Thursday, June 29, 2023

DevaShayani -- Ekadasi

 DevaShayani -- Ekadasi 

                                                                 Lord Vishnu

 

ದೇವಶಯನಿ ಏಕಾದಶಿ :


ಈ ಏಕಾದಶಿಯ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ಮಹತ್ವ..!

ಆಷಾಢ ಶುಕ್ಲ ಏಕಾದಶಿಯಿಂದ, ಬ್ರಹ್ಮಾಂಡದ ಸೃಷ್ಟಿಕರ್ತನಾದ ಭಗವಾನ್ ವಿಷ್ಣುವಿನ ನಿದ್ರೆಯು ಪ್ರಾರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶಿಯಂದು, ಸೂರ್ಯನು ತುಲಾರಾಶಿಗೆ ಪ್ರವೇಶಿಸಿದಾಗ ಜನಾರ್ದನನು ಯೋಗನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಸುಮಾರು ನಾಲ್ಕು ತಿಂಗಳ ಈ ಮಧ್ಯಂತರವನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಗ್ರಂಥಗಳಲ್ಲಿ, ಈ ಏಕಾದಶಿಯನ್ನು ಪದ್ಮನಾಭ, ಆಷಾಢ ಏಕಾದಶಿ, ಹರಿಷ್ಯಯನಿ ಮತ್ತು ದೇವಶಯನಿ ಏಕಾದಶಿ ಎಂದೂ ಕರೆಯುತ್ತಾರೆ. ಇಂದಿನಿಂದ, ಎಲ್ಲಾ ಮಂಗಳಕರ ಕಾರ್ಯಗಳನ್ನು ನೀಡುವ ಭಗವಾನ್ ವಿಷ್ಣುವು ಭೂಮಿಯಿಂದ ಕಣ್ಮರೆಯಾಗುತ್ತಾನೆ ಎಂದು ನಂಬಲಾಗಿದೆ.

ದೇವಶಯನಿ ಏಕಾದಶಿಯ ಮಹತ್ವ:


ಪದ್ಮ ಪುರಾಣದ ಪ್ರಕಾರ, ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಹೀಗೆಂದು ಹೇಳಿದ್ದಾನೆ. ಓ ರಾಜನೇ..! ಹರಿ ಶಯನಿ ಏಕಾದಶಿಯ ದಿನದಂದು, ನನ್ನ ಒಂದು ರೂಪವು ರಾಜ ಬಲಿಯೊಂದಿಗೆ ಇರುತ್ತದೆ ಮತ್ತು ಇನ್ನೊಂದು ಮುಂದಿನ ಕಾರ್ತಿಕ ಏಕಾದಶಿ ಬರುವವರೆಗೆ ಕ್ಷೀರಸಾಗರದ ಶೇಷನಾಗನ ಹಾಸಿಗೆಯ ಮೇಲೆ ಇರುತ್ತದೆ, ಆದ್ದರಿಂದ ಇದು ಕಾರ್ತಿಕ ಏಕಾದಶಿಯವರೆಗಿನ ದಿನ, ನನ್ನನ್ನು ಸ್ಮರಿಸುತ್ತಾ ಧರ್ಮವನ್ನು ಆಚರಿಸುವವನು ತನ್ನ ಕೃಪೆಯನ್ನು ಪಡೆದುಕೊಳ್ಳುತ್ತಾನೆ. ದೇವಶಯನಿ ಏಕಾದಶಿಯ ರಾತ್ರಿ ಜಾಗರಣೆ ಮಾಡಿ ಶಂಖ, ಚಕ್ರ, ಗದೆ ಹಿಡಿದಿರುವ ಭಗವಾನ್ ವಿಷ್ಣುವನ್ನು ಪೂಜಿಸುವ ಭಕ್ತನ ಪುಣ್ಯವನ್ನು ಲೆಕ್ಕ ಹಾಕಲು ಚತುರ್ಮುಖ ಬ್ರಹ್ಮನಿಗೂ ಸಾಧ್ಯವಿಲ್ಲ. ಈ ದೇವಶಯನಿ ಏಕಾದಶಿಯ ದಿನ ದೀಪ ದಾನ ಮಾಡುವುದರಿಂದ ಶ್ರೀ ಹರಿಯ ಕೃಪೆ ಸಿಗುತ್ತದೆ.


ದೇವಶಯನಿ ಏಕಾದಶಿ ಪೂಜೆ ವಿಧಾನ:


ಏಕಾದಶಿ ತಿಥಿಯು ವಿಷ್ಣುವಿಗೆ ಅತ್ಯಂತ ಪ್ರಿಯವಾದುದಾಗಿದೆ, ಆದ್ದರಿಂದ ಈ ದಿನ ಮಂತ್ರಗಳ ಪಠಣ, ಪೂಜೆ ಮತ್ತು ಉಪವಾಸದಿಂದ ಜಗತ್ತನ್ನು ನಿಯಂತ್ರಿಸುವ ಭಗವಾನ್ ಹರಿಯ ಅನುಗ್ರಹವನ್ನು ಪಡೆಯಬಹುದು. ಈ ದಿನದಂದು ತುಳಸಿ ಮಂಜರಿ ಮತ್ತು ಹಳದಿ, ಶ್ರೀಗಂಧ, ಕುಂಕುಮ, ಅಕ್ಷತೆ, ಹಳದಿ ಹೂವುಗಳು, ಆಯಾ ಋತುವಿಗೆ ದೊರೆಯುವ ಹಣ್ಣುಗಳು ಮತ್ತು ಧೂಪ-ದೀಪಗಳು, ಸಕ್ಕರೆ ಮಿಠಾಯಿ ಇತ್ಯಾದಿಗಳೊಂದಿಗೆ ವಾಮನ ದೇವರನ್ನು ಭಕ್ತಿಯಿಂದ ಪೂಜಿಸಬೇಕು. ಪದ್ಮ ಪುರಾಣದ ಪ್ರಕಾರ, ದೇವಶಯನಿ ಏಕಾದಶಿಯ ದಿನದಂದು ಕಮಲದ ಹೂವುಗಳಿಂದ ವಿಷ್ಣುವನ್ನು ಪೂಜಿಸಿದರೆ ಮೂರು ಲೋಕಗಳ ದೇವತೆಗಳನ್ನು ಪೂಜಿಸಿದಂತೆ. ಈ ದಿನ ರಾತ್ರಿ ಸಮಯದಲ್ಲಿ ಭಗವಾನ್ ನಾರಾಯಣನ ಸಂತೋಷಕ್ಕಾಗಿ, ಜಾಗರಣೆಯನ್ನು, ನೃತ್ಯ, ಭಜನೆ-ಕೀರ್ತನೆ ಮತ್ತು ಸ್ತುತಿಗಳನ್ನು ಮಾಡಲಾಗುತ್ತದೆ. ಈ ದಿನದಂದು ಜಾಗರಣೆ ಮಾಡಿದವನಿಗೆ ಸಾವಿರಾರು ವರ್ಷ ತಪಸ್ಸು ಮಾಡಿದರೂ ಸಿಗದ ಫಲ ದೊರೆಯುತ್ತದೆ. ಈ ವ್ರತವನ್ನು ಆಚರಿಸುವುದರಿಂದ, ವ್ಯಕ್ತಿಯ ಜನ್ಮ ಜನ್ಮದ ಪಾಪಗಳು ದೂರಾಗುತ್ತದೆ ಮತ್ತು ಜನನ ಮತ್ತು ಮರಣದ ಚಕ್ರದಿಂದ ಒಬ್ಬನು ಮುಕ್ತಿಯನ್ನು ಪಡೆಯುತ್ತಾನೆ.

ದೇವಶಯನಿ ಏಕಾದಶಿ ಮಂತ್ರ:


ಈ ಮಂತ್ರವನ್ನು ಗೌರವದಿಂದ ಜಪಿಸಬೇಕು-


''ಸುಪ್ತೇ ತ್ವಯಿ ಜಗನ್ನಾಥ ಜಗತ್ ಸುಪ್ತಂ ಭವೇದಿದಂ|
ವಿಬುದ್ಧೇ ತ್ವಯಿ ಬುಧ್ಯೇತ್ ಜಗತ್ ಸರ್ವಂ ಚರಾಚರಂ|''

ದೇವಶಯನಿ ಏಕಾದಶಿ ಶುಭ ಮುಹೂರ್ತ:


ದೇವಶಯನಿ ಏಕಾದಶಿಯ ತಿಥಿ ಪ್ರಾರಂಭ ಜೂನ್ 28, ಬುಧವಾರ ರಾತ್ರಿ 03:18 ರಿಂದ
ದೇವಶಯನಿ ಏಕಾದಶಿಯ ತಿಥಿ ಪ್ರಾರಂಭ ಜೂನ್ 29, ಗುರುವಾರ ರಾತ್ರಿ 02:41 ರವರೆಗೆ ಇರುತ್ತದೆ.
ಜೂನ್ 29 ರಂದು ದೇವಶಯನಿ ಏಕಾದಶಿ ಉಪವಾಸವನ್ನು ಆಚರಿಸುವ ಜನರು ಮರುದಿನ ಜೂನ್ 30 ರ ಶುಕ್ರವಾರದಂದು ಬೆಳಿಗ್ಗೆ 08:20 ರಿಂದ 08:31 ರವರೆಗೆ ಪಾರಣವನ್ನು ಮಾಡಬಹುದು. ಈ ದಿನ ದ್ವಾದಶಿ ತಿಥಿ ರಾತ್ರಿ 01:16 ಕ್ಕೆ ಮುಕ್ತಾಯವಾಗಲಿದೆ.

ಆಷಾಢ ಮಾಸದ ಈ ಏಕಾದಶಿಯಿಂದ ಅಂದರೆ ದೇವಶಯನಿ ಅಥವಾ ಆಷಾಢ ಏಕಾದಶಿಯಿಂದ ಭಗವಾನ್‌ ವಿಷ್ಣು ಸೃಷ್ಟಿಯ ಸಂಪೂರ್ಣ ಜವಾಬ್ದಾರಿಯನ್ನು ಭಗವಾನ್ ಶಿವನಿಗೆ ಒಪ್ಪಿಸಿ ಯೋಗ ನಿದ್ರೆಗೆಂದು ನಾಲ್ಕು ತಿಂಗಳುಗಳ ಕಾಲ ತೆರಳುತ್ತಾನೆ. ದೇವಶಯನಿ ಏಕಾದಶಿಯಂದು ವಿಶ್ರಾಂತಿಗೆ ತೆರಳಿದ ವಿಷ್ಣು ದೇವುತ್ಥಾನ ಏಕಾದಶಿ ಅಥವಾ ಕಾರ್ತಿಕ ಏಕಾದಶಿಯಂದು ಎಚ್ಚರಗೊಂಡು ಮತ್ತೆ ಸೃಷ್ಟಿಯ ನಿರ್ವಹಣೆಯನ್ನು ತೆಗೆದುಕೊಳ್ಳುತ್ತಾನೆ.


------------ Hari Om ----------

 

 

ದೇವಶಯನಿ ಏಕಾದಶಿ : ಯಾವ ವಿಷ್ಣು ಮಂತ್ರಗಳನ್ನು ಪಠಿಸಬೇಕು..? ಪೂಜೆ 

ಹೀಗಿರಲಿ‌ ‌ ‌ ‌

ಆಷಾಢ ಮಾಸದಲ್ಲಿ ಎರಡು ಏಕಾದಶಿಗಳನ್ನು ಆಚರಿಸಲಾಗುತ್ತದೆ. ಒಂದು ಶುಕ್ಲ ಪಕ್ಷದಲ್ಲಿ ಮತ್ತು ಇನ್ನೊಂದು ಕೃಷ್ಣ ಪಕ್ಷದಲ್ಲಿ. ಆಷಾಢ ಶುಕ್ಲ ಪಕ್ಷದ ಏಕಾದಶಿಯನ್ನು ದೇವಶಯನಿ ಅಥವಾ ಹರಿಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿ ದೇವಶಯನಿ ಏಕಾದಶಿಯನ್ನು 2022 ರ ಜೂನ್ 29 ದಂದು ಗುರುವಾರ ಆಚರಿಸಲಾಗುತ್ತದೆ. ಈ ದಿನ ಭಗವಾನ್ ಶ್ರೀ ಹರಿವಿಷ್ಣು ಕ್ಷೀರಸಾಗರದಲ್ಲಿ ಯೋಗ ನಿದ್ರೆಗೆ ಹೋಗುತ್ತಾನೆ. ಈ ಶುಭ ಕಾರ್ಯದ ಸಮಯದಿಂದ ಮುಂದಿನ ನಾಲ್ಕು ತಿಂಗಳುಗಳವರೆಗೆ ಇದನ್ನು ಚಾತುರ್ಮಾಸ ಎಂದೂ ಕರೆಯುತ್ತಾರೆ.



ಶ್ರೀ ಹರಿವಿಷ್ಣುವಿಗೆ ವಿಶ್ರಾಂತಿಯನ್ನು ನೀಡಲು ಯಾವ ಮಂತ್ರವನ್ನು ಪಠಿಸಬೇಕು..?

 

''ಸುಪ್ತೇ ತ್ವಯಿ ಜಗನ್ನಾಥ ಜಮಸುಪ್ತಂ ಭವೇದಿದಮ್|
ವಿಬುದ್ದೇ ತ್ವಯಿ ಬುದ್ಧಂ ಚ ಜಗತ್ಸರ್ವ ಚರಾಚರಂ||''

 

- ಅಂದರೆ, ಓ ಕರ್ತನೇ, ನಿನ್ನ ಜಾಗೃತಿಯಿಂದ ಇಡೀ ಸೃಷ್ಟಿಯು ಎಚ್ಚರಗೊಳ್ಳುತ್ತದೆ ಮತ್ತು ನಿಮ್ಮ ನಿದ್ರೆಯಿಂದ ಇಡೀ ಸೃಷ್ಟಿ, ಚರಗಳು ಮತ್ತು ಸ್ಥಿರತೆಗಳು ನಿದ್ರಿಸುತ್ತವೆ. ನಿನ್ನ ಕೃಪೆಯಿಂದಲೇ ಈ ಸೃಷ್ಟಿಯು ನಿದ್ರಿಸುವುದು ಮತ್ತು ಎಚ್ಚರಗೊಳ್ಳುವುದು. ನಿನ್ನ ಕರುಣೆಯ ಆಶೀರ್ವಾದವು ಸದಾಕಾಲ ನಮ್ಮ ಮೇಲೆ ಇರುವಂತೆ ಮಾಡು ಎನ್ನುವುದಾಗಿದೆ.



ದೇವಶಯನಿ ಏಕಾದಶಿ ನಿಯಮಗಳು ಮತ್ತು ಪೂಜೆ ವಿಧಾನ:

 
ದೇವಶಯನಿ ಅಥವಾ ಹರಿಶಯನಿ ಏಕಾದಶಿಯ ದಿನದಂದು ಶ್ರೀ ವಿಷ್ಣುವನ್ನು ವಿಧಿ - ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ, ಆದ್ದರಿಂದ ವಿಷ್ಣುವಿನ ಕೃಪೆಯು ನಾಲ್ಕು ತಿಂಗಳವರೆಗೆ ಇರುತ್ತದೆ.



- ಇದಕ್ಕಾಗಿ ದೇವಶಯನಿ ಏಕಾದಶಿಯ ದಿನದಂದು ತಟ್ಟೆಯಲ್ಲಿ ಕೆಂಪು ಬಟ್ಟೆಯನ್ನು ಹಾಸಿ ವಿಷ್ಣುವಿನ ವಿಗ್ರಹ ಅಥವಾ ಚಿತ್ರವನ್ನು ಇಟ್ಟು ದೀಪವನ್ನು ಹಚ್ಚಿ. ಅವರಿಗೆ ಹಳದಿ ಬಟ್ಟೆಗಳನ್ನು ಅರ್ಪಿಸಿ. ಹಳದಿ ಬಣ್ಣದ ಭೋಗಗಳನ್ನು ನೈವೇದ್ಯವಾಗಿ ನೀಡಿ. ಭಗವಾನ್ ವಿಷ್ಣುವಿನ ಮಂತ್ರಗಳನ್ನು ಪಠಿಸಿ. ಯಾವುದೇ ಮಂತ್ರ ಬರದಿದ್ದರೆ, ಹರಿ ನಾಮವನ್ನು ನಿರಂತರವಾಗಿ ಜಪಿಸುತ್ತಾ ಇರಿ.



- ನೀವು ಶ್ರೀಹರಿ ಮಂತ್ರವನ್ನು ಜಪಿಸುತ್ತಿದ್ದರೆ, ತುಳಸಿ ಅಥವಾ ಶ್ರೀಗಂಧದ ಮಾಲೆಯನ್ನು ಹಿಡಿದು ಮಂತ್ರವನ್ನು ಜಪಿಸಿ.



- ಪೂಜೆಯ ಕೊನೆಯಲ್ಲಿ ಮರೆಯದೇ ದೇವರಿಗೆ ಅಂದರೆ ವಿಷ್ಣುವಿಗೆ ಆರತಿಯನ್ನು ಮಾಡಿ.



ಶ್ರೀಹರಿಯ ಈ ವಿಶೇಷ ಮಂತ್ರಗಳನ್ನು ಕೂಡ ಪಠಿಸಬಹುದು:

 
- ದೇವಶಯನಿ ಏಕಾದಶಿ ಸಂಕಲ್ಪ ಮಂತ್ರ:
''
ಸತ್ಯಸ್ಥಃ ಸತ್ಯಸಂಕಲ್ಪಃ ಸತ್ಯವಿತ್ ಸತ್ಯದಸ್ತಥಾ|

ಧರ್ಮಾ ಧರ್ಮಾ ಚ ಕರ್ಮೀ ಚ ಸರ್ವಕರ್ಮವಿವರ್ಜಿತಃ||
ಕರ್ಮಕರ್ತಾ ಚ ಕರ್ಮೈವ ಕ್ರಿಯಾ ಕಾರ್ಯಂ ತಥೈವ ಚ|
ಶ್ರೀ ಪತಿರ್ನೃಪತಿಃ ಶ್ರೀಮಾನ್ ಸರ್ವಸ್ಯಪತಿರೂರ್ಜಿತಃ||''



ವಿಷ್ಣುವನ್ನು ಮೆಚ್ಚಿಸಲು ಮಂತ್ರ:


''
ಸುಪ್ತೇ ತ್ವಯಿ ಜಗನ್ನಾಥ ಜಗತ್ ಸುಪ್ತಂ ಭವೇದಿದಂ|
ವಿಬುದ್ಧೇ ತ್ವಯಿ ಬುಧ್ಯೇತ್ ಜಗತ್ ಸರ್ವಂ ಚರಾಚರಂ|''

 

ಕ್ಷಮಾ ಮಂತ್ರ:


''ಭಕ್ತಸ್ತುತೋ ಭಕ್ತಪರಃ ಕೀರ್ತಿದಃ ಕೀರ್ತಿವರ್ಧನಃ|
ಕೀರ್ತಿರ್ದೀಪ್ತಿಃ ಕ್ಷಮಾಕಾಂತಿರ್ಭಕ್ತಶ್ಚೈವ ದಯಾ ಪರಾ||''



ದೇವಶಯನಿ ಏಕಾದಶಿ ದಿನದಂದು ಭಗವಾನ್‌ ವಿಷ್ಣುವನ್ನು ಹೀಗೆ ಪೂಜಿಸಿದರೆ ಶ್ರೀಹರಿಯ ಅನುಗ್ರಹ ಪಡೆಯುವಿರಿ. ನಾಲ್ಕು ತಿಂಗಳ ನಂತರ ವಿಷ್ಣುವು ಎಚ್ಚರಗೊಂಡಾಗ, ಇದನ್ನು ದೇವುತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ. ಏಕಾದಶಿಯಿಂದ ಎಲ್ಲಾ ರೀತಿಯ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ.


__________ Hari Om ------------

 

 

ಆಷಾಢ ಏಕಾದಶಿ


(
ದಿನಾಂಕ: 29-06-2023, ಗುರುವಾರ)



ನಾರಾಯಣಾಯ ಪರಿಪೂರ್ಣ ಗುಣಾರ್ಣಾವಾಯ ವಿಶ್ವೋದಯಸ್ಥಿತಿಲಯೋನ್ನಿಯತಿಪ್ರಧಾಯ|
ಜ್ಞಾನ ಪ್ರಧಾಯ ವಿಭುಧಾಸುರಸೌಖ್ಯದುಖಃ ಸತ್ಕಾರಣಾಯ ವಿತತಾಯ ನಮೋ ನಮಸ್ತೇ ||



ಈ ಏಕಾದಶಿ ದಿನವನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ ಎಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.


ಈ ಏಕಾದಶಿ ವಿಶೇಷವೆಂದರೆ, ವಿಷ್ಣುಭಕ್ತರಿಂದ ಚಾತುರ್ಮಾಸ್ಯ ಆರಂಭವಾಗುತ್ತದೆ. ಇದೇ ದಿನ ವೈಷ್ಣವರೆಲ್ಲರೂ ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ಸಕಲ ಲೋಕ ಪರಿಪಾಲಕ ಶ್ರೀವಿಷ್ಣುವಿನ ಶಯನೋತ್ಸವ ವು ಆರಂಭವಾಗುತ್ತದೆ.


ಇಂದಿನಿಂದ ಶ್ರೀಹರಿ (ಮಹಾವಿಷ್ಣು) ನಾಲ್ಕು ತಿಂಗಳು ಕಾಲ ಯೋಗನಿದ್ರೆ ಯಲ್ಲಿ ತೊಡಗುವುದರಿಂದ ಈ ದಿನವನ್ನು ಶಯನಿ ಏಕಾದಶಿ ಎನ್ನಲಾಗುತ್ತದೆ. ಹಾಗಾಗಿಯೇ ಈ ಪ್ರಥಮ ಏಕಾದಶಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನದ ವೈಶಿಷ್ಟ್ಯಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಅರಿಯುವ ಪ್ರಯತ್ನ ಮಾಡೋಣ.

ಮೊದಲಿಗೆ ಏಕಾದಶಿ ಎಂದರೇನು ತಿಳಿಯೋಣ


ಹಿಂದೆ ಬಲಿಷ್ಠನಾಗಿದ್ದ ಮುರಾಸುರ ಎಂಬ ರಾಕ್ಷಸನು, ದೇವತೆಗಳನ್ನು ಯುದ್ಧದಲ್ಲಿ ಸೋಲಿಸಿ ದರ್ಪದಿಂದ ಮೆರೆಯುತ್ತಿದ್ದ. ಇವನ ಉಪಟಳ ತಾಳಲಾರದೆ, ದೇವತೆಗಳು ಮುರನಿಂದ ರಕ್ಷಿಸುವಂತೆ ಶ್ರೀಹರಿಯನ್ನು ಪ್ರಾರ್ಥಿಸಿದರು. ದೇವತೆಗಳ ಪ್ರಾರ್ಥನೆಗೆ ಒಲಿದ ಮಹಾವಿಷ್ಣು, ತನ್ನಲ್ಲಿದ್ದ ಅಸ್ತ್ರ, ಶಸ್ತ್ರಗಳನ್ನು ಮುರನ ಮೇಲೆ ಪ್ರಯೋಗಿಸಿದನು. ಇದರಿಂದ ಮುರಾಸುರನ ಹೊರತು ಉಳಿದ ಸಾಕಷ್ಟು ಮಂದಿ ರಾಕ್ಷಸರು ಹತರಾದರು. ವಿಷ್ಣುವಿನ ಹೊಡೆತಕ್ಕೆ ತತ್ತರಿಸಿ ಪರಾರಿಯಾದ ಮುರ, ಸಮಯ ಮತ್ತು ಅವಕಾಶಕ್ಕಾಗಿ ಕಾಯುತ್ತಿದ್ದ. ಯುದ್ಧದ ನಂತರ ಶ್ರೀಹರಿ ಬದರಿ ಕ್ಷೇತ್ರಕ್ಕೆ ತೆರಳಿ ಅಲ್ಲಿನ ಒಂದು ಗುಹೆಯಲ್ಲಿ ಯೋಗನಿದ್ರೆಗೆ ಜಾರಿದ. ಇದೇ ಸರಿಯಾದ ಸಮಯವೆಂದು ಹೊಂಚು ಹಾಕಿ, ಅಲ್ಲಿಗೆ ಬಂದ ಮುರಾಸುರ ವಿಷ್ಣುವನ್ನು ಕೊಲ್ಲಲು ಯತ್ನಿಸಿದ. ಆಗ ಭಗವಂತನ ತೇಜಸ್ಸಿನಿಂದ ಅಸ್ತ್ರ ಶಸ್ತ್ರ ಸಜ್ಜಿತಳಾದ ಒಬ್ಬ ಕನ್ಯೆ ಅವತರಿಸಿ, ಮುರನನ್ನು ಸಂಹರಿಸಿದಳು. ಸಂತಸಗೊಂಡ ಶ್ರೀಪತಿ ಆಕೆಯನ್ನು ಅನುಗ್ರಹಿಸಿದ. ಈ ದಿನ ತಿಂಗಳ ಹನ್ನೊಂದನೇ ದಿನವಾಗಿತ್ತು. ಹಾಗಾಗಿ ಈ ದಿನ ನಿನ್ನ ಹೆಸರಲ್ಲಿ ಶ್ರದ್ಧಾ ಭಕ್ತಿಯಿಂದ ಯಾರು ನನ್ನ ಸಮೀಪ(ಉಪವಾಸ) ವಿದ್ದು ಸೇವಿಸುತ್ತಾರೋ ಅವರಿಗೆ ವಿಶೇಷ ಫಲ ನೀಡುತ್ತೇನೆ ಎಂದು ಹೇಳಿದ. ಅಂದಿನಿಂದ ಏಕಾದಶಿ ಆಚರಣೆ ಜಾರಿಗೆ ಬಂತು. ಬೇಡಿದಂತೆ ವರ ಕರುಣಿಸಿದನು.



ಏಕಾದಶಿ ಆಚರಣೆ:


ಈದಿನ ನಿರಾಹಾರಿಯಾಗಿ ಶುದ್ಧ ದೇಹ ಹಾಗೂ ಮನಸ್ಸಿನಿಂದ ಶ್ರೀಹರಿಯನ್ನು ಅರ್ಚಿಸಬೇಕು. ಊಟ, ಉಪಹಾರದ ಜತೆ ಏಲಕ್ಕಿ, ಪಚ್ಚಕರ್ಪೂರ, ಶ್ರೀಗಂಧಾದಿ ಸುಗಂಧ ದ್ರವ್ಯಗಳನ್ನು ವರ್ಜಿಸಬೇಕು.
ಯಥಾಶಕ್ತಿ ದೇವರನ್ನು ಸೇವಿಸಿ, ರಾತ್ರಿ ಜಾಗರಣೆ ಮಾಡಿ ಮರುದಿನ(ದ್ವಾದಶಿ) ಮುಂಜಾನೆ ದೇವರಪೂಜೆ ಮಾಡಿ ತೀರ್ಥ ಪ್ರಸಾದ(ಭೋಜನ) ಸ್ವೀಕರಿಸಬೇಕು. ಇದು ಏಕಾದಶಿ ಆಚರಣೆಯ ವಿಧಾನ. (ಶ್ರದ್ಧಾವಂತರು ಏಕಾದಶಿಯ ಹಿಂದಿನ ದಿನ ಅಂದರೆ ದಶಮಿಯ ದಿನ ರಾತ್ರಿ ಊಟದ ಬದಲು ಫಲಹಾರ ಸೇವಿಸುತ್ತಾರೆ. ತಾಂಬೂಲ ಮೆಲ್ಲುವುದಿಲ್ಲ.)


ವೈಜ್ಞಾನಿಕವಾಗಿ ಏಕಾದಶಿ ವ್ರತ ಆರೋಗ್ಯಕ್ಕೆ ಸಹಕಾರಿ. ಲಂಘನಂ ಪರಮೌಷಧಂ ಎಂಬಂತೆ ಉಪವಾಸ ಮಾಡುವುದು ಆರೋಗ್ಯಕ್ಕೆ ಒಳಿತು. ಹದಿನೈದು ದಿನಕ್ಕೊಮ್ಮೆ ದೇಹಕ್ಕೆ ಬಿಡುವು ನೀಡಬೇಕೆಂಬುದು ಆಯುರ್ವೇದ ಹೇಳುತ್ತದೆ. ದೇಹದಲ್ಲಿ ಜೀರ್ಣಕ್ರಿಯೆಗೆ ತೊಡಗುವ ಅಂಗಗಳಿಗೆ ವಿಶ್ರಾಂತಿ ಅಗತ್ಯವಿದೆ. ತಿಂಗಳಲ್ಲಿ ಎರಡು ದಿನ ಈ ರೀತಿ ಉಪವಾಸಾಚರಣೆ ಮಾಡಿದರೆ ಸ್ವಾಮಿ ಕಾರ್ಯದ ಜತೆ ಸ್ವಕಾರ್ಯ ವೂ ಆಗುತ್ತದೆ. ಶ್ರೀಹರಿಯ ಸೇವೆಯ ಪುಣ್ಯದ ಜತೆ, ಆರೋಗ್ಯ ವೃದ್ಧಿಯಾಗುತ್ತದೆ



ತಪ್ತಮುದ್ರಾಧಾರಣೆ:


ಈ ದಿನ ತಾಮ್ರದಿಂದ ತಯಾರಿಸಿದ ಶ್ರೀವಿಷ್ಣುವಿನ ಚಿಹ್ನೆಗಳಾದ ಸುದರ್ಶನ(ಚಕ್ರ) ಹಾಗೂ ಪಾಂಚಜನ್ಯ (ಶಂಖ) ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ದೇಹದ ಮೇಲೆ ಒತ್ತಲಾಗುತ್ತದೆ. ಇಂದು ಎಲ್ಲ ಮಾಧ್ವ ಮಠಾಧಿಪತಿಗಳು ಈ ಕಾಯಕ ನಡೆಸುತ್ತಾರೆ. ಯತಿಗಳು ಬೆಳಗ್ಗೆ ಸಂಸ್ಥಾನ ಪೂಜೆ ನಡೆಸುತ್ತಾರೆ. ಇದೇ ವೇಳೆ ಶ್ರೀಸುದರ್ಶನ ಹೋಮ ನಡೆಯುತ್ತದೆ, ಪೂರ್ಣಾಹುತಿಯ ನಂತರ ಗುರುಗಳು ತಾಮ್ರದಿಂದ ತಯಾರಿಸಿದ ಮುದ್ರೆಗಳನ್ನು ಅದೇ ಅಗ್ನಿ(ಬೆಂಕಿ)ಯಲ್ಲಿ ಕಾಯಿಸಿ ಸ್ವಯಂ ಮುದ್ರೆ ಹಚ್ಚಿಕೊಳ್ಳುತ್ತಾರೆ. ನಂತರ ಶಿಷ್ಯರಾದಿಯಾಗಿ ಎಲ್ಲರಿಗೂ ಮುದ್ರೆ ಹಾಕುತ್ತಾರೆ. ಈ ಶ್ರೀಹರಿಯ ಲಾಛನಗಳನ್ನು ಭುಜಗಳ ಮೇಲೆ ಧರಿಸಲು ಜಾತಿ ಹಾಗೂ ಮತಗಳ ಹಂಗಿಲ್ಲ, ಶ್ರದ್ಧಾಳುಗಳು ಯಾರೂ ಬೇಕಾದರೂ ಮುದ್ರೆ ಹಾಕಿಸಿಕೊಳ್ಳಬಹುದು.


ತಪ್ತ ಮುದ್ರಾಧಾರಣೆಗೆ ಧಾರ್ಮಿಕ ಆಚರಣೆಯ ಜತೆ ವೈಜ್ಞಾನಿಕ ಕಾರಣವೂ ಇದೆ. ಹಿಂದೆ ಆಷಾಢ ಬಂತೆಂದರೆ ಮಳೆಗಾಲ ಜೋರು, ಸದಾ ಎಡೆಬಿಡದೆ ಸುರಿಯುವ ಮಳೆ ಜನರನ್ನು ರೋಗಗಳಿಂದ ಭಾಧಿಸುತ್ತಿತ್ತು. ಮಳೆಯ ಶೀತದಿಂದ ಹಲವಾರು ರೋಗಗಳು ಬರುತ್ತಿದ್ದವು. ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಲೋಹದಿಂದ ದೇಹದ ಮೇಲೆ ಸೂಕ್ತ ಸ್ಥಳದಲ್ಲಿ ಮುದ್ರೆ ಹಾಕಿಕೊಂಡರೆ ಕೆಲ ರೋಗಗಳನ್ನು ನಿಯಂತ್ರಿಸಬಹುದಿತ್ತು. ಇದಕ್ಕೆ ಉದಾಹರಣೆ ಹಿಂದಿನ ದಿನಗಳಲ್ಲಿ ಗೋವುಗಳಿಗೆ ಕಾಯಿಲೆ ಬಂದರೆ ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಠಸ್ಸೆಯಿಂದ ಚುಟುಕೆ ಹಾಕಲಾಗುತ್ತಿತ್ತು.


ಅಂದಿನ ಕಾಲಕ್ಕೆ ಸ್ವತಃ ವಿಜ್ಞಾನದ ಆಳವನ್ನು ಅರಿತಿದ್ದ ಸರ್ವಜ್ಞಾಚಾರ್ಯರು (ಶ್ರೀಮಧ್ವಾಚಾರ್ಯರು) ಶ್ರೀಹರಿಯ ಲಾಂಛನಗಳನ್ನು ದೇಹದ ಮೇಲೆ ಧರಿಸುವ ಪದ್ಧತಿಯನ್ನು ಕಡ್ಡಾಯಗೊಳಿಸಿದರು. ತುಳುನಾಡಿನಲ್ಲಿ ಇಂದಿಗೂ ಮಾಧ್ವರಲ್ಲದೇ ಉಳಿದ ಹಲವಾರು ಮಂದಿ ಮುದ್ರೆ ಹಾಕಿಸಿಕೊಳ್ಳುತ್ತಾರೆ. ಜತೆಗೆ ವಿದೇಶೀಯ ಅನ್ಯ ಮತದವರು ಮುದ್ರಾ ಧಾರಣೆ ಮಾಡಿಸಿಕೊಳ್ಳುತ್ತಾರೆ.



ಶಯನಿ ಏಕಾದಶಿ:


ಇಂದಿನಿಂದ ನಾಲ್ಕು ತಿಂಗಳಕಾಲ ವಿಷ್ಣು ಶಯನೋತ್ಸವ. ಮಹಾವಿಷ್ಣುವನ್ನು ಪೂಜಿಸಿ, ಯೋಗನಿದ್ರೆಯಲ್ಲಿ ತೊಡಗುವಂತೆ ಪ್ರಾರ್ಥಿಸಲಾಗುತ್ತದೆ. ಈ ಆಚರಣೆ ಹೆಚ್ಚಾಗಿ ಘಟ್ಟ(ಕರಾವಳಿ)ದ ಕೆಳಗಿನ ಪ್ರದೇಶಗಳಲ್ಲಿ ಆಚರಿಸಲಾಗುತ್ತೆ. ಇಂದಿನಿಂದ ಈ ಭಾಗದ ದೇವಾಲಯಗಳಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತೆಗೆಯುವುದಿಲ್ಲ ಹಾಗಾಗಿ ಉತ್ಸವಗಳನ್ನು ಆಚರಿಸುವುದಿಲ್ಲ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಪ್ರಭೋದೋತ್ಸವ ನಡೆಸಿ, ಮಹಾವಿಷ್ಣುವನ್ನು ಯೋಗ ನಿದ್ರೆಯಿಂದ ಎಬ್ಬಿಸಲಾಗುತ್ತಿದೆ.



ಚಾತುರ್ಮಾಸ:

ಇಂದಿನಿಂದ ನಾಲ್ಕು ತಿಂಗಳ ಕಾಲ ಆಚರಿಸುವ ವ್ರತಕ್ಕೆ ಚಾತುರ್ಮಾಸ್ಯ ಎನ್ನುತ್ತೇವೆ. ಈ ನಾಲ್ಕು ತಿಂಗಳು ಯತಿಗಳು ಹಾಗೂ ಆಚಾರ್ಯತ್ವ ಪಾಲನೆ ಮಾಡುವ ಸದ್ಗೃಹಸ್ಥರು ಈ ವ್ರತವನ್ನು ಹಿಡಿಯುತ್ತಾರೆ.


ಇಂದಿನಿಂದ ಒಂದೊಂದು ತಿಂಗಳು ಒಂದೊಂದು ವ್ರತವನ್ನು ಆಚರಿಸಬೇಕು. ಈ ನಾಲ್ಕು ತಿಂಗಳು ಮಳೆಗಾಲದಿಂದ ಕೂಡಿವೆ. ಆಷಾಢ ಹಾಗೂ ಶ್ರಾವಣ ಮಾಸದಲ್ಲಿ ಗ್ರೀಷ್ಮ ಮತ್ತು ವರ್ಷ ಋತುಗಳ ಸಮಾಗಮ. ಈ ವೇಳೆ ಮಳೆ ಹೆಚ್ಚು. ಪುರಾತನ ಕಾಲದಲ್ಲಿ ಮನೆ, ಮಠಗಳಿಂದ ಹೊರಗೆ ಕಾಲಿಡಲಾರದಷ್ಟು ಮಳೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಯತಿಗಳ ಸಂಚಾರಕ್ಕೆ ಇದು ಅಡ್ಡಿಯಾಗುತ್ತಿತ್ತು. ಇದಲ್ಲದೇ ಮಳೆಗಾಲದಲ್ಲಿ ಸಣ್ಣ ಕ್ರಿಮಿ, ಕೀಟಗಳ ಉತ್ಪತ್ತಿಯೂ ಜೋರು. ಹೊರಗೆ ಸಂಚರಿಸುವಾಗ ಯತಿಗಳು ಕಾಲಿಗೆ ಹಾಕಿಕೊಳ್ಳುತ್ತಿದ್ದ ಮರದ ಹಾವುಗೆ(ಪಾದುಕೆ)ಗಳಿಗೆ ಸಿಕ್ಕ ಕೀಟಗಳು ಸಾಯುವ ಸಾಧ್ಯತೆ ಹೆಚ್ಚು. ಅಹಿಂಸೆಯೇ ಪರಮಧರ್ಮ ಎಂದರಿತಿದ್ದ ಯತಿಗಳು ಕೀಟಗಳ ಸಾವಿಗೆ ಕಾರಣರಾಗುತ್ತಿರಲಿಲ್ಲ. ಹಾಗಾಗಿ ಹೊರಗೆ ಸಂಚರಿಸುತ್ತಿರಲಿಲ್ಲ. (ಇದು ಹಿಂದೂ ಧರ್ಮೀಯ ಯತಿಗಳಷ್ಟೇ ಅಲ್ಲ ಜೈನ, ಬೌದ್ಧ ಧರ್ಮ ಸೇರಿದಂತೆ ಹಲವಾರು ಧರ್ಮೀಯ ಯತಿಗಳು ಪಾಲಿಸುತ್ತಾರೆ.)


ಇದರ ಜತೆಗೆ ಪುಣ್ಯ ಸಂಚಯನ ಮಾಡುವ ದಕ್ಷಿಣಾಯನ ಪುಣ್ಯಕಾಲ ಕೂಡಿರುತ್ತಿದ್ದ ಕಾರಣ ಯತಿಗಳು ಒಂದೆಡೆ ವ್ರತಕ್ಕೆ ಕೂರುತ್ತಿದ್ದರು. ಇನ್ನು ಇವರ ಶಿಷ್ಯರು ಶ್ರದ್ಧಾವಂತರಾದ ಕಾರಣ ಗುರುಗಳ ಮಾರ್ಗ ಅನುಸರಿಸಿ ಅವರೂ ವ್ರತಕ್ಕೆ ಕೂರುತ್ತಿದ್ದರು.

ಮೊದಲ ತಿಂಗಳು ಶಾಕವ್ರತ. ಈ ತಿಂಗಳಲ್ಲಿ ತರಕಾರಿ, ಬಾಳೆಹಣ್ಣು, ಕೇಸರಿ, ಪಚ್ಚಕರ್ಪೂರ ಇತ್ಯಾದಿ ಸುಗಂಧ ದ್ರವ್ಯಗಳನ್ನು ಬಳಸುವಂತಿಲ್ಲ. ಮಾವಿನ ಹಣ್ಣಿನ ಹೊರತಾಗಿ ಬೇರೆ ಹಣ್ಣುಗಳನ್ನು ದೇವರಿಗೆ ಸಮರ್ಪಿಸುವಂತಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಹಿಂದೆ ವ್ಯಾಪಾರ ದೃಷ್ಠಿಯಿಂದ ತರಕಾರಿ ಬೆಳೆಯುತ್ತಿರಲಿಲ್ಲ. ಜನರು ಅವರ ಅಗತ್ಯಕ್ಕೆ ತಕ್ಕಹಾಗೆ ಹಿತ್ತಲು ಹಾಗೂ ಕೈತೋಟದಲ್ಲಿ ತರಕಾರಿ ಬೆಳೆದುಕೊಳ್ಳುತ್ತಿದ್ದರು. ಮಳೆಗಾಲದ ಆರಂಭದ ದಿನಗಳಲ್ಲಿ ಭೂಮಿಯಲ್ಲಿ ಅಮಿತ ಉಷ್ಣಾಂಶವಿರುತ್ತದೆ. ಈ ಕಾಲದಲ್ಲಿ ಬೆಳೆದ ತರಕಾರಿಯಲ್ಲೂ ಈ ಉಷ್ಣಾಂಶ ಇರುವುದರಿಂದ ತರಕಾರಿ ಬಳಕೆ ಉತ್ತಮವಲ್ಲವೆಂದು ನಿಷೇಧಿಸಲಾಗಿತ್ತು.

ಇದಲ್ಲದೆ ಜೋರು ಮಳೆಗಾಲವಾದ ಕಾರಣ ಹಣ್ಣುಗಳು ಕೆಡುತ್ತವೆ ಜತೆಗೆ ನಾವು ಸೇವಿಸಿದರೆ ಸರಿಯಾಗಿ ಜೀರ್ಣವಾಗುವುದಿಲ್ಲ. ಆಗೆಲ್ಲಾ ಈಗಿನಂತೆ ಸಂಚರಿಸಲು ವಾಹನಗಳಿರಲಿಲ್ಲ. ಮಳೆಯ ಕಾರಣ ಕೂತ ಕಡೆಯೇ ಹೆಚ್ಚು ಕಾಲ ಕಳೆಯುತ್ತಿದ್ದ ಜನರ ದೇಹದಲ್ಲಿ ಅಗತ್ಯಕಿಂತ ಪೋಷಕಾಂಶಗಳು ಹೆಚ್ಚಾಗಿ ಬೊಜ್ಜು, ಮತ್ತಿತರ ಅನಾರೋಗ್ಯ ಉಂಟಾಗುತ್ತಿತ್ತು.

ಹಾಗಾಗಿ ಈ ಪದಾರ್ಥಗಳನ್ಬು ನಿಷೇಧಿಸಿದ್ದರು ಈಗಲೂ ನಾವು ಗಮನಿಸಬಹುದು, ಈ ಆಚರಣೆ ಮಾಡುವ ಎಲ್ಲ ಯತಿಗಳು ಒಂದು ದಿನವೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಿಲ್ಲ. ಇದು ಸಕಾಲದಲ್ಲಿ ಮಾಡುವ ಆಚರಣೆಯ ಮಹತ್ವ.

ಎರಡನೇ ತಿಂಗಳು ದಧಿವ್ರತ, ಈ ತಿಂಗಳಲ್ಲಿ ಮೊಸರು ಬಳಸುವಂತಿಲ್ಲ. ಈ ತಿಂಗಳು ಜಿಟಿಪಿಟಿ ಮಳೆಗಾಲ, ಮೊಸರು ದೇಹಕ್ಕೆ ಒಗ್ಗುವುದಿಲ್ಲ. ಬದಲಿಗೆ ಶೀತವಾಗಿ ಕಾಡುತ್ತದೆ. ಹಾಗಾಗಿ ಮೊಸರಿಗೆ ನಿಷೇಧವಿದೆ.

ಮೂರನೆಯ ತಿಂಗಳು ಕ್ಷೀರ ವ್ರತ. ಈ ತಿಂಗಳು ಹಾಲು ಬಳಸುವಂತಿಲ್ಲ. ಈ ತಿಂಗಳಲ್ಲಿ ಮಳೆಯೂ ಉಂಟು ಬಿಸಿಲೂ ಉಂಟು. ಹಾಲು ಸೇವಿಸಿದರೆ ಶ್ವಾಸಕೋಶದಲ್ಲಿ ಕಫ ಕಟ್ಟುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಈ ತಿಂಗಳು ಹಾಲು ಬಳಕೆ ನಿಷೇಧಿಸಲಾಗಿದೆ.

ಕೊನೆಯ ತಿಂಗಳು ದ್ವಿದಳ ಧಾನ್ಯ ವ್ರತ. ಈ ತಿಂಗಳಲ್ಲಿ ರಾಗಿ, ಭತ್ತ, ಜೋಳ, ತೆಂಗು, ಬಾಳೆ ಇತ್ಯಾದಿ ಏಕದಳ ಪದಾರ್ಥಗಳನ್ನು ಬಳಸಬಹುದು. ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಎಳ್ಳು, ಕಡಲೇ, ಹೆಸರು, ಉದ್ದು ಇತ್ಯಾದಿ ಧಾನ್ಯಗಳನ್ನು ಬಳಸುವಂತಿಲ್ಲ. ಮುಂಗಾರಿನಲ್ಲಿ ಬೆಳೆದ ಈ ದ್ವಿದಳ ಧಾನ್ಯಗಳಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆಯಿಂದ ನಿಷೇಧ ಹೇರಲಾಗಿದೆ. ಈ ಆಚರಣೆಗಳನ್ನು ನಮ್ಮ ಪೂರ್ವಿಕರು ಧಾರ್ಮಿಕ ಹಿನ್ನೆಲೆಯಲ್ಲಿ ಆಚರಣೆಗೆ ತಂದರಾದರೂ ಇವುಗಳಲ್ಲಿ ವೈಜ್ಞಾನಿಕ ನೆಲೆಗಟ್ಟಿದೆ. ಧರ್ಮ ಹಾಗೂ ವಿಜ್ಞಾನ ಒಂದಕ್ಕೊಂದು ಬೆಸೆದುಕೊಂಡಿವೆ.
ಇಂತಹ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ನಮ್ಮನ್ನು ಕಾಯುವ ಈ ಆಚರಣೆಗಳನ್ನು ನಾವು ಪಾಲಿಸೋಣ.

  ____________ Hari Om -----------


ದೇವಶಯನಿ ಏಕಾದಶಿಯ ಪರಿಚಯ

 
'ದೇವಶಯನಿ' ಎಂದರೆ ಭಗವಾನ್ ಮಹಾವಿಷ್ಣುವು ತನ್ನ ಪವಿತ್ರ ಸರ್ಪ ಹಾಸಿಗೆ ಆದಿಶೇಷನ ಮೇಲೆ ಹಾಲಿನ ಬ್ರಹ್ಮಾಂಡದ ಸಾಗರದಲ್ಲಿ ನಾಲ್ಕು ತಿಂಗಳ ಕಾಲ ತನ್ನ ನಿದ್ರೆಗೆ ಒಳಗಾಗುತ್ತಾನೆ ಮತ್ತು ಇದನ್ನು ಸಾಮಾನ್ಯವಾಗಿ ಯೋಗ ನಿದ್ರಾ ಎಂದು ಕರೆಯಲಾಗುತ್ತದೆ. ಈ ದಿನವನ್ನು ಆಷಾಢ ಮಾಸದ (ಜೂನ್-ಜುಲೈ) ಶುಕ್ಲ ಪಕ್ಷದ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ಆದ್ದರಿಂದ, ದಿನವನ್ನು ಆಷಾಢಿ ಏಕಾದಶೀ, ಪದ್ಮ ಏಕಾದಶಿ ಅಥವಾ ಸರಳವಾಗಿ ಶಯನಿ ಏಕಾದಶಿ ಎಂದೂ ಕರೆಯಲಾಗುತ್ತದೆ.

ದೇವಶಯನಿ ಏಕಾದಶಿಯ ಕಥೆ

ರಾಜ ಮಾಂಧಾತ ಬಹಳ ಉದಾರ ಮತ್ತು ಪ್ರಾಮಾಣಿಕ ವ್ಯಕ್ತಿ. ಅವನು ತನ್ನ ಪ್ರಜೆಗಳು ಮತ್ತು ಸಾಮ್ರಾಜ್ಯದ ಬಗ್ಗೆ ಅಪಾರ ಕಾಳಜಿ ವಹಿಸಿದನು. ಒಮ್ಮೆ, ಅವನ ಭೂಮಿ ಮೂರು ವರ್ಷಗಳ ಕಾಲ ಭೀಕರ ಬರಗಾಲಕ್ಕೆ ತುತ್ತಾಯಿತು ಮತ್ತು ಎಲ್ಲಾ ಸಂಪತ್ತು ಮತ್ತು ಸಮೃದ್ಧಿಯನ್ನು ಅಳಿಸಿಹಾಕಿತು. ಹಲವಾರು ವಿಧಿವಿಧಾನಗಳನ್ನು ಮಾಡಿದರೂ ಭಾಗ್ಯವನ್ನು ಮರಳಿ ತರಲಾಗಲಿಲ್ಲ. ಅಂತಿಮವಾಗಿ, ಅವರು ಋಷಿ ಅಂಗೀರನನ್ನು ಭೇಟಿಯಾದರು, ಅವರು ವಿಷ್ಣುವಿಗೆ ದೇವಶಯಾನಿ ಏಕಾದಶಿ ವ್ರತವನ್ನು (ಉಪವಾಸ) ಅನುಸರಿಸಲು ಸಲಹೆ ನೀಡಿದರು. ಅವರು ಶ್ರದ್ಧಾ ಭಕ್ತಿಯಿಂದ ವ್ರತವನ್ನು ಆಚರಿಸಿದರು, ಮತ್ತು ಅವರ ಭೂಮಿಯನ್ನು ಭಾರೀ ಮಳೆಯಿಂದ ಉಡುಗೊರೆಯಾಗಿ ನೀಡಲಾಯಿತು, ಫಲವತ್ತತೆ ಮತ್ತು ಸಮೃದ್ಧಿಯನ್ನು ಮರಳಿ ಪಡೆದರು.

ಆದ್ದರಿಂದ, ಈ ವ್ರತವನ್ನು ಮುಖ್ಯವಾಗಿ ಭಗವಂತನ ನಿದ್ರೆಯ ಸಮಯದಲ್ಲಿ ನಾಲ್ಕು ತಿಂಗಳ ಕಾಲ ಮಳೆಗಾಲವನ್ನು ಆಚರಿಸಲು ಆಚರಿಸಲಾಗುತ್ತದೆ. ಈ ನಾಲ್ಕು ತಿಂಗಳುಗಳನ್ನು ಚಾತುರ್ಮಾಸ ಎಂದು ಕರೆಯುತ್ತಾರೆ.

ದೇವಶಯನಿ ಏಕಾದಶಿಯ ಮಹತ್ವ

 
ಈ ದಿನವನ್ನು ದೇಶದಾದ್ಯಂತ ವ್ಯಾಪಕವಾಗಿ ಆಚರಿಸಲಾಗುತ್ತದೆ. ಭಕ್ತರು ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಸ್ತೋತ್ರಗಳನ್ನು ಹಾಡುವ ಮೂಲಕ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ, ಪ್ರಸಿದ್ಧ ಪಂಡರಪುರ ಯಾತ್ರೆ (ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಪಂಡರಪುರದಲ್ಲಿ ಲಕ್ಷಗಟ್ಟಲೆ ಯಾತ್ರಿಕರು ಸೇರುತ್ತಾರೆ) ಕೊನೆಗೊಂಡಾಗ, ಆ ದಿನವನ್ನು ಆಷಾಢಿ ಏಕಾದಶಿ ಎಂದು ಕರೆಯಲಾಗುತ್ತದೆ.

ಆಂಧ್ರಪ್ರದೇಶದಲ್ಲಿ ಜನರು ಇದನ್ನು ತೋಲಿ ಏಕಾದಶಿ ಎಂದು ಕರೆಯುತ್ತಾರೆ. ಸಂಪ್ರದಾಯದಂತೆ, ವೈಷ್ಣವ ಮಠಗಳಿಗೆ ಸೇರಿದವರು ತಮ್ಮ ದೇಹದ ಮೇಲೆ ಬಿಸಿಯಾದ ಮುದ್ರೆಗಳನ್ನು ಧರಿಸುತ್ತಾರೆ, ಇದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ.

ದೇವಶಯನಿ ಏಕಾದಶಿ ವ್ರತದ ಆಚರಣೆಗಳು

 
ಮುಂಜಾನೆ ಪವಿತ್ರ ಸ್ನಾನದ ನಂತರ, ಭಕ್ತರು ದೇವಾಲಯಗಳು ಅಥವಾ ಮನೆಗಳಲ್ಲಿ ಪೂಜೆ ಮಾಡುವ ಮೂಲಕ ವಿಷ್ಣುವಿಗೆ ಉಪವಾಸವನ್ನು ಆಚರಿಸುತ್ತಾರೆ. ವಿಷ್ಣುವಿನ ವಿಗ್ರಹವನ್ನು ಹೂವುಗಳು ಮತ್ತು ಹಳದಿ ಬಟ್ಟೆಯಿಂದ ಅಲಂಕರಿಸಲಾಗಿದೆ. ಹಣ್ಣುಗಳು, ವೀಳ್ಯದೆಲೆಗಳು, ವೀಳ್ಯದೆಲೆಗಳು, ಧೂಪದ್ರವ್ಯಗಳು ಮತ್ತು ವಿಶಿಷ್ಟವಾದ ಆಹಾರ ನೈವೇದ್ಯಗಳನ್ನು ವಿಷ್ಣುವಿಗೆ ನೀಡಲಾಗುತ್ತದೆ. ವಿಗ್ರಹಕ್ಕೆ ಆರತಿ ಅರ್ಪಿಸುವ ಮೂಲಕ ಉಪವಾಸವು ಸಂಜೆ ಕೊನೆಗೊಳ್ಳುತ್ತದೆ. ಪೂಜೆಯ ನೈವೇದ್ಯವಾದ ಪ್ರಸಾದವನ್ನು ಸೇವಿಸುವ ಮೂಲಕ ಉಪವಾಸವನ್ನು ಮುರಿಯಲಾಗುತ್ತದೆ.

ದೇವಶಯನಿ ಏಕಾದಶಿ ವ್ರತದ ಪ್ರಯೋಜನಗಳು
ಪವಿತ್ರ ಗ್ರಂಥಗಳ ಪ್ರಕಾರ, ದೇವಶಯನಿ ಏಕಾದಶಿ ವ್ರತವನ್ನು ಆಚರಿಸುವುದರಿಂದ ಈ ಕೆಳಗಿನ ಆಶೀರ್ವಾದಗಳನ್ನು ನೀಡಬಹುದು:

- ಶಾಂತಿ, ಸಂತೋಷ ಮತ್ತು ಸಮೃದ್ಧಿ.
- ಮೋಕ್ಷವನ್ನು ಪಡೆಯಲು ಪಾಪಗಳಿಂದ ವಿಮೋಚನೆ.
- ಆಸೆಗಳನ್ನು ಪೂರೈಸಿಕೊಳ್ಳಲು
- ಜೀವನದ ಯಾವುದೇ ಘಟನೆಯನ್ನು ಎದುರಿಸಲು - ಸ್ವಯಂ ನಿಯಂತ್ರಣ ಮತ್ತು ಧೈರ್ಯವನ್ನು ಪಡೆದುಕೊಳ್ಳಲು.

 

                   ------------- Hari Om -------------

No comments:

Post a Comment