Monday, October 20, 2025

Deepavali - Laxmi Pooje

 

ದೀಪಾವಳಿಗೆ ಲಕ್ಷ್ಮೀ ಪೂಜೆ ಮಾಡುವ ವಿಧಾನ


Steps to Worship Lakshmi for Deepavali

 

                                 

                                         Laxmi Devi Pooje

 

ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು:

ರಂಗೋಲಿ , ಮಣೆ / ಮಂಟಪ
ಲಕ್ಷ್ಮೀ ವಿಗ್ರಹ ಅಥವಾ ಕಲಶ (ದೇವರ ಭಾವಚಿತ್ರ)
ದೀಪ, , ತುಪ್ಪ, ಎಣ್ಣೆ,
ದೀಪಕ್ಕೆ ಹಾಕುವ ಬತ್ತಿ
ಘಂಟೆ, ಪಂಚಪಾತ್ರೆ,
ಉದ್ದರಣೆ, ಅರ್ಘ್ಯ ಪಾತ್ರೆ, ನೀರು
ಅರಿಶಿನ, ಕುಂಕುಮ,
ಮಂತ್ರಾಕ್ಷತೆ,ಮಾವಿನ ಎಲೆ
ಶ್ರೀಗಂಧ, ಊದಿನ ಕಡ್ಡಿ
ರವಿಕೆ ಬಟ್ಟೆ,
ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ -
ವೀಳ್ಯದ ಎಲೆ, ಅಡಿಕೆ,
ಹಣ್ಣು , ತೆಂಗಿನಕಾಯಿ
ನೈವೇದ್ಯ - ಹಣ್ಣು ಕಾಯಿ ಫಲವಸ್ತು
(ಪಾಯಸ,ಹುಗ್ಗಿ, ಅನ್ನ, ಕೋಸಂಬರಿ, ನೀರಲ್ಲಿ ನೆನೆ ಹಾಕಿದ ಕಡಲೆ ), ಇತ್ಯಾದಿ
ಯೋಗ್ಯತಾನುಸಾರ
ಕರ್ಪೂರ, ಮಂಗಳಾರತಿ ಬತ್ತಿ ಆರತಿ ತಟ್ಟೆ, ಹೂಬತ್ತಿ, ಇತ್ಯಾದಿ ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು (ಮುಖ್ಯವಾಗಿ ಅಲಂಕಾರ
ಮಾಡುವುದಕ್ಕೆ ಮನೆಯಲ್ಲಿನ ಹೂ ಮತ್ತು ಪತ್ರೆ ಅತ್ಯಂತ ಶ್ರೇಷ್ಟ.


ಅವರವರ ಯೋಗ್ಯತೆ ಗೆ ಅನುಸಾರ ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ.

 

                                                                    another Picture

 

ಬೆಳಿಗ್ಗೆ ಎದ್ದು ಮಂಗಳ (ತಲೆ) ಸ್ನಾನ ಮಾಡಬೇಕು.

ವ್ರತ ಮಾಡುವವರು ಪೂಜೆ
ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ
ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ
ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ
ಸ್ಥಾಪಿಸಬೇಕು.

ಒಂದು ಕಲಶದಲ್ಲಿ ನೀರು ಹಾಕಿ, ಜೊತೆಗೆ ಅರಿಶಿನ ಕುಂಕುಮ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ, ಹೂ ಹಾಕಿ,ಕಳಶದ ಬಾಯಿಗೆ ಮಾವಿನ ಎಲೆಗಳನ್ನು ಇಡಬೇಕು. .ಅದರ ಮೇಲೆ ಅರಿಶಿನ ಕುಂಕುಮ ಸವರಿದ
ತೆಂಗಿನಕಾಯಿ ಇಟ್ಟು, (ಇದರ ಮೇಲೆ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನುಈ ತೆಂಗಿನಕಾಯಿಗೆ ಜೋಡಿಸಬಹುದು.

 

ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ
ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ಒಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ,
ಕಲಶವನ್ನು ಪೂಜೆ ಮಾಡಬೇಕು. ಕಲಶದ ಎದುರಿನಲ್ಲಿ ನಾಣ್ಯ ಮತ್ತು ಹಣವನ್ನು ಚಿನ್ನ ಬೆಳ್ಳಿ ಇತ್ಯಾದಿ ಇಟ್ಟು ಪೂಜೆ ಮಾಡಬಹುದು.

 

                                                Deepavali Pooje

 

ಪೂಜಾ ವಿಧಾನ

ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು.


ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ .

ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ.

ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ ,
ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ
ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ
ದೇವರನ್ನು ಆಹ್ವಾನ ಮಾಡುವುದು.


ಸಂಕಲ್ಪ

ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ
ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ
ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ
ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ,
ನಕ್ಷತ್ರವನ್ನು ಹೆಸರಿಸಬಹುದು
ವರ್ತಮಾನೇ ವ್ಯಾವಹಾರಿಕೇ ಶುಭ ಕೃತ್ ನಾಮ
ಸಂವತ್ಸರೇ, ದಕ್ಷಿಣಾಯನೇ ,.
ಶರತ್ ಋತು ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ,


ಅಮಾವಾಸ್ಯೆಯಾಂ ತಿಥಿ ಇಂದೂ ವಾಸರ
ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ
ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ,
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಧನ ಧನ್ಯ ಸಂಪದಾದಿ ಅಭಿವೃದ್ಧ್ಯಾರ್ಥಂ
ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಯಾವತ್ ಜೀವನ ಸೌಮಾಂಗಲ್ಯ ಪ್ರಾಪ್ಯರ್ಥಂ


ಶ್ರೀ ....ಧನ ಧಾನ್ಯ ಲಕ್ಷ್ಮೀ ಪ್ರೀತ್ಯರ್ಥಂ ಯಾಥಾ ಶಕ್ತ್ಯಾ ಧ್ಯಾನಾವಾಹನಾದಿ

ಷೋಡಶೋಪಚಾರ ಪೂಜಾಂ ಅಹಂ ಕರಿಷ್ಯೇ.

 

ಧ್ಯಾನ


||ಪದ್ಮಾಸನೆ ಪದ್ಮಕರೇ ಸರ್ವ ಲೋಕೈಕಪೂಜಿತೆ |
ನಾರಾಯಣ ಪ್ರಿಯೇದೇವಿ ಸುಪ್ರೀತಾ ಭವ
ಸರ್ವದಾ"...||

(ನೀವು ಪೂಜೆ ಮಾಡುತ್ತಿರುವ
ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ
ಮಾಡುವುದು. ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ
ಅಂತ ನೀವು ಕೇಳಿರಬಹುದು. ಷೋಡಶ
ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ
ಎಂದರ್ಥ. ಇವುಗಳ ವಿವರ ಕೆಳಗಿದೆ:


ಇಲ್ಲಿ ಅಕ್ಷತೆ ಹಾಕಬೇಕು (ಸ್ತ್ರೀ ಸೂಕ್ತ ತಿಳಿದವರು ಹೇಳಬಹುದು)



                                                           Deepavali -- Festival of Lights

 

ಆವಾಹನೆ

(ಅಂದರೆ ಆಹ್ವಾನ. ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ
ಆಹ್ವಾನ ಮಾಡುವುದು.) ಮಹಾಲಕ್ಷ್ಮೀಯೇ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ

ಆಸನ

ಅಂದರೆ ಕುಳಿತುಕೊಳ್ಳುವ ಜಾಗ . ದೇವರ
ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಅಕ್ಷತೆ
ಹಾಕುವುದು.ಮಹಾಲಕ್ಷ್ಮೀಯೇ ನಮಃ ಆಸನಂ ಸಮರ್ಪಯಾಮಿ

ಪಾದ್ಯ

ಕಾಲು ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.ಮಹಾಲಕ್ಷ್ಮೀಯೇ ನಮಃ ಪಾದ್ಯಂ ಸಮರ್ಪಯಾಮಿ (ಹರಿವಾಣದಲ್ಲಿ ನೀರು ಬಿಡುವುದು)

ಅರ್ಘ್ಯ

ಕೈ ತೊಳೆದುಕೊಳ್ಳುವುದಕ್ಕೆ ನೀರುಕೊಡುವುದು.ವರಮಹಾಲಕ್ಷ್ಮೀಯೇ ನಮಃ ಅರ್ಘ್ಯಂ ಸಮರ್ಪಯಾಮಿ
(ಹರಿವಾಣದಲ್ಲಿ ನೀರು ಬಿಡುವುದು)

ಆಚಮನ

ಮಹಾಲಕ್ಷ್ಮೀಯೇ ನಮಃ ಆಚಮನಂ ಸಮರ್ಪಯಾಮಿ

ಸ್ನಾನ

(ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಹಾಲಕ್ಷ್ಮೀಯೇ ನಮಃ ಸ್ನಾನಂ ಸಮರ್ಪಯಾಮಿ

ಗೆಜ್ಜೆವಸ್ತ್ರ

ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಸಮರ್ಪಿಸುವುದು . ಜೊತೆಗೆ ( ಜನಿವಾರ), ಆಭರಣವನ್ನು (ಬಳೆ- ಬಿಚ್ಚೋಲೆ )ಸಮರ್ಪಿಸುವುದು. ಹಾಲಕ್ಷ್ಮೀಯೇ ನಮಃ ವಸ್ತ್ರಂ ಸಮರ್ಪಯಾಮಿ.

 


                                                       Pic - 1

 

 ಹರಿದ್ರ, ಕುಂಕುಮ

ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ.ಹರಿದ್ರ, ಕುಂಕುಮ, ಗಂಧ, ಅಕ್ಷತಾಂ - ಸಮರ್ಪಯಾಮಿ

ಪುಷ್ಪ ಮಾಲ

ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.ಮಹಾಲಕ್ಷ್ಮೀಯೇ ನಮಃ ಪುಷ್ಪಂ ಸಮರ್ಪಯಾಮಿ

ಅರ್ಚನೆ/ಅಷ್ಟೋತ್ತರ

ನೂರೆಂಟು ನಾಮಗಳಿಂದ
ದೇವರನ್ನು ಸ್ಮರಣೆ ಮಾಡುವುದು. ನಮಃ ಅಷ್ಟೋತ್ತರ ಶತ ನಾಮ ಪೂಜಾಂ ಸಮರ್ಪಯಾಮಿ

ಧೂಪ


ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ ಧೂಪಂ ಸಮರ್ಪಯಾಮಿ

 

                                                         Pic - 2

 

ದೀಪ ಬೆಳಗುವುದು

ದೀಪ ಸಮರ್ಪಣೆ ಮಾಡುವುದು ಮಹಾಲಕ್ಷ್ಮೀಯೇ ನಮಃ ದೀಪಂ ಸಮರ್ಪಯಾಮಿ

ನೈವೇದ್ಯ, ತಾಂಬೂಲ
ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ
ಅರ್ಪಿಸುವುದು .ವೀಳೆಯ, ಅಡಿಕೆ,
ತೆಂಗಿನಕಾಯಿ ತಾಂಬೂಲ ಕೊಡುವುದು.ಮಹಾಲಕ್ಷ್ಮೀಯೇ ನಮಃ ನೈವೇದ್ಯಂ ಸಮರ್ಪಯಾಮಿ

ನೀರಾಜನ ಮಂಗಳಾರತಿ

ಕರ್ಪುರದಿಂದ ಮಂಗಳಾರತಿ ಮಾಡುವುದು.ಮಹಾಲಕ್ಷ್ಮೀಯೇ ನಮಃ ನೀರಾಜನಂ ಸಮರ್ಪಯಾಮಿ

ನಮಸ್ಕಾರ

ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು. ಮಹಾಲಕ್ಷ್ಮೀಯೇ ನಮಃ ನಮಸ್ಕಾರಂ ಸಮರ್ಪಯಾಮಿ.

 

                                                            Pic - 3
                                

ಪ್ರಾರ್ಥನೆ

ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ಮನಸ್ಸಿನಲ್ಲಿ ಪ್ರಾರ್ಥನೆ ಮಾಡುವುದು.

||ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾಧಿಕೆ |
ಶರಣ್ಯೇ ತ್ರಯಂಬಕೆ ಗೌರಿ ನಾರಾಯಣೀ ನಮೋಸ್ತುತೆ||

ಮಹಾಲಕ್ಷ್ಮೀಯೇ ನಮಃ ಪ್ರಾರ್ಥನಾಂ ಸಮರ್ಪಯಾಮಿ

ಪೂಜೆಯ ನಂತರ ದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.


----------------- Hari Om -----------------

 

 

 


 

 

 
 


 



Saturday, October 18, 2025

Jala Poorana Trayodasi-Neeru Tumbhuva Habba-Deepavali

 

ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು


Jala Poorana Trayodasi -- Deepavali Festival

 

                                     Neeru Tumbhuva Habba
 

 

1) ಹಂಡೆತುಂಬಿ ಕಾಯಿಸಿ ಸ್ನಾನ ಮಾಡುವ ಅನುಕೂಲ ಇದ್ದವರು ಅದನ್ನು ತಿಕ್ಕಿ ತೊಳೆದು ಅಲಂಕರಿಸಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗ ತುಂಬಿ ಇಡಿ.

2) ಅನಂತರ ಬಾವಿ ಇದ್ದವರು ತಮ್ಮ ಮನೆಯ ಸಂಪ್ರದಾಯದಂತೆ ನೀರು ಸೇದಿ ತಂದು ಒಂದು ಕಲಶದಲ್ಲಿ ದೇವರ ಕೊಣೆಯೊಳಗೋ ಹೊರಗೋ ಶುದ್ಧವಾದ ಜಾಗದಲ್ಲೋ ಇಡಿ

3) ತಂಡುಲಾಕ್ಷತೆ, ಹೂವು, ಹಣ್ಣು , ಗಂಧ, ಅರಸಿಣ ಪುಡಿ, ಕುಂಕುಮ ಇತ್ಯಾದಿ ಸಿದ್ಧಪಡಿಸಿ.

4) ಮಂತ್ರಾಕ್ಷತೆ , ಹೂವು ಕೈಯಲ್ಲಿ ಹಿಡಿದು ನೀರು ತುಂಬಿದ ಕಲಶದಲ್ಲಿ ತನ್ನ ಅಂಗುಷ್ಟದಿಂದ ಗಂಗೆಗೆ ಜನ್ಮವಿತ್ತ ರಮಾಪತಿ ತ್ರಿವಿಕ್ರಮನನ್ನು ಅವಾಹಿಸಿ.


ಮಮ ಗುರ್ವಂತರ್ಗತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಗಂಗಾಜನಕಂ ರಮಾಸಹಿತ ತ್ರಿವಿಕ್ರಮಂ ಆವಾಹಯಾಮಿ. ಪ್ರಸೀದ ಪ್ರಸೀದ ಭಗವನ್ ಆಗಚ್ಛ ಆಗಚ್ಛ ಎಂದು ಕಲಶದಲ್ಲಿ ಹೂವು ಅಕ್ಷತೆ ಹಾಕಿ.


ನಂತರ ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಸ್ನಾನ, ವಸ್ತ್ರ, ಯಜ್ನೋಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ, ಮಂಗಲಾರತಿ, ಮಂತ್ರಪುಷ್ಪ, ನಮಸ್ಕಾರ ಅರ್ಪಿಸಿ.

5) ನಂತರ ಅಕ್ಷತೆ ಹೂವು ಕೈಯಲ್ಲಿ ಹಿಡಿದುಕೊಂಡು ಕಲಶದಲ್ಲಿ ಗಂಗಾದೇವಿಯನ್ನು ಅವಾಹಿಸಿ. .


ಗಂಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತೀ|
ನರ್ಮದೇ ಸಿಂಧು ಕಾವೇರೀ ಜಲೇ$ಸ್ಮಿನ್ ಸನ್ನಿಧಿಮ್ ಕುರು||


ಕಲಶಮಧ್ಯೆ ತ್ರಿವಿಕ್ರಮ ರೂಪಿಣಃ ಪುತ್ರಿಮ್ ಗಂಗಾಂ ಆವಾಹಯಾಮಿ
ಎಂದು ಅಕ್ಷತೆ ಹೂವು ಹಾಕಿ ಮುಂದಿನ ಮಂತ್ರಗಳಿಂದಲೂ ಕಲಶದಲ್ಲಿ ಅಕ್ಷತೆ ಹಾಕಿ


ಭೂ: ಗಂಗಾಂ ಆವಾಹಯಾಮಿ, ಭುವಃ ಗಂಗಾಂ ಆವಾಹಯಾಮಿ, ಸ್ವ: ಗಂಗಾಂ ಆವಾಹಯಾಮಿ, ಭೂರ್ಭುವಸ್ವ: ಗಂಗಾಂ ಆವಾಹಯಾಮಿ.

ಆ ನಂತರ ಮೇಲೆ ಹೇಳಿದಂತೆ ಅಸನದಿಂದ ವಸ್ತ್ರವನ್ನು ಅರ್ಪಿಸಿ ಹರಿದ್ರಾ, ಕುಂಕುಮ, ಗಂಧ , ಪುಷ್ಪ ಅರ್ಪಿಸಿ.

 

                                                          Ganga Pooje 

 
 

6) ಈ ಕೆಳಗಿನ ನಾಮಗಳಿಂದ ಅಕ್ಷತೆ ಹಾಕಿ


ನಂದಿನ್ಯೈ ನಮಃ, ನಲಿನ್ಯೆ ನಮಃ, ಸೀತಾಯೈ ನಮಃ , ಮಾಲತ್ಯೈ ನಮಃ , ಮಲಾಪಹಾಯೈ ನಮಃ, ವಿಷ್ಣುಪಾದಾಬ್ಜ ಸಂಭೂತಾಯೈ ನಮಃ, ಗಂಗಾಯೈ ನಮಃ, ತ್ರಿಪಥಗಾಮಿನ್ಯೈ ನಮಃ , ಭಾಗೀರಥ್ಯೈ ನಮಃ, ಭೋಗವತ್ಯೈ ನಮಃ, ಜಾಹ್ನವ್ಯೈ ನಮಃ, ತ್ರಿದಶೇಶ್ವರ್ಯೈ ನಮಃ, ಗಂಗಾಭಾಗೀರಥ್ಯೆ ನಮಃ

7) ಧೂಪವನ್ನು ತೋರಿಸಿ


ವನಸ್ಪತ್ಯುದ್ಭವೋ ದಿವ್ಯೋ ಗಂಧಾಢ್ಯೋ ಗಂಧ ಉತ್ತಮಃ |
ಆಘ್ರೇಯಃ ಸರ್ವದೇವಾನಾ೦ ಧೂಪೋ$ಯಂ ಪ್ರತಿಗೃಹ್ಯತಾಮ್ ||

8) ಸಾಜ್ಯ೦ ತ್ರಿವರ್ತಿಸಂಯುಕ್ತ೦ ವಹ್ನಿನಾ ದ್ಯೋತಿತಂ ಮಯಾ|
ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ||
ಎನ್ನುತ್ತಾ ಮೂರು ಬತ್ತಿಯ ಆರತಿ ತೋರಿಸಿ ನಂದಿಸಿ

9) ಹಣ್ಣು ಕಾಯಿ ಮತ್ತು ಅನುಕೂಲ ಇದ್ದಲ್ಲಿ ಇತರ ನೈವೇದ್ಯಗಳನ್ನು ಮೊದಲು ತ್ರಿವಿಕ್ರಮ ದೇವರಿಗೆ ಅರ್ಪಿಸಿ ಅನಂತರ ರಮಾದೇವಿ , ಮುಖ್ಯಪ್ರಾಣ ದೇವರಿಗೆ ಅರ್ಪಿಸಿ. ಇದರೊಳಗಿಂದ ಸ್ವಲ್ಪ ಬೇರೊಂದು ತಟ್ಟೆಯಲ್ಲಿ ಬಡಿಸಿ ಭಾಗೀರಥಿ ದೇವಿಗೆ ಅದನ್ನು ನಿವೇದಿಸಿ.

10) ತದನಂತರ ಕರ್ಪೂರ ಹಾಕಿ ಮಹಾಮಂಗಳಾರತಿ ಮೊದಲು ತ್ರಿವಿಕ್ರಮ ದೇವರು ನಂತರ ರಮಾದೇವಿ ಪ್ರಾಣದೇವರಿಗೆ ತೋರಿಸಿ ಭಾಗೀರಥಿಗೆ ತೋರಿಸಿ

 

                                                          Deepavali - Festival of Lights

 

11) ನಾರಾಯಣಾಯ ವಿದ್ಮಹೇ ವಾಸುದೇವಾಯ ದೀಮಹಿ ತನ್ನೋ ವಿಷ್ಣು: ಪ್ರಚೋದಯಾತ್ 

 
ಎನ್ನುತ್ತಾ ತ್ರಿವಿಕ್ರಮ ದೇವರಿಗೆ ಮಂತ್ರಪುಷ್ಪಾ೦ಜಲಿ ಅರ್ಪಿಸಿ.

12) ಭಾಗೀರಥೀ ದೇವಿಯನ್ನು ಪ್ರಾರ್ಥಿಸಿ.


ಹೇ ಗಂಗೇ! ತವ ಕೋಮಲಾಂಘ್ರಿ ನಲಿನಂ ರಂಭೋರು ನೀವಿಲಸತ್
ಕಾಂಚೀದಾಮ ತನೂದರಂ ಘನಕುಚ ವ್ಯಾಕೀರ್ಣಹಾರಂ ವಪು: |
ಸನ್ಮುದ್ರಾ೦ಗದ ಕಂಕಣಾವೃತಕರ೦ ಸ್ಮೇರಂ ಸ್ಫುರತ್ಕುಂಡಲಂ
ಸಾರಂಗಾಕ್ಷಿ ಜಲಾನ್ಯದಿಂದುರುಚಯೇ ಜಾನಂತಿ ತೇ$ನ್ಯೇ ಜಲಾತ್ |


ಪ್ರಾರ್ಥನಾಂ ಸಮರ್ಪಯಾಮಿ ಎನ್ನುತ್ತ ಅಕ್ಷತೆ ಹಾಕಿ ನಮಸ್ಕರಿಸಿ.


                                              Neeru Tumbuva Habba at Udupi Krishna Mutt

13) ತದನಂತರ


ಯಸ್ಯ ಸ್ಮೃತ್ಯಾ ಶ್ಲೋಕ ಹೇಳಿ


ಅನೇನ ಅಸ್ಮದ್ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಗಂಗಾಜನಕ ಶ್ರೀರಮಾತ್ರಿವಿಕ್ರಮ ರೂಪಿ ಶ್ರೀಲಕ್ಷ್ಮೀನಾರಾಯಣ: ಪ್ರೀಯತಾಂ ಪ್ರೀತೋ ಭಾವತು ತತ್ ಸರ್ವಂ ಶ್ರೀಕೃಷ್ಣಾರ್ಪಣಾಮಸ್ತು ಎಂದು ಅರ್ಪಿಸಿ.


14) ಈಗ ಆ ಕಲಶದ ನೀರನ್ನು ಗಂಟೆ, ಜಾಗಟೆ, ಶಂಖಾದಿ ವಾದ್ಯ ಪುರಸ್ಸರ ತುಂಬಿಟ್ಟ ಹಂಡೆಯಲ್ಲಿ ಹಾಕಿ.

15) ಸೂರ್ಯಾಸ್ತದ ನಂತರ ಇಂದಿನಿಂದ ಆಕಾಶದೀಪವನ್ನು ಹಚ್ಚಬೇಕು.
ಒಬ್ಬ ಮನುಷ್ಯನ ಎತ್ತರದಷ್ಟು ಒಂದು ಕೋಲನ್ನು ಅಂಗಳದಲ್ಲಿ ನೆಟ್ಟು (ಬಿದಿರಿನ ಕೋಲು ಉಪಯೋಗಿಸಬಾರದು) ಆ ಕೋಲಿನ ತುದಿಯಲ್ಲಿ ಅಷ್ಟದಲ ಕಮಲಾಕಾರದಲ್ಲಿ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನೂ ಮಧ್ಯೆ ಒಂದು ದೊಡ್ಡ ದೀಪವನ್ನೂ ಹಚ್ಚಬೇಕು. ಎಳ್ಳೆಣ್ಣೆ ಬಿಟ್ಟು ಬೇರೆ ಎಣ್ಣೆ ಉಪಯೋಗಿಸಬಾರದು. ಇದನ್ನು ಒಂದು ತಿಂಗಳು ಹಚ್ಚಬೇಕು.


16) ಹಾಗೆಯೇ ಮನೆಯ ಹೊರಗೆ ಎತ್ತರದಲ್ಲಿ ಯಮದೇವರಿಗೆ ಕೂಡಾ ಇಂದು ಒಂದು ದೀಪ ಹಚ್ಚಬೇಕು.


-------------------- Hari Om ---------------





 

 

 

Thursday, October 16, 2025

Pranayama - Breathing Technique

 

ಪ್ರಾಣಾಯಾಮ ---- ಉಸಿರಾಟದ ನಿಯಂತ್ರಣ

Pranayama -- Breathing Technique according to Ayurveda - it is 

the bridge between Mind , Energy and Metabolism.

 

                                        

                                               Pranayama

 

ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಹೇಳುವಂತೆ ನಮ್ಮ ದೇಹದ ಆರೋಗ್ಯ ಸ್ಥಿರವಾಗಿ ಇರಬೇಕಾದರೆ ಮೊದಲು ನಮ್ಮ ಉಸಿರಾಟ ಸ್ಥಿರವಾಗಬೇಕು...‌ ಏಳನೇ ವಯಸ್ಸಿಗೆ ಉಪನಯನವಾದ ವಟುವಿಗೆ ಮೊದಲು ಕೊಡುವ ಟ್ರೈನಿಂಗ್ ಪ್ರಾಣಾಯಾಮ.

ಸಂಧ್ಯಾವಂದನೆ ಅಥವಾ ಯಾವುದೇ ಧಾರ್ಮಿಕ ಕ್ರಿಯೆಯಲ್ಲದಾರೂ ಕೂಡ ಮೊದಲು ಆಚಮನ, ಪ್ರಾಣಾಯಾಮ ಆಮೇಲೆ ತಾನು ಏನು ಕರ್ಮ ಮಾಡ್ತೇನ ಅನ್ನುವ ಸಂಕಲ್ಪ.

ನಮ್ಮ ಶಾಸ್ತ್ರ ಹೇಳುತ್ತೆ, ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಾಂಗದ ಕ್ರಿಯೆ ನಡೆಯುವುದು ಆಯಾ ದೇವತಾ ಶಕ್ತಿ ಆಯಾ ದೇಹದ ಭಾಗದಲ್ಲಿ ಕೂತು ಮಾಡುವ ಕ್ರಿಯೆ ಅದು ಅಂತ.


ಉದಾಹರಣೆಗೆ, ನಮ್ಮ ಕಣ್ಣು ಸುಂದರ ಜಗತ್ತಿನ ಅನುಭವವನ್ನು ಕಾಣ್ಕೆಯ ಮೂಲಕ ನಮಗೆ ಕೊಡುತ್ತೆ. ಕಣ್ಣು ಅಥವಾ ಯಾವುದೇ ಇಂದ್ರಿಯ ಗಳಾಗಲಿ ಅದು ಜಡ ವಸ್ತು... ‌ಕಣ್ಣಿನ ಅಭಿಮಾನಿದೇವತೆಯಾಗಿ "ಸೂರ್ಯ" ಕಣ್ಣಿನಲ್ಲಿ ಕೂತದ್ದರಿಂದ ನಮಗೆ ಕಣ್ಣು ಕಾಣೋದು.

ಹೊರಗೆ ಆಕಾಶದಲ್ಲಿ ಜಗಮಗಿಸುವ ಸೂರ್ಯಮಂಡಲ ಉಂಟಲ್ಲ ಅದು ಜಡ ಅದು ನಮ್ಮ ಕಣ್ಣಿಗೂ ಕಾಣುತ್ತೆ, ಅದರ ಅಭಿಮಾನಿದೇವತೆ ಸೂರ್ಯ... ಆ ದೇವತೆ ನಮ್ಮ ಕಣ್ಣಿಗೆ ಕಾಣಿಸೋಲ್ಲ... ಯಾವ ಸೂರ್ಯ ಸೂರ್ಯಂಡಲದ ಅಭಿಮಾನಿ ದೇವತೆಯೋ (ಅದರಿಂದಲೇ ಆಕಾಶದ ಸೂರ್ಯನನ್ನು ಮುಗಿಲಕಣ್ಣು ಅಂತಾರೆ) ಅದೇ ಸೂರ್ಯ ನಮ್ಮ ಕಣ್ಣಿನ ದೇವತೆ ಕೂಡ... ಅದರಿಂದಲೇ, ಸೂರ್ಯ ಆಗಸದಲ್ಲಿ ಉದಯಿಸಿದಾಗ ನಮ್ಮ ಕಣ್ಣು ತೆರೆಯುತ್ತೆ... ಸೂರ್ಯ ಕಂದಿದಾಗ ನಮ್ಮ ಕಣ್ಣೂ ಮುಚ್ಚುತ್ತೆ.

 

                                                                     another Picture
 

ಹಾಗೆ ನಮ್ಮ ಪ್ರತಿಯೊಂದು ಇಂದ್ರಿಯಗಳಿಗೂ ಒಬೊಬ್ಬ ಅಭಿಮಾನಿದೇವತೆ ಇದ್ದಾನೆ... ಕಿವಿಗೆ ಚಂದ್ರ, ಅವನು ರಾತ್ರಿಯಲ್ಲಿ ಪ್ರಕಾಶ ಹರಿಸುವವನು... ಅದರಿಂದಲೇ ರಾತ್ರಿಯಲ್ಲಿ ನಮ್ಮ ಕಿವಿ ತುಂಬಾ ಚುರುಕು ಒಂದು ಸಣ್ಣ ಶಬ್ದ ಕೂಡ (Pin Drop) ಕಿವಿಗೆ ಬಂದು ಬಡಿಯುತ್ತೆ...

ನಮಗಮ ಮೂಗಿಗೆ ಅಶ್ವಿದೇವತೆಗಳು ಅಭಿಮಾನಿ ದೇವತೆಗಳು ... ಅಶ್ವಿಗಳು Twins ನಮ್ಮ ಮೂಗು ಒಂದೇ ಆದರೂ ಎರಡು ಹೊರಳೆಗಳು.


ಹೀಗೆ ಪ್ರತಿಯೊಂದು ಇಂದ್ರಿಗಳಿಗೂ ಒಬ್ಬೊಬ್ಬ ಅಭಿಮಾನಿ ದೇವತೆ.. ನಮ್ಮ ಕೈಗೆ ಇಂದ್ರ, ಬಾಯಿಗೆ ವರುಣ, ಮಾತಿಗೆ ಪಾರ್ವತಿ, ಚರ್ಮಕ್ಕೆ (ಸ್ಪರ್ಶದ ಸುಖ ಕೊಡುವ) ಕುಬೇರ, ಕಾಲುಗಳಿಗೆ ಜಯಂತ, ನಮ್ಮ ಒಳಗಿನ ಇಂದ್ರಿಯಗಳಾದ ಮನಸ್ಸು-ಬುದ್ಧಿ-ಅಹಂಕಾರಕ್ಕೆ ಶಿವ, ನಮ್ಮ ಉಸಿರಾಟಕ್ಕೆ ಮುಖ್ಯಪ್ರಾಣನೆನಿಸಿದ ವಾಯು... ಈ ದೇಹದಲ್ಲಿ ನಿರಂತರ ಕ್ರಿಯೆ ನಡೆಯುತ್ತಿದೆ.

It is not merely biological Chemical Reaction.

ದೇಹ ಜಡವಾದರೂ ಈ ದೇಹದಲ್ಲಿ ಅನೇಕ ಕ್ರಿಯೆಗಳು ನಡೆಯುತ್ತಿವೆ ಅದಕ್ಕೆ ಅತೀಂದ್ರಿಯ ಶಕ್ತಿ ಗಳೆನಿಸಿದ ದೇವತಾಶಕ್ತಿಗಳು ಕಾರಣ.

 


 
                                                                Dhyana Chakras

ಈ ದೇಹದಲ್ಲಿ ಮುಖ್ಯವಾಗಿ 24 ತತ್ವಾಭಿಮಾನಿ ದೇವತೆಗಳಿದ್ದು ಈ ದೇಹವನ್ನು ನಿಯಂತ್ರಿಸುತ್ತಿದ್ದಾರೆ...

ಇದು ಒಂದು ಕಥೆ... ಒಮ್ಮೆ ದೇವತೆಗಳಲ್ಲಿ ಚರ್ಚೆ ನಡೆಯಿತು ಯಾರು ಈ ದೇಹದಲ್ಲಿ ಯಾರ ಸ್ಥಾನಮಾನ ಮುಖ್ಯ ಅಂತ... ಒಬ್ಬೊಬ್ಬ ದೇವತೆ ಈ ದೇಹದಿಂದ ಹೊರಗೆ ಹೋದಾಗ ಏನಾಯಿತು.


ಸೂರ್ಯ ಹೊರಗೆ ಹೋದ ವ್ಯಕ್ತಿ ಕುರುಡನಾಗಿ ಬದುಕಿದ... ಚಂದ್ರ ಹೊರಗೆ ಹೋದ ವ್ಯಕ್ತಿ ಕಿವುಡನಾಗಿ ಬದುಕಿದ... ಇಂದ್ರ ಹೊರಗೆ ಹೋದ ಕೈಯಿಲ್ಲದೆ ವ್ಯಕ್ತಿ ಬದುಕಿದ, ಜಯಂತ ಹೊರಗೆ ಹೋದ ಕಾಲಿಲ್ಲದೆ ಬದುಕಿದ ಪಾರ್ವತಿ ಹೊರಗೆ ಹೋದಳು ವ್ಯಕ್ತಿ ಮೂಕನಾಗಿ ಬದುಕಿದ ಮನೋಭಿಮಾನಿ ಶಿವನೂ ಹೊರಗೆ ಹೋದ ಮನಷ್ಯ ಕೋಮಾಸ್ಥಿಯಲ್ಲಿ ಬದುಕಿದ... ಹೀಗೆ ಯಾವುದೇ ದೇವತೆ ಹೊರಗೆ ಹೋದರು ದೇಹಬಿದ್ದುಹೋಗಲಿಲ್ಲ... ಯಾವಾಗ ಪ್ರಾಣದೇವರು ಉಸಿರಾಟ ನಿಲ್ಲಿಸಿದರೋ ದೇಹದೊಪ್ಪೆಂದು ಬಿತ್ತು. ನಮ್ಮ ಒಳಗಿರುವ ಭಗವಂತ ಈ ದೇಹ ಪ್ರವೇಶಮಾಡುವುದಾಗಲಿ ದೇಹ ಬಿಡುವುದಾಗಲಿ ಪ್ರಾಣನೊಟ್ಟಿಗೆ. ದೇಹವನ್ನು ನಿಯಂತ್ರಿಸುವ ಎಲ್ಲ ದೇವತೆಗಳನ್ನು ಮತ್ತೆ ದೇಹಕ್ಕೆ ಕರೆಯಲಾಯಿತು.


ದೇಹದ ಎಲ್ಲ ಅಂಗಗಳೂ ಸರಿಯಾಗಿವೆ ದೇಹ ಆರೋಗ್ಯವಾಗಿದೆ ವ್ಯಕ್ತಿ ಬಲಿಷ್ಠ ನಾಗಿದ್ದಾನೆ.

ಈಗ ಸುಮ್ಮನೆ ವಾಯುದೇವ ದೇಹದಿಂದ ಹೊರನಡೆದ ಶರೀರ ದೊಪ್ಪೆಂದು ಬಿತ್ತು. ಇದು ಪ್ರಾಣಶಕ್ತಿ. ಅದೇ ಉಸಿರು...‌ ಈ ದೇಹದಲ್ಲಿ ಉಸಿರಿರುವ ತನಕವಷ್ಟೇ ಈ ದೇಹದಲ್ಲಿ ಚಟುವಟಿಕೆ.

ರಾತ್ರಿ ನಾವು ಮಲಗಿದಾಗ ಕೂಡ ನಮ್ಮೊಟ್ಟಿಗೆ ಎಲ್ಲ ಇಂದ್ರಿಯಾಭಿಮಾನಿ ದೇವತೆಗಳೂ Rest ವಿಶ್ರಾಂತಿ ತಗೋತಾರೆ... ಆದರೆ ಪ್ರಾಣದೇವರಿಗೆ Rest ವಿಶ್ರಾಂತಿ ಇಲ್ಲ..‌. ವಾಯು ನಮ್ಮ ದೇಹದಲ್ಲಿ 24x7 all 365 days till end of Life ಒಂದು ಕ್ಷಣ ಬಿಡದೇ ನಮ್ಮನ್ನು ಉಸಿರಾಡಿಸುತ್ತಿರಬೇಕು... ಪ್ರಾಣಶಕ್ತಿಯಿಂದಾಗಿ ಈ ದೇಹದಲ್ಲಿ ಮೇಲಕ್ಕೂ ಕೆಳಕ್ಕೂ ರಕ್ತಸಂಚಾರ, ನಾವು ಉಂಡ ಆಹಾರ ಜೀರ್ಣವಾಗುವುದು.

 

                                                             Human Body Chakras


 
ಪ್ರಾಣಾಯಾಮ ಎಂದರೆ ಉಸಿರಾಟವನ್ನು ನಿಯಂತ್ರಿಸುವ ಒಂದು ಯೋಗಾಭ್ಯಾಸ. 'ಪ್ರಾಣ' ಎಂದರೆ ಜೀವಶಕ್ತಿ ಅಥವಾ ಉಸಿರು, ಮತ್ತು 'ಆಯಾಮ' ಎಂದರೆ ನಿಯಂತ್ರಣ ಅಥವಾ ವಿಸ್ತರಣೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಆಸ್ತಮಾ, ತಲೆನೋವು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ

ಅದಕೆಂದೇ ನಾವು ನಿತ್ಯ ಉಟಮಾಡುವಾಗ ಮೊದಲು ಪಂಚರೂಪದಿಂದ ಈ ದೇಹದ ಚಟುವಟಿಕೆಗಳನ್ನು ನಡೆಸುವ ಪ್ರಾಣನಿಗೆ ಆಹುತಿ ಕೊಟ್ಟು ಪ್ರಾಣನ ಉಪಕಾರ ಸ್ಮರಣೆಯನ್ನು ಸ್ಮರಿಸುವುದು...‌ ಪ್ರಾಣಾಯ ಸ್ಚಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ.


ಅದರಿಂದ ಬದುಕು ಎಂದರೆ ಉಸಿರು... ಉಸಿರಾಟ ಸರಿಯಾಗಿದ್ದರೆ ದೇಹದಾರೋಗ್ಯ.

-------------- Hari Om --------------- 


 

Wednesday, October 15, 2025

Rangoli

 

ರಂಗೋಲಿ ---- Rangoli

 


                                  Rangoli

 

ರಂಗೋಲಿಯ ಉದ್ದೇಶ, ಉಪಯೋಗಗಳು, ಪರಿಣಾಮಗಳು ಮತ್ತು 

ಗುಪ್ತ ವೈಜ್ಞಾನಿಕ ಮಹತ್ವ


Rangoli its Purpose, Uses, Effects & Hidden Scientific 

importance

 

                                      another type

 

ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು ಗೊತ್ತಾ? ರಂಗೋಲಿಯ ಮಹತ್ವದ ಕುರಿತಾಗಿ ಇಲ್ಲಿದೆ ಮಾಹಿತಿ

ಮುಂಜಾನೆ ಮನೆಯ ಹೆಂಗಳೆಯರು ಎದ್ದು ಹೊಸಿಲಿಗೆ ಮತ್ತು ಮನೆಯ ಮುಂದೆ ನೀರು ಹಾಕಿ ರಂಗೋಲಿ ಹಾಕಿದರೆ ಮನೆಗೊಂದು ಲಕ್ಷಣವೆನ್ನುತ್ತಾರೆ. ಈ ರಂಗೋಲಿ ಹಾಕುವ ಸಂಪ್ರದಾಯವನ್ನು ಹಿಂದಿನ ಕಾಲದಿಂದ ಇಂದಿನವರೆಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಈಗೀಗ ಆಧುನಿಕತೆಗೆ ಒಗ್ಗಿಕೊಂಡ ಜನ, ರಂಗೋಲಿ ಹಾಕಲು ಸಮಯವಿಲ್ಲದೇ ರಂಗೋಲಿ ಚಿತ್ರವಿರುವ ಪ್ಲಾಸ್ಟಿಕ್‌ ಹಾಳೆಯ ಮನೆಯ ಬಾಗಿಲಿನ ಮುಂದೆ ಅಂಟಿಸಿಬಿಡುತ್ತಾರೆ. ಇನ್ನೂ ಕೆಲವರು ಪೈಂಟ್ ನಿಂದ ಒಮ್ಮೆ ರಂಗೋಲಿ ಹಾಕಿ ಸುಮ್ಮನೆ ಆಗಿ ಬಿಡುತ್ತಾರೆ. ಆದರೆ ಇದರಿಂದ ಯಾವುದೇ ಪರಿಣಾಮಗಳು ಉಂಟಾಗದು. ನಿಜವಾಗಿಯೂ ರಂಗೋಲಿಯ ಪ್ರಾಮುಖ್ಯತೆ ಏನು, ಅದರಿಂದ ಉಂಟಾಗುವ ಉಪಯೋಗಗಳೇನು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ಧಾರ್ಮಿಕ ಮಹತ್ವ

ರಂಗೋಲಿಯು ಬಣ್ಣಗಳ ಆಚರಣೆಯನ್ನು ಸಂಕೇತಿಸುವ ಸಂಸ್ಕೃತ ಪದ 'ರಂಗವಲ್ಲಿ'ಯಿಂದ ಬಂದಿದೆ. ಇದು ಪ್ರಾಚೀನ ಭಾರತೀಯ ಕಲೆ, ಶಿಲ್ಪಕಲೆ ಹಾಗೂ ವರ್ಣಚಿತ್ರಗಳಿಗಿಂತಲೂ ಹಿಂದಿನದಾಗಿದೆ. ಯಾವುದೇ ಧಾರ್ಮಿಕ ಆಚರಣೆ ಇರಲಿ, ಹಬ್ಬ ಹರಿದಿನಗಳು ಇರಲಿ ರಂಗೋಲಿಯನ್ನು ಶುಭ ಸೂಚಕವಾಗಿ ಹಾಗೂ ಪ್ರಾಥಮಿಕ ಅವಶ್ಯಕತೆಯಾಗಿ ಬಳಸಲಾಗುತ್ತದೆ. ಹಬ್ಬ, ಆಚರಣೆ, ವಿವಾಹ, ಧಾರ್ಮಿಕ ಪೂಜೆ ಮುಂತಾದ ಶುಭ ಕಾರ್ಯಗಳಲ್ಲಿ ಹಾಕುವಂತಹ ರಂಗೋಲಿಯು ಆ ಸ್ಥಳಕ್ಕೆ ಧಾರ್ಮಿಕ ಸ್ಪರ್ಶವನ್ನು ನೀಡುತ್ತದೆ.



                                                                             Pic -1

 

ರಂಗೋಲಿಯ ಉದ್ದೇಶ


ರಂಗೋಲಿಯನ್ನು ಎರಡು ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಒಂದು ಸೌಂದರ್ಯಕ್ಕಾಗಿ, ಇನ್ನೊಂದು ಶುಭವನ್ನು ಪಡೆಯಲು. ರಂಗೋಲಿಯಲ್ಲಿ ಬಿಡಿಸಿದಂತಹ ಚಿತ್ರಗಳು ಕೂಡಾ ಸಾಂಕೇತಿಕವಾಗಿರುತ್ತದೆ. ನೇರವಾದ ರಂಗೋಲಿ ರೇಖೆಗಳಿಗಿಂತ ಬಾಗಿದ ರೇಖೆಗಳು ಹೆಚ್ಚು ಸುಂದರವಾಗಿರುತ್ತದೆ. ಸಾಮಾನ್ಯವಾಗಿ ಮಹಿಳೆಯರೇ ರಂಗೋಲಿ ಹಾಕುವುದು ಹೆಚ್ಚು. ರಂಗೋಲಿ ಹಾಕಲು ಅವರಿಗೆ ಯಾವುದೇ ಅಚ್ಚು, ದಾರ, ಕುಂಚಗಳು ಬೇಕಾಗಿಲ್ಲ. ಬೆರಳಿನ ಮೂಲಕವೇ ವಿವಿಧ ವಿಧವಾದ ರಂಗೋಲಿಗಳು ಮಹಿಳೆಯರ ಬೆರಳಿನ ಮೂಡುತ್ತವೆ.

ಆಧ್ಯಾತ್ಮಿಕ ಮಹತ್ವ


ಹಿಂದೂ ಧರ್ಮದಲ್ಲಿ ಪ್ರತಿ ಹಬ್ಬ, ಶುಭ ಸಂದರ್ಭ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ರಂಗೋಲಿಯನ್ನು ಬಿಡಿಸಲಾಗುತ್ತದೆ. ಈ ಎಲ್ಲಾ ಆಚರಣೆಗಳು ದೇವತಾ ತತ್ವಕ್ಕೆ ಸಂಬಂಧಿಸಿರುವುದರಿಂದ ರಂಗೋಲಿ ಹಾಕಿದರೆ ಶುಭವೆಂದು ಹೇಳಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಆಯಾ ಆಚರಣೆಗೆ ಸಂಬಂಧಿಸಿದ ದೈವಿಕ ತತ್ವವು ವಾತಾವರಣದಲ್ಲಿ ಹೆಚ್ಚಾಗಿರುತ್ತದೆ. ಆ ದೇವತೆಯನ್ನು ಧಾರ್ಮಿಕ ಆಚರಣೆಯನ್ನು ಮಾಡುವ ಸ್ಥಳಕ್ಕೆ ಆಕರ್ಷಿಸಲು ರಂಗೋಲಿಯನ್ನು ಹಾಕಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ದೇವತಾ ಶಕ್ತಿಯನ್ನು ಆಕರ್ಷಿಸಲು ಆಯಾ ದೇವತೆಗಳಿಗೆ ಸಂಬಂಧಿಸಿದ, ದೇವತೆಗಳನ್ನು ಹೆಚ್ಚು ಆಕರ್ಷಿಸುವ ರಂಗೋಲಿಯನ್ನು ಬಿಡಿಸಿದರೆ, ಪ್ರತಿಯೊಬ್ಬರೂ ಕೂಡಾ ಹೆಚ್ಚಿನ ಆಧ್ಯಾತ್ಮಿಕ ಪ್ರಯೋಜನವನ್ನು ಪಡೆಯುತ್ತಾರೆಂದು ಹೇಳಲಾಗುತ್ತದೆ.



                                                                           Pic - 2

 ಆಧ್ಯಾತ್ಮಿಕ ಪರಿಣಾಮ


ಆಧ್ಯಾತ್ಮಿಕ ತತ್ವದ ಪ್ರಕಾರ ನಿಮ್ಮ ಸುತ್ತಲಿನ ಶಬ್ದ,ಸ್ಪರ್ಶ, ರುಚಿ, ರೂಪ, ವಾಸನೆಯ ಶಕ್ತಿಯು ನಿಮ್ಮ ದೇಹ ಹಾಗೂ ಭಾವನೆಯ ಮೇಲೆ ಪರಿಣಾಮ ಬೀರುತ್ತದೆ. ಅದರಂತೆ ಮಹಿಳೆಯು ರಂಗೋಲಿ ಹಾಕುವಾಗ ಅದು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ. ರಂಗೋಲಿಯ ರೂಪ ಹಾಗೂ ಬಣ್ಣದಲ್ಲಿ ಸಣ್ಣ ವ್ಯತ್ಯಾಸವನ್ನು ಮಾಡಿದರೂ, ಅದರ ಕಂಪನಗಳು ಬದಲಾಗುತ್ತವೆ.

ಮನೆಯ ಬಾಗಿಲಿನಿಂದ ಒಳಗೆ ಪ್ರವೇಶಿಸುವವರ ಮನಸ್ಸಿನ ಮೇಲೆಯೂ ರಂಗೋಲಿಯು ಪ್ರಭಾವ ಬೀರುತ್ತದೆ. ಮನಸ್ಸಿಗೆ ಶಾಂತಿಯನ್ನು ನೀಡುವುದರ ಜೊತೆಗೆ ಮನೆಯ ಆಂತರಿಕ ಶಾಂತಿಯನ್ನೂ ಕಾಪಾಡುತ್ತದೆ. ನಿಮ್ಮ ಮನೋಸ್ಥಿತಿ ಬದಲಾಯಿಸಲು, ಮನಸ್ಸಿನ ಶಾಂತಿಯನ್ನು ಮರಳಿ ಪಡೆಯಲು ರಂಗೋಲಿ ಸಹಾಯಕ.

ಸಾತ್ವಿಕ ರಂಗೋಲಿ


ಸಾತ್ವಿಕ ರಂಗೋಲಿ, ರಂಗವಲ್ಲಿಯ ಒಂದು ವಿಧ. ಇದರ ಮುಖ್ಯ ಲಕ್ಷಣವೆಂದರೆ ಈ ರಂಗೋಲಿಯ ದೇವತಾತತ್ವದ ಪ್ರಸರಣದಿಂದಾಗಿ ಭಕ್ತರು ದೈವಿಕ ಶಕ್ತಿ, ಭಾವ (ಆಧ್ಯಾತ್ಮಿಕ ಭಾವನೆ), ಚೈತನ್ಯ(ದೈವಿಕ ಪ್ರಜ್ಞೆ), ಆನಂದ, ಶಾಂತಿ, ಹಾಗೂ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯುತ್ತಾರೆ. ಹಸ್ತಮುದ್ರಿಕಾ ಹಾಗೂ ಯೋಗ ವಿಜ್ಞಾನದ ಪ್ರಕಾರ ರಂಗೋಲಿ ಹಾಕುವಾಗ ತೋರು ಬೆರಳಿನ ತುದಿಯನ್ನು ಹೆಬ್ಬೆರಳು ಮೃದುವಾಗಿ ಒತ್ತುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿಯು ಬಿಡುಗಡೆಯಾಗುವುದು. ಈ ಶಕ್ತಿಯು ಆತ್ಮವನ್ನು ಶುದ್ಧೀಕರಿಸುವುದಲ್ಲದೇ ರಕ್ತಪರಿಚಲನೆಗೂ ಸಹಾಯ ಮಾಡುತ್ತದೆ.

ರಂಗೋಲಿಯನ್ನು ಎಲ್ಲಿ ಹಾಕಬೇಕು


ರಂಗೋಲಿಯನ್ನು ಸಾಮಾನ್ಯವಾಗಿ ಮಣ್ಣಿನ ನೆಲ, ಸಗಣಿ ಸಾರಿಸಿದ ನೆಲ, ಟೈಲ್ಸ್ ನೆಲದ ಮೇಲೆಯೂ ಹಾಕಬಹುದು. ಯಾರಿಗಾದರೂ ಆರತಿ ಮಾಡುವಾಗ, ಕುಳ್ಳಿರಿಸುವ ಮರದ ಮಣೆಯ ಸುತ್ತಲೂ ರಂಗೋಲಿಯನ್ನು ಹಾಕಬಹುದು. ಜೊತೆಗೆ ಮಣೆಯ ಮುಂದೆಯೂ ರಂಗೋಲಿ ಹಾಕಬಹುದು.

 

                                                                                Pic - 3

 

 ರಂಗೋಲಿ ಯಾಕೆ ಹಾಕಬೇಕು ?


ನೆಲವನ್ನು ಗುಣಿಸುವಾಗ ಅಥವಾ ಸಗಣಿ ಸಾರಿಸುವಾಗ ಅದು ನೆಲದ ಮೇಲೆ ಸೂಕ್ಷ್ಮರೇಖೆಗಳನ್ನು ಸೃಷ್ಟಿಸುತ್ತದೆ. ಇದು ಕೆಲವೊಂದು ಕಂಪನಗಳನ್ನು ಉಂಟುಮಾಡುತ್ತದೆ. ಈ ರೇಖೆಗಳು ಅನಿಯಮಿತವಾದುದರಿಂದ ಅವುಗಳ ಕಂಪನಗಳೂ ಕೂಡಾ ಅನಿಯಮಿತವಾಗಿರುತ್ತದೆ. ಇದು ದೇಹ, ಕಣ್ಣು ಹಾಗೂ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ ನೆಲದ ಮೇಲೆ ಶಂಖದ ರಂಗೋಲಿ, ಶುಭ ಚಿಹ್ನೆಗಳನ್ನೊಳಗೊಂಡ ರಂಗೋಲಿಯನ್ನು ವ್ಯವಸ್ಥಿತವಾಗಿ ಬಿಡಿಸಿದರೆ ಇವು ಪ್ರತಿಕೂಲ ಕಂಪನಗಳನ್ನು ನಿವಾರಿಸುವುದು ಹಾಗೂ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.

 

                                                                            Pic - 4

 

ಮಣೆಯ ಸುತ್ತಲೂ ಅಥವಾ ಚೌರಂಗದ ಕೆಳಗೆ ರಂಗೋಲಿಯನ್ನು ಬಿಡಿಸುವುದರ ಮತ್ತು ಅದರ ಮೇಲೆ ಅರಿಶಿನ-ಕುಂಕುಮವನ್ನು ಹಾಕುವುದರ ಮಹತ್ವ: ‘ಯಾವುದೇ ಪೂಜಾವಿಧಿಯನ್ನು ಮಾಡುವಾಗ ಮೊದಲು ಮಣೆಯ ಸುತ್ತಲೂ ಅಥವಾ ಚೌರಂಗದ ಕೆಳಗೆ ಸಾತ್ತ್ವಿಕ ಆಕಾರದ ರಂಗೋಲಿಯನ್ನು ಬಿಡಿಸುವುದರಿಂದ, ಈ ಆಕಾರದಿಂದ ವೇಗವಾಗಿ ಪ್ರಕ್ಷೇಪಿಸುವ ಲಹರಿಗಳ ಕವಚವು ಮಣೆಯ ಸುತ್ತಲೂ ಅಥವಾ ಚೌರಂಗದ ಸುತ್ತಲೂ ನಿರ್ಮಾಣವಾಗಲು ಸಹಾಯವಾಗುತ್ತದೆ.


ರಂಗೋಲಿಯಿಂದ ಪ್ರಕ್ಷೇಪಿತವಾಗುವ ವೇಗವಾದ ಲಹರಿಗಳ ಕಡೆಗೆ ಮತ್ತು ರಂಗೋಲಿಯ ಆಕೃತಿಯಲ್ಲಿ ಭೂಮಿಲಹರಿಗಳು ಆಕರ್ಷಿತವಾಗಿ ಅವು ಅಲ್ಲಿ ಬಂಧಿಸಲ್ಪಡುತ್ತವೆ. ರಂಗೋಲಿಯ ರೇಖೆಗಳಿಂದ ಆವಶ್ಯಕತೆಗನುಸಾರ ಸಾತ್ತ್ವಿಕ ಲಹರಿಗಳು ಜೀವದ ಕಡೆಗೆ ಪ್ರಕ್ಷೇಪಿತವಾಗುತ್ತವೆ ಹಾಗೂ ಭೂಮಿಯ ಮೇಲೆ ಈ ಲಹರಿಗಳ ಸೂಕ್ಷ್ಮ ಹೊದಿಕೆಯು ನಿರ್ಮಾಣವಾಗಲು ಸಹಾಯವಾಗುವುದರಿಂದ ಪಾತಾಳದಲ್ಲಿನ ಅಥವಾ ವಾಸ್ತುವಿನಲ್ಲಿನ ಕೆಟ್ಟ ಶಕ್ತಿಗಳಿಂದ ಪ್ರಕ್ಷೇಪಿತವಾಗುವ ಕಪ್ಪು ಶಕ್ತಿಯ ಲಹರಿಗಳಿಂದ ಜೀವದ ರಕ್ಷಣೆಯಾಗಲು ಸಹಾಯವಾಗುತ್ತದೆ. ರಂಗೋಲಿಯ ಬೇರೆಬೇರೆ ಆಕೃತಿಯಂತೆ, ಆಯಾ ಆಕೃತಿಯಲ್ಲಿ ಸಂಗ್ರಹವಾದ ವಿಶಿಷ್ಟ ದೇವತೆಗಳ ಲಹರಿಗಳಿಂದಾಗಿ ಕೆಟ್ಟ ಶಕ್ತಿಗಳು ರಂಗೋಲಿಯನ್ನು ನೋಡಿ ಹೆದರುತ್ತವೆ

 

                                                                             Pic - 5

 
 ರಂಗೋಲಿಯನ್ನು ಬಿಡಿಸಿದ ನಂತರ ರಂಗೋಲಿಯ ಕೇಂದ್ರಬಿಂದುವಿನ ಮೇಲೆ ಅರಿಶಿನ-ಕುಂಕುಮವನ್ನು ಹಾಕುವುದರಿಂದ ಅರಿಶಿನ-ಕುಂಕುಮದಿಂದ ಪ್ರಕ್ಷೇಪಿತವಾಗುವ ತೇಜತತ್ತ್ವಕ್ಕೆ ಸಂಬಂಧಿಸಿದ ಬಣ್ಣದ ಕಣಗಳೆಡೆಗೆ ಬ್ರಹ್ಮಾಂಡದಲ್ಲಿನ ಉಚ್ಚ ದೇವತೆಗಳ ಲಹರಿಗಳು ಕೂಡಲೇ ಆಕರ್ಷಿಸುತ್ತವೆ. ಇದರಿಂದ ರಂಗೋಲಿಯಿಂದ ಪ್ರಕ್ಷೇಪಿತವಾಗುವ ಲಹರಿಗಳ ಕಾರ್ಯಕ್ಷಮತೆ, ವೇಗ ಮತ್ತು ಪರಿಣಾಮಕಾರಕತೆಯೂ ಹೆಚ್ಚುತ್ತದೆ. ಆದುದರಿಂದ ಯಾವುದೇ ಶುಭವಿಧಿಯಲ್ಲಿ ಕೆಟ್ಟ ಶಕ್ತಿಗಳ ಅಡಚಣೆಗಳು ಬರಬಾರದೆಂದು ಬಾಗಿಲಿನ ಮುಂದೆ, ಪೂಜಾವಿಧಿಯ ಎದುರಿಗೆ ಅಥವಾ ಮಣೆಯ ಸುತ್ತಲೂ ರಂಗೋಲಿಯನ್ನು ಬಿಡಿಸುತ್ತಾರೆ.

 

                                                                              Pic - 6
 

 

 

------------- Hari Om ------------

 


 


                                                                  

 

 

                      


 



Saturday, October 4, 2025

Adi Parashakthi Temple in K.R Puram--Bengaluru

 

ಓಂ ಶಕ್ತಿ-ಆದಿ ಪರಾಶಕ್ತಿ ದೇವಸ್ಥಾನ - ಕೆ.ಆರ್. ಪುರಂ-ಬೆಂಗಳೂರು

Om Shakthi - Adi Parashakthi Temple – K.R Puram Bengaluru

 


 
                                                              Adi Parashakthi 

 

Serene atmosphere Sharp & Bright looking Deity and even though it a small temple but it has good inner space very calm worth visiting if anyone around K.R Puram and daily Poojas are being carried out .

ಓಮ್ ದಮ್ ಡುರ್ಗಾಯೆ ನಮಾಹಾ

 

                                     Lord Ganesha

 

There are Ganesha Idol ,Kala Bhairava , Main Deity Adi Parashakthi and Bangaru adigalaru photos. Every day Prasadams are offered.


ಯಾ ದೇವಿ ಸರ್ವಾ ಭುತ್ಸುಹ್, ಶಕ್ತಿ ರುಪೆನಾ ಸ್ಯಾಮ್ಸ್ತಿತಾ


Address - 2P45+VMG Aiyyappa Nagar, Basavanapura Rd, Gokula Layout, Next to Nandi Hexagon Apartments , Krishnarajapuram, Bengaluru, Karnataka – 560049.

 

                                                                        Name Board


ಓಮ್ ಹ್ರೀಮ್ ಶ್ರೆಮ್ ಕ್ಲೆಮ್ ಸರ್ವಾಪೂಜಿಯೆ ದೇವಿ ಮಂಗಲಾ ಚಾಂಡಿಕೆ

 

                                                                            Pic - 1

                                                                              Pic-2

  

ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಲಕ್ಷ್ಮಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ತುಷ್ಠಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ದಯಾ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


ಯಾ ದೇವೀ ಸರ್ವಭೂತೇಷು ಬುದ್ಧಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಶಾಂತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

 

                                                                           Pic-3

 

Please Visit this Temple and Get Blessings from Devi Om Shakthi Parashakthi.

------------ Hari Om -----------