ಅಶ್ವಿನಿ ದೇವತೆಗಳು ------- Ashwini Gods
Ashwini God
ಅಸ್ತು ದೇವತೆ
ಸಂಚಾರ ಮಾಡುವ ಸಮಯದಲ್ಲಿ ಈ ಮಂತ್ರ
ಹೇಳಿದ್ರೆ ನಿಮ್ಮ ಎಲ್ಲ ಕೋರಿಕೆ
ಸಿದ್ದಿ
ನಮಸ್ಕಾರ
ಸ್ನೇಹಿತರೆ ಸಾಮಾನ್ಯವಾಗಿ ಅಶ್ವಿನಿ
ಕುಮಾರರ ಹೆಸರನ್ನು ಕೇಳಿರುತ್ತೀರಿ
ಇವರು ವೈದ್ಯ ದೇವತೆಗಳು ಋಗ್ವೇದದಲ್ಲಿ
ದೈವಿಕ ಅವಳಿ ಕುದುರೆ ಸವಾರರು,
ಮೋಡಗಳ ದೇವತೆಗಳು
ಇವರು ಸೂರ್ಯೋದಯ ಮತ್ತು ಸೂರ್ಯಾಸ್ತದ
ಹೊಳಪನ್ನು ಸಂಕೇತಿಸುತ್ತಾರೆ.
ಸೂರ್ಯೋದಯಕ್ಕೆ
ಮುಂಚೆ ಆಕಾಶದಲ್ಲಿ ಸುವರ್ಣ
ರಥದಲ್ಲಿ ಕಾಣಿಸಿಕೊಳ್ಳುತ್ತಾರೆ
ಮತ್ತು ಮನುಷ್ಯರಿಗೆ ಸಂಪತ್ತನ್ನು
ದಯಪಾಲಿಸುತ್ತಾರೆ ಮತ್ತು
ಅನಾರೋಗ್ಯವನ್ನು ದೂರ ಮಾಡುತ್ತಾರೆ,
ಇವರ
ಕೆಲಸವೇನೆಂದರೆ ಯಾವಾಗಲೂ ತಥಾಸ್ತು
ಅಸ್ತು ಎಂದು ಹೇಳುವುದು,
ಹೆಚ್ಚಾಗಿ
ಹೋಮ ಹವನಗಳು ನಡೆಯುವಂತಹ ಸ್ಥಳಗಳಲ್ಲಿ
ಇವರು ಇರುತ್ತಾರೆ ಅಶ್ವಿನಿ
ಕುಮಾರರು ಮುಸ್ಸಂಜೆ ವೇಳೆಯಲ್ಲಿ
ಭೂಲೋಕ ಸಂಚಾರವನ್ನು ಮಾಡುತ್ತಾರೆ.
ಅಶ್ವಿನಿ
ಕುಮಾರರು ಯಾರು ಮತ್ತು ಇವರು
ಸಂಚರಿಸುವ ಸಮಯದಲ್ಲಿ ಸಂಕಲ್ಪವನ್ನು
ಮಾಡಿಕೊಂಡು ಈ ಒಂದು ಮಂತ್ರವನ್ನು
ಜಪಿಸಿದರೆ ಅಶ್ವಿನಿ ದೇವತೆಗಳ
ಕೃಪೆ ಸಿಗುತ್ತದೆ,
ಅಂದರೆ
ನೀವು ಅಂದುಕೊಂಡ ಕೆಲಸಗಳು ಆಗುತ್ತದೆ.
ಅಶ್ವಿನಿ
ದೇವತೆಗಳು ಸೂರ್ಯ ಭಗವಾನ್ ಮತ್ತು
ಸಂಧ್ಯಾ ದೇವಿಗೆ ಜನಿಸಿದ ಅವಳಿ
ಮಕ್ಕಳೇ ಅಶ್ವಿನಿ ಕುಮಾರರು,
ಸಾಮಾನ್ಯ
ಮಾನವನ ಶರೀರ ಮತ್ತು ಕುದುರೆಯ
ಮುಖವನ್ನು ಹೊಂದಿರುವವರೇ ಅಶ್ವಿನಿ
ಕುಮಾರರು ಹಾಗಾದರೆ ಅಶ್ವಿನಿ
ಕುಮಾರರಿಗೆ ಕುದುರೆಮುಖ ಹೇಗೆ
ಬಂತು ಎಂಬುದನ್ನು ಮೊದಲು
ತಿಳಿದುಕೊಳ್ಳೋಣ.
Ashwini Kumaragalu
ಸೂರ್ಯ ದೇವನ
ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯ
ಭಗವಾನರ ತಾಪವನ್ನು ತಾಳಲಾರದೆ
ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ,
ಇನ್ನು ಸೂರ್ಯ
ಭಗವಂತನು ತನ್ನ ತಾಪವನ್ನು ಕಡಿಮೆ
ಮಾಡಿಕೊಳ್ಳಲು ಬಯಸಿದರೆ
ಜಗತ್ತಿನಲ್ಲಿರುವ ಎಲ್ಲ ಜೀವ
ರಾಶಿಗಳಿಗೆ ಅಪಾರ ಕಷ್ಟಗಳು
ಉಂಟಾಗುತ್ತವೆ ಎಂದು ಯೋಚಿಸಿದ
ಸಂಧ್ಯಾದೇವಿ ಯು ಹಿಮಾಲಯ ಪರ್ವತ
ದತ್ತ ಸ್ವಲ್ಪ ವಿಶ್ರಾಂತಿ
ವಿರಾಮಕ್ಕಾಗಿ ಹೋಗುತ್ತಾರೆ,
ಅಲ್ಲಿ
ಯಾರಿಗೂ ಗುರುತು ಸಿಗದ ಹಾಗೆ
ಕುದುರೆಯ ಅವತಾರವನ್ನು ತಾಳಿ
ಹಿಮಾಲಯದ ತಪ್ಪಲಿನಲ್ಲಿ
ವಿಹರಿಸುತ್ತಿರುವಾಗ ಸೂರ್ಯ
ದೇವನು ಕುದುರೆಯ ರೂಪದಲ್ಲಿ ಇರುವ
ಸಂಧ್ಯಾ ದೇವಿಯನ್ನು ಗುರುತಿಸಿ
ತಾವು ಸಹ ಕುದುರೆಯ ರೂಪವನ್ನು
ದರಿಸುತ್ತಾರೆ ಹಾಗೆಯೇ ಅಶ್ವಗಳ
ಅವತಾರದಲ್ಲಿ ಆದ ಅವರಿಬ್ಬರ ಮಿಲನದ
ಸಂಕೇತವಾಗಿ ಜನಿಸಿದವರೇ ಅಶ್ವಿನಿ
ಕುಮಾರರು.
ನೀವು
ಅಂದುಕೊಂಡ ಕೆಲಸಗಳು ಆಗಬೇಕು
ಮತ್ತು ಸಂಸಾರಿಕ ಜೀವನವು
ಚೆನ್ನಾಗಿರಬೇಕು ಎಂದರೆ ಪ್ರತಿಯೊಬ್ಬರು
ಕೂಡ ಈ ಒಂದು ಸಮಯದಲ್ಲಿ ಅಶ್ವಿನಿ
ದೇವತೆಗಳು ಸಂಚಾರ ಮಾಡುವ ಸಮಯದಲ್ಲಿ
ಈ ಒಂದು ಮಂತ್ರವನ್ನು ಹೇಳಿ
ಸಂಕಲ್ಪವನ್ನು ಮಾಡಿಕೊಂಡರೆ ಸಾಕು
ಅಶ್ವಿನಿ ದೇವತೆಗಳ ಅನುಗ್ರಹದಿಂದ
ಅಂದುಕೊಂಡ ಕೆಲಸಗಳು ನೆರವೇರುತ್ತದೆ.
another Picture of Ashwini Gods
ಇನ್ನು ಜೀವನದಲ್ಲಿ
ವಿಪರೀತ ಕಷ್ಟಗಳನ್ನು ಅನುಭವಿಸುತ್ತಿದ್ದರೆ
ತೊಂದರೆಗಳಿಂದ ಮುಕ್ತಿಯನ್ನು
ಹೊಂದಬೇಕು ಜೊತೆಗೆ ಆರೋಗ್ಯ
ವೃದ್ಧಿಯಾಗಬೇಕು ಎಲ್ಲಾ ಶುಭ
ಫಲಗಳು ಪ್ರಾಪ್ತಿಯಾಗಬೇಕು ಎಂದರೆ
ಮುಸ್ಸಂಜೆ ಅಂದರೆ ಸೂರ್ಯಮುಳುಗುವುದಗಿಂತ
ಮುಂಚಿತವಾದ 24 ನಿಮಿಷ
ಗಳನ್ನು ಬಂಗಾರದ ಸಮಯ ಎಂದು
ಹೇಳಲಾಗುತ್ತದೆ, ಈ
ಒಂದು ಸಮಯದಲ್ಲಿ ಅಶ್ವಿನಿ ದೇವತೆಗಳು
ಸಂಚಾರವನ್ನು ಮಾಡುತ್ತಿರುತ್ತಾರೆ,
ಈ
ಒಂದು ಸಮಯವನ್ನು ಪಂಚಾಂಗದಲ್ಲಿ
ನೋಡಿಕೊಳ್ಳಬೇಕು ಈ ಒಂದು ಸಮಯದಲ್ಲಿ
ದೇವರಿಗೆ ತುಪ್ಪದ ದೀಪವನ್ನು
ಹಚ್ಚಿ ಸಂಕಲ್ಪವನ್ನು ಮಾಡಿಕೊಂಡು
ಅಶ್ವಿನಿ ದೇವತೆಗಳಿಗೆ ಸಂಬಂಧಪಟ್ಟ
ಈ ಒಂದು ಮಂತ್ರವನ್ನು ಪಠಿಸಿದರೆ
ನಿಮಗೆ ಇರುವಂತಹ ಕಷ್ಟಗಳು
ದೂರವಾಗುತ್ತದೆ.
ಒಂದು ಶಕ್ತಿಶಾಲಿಯಾದ ಮಂತ್ರ ಹೀಗಿದೆ, "ಓಂ ಶ್ರೀ ಅಶ್ವಿನೈ ನಮಹ". ಅಶ್ವಿನಿ ದೇವತೆಗಳ ಈ ಒಂದು ಮಂತ್ರವನ್ನು ಪ್ರತಿದಿನ ಒಂದು ಬಾರಿ ಅಥವಾ ಮೂರು ಬಾರಿ ಅಥವಾ 21 ಬಾರಿ ಅಥವಾ 108 ಬಾರಿ ಪಠಿಸಿದರೆ ನಿಮಗೆ ಇರುವಂತಹ ಕಷ್ಟಗಳೆಲ್ಲ ದೂರವಾಗುತ್ತದೆ ಇನ್ನು ಉದ್ಯೋಗರಂಗದಲ್ಲಿ ಒಳ್ಳೆಯದಾಗಬೇಕು ಎಂದು ಸಂಕಲ್ಪವನ್ನು ಮಾಡಿಕೊಂಡಿದ್ದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.
Ashwini Gods - a Rare picture
ನೀವು ಅಂದುಕೊಂಡ ಅಂತಹ ಕೋರಿಕೆಗಳು ಈಡೇರಲಿ ಎಂದು ಈ ಒಂದು ಮಂತ್ರವನ್ನು ಪಠಿಸುತ್ತಾ ಅಶ್ವಿನಿ ದೇವರನ್ನು ನಮಸ್ಕರಿಸಿದರೆ ಅಶ್ವಿನಿ ದೇವತೆಗಳ ಅನುಗ್ರಹದಿಂದ ನಿಮ್ಮ ಕೋರಿಕೆಗಳು ಈಡೇರುತ್ತವೆ, ಅದ್ಭುತವಾದ ಫಲಗಳು ಪ್ರಾಪ್ತಿಯಾಗುತ್ತದೆ ಮತ್ತು ಜೀವನದಲ್ಲಿ ಏಳಿಗೆಯಾಗುತ್ತದೆ,
ಆದ್ದರಿಂದ
ಪ್ರತಿ ಮುಸ್ಸಂಜೆಯ ಸಮಯದಲ್ಲಿ
ಅಶ್ವಿನಿ ದೇವತೆಗಳು ಸಂಚರಿಸುತ್ತಿರುವಾಗ
ತಪ್ಪದೇ ನೀವು ಈ ಒಂದು ಕೆಲಸವನ್ನು
ಮಾಡಿ ಈ ಒಂದು ಮಂತ್ರವನ್ನು ಹೇಳಿದರೆ
ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಹ
ನೆರವೇರುತ್ತವೆ.
ತಥಾಸ್ತು ದೇವತೆಗಳು (ಅಶ್ವಿನಿ ದೇವತೆಗಳು) ಎಂದರೆ
ಯಾರು ??
ತಥಾಸ್ತು ದೇವತೆಗಳು ಎಂದರೆ
ವೇದಗಳಲ್ಲಿ ‘ಅನುಮತಿ’ ಎಂಬ ದೇವತೆ ಉಲ್ಲೇಖವಾಗಿದೆ. ಯಜ್ಞಯಾಗಾದಿ ಸತ್ಕರ್ಮಗಳನ್ನು ಆಚರಿಸುವಾಗ ಈ ದೇವತೆಯನ್ನು ಸ್ಮರಿಸಿದರೆ, ಅವರಿಗೆ ಕಾರ್ಯಸಿದ್ಧಿ ದೊರಕಲು ಸಹಕರಿಸುತ್ತಾಳೆ ಎಂದು ಯಜ್ಞ ಪ್ರಕ್ರಿಯೆಯಲ್ಲಿ ಹೇಳಲಾಗಿದೆ. ಇವತ್ತೆಆ ಅನುಮತಿ ದೇವತೆಯನ್ನೇ ಸಾಮಾನ್ಯ ಭಾಷೆಯಲ್ಲಿ ತಥಾಸ್ತು ದೇವತೆಗಳು ಎಂದು ಕರೆಯುತ್ತಾರೆ. ಸತ್ಕರ್ಮಗಳು ನಡೆಯುವ ಪವಿತ್ರ ಸ್ಥಳಗಳೇ ಇವರ ವಾಸಸ್ಥಾನ. ಅಶ್ವಿನೀ ದೇವತೆಗಳೇ ತಥಾಸ್ತು ದೇವತೆಗಳು ಎಂದು ಹೇಳಲಾಗುತ್ತದೆ. ಇವರು ವಿಶ್ವಕರ್ಮನ ಅಂಶವಾದ ಸೂರ್ಯನ ಪುತ್ರರು. ಅಶ್ವ ರೂಪದಲ್ಲಿ ಸೂರ್ಯ ಮತ್ತು ಸಂಧ್ಯಾ ದೇವಿಯ ಸಂಭೋಗದಿಂದ ಇವರು ಜನಿಸಿದರು.
ಮಹಾಭಾರತದಲ್ಲಿ
ಪಾಂಡು ರಾಜನ ಪತ್ನಿ ಮಾದ್ರಿಗೆ
ಮಂತ್ರಶಕ್ತಿಯಿಂದ ನಕುಲ ಮತ್ತು
ಸಹದೇವರಾಗಿ ಜನಿಸಿದರು.
ಅಲ್ಲದೇ
ಆಯುರ್ವೇದವನ್ನು ದಕ್ಷ ಪ್ರಜಾಪತಿಯಿಂದ
ಕಲಿತು ಇಂದ್ರನಿಗೆ ಬೋಧಿಸಿದರು.
ಇವರ ಸಹೋದರಿ
ಉಷಾ. ಆಕೆ
ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ
ಇವರನ್ನು ಎಬ್ಬಿಸುತ್ತಾಳೆ.
ನಂತರ ಅವರು ತಮ್ಮ
ಸಹೋದರಿ ಉಷಾಳನ್ನು ಮುಂದೆ
ಕೂರಿಸಿಕೊಂಡು ರಥಾರೂಢರಾಗಿ
ಪೂರ್ವದಿಂದ ಪಶ್ಚಿಮದ ಕಡೆಗೆ
ಸಂಚರಿಸುತ್ತಾರೆ ಎಂದು ಪುರಾಣಗಳಲ್ಲಿ
ವಿವರಿಸಲಾಗಿದೆ.
“ಏನು
ಮಾತನಾಡಿದರೂ ತಥಾಸ್ತು ದೇವತೆಗಳು
ಇರುತ್ತಾರೆ, ಜಾಗ್ರತೆ”
ಎಂದು ಹಿರಿಯರು ಎಚ್ಚರಿಸುತ್ತಾರೆ.
ವಿಶೇಷವಾಗಿ
ಸಂಧ್ಯಾ ಸಮಯದಲ್ಲಿ ಈ ದೇವತೆಗಳು
ಸಂಚರಿಸುತ್ತಾರೆ ಎಂದು ನಂಬಲಾಗಿದೆ.
ಪದೇ ಪದೇ ಕೆಟ್ಟ
ಮಾತುಗಳನ್ನು ಹೇಳಿದರೆ ಅದು
ನಿಜವಾಗುತ್ತದೆ ಎಂದು ಹೇಳುತ್ತಾರೆ.
‘ತಥಾಸ್ತು’
ಎಂಬುದು ನಮ್ಮ ಮಾತಿನ ಪ್ರಕಾರವೇ
ಫಲ ನೀಡುತ್ತದೆ. ಧರ್ಮಕ್ಕೆ
ವಿರುದ್ಧವಾದ ಮಾತುಗಳನ್ನು ಪದೇ
ಪದೇ ಹೇಳಿದರೆ ದೇವತೆಗಳು ತಕ್ಷಣ
“ತಥಾಸ್ತು” ಎಂದು ಅನುಗ್ರಹಿಸುತ್ತಾರೆ
ಎಂದು ನಂಬಿಕೆ. ಇವರನ್ನೇ
ತಥಾಸ್ತು ದೇವತೆಗಳು ಎಂದು
ಕರೆಯುತ್ತಾರೆ.
ಸಂಧ್ಯಾ
ಸಮಯದಲ್ಲಿ ಸ್ವವಿಷಯಗಳ ಬಗ್ಗೆ
ಪದೇ -ಪದೇ
ಹೇಳಿದರೆ, ಅದನ್ನು
ಕೇಳಿದ ದೇವತೆಗಳು “ತಥಾಸ್ತು”
ಎಂದು ಅನುಗ್ರಹಿಸುತ್ತಾರೆ.
ಎಷ್ಟೇ ಇದ್ದರೂ
“ಹಣ ಇಲ್ಲ, ಇಲ್ಲ”
ಎಂದು ಪದೇ ಪದೇ ಹೇಳಿದರೆ ನಿಜವಾಗಿಯೂ
ಕೊರತೆ ಉಂಟಾಗುತ್ತದೆ.
ಆರೋಗ್ಯವಾಗಿದ್ದರೂ
“ಅನಾರೋಗ್ಯ ಇದೆ” ಎಂದು ಹೇಳಿದರೆ
ನಿಜವಾಗಿಯೂ ಅನಾರೋಗ್ಯ ಉಂಟಾಗುತ್ತದೆ.
ಆದ್ದರಿಂದ
ಸ್ಥಿತಿಗತಿಗಳ ಬಗ್ಗೆ ಅಸತ್ಯ
ಮಾತುಗಳನ್ನು ಹೇಳುವುದು
ಒಳ್ಳೆಯದಲ್ಲ.
ಅನಾರೋಗ್ಯವಾಗಿದಾಗ
“ಅಮೂಕ ವೈದ್ಯರ ಕೈಚಳಿ (ಹಸ್ತವಾಸಿ)
ಚೆನ್ನಾಗಿದೆ”
ಎಂದು ಅವರ ಬಳಿ ಹೋಗಲು ಸಲಹೆ
ಕೊಡುತ್ತಾರೆ. ವಾಸ್ತವದಲ್ಲಿ
ಎಲ್ಲಾ ವೈದ್ಯರೂ ಒಂದೇ ಶಾಸ್ತ್ರವನ್ನು
ಅಭ್ಯಾಸ ಮಾಡುತ್ತಾರೆ. ಆದರೆ
ಒಬ್ಬ ವೈದ್ಯರು ತಮ್ಮ ಬಳಿ ಬರುವ
ರೋಗಿಗಳಿಗೆ ಆರೋಗ್ಯ ಸಿಗಲಿ ಎಂದು
ಪದೇ ಪದೇ ಹಾರೈಸಿದರೆ,
ತಥಾಸ್ತು ದೇವತೆಗಳು
ಅವರ ಆಶೆಯನ್ನು ಅನುಗ್ರಹಿಸುತ್ತಾರೆ.
ಅದರ ಫಲವಾಗಿ
ಅವರ ಬಳಿ ಬರುವ ರೋಗಿಗಳಿಗೆ ಆರೋಗ್ಯ
ಸುಧಾರಣೆ ಆಗುತ್ತದೆ ಮತ್ತು ಅವರಿಗೆ
ಒಳ್ಳೆಯ ಹೆಸರು ಬರುತ್ತದೆ.
ಕೆಟ್ಟ
ವಿಷಯದಲ್ಲೂ ಇದೇ ಅನ್ವಯಿಸುತ್ತದೆ.
ಯಾರಿಗಾದರೂ
ಕೆಡುಕು ಆಗಲಿ ಎಂದು ಆಶಿಸುವುದು
ಅಥವಾ ನಮಗೆ ಕೆಡುಕು ಆಗಬಹುದೆಂದು
ಭಯಪಡುವುದು—ಇವುಗಳೂ ತಥಾಸ್ತು
ದೇವತೆಗಳ ಪರಿಣಾಮದಿಂದ ನಿಜವಾಗಬಹುದು.
ಇದರಿಂದ ಹಲವು
ಕಷ್ಟಗಳು ಎದುರಾಗಬಹುದು.
ಆದ್ದರಿಂದ
ಒಳ್ಳೆಯದನ್ನು ಆಶಿಸಿದರೆ ಎಲ್ಲರಿಗೂ
ಒಳ್ಳೆಯದೇ ಸಂಭವಿಸುತ್ತದೆ.
ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ
ಧರ್ಮೋ
ರಕ್ಷತಿ ರಕ್ಷಿತಃ
ಹರಿ
ಸರ್ವೋತ್ತಮ ವಾಯು ಜೀವೋತ್ತಮ
ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು.
----------------- Hari Om ----------------




No comments:
Post a Comment