Friday, August 1, 2025

Sri Raghavendra Gayatri Mantra

 

                                                              Guru Raghavendra Swamy

 

ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರ


Sri Raghavendra Gayatri Mantra


ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ.ಇದು ಸತ್ಯ ..!ರಾಯರ ಮಹಿಮೆ ಇದು ನೇರವಾಗಿ ನೋಡಿ..!
ಮಹಾ ಮಹಿಮ ಗುರುಗಳು ಮತ್ತು ಜೀವಂತ ದೇವರು.ಗುರುರಾಘವೇಂದ್ರರ ಆರಾಧ್ಯ ದೈವ ಮೂಲರಾಮ ಅಂದರೆ ಮಹಾವಿಷ್ಣು ಜೀವನದಲ್ಲಿ ಎಂತಹ ಕಷ್ಟಗಳೇ ಬಂದರು ಶ್ರೀ ಗುರುರಾಯರ ಸ್ಮರಣೆ ಮಾಡಿದ ತಕ್ಷಣವೇ ಕಷ್ಟವು ಮಂಜಿನಂತೆ ಕರಗುವುದು.


ಗುರುರಾಯರನ್ನು ನೆನೆಯಲು ಹಲವಾರು ಮಂತ್ರಗಳಿವೆ ಅದರಲ್ಲಿ ರಾಘವೇಂದ್ರ ಗಾಯತ್ರಿ ಮಂತ್ರವು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ.ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಮೂರು ಬಾರಿ,ಐದು ಬಾರಿ,ಒಂಭತ್ತು ಬಾರಿ,ಇಪ್ಪತೊಂದು ಬಾರಿ,ಸಾವಿರದ ಎಂಟು ಬಾರಿ ಜಪಿಸಬಹುದು.

ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ಕೆಲವು ನಿಯಮಗಳಿವೆ ಅವುಗಳನ್ನು ನೀವು ಪಾಲಿಸಿದರೆ ಶ್ರೀ ಗುರುರಾಯರು ನಿಮ್ಮ ಕನಸಿನಲ್ಲಿ ಬಂದು ನಿಮಗೆ ಅನುಗ್ರಹಿಸಿ ನಿಮ್ಮ ಸಕಲ ಸಂಕಷ್ಟಗಳನ್ನು ಕಳೆಯುತ್ತಾರೆ.ಆ ನಿಯಮಗಳು ಯಾವುವೆಂದರೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ದಿನವೂ ಆಗಲಿಲ್ಲವಾದರು ಗುರುರಾಯರ ವಿಶೇಷ ದಿನವಾದ ಗುರುವಾರ ಪಠಿಸಬಹುದು.

 

                                                              Sri Raghavendra Swamy

  

ನೀವು ಇದನ್ನೇ ನಲವತ್ತೆಂಟು ದಿನಗಳು ಪಠಿಸಿದರೆ ಈ ಕೆಳಗಿನಂತೆ ಪಾಲಿಸಿ.
ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರದ ವ್ರತವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷ ಪುಷ್ಯ ನಕ್ಷತ್ರ ದಿನಗಳಲ್ಲಿ ತುಂಬಾ ವಿಶೇಷ ಶಕ್ತಿ ಇರುತ್ತದೆ ಆ ದಿನಗಳಲ್ಲಿ ಶುರು ಮಾಡಿದರೆ ನಿಮಗೆ ಒಳ್ಳೆಯದು.


ದಿನಕ್ಕೆ ಸತತ ಸಾವಿರದ ಎಂಟು ಬಾರಿ ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರವನ್ನು ನಲವತ್ತೆಂಟು ದಿನಗಳವರೆಗೆ ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಕಲ್ಪವೃಕ್ಷ ಭಕ್ತರ ಪಾಲಿನ ಆಪದ್ಬಾಂದವ ಶ್ರೀ ಗುರುರಾಘವೇಂದ್ರರು ನಿಮ್ಮ ಕನಸಿನಲ್ಲಿ ಬರುವುದು ಖಚಿತ.ಕನಸಿನಲ್ಲಿ ಅವರು ಬಂದರು ಎಂದರೆ ನಿಮ್ಮ ಸಕಲ ಸಂಕಷ್ಟಗಳು ಕೊನೆಗಾಣುವುದು ಖಚಿತ.

ಓಂ ವೆಂಕಟನಾಥಾಯ ವಿದ್ಮಹೇ
ಸಚಿದಾನಂಧಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್

ಓಂ ವೆಂಕಟನಾಥಾಯ ವಿದ್ಮಹೇ
ತಿಮ್ಮಣ್ಣ ಪುತ್ರಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್

ಓಂ ಪ್ರಹಲಾದಾಯ ವಿದ್ಮಹೇ
ವ್ಯಾಸ ರಾಜಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್

ಓಂ ಶ್ರೀ ಗುರು ರಾಘವೇಂದ್ರಾಯ ನಮಃ  
 
 
Rayara Avatharagalu
 
 
-------------- Hari Om ------------

 
 


Tuesday, July 29, 2025

Naga Panchami

 

ನಾಗ ಪಂಚಮಿಯ ಬಗ್ಗೆ ವಿಶೇಷ ಮಾಹಿತಿ:


Naga Panchami – its Importance

 


                                   Nagara Panchami Pooje

 

ದೇಶಾದ್ಯಂತ ಜನರು ಸರ್ಪಗಳು ಮತ್ತು ಹಾವುಗಳನ್ನು ಪೂಜಿಸುವ ಒಂದು ಆಚರಿಸಲಾಗುವ ಹಿಂದೂ ಹಬ್ಬ ಈ ಹಬ್ಬ. ಈ ಶುಭ ದಿನವು ಪಂಚಮಿ ತಿಥಿ ಅಥವಾ ಶುಕ್ಲ ಪಕ್ಷದ ಐದನೇ ದಿನದಂದು ಬರುತ್ತದೆ, ಇದು ಚಂದ್ರನ ಕ್ಷೀಣ ಹಂತವಾಗಿದೆ. ಸಾಂಪ್ರದಾಯಿಕ ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ತಿಂಗಳು ಹಿಂದೂ ಸಮುದಾಯವು ಅತ್ಯಂತ ಪವಿತ್ರವೆಂದು ಭಾವಿಸುತ್ತದೆ, ವಿಶೇಷವಾಗಿ ಸರ್ಪಗಳ ದೇವರು ಅಥವಾ ನಾಗ ದೇವತೆಯನ್ನು ಪೂಜಿಸಲು. ಈ ದಿನವು ಸಾಮಾನ್ಯವಾಗಿ ಹರಿಯಾಲಿ ತೀಜ್‌ನ ಸಂತೋಷದಾಯಕ ಘಟನೆಯ ಒಂದು ದಿನದ ನಂತರ ಬರುತ್ತದೆ.

ಮತ್ತೊಂದೆಡೆ, ಪಶ್ಚಿಮದ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ದಿನ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬರುತ್ತದೆ. ದೇಶಾದ್ಯಂತ ಮಹಿಳೆಯರು, ಈ ದಿನದಂದು, ಹಾವುಗಳಿಗೆ ಹಾಲು ಅರ್ಪಿಸುತ್ತಾರೆ ಮತ್ತು ನಾಗ ದೇವತೆಯನ್ನು ಪೂಜಿಸುತ್ತಾರೆ. ಅವರು ತಮ್ಮ ಕುಟುಂಬಗಳಿಗೆ, ವಿಶೇಷವಾಗಿ ತಮ್ಮ ಸಹೋದರರಿಗೆ ಆರೋಗ್ಯಕರ ಮತ್ತು ದೀರ್ಘಾಯುಷ್ಯಕ್ಕಾಗಿ ದೇವರ ಆಶೀರ್ವಾದವನ್ನು ಪಡೆಯಲು ಪ್ರಾರ್ಥಿಸುತ್ತಾರೆ.

                                                                            Pic -1

 
 

ನಾಗ ಪಂಚಮಿ ಪೂಜಾ ವಿಧಿ

ಈ ಶುಭ ದಿನವು ಬಹಳಷ್ಟು ಜನರಿಗೆ ಬಹಳ ಪ್ರಸ್ತುತತೆಯನ್ನು ಹೊಂದಿದೆ. ಈ ದಿನದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು, ಈ ಪವಿತ್ರ ದಿನದ ವಿವರವಾದ ಪೂಜಾ ವಿಧಿಯನ್ನು ನಾವು ಕೆಳಗೆ ಪಟ್ಟಿ ಮಾಡಿದ್ದೇವೆ:

1) ಬೆಳಿಗ್ಗೆ ಎದ್ದ ನಂತರ ಸ್ನಾನ ಮಾಡಿ.

2) ಪೂಜಾ ಕೊಠಡಿಯನ್ನು ಪವಿತ್ರ ನೀರಿನಿಂದ ಸ್ವಚ್ಛಗೊಳಿಸಿ.

3) ಮರದ ಸ್ಟೂಲ್ ಅಥವಾ ಚೌಕಿಯ ಮೇಲೆ ಸ್ವಚ್ಛವಾದ ಬಟ್ಟೆಯನ್ನು ಹರಡಿ.

ಅದರ ಮೇಲೆ ಸರ್ಪ ದೇವರ ವಿಗ್ರಹ ಅಥವಾ ಛಾಯಾಚಿತ್ರವನ್ನು ಎಚ್ಚರಿಕೆಯಿಂದ ಇರಿಸಿ.

4) ವಿಗ್ರಹದ ಬಲಭಾಗದಲ್ಲಿ ಎಣ್ಣೆ ಅಥವಾ ತುಪ್ಪದ ದೀಪವನ್ನು ಬೆಳಗಿಸಿ.

5) ಸಂಕಲ್ಪ ಮಾಡಿ ಅಥವಾ ಪೂಜಾ ವಿಧಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡುವುದಾಗಿ ಪ್ರತಿಜ್ಞೆ ಮಾಡಿ.

6) ವಿಗ್ರಹದ ಮೇಲೆ ಪವಿತ್ರ ನೀರು ಅಥವಾ ಗಂಗಾ ಜಲವನ್ನು ಸಿಂಪಡಿಸಿ.

7) ವಿಗ್ರಹಕ್ಕೆ ಚಂದನ, ಹಲ್ದಿ, ಅಕ್ಷತೆ, ಕುಂಕುಮ, ಹೂವುಗಳು, ಧೂಪ ಮತ್ತು ನೈವೇದ್ಯವನ್ನು ಅರ್ಪಿಸಿ.

ಈ ಶುಭ ದಿನದಂದು ನಾಗ ದೇವತೆಗೆ ಪ್ರಾರ್ಥಿಸಲು ನಿಮ್ಮ ಕೈಗಳನ್ನು ಒಟ್ಟಿಗೆ ಸೇರಿಸಿ ಮತ್ತು ನಿಮ್ಮ ಕಣ್ಣುಗಳನ್ನು ಮುಚ್ಚಿ.

ಕ್ಷಾಮ ಯಜ್ಞವನ್ನು ಮಾಡಿ, ಅಂದರೆ ಪೂಜೆಯ ಸಮಯದಲ್ಲಿ ಮಾಡಿದ ನಿಮ್ಮ ಪಾಪಗಳು ಮತ್ತು ತಪ್ಪುಗಳಿಗೆ ಕ್ಷಮೆಯನ್ನು ಪಡೆಯಿರಿ.

 

                                                     Nagaraja depicted by Parijatha Flowers

 

ಸರ್ಪ ದೇವರ ಆಶೀರ್ವಾದವನ್ನು ಪಡೆಯಲು ಕೆಳಗಿನ ನಾಗ ಪಂಚಮಿ ಮಂತ್ರವನ್ನು ಪಠಿಸಿ-


ಓಂ ಭುಜಂಗೇಶಾಯ ವಿದ್ಮಹೇ,
ಸರ್ಪರಾಜಾಯ ಧೀಮಹಿ,
ತನ್ನೋ ನಾಗಃ ಪ್ರಚೋದಯಾತ್ 

 

 

                                                         Nagara Kallu under Banyan Tree

 

ನಾಗರ ಪಂಚಮಿ ಹಬ್ಬದಲ್ಲಿ ಪಠಿಸಲು ಕೆಲವು ಮುಖ್ಯ ಮಂತ್ರಗಳು ಈ ರೀತಿ ಇವೆ:


ಓಂ ನಾಗೇಂದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ ನಮಃ” ಮತ್ತು “ಸರ್ಪೇಭ್ಯೋ ಹರಿಭ್ಯಶ್ಚ ಭುಜಂಗೇಭ್ಯೋ ನಮೋ ನಮಃ” ಎಂಬ ಮಂತ್ರಗಳನ್ನು ಪಠಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ


                                                                            Pic -2

 

ಸರ್ವೇ ನಾಗಾಃ ಪ್ರಿಯಂತಾಂ ಮೇ ಯೇ ಕೇಚಿತ್ ಪೃಥ್ವಿತಲೇ|
ಯೇ ಚ ಹೇಳಿಮರೀಚಿಸ್ಥಾ ಯೇ ನ್ತರೇ ದಿವಿ ಸಂಸ್ಥಿತಾಃ||
ಈ ನದಿಶು ಮಹಾನಾಗ ಯೇ ಸರಸ್ವತಿಗಾಮಿನಃ|
ಯೇ ಚ ವಾಪಿತಡಾಗೇಷು ತೇಷು ಸರ್ವೇಷು ವೈ ನಮಃ||

ಈ ಮಂತ್ರದ ಅರ್ಥ: ಇಡೀ ಆಕಾಶ, ಭೂಮಿ, ಸ್ವರ್ಗ, ಸರೋವರಗಳು, ಕೊಳವೆಬಾವಿಗಳು, ಸೂರ್ಯನ ಕಿರಣಗಳು ಇತ್ಯಾದಿಗಳಲ್ಲಿ ನಾಗದೇವರು ಇರುವಲ್ಲೆಲ್ಲಾ ಅವರು ನಮ್ಮ ಎಲ್ಲಾ ದುಃಖಗಳನ್ನು ತೊಡೆದುಹಾಕುತ್ತಾರೆ ಹಾಗೂ ನಮಗೆ ಸಂತೋಷ ಮತ್ತು ಶಾಂತಿಯುತ ಜೀವನವನ್ನು ನೀಡುತ್ತಾರೆ. ಇದಕ್ಕಾಗಿ ನಾನು ನಾಗದೇವರಿಗೆ ನಮಸ್ಕರಿಸುತ್ತೇನೆ.


                                                                            Pic -3

 

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ|
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಳೀಯಂ ತಥಾ||
ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಂ|
ಸಾಯಂಕಾಲೇ ಪಠೇನಿತ್ಯಂ ಪ್ರಾತಃ ಕಾಲೇ ವಿಶೇಷತಃ|
ತಸ್ಮೈ ವಿಶಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್‌||

ಈ ಮಂತ್ರದ ಅರ್ಥ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಮಂತ್ರವನ್ನು ಜಪಿಸುವುದರಿಂದ, ವ್ಯಕ್ತಿಯು ವಿಷಕ್ಕೆ ಹೆದರುವ ಅವಶ್ಯಕತೆಯಿರುವುದಿಲ್ಲ ಮತ್ತು ನಾಲ್ಕು ದಿಕ್ಕುಗಳಿಂದಲೂ ಎಲ್ಲೆಡೆ ವಿಜಯವನ್ನು ಪಡೆಯುತ್ತಾನೆ ಎನ್ನುವ ಅರ್ಥವನ್ನು ಇದು ನೀಡುತ್ತದೆ.

 

                                                                            Pic -4
 

ಮಧ್ವ ಸಂಪ್ರದಾಯದಲ್ಲಿ ನಾಗರ ಪಂಚಮಿಯಂದು ಪಠಿಸಲು

ನಿರ್ದಿಷ್ಟವಾದ ಮಂತ್ರವಿದೆ.


ಅದು ಈ ರೀತಿ ಇದೆ:

"ಅನೇನ ಶ್ರೀ ನಾಗಾಂತರ್ಗತ ಭಾರತೀ ರಮಣ ಮುಖ್ಯಪ್ರಾಣಂತರ್ಗತ ಚತುರ್ಮೂರ್ತ್ಯಾದ್ಯನಂತ ಅವತಾರಾತ್ಮಕ ಜಯಪತಿ ಸಂಕರ್ಷಣ ಪ್ರೇರಣಾಯಾ ಜಯಪತಿ ಸಂಕರ್ಷಣ ಪ್ರೀಯತಂ ಪ್ರೀತೋ ವರದೋ ಭವತು."


ಈ ಮಂತ್ರದ ಅರ್ಥ: ಈ ಮಂತ್ರವನ್ನು ಪಠಿಸುವುದರಿಂದ ನಾಗರ ದೇವತೆಗಳು ಮತ್ತು ಶ್ರೀ ಹರಿಯು ಪ್ರಸನ್ನರಾಗುತ್ತಾರೆ ಎಂಬ ನಂಬಿಕೆಯಿದೆ.

 

-------------- Hari Om ------------ 




 

Monday, July 28, 2025

Nagara Chauthi & Panchami

 

ನಾಗರ ಚೌತಿ ಮತ್ತು ನಾಗರ ಪಂಚಮಿ ಆಚರಣೆ

 

                   

                    Naga Devathe
 

ಓಂ ಸರ್ಪರಾಜಾಯ ವಿದ್ಮಹೆ l
ನಾಗರಾಜಾ ದೀಮಹೇll
ತನ್ನೋ ಅನಂತ ಪ್ರಚೋದಯಾತ್l


ಈ ವರ್ಷ ಸೋಮವಾರ ನಾಗರ ಚೌತಿ, ಮಂಗಳವಾರ- ನಾಗರ ಪಂಚಮಿ ಅಥವಾ ಗರುಡ ಪಂಚಮಿ ಬಂದಿದೆ. ನಾಗರ ಪಂಚಮಿ ನಾಡಿಗೆ ದೊಡ್ಡದು” ಎಂಬಂತೆ ಈ ಹಬ್ಬವನ್ನು ಎಲ್ಲಾ ಜಾತಿ- ವರ್ಣ- ವರ್ಗ ಮತದವರು ಸರಳವಾಗಿಯಾದರೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ನಾಗನ ಹಬ್ಬ ಪ್ರತಿ ವರ್ಷ ಶ್ರಾವಣ ಮಾಸದ ಐದನೇ, ಪಂಚಮಿ ತಿಥಿ ದಿನ ಬರುತ್ತದೆ. ನಾಗದೇವರ ಆರಾಧನೆ ಮಾಡುವುದರಿಂದ ಸಕಲ ದೋಷಗಳು ಪರಿಹಾರ ವಾಗುತ್ತದೆ. ಸಂತಾನ ಭಾಗ್ಯ ಮತ್ತು ಮಕ್ಕಳ ಆರೋಗ್ಯ, ಕುಟುಂಬದ ಸೌಭಾಗ್ಯ ಸಂಪತ್ತು, ಶತ್ರು ನಾಶ, ವಂಶದ ಪೂರ್ವಜರಿಗೆ ಸರ್ಪ ದೋಷ ಅಥವಾ ಯಾವುದೇ ದೋಷ ಇದ್ದರೂ ನಾಗನ ಆರಾಧನೆಯಿಂದ ಮುಕ್ತಿ ದೊರೆಯುತ್ತದೆ.

ಏಕೆಂದರೆ ನಾಗ ದೇವತೆಗಳಿಗೆ ಕೋಪ ಹೆಚ್ಚು. ಆದರೆ ಅವರನ್ನು ನಂಬಿ ಪೂಜೆ ಮಾಡಿ ಪ್ರಾರ್ಥಿಸಿದರೆ ನಾಗದೇವ ಶಾಂತ ನಾದರೆ ಒಳ್ಳೆಯದಾಗುತ್ತದೆ ನಂಬಿಕೆ ಇದೆ. ಸೂರ್ಯದೇವನಂತೆ ಪ್ರತ್ಯಕ್ಷ ದೇವ ಎಂದರೆ ನಾಗ. ನಾಗನ ಬಗ್ಗೆ ಎಲ್ಲರಿಗೂ ಭಯ ಅವನ ಕೃಪೆಗೆ ಪಾತ್ರರಾಗಲು ಭಯ ಭಕ್ತಿಯಿಂದ ವ್ರತ ಪೂಜೆಗಳನ್ನು ಮಾಡುತ್ತಾರೆ. ಈ ಕಾರಣದಿಂದ ನಾಗಾರಾಧನೆ ಶ್ರೇಷ್ಠ ಹಾಗೂ ಪವಿತ್ರವಾದದ್ದು.

ನಾಗರ ಚೌತಿ:- ಶ್ರಾವಣ ಶುದ್ಧ 4ನೇ ದಿನ ಬರುವುದು ನಾಗರ ಚೌತಿ. ಈ ದಿನ ಮನೆಯಿಂದ ಹೊರಗಡೆ ಇರುವ ಅಂದರೆ ನಾಗರಕಟ್ಟೆ, ದೇವಸ್ಥಾನಗಳ ಮುಂದೆ ಅರಳಿ ಮರದ ಕೆಳಗೆ ಇರುವ ನಾಗರ ಕಲ್ಲುಗಳಿಗೆ ಪೂಜಿಸುತ್ತಾರೆ, ಮುಂಜಾನೆ ಎದ್ದು ಸ್ನಾನ ಮಾಡಿ ಮಡಿ ಉಟ್ಟು ಪೂಜಾ ಸಾಮಗ್ರಿಗಳೊಂದಿಗೆ ಹೋಗಿ ಪೂಜೆ ಮಾಡುವುದು ಶ್ರೇಷ್ಠ. ( ನಾಗರಕಟ್ಟೆ ಅಥವಾ ದೇವಸ್ಥಾನಕ್ಕೆ ಹೋಗಲು ಎಲ್ಲರಿಗೂ ಆಗುವುದಿಲ್ಲ ಅವರು ಮನೆಯೊಳಗೆ ನಾಗಪ್ಪನ ವಿಗ್ರಹ ಇಟ್ಟುಕೊಂಡು ಮಾಡ ಬಹುದು. ಮಣ್ಣಿನಿಂದ ಮಾಡಿದರೆ ನೀರಿನಲ್ಲಿ ವಿಸರ್ಜಿಸಬೇಕು.

ಚೌತಿ ನಾಗಪ್ಪ”ನಿಗೆ ಮುಖ್ಯವಾಗಿ ಬೇಕಾಗಿರುವುದು ಹಸಿ ಪದಾರ್ಥಗಳು. ಶುದ್ಧವಾದ ಹಸಿ ಹಾಲು, ನೆನೆಸಿದ ಇಡಿ ಕಡಲೆ, ಮತ್ತು ಹಸಿ ತುಂಬಿಟ್ಟುಂಡೆ ಮತ್ತು ಚಿಗಳಿ ಉಂಡೆ (ನೆನೆಸಿದ ಅಕ್ಕಿ- ಬೆಲ್ಲ ಹಾಕಿ ಕುಟ್ಟಿ ಉಂಡೆ ಮಾಡಿದರೆ ತಂಬಿಟ್ಟು ಮತ್ತು ಎಳ್ಳು ಬೆಲ್ಲ ಕುಟ್ಟಿ ಚಿಕ್ಕ ಉಂಡೆ ಮಾಡಿದ ಚಿಗಳಿ ಇವು ನಾಗನಿಗೆ ಪ್ರಿಯ ಎಂದು ಅರ್ಪಸುತ್ತಾರೆ. ಕಬ್ಬಿನ ಹಾಲಿನಿಂ ಅಭಿಷೇಕ ಮಾಡುತ್ತಾರೆ. ನೈವೇದ್ಯಕ್ಕೆ ತೆಂಗಿನಕಾಯಿ- ಬಾಳೆಹ ಣ್ಣು. ಅರಿಶಿನ ಹಚ್ಚಿದ ಗೆಜ್ಜೆ ವಸ್ತ್ರ ಇರಬೇಕು ( ಹಳದಿಯ ಹೆಡೆಯ ಬಿಚ್ಚೋ ಬೇಗ) ಅಂದು ತಲೆಗೆ ಎರೆದುಕೊಂಡು ಪೂಜೆ ಮಾಡಬೇಕು ಮನೆಯ ಹಿರಿಯರೊಬ್ಬರು ಮಡಿಯಲ್ಲಿ ಪೂಜೆ ಮಾಡಿದಾಗ ಉಳಿದವರೆಲ್ಲ ನಾಗರ ಕಲ್ಲನ್ನು ಮುಟ್ಟದೆ ಸ್ವಲ್ಪ ದೂರ ನಿಂತು ಹಾಲು- ನೀರು ಹೂವಿನಿಂದ ಪ್ರೋಕ್ಷಣೆ ಮಾಡಬೇಕು

 

                                                                    Nagara Kallu

  

ಪೂಜೆಯ ಸಮಯದಲ್ಲಿ ತೋರು ಬೆರಳು ತೋರಿಸುವುದು, ಉಗುರು ಕಚ್ಚುವುದು
ತಲೆ ಕೂದಲು ಕೈಗೆ ಬಂದರೆ ಅಲ್ಲೇ ಹಾಕುವುದು, ಹಲ್ಲಿಗೆ ಏನಾದರೂ ಸಿಕ್ಕಿಕೊಂಡಿ ದ್ದರೆ ಪಿನ್ನಿನಿಂದ ತೋಡಿಕೊಳ್ಳುವುದು. ಇಂಥ ಅಚಾತುರ್ಯಗಳನ್ನು ಮಾಡದೆ ಕೈಮುಗಿದು ಭಕ್ತಿಯಿಂದ ನಿಂತು ಪೂಜೆ ನೋಡಬೇಕು. ಚೌತಿ ದಿನ ( ಸಾಮಾನ್ಯ ವಾಗಿ ಹಿರಿಯರು) ಊಟ ಮಾಡುವುದಿಲ್ಲ.

ಮಧ್ಯಾಹ್ನ ಮತ್ತು ಸಂಜೆ ಮುಸರೆಯ ಲ್ಲದ ಲಘು ಉಪಹಾರ ಸೇವಿಸುತ್ತಾರೆ. (ಉಪ್ಪಿಟ್ಟು- ಅವಲಕ್ಕಿ- ಅರಳು, ಹೆಸರು ಬೇಳೆ ಪಾಯಸ) ನಾಗಾರಾಧನೆಯ ಪ್ರಮುಖ ಉದ್ದೇಶ ಮಕ್ಕಳಿಗೆ ಬರುವ ಬಾಲ ಗ್ರಹ ಪೀಡೆ, ಭಯ, ಕಿರುಚಿ ಅಳುವುದು, ನಿದ್ದೆ ಮಾಡದೆ ರಗಳೆ ಮಾಡುವುದು ಇಂಥ ದೋಷ ಪರಿಹಾರವಾಗುತ್ತದೆ. ಮನೆಯಲ್ಲಿ ಸಂತಾನ, ಸಂಪತ್ತು, ಕಲ್ಯಾಣ ಆರೋಗ್ಯ ಭಾಗ್ಯ, ಗೋ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ. (ಈ ದಿನದ ಅಡುಗೆ ಯಲ್ಲಿ ಕರಿಯುವುದು -ಹುರಿಯುವುದು- ಕಾವಲಿ ಇಟ್ಟು ಸುಡುವುದು ಇವು ಮಾಡಬಾರದು.

ನಾಗಪ್ಪನಿಗೆ ತಂಪು ಇಷ್ಟ ಹೀಗೆ ಮಾಡಿದರೆ ನಾಗಪ್ಪನಿಗೆ ಶಾಖ ಜಾಸ್ತಿಯಾಗುತ್ತದೆ ಎಂದು ಮಾಡುವುದಿಲ್ಲ) ನಾಗಪ್ಪನನ್ನು ರಂಗೋಲಿಯಲ್ಲಿ ಅಥವಾ ಅರಿಶಿನದಲ್ಲಿ ಬರೆಯುವಾಗ ನಾಗನ ಮುಖ ಮನೆ ಒಳಗೆ ಬರುವಂತೆ ಬರೆದು ಪೂಜಿಸಬೇಕು ಒಳ್ಳೆಯದು.

 

                                                                     another Picture

  

ನಾಗರ ಪಂಚಮಿ ಅಥವ ಗರುಡ ಪಂಚಮಿ:

 

ನಾಗರ ಪಂಚಮಿ ಅತ್ಯಂತ ಸಂಭ್ರಮ ತುಂಬಿದ ನಾಡಿಗೆ ದೊಡ್ಡ ಹಬ್ಬ. ಮುಂಜಾನೆ ಎದ್ದು ಹೊಸ್ತಿಲು ತೊಳೆದು, ಮುಂಬಾಗಿನ ಮುಂದೆ ನೀರು ಹಾಕಿ, ರಂಗೋಲಿ ಬರೆಯ ಬೇಕು. ಹೊಸಿಲಿನ ಬಲ ಮತ್ತು ಎಡ ಬದಿ ನಾಗಪ್ಪನ ಚಿತ್ರ ಬರೆಯಬೇಕು. ಹೆಡೆ ಬಿಚ್ಚಿದ ದೊಡ್ಡ ನಾಗಪ್ಪ ಕೆಳಗೆ ಅಥವಾ ಪಕ್ಕದಲ್ಲಿ ಮರಿ ನಾಗನ ಬರೆಯಬೇಕು ನಾಲ್ಕಾರು ಮರಿಗಳನ್ನು ಬರೆದರೆ ಇನ್ನೂ ಒಳ್ಳೆಯದು. ರಂಗೋಲಿಯಲ್ಲಿ ಬರೆದ ನಾಗಪ್ಪನಿಗೆ ಅರಿಶಿನ ತುಂಬಿ, ಕಣ್ಣುಗಳು, ಸೀಳು ನಾಲಿಗೆ, ಮತ್ತು ಹೆಡೆಯ ಚಿತ್ರ ಮೂಡುವಂತೆ ಬರೆಯಬೇಕು. ತಲೆಗೆ ಸ್ನಾನ ಮಾಡುವಾಗ, ಎಣ್ಣೆ ಸೀಗೆ ಬಳಸು ವಂತಿಲ್ಲ. ಹಾಗಂತ ಬರೀ ತಲೆಯಲ್ಲಿ ಮಾಡಬಾರದು ಪುಟ್ಟಬಟ್ಟಲಲ್ಲಿ ಹಾಲುಬೆಲ್ಲ ಬೆರೆಸಿಟ್ಟು ಇದನ್ನು ಹೂವಿನಿಂದ ನೆತ್ತಿಗೆ ಶಾಸ್ತ್ರಕ್ಕೆ ಒತ್ತಿಕೊಂಡು ( ಸಾಮಾನ್ಯವಾಗಿ ಎರೆದು ಕೊಳ್ಳುವ ಹಬ್ಬಗಳಲ್ಲಿ ದೇವರ ಮುಂದೆ ದೀಪ ಹಚ್ಚಿ, ಕೆಳಗೆ ಚಿಕ್ಕದಾಗಿ ಹಸೆ ಬರೆದು ಎರಡು ಮಣೆ ಹಾಕಿ ಹೊಸ ಜಮಖಾನ, ಪಂಚೆ, ಶಲ್ಯ ಏನಾದರೂ ಹಾಸಿ ಅದರ ಮೇಲೆ ಇಬ್ಬರನ್ನು ಕೂರಿಸಿ ಎಣ್ಣೆ ಶಾಸ್ತ್ರ (ಹಾಲು ಬೆಲ್ಲ) ಮಾಡುತ್ತಾರೆ, ಅವರವರೇ ಕೈಯಿಂದ ಹಚ್ಚಿಕೊಳ್ಳುವಂತಿಲ್ಲ) ಮನೆಯಲ್ಲಿ ಎಲ್ಲರೂ ತಲೆಗೆ ಸ್ನಾನ ಮಾಡಬೇಕು.


ಪಂಚಮಿ ಮನೆಯ ಹಿಂಭಾಗದ ನಾಗರಕಟ್ಟೆಗೆ ಹೋಗಿ ಹಿರಿಯರು ಪೂಜೆ ಮಾಡುವುದನ್ನು ನೋಡಿ ನಂತರ ಹಾಲು ನೀರು ನಾಗಪ್ಪನ ಬೆನ್ನಿಗೆ ಬರುವಂತೆ ತನಿ ಎರೆಯ ಬೇಕು. “ಸುಬ್ಬಾ ಸುಬ್ಬಾ ಗೋವಿಂದ, ಸುಬ್ರಹ್ಮಣ್ಯ ಗೋವಿಂದ ಕುಕ್ಕೆ ಲಿಂಗ ಗೋವಿಂದ ಸುಬ್ರಹ್ಮಣ್ಯ ಗೋವಿಂದ, ಸುಬ್ರಹ್ಮಣ್ಯ ಗೋವಿಂದ,‌ಎಂದು ಮೂರು ಸಲ ಹೇಳಿ ಸಲ ತನಿ ಎರೆಯಬೇಕು.

 
ಅವರವರ ಮನೆ ಪದ್ಧತಿಯಂತೆ ನಮ್ಮ ಮನೆಗಳಲ್ಲಿ ಚೌತಿ ದಿನ ಹಸಿಯಾದ ಪದಾರ್ಥವಾದರೆ, ಪಂಚಮಿ ದಿನ ಬಿಸಿ ಅಂತ ಶಾಸ್ತ್ರ. ತೊಳೆದು ಒಣಗಿಸಿದ ಇಡೀ ಕಡಲೆ, ಅಕ್ಕಿ ನುಚ್ಚ ನ್ನು ಚೆನ್ನಾಗಿ ಹುರಿದು ಅರಳು ಸೇರಿಸಿ ಮಿಶ್ರ ಮಾಡಿ ಅಕ್ಷತೆಯಂತೆ ಸ್ವಲ್ಪ ತೆಗೆದು ಕೊಂಡು ನಾಗಪ್ಪನಿಗೆ ಮೇಲೆ ಮೂರು ಸಲ ಹಾಕಬೇಕು ಕೊನೆಯಲ್ಲಿ ಸುಬ್ರಹ್ಮಣ್ಯ ನಿನ್ನ ಬೆನ್ನು ತಣ್ಣಗಿರಲಿ ನಮ್ಮ ಕುಟುಂಬದ ರಕ್ಷಣೆಯನ್ನು ಮಾಡೋ ತಂದೆ ಎಂದು ಪ್ರಾರ್ಥಿಸಬೇಕು. ಮನೆಯ ಒಳಗೆ ದೇವರ ಮುಂಭಾಗದ ಲ್ಲಿ ಮತ್ತು ಮುಂಭಾಗಿಲು ಮುಂದೆ ಬರೆದ ನಾಗಪ್ಪಗಳಿಗೆ ಮೂರು ಸಲ ಹೂವಿ ನಿಂದ ಹಾಲು ಪ್ರೋಕ್ಷಿಸಿ ಹೂವು ಏರಿಸಿ ಹುರುಕಲು ಹಾಕಿ ಕೈ ಮುಗಿಯ ಬೇಕು. ( ಅಕ್ಷತೆ ಹಾಕಬಾರದು)

 
ನಾಗನ ಹಬ್ಬದಲ್ಲಿ ಕರಿದ- ಹುರಿದ ತಿಂಡಿ ಮಾಡುವುದಿಲ್ಲ. ಹಬೆಯಲ್ಲಿ ಬೇಯಿಸಿದ ಸಿಹಿ- ಕಾರ ಕಡುಬಿನಂತ ಪದಾರ್ಥ ಹೊಯ್ಗಡುಬು, ಕೊಟ್ಟೆ ಕಡುಬು, ಅರಿಶಿನೆಲೆ ಕಡುಬು, ಕಾಯಿ ಬೆಲ್ಲ ಮತ್ತು ಕಾಯಿ ಮೆಣಸಿನ ಕಾಯಿ ತುಂಬಿದ ಉಕ್ಕರಿಸಿದ ಕಡುಬು ಮಾಡುತ್ತಾರೆ. ಬಿಸಿ ತಂಬಿಟ್ಟು ಅಂದರೆ ಅಕ್ಕಿ ಪುಟಾಣಿ ಇವುಗಳನ್ನೆಲ್ಲ ಹುರಿದು ಪುಡಿ ಮಾಡಿದ ಹಿಟ್ಟಿಗೆ. ಒಣ ಕೊಬ್ಬರಿ ಕಡಲೆ ಬೀಜ ಸೇರಿಸಿ ಬೆಲ್ಲದ ಪಾಕ ಹಾಕಿ ಕಟ್ಟಿದ ಉಂಡೆ ಮಾಡುತ್ತಾರೆ. ಮಧ್ಯಾಹ್ನ ಊಟ ಮುಗಿಸಿ, ಸೂರ್ಯ ಇಳಿ ಮುಖವಾಗುವ 4: 30- 5:00 ಸಮಯಕ್ಕೆ, ಕೈ ಕಾಲು ಮುಖ ತೊಳೆದು ತಲೆ ಬಾಚಿ, ಹೂ ಮುಡಿದು, ಹೆಣ್ಣು ಮಕ್ಕಳು ಅಲಂಕಾರ ಮಾಡಿ ಮಾಡಿಕೊಂಡು, ದೇವರ ಮುಂದೆ ದೀಪ ಹಚ್ಚಿ ಅಣ್ಣ ತಮ್ಮಂದಿರನ್ನು ಕೂರಿಸಿ (ನಾಗಪ್ಪನಿಗೆ ಅಭಿಷೇಕ ಮಾಡಿದ ತೀರ್ಥದಿಂದ) ಸಹೋದರರ ಬೆನ್ನು ತೊಳೆಯ ಬೇಕು

 

ಮಳೆಗಾಲವಾಗಿ ನದಿಗಳು ತುಂಬಿ ಹರಿಯುತ್ತಿದ್ದು ತೀರ್ಥದ ನೀರು ತಣ್ಣಗೆ ಇರುತ್ತದೆ. ತೀರ್ಥವನ್ನು ಹೂವಿನಿಂದ ಅದ್ದಿ ಬೆನ್ನಿನ ಮಧ್ಯ ಹುರಿ ಭಾಗಕ್ಕೆ ಒದ್ದೆ ಮಾಡಬೇಕು.( ಕುಂಡನಿ ಶಕ್ತಿ ಇರುವ ಜಾಗ) “ಅಣ್ಣಾ ನಿನ್ನ ಬೆನ್ನು ತಣ್ಣಗಿರಲಿ ಎಂದು ಹೇಳಿ ಮೂರು ಸಲ ಮಾಡಿ ಹರಸ ಬೇಕು. ತಿನ್ನಲು ಸಿಹಿ ತಂಬಿಟ್ಟಿನ ಉಂಡೆ ಕೊಡ ಬೇಕು. ನಂತರ ಅಣ್ಣ ತಮ್ಮಂದಿರು, ಅಕ್ಕ ತಂಗಿಯನ್ನು ಕೂರಿಸಿ, ಅರಿಶಿಣ ಕುಂಕುಮ ಹೂವು ಕೊಟ್ಟು ಸೀರೆ ಬ್ಲೌಸ್ ಬಟ್ಟೆ ಡ್ರೆಸ್ ಏನಾದರೂ ಸರಿ ಉಡುಗೊರೆಗಳನ್ನು ಕೊಟ್ಟು ಗಂಡನ ಮನೆಯಲ್ಲಿ ನೂರು ಕಾಲ ಸುಖವಾಗಿರು ಎಂದು ಆಶೀರ್ವದಿಸಬೇಕು ಎಲ್ಲರೂ ತಂಬಿಟ್ಟಿನ ಸವಿ ಸವಿದು ಖುಷಿಯಿಂದ ಜೋಕಾಲಿ ಆಡಬೇಕು, ಅಂತ್ಯಾಕ್ಷರಿ, ಹಾಸ್ಯ, ಹಾಡು ಹರಟೆಗಳಲ್ಲಿ ಕಳೆದ ಸಮಯ ತಿಳಿಯುವುದೇ ಇಲ್ಲ.

ಕತ್ತಲಾಗುವ ಹೊತ್ತಿಗೆ ಮಧ್ಯಾಹ್ನ ಮಾಡಿದ ಪುಳಿಯೋಗರೆ, ಕಡಬು, ಪಾಯಸ, ಉಂಡೆಗಳನ್ನು ಸವಿಯುತ್ತ ನೆನಪುಗಳ ಮೇಲುಕಿನೊಂದಿಗೆ ಖುಷಿ ಖುಷಿಯಾಗಿ ಒಂದಾಗಿ ದಿನ ಕಳೆಯುವುದು “ನಾಗರ ಪಂಚಮಿ” ಹಬ್ಬದ ಸಡಗರ ಸಂಭ್ರಮ

 

                                                              Naga Mantra - Very Powerful

 

ನವ ನಾಗ ಸ್ತೋತ್ರ:-

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ
ಕಂಬಲಮ್ ಶಂಖಪಾಲಂ ಧಾರ್ತರಾಷ್ಟ್ರಂ
ತಕ್ಷಕಂ ಕಾಲಿಯಂ ತಥಾ ಏತಾನಿ ನವ
ನಾಮಾನಿ ನಾಗನಾಂ ಯ: ಪಟೇನ್ನರ: ತಸ್ಯ
ನಾಗಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್!

 

-------------- Hari Om ----------- 

 

 
 


                                                         




                                                       

Monday, July 14, 2025

Sankastahara Chaturthi

 

                                                                         Lord Ganesha

  

ಸಂಕಷ್ಟ ಚತುರ್ಥಿ ಎಂದರೇನು.? ಮಹತ್ವ ಮತ್ತು ಮಂತ್ರ ಹೀಗಿದೆ.


Sankastahara Chaturthi

ಒಂದು ಮಾಸದಲ್ಲಿ ಎರಡು ಚತುರ್ಥಿ ತಿಥಿಗಳಿರುತ್ತವೆ. ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟಹರ ಚತುರ್ಥೀ ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ 24 ಚತುರ್ಥಿಗಳು ಮತ್ತು ಪ್ರತಿ ಮೂರು ವರ್ಷಗಳ ನಂತರ ಅಧಿಕ ಮಾಸದಲ್ಲಿ 26 ಚತುರ್ಥಿಗಳು ಬರುತ್ತವೆ. ಪ್ರತಿ ಚತುರ್ಥಿಯ ಮಹಿಮೆ ಮತ್ತು ಪ್ರಾಮುಖ್ಯತೆ ವಿಭಿನ್ನವಾಗಿರುತ್ತದೆ. ಗಣೇಶನನ್ನು ಮೆಚ್ಚಿಸಲು ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. ಸಂಕಷ್ಟ ಚತುರ್ಥಿ ಎಂದರೇನು..? ಮತ್ತು ಅದರ ಮಹತ್ವವೇನು ಎಂಬುದನ್ನು ತಿಳಿಯೋಣ.

ಸಂಕಷ್ಟದ ಅರ್ಥ:


ಬಿಕ್ಕಟ್ಟನ್ನು ಸೋಲಿಸುವ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿ ಎಂದು ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಸಂಕಷ್ಟ ಎಂಬ ಪದದ ಅರ್ಥ ಕಷ್ಟದ ಸಮಯಗಳಿಂದ ಮುಕ್ತಿ ನೀಡುವುದು ಎಂಬುದಾಗಿದೆ. ಯಾವುದೇ ರೀತಿಯ ದುಃಖವಿದ್ದರೆ ಅದನ್ನು ಹೋಗಲಾಡಿಸಲು ಈ ಚತುರ್ಥಿಯಂದು ವಿಧಿವತ್ತಾಗಿ ಉಪವಾಸವಿದ್ದು ಗೌರಿಯ ಪುತ್ರನಾದ ಗಣೇಶನನ್ನು ಪೂಜಿಸಬೇಕು. ಈ ದಿನ ಜನರು ಸೂರ್ಯೋದಯದ ಸಮಯದಿಂದ ಚಂದ್ರನ ಉದಯದವರೆಗೆ ಉಪವಾಸ ಮಾಡುತ್ತಾರೆ.

ಸಂಕಷ್ಟ ಮತ್ತು ವಿನಾಯಕ ಚತುರ್ಥಿಯ ವ್ಯತ್ಯಾಸ:


ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಮತ್ತು ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಒಂದು ಚತುರ್ಥಿಯು ಹುಣ್ಣಿಮೆಯ ನಂತರ ಬಂದರೆ, ಇನ್ನೊಂದು ಚತುರ್ಥಿಯು ಅಮಾವಾಸ್ಯೆಯ ನಂತರ ಬರುತ್ತದೆ.

ಚತುರ್ಥಿ ತಿಥಿ:


ಚತುರ್ಥಿ ತಿಥಿಯ ಸಂದರ್ಭದಲ್ಲಿ ಶುಭ ಕಾರ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಚತುರ್ಥಿ ಗುರುವಾರ ಬಂದರೆ, ಸಾವು ಸಂಭವಿಸುತ್ತದೆ ಮತ್ತು ಚತುರ್ಥಿ ತಿಥಿಯು ಶನಿವಾರ ಬಂದರೆ ಅಂತಹ ಪರಿಸ್ಥಿತಿಯಲ್ಲಿ ಚತುರ್ಥಿಯು ಅನೇಕ ದೋಷಗಳನ್ನು ನಿವಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆಗ್ನೇಯ ದಿಕ್ಕನ್ನು ಚತುರ್ಥಿ ತಿಥಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಚತುರ್ಥಿಯ ದಿನ ಗಣೇಶನನ್ನು ಪೂಜಿಸುವಾಗ ಈ ದಿಕ್ಕಿನಲ್ಲಿ ಪೂಜೆಯನ್ನು ಮಾಡಬೇಕು.


                                                                         Pic - 1

 

ಸಂಕಷ್ಟಹರ ಚತುರ್ಥಿ ಮಂತ್ರ:

 
1. ಗಣೇಶ ಸ್ತುತಿ ಮಂತ್ರ :


''ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಬೂಫಲಚಾರೂ ಭಕ್ಷಣಂ|
ಉಮಾಸುತಂ ಶೋಕವಿನಾಶಕಾರಕಂ ನಮಾಮಿ ವಿಘ್ನೇಶ್ವರಪಾದಪಂಕಜಂ||''

2. ಶ್ರೀ ಗಣೇಶ ಗಾಯತ್ರಿ ಮಂತ್ರ :


''ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿಃ ಪ್ರಚೋದಯಾತ್‌''

3. ವಕ್ರತುಂಡ ಮಂತ್ರ :


''ವಕ್ರತುಂಡ ಮಹಾಕಾಯ, ಸೂರ್ಯ ಕೋಟಿ ಸಮಪ್ರಭಃ|
ನಿರ್ವಘ್ನಂ ಕುರೂ ಮೇ ದೇವ ಸರ್ವ ಕಾರ್ಯೇಷು ಸರ್ವದಾ||''

4. ಏಕದಂತ ಮಂತ್ರ :


''ಏಕದಂತಂ ಮಹಾಕಾಯಂ ಲಂಬೋದರ ಗಜಾನನಂ|
ವಿಘ್ನನಾಶಕರಂ ದೇವಂ ಹೇರಂಬಂ ಪ್ರಣಾಮ್ಯಹಂ||''

5. ಈ ಮಂತ್ರವನ್ನು ಪಠಿಸಿ :


ಸಂಕಷ್ಟಹರ ಚತುರ್ಥಿಯಂದು ಗಣೇಶನನ್ನು ಪೂಜಿಸಿದ ನಂತರ, 'ಓಂ ಗಂ ಗಣಪತಯೇ ವಿಘ್ನ ವಿನಾಶಿನೇ ಸ್ವಾಹಾ' ಎಂಬ ಮಂತ್ರವನ್ನು 108 ಬಾರಿ ಪಠಿಸಬೇಕು. ಇದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳು ಕೂಡ ನಿವಾರಣೆಯಾಗುತ್ತದೆ.


ಸಂಕಷ್ಟಹರ ಚತುರ್ಥಿಯ ದಿನದಂದು ದಿನವಿಡೀ ಉಪವಾಸವಿದ್ದು, ಗಣೇಶನನ್ನು ಪೂಜಿಸಲಾಗುತ್ತದೆ. ಸಂಕಷ್ಟಹರ ಚತುರ್ಥಿಯಂದು ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ ರೀತಿಯ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.

 

                                                                           Pic - 2

 

ಗಣೇಶನನ್ನು ಪೂಜಿಸುವುದರಿಂದ ವಿಘ್ನಗಳೆಲ್ಲಾ ದೂರವಾಗುತ್ತದೆ ಎಂಬ ನಂಬಿಕೆಯಿದೆ..!!

ಸಂಕಷ್ಟ ಚತುರ್ಥಿಯ ಮಹತ್ವ:


ಹಿಂದೂಗಳ ಪವಿತ್ರ ಆಚರಣೆ, ಇದು ಅಡೆತಡೆಗಳನ್ನು ನಿವಾರಿಸುವ ಗಣೇಶನ ಆರಾಧನೆಗೆ ಮೀಸಲಾದ ದಿನವಾಗಿದೆ. ಹಿಂದೂ ಪಂಚಾಂಗ ಪ್ರಕಾರ, ಈ ಮಂಗಳಕರ ದಿನವು ಪ್ರತಿ ತಿಂಗಳ ನಾಲ್ಕನೇ ದಿನ ಎರಡು ಬಾರಿ ಬರುತ್ತದೆ. ಕೃಷ್ಣ ಪಕ್ಷದಲ್ಲಿ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ , ಆದರೆ ಶುಕ್ಲ ಪಕ್ಷದಲ್ಲಿ ಒಂದನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಆದರೆ, ಸಂಕಷ್ಟಿ ಚತುರ್ಥಿಯು ಮಾಘ ಮಾಸದ ನಾಲ್ಕನೇ ದಿನದಂದು ಬರುತ್ತದೆ.



ಸಂಕಟ ಪದದ ಅರ್ಥ: ಸಮಸ್ಯೆಗಳು ಮತ್ತು 'ಹರ' ಎಂದರೆ ತೆಗೆದುಹಾಕುವುದು ಅಥವಾ ತಗ್ಗಿಸುವುದು. ಚತುರ್ಥಿ ಅಮಾವಾಸ್ಯೆ ಅಥವಾ ಹುಣ್ಣಿಮೆಯ ನಂತರದ 4 ನೇ ದಿನ. ಸಂಕಟಹರ ಚತುರ್ಥಿ ವಿಶೇಷವಾಗಿ ಒಬ್ಬರ ಸಮಸ್ಯೆಗಳನ್ನು ನಿವಾರಿಸುವ ದಿನವಾಗಿದೆ. ಈ ದಿನವನ್ನು ಸಂಕಷ್ಟ ಚತುರ್ಥಿ ಎಂದೂ ಕರೆಯುತ್ತಾರೆ. ಇದು ಪ್ರತಿ ತಿಂಗಳು ಚಂದ್ರನ ಕ್ಷೀಣಿಸುತ್ತಿರುವ ಹಂತವಾದ ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯ ದಿನದ ನಂತರ 4 ನೇ ಚಂದ್ರನ ದಿನದಂದು ಬರುತ್ತದೆ . ಅಡೆತಡೆಗಳ ನಿವಾರಕನಾದ ಗಣಪತಿಯನ್ನು ಕಷ್ಟಗಳ ನಿವಾರಣೆಗಾಗಿ ಪೂಜಿಸುವ ಮಂಗಳಕರ ದಿನವಿದು.ಪುರಾಣಗಳ ಪ್ರಕಾರ, ಗಣಪತಿ ಅಥವಾ ಗಣೇಶನನ್ನು ಶಿವ ಮತ್ತು ಪಾರ್ವತಿ ದೇವಿಯ ಮಗ ಎಂದು ಪರಿಗಣಿಸಲಾಗುತ್ತದೆ .


ಅವರು ಅಡೆತಡೆಗಳನ್ನು ಹೋಗಲಾಡಿಸುವವರು ಮತ್ತು ಯಶಸ್ಸಿನ ಮುಂಚೂಣಿಯಲ್ಲಿರುವವರು ಎಂದು ಶ್ಲಾಘಿಸುತ್ತಾರೆ ಮತ್ತು ಆದ್ದರಿಂದ, ಅವರು ಪ್ರೀತಿಸುತ್ತಾರೆ ಮತ್ತು ಪೂಜಿಸಲ್ಪಡುತ್ತಾರೆ. ಅವರು ಆನೆಯ ಮುಖವನ್ನು ಹೊಂದಿದ್ದಾರೆ, ಆದರೆ ಮಾನವ ತಲೆಯೊಂದಿಗೆ ಆದಿಸ್ವರೂಪವನ್ನು ಹೊಂದಿದ್ದಾರೆ. ಅವರು ಶಕ್ತಿಯ ನಾಯಕ, ಸಂತೋಷದ ನರ್ತಕಿ, ಸಿಹಿ ಮಗು ಮತ್ತು ಇನ್ನೂ ಅನೇಕ ಎಂದು ಆಚರಿಸಲಾಗುತ್ತದೆ. ಯಾವುದೇ ಪ್ರಯತ್ನವನ್ನು ಪ್ರಾರಂಭಿಸುವಾಗ ಅಥವಾ ಯಾವುದೇ ಉದ್ಯಮವನ್ನು ಕೈಗೊಳ್ಳುವಾಗ ಅವರ ಆಶೀರ್ವಾದವನ್ನು ಪಡೆಯುವುದು ಉತ್ತಮ ಪದ್ಧತಿ ಎಂದು ಪರಿಗಣಿಸಲಾಗಿದೆ.

 

                                                                            Pic -3 
 

ಸಂಕಟಹರ ಚತುರ್ಥಿಯ ಹಿಂದಿನ ಪುರಾಣ;


ದಂತಕಥೆಗಳ ಪ್ರಕಾರ, ಪಾರ್ವತಿ ದೇವಿಯು ಗಣಪತಿಯನ್ನು ಸೃಷ್ಟಿಸಿದಳು, ಅವಳು ಸ್ನಾನ ಮಾಡುವಾಗ ಬೆಂಗಾವಲಿನ ಅಗತ್ಯವನ್ನು ಅನುಭವಿಸಿದಳು. ಅವಳು ಶ್ರೀಗಂಧದ ಪೇಸ್ಟ್‌ನಿಂದ ಹುಡುಗನನ್ನು ಸೃಷ್ಟಿಸಿದಳು, ಹುಡುಗನಿಗೆ ಜೀವ ತುಂಬಿದಳು ಮತ್ತು ತನ್ನ ಆವರಣದೊಳಗೆ ಯಾರನ್ನೂ ಬಿಡಬೇಡಿ ಎಂದು ಕೇಳಿಕೊಂಡಳು. ಶಿವನು ದೇವಿಯನ್ನು ಭೇಟಿ ಮಾಡಲು ಬಂದಾಗ , ಚಿಕ್ಕ ಹುಡುಗನು ಪರಮಾತ್ಮನೇ ತನ್ನ ತಂದೆ ಎಂದು ತಿಳಿಯದೆ ಅವನನ್ನು ನಿರ್ಬಂಧಿಸಿದನು. ಅವರ ನಡುವೆ ಒಂದು ದೊಡ್ಡ ಯುದ್ಧವು ಪ್ರಾರಂಭವಾಯಿತು, ಇದರಲ್ಲಿ ಶಿವನು ಗಣೇಶನ ಶಿರಚ್ಛೇದ ಮಾಡಿದನು. ಪಾರ್ವತಿ ಹಿಂದಿರುಗಿದಾಗ, ತನ್ನ ಮಗ ಸತ್ತದ್ದನ್ನು ಕಂಡು ಆಘಾತಕ್ಕೊಳಗಾದಳು ಮತ್ತು ಕೋಪದಿಂದ ಭಯಾನಕ ರೂಪವನ್ನು ಪಡೆದಳು.


ಶಿವನು ತನ್ನ ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದನು, ಆನೆಯ ತಲೆಯನ್ನು ಬಾಲಕನ ದೇಹದ ಮೇಲೆ ಇರಿಸಿ ಅವನನ್ನು ಜೀವಂತಗೊಳಿಸಿದನು. ಈ ಘಟನೆ ಮತ್ತು ಗಣೇಶನನ್ನು 'ಗಣಗಳ ಅಧಿಪತಿ' ಮತ್ತು 'ಅಡೆತಡೆಗಳನ್ನು ನಿವಾರಿಸುವವನು' ಎಂದು ಕರೆಯುವ ಗೌರವ ಸಂಕಟಹರ ಚತುರ್ಥಿಯಂದು ಸಂಭವಿಸಿದೆ ಎಂದು ನಂಬಲಾಗಿದೆ.

ಸಂಕಟಹರ ಚತುರ್ಥಿಯ ಆಚರಣೆಗಳು;


ನಾಲ್ಕನೇ ಕ್ಷೀಣಿಸುತ್ತಿರುವ ಚಂದ್ರ ಆಧ್ಯಾತ್ಮಿಕ ಪ್ರಾಮುಖ್ಯತೆಯ ಸಂದರ್ಭವಾಗಿದ್ದು, ಲಭ್ಯವಿರುವ ಶಕ್ತಿಗಳು ಮಾಡಿದ ಯಾವುದೇ ಪೂಜೆಯ ಪರಿಣಾಮವನ್ನು ಗಣನೀಯವಾಗಿ ವರ್ಧಿಸುತ್ತದೆ. ಆದ್ದರಿಂದ, ಅಡೆತಡೆಗಳಿಂದ ಪರಿಣಾಮಕಾರಿ ಪರಿಹಾರವನ್ನು ಪಡೆಯಲು ಸಂಕಟಹರ ಚತುರ್ಥಿಯನ್ನು ಗಣೇಶನ ಪೂಜೆಗೆ ವಿಶೇಷವಾಗಿ ಆಯ್ಕೆ ಮಾಡಲಾಗುತ್ತದೆ. ಪ್ರಾಚೀನ ಗ್ರಂಥಗಳು ಸಹ ದಿನದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತವೆ, ಅದರ ಮಹತ್ವವನ್ನು ಎತ್ತಿ ತೋರಿಸುವ ಕಥೆಗಳನ್ನು ಹೇಳುತ್ತವೆ. ಜನರು ದೇವರಿಗೆ ಪ್ರಾರ್ಥನೆ ಸಲ್ಲಿಸಲು ದೇವಾಲಯಗಳಿಗೆ ಭೇಟಿ ನೀಡಿದರೆ, ಮಣ್ಣಿನಿಂದ ಮಾಡಿದ ಗಣಪತಿಯ ವಿಗ್ರಹಗಳನ್ನು ಸಹ ಮನೆಗಳಲ್ಲಿ ಸ್ಥಾಪಿಸಿ ಪೂಜಿಸಲಾಗುತ್ತದೆ.


ಸಂಕಟಹರ ಚತುರ್ಥಿ ಪೂಜೆಯು ಮುಖ್ಯವಾಗಿ ತೆಂಗಿನಕಾಯಿ ಒಡೆಯುವ ಸಮಾರಂಭವನ್ನು ಒಳಗೊಂಡಿದೆ . ಇದರಲ್ಲಿ, ದೊಡ್ಡ ಮತ್ತು ವಿಭಿನ್ನ ಸಂಖ್ಯೆಯ ತೆಂಗಿನಕಾಯಿಗಳನ್ನು ವಿಗ್ರಹದ ಮುಂದೆ ಕಲ್ಲು ಅಥವಾ ನೆಲದ ಮೇಲೆ ಒಡೆದು ಹಾಕಲಾಗುತ್ತದೆ ಅಥವಾ ಶಾಸ್ತ್ರೋಕ್ತ ಪೂಜೆಯ ಒಂದು ರೂಪವಾಗಿ ಆಯ್ದ ಸ್ಥಳಗಳು.


ಶಿವನು ಮೂರು ಕಣ್ಣುಗಳನ್ನು ಹೊಂದಿರುವಂತೆ, ಸೃಷ್ಟಿ, ಸಂರಕ್ಷಿಸುವ ಮತ್ತು ನಾಶಮಾಡುವ ಮೂರು ಮೂಲಭೂತ ಚಟುವಟಿಕೆಗಳನ್ನು ಸಂಕೇತಿಸುತ್ತದೆ, ತೆಂಗಿನಕಾಯಿಯೂ ಸಹ ಅಹಂ, ಭ್ರಮೆ ಮತ್ತು ಕರ್ಮವನ್ನು ಪ್ರತಿನಿಧಿಸುವ ಮೂರು ಕಣ್ಣುಗಳನ್ನು ಹೊಂದಿದೆ, ಅದು ಯಾವುದೇ ಅಡಚಣೆಗೆ ಆಧಾರವಾಗಿದೆ. ಮೂರು ಕಣ್ಣಿನ ತೆಂಗಿನಕಾಯಿಯನ್ನು ಒಡೆಯುವ ಮೂಲಕ, ನಾವು ಕರ್ಮದ ಪ್ರಭಾವಗಳನ್ನು ಅಳಿಸಿಹಾಕಬಹುದು, ಇದರಿಂದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ನಾವು ಭೌತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ತ್ವರಿತ ಪ್ರಗತಿಯನ್ನು ಸಾಧಿಸಬಹುದು.ಕೆಲವು ಭಕ್ತರು ಈ ದಿನ ಸಂಜೆ ಚಂದ್ರನ ದರ್ಶನವಾಗುವವರೆಗೆ ವ್ರತವನ್ನು ಆಚರಿಸುತ್ತಾರೆ ಮತ್ತು ಇದನ್ನು ಸಂಕಟಹರ ಚತುರ್ಥಿ ವ್ರತ ಎಂದು ಕರೆಯಲಾಗುತ್ತದೆ.

 

                                                                              Pic -4

 


ಸಂಕಷ್ಟ ಚತುರ್ಥಿಯ ಮಹತ್ವ:


ಗಣೇಶನನ್ನು ವಿಘ್ನ ನಿವಾರಕ ಎಂದ ಪೂಜಿಸಲಾಗುತ್ತದೆ. ಮತ್ತು ಪುರಾಣಗಳ ಪ್ರಕಾರ, ಸಂಕಷ್ಟಿಯ ದಿನದಂದು ಶಿವ ದೇವರು ತಮ್ಮ ಮಗನಾದ ಗಣಪತಿಯನ್ನು ವಿಷ್ಣು, ಲಕ್ಷ್ಮೀ ದೇವಿ, ಪಾರ್ವತಿ ದೇವಿ ಮತ್ತು ಶಿವ ಸೇರಿದಂತೆ ಎಲ್ಲಾ ದೇವರುಗಳಿಗಿಂತ ಅತ್ಯಂತ ಶ್ರೇಷ್ಠ ಎಂದು ಘೋಷಿಸಿದರು. ಗಣಪತಿಯನನು ಸಮೃದ್ಧಿ, ಬುದ್ಧಿವಂತಿಕೆ ಮತ್ತು ಅದೃಷ್ಟದ ದೇವರೆಂದು ಪೂಜಿಸಲಾಗುತ್ತದೆ. ಅಲ್ಲದೇ ಎಲ್ಲಾ ಶುಭ ಸಂದರ್ಭದಲ್ಲಿನ ಪ್ರಥಮ ಪೂಜೆಯನ್ನು ವಿಘ್ನ ನಿವಾರಕನಿಗೆ ಸಮರ್ಪಿಸಲಾಗಿದೆ. ಗಣೇಶನನ್ನು ಪೂಜಿಸುವುದರಿಂದ ವಿಘ್ನಗಳೆಲ್ಲಾ ದೂರವಾಗುತ್ತದೆ ಎಂಬ ನಂಬಿಕೆಯಿದೆ.

ಸಂಕಷ್ಟಿ ಚತುರ್ಥಿ ವ್ರತ;


ಭಕ್ತರು ಸೂರ್ಯೋದಯದಿಂದ ಚಂದ್ರೋದಯದವರೆಗೆ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ, ಚಂದ್ರನನ್ನು ನೋಡಿದ ನಂತರವೇ ಅದನ್ನು ಮುರಿಯುತ್ತಾರೆ. ಉಪವಾಸವು ಸಮರ್ಪಣೆ ಮತ್ತು ಸ್ವಯಂ-ಶಿಸ್ತಿನ ಸಂಕೇತವಾಗಿದೆ, ಇದು ಗಣೇಶನ ಆಶೀರ್ವಾದವನ್ನು ಪಡೆಯುವ ಭಕ್ತನ ಬದ್ಧತೆಯನ್ನು ಪ್ರದರ್ಶಿಸುತ್ತದೆ.

 

                                                                            Pic - 5

 

ಗಣಪತಿ ಪೂಜೆ:


ಕೆಂಪು ಹೂವುಗಳು ಮತ್ತು ದುರ್ವಾ ಹುಲ್ಲಿನಿಂದ ಅಲಂಕರಿಸಲ್ಪಟ್ಟ ಗಣೇಶನ ವಿಗ್ರಹದ ವಿಧ್ಯುಕ್ತ ಸ್ನಾನದೊಂದಿಗೆ ದಿನವು ಪ್ರಾರಂಭವಾಗುತ್ತದೆ . ಭಕ್ತರು ಇತರ ಸಾಂಪ್ರದಾಯಿಕ ಭಕ್ಷ್ಯಗಳೊಂದಿಗೆ ಅವರ ನೆಚ್ಚಿನ ಸಿಹಿಯಾದ ಮೋದಕವನ್ನು ನೀಡುತ್ತಾರೆ. ಆನೆಯ ತಲೆಯೊಂದಿಗೆ ದೇವರ ಆಶೀರ್ವಾದವನ್ನು ಕೋರಲು ವಿಶೇಷ ಪ್ರಾರ್ಥನೆಗಳು ಮತ್ತು ಸ್ತೋತ್ರಗಳನ್ನು ಪಠಿಸಲಾಗುತ್ತದೆ.


ಚಂದ್ರೋದಯ ಪೂಜೆ:


ಚಂದ್ರನನ್ನು ನೋಡಿದ ನಂತರ ಉಪವಾಸ ಮುಕ್ತಾಯವಾಗುತ್ತದೆ, ಸಾಮಾನ್ಯವಾಗಿ ಸೂರ್ಯಾಸ್ತದ ನಂತರ. ಭಕ್ತರು ಪ್ರಸಾದದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಉಪವಾಸವನ್ನು ಮುರಿಯುತ್ತಾರೆ, ಇದರಲ್ಲಿ ಹೆಚ್ಚಾಗಿ ಹಣ್ಣುಗಳು, ಕಾಯಿಗಳು ಮತ್ತು ಮೊದಲು ನೀಡಲಾದ ಮೋದಕವನ್ನು ಒಳಗೊಂಡಿರುತ್ತದೆ. ಚಂದ್ರನು ಧನಾತ್ಮಕ ಶಕ್ತಿಯ ಮೂಲವೆಂದು ನಂಬಲಾಗಿದೆ, ಮತ್ತು ಈ ದಿನದಂದು ಅದರ ವೀಕ್ಷಣೆಯನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ವ್ರತವನ್ನು ಆಚರಿಸುವ ಮೂಲಕ ಮತ್ತು ಆಚರಣೆಗಳಲ್ಲಿ ಭಾಗವಹಿಸುವ ಮೂಲಕ, ನೀವು ಗಣೇಶನ ಆಶೀರ್ವಾದವನ್ನು ಪಡೆಯುವುದು ಮಾತ್ರವಲ್ಲದೆ ಶಿಸ್ತು ಮತ್ತು ಭಕ್ತಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತೀರಿ. ಈ ದಿನದ ಆಧ್ಯಾತ್ಮಿಕ ಮಹತ್ವವು ಧಾರ್ಮಿಕ ಗಡಿಗಳನ್ನು ಮೀರಿದೆ, ಭರವಸೆಯ ಸಾರ್ವತ್ರಿಕ ಸಂದೇಶವನ್ನು ನೀಡುತ್ತದೆ, ಪರಿಶ್ರಮ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯ ವಿಜಯವನ್ನು ನೀಡುತ್ತದೆ.

ನೀವು ಈ ದೈವಿಕ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ಗಣೇಶನ ಆಶೀರ್ವಾದವು ನಿಮ್ಮ ಮಾರ್ಗವನ್ನು ಬೆಳಗಿಸಲಿ, ಸವಾಲುಗಳ ಮೂಲಕ ನಿಮ್ಮನ್ನು ಮಾರ್ಗದರ್ಶಿಸುತ್ತದೆ ಮತ್ತು ಸಂತೋಷ, ಯಶಸ್ಸು ಮತ್ತು ಆಧ್ಯಾತ್ಮಿಕ ನೆರವೇರಿಕೆಯ ಜೀವನಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಸಂಕಷ್ಟಿ ಚತುರ್ಥಿ ಕ್ಯಾಲೆಂಡರ್‌ನಲ್ಲಿ ಕೇವಲ ಒಂದು ದಿನವಲ್ಲ; ವಿಶ್ವವನ್ನು ರೂಪಿಸುವ ದೈವಿಕ ಶಕ್ತಿಗಳೊಂದಿಗೆ ನಿಮ್ಮನ್ನು ಸಂಪರ್ಕಿಸುವ, ಭೌತಿಕ ಪ್ರಪಂಚವನ್ನು ಮೀರಿದ ಪವಿತ್ರ ಪ್ರಯಾಣವನ್ನು ಪ್ರಾರಂಭಿಸಲು ಇದು ಒಂದು ಅವಕಾಶವಾಗಿದೆ.

------------- Hari Om ------------

 

 


 



Friday, July 11, 2025

Guru Bhakthi

 

ಗುರುಭಕ್ತಿ ------ Guru Bhakthi or Guru Devotion

 


                                    Guru Bhakthi

  

ಉಪದೇಶದಿಂದ ಭಗವಂತನ ಸಾಕ್ಷಾತ್ಕಾರಕ್ಕೆ ಗುರುವಿನ ಕೃಪೆ ಬೇಕು


ಒಂದಾನೊಂದು ಕಾಲದಲ್ಲಿ ಒಬ್ಬ ಒಳ್ಳೆಯ ಸಂಸ್ಕಾರವುಳ್ಳ ವ್ಯಕ್ತಿ ಇದ್ದನು. ಆತನು ಪ್ರತಿನಿತ್ಯವೂ ಎಲ್ಲಾದರೂ ಹೋಗಿ ಧರ್ಮೋಪದೇಶವನ್ನು ಕೇಳುತ್ತಿದ್ದನು. ಆತನು ಈ ಉಪದೇಶದಿಂದ ಭಗವಂತನ ಸಾಕ್ಷಾತ್ಕಾರಕ್ಕೆ ಗುರುವಿನ ಕೃಪೆ ಬೇಕು ಎಂಬುದನ್ನು ತಿಳಿದುಕೊಂಡನು. ಇದನ್ನು ತಿಳಿದುಕೊಂಡಾಗಿನಿಂದ ತನಗೆ ಸೂಕ್ತ ಸಲಹೆ ಸಾಧನೆಯ ಮಾರ್ಗ ತೋರಿಸುವ ಒಬ್ಬ ಒಳ್ಳೆಯ ಗುರುವಿಗಾಗಿ ಹುಡುಕತೊಡಗಿದ. ಅವನು ಹುಡುಕಿದ ಗುರುಗಳಲ್ಲೆಲ್ಲ ಒಂದಲ್ಲ ಒಂದು ನ್ಯೂನ್ಯತೆಗಳು ಅವನಿಗೆ ಕಾಣುತ್ತಿತ್ತು. ಇದಕ್ಕೆ ಕಾರಣ ಅವನು ಬೇರೊಬ್ಬರ ತಪ್ಪುಗಳನ್ನು ಕಂಡು ಹಿಡಿಯುವುದರಲ್ಲಿ ಅವನ ಜಾಣತನವನ್ನು ಬಳಸುತ್ತಿದ್ದನು. ಆದುದರಿಂದ ಅವನಿಗೆ ಯಾವ ಗುರುವು ಸಿಗುತ್ತಿರಲಿಲ್ಲ.


ಆತನು ತನ್ನನ್ನು ತಾನೇ ಬುದ್ದಿವಂತ- ಮಹಾಜ್ಞಾನಿ ಎಂದು ತಿಳಿದುಕೊಂಡಿದ್ದನು. ಮಗುವಿನಂಥ ಮುಗ್ಧ ಮನಸ್ಸು ಇದ್ದರೆ ಭಗವಂತನು ಒಲಿಯುತ್ತಾನೆ ಎಂಬ ಅರಿವು ಆತನಿಗೆ ಇರಲಿಲ್ಲ.ಇದನ್ನೇ ಯೋಚಿಸುತ್ತಾ ಮನೆಯಲ್ಲಿ ಕುಳಿತಿರುವಾಗ ಆತನ ಪತ್ನಿಯೂ ನಿಮ್ಮ ಬೇಸರ ದುಃಖಗಳಿಗೆ ಕಾರಣವೇನು ಎಂದು ಕೇಳಿದಳು. ಕುಳಿತಿರುವಾಗ ಆತನ ಪತ್ನಿಯೂ ನಿಮ್ಮ ಬೇಸರ ದುಃಖಗಳಿಗೆ ಕಾರಣವೇನು ಎಂದು ಕೇಳಿದಳು. ಅದಕ್ಕೆ ಉತ್ತರವಾಗಿ ಆತನು ನನಗೆ ಆತ್ಮಸಾಕ್ಷಾತ್ಕಾರ ಪಡೆದುಕೊಳ್ಳಲು ಒಬ್ಬ ಗುರುವು ಬೇಕಾಗಿದ್ದಾನೆ. ಅಂತಹ ಗುರುವು ಇದುವರೆಗೂ ನನಗೆ ಸಿಗಲಿಲ್ಲ ಎಂದನು.


ಆತನ ಹೆಂಡತಿಯು ತುಂಬಾ ಜಾಣೆ ಒಂದು ಸೂಕ್ತ ದಾರಿಯನ್ನು ಹೇಳಿದಳು. ನೀವು ರಾತ್ರಿ ಕಾಡಿಗೆ ಹೋಗಿ ಕುಳಿತುಕೊಂಡಿರಿ. ಮೊದಲು ನಿಮ್ಮ ಕಣ್ಣಿಗೆ ಯಾವ ವ್ಯಕ್ತಿ ಕಾಣುತ್ತಾನೋ ಆತನನ್ನೇ ಗುರುವೆಂದು ಸ್ವೀಕರಿಸಿ ಎಂದಳು.ಮಾರನೆಯ ದಿನ ಇಬ್ಬರು ಕಾಡಿಗೆ ಹೋಗಿ ಒಂದು ಜಾಗದಲ್ಲಿ ಕುಳಿತುಕೊಂಡರು. ಆಗ ಅಲ್ಲಿಗೆ ದರೋಡೆ ಮಾಡಿಕೊಂಡು ಒಬ್ಬ ಕಳ್ಳನು ಬರುತ್ತಿದ್ದನು. ಗಂಡ-ಹೆಂಡತಿ ಇಬ್ಬರೂ ಹೋಗಿ ಆತನ ಪಾದಗಳನ್ನು ಗಟ್ಟಿಯಾಗಿ ಹಿಡಿದು ಇನ್ನು ಮುಂದೆ ನೀವು ನಮ್ಮ ಗುರುಗಳು ಎಂದರು. ನಮಗೆ ಗುರು ಮಂತ್ರವನ್ನು ಉಪದೇಶಿಸಿ ಎಂದು ಬೇಡಿಕೊಂಡರು. ಕಳ್ಳನು ಕ್ಷಣ ಗಾಬರಿಯಾದನು. ಆದರೆ ಆ ದಂಪತಿಗಳು ಅವನ ಮುಂದೆ ತಮ್ಮ ಕಥೆಯನ್ನೆಲ್ಲ ಹೇಳಿಕೊಂಡರು


                                                               Guru Raghavendra Swamy

 

ಕಳ್ಳನಿಗೂ ಮನಸ್ಸು ಕರಗಿ ತಾನು ಒಬ್ಬ ಕಳ್ಳನೆಂದು ಹೇಳಿದ. ಆದರೆ ಆ ಗಂಡ-ಹೆಂಡತಿ ಮಾತ್ರ ನೀನೇ ನಮಗೆ ಉಪದೇಶ ಮಾಡಬೇಕು ಎಂದು ಹಠ ಹಿಡಿದರು. ಕಳ್ಳನಿಗೆ ಅಲ್ಲಿಂದ ತಪ್ಪಿಸಿಕೊಂಡರೆ ಸಾಕಾಗಿತ್ತು. ಆತ ಒಂದು ಉಪಾಯ ಮಾಡಿದ. ನಾನು ಉಪ ದೇಶ ಮಾಡುತ್ತೇನೆ ನೀವು ತಲೆಬಾಗಿ ಕಣ್ಣು, ಕಿವಿ ಮುಚ್ಚಿಕೊಂಡು ಕುಳಿತಿರಬೇಕು ನಾನು ನಿಂತುಕೊಳ್ಳಿ ಎಂದು ಹೇಳುವವರೆಗೂ ಅದೇ ರೀತಿ ಕುಳಿತಿರಬೇಕು ಎಂದು ಹೇಳಿದನು.

 

ಅವರಿಬ್ಬರೂ ಆ ಕಳ್ಳನ ಮಾತಿನಂತೆ ತಲೆಬಗ್ಗಿಸಿ ಮಂಡಿಯೂರಿ ಕುಳಿತುಕೊಂಡರು. ಇಡೀ ದಿನ, ಮರುದಿನದವರೆಗೂ ಒಂದು ತೊಟ್ಟು ನೀರನ್ನಾಗಲೀ, ಆಹಾರವನ್ನಾಗಲಿ ಸೇವಿಸಲಿಲ್ಲ. ಕಳ್ಳನು ರಾಜ ಭಟರ ಕೈಗೆ ಸಿಕ್ಕನು. ಅವನನ್ನು. ಸೆರೆಯಲ್ಲಿಟ್ಟರು.ಭೂಲೋಕದಲ್ಲಿ ನಡೆಯುತ್ತಿರುವ ಈ ವಿಚಿತ್ರ ಸನ್ನಿವೇಶವನ್ನು ಮಹಾವಿಷ್ಣು ಮತ್ತು ಲಕ್ಷ್ಮಿ ಗಮನಿಸುತ್ತಿದ್ದು ಆ ಗಂಡ ಹೆಂಡತಿಯರ ಭಕ್ತಿಗೆ ಮೆಚ್ಚಿದರು.

 

ಆಗ ಲಕ್ಷ್ಮಿಯು "ಪಾಪ ಅವರಿಗೆ ಹೋಗಿ ದರ್ಶನ ಕೊಡಿ" ಎಂದು ವಿಷ್ಣುವಿನಲ್ಲಿ ಹೇಳಿದಳು. ವಿಷ್ಣು ಆ ದಂಪತಿಗಳ ಎದುರಿಗೆ ಪ್ರತ್ಯಕ್ಷನಾಗಿ ನಿಂತನು. ಗಂಡ ಹೆಂಡತಿಗೆ ಅಂತರಂಗದಿಂದ ವಿಷ್ಣುವಿನ ದರ್ಶನವಾದದ್ದು ತಿಳಿಯಿತು. ಮನಸ್ಸಿನಲ್ಲಿ ಸಂತೋಷಗೊಂಡರು. ಆದರೆ ಎದ್ದುನಿಂತು ಕೊಳ್ಳಲಿಲ್ಲ, ಕಣ್ಣನ್ನು ತೆರೆದು ನೋಡಲಿಲ್ಲ. ಇದನ್ನು ಗಮನಿಸಿದ ವಿಷ್ಣು ಎದ್ದು ನಿಲ್ಲುವಂತೆ ಹೇಳಿದ. ಆದರೆ ಅವರಿಬ್ಬರು ನಾವು ನಮ್ಮ ಗುರುಗಳ ಅಪ್ಪಣೆ ಇಲ್ಲದೆ ಏಳುವುದಿಲ್ಲ ಎಂದರು.ಈಗ ವಿಷ್ಣು ಆ ದೇಶದ ರಾಜನ ಕನಸಿನಲ್ಲಿ ಬಂದು ಆ ಕಳ್ಳನನ್ನು ಜೈಲಿನಿಂದ ಬಿಡುಗಡೆ ಮಾಡು ಎಂದು ಅಜ್ಞೆ ಮಾಡಿದನು. ರಾಜನು ಮೊದಮೊದಲು ಭ್ರಮೆ ಎಂದುಕೊಂಡನು. ಆದರೆ ಪದೇಪದೇ ಅದೇ ಕನಸು ಬೀಳಲು ಕಳ್ಳನನ್ನು ತಕ್ಷಣ ಬಿಡುಗಡೆ ಮಾಡಲು ಹೇಳಿದನು

 

                                                                             Pic -1

 
 

ಅದೇ ದಿನ ರಾತ್ರಿ ಕಳ್ಳನ ಕನಸಿನಲ್ಲೂ ವಿಷ್ಣು ಬಂದು ಆ ದಂಪತಿಗಳು ಇರುವ ಜಾಗಕ್ಕೆ ಹೋಗಿ ಅವರನ್ನು ಏಳಬೇಕೆಂದು ಹೇಳು ಎಂದು ಆಜ್ಞೆ ಮಾಡಿದನು. ಕಳ್ಳನು ಜೈಲಿನಿಂದ ಬಿಡುಗಡೆಯಾಗುತ್ತಲೇ ಹೆದರಿ ಕಾಡಿಗೆ ಓಡಿಹೋಗಿ ಆ ದಂಪತಿಗಳ ಕೈಹಿಡಿದು ಮೇಲೆಬ್ಬಿಸಿ ಕಣ್ಣು ಬಿಡುವಂತೆ ಬೇಡಿಕೊಂಡನು.


ಆನಂದದಿಂದ ಆ ದಂಪತಿಗಳು ಕಣ್ಣು ತೆರೆದರು. ಮೇಲಕ್ಕೆದ್ದು ಆತನಿಗೆ ವಂದಿಸುತ್ತ ಗುರುಗಳೆ ನಿಮ್ಮ ದಯದಿಂದ ನಮಗೆ ಭಗವಂತನು ಪ್ರತ್ಯಕ್ಷ ದರ್ಶನ ಕೊಟ್ಟನು ಎಂದು ಆತನಿಗೆ ಹೇಳಿದರು. ಕಳ್ಳನು ಕೂಡ ತನಗೆ ಬಿದ್ದ ಕನಸು, ಸೆರೆಮನೆಯಲ್ಲಿ ಇದ್ದುದು, ಬಿಡುಗಡೆಯಾದುದು ಎಲ್ಲವನ್ನು ಹೇಳಿದನು.


ಆಗ ಆಕಾಶವಾಣಿಯೊಂದು "ಭಕ್ತರೇ ನೀವು ನಿಮ್ಮ ಗುರುವಿನಲ್ಲಿ ಇರಿಸಿರುವ ಅನನ್ಯ ಭಕ್ತಿಗಾಗಿ ನಾನು ಸಂತುಷ್ಟನಾಗಿದ್ದೇನೆ. ಭಜನೆ ಮತ್ತು ಧ್ಯಾನವನ್ನು ಮಾಡುತ್ತೀರಿ. ಅತಿ ಶೀಘ್ರದಲ್ಲಿಯೇ ನಾನು ನಿಮಗೆ ಮತ್ತೆ ದರ್ಶನವಿತ್ತು ನಿಮ್ಮನ್ನು ಹುಟ್ಟು-ಸಾವಿನ ಬಂಧನದಿಂದ ಬಿಡುಗಡೆ ಮಾಡಿ ಮುಕ್ತಿಯನ್ನು ಕೊಡುತ್ತೇನೆ" ಎಂದು ನುಡಿಯಿತು.ಅಂದಿನಿಂದ ಕಳ್ಳನು ಕಳ್ಳತನವನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯುತ್ತ ವಿಷ್ಣುವಿನ ಭಕ್ತನಾದನು.


ಆ ದಂಪತಿಗಳು ಕೂಡ ಭಗವಂತನ ಭಜನೆ, ಚಿಂತನೆಗಳನ್ನು ಮಾಡುತ್ತಾ ಜೀವನ ಮುಕ್ತರಾಗಿ ಗುರು ಭಕ್ತಿಯಿಂದದೈವ ಸಾಕ್ಷಾತ್ಕಾರವನ್ನು ಹೊಂದಿದರು.

 

                                                                         Pic -2

ಗುರುಸ್ಥಾನವು" - ಅಲೌಕಿಕ ಶಕ್ತಿಗಳ ಅಪೂರ್ವ ಸಂಗಮ..!

1. "ಗುರು" ಎಂಬ ಪದವನ್ನು "ಅಪ್ರಮೇಯ", "ಅಗಣಿತ ಯೋಗ ಶಕ್ತಿ", "ಇಚ್ಛಾಶಕ್ತಿ", "ಜ್ಞಾನ ಶಕ್ತಿ" ಅಥವಾ "ಕ್ರಿಯಾಶೀಲ ಶಕ್ತಿ"ಗಳೆಂದು ವ್ಯಾಖ್ಯಾನಿಸಬಹುದು



2. ಆಧ್ಯಾತ್ಮಿಕ ದೃಷ್ಟಿಯಲ್ಲಿ ನೋಡಿದರೆ, "ಕತ್ತಲಿನ ಕೋಣೆಯಿಂದ ಬೆಳಕಿನ ಕೋಣೆಯಡಿ ಕರೆದೊಯ್ಯುವ ಅಥವಾ ಅರಿಷಡ್ವರ್ಗಗಳಿಗೆ ಮತ್ತು ನಾನಾ ಮೋಹಗಳಿಗೆ ಬಲಿಯಾಗದೇ ಸರಿಯಾದ ಮಾರ್ಗದರ್ಶನ ನೀಡುವವನನ್ನು ಗುರು ಎಂದು ಸಂಬೋಧಿಸಲಾಗುತ್ತದೆ". 



3. ಇಂತಹ ಮಾರ್ಗದರ್ಶಕರು ತನ್ನ ಬದುಕಿನಲ್ಲಿನ ಹೊಗಳಿಕೆಗಳಿಗೆ ಏರದೇ ಅಥವಾ ತೆಗಳಿಕೆಗಳಿಗೆ ಕುಗ್ಗದೇ ಬದುಕನ್ನು ಸಮಾನವಾಗಿ ಸ್ವೀಕರಿಸುವರು



4. "ಗುರು" ಎಂದರೆ, "ಅದೊಂದು ವಸ್ತುವಲ್ಲ". "ಯಾರೋ ಕೊಡುವ ಪದವಿಯೂ ಅಥವಾ ಸ್ಥಾನವೂ ಅಲ್ಲ". ಬದಲಾಗಿ "ಅದೊಂದು ಅಲೌಕಿಕ ಶಕ್ತಿಗಳ ಅಪೂರ್ವ ಸಂಗಮ". ಅಂದರೆ, "ಪ್ರಪಂಚದಾಚೆಗಿನ ಪರಮಾತ್ಮನೊಳಗಿನ ಜ್ಞಾನದ ಆನಂದ ಹುಡುಕುವಿಕೆ".


5. ಸಾಮಾನ್ಯವಾಗಿ "ಗುರು" ಎಂದು ಕರೆಯಲ್ಪಡುವಾತನು "ಮುಕ್ತಿಯ ಬಗೆಗಿನ ಪರಿಕಲ್ಪನೆ" ಹೊಂದಿರಬೇಕು. ಮಾತ್ರವಲ್ಲ, ಆಧ್ಯಾತ್ಮಿಕ, ಧಾರ್ಮಿಕ, ಸತ್ಸಂಗಗಳೊಳಗಿನ ಆದಷ್ಟು ವಿಚಾರಗಳನ್ನು ಸರಿಕಟ್ಟಾಗಿ ಅರಿತಿರಲು ಪ್ರಯತ್ನಿಸಬೇಕು



6. ಯಾವುದೇ ಅಹಂಕಾರವಿಲ್ಲದೇ ಜಗತ್ತಿನ ಸದುದ್ದೇಶದ ದೃಷ್ಟಿಯನ್ನಿಟ್ಟುಕೊಂಡು ತನ್ನೊಳಗಿನ ಜ್ಞಾನಶಕ್ತಿಯನ್ನು ಅನಾವರಣಗೊಳಿಸಲು ಮುಂದಾಗಬೇಕು. ಇಂತಹ ಗುರುಗಳು ಸರ್ವಶಕ್ತನೆಂದು ಭಾವಿಸಿರುವ ಮಾನವನಿಗಿಂತಲೂ ಬಲಾಢ್ಯನಾದ ಅತೀಂದ್ರೀಯ ಶಕ್ತಿಯನ್ನು ಹೊಂದಿರುವ ಇಡೀ ಬ್ರಹ್ಮಾಂಡದೊಳಗಿನ ಪರಮಾತ್ಮನ ಸಕಲ ಜ್ಞಾನವೆನಿಸಿದ ನಿರಾಕಾರ ತತ್ವದ ಮೂಲಗಳನ್ನು ಹಾಗೂ ಭಕ್ತಿ ಮಾರ್ಗದೊಳಗಿನ ಶಕ್ತಿಯನ್ನು ಪಡೆಯಲು ಮುಂದಾಗುವರು.


ಶ್ರೀಕೃಷ್ಣಾರ್ಪಣಮಸ್ತು.


------------------ Hari Om ------------------