada & Idli
18)Madurai - Uthappam (spicy lentil/Rice pancake),Veg Meals
19)Vasco-da-gama - Fish curry/Veg cutlets
20)Tirupati - Ladoos, Rice sevai
21)Londa - Jackfruit
22)Coimbatore - Sambar-Rice, Tamarind-Rice, Lemon-Rice
23)Thanjavur - Salted cashewnuts
24)Maddur - Maddur-vade
25)Dharwad -- Peda
26)Gudur - Lemons & Lemon Rice
27)Panruti - Jackfruit & Halwa
28)Virudunagar - Poli (a thick sweet flat bread)
29)Sankarankoil - Long Bananas , Chicken biryani
30)Srivilliputtur - Paal kova (a soft milk-based sweet)
31)Manapparai – Murukku
32)Kalluru ( Guntakal ) -- Hot Idlis & chutneys
33)Nalwar -- Bhel Missal & Cucumber Mix
34)Katpadi -- Curd Rice
35)Warrangal -- Medu Vada
36)Belagavi -- Kunda sweet
37)Gokak -- Karadantu sweet
38)Davanagere -- Benne Masala dosa
39)Chinna Ganjam - Cashewnuts
40)Sankari durg -- Hot Jelebis & Benne Muruku
41)Cochin station -- Pazam puri
42)Erode junction -- Curd Rice
43)Tiruppur station -- Sambar Rice
44)Karur Junction -- Tamrind Rice



CENTRAL INDIA -- Railway Junctions / Stations

1)Nagpur - Bhujia, and oranges
2)Indore - Farsan & Gutte ki kis
3)Ranchi - Puri bhaji
4)Gwalior - Boiled chickpeas with chile peppers
5)Ratlam -- Poha & Hot Jelebi
6)Jhansi -- Aloo puri & Channa Batura
7)Itarsi -- Channa Batura
8)Nagpur -- Misal & Bhujia & Oranges
9)Bhopal -- Kulfi & chole Bature
10)Balharshah -- Egg Omlette
11)Orai station -- Salted Kachori with Gulab jamoon





WESTERN INDIA -- Railway Junctions / Stations

1)Pune - Misal & Patties & Vadapav
2)Karjat & Vangoan – Batata vada / Vada pav (Potato snack)
3)Lonavala - Chocolate Fudge / Cashew nut Chikki (Cashew nut brittle candy)
4)Neral - Seasonal Jambhool fruit
5)Khandala - Seasonal Jamoon fruit (plums)
6)Solapur - Kunda (sweet barfi) & Pav Bhaji
7)Kolhapur - Sugarcane juice
8)Miraj - Rasam and Rice
9)Jaipur - Dal bati Churma
10)Gandhidham - Dabeli
11)Anand -- Flavored Milk
12)Ajmer -- Kadai Kachori & Mewa (Mix Fruits)
13)Ahmedabad - Vadilal ice-cream
14)Surat - Undhyo (mixed vegetables) & Vada pav & Moongfali
15)Chittorgarh -- Onion & Potato Pakoda
16)Surendranagar -- Camel's Milk Tea
17)Ratnagiri - Mangoes, dried jackfruit
18)Daund - Peanuts & Veg Biryani
19)Anand - Gota (fenugreek fritters), and milk from the dairy farm there
20)Khambalia Junction - Potato/onion/chili fritters
21)Dwaraka - Milk pedhas
22)Viramgam - Fafda (ganthiya), Poori + Alu-bhaji
23)Pendra Road - Samosas
24)Abu Road -- Rabri (sweet dish)
25)Jodhpur -- Mirch Bajji
26)Manikpur - Cream
27)Bharuch - Roasted Peanuts
28)Mumbai -- Vada Pav & Biryani
29)Madgoan -- Roasted Cashew Nuts & Garlic Bread
30)Panjim -- Cashew Nuts-Roasted & Grilled Sandwich
31)Baroda -- Chuda & Mixures
32)Nasirbad Station -- Kachura - 10 times bigger than Kachori
33)Sawai Madhopur Station -- Moongodi dish
34)Dadar Station --Veg Puff Paties & Cheese Vada Pav
35)Igatpuri -- Hot Samosa with Tomato chutney


EASTERN INDIA -- Railway Junctions / Stations

1)Howrah - Sandesh sweet & Jhaal Muri & Rasgolla & Monginis Rolls
2)Puri - Halwah
3)Bhubaneshwar - Dal and Rice
4)Vijayawada - Mango Jelly & Fruit juices & Dal Vada & Idli
5)Rajahmundry - Bananas
6)Calcutta --Sweet curd, Luchis, Rasgollas & Lime Tea
7)GunturJunction -- Bread Omlette
8)Asansol -- Veg Patties
9)Kumarghat station -- Bolied Maize with Masala Coated
10) Gudur – Lemons & its Juices
11)Hyderabad – Palav


Don't miss the Speciality Foods at different Railway Stations when you are traveling on Indian Railways across India and it's often astonishingly very Good.

You need to get it Packed or Eat there itself depending upon the train halting time.
Forget about total Hygenic conditions insist for fresh and Hot served well and good.

Enjoy it
---- Hari Om ----

Wednesday, December 25, 2019

Sri Bhootha Rajaru

Sri Bhootha Rajaru

                                                             Sri Bhootha Rajaru

ಭೂತರಾಜರು ಯಾರು 
ಆವರ ಪರಿಚಯ

ದಕ್ಷಿಣ ಕನ್ನಡ ಜಿಲ್ಲೆಯ ನಾರಳ ಗ್ರಾಮದಲ್ಲಿ ಜನಿಸಿದ ನಾರಾಯಣಾಚಾರ್ಯ ಎಂಬುವರು ಶ್ರೀವಾದಿರಾಜರ ಜೊತೆಗೆ ಆವರ ಮಠದಲ್ಲಿ ಇದ್ದರು. ಒಮ್ಮೆ ಪ್ರಸಂಗವಶಾತ್ ಆಚಾರದ ವಿಷಯದಲ್ಲಿ ಗುರುಗಳನ್ನು ಹಿಂಬಾಲಿಸಿ ಪರೀಕ್ಷಿಸಲು ಹೋರಟ ನಾರಾಯಣಾಚಾರ್ಯರ ಜಿಜ್ಞಾಸೆ , ಗುರುಗಳಾದ ಶ್ರೀ ವಾದಿರಾಜರಿಗೆ ಗೊತ್ತಾಯಿತು. ಆ ಪ್ರಸಂಗ ಯಾವುದು ಅಂದರೆ. ಒಮ್ಮೆ ಸಾಧನ ದ್ವಾದಶಿ ದಿವಸ ವ್ಯಾಸರಾಜರು ಮತ್ತು ಇತರರು ವಾದಿರಾಜರಿಗಾಗಿ ಕಾದಿದ್ದರೆ. ಅಂದು ರಾಜರು ಧ್ಯಾನಾಸಕ್ತರಾಗಿ ಇರುವದರಿಂದ ಸ್ವಲ್ಪ ತಡವಾಯಿತು. ಅವರು ಮರುಕ್ಷಣದಲ್ಲಿ ಸ್ನಾನಮಾಡಿ ಪೂಜೆಯನ್ನು ಮಾಡಲು ಕಾಲಾವಕಾಶ ಇಲ್ಲಿದ್ದರಿಂದ ಪಾರಣಿ ಮುಗಿಸಿದರು. ಆದಮೇಲೆ, ಅವರು ಕಾಡಿನಲ್ಲಿ ದೂರ ಯಾರು ಇಲ್ಲದ ಪ್ರದೇಶದಲ್ಲಿ ಹೋಗಿ ತಮ್ಮ ಯೋಗಶಕ್ತಿಯಿಂದ ಎಲ್ಲ ಆಹಾರವನ್ನು ಹೊರಗೆ ತೆಗೆದು, ಬಾಲೆದೆಲೆಯ ಮೇಲೆ ಇಟ್ಟರು. ಆದಮೇಲೆ ಸ್ನಾನ ದೇವರಪೂಜೆ ನದಿಯಲ್ಲಿ ಆಚರಿಸಿದರು. ಇದನ್ನು ದೂರದಿಂದ ನಾರಾಯಣಾಚಾರ್ಯರು ಗಿಡದ ಹಿಂದಿನಿಂದ ನೋಡುತ್ತಿದ್ದರು. ಪರೀಕ್ಷಾರ್ಥವಾಗಿ ಬಂದ ನಾರಾಯಣಾಚಾರ್ಯರಿಗೆ ಬ್ರಹ್ಮರಾಕ್ಷಸ ಆಗಬೇಕೆಂದು ಶಾಪಪ್ರದಾನ ಮಾಡಿದರು. ತಮ್ಮ ಅಕೃತ್ಯಕ್ಕಾಗಿ ಪರಿತಪಿಸಿ ಪ್ರಾರ್ಥಿಸಿದಾಗ ಯಾರು "ಆ ಕಾ ಮ ವೈ ಕೋ ನ ಸ್ನಾಥಹ" ಎನ್ನುವ ಪ್ರಶ್ನಕ್ಕೆ ಉತ್ತರ ಹೇಳುತ್ತಾರೋ ಅವರೇ ಶಾಪವಿಮೋಚನ ಮಾಡುತ್ತಾರೆಂದು ಹೇಳಿದರು.
ಕೆಲ ಸಮಯ ಬ್ರಹ್ಮರಾಕ್ಷಸ ಜನ್ಮದಲ್ಲಿದ್ದ ನಾರಾಯಣಾಚಾರ್ಯರಿಗೆ, ಒಂದು ದಿನ ತಾನು ಇದ್ದ ಅರಣ್ಯದಲ್ಲಿಯೇ ರಾಜರು ಹಾದಿ ಹೋಗುತ್ತಿದ್ದರು. ಆಗ ಅವರನ್ನು ತಡೆದು ಯಥಾ ಪ್ರಕಾರ ಆ ಪ್ರಶ್ನೆಯನ್ನು ಕೇಳಿತು. ರಾಜರಿಗೆ ಈ ರಾಕ್ಷಸ ವಿಷಯ ಸ್ಮರಣೆಗೆ ಬಂತು. ಆಗ ರಾಜರು ಮುಗುಳ್ನಗೆಯಿಂದ 'ಯಾರು ಆಷಾಡ ಕಾರ್ತೀಕ ಮಾಘ ಮತ್ತು ವೈಶಾಖ ಮಾಸಗಳಲ್ಲಿ ಉದಯಕಾಲದಲ್ಲಿ ಸ್ನಾನ ಮಾಡುತ್ತಾನೆಯೋ ಅವನಿಗೆ ಬ್ರಹ್ಮರಾಕ್ಷಸ ಜನ್ಮ ಬರುವುದಿಲ್ಲ' ಎಂದು ಹೇಳಿದ ತಕ್ಷಣ ಗುರುಗಳಿಂದಲೇ ಶಾಪವಿಮೋಚನ ಆಯಿತು. ಅವರು ಶಾಪ ವಿಮೋಚನ ಆದೊಡನೆ ದಿವ್ಯ ರೂಪ ಧರಿಸಿ ಮುಂದೆ ನಿಂತರು. ಆವರ ಸ್ವರೂಪದ ಬಗ್ಗೆ ಶ್ರೀ ವಾದಿರಾಜರಿಗೆ ಪೂರ್ಣ ಅರಿವಿತ್ತು. ಶ್ರೀವಾದಿರಾಜರು ದಿವ್ಯರೂಪದಲ್ಲಿದ್ದ ನಾರಾಯಣಾಚಾರ್ಯರಿಗೆ ಹೀಗೆ ನುಡಿದರು. ಮುಂದಿನ ಕಲ್ಪದಲ್ಲಿ ರುದ್ರದೇವರ ಪದವಿಗೆ ಹೋಗುವವರೆಗೂ ಭೂತರಾಜ ಎಂಬ ಹೆಸರಿನಿಂದ ಗುರುಗಳ ಸೇವೆಯನ್ನು ಅದೃಶ್ಯರಾಗಿ ಮಾಡಬೇಕೆಂದು ಆಜ್ಞೆ ಮಾಡಿದರು. ಮುಂದೆ ಶ್ರೀರಾಜರು ಬೃಂದಾವನ ಪ್ರವೇಶ ಮಾಡುವವರೆಗೂ ಅದೃಶ್ಯರಾಗಿ ಸೇವೆ ಮಾಡಿದರು. ತದನಂತರ ಕ್ಷೇತ್ರ ಪಾಲಕರಾಗಿ ಶ್ರೀಸೋದಾಕ್ಷೆತ್ರದಲ್ಲಿ ಇದ್ದು, ಇಂದಿಗೂ ಅದೃಶ್ಯರಾಗಿ ಗುರುಗಳ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಂದ ಭಕ್ತರ ಭೂತಪ್ರೇತಗಳ ಬಾಧೆಯನ್ನು ನಿವಾರಿಸುತ್ತ ವಿರಾಜಮಾನರಾಗಿದ್ದಾರೆ.
ಭೂತಪ್ರೇತಗಳು ತಾವಾಗಿಯೇ ವಿದಾಯ ಹೇಳುವ ಕ್ಷೇತ್ರ ಶ್ರೀಸೋದಕ್ಷೇತ್ರ




                                   Sri Bhootha Rajara Temple in Sonda, Sirsi taluk, Karnataka


ತೀರ್ಥಪ್ರಬಂಧ ಸಂಗ್ರಹ :

ಸೋದೆಯಲ್ಲಿ ಇರುವ ತ್ರಿವಿಕ್ರಮ ದೇವರು ತಂತ್ರ ಸಾರೋಕ್ತ ಲಕ್ಷಣಉಳ್ಳ ಸುಂದರ ವಿಗ್ರಹ. ಇದು ಗಂಗಾತೀರದ ಕಾಶಿ ಇಂದ ಬಂದ ವಿಗ್ರಹ ಎಂದು ಶಿಲಾ ಶಾಶನ ಇದೆ ಮತ್ತು ರಥಾ ರೂಢವಾಗಿರುವುದು ಮತ್ತೊಂದು ವೈಶಿಷ್ಟ. ಇದನ್ನು ವಾದಿರಾಜರು ತಮ್ಮ ಶಿಷ್ಯರಾದ ಭೂತರಾಜರಿಂದ ತರಿಸಿದರೆಂದು ಇತಿಹ್ಯಇದೆ.
ರಥಾ ಸಮೇತರಾಗಿ ವಿಗ್ರಹವನ್ನು ಭೂತರಾಜರು ತರುವ ಕಾಲದಲ್ಲಿ ಒಬ್ಬ ದೈತ್ಯಬಂದು ಅಡ್ಡಿಮಾಡಿದನೆಂದು , ಪ್ರತಿಷ್ಠಾಪನೆಯ ಮುಹೂರ್ತವು ಅತಿಕ್ರಮೆಸಿತೆಂಬ ಯೋಚನೆಯಿಂದ ಭೂತರಾಜರು ಅ ರಥದ ಒಂದು ಗಾಲಿಯಿಂದ ಆ ದೈತ್ಯನನ್ನು ಸಂಹರಿಸಿದರೆಂದು , ಆದಕಾರಣ ಈ ರಥಕ್ಕೆ ಮೂರು ಚಕ್ರಗಳು ಇರುವುದೆಂದು ಹೇಳುತ್ತಾರೆ.

ಕೃಷ್ಣಾರ್ಪಣಮಸ್ತು 

-------------- Hari Om -----------

                    

Saturday, November 2, 2019

Pranayama - Breathing Technique in Ayurveda

 Pranayama – Breathing Technique according to Ayurveda





ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಹೇಳುವಂತೆ ನಮ್ಮ ದೇಹದ ಆರೋಗ್ಯ ಸ್ಥಿರವಾಗಿ ಇರಬೇಕಾದರೆ ಮೊದಲು ನಮ್ಮ ಉಸಿರಾಟ ಸ್ಥಿರವಾಗಬೇಕು...‌ ಏಳನೇ ವಯಸ್ಸಿಗೆ ಉಪನಯನವಾದ ವಟುವಿಗೆ ಮೊದಲು ಕೊಡುವ ಟ್ರೈನಿಂಗ್ ಪ್ರಾಣಾಯಾಮ... ಸಂಧ್ಯಾವಂದನೆ ಅಥವಾ ಯಾವುದೇ ಧಾರ್ಮಿಕ ಕ್ರಿಯೆಯಲ್ಲದಾರೂ ಕೂಡ ಮೊದಲು ಆಚಮನ, ಪ್ರಾಣಾಯಾಮ ಆಮೇಲೆ ತಾನು ಏನು ಕರ್ಮ ಮಾಡ್ತೇನ ಅನ್ನುವ ಸಂಕಲ್ಪ....

ನಮ್ಮ ಶಾಸ್ತ್ರ ಹೇಳುತ್ತೆ, ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಾಂಗದ ಕ್ರಿಯೆ ನಡೆಯುವುದು ಆಯಾ ದೇವತಾ ಶಕ್ತಿ ಆಯಾ ದೇಹದ ಭಾಗದಲ್ಲಿ ಕೂತು ಮಾಡುವ ಕ್ರಿಯೆ ಅದು ಅಂತ... 

ಉದಾಹರಣೆಗೆ, ನಮ್ಮ ಕಣ್ಣು ಸುಂದರ ಜಗತ್ತಿನ ಅನುಭವವನ್ನು ಕಾಣ್ಕೆಯ ಮೂಲಕ ನಮಗೆ ಕೊಡುತ್ತೆ. ಕಣ್ಣು ಅಥವಾ ಯಾವುದೇ ಇಂದ್ರಿಯ ಗಳಾಗಲಿ ಅದು ಜಡ ವಸ್ತು... ‌ಕಣ್ಣಿನ ಅಭಿಮಾನಿದೇವತೆಯಾಗಿ "ಸೂರ್ಯ" ಕಣ್ಣಿನಲ್ಲಿ ಕೂತದ್ದರಿಂದ ನಮಗೆ ಕಣ್ಣು ಕಾಣೋದು... ಹೊರಗೆ ಆಕಾಶದಲ್ಲಿ ಜಗಮಗಿಸುವ ಸೂರ್ಯಮಂಡಲ ಉಂಟಲ್ಲ ಅದು ಜಡ ಅದು ನಮ್ಮ ಕಣ್ಣಿಗೂ ಕಾಣುತ್ತೆ, ಅದರ ಅಭಿಮಾನಿದೇವತೆ ಸೂರ್ಯ... ಆ ದೇವತೆ ನಮ್ಮ ಕಣ್ಣಿಗೆ ಕಾಣಿಸೋಲ್ಲ... ಯಾವ ಸೂರ್ಯ ಸೂರ್ಯಂಡಲದ ಅಭಿಮಾನಿ ದೇವತೆಯೋ (ಅದರಿಂದಲೇ ಆಕಾಶದ ಸೂರ್ಯನನ್ನು ಮುಗಿಲಕಣ್ಣು ಅಂತಾರೆ) ಅದೇ ಸೂರ್ಯ ನಮ್ಮ ಕಣ್ಣಿನ ದೇವತೆ ಕೂಡ... ಅದರಿಂದಲೇ, ಸೂರ್ಯ ಆಗಸದಲ್ಲಿ ಉದಯಿಸಿದಾಗ ನಮ್ಮ ಕಣ್ಣು ತೆರೆಯುತ್ತೆ... ಸೂರ್ಯ ಕಂದಿದಾಗ ನಮ್ಮ ಕಣ್ಣೂ ಮುಚ್ಚುತ್ತೆ... 


ಹಾಗೆ ನಮ್ಮ ಪ್ರತಿಯೊಂದು ಇಂದ್ರಿಯಗಳಿಗೂ ಒಬೊಬ್ಬ ಅಭಿಮಾನಿದೇವತೆ ಇದ್ದಾನೆ... ಕಿವಿಗೆ ಚಂದ್ರ, ಅವನು ರಾತ್ರಿಯಲ್ಲಿ ಪ್ರಕಾಶ ಹರಿಸುವವನು... ಅದರಿಂದಲೇ ರಾತ್ರಿಯಲ್ಲಿ ನಮ್ಮ ಕಿವಿ ತುಂಬಾ ಚುರುಕು ಒಂದು ಸಣ್ಣ ಶಬ್ದ ಕೂಡ (Pin Drop) ಕಿವಿಗೆ ಬಂದು ಬಡಿಯುತ್ತೆ... 


ನಮಗಮ ಮೂಗಿಗೆ ಅಶ್ವಿದೇವತೆಗಳು ಅಭಿಮಾನಿ ದೇವತೆಗಳು ... ಅಶ್ವಿಗಳು Twins ನಮ್ಮ ಮೂಗು ಒಂದೇ ಆದರೂ ಎರಡು ಹೊರಳೆಗಳು... 

ಹೀಗೆ ಪ್ರತಿಯೊಂದು ಇಂದ್ರಿಗಳಿಗೂ ಒಬ್ಬೊಬ್ಬ ಅಭಿಮಾನಿ ದೇವತೆ.. ನಮ್ಮ ಕೈಗೆ ಇಂದ್ರ, ಬಾಯಿಗೆ ವರುಣ, ಮಾತಿಗೆ ಪಾರ್ವತಿ, ಚರ್ಮಕ್ಕೆ (ಸ್ಪರ್ಶದ ಸುಖ ಕೊಡುವ) ಕುಬೇರ, ಕಾಲುಗಳಿಗೆ ಜಯಂತ, ನಮ್ಮ ಒಳಗಿನ ಇಂದ್ರಿಯಗಳಾದ ಮನಸ್ಸು-ಬುದ್ಧಿ-ಅಹಂಕಾರಕ್ಕೆ ಶಿವ, ನಮ್ಮ ಉಸಿರಾಟಕ್ಕೆ ಮುಖ್ಯಪ್ರಾಣನೆನಿಸಿದ ವಾಯು... ಈ ದೇಹದಲ್ಲಿ ನಿರಂತರ ಕ್ರಿಯೆ ನಡೆಯುತ್ತಿದೆ... It is not merely biological Chemical Reaction... ದೇಹ ಜಡವಾದರೂ ಈ ದೇಹದಲ್ಲಿ ಅನೇಕ ಕ್ರಿಯೆಗಳು ನಡೆಯುತ್ತಿವೆ ಅದಕ್ಕೆ ಅತೀಂದ್ರಿಯ ಶಕ್ತಿ ಗಳೆನಿಸಿದ ದೇವತಾಶಕ್ತಿಗಳು ಕಾರಣ..‌. 
 


ಈ ದೇಹದಲ್ಲಿ ಮುಖ್ಯವಾಗಿ 24 ತತ್ವಾಭಿಮಾನಿ ದೇವತೆಗಳಿದ್ದು ಈ ದೇಹವನ್ನು ನಿಯಂತ್ರಿಸುತ್ತಿದ್ದಾರೆ...
 

ಇದು ಒಂದು ಕಥೆ... ಒಮ್ಮೆ ದೇವತೆಗಳಲ್ಲಿ ಚರ್ಚೆ ನಡೆಯಿತು ಯಾರು ಈ ದೇಹದಲ್ಲಿ ಯಾರ ಸ್ಥಾನಮಾನ ಮುಖ್ಯ ಅಂತ... ಒಬ್ಬೊಬ್ಬ ದೇವತೆ ಈ ದೇಹದಿಂದ ಹೊರಗೆ ಹೋದಾಗ ಏನಾಯಿತು...
ಸೂರ್ಯ ಹೊರಗೆ ಹೋದ ವ್ಯಕ್ತಿ ಕುರುಡನಾಗಿ ಬದುಕಿದ... ಚಂದ್ರ ಹೊರಗೆ ಹೋದ ವ್ಯಕ್ತಿ ಕಿವುಡನಾಗಿ ಬದುಕಿದ... ಇಂದ್ರ ಹೊರಗೆ ಹೋದ ಕೈಯಿಲ್ಲದೆ ವ್ಯಕ್ತಿ ಬದುಕಿದ, ಜಯಂತ ಹೊರಗೆ ಹೋದ ಕಾಲಿಲ್ಲದೆ ಬದುಕಿದ ಪಾರ್ವತಿ ಹೊರಗೆ ಹೋದಳು ವ್ಯಕ್ತಿ ಮೂಕನಾಗಿ ಬದುಕಿದ ಮನೋಭಿಮಾನಿ ಶಿವನೂ ಹೊರಗೆ ಹೋದ ಮನಷ್ಯ ಕೋಮಾಸ್ಥಿಯಲ್ಲಿ ಬದುಕಿದ... ಹೀಗೆ ಯಾವುದೇ ದೇವತೆ ಹೊರಗೆ ಹೋದರು ದೇಹಬಿದ್ದುಹೋಗಲಿಲ್ಲ... ಯಾವಾಗ ಪ್ರಾಣದೇವರು ಉಸಿರಾಟ ನಿಲ್ಲಿಸಿದರೋ ದೇಹದೊಪ್ಪೆಂದು ಬಿತ್ತು... ನಮ್ಮ ಒಳಗಿರುವ ಭಗವಂತ ಈ ದೇಹ ಪ್ರವೇಶಮಾಡುವುದಾಗಲಿ ದೇಹ ಬಿಡುವುದಾಗಲಿ ಪ್ರಾಣನೊಟ್ಟಿಗೆ...

ದೇಹವನ್ನು ನಿಯಂತ್ರಿಸುವ ಎಲ್ಲ ದೇವತೆಗಳನ್ನು ಮತ್ತೆ ದೇಹಕ್ಕೆ ಕರೆಯಲಾಯಿತು... ದೇಹದ ಎಲ್ಲ ಅಂಗಗಳೂ ಸರಿಯಾಗಿವೆ ದೇಹ ಆರೋಗ್ಯವಾಗಿದೆ ವ್ಯಕ್ತಿ ಬಲಿಷ್ಠ ನಾಗಿದ್ದಾನೆ... ಈಗ ಸುಮ್ಮನೆ ವಾಯುದೇವ ದೇಹದಿಂದ ಹೊರನಡೆದ ಶರೀರ ದೊಪ್ಪೆಂದು ಬಿತ್ತು... ಇದು ಪ್ರಾಣಶಕ್ತಿ... ಅದೇ ಉಸಿರು...‌ ಈ ದೇಹದಲ್ಲಿ ಉಸಿರಿರುವ ತನಕವಷ್ಟೇ ಈ ದೇಹದಲ್ಲಿ ಚಟುವಟಿಕೆ...

ರಾತ್ರಿ ನಾವು ಮಲಗಿದಾಗ ಕೂಡ ನಮ್ಮೊಟ್ಟಿಗೆ ಎಲ್ಲ ಇಂದ್ರಿಯಾಭಿಮಾನಿ ದೇವತೆಗಳೂ Rest ತಗೋತಾರೆ... ಆದರೆ ಪ್ರಾಣದೇವರಿಗೆ Rest ಇಲ್ಲ..‌. ವಾಯು ನಮ್ಮ ದೇಹದಲ್ಲಿ 24x7 all 365 days till end of Life ಒಂದು ಕ್ಷಣ ಬಿಡದೇ ನಮ್ಮನ್ನು ಉಸಿರಾಡಿಸುತ್ತಿರಬೇಕು... ಪ್ರಾಣಶಕ್ತಿಯಿಂದಾಗಿ ಈ ದೇಹದಲ್ಲಿ ಮೇಲಕ್ಕೂ ಕೆಳಕ್ಕೂ ರಕ್ತಸಂಚಾರ, ನಾವು ಉಂಡ ಆಹಾರ ಜೀರ್ಣವಾಗುವುದು..‌ ಅದಕೆಂದೇ ನಾವು ನಿತ್ಯ ಉಟಮಾಡುವಾಗ ಮೊದಲು ಪಂಚರೂಪದಿಂದ ಈ ದೇಹದ ಚಟುವಟಿಕೆಗಳನ್ನು ನಡೆಸುವ ಪ್ರಾಣನಿಗೆ ಆಹುತಿ ಕೊಟ್ಟು ಪ್ರಾಣನ ಉಪಕಾರ ಸ್ಮರಣೆಯನ್ನು ಸ್ಮರಿಸುವುದು...‌ ಪ್ರಾಣಾಯ ಸ್ಚಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ..
ಅದರಿಂದ ಬದುಕು ಎಂದರೆ ಉಸಿರು... ಉಸಿರಾಟ ಸರಿಯಾಗಿದ್ದರೆ ದೇಹದಾರೋಗ್ಯ...‌




                              ----- Hari Om -----