ಮಾಘ ಸ್ನಾನ ---- Magha Snana
Magha Snana
ಪುಷ್ಯ ಮಾಸದ ಹುಣ್ಣಿಮೆಯ ದಿನದಿಂದ ಮಾಘ ಮಾಸದ ಹುಣ್ಣಿಮೆಯವರೆಗೂ ಮಾಡುವಂತಹ ಧಾರ್ಮಿಕ ಆಚರಣೆಯೇ ಮಾಘ ಸ್ನಾನ. ಸರ್ವಶ್ರೇಷ್ಠ ಮಾಸವಾದ ಕಾರ್ತಿಕ ಮಾಸಕ್ಕಿಂತಲೂ ಲಕ್ಷಪಟ್ಟು ಶ್ರೇಷ್ಠವಾದ ಮಾಸವೆಂದರೆ ಮಾಘ ಮಾಸ ಹಾಗೂ ಈ ಮಾಸದಲ್ಲಿ ಮಾಡುವಂತಹ ಪವಿತ್ರ ಸ್ನಾನ. ಇದರ ಮಹತ್ವದ ಕುರಿತಾಗಿ ಮಾಹಿತಿ ಇಲ್ಲಿದೆ ನೋಡಿ.
ಹಿಂದೂ
ಧರ್ಮದಲ್ಲಿ ಪ್ರತಿಯೊಂದು ಮಾಸಕ್ಕೂ
ಅದರದೇ ಆದ ಪ್ರಾಧಾನ್ಯತೆ ಇದೆ.
ಹಿಂದೂ
ಸಂವತ್ಸರದಲ್ಲಿ ಬರುವ ಹತ್ತನೇ
ಮಾಸವೇ ಪುಷ್ಯ, ಈ
ಮಾಸದ ಹುಣ್ಣಿಮೆಯಂದು ಬನದ ಹುಣ್ಣಿಮೆ
ಎಂದು ಆಚರಿಸಲಾದರೆ, ಈ
ದಿನ ಆರಂಭವಾಗುವ ಇನ್ನೊಂದು
ಆಚರಣೆಯೇ ಮಾಘ ಸ್ನಾನ. ಮಾಘ
ಸ್ನಾನವೆಂದರೆ ಪವಿತ್ರ ಕ್ಷೇತ್ರಗಳಲ್ಲಿರುವ
ಜಲಮೂಲಗಳಲ್ಲಿ ಮಾಡುವ ಪವಿತ್ರ
ಸ್ನಾನ.
ದೇವಾದಿ
ದೇವತೆಗಳಾದ ಬ್ರಹ್ಮ, ವಿಷ್ಣು,
ಮಹೇಶ್ವರ
ಹಾಗೂ ಆದಿತ್ಯಾದಿ ದೇವತೆಗಳು ಮಾಘ
ಮಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ
ಪುಣ್ಯ ಸ್ನಾನ ಮಾಡುತ್ತಾರೆ.
ಹಾಗಾಗಿ ಈ
ತಿಂಗಳಿನಲ್ಲಿ ಮಾಘ ಸ್ನಾನ ಮಾಡಿದರೆ
ಪಾಪಕರ್ಮಗಳು ನಿವಾರಣೆಯಾಗುವುದೆಂಬ
ನಂಬಿಕೆ ಇದೆ.ಮಾಘಸ್ನಾನವು
ಪುಷ್ಯ ಹುಣ್ಣಿಮೆಯಂದು ಆರಂಭವಾಗಿ
ಮಾಘ ಹುಣ್ಣಿಮೆಯಂದು ಮುಕ್ತಾಯವಾಗುತ್ತದೆ.
ಮಾಘ ಮಾಸದ
ವಿಶೇಷತೆಯೆಂದರೆ ಈ ಅವಧಿಯಲ್ಲಿ
ಪ್ರತಿಯೊಂದು ಪ್ರಾಕೃತಿಕ ಜಲಮೂಲವೂ
ಗಂಗೆಯಂತೆ ಪವಿತ್ರವಾಗುತ್ತದೆ.
another Picture
ಮಾಘಸ್ನಾನಕ್ಕಾಗಿ
ಉತ್ತರ ಭಾರತದ ಪ್ರಯಾಗ,
ವಾರಣಾಸಿ,
ನೈಮಿಷಾರಣ್ಯ,
ಹರಿದ್ವಾರ
ಹಾಗೂ ನಾಸಿಕ್,
ಗುಜರಾತಿನ
ಷುಷ್ಕರ ಸರೋವರವು ಮಾಘ ಸ್ನಾನಕ್ಕೆ
ಜನಪ್ರಿಯವಾದರೆ, ಕನ್ಯಾಕುಮಾರಿ,
ರಾಮೇಶ್ವರಂನಲ್ಲಿ
ಪವಿತ್ರಸ್ನಾನ ಮಾಡಿದರೆ ಕೋಟಿ
ಪುಣ್ಯ ಬರುವುದೆಂಬ ನಂಬಿಕೆ ಇದೆ.
ರಾಜ್ಯದಲ್ಲಿ
ಕಾವೇರಿ, ತುಂಗಭದ್ರಾ,
ಕೃಷ್ಣಾ
ಇತ್ಯಾದಿ ನದಿಗಳಲ್ಲಿ ಸ್ನಾನ
ಮಾಡಿದರೂ ಪುಣ್ಯ ಸಂಪಾದಿಸಬಹುದೆಂಬ
ನಂಬಿಕೆ ಭಕ್ತರದ್ದು.
ಈ
ದಿನಗಳಂದು ಮಾಘ ಸ್ನಾನ ಮಾಡಿದರೆ
ಒಳ್ಳೆಯದು...
1. ಪುಷ್ಯ ಹುಣ್ಣಿಮೆ
2. ಮಕರ
ಸಂಕ್ರಾಂತಿ
3. ಮೌನಿ
ಅಮಾವಾಸ್ಯೆ
4. ವಸಂತ
ಪಂಚಮಿ
5. ರಥಸಪ್ತಮಿ
6. ಮಾಘ
ಹುಣ್ಣಿಮೆ
7. ಮಹಾ
ಶಿವರಾತ್ರಿ
ಮಾಘ
ಮಾಸದಲ್ಲಿ ಪ್ರತಿದಿನ ಪವಿತ್ರ
ಜಲಮೂಲಗಳಲ್ಲಿ ಸ್ನಾನ ಮಾಡಲು
ಆಗದೇ ಇದ್ದಲ್ಲಿ, ಈ
ಪ್ರಮುಖ ಮೂರು ದಿನಗಳಲ್ಲಿ ಮಾಡಬಹುದು.
ಪ್ರಯಾಗದಲ್ಲಿ
ತೀರ್ಥ ಸ್ನಾನ ಮಾಡುವುದರಿಂದ
ಸಿಗುವ ಫಲ ಹತ್ತು ಸಾವಿರ ಅಶ್ವಮೇಧ
ಯಾಗವನ್ನು ಮಾಡಿದ ಫಲಕ್ಕಿಂತಲೂ
ಹೆಚ್ಚು ಎಂದು ಹೇಳಲಾಗುತ್ತದೆ.
ಸಾಧ್ಯವಾದರೆ
ಮಾಘ ಮಾಸದಲ್ಲಿ ಒಂದು ದಿನವಾದರೂ
ಮಾಘ ಸ್ನಾನ ಮಾಡಿದರೆ ಒಳ್ಳೆಯದು.
ಮಾಘ ಸ್ನಾನವನ್ನು
ಸೂರ್ಯೋದಯಕ್ಕೆ ಮುನ್ನ ಮಾಡಿದರೆ
ಒಳ್ಳೆಯದು.
ಅದರಲ್ಲೂ ಬ್ರಾಹ್ಮೀ ಮುಹೂರ್ತ ಅಂದರೆ ನಸುಕಿನ ಜಾವ 3:30 ರಿಂದ 4:00 ರವರೆಗೆ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಿವಾರಣೆಯಾಗುವುದೆಂದು ಹೇಳಲಾಗುತ್ತದೆ. ಪವಿತ್ರ ಕ್ಷೇತ್ರಗಳಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಹತ್ತಿರವಿರುವ ನದಿ, ಸರೋವರ, ಬಾವಿ ಮುಂತಾದ ಯಾವುದೇ ಪ್ರಾಕೃತಿಕ ಜಲಮೂಲಗಳಲ್ಲಿ ಸ್ನಾನ ಮಾಡಬಹುದು..
Phalagalu
ಮಾಘ
ಸ್ನಾನದ ಮಹತ್ವ
ಮಾಘ ಸ್ನಾನದಿಂದ ಆಧ್ಯಾತ್ಮಿಕ ಶಕ್ತಿ ಪ್ರಾಪ್ತಿಯಾಗುವುದರೊಂದಿಗೆ ಆರೋಗ್ಯವಂತ ಶರೀರವನ್ನು ಪಡೆಯಬಹುದು. ಭೌಗೋಳಿಕ ದೃಷ್ಟಿಯಿಂದ ಉತ್ತರ ಪ್ರದೇಶದ ಪ್ರಯಾಗವು ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿಯಾಗಿರುವ ಸರಸ್ವತಿ ನದಿಯ ಸಂಗಮ ಸ್ಥಾನವಾಗಿರುವುದರಿಂದ, ಮಹಾಭಾರತದ ಅನುಶಾಸನ ಪರ್ವದಲ್ಲಿ ಸೂಚಿಸಿರುವಂತೆ ಯಾರು ಪ್ರಯಾಗ ಸಂಗಮ, ಗೋದಾವರಿ ಹಾಗೂ ಕಾವೇರಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೋ ಅವರು ಪಾಪಗಳಿಂದ ಮುಕ್ತರಾಗುವರು.
Pic-1
ಮಾಘ ಮಾಸದಲ್ಲಿ ಮಾಡುವ ವ್ರತ, ದಾನ ಹಾಗೂ ತಪಸ್ಸಿಗಿಂತ ತೀರ್ಥಸ್ನಾನ ಮಾಡಿದರೆ ಭಗವಾನ್ ಮಹಾವಿಷ್ಣುವು ಪ್ರಸನ್ನನಾಗುತ್ತಾನೆ ಎಂದು ಪದ್ಮಪುರಾಣದಲ್ಲಿ ಹೇಳಲಾಗಿದೆ. ಯಾರು ಮಾಘ ಸ್ನಾನ ವ್ರತವನ್ನು ಮಾಡಿ ಶಂಖ, ಚಕ್ರದ ರಂಗೋಲಿ ಬಿಡಿಸಿ ವಿಷ್ಣುವಿಗೆ ಆರ್ಘ್ಯನೀಡಿದರೆ ಯಾವ ಜನ್ಮದಲ್ಲೂ ದಾರಿದ್ರ್ಯ ಬರುವುದಿಲ್ಲವೆಂದು ವಿಷ್ಣು ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ.
ವೈಜ್ಞಾನಿಕವಾಗಿ
ಮಾಘ ಮಾಸದ ಮುಂಚಿನ ತಿಂಗಳುಗಳಲ್ಲಿ
ಶೀತ ವಾತಾವರಣ ಹಾಗೂ ಮಂಜಿನ
ಕಾರಣದಿಂದಾಗಿ ಸಮರ್ಪಕವಾದ ಸೂರ್ಯನ
ಶಾಖ ಇರುವುದಿಲ್ಲ. ಇದರಿಂದ
ದೇಹವು ದುರ್ಬಲಗೊಳ್ಳುತ್ತದೆ.
ಮಾಘ ಮಾಸದಲ್ಲಿ
ಸೂರ್ಯನ ಕಿರಣಗಳು ಹೆಚ್ಚು ಶಾಖವನ್ನು
ನೀಡುವುದರೊಂದಿಗೆ ನೀರಿನೊಳಗಿರುವ
ಬ್ಯಾಕ್ಟೀರಿಯವನ್ನು ನಾಶ ಮಾಡುತ್ತದೆ.
ಸಾಮಾನ್ಯವಾಗಿ ಉಪ್ಪು ಕೂಡಾ ಪ್ರತಿಜೀವಕವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ನಮ್ಮ ದೇಹವನ್ನು, ಚರ್ಮವನ್ನು ಶುದ್ಧೀಕರಿಸುತ್ತದೆ. ಸುಮಾರು 48 ನಿಮಿಷಗಳ ಕಾಲ ಸಮುದ್ರ ಅಥವಾ ನದಿ ನೀರಿನಲ್ಲಿ ಸ್ನಾನ ಮಾಡುವುದರಿಂದ ನಮ್ಮ ಬಾಹ್ಯ ದೇಹವು ನಮ್ಮನ್ನು ಪುನಶ್ಚೇತನಗೊಳಿಸುವುದೆಂದು ಹೇಳಲಾಗುತ್ತದೆ.
Pic-2
ಮಾಘ ಸ್ನಾನದ ಫಲ:
ಮಾಘದಲ್ಲಿ ಮನೆಯಲ್ಲಿಯೇ ಬಿಸಿನೀರಿನ ಸ್ನಾನಮಾಡಿದರೆ 6 ವರ್ಷ ಸ್ನಾನಮಾಡಿದ ಫಲ ಮನೆಯಿoದ ಹೊರಗೆಹೋಗಿ ಭಾವಿಯಲ್ಲಿ ಸ್ನಾನಮಾಡಿದರೆ 12ವರ್ಷ ಸ್ನಾನಮಾಡಿದ ಫಲ ಪ್ರಾಪ್ತವಾಗುತ್ತದೆ. ಕೆರೆ ಮೊದಲಾದ ಮಾನವನಿರ್ಮಿತ ತಟಾಕಗಳಲ್ಲಿ ಸ್ನಾನಮಾಡಿದರೆ ಭಾವಿಯಲ್ಲಿ ಸ್ನಾನ ಮಾಡಿದರೆ ಬರುವ ಪುಣ್ಯಕ್ಕಿoತ ದುಪ್ಪಟ್ಟು ಫಲ (24ವರ್ಷ ಸ್ನಾನಫಲ) ಲಭಿಸುತ್ತದೆ. ನದಿಯಲ್ಲಿ ಸ್ನಾನ ಮಾಡಿದರೆ ನಾಲ್ಕು ಪಟ್ಟು(48 ವರ್ಷ ಸ್ನಾನ ಫಲ) ಪುಣ್ಯಫಲವು ಬರುವುದು ದೇವ ದೇವತೆಗಳು ಸನ್ನಿಹಿತರಾಗಿರುವ ಪುಷ್ಕರಿಣಿಗಳಲ್ಲಿ (ದೇವಖಾತ)ತಟಾಕ.
ಉದಾ: ಸ್ವಾಮಿ ಪುಷ್ಕರಣಿ (ಚಂದ್ರಪುಷ್ಕರಣಿ) ಸ್ನಾನವನ್ನುಮಾಡಿದರೇ ಹತ್ತು ಪಟ್ಟು (120 ವರ್ಷ ಸ್ನಾನಫಲ)ವು, ಗಂಗಾ, ಯಮುನ, ಸರಸ್ವತೀ ಮುoತಾದ ಸಮುದ್ರವನ್ನು ನೇರವಾಗಿ ಸೇರುವ ಮಹನದಿಗಳಲ್ಲಿ ಸ್ನಾನ ಮಾಡಿದರೆ 100ಪಟ್ಟು ಪುಣ್ಯಫಲ (1200 ವರ್ಷ ಸ್ನಾನಫಲ) ಮಹಾನದಿಗಳ ಸಂಗಮದಲ್ಲಿ (ಪ್ರಯಾಗದಿಗಳಲ್ಲಿ) ಸ್ನಾನ ಮಾಡಿದರೆ ನಾನೂರು ಪಟ್ಟು (4800ವರ್ಷ ಸ್ನಾನಫಲ) ಪುಣ್ಯವು ಲಭಿಸುವುದು ಇವೆಲ್ಲವೂ ನದ್ಯಾದಿಗಳಲ್ಲಿ ಸ್ನಾನ ಮಾಡಿದರೆ ಸಹಸ್ರ ಪಟ್ಟು ಪುಣ್ಯಫಲವು ಲಭಿಸುತ್ತದೆ ಎಂದು ಮಾಘಮಾಸ ಮಹಾತ್ಮೆಯಲ್ಲಿ ಹೇಳಿದೆ.
-------------------- Hari Om ------------------























