Tuesday, March 30, 2021

Satya Bodha Tirtharu

 

ಶ್ರೀ ಗುರುಭ್ಯೋ ನಮಃ 

                                        Sri Satya Bodha Tirthara Moola Brindavana                                                                                in Savanuru near Haveri, Karnataka
 

ಶ್ರೀ ಸತ್ಯಬೋಧತೀರ್ಥರು (ಸವಣೂರು)


ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |

नैवेद्यगविषं रामे वीक्ष्य तद्भुक्तिभाग् गुरु:
योदर्शयद्रविं रात्रौ सत्यबोधोस्तु मे मुदे ।


ಶ್ರೀಸತ್ಯಭೋಧೊ ನಿಜಕಾಮಧೇನು/
ಮಾಯಾತಮಃಖಂಡನ ಚಂಡಭಾನುಃ/
ದುರಂತಪಾಪ ಪ್ರದಹೇ ಕೃಶಾನುಃ
ದೇಯಾನ್ಮಮೇಷ್ಟಂ ಗುರುರಾಜಸೂನುಃ/

ಇಂದುಶ್ರೀಸತ್ಯಭೋಧತೀರ್ಥರ #ಆರಾಧನೆನಿಮಿತ್ಯಈ_ಲೇಖನಮಾಲಿಕೆಸಮರ್ಪಣೆ

ಶ್ರೀಸತ್ಯಭೋಧ ತೀರ್ಥರು ಅಂದಿನ ರಾಜಕೀಯ ವಿಷಮ ಗಳಿಗೆಯಲ್ಲೂ,ಮದ್ವ ಮತದ ಪ್ರವರ್ಧಮಾನಕ್ಕೆ ಕಾರಣಕರ್ತರು.


ದಾಸ ಸಾಹಿತ್ಯವನ್ನು ವಿಶೇಷವಾಗಿ ಬೆಳೆಸಿ ಪೋಷಿಸಿದರು.

ಗುರುಗಳಾದ ಶ್ರೀ ಸತ್ಯಪ್ರಿಯತೀರ್ಥರಿಂದ ಸನ್ಯಾಸ ದೀಕ್ಷೆ‌ಪಡೆದು , ಉತ್ತರಾಧಿ ಮಠದ ಹಂಸನಾಮಕ‌ ಪೀಠದಲ್ಲಿ ಶ್ರೀ ಸತ್ಯಭೋಧ ತೀರ್ಥ ರಂದು ನಾಮಕರಣ ಗೊಂಡು ಪೀಠಾಧಿಪತಿ ಗಳಾದರು. ಇವರು ಮಾರ್ಕಾಂಡೇಯ ಮುನಿಗಳ ಅಂಶ ಸಂಭೂತರು. ಕಕ್ಷಾತಾರತಮ್ಯ ೨೭.

ಸತ್ಯಭೋಧರು ಅತ್ಯದ್ಭುತ ವಾಗ್ಮಯಿಗಳು ಮತ್ತು ಪ್ರವಚನಕಾರರಾಗಿದ್ದರು. ಕಲಿಯುಗದ ಕಲ್ಪವೃಕ್ಷ ಕಾಮಧೇನು ಆಗಿದ್ದರು. ನೂರಾರು ಪಂಡಿತರನ್ನು ನಿರ್ಮಿಸಿದ್ದರು. ಹಾಗೇ ಹರಿದಾಸ ವರಣ್ಯೇರಿಗೆ ಮತ್ತು ದಕ್ಷಿಣ ಭಾರತದಲ್ಲಿ ಮತ್ತು ಎಲ್ಲ ಪಂಥದ ಜನರಿಗೂ ಪರಮ ಪೂಜ್ಯ ಶ್ರೀಗಳಾಗಿದ್ದರು.ಇವರು ರಾಜಕೀಯ, ಸಾಮಾಜಿಕ, ಎಲ್ಲ ಕ್ಷೇತ್ರಗಳಲ್ಲೂ ಪಾತ್ರ ವಹಿಸುತ್ತಿದ್ದಲ್ಲದೇ ತ್ರಿವಿಕ್ರಮ ಸಾಧಿಸುತ್ತಿದ್ದರು.


ಬೃಂದಾವನ ಪ್ರವೇಶ ಕ್ರಿ..೧೭೮೩ ( 1783 ) ಇವರ ಕಾಲಾವಧಿ ೧೭೪೪-೧೭೮೩. ( 1744 - 1783 )

ಜೀವನ ಚರಿತ್ರೆ

ರಾಯಚೂರಿನ ಹರಿ ಆಚಾರ್ಯ ಮತ್ತು ಅರಳಮ್ಮ ದಂಪತಿಗಳು ವಾಸವಾಗಿದ್ದರು. ಶ್ರೀ ರಾಮನ ಉಪಾಸನೆ ಯಿಂದ , ಮುದ್ದಾದ ಗಂಡುಮಗು ಜನನವಾಯಿತು.ಆ ಮಗುವಿಗೆ ರಾಮಚಂದ್ರ ಆಚಾರ್ಯ ಎಂದು ನಾಮಕರಣ ಮಾಡಿದರು.

ತಮ್ಮ ಗುರುಗಳಾದ ಶ್ರೀ ಸತ್ಯ ತೀರ್ಥರಲ್ಲಿ ಸಕಲ ಶಾಸ್ತ್ರಗಳನ್ನು ಕಲೆತರು. ಮುಂದೆ ಶಕೆ ೧೭೪೪" ರುದಿರೋದ್ಗಾರಿ"ಸಂವತ್ಸರದ ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಶ್ರೀ ಹಂಸನಾಮಕ ಪೀಠವನ್ನು ಅಲಂಕರಿಸಿದರು. ಗುರುಗಳು;ಇವರಿಗೆ "ಸತ್ಯಭೋದತೀರ್ಥ"ರೆಂದು ನಾಮಕರಣಮಾಡಿದರು.

ಸವಣೂರಿನ ನವಾಬ ಖಂಡೇರಾಯ, ಸರದಾರ ಜಾನೋಜಿ ನಿಂಬಾಳಕರ, ತ್ರಿಕಟಾಪಲ್ಲಿಯಭೀಮರಾಯ,ತಂಜಾವೂರಿನ ಪ್ರತಾಪಸಿಂಹ ಹೀಗೆ ಅನೇಕ ರಾಜಕೀಯ ವ್ಯಕ್ತಿಗಳು ಇವರ ಒಡನಾಡಿಯಾಗಿ ದ್ದರಲ್ಲದೇ..ಇವರ ಶಿಷ್ಯರಾಗಿದ್ದರು.

ಶ್ರೀ ಸತ್ಯಸಂಧ ತೀರ್ಥರು, ಶ್ರೀ ಸತ್ಯವರತೀರ್ಥರು,ಶ್ರೀ ಸತ್ಯಧರ್ಮ ತೀರ್ಥರು, ಶ್ರೀ ಸತ್ಯಸಂಕಲ್ಪ ತೀರ್ಥರಾದಿ ಯತಿವರೇಣ್ಯರು ಇವರ ಶಿಷ್ಯರಾಗಿದ್ದರು.
ಮಾದನೂರಿನ ವಿಷ್ಣು ತೀರ್ಥರು,ವ್ಯಾಸತತ್ವಜ್ಞರು,ರಾಯರ ಮಠದ ಧೀರೆಂದ್ರತೀರ್ಥರು, ವರದೇಂದ್ರತೀರ್ಥರು .


ಇವರೆಲ್ಲ ಸತ್ಯಭೋಧರ ಸಮಕಾಲಿನರು ಹಾಗೂ ಗೌರವ ಪ್ರಧಾನ ಪಾತ್ರರಾಗಿದ್ದರು.

ಗಲಗಲಿ ಮುದ್ಗಲ ಆಚಾರ್ಯರರು (ಗಲಗಲಿ ಅವ್ವನವರ ಪತಿ), ಪಾಂಡುರಂಗಿ ನರಸಿಂಹ ಆಚಾರ್ಯರರು, ಮನ್ನಾರಿ ಶ್ರೀನಿವಾಸ ಆಚಾರ್ಯರರು, ಗುರ್ಲಪಾಡಿಶ್ರೀನಿವಾಸ ಆಚಾರ್ಯರರು,ಉಮರ್ಜಿ ಕೃಷ್ಣಾಚಾರ್ಯರರು,ಬಿದರಹಳ್ಳಿ ಶ್ರೀಪತ್ಯ ಆಚಾರ್ಯರು ಹೀಗೆ ಅನೇಕ ಮುಂತಾದ ವರು ಇವರಲ್ಲಿ ಶಾಸ್ತ್ರ ಪ್ರವೀಣರಾದ ವಿದ್ವಾಂಸರು.

ವಿಜಯದಾಸರು,ಗೋಪಾಲ ದಾಸರು(ಇವರ ಅಣ್ಣತಮ್ಮಂದಿರು),
ಜಗನ್ನಾಥ ದಾಸರು, ಮೋಹನದಾಸರು, ಶ್ರೀದ ವಿಠ್ಠಲ ದಾಸರು, ಅನೇಕರಿಗೆ ಗುರು ಸ್ಥಾನದಲ್ಲಿದ್ದು ತತ್ವೋಪದೇಶಗಳನ್ನು ನೀಡಿ
ಮಾರ್ಗದರ್ಶಕರಾಗಿದ್ದರು

ಇವರು ತಿರುಚನಾಪಳ್ಳಿ, ಶ್ರೀ ಮುಷ್ಣಂ,ಅರಣಿ,ಕನ್ಯಾಕುಮಾರಿ,ಶ್ರೀರಂಗಂ,ತಿರುಪತಿ,ಕಡಪ,ಹೈದ್ರಾಬಾದ,ರಾಯಚೂರ,ಸುರಪುರ,ಗುಲ್ಬರ್ಗಾ,ಬಳ್ಳಾರಿ,ಚಿತ್ರದುರ್ಗ, ಹರಿಹರ ಮೊದಲಾದ ಊರಗಳಲ್ಲಿ ದ್ವಿಗ್ವಿಜಯ ಯಾತ್ರೆ ಮುಗಿಸಿ, ಕೊನೆಗೆಸವಣೂರನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.ಅಲ್ಲಿಯೇ ತಮ್ಮ ಕಾರ್ಯಕ್ಷೇತ್ರ ವನ್ನಾಗಿಸಿ ಬಹಳ ದಿನಗಳವರಿಗೆ ಅಲ್ಲಿಯೇ ವಾಸ ಇದ್ದರು.



Tanka Saale 
 

ಟಂಕಸಾಲೆಯನ್ನು ನಿರ್ಮಿಸಿ ಬೆಳ್ಳಿ ಮತ್ತು ಬಂಗಾರದ ತಮ್ಮ ಭಾವಚಿತ್ರವುಳ್ಳ‌ ನಾಣ್ಯಗಳನ್ನು ದಕ್ಷಿಣ ಭಾರತದಲ್ಲಿ ಚಲಾವಣೆಗೆ ತಂದರು. ಇವರ ಕಾಲಕ್ಕೆ ಈ ಮಹಾ ಸಂಸ್ಥಾನಕ್ಕೆ "ಶ್ರೀ ಸತ್ಯಭೋಧ ಮಠ" ಎಂದು ಪ್ರಸಿದ್ಧಿಯಾಗಿತ್ತು.ಹಾಗೆಯೇ ಕರೆಯುತ್ತಿದ್ದರು.

ಇವರ ಮಹಿಮೆಯು ಬಹಳ ಅಪಾರ.


)ಪೇಶ್ವೆಯ ಸಹೋದರಮಾವ ಆನಂದಿರಾಯನಿಗೆ ರೋಗ ಪರಿಹರಿಸಿಅನುಗ್ರಹಿಸಿದರು


)ವಿಷ ಪರಿಹಾರಕ್ಕಾಗಿ ರಾತ್ರಿ ಪೂಜೆ ಮಾಡಿ ಸೂರ್ಯನಾರಯಣನ ದರ್ಶನ ಮಾಡಿಸಿದವರು


) ಕಪಿ ರೂಪದ ಕೊನ್ಹೇರಿ ಆಚಾರ್ಯರಿಗೆ ಗೀತಾ ಭಾಷ್ಯ ಪಾಠ ಹೇಳಿ ಉದ್ಧರಿಸಿದರು.


)ಸವಣೂರ ವಿಜಯದಶಮಿ ಯಂದು ಬಾವಿಯಲ್ಲಿ ಗಂಗೆಯು ಒಲಿದುಬಂದಳು.ಅದೇ"ವಿಷ್ಣು ತೀರ್ಥ"ವೆನಿಸಿತು.


)ಗೋಪಾಲ ದಾಸರು ಮತ್ತು ಅವರ ಅನುಜರನ್ನು ಪ್ರತ್ಯಕ ಕೂಡಿಸಿ
"
ಮಾರಮದಘನ್ನ" ಎಂಬ ಸಾಹಿತ್ಯ ಬರೆಯಿಸಿ ಅವರ ಶಕ್ತಿಯನ್ನು ಪರಿಚಯಿಸಿ ದರು.


)ಜಗನ್ನಾಥ ದಾಸರಿಗೆ ಅನುಗ್ರಹಿಸಿ,
ಸವಣೂನರಿನಲ್ಲಿಯೇ ಹರಿಕಥಾಮೃತಸಾರ
ಬರೆಯಿಸಿ , ಕೊನೆಗೆ ಆಶಿರ್ವಾದ ರೂಪದಲ್ಲಿ ತಮ್ಮ ಪಾದುಕೆ‌ ಮತ್ತು
ಮಣೆಯನ್ನು ನೀಡಿ, ಶಿಷ್ಯರಾದ ಜಗನ್ನಾಥ ದಾಸರ ಗೋಪಾಳಬುಟ್ಟಿ ಯಲ್ಲಿ ಮಂತ್ರಾಕ್ಷತೆ ನೀಡತೊಡಗಿದರು.


) ಶ್ರೀ ಸತ್ಯಸಂಧತೀರ್ಥರಿಗೆ ೧೦ ಆಯುಷ್ಯ ದಾನ ಮಾಡಿದರು.

ಶ್ರೀ ಮುಷ್ಣ ಭೂವರಹಾ ದೇವರಿಗೆ ಲಕ್ಷ ತುಳಸಿ,ಲಕ್ಷ ಹೂಗಳಿಂದ, ಅರ್ಚಿಸಿದರು. ಕೊನೆಗೆ ತಮ್ಮ ೭೪ ನೇ ವಯಸ್ಸಿನಲ್ಲಿ "ಫಾಲ್ಗುಣ ಕೃಷ್ಣ ಪ್ರತಿಪಾದ" ದಂದು, ಸವಣೂರಿನಲ್ಲಿ ವೃಂದಾವನ ಪ್ರವೇಶಿಸಿದರು.

ವಿಜಯದಾಸರಾದಿ ೧೪ ಜನ ಹರಿದಾಸರುಇವರ ಸ್ತೋತ್ರಪದ ರಚಿಸಿದ್ದಾರೆ

ದಾಸ ಮತ್ತು ವ್ಯಾಸ ಸಾಹಿತ್ಯವನ್ನುಉನ್ನತ ಸ್ಥಾನಕ್ಕೆ ಕರೆದೋಯ್ದ ಕೀರ್ತಿ ಇವರದು.

ಶ್ರೀಕೃಷ್ಣಾರ್ಪಣಮಸ್ತು        ----------- Hari Om -----------


No comments:

Post a Comment