Importance of Ahwata or Peepal or Arali Tree Pooja
Aswata or Peepal or Arali Tree
ಅಶ್ವತ್ಥ
ಪೂಜೆ or
Peepal tree or Arali tree Pooja
ಅಶ್ವಥ್
ವೃಕ್ಷವನ್ನು ಶನಿವಾರದ ದಿನ ಮಾತ್ರ
ಮುಟ್ಟಿಪೂಜೆ ಮಾಡಬೇಕು.
ಬೇರೆ
ದಿನಗಳಲ್ಲಿ ಮುಟ್ಟಬಾರದು.
ಏಕೆ??
ನಾವು
ಚಿಕ್ಕವರಿದ್ದಾಗ ನಮ್ಮ ಮನೆ
ಹತ್ತಿರಾನೆ ದತ್ತ ಮಂದಿರ ಇತ್ತು
, ಎಲ್ಲಿ
ದತ್ತ ದೇವಸ್ಥಾನ ಇರುತ್ತದೆಯೊ
ಅಲ್ಲಿ ಅರಳಿ ಮರ ಇರಲೇ ಬೇಕು.
ಅದಕ್ಕೆ
ಅಶ್ವಥ್ ವೃಕ್ಷ ಅಂತಾ ಹೇಳುತ್ತೇವೆ..
ನಮ್ಮ ತಾಯಿ
ನಮಗೆ ಬೆಳಿಗ್ಗೆ ಎದ್ದು ತಕ್ಷಣ
ಸ್ನಾನ ಮಾಡಿ ದೇವಸ್ಥಾನಕ್ಕೆ
ಹೋಗಿ ಅಶ್ವಥ್ ಕಟ್ಟೆ ಪ್ರದಕ್ಷಿಣೆ
ಹಾಕಿ ನಮಸ್ಕಾರ ಮಾಡಿ ಬಂದ ಮೇಲೆನೆ
ಕಾಫಿ ,ಹಾಲು
ಕುಡಿಯುವುದಕ್ಕೆ ಕೊಡ್ತಿದ್ರು...ಆವಾಗ
ಅಮ್ಮ ಹೇಳ್ತಿದ್ರು ಅಶ್ವಥ್ ವೃಕ್ಷ
ಮುಟ್ಟಬೇಡˌ ಪ್ರದಕ್ಷಿಣೆ
ಹಾಕಿ ದೂರದಿಂದ ನಮಸ್ಕಾರ ಮಾಡಿ
ಬಾ ಅಂತ , ಆದರೆ
ಶನಿವಾರ ಮಾತ್ರ ಅದನ್ನು ಮುಟ್ಟಿ
ನಮಸ್ಕಾರ ಮಾಡುತ್ತಿದ್ದೆ
ವು....
ಅಶ್ವಥ್
ವೃಕ್ಷ ಎಷ್ಟು ಶ್ರೇಷ್ಠ ಅಂದರೆ
ಕೃಷ್ಣ
ಹೇಳುತ್ತಾನೆ: “ಸರ್ವ
ವೃಕ್ಷಗಳಲ್ಲಿ ಅಶ್ವತ್ಥ ನಾನು”
ಎಂದು.
ಅಶ್ವತ್ಥ
ವೃಕ್ಷದ ಮಧ್ಯಭಾಗದಲ್ಲಿ ವಿಷ್ಣು,
ತುದಿಯಲ್ಲಿ
ರುದ್ರ, ಮೂಲಭಾಗದಲ್ಲಿ
ಬ್ರಹ್ಮ ದೇವರು ನೆಲೆಸಿರುವ ಈ
ವೃಕ್ಷವು ಯಜ್ಞ ಮಾಡುವಾಗ ಶಮಿ
ಮತ್ತು ಅರಣಿ(ಅರಳಿ)
ಸಮಿತೆಯನ್ನು
ಮಥನ ಮಾಡಿ ಅದರಿಂದ ಅಗ್ನಿ ಕಿಡಿ
ತರಿಸಿ, ಅಗ್ನಿ
ಸೃಷ್ಟಿ ಮಾಡುತ್ತಿದ್ದರು.
ಯಜ್ಞದಲ್ಲಿ
ಅರಳಿಯ ಸಮಿತೆಯನ್ನು ಮುಖ್ಯವಾಗಿ
ಉಪಯೋಗಿಸುತ್ತಾರೆ.
ಅಶ್ವತ್ಥಮರದ
ಸಮಿತೆಯನ್ನು ಕಾಷ್ಟವಾಗಿ ಯಜ್ಞದಲ್ಲಿ
ಉಪಯೋಗಿಸಿದರೆ, ಅಲ್ಲಿ
ಉರಿಯುವ ಬೆಂಕಿಯ ಜ್ವಾಲೆಯಲ್ಲಿ
ಒಂದು ವಿಶಿಷ್ಠ ಶಕ್ತಿ ಹೊರ
ಹೊಮ್ಮುತ್ತದೆ. ಹೇಗೆ
ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ
ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ.
ಮುಂಡಕ
ಉಪನಿಷತ್ತಿನಲ್ಲಿ ಅಗ್ನಿಯ
ಜ್ವಾಲೆಯಿಂದ ಹೊಮ್ಮುವ ಏಳು
ಬಣ್ಣವನ್ನು ಕಾಳಿ, ಕರಾಳಿ,
ಮನೋಜವಾಚ,
ಸುಲೋಹಿತಾಯಾಚ,
ಸುಧೂಮ್ರವರ್ಣಾ,
ಸ್ಫುಲಿಂಗಿನೀ,
ವಿಶ್ವರುಚಿ
ಎಂದು ಕರೆದಿದ್ದಾರೆ.
ಅಗ್ನಿಯ ಈ
ಏಳು ಬಣ್ಣವನ್ನು ಸೂರ್ಯ ಕಿರಣದ
ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ
ವಾತಾವರಣದಲ್ಲಿ ಅದರ ಪ್ರಭಾವ
ತರುವುದೇ ಯಜ್ಞ. ಈ
ಕ್ರಿಯೆಗೆ ಅಶ್ವತ್ಥಸಮಿತೆ ಒಂದು
ಪ್ರಮುಖ ಸಾಧನ.
ಸಾಡೇ
ಸಾಥ್ ಶನಿ ದೋಷವನ್ನು ಕೂಡ ಅಶ್ವತ್ಥ
ಮರ ದೂರ ಮಾಡುತ್ತದೆ....
ಇಂತಹ ಅರಳಿ
ಮರವನ್ನು ಯಾಕೆ ಉಳಿದ ದಿನದಲ್ಲಿ
ಮುಟ್ಟಬಾರದು ಈ ಪ್ರಶ್ನೆಗೆ ಉತ್ತರ
ಹೇಳ್ತೇನೆ ಕೇಳಿ ...
ಇದು
ಪದ್ಮಪುರಾಣದ ನೂರಾ ಹದಿನೆಂಟನೇಯ
ಅಧ್ಯಾಯದಲ್ಲಿ ಸೂತರಿಗೆ ಋಷಿಗಳು
ಪ್ರಶ್ನಿಸುತ್ತಿದ್ದಾರೆ...
ಆಗ ಶ್ರೀಕೃಷ್ಣ
ಸತ್ಯಭಾಮೆಗೆ ಹೇಳಿದ ಉತ್ತರವನ್ನು
ಋಷಿಗಳಿಗೆ ಸೂತರು ಹೇಳುತ್ತಾರೆ...
ಎಲ್ಲ
ಋಷಿಗಳು ಕೇಳುತ್ತಾರೆ
ಅಸ್ಪೃಶ್ಯತ್ವಂ
ಕಥಂ ಯಾತಃ ಸೂತ ಭೋಧಿತರುಸ್ತ್ವಯಂ
l
ಸ್ಪೃಶ್ಯ
ತ್ವಂ ಚ ಕಥಂ ಪ್ರಾಪ್ತಃ ತದಾಯಂ
ಶನಿವಾಸರೇ ll
ಏತದ್ವಿಸ್ತರತಸ್ಸರ್ವಂ
ವಕ್ತುಮರ್ಹಸಿ ನೋ ಭಗವಾನ್.
ಎಲೈ
ಸೂತನೇ ಶನಿವಾರ ಹೊರತು ಮಿಕ್ಕ
ದಿನಗಳಲ್ಲಿ ಏಕೆ ಅರಳಿ ಮರವನ್ನು
ಮುಟ್ಟಬಾರದು ವಿಸ್ತಾರವಾಗಿ
ಹೇಳು..
ಆಗ
ಸೂತ ಮಹರ್ಷಿಗಳು ಹೇಳುತ್ತಾರೆ
ಸಮುದ್ರ
ಮಥನದಿಂದ ನಾನಾ ವಸ್ತುಗಳು ಬಂದವು
ಅದರಲ್ಲಿ ಮೊದಲು ಬಂದವಳು ಅಲಕ್ಷ್ಮೀ
ಅಂದರೆ ದಾರಿದ್ರ್ಯ ಲಕ್ಷ್ಮೀ
ನಂತರ ಬಂದವಳು ಮಹಾಲಕ್ಷ್ಮೀ
,ದೇವತೆಗಳು
ಹೊಂದಿದ ರತ್ನಗಳಲ್ಲಿ ಮಹಾಲಕ್ಷ್ಮಿಯನ್ನೂ
, ಕೌಸ್ತುಭವನ್ನೂ
, ಆ
ದೇವತೆಗಳು ವಿಷ್ಣುವಿಗೆ ಕೊಟ್ಟರು.
ವಿಷ್ಣುವು
ಲಕ್ಷ್ಮಿಯನ್ನು ಹೆಂಡತಿಯನ್ನಾಗಿ
ಒಪ್ಪಿಕೊಂಡಾಗ ಆಕೆಯು ವಿಷ್ಣುವಿಗೆ
ಇಂತೆಂದು ವಿಜ್ಞಾಪಿಸಿಕೊಂಡಳು..
ಎಲೆ
ಮಧುಸೂದನನೇ ನನಗಿಂತ ಮೊದಲು
ಹುಟ್ಟಿದ ಈ ಅಲಕ್ಷ್ಮೀಗೆ ಮೊದಲು
ವಿವಾಹ ರೂಪವಾದ ಸಂಸ್ಕಾರವಾಗದೆ
ನನ್ನನ್ನು ಹೇಗೆ ಮದುವೆಯಾಗುತ್ತೀಯಾ
? ಈಕೆಗೆ
ಮೊದಲು ಮದುವೆ ಮಾಡಿ ಅನಂತರ ನನ್ನನ್ನು
ಮದುವೆಯಾಗಿ ಕರೆದುಕೊಂಡು ಹೋಗು
ಎಂದು ಬಿನ್ನವಿಸಿದಾಗ.
ಆಗ
ಲೋಕಮಾನ್ಯ ನಾದ ವಿಷ್ಣುವು ಆಕೆಯ
ಈ ಮಾತನ್ನು ಕೇಳಿ ಧೀರ್ಘವಾಗಿ
ತಪಸ್ಸು ಮಾಡಿದ.. ನಂತರ
ಉದ್ಧಾಲಕ ನೆಂಬ ಋಷಿಗೆ ಲಕ್ಷ್ಮಿಯ
ಮಾತಿನಂತೆ ಅಲಕ್ಷ್ಮೀ ಯನ್ನು
ಕೊಟ್ಟು ಮದುವೆ ಮಾಡಿದ .
ವಿಕಾರ
ರೂಪವುಳ್ಳ ಅಲಕ್ಷ್ಮೀಯನ್ನು
ಉದ್ದಾಲಕನು ವಿಷ್ಣುವಿನ ಮಾತನ್ನು
ಮೀರಲಾರದೆ ಒಪ್ಪಿ ಮದುವೆ ಮಾಡಿಕೊಂಡ
, ಅನಂತರ
ಅಲಕ್ಷ್ಮೀಯನ್ನು ಉದ್ಧಾಲಕನು
ತನ್ನ ಆಶ್ರಮಕ್ಕೆ ಕರೆದುಕೊಂಡು
ಬಂದ. ಹೋಮದ
ಧೂಮ ಉಳ್ಳ ,ಸುವಾಸನೆಯಾದ
, ವೇದಘೋಷ
ಗಳಿಂದ ಕೂಡಿರುವ ಆ ಆಶ್ರಮವನ್ನು
ದೂರದಿಂದಲೇ ನೋಡಿ ಆಕೆಯು ದುಃಖಗೊಂಡು
ಇಂತೆಂದಳು... ನಾನು
ನಿನ್ನ ಆಶ್ರಮಕ್ಕೆ ಬರಲಾರೆ ಕಾರಣ
ವೇದ
ಧ್ವನಿಯಿಂದ ಕೂಡಿದ,
ಪೂಜಾ ಪಾಠ
ನಡೆಯುವ ಸ್ಥಳ ಶಾಂತವಾಗಿರುವ ಈ
ಸ್ಥಳವು ನನ್ನ ವಾಸಕ್ಕೆ ಯೋಗ್ಯವಲ್ಲ
, ಅಂತ
ಹೇಳಿದಾಗ
ಉದ್ಧಾಲಕ
ನಿನ್ನ ವಾಸ ಸ್ಥಳ ಯಾವುದು ಅಂತ
ಕೇಳುತ್ತಾನೆ ಆಗ ಆ ದಾರಿದ್ರ್ಯ
ಲಕ್ಷ್ಮೀ ಹೇಳುತ್ತಾಳೆ…
ಒಬ್ಬೊಬ್ಬರಿಗೆ
ಸ್ನೇಹದಿಂದ ದಂಪತಿಗಳಿರುವಲ್ಲಿಯೂ
, ಪೂಜೆ
ಪುನಸ್ಕಾರ ನಡೆಯುವಲ್ಲಿ ,
ಹಿರಿಯರಿಗೆ
ಗೌರವಾದರ ನಡೆಯುವಲ್ಲಿ,
ಅತಿಥಿಸತ್ಕಾರ
ನಡೆಯುವಲ್ಲಿ ನೀತಿವಂತರ ಮನೆಯಲ್ಲಿ
ನನ್ನ ವಾಸ ಇರುವುದಿಲ್ಲ…
ಎಲ್ಲಿ
ಪ್ರತಿದಿನ ಯಾವತ್ತೂ ಯಾವ ಮನೆಯಲ್ಲಿ
ಜಗಳ ನಡೆಯುವುದು , ಅತಿಥಿಗಳು
ನಿರಾಶರಾಗಿ ಎಲ್ಲಿಂದ ಹೊರಹೋಗುತ್ತಾರೆ,
ಜೂಜು ನಡೆಯಲ್ಲಿ
ಪರರ ಹಣವನ್ನು ಕದಿಯುವಲ್ಲಿ ,
ಕಸಕಡ್ಡಿಗಳಿಂದ
ತುಂಬಿದ ಮನೆಯಲ್ಲಿ ,
ಪೂಜೆ ಪುನಸ್ಕಾರ
ನಡೆಯದ ಸ್ಥಳದಲ್ಲಿ ,
ಗೋವಧೆ ಮಧ್ಯಪಾನ
ತುಂಬಿರುವಲ್ಲಿ ನಾನು ವಾಸಿಸುತ್ತೇನೆ
ಅಂದಾಗ ...
ಉದ್ದಾಲಕನು
ಹೇಳಿದ ಎಲೈ ಅಲಕ್ಷ್ಮೀಯೇ ನೀನು
ಅರಳಿ ಮರದ ಬುಡದಲ್ಲೇ ಕ್ಷಣ ಕಾಲವಿರು
. ನಿನ್ನ
ವಾಸಕ್ಕೆ ಸರಿಯಾದ ಮನೆಯನ್ನು
ನೋಡಿಕೊಂಡು ಬರುತ್ತೇನೆ ,ಹೀಗೆಂದು
ಹೇಳಿ ಆಕೆಯನ್ನು ಅಲ್ಲಿ ಉದ್ದಾಲಕನು
ಕುರಿಸಿ ಹೊರಟುಹೋದನು ಬಹಳಹೊತ್ತು
ನೋಡಿದರು ಉದ್ದಾಲಕನ ಬಾರದಿರಲು
ಗಂಡನು ತನ್ನನ್ನು ಬಿಟ್ಟು ದರಿಂದ
ಆಕೆಯೂ ಬಹುವಾಗಿ ಅತ್ತಳು.
ವೈಕುಂಠದಲ್ಲಿರುವ
ಲಕ್ಷ್ಮಿಯು ಈ ಅಲಕ್ಷ್ಮಿ ಅಳುವಿನ
ಧ್ವನಿಯನ್ನು ಕೇಳಿ ತಾನೂ ಕಿನ್ನಳಾಗಿ
ವಿಷ್ಣುವಿಗೆ ಇಂತೆಂದಳು..
ಸ್ವಾಮಿ
ನನ್ನ ಅಕ್ಕನ ಗಂಡನು ಬಿಟ್ಟು
ಬಿಟ್ಟಿದ್ದರಿಂದ ದುಃಖ ಗೊಂಡಿದ್ದಾಳೆ
ಆಕೆಯನ್ನು ಸಮಾಧಾನಪಡಿಸು ,
ಆ ಮಾತಿನಿಂದ
ವಿಷ್ಣು ವು ಲಕ್ಷ್ಮೀ ಒಡಗೂಡಿ
ಅಲ್ಲಿಗೆ ಬಂದು ಆಕೆಯನ್ನು
ಸಮಾಧಾನಪಡಿಸುತ್ತ ಹೀಗೆ ಹೇಳಿದನು…
ಎಲೈ
ಅಲಕ್ಷ್ಮಿಯೇ ನೀನು ಯಾವಾಗಲೂ
ಅರಳಿ ಮರವನ್ನು ಆಶ್ರಯಿಸಿಕೊಂಡಿರು
ಅರಳಿ ಮರವು ನನ್ನ ಅಂಶದಿಂದ
ಹುಟ್ಟಿದ್ದು ಆದರೆ ಶನಿವಾರದ
ದಿವಸ ಮಾತ್ರ ಅಲ್ಲಿ ನಿನ್ನ ವಾಸ
ಬೇಡ .. ಕಾರಣ
ಶನಿವಾರ ದಿವಸ ಲಕ್ಷ್ಮಿಯು ಶನಿವಾರ
ದಿವಸ ಇಲ್ಲಿಗೆ ಬರುತ್ತಾಳೆ.
ಆದ್ದರಿಂದ
ಅರಳಿ ಮರವು ಶನಿವಾರ ದಲ್ಲಿ
ಪೂಜ್ಯವಾದುದು....
ಪ್ರತಿದಿನ
ಅರಳಿ ಮರವನ್ನು ಮುಟ್ಟಿ ಪೂಜೆ
ಮಾಡುವವರು ಅವರಲ್ಲಿ ಈ ಕನಿಷ್ಠ
ಲಕ್ಷ್ಮೀ ಸ್ಥಿರವಾಗಿ ಇರುವಳು
ಎಂದು ವರ ಕೊಟ್ಟು ವೈಕುಂಠಕ್ಕೆ
ಹೊರಟು ಹೋದನು....
ಆದ್ದರಿಂದ
ಅರಳಿ ಮರವನ್ನು ಶನಿವಾರ ಹೊರತು
ಪಡಿಸಿ ಉಳಿದ ದಿನಗಳಲ್ಲಿ ಮುಟ್ಟಿ
ಪೂಜೆ ಮಾಡಬಾರದು ಪ್ರದಕ್ಷಿಣೆ
ದೂರದಿಂದಲೇ ನಮಸ್ಕಾರ ಮಾಡಬೇಕು...
ಶನಿವಾರದ
ದಿನ ಅಶ್ವಥ್ ವೃಕ್ಷ ಪೂಜಿಸಿದರೆ
ರೋಗವನ್ನು ಪಾಪವನ್ನು ನಾಶಮಾಡುತ್ತದೆ.
ಒಳ್ಳೆಯ
ಬುದ್ದಿಯನ್ನು ಕೊಡುತ್ತದೆ ಒಳ್ಳೆಯ
ಮಕ್ಕಳು ಐಶ್ವರ್ಯಕ್ಕೆ ಕಾರಣ
ವಾಗುತ್ತದೆ..…
ಶ್ರೀಕೃಷ್ಣ
ಸತ್ಯಭಾಮೆಗೆ ಹೇಳಿದ ಉತ್ತರವನ್ನು
ಋಷಿಗಳಿಗೆ ಸೂತರು ಹೇಳುತ್ತಾರೆ......,
ಅದಕ್ಕೆ
ಸ್ನೇಹಿತರೆ ಮನೆಯಲ್ಲಿ ಮೂಲೆಮೂಲೆಗೆ
ಕಸ ಇಡಬೇಡಿ , ಯಾವಾಗಲೂ
ಜಗಳ ಮಾಡುತ್ತಿರುವ ಬೇಡಿ ,
ದೇವರಮನೆಯಲ್ಲಿ
ದೀಪವಿಲ್ಲದೆ ಇರಬೇಡಿ ,
ಆದಷ್ಟು
ಮನೆಯಲ್ಲಿ ಪೂಜೆ-ಪುನಸ್ಕಾರ
ಮಾಡುತ್ತಿದ್ದರೆ ,
ಮನೆ
ಸ್ವಚ್ಛವಾಗಿದ್ದರೆ ಅಲಕ್ಷ್ಮಿ
ಪ್ರವೇಶವಾಗುವದಿಲ್ಲ ,
ಒಂದು ಸಲ
ಅಲಕ್ಷ್ಮಿ ಪ್ರವೇಶವಾದರೆ ಮನೆಯಲ್ಲಿ
ದಾರಿದ್ರ್ಯ ರೋಗರುಜಿನ ಕಡತಗಳು
ಶುರುವಾಗುತ್ತದೆ.....
Il ಶ್ರೀಕೃಷ್ಣಾರ್ಪಣಮಸ್ತು
ll -------- Hari Om --------
🍃
ಅಶ್ವತ್ಥಮರದಲ್ಲಿ
ಭಗವಂತನು ಹಯಗ್ರೀಯ ರೂಪದಿಂದ
ವಿಶೇಷವಾಗಿ ಅಭಿವ್ಯಕ್ತನಾಗಿ ಈ
ಮರವು ಉಳಿದೆಲ್ಲಾ ಮರಗಳಿಗಿಂತ
ಹೆಚ್ಚು ಯೋಗ್ಯವೆಂದು ತೋರಿಸುತ್ತಾನೆ
.
🍃ಅಶ್ವತ್ಥ
ವೃಕ್ಷದ ಮಧ್ಯಭಾಗದಲ್ಲಿ ವಿಷ್ಣು,
ತುದಿಯಲ್ಲಿ
ರುದ್ರ, ಮೂಲಭಾಗದಲ್ಲಿ
ಬ್ರಹ್ಮ ದೇವರು ನೆಲೆಸಿರುವರು.
🍃
ಅಶ್ವತ್ಥಮರದ
ದರ್ಶನ ಪಾಪನಾಶಕ, ಸ್ಪರ್ಶ
ಶ್ರೀಕಾರಕ , ಪ್ರದಕ್ಷಿಣೆ
ಆಯುಷ್ಯಕಾರಕ ಎಂದು ಪದ್ಮ ಪುರಾಣ
ಹೇಳುತ್ತದೆ.
🍃
ಪ್ರತಿದಿನ
ಈ ವೃಕ್ಷದ ಸ್ಪರ್ಶ ನಿಷಿದ್ಧ
ಶನಿವಾರದಂದು ಮಾತ್ರ ಸ್ಪರ್ಶಿಸಬೇಕೆಂದು
ಧರ್ಮಶಾಸ್ತ್ರಗಳು
ವಿಧಿಸುತ್ತವೆ.
🍃ಸಂಧ್ಯಾಕಾಲದಲ್ಲಿ
ಸೂರ್ಯಾಸ್ತವಾದ ಮೇಲೆ ಪ್ರದಕ್ಷಿಣೆ
ಮಾಡಬಾರದು ಎಂದು ಪದ್ಮಪುರಾಣ
ಹೇಳುತ್ತದೆ
🍃ಏಳು
ಪ್ರದಕ್ಷಿಣೆ ಮಾಡಿದರೆ 10,000
ಗೋದಾನ
ಮಾಡಿದಷ್ಟು ಪುಣ್ಯ ಲಭಿಸುತ್ತದೆ.
ಬೇರೆ ಯಾವ
ವೃಕ್ಷವು ಇಷ್ಟು ಪುಣ್ಯಪ್ರದವಲ್ಲ.
🍃
ಅಶ್ವತ್ಥ
ಮರವನ್ನು ನೆಟ್ಟರೆ ಮೂರು ಸಂಪಿಗೆ
ಮತ್ತು ಎಕ್ಕೆಗಿಡ, ಏಳು
ಆಲದಮರ , ಎಂಟು
ಬಿಲ್ವಪತ್ರೆಗಿಡ , ಮತ್ತು
ನಿಂಬೆಮರ ನೆಟ್ಟಷ್ಟು ಫಲ.
🍃
ಜಲಾಶಯ ,
ನದಿ ಸಮೀಪದಲ್ಲಿ
ಅಶ್ವತ್ಥಮರವನ್ನು ನೆಟ್ಟರೆ
ಪಿತೃಗಳಿಗೆ ಬಹಳ ತೃಪ್ತಿಯಿಗುತ್ತದೆ.
ಅದರ ಎಲೆಗಳು
ಪರ್ವಕಾಲದಲ್ಲಿ ನೀರಿನಲ್ಲಿ
ಬಿದ್ದಾಗಲೆಲ್ಲಾ ಪಿಂಡ ಸಮಾನವಾಗಿ
ಪಿತೃಗಳಿಗೆ ಅಕ್ಷಯಲೋಕಗಳನ್ನು
ಕೊಡುತ್ತದೆ.
Ashwatha Tree Leaves
Trimurti
Gods reside on this tree ( Brahma in Roots & Vishnu in Middle
Stem & Shiva on Top )
Among trees, the Aswatha is the most important. In most of the
places, an idol or Murthy of Serpent God is consecrated below this tree. In
Kerala and Tamil Nadu the family which plants the tree does sacred
thread ceremony to the tree and then conducts its marriage with the
Neem tree. Most of the Serpent Temples in Karnataka and over South
India and Ganesha temples in Tamil Nadu are constructed below this
tree.
Moola Mantra:
ಮೂಲತೋ
ಬ್ರಹ್ಮರೂಪಾಯ ಮಧ್ಯತೋ
ವಿಷ್ಣುರೂಪಿಣೇ
ಅಗ್ರತಃ
ಶಿವರೂಪಾಯ ಅಶ್ವತ್ಥಾಯ ನಮೋ ನಮಃ
Moolatho Brahma roopaya, madhyatho Vishnu roopine,
Agratha Shiva roopaya Vruksha rajaya they namah||
मूलतो ब्रह्मरूपाय
मध्यतो विष्णुरूपिणे।
अग्रतः
शिवरूपाय अश्वत्थाय नमो नमः।।
5 Mantras associated with Ashwatha Tree or Vruksha
೧) ಮೂಲತೋ
ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ
|
ಅಗ್ರತೋ
ರುದ್ರರೂಪಾಯ ವೃಕ್ಷರಾಜಾಯ ತೇ
ನಮಃ ||
೨) ಅಶ್ವತ್ಥ
ಹುತಭುಕ್ ವ್ಯಾಸೋ ಗೋವಿಂದಸ್ಯ
ಸದಾಶ್ರಯಃ |
ಅಶೇಷಂ ಹರ ಮೇ
ಶೋಕಂ ವೃಕ್ಷರಾಜ ನಮೋಸ್ತುತೇ ||
೩)
ಅಮಂಗಲಾನಾಂ
ಶಮನೀಂ ಶಮನೀಂ ದುಷ್ಕ್ರತಸ್ಯ ಚ
|
ದುಸ್ವಪ್ನನಾಶಿನೀಂ
ಧನ್ಯಾಂ ಪ್ರಪದ್ಯೇಹಂ ಶಮೀಂ
ಶುಭಾಮ್|
ಶಮಿ ಶಮಯ ಮೇ
ಪಾಪಂ ಶಮಿ ಶತ್ರುವಿನಾಶಿನಿ |
ಅರ್ಜುನಸ್ಯ
ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನಿ
||
೪)
ದೇವಕಿಸುತಗೋವಿಂದ
ದೇವದೇವ(ವಾಸುದೇವ)
ಜಗತ್ಪತೇ |
ದೇಹಿ ಮೇ ತನಯಂ
ಕೃಷ್ಣ ತ್ವಾಮಹಂ ಶರಣಂ ಗತಃ ||
೫)
ಹಿಮವತ್ಯುತ್ತರೇ
ಪಾರ್ಶ್ವೇ ಸುರಸಾ ನಾಮ ಯಕ್ಷಿಣೀ
|
ತಸ್ಯಾಃ ಸ್ಮರಣ
ಮಾತ್ರೇಣ ವಿಶಲ್ಯಾ ಗರ್ಬಿಣೀ
ಭವೇತ್ ||
1) moolatO brahmaroopAya madhyatO viShNuroopiNE |
agratO
rudraroopAya vRukSharAjAya tE namaH ||
2) ashwattha hutaBuk vyAsO gOviMdasya sadAshrayaH |
ashEShaM
hara mE shOkaM vRukSharAja namOstutE ||
3) amaMgalAnAM shamanIM shamanIM duShkratasya cha
|
duswapnanAshinIM dhanyAM prapadyEhaM shamIM shubhAm|
shami
shamaya mE paapaM shami shatruvinaashini |
arjunasya
dhanurdhaari rAmasya priyadarshini ||
4) dEvakisutagOviMda dEvadEva(vAsudEva) jagatpatE |
dEhi mE
tanayaM kRuShNa tvAmahaM sharaNaM gataH ||
5) himavatyuttarE pArshvE surasA nAma yakShiNI |
tasyAH
smaraNa mAtrENa vishalyA garbiNI bhavEt ||
Purport
or Meaning of the Aswatha Mantra’s:
Moolatho Brahma roopaya, madhyatho Vishnu roopine,
Agratha Shiva roopaya Vruksha rajaya they namah|| 1
My salutations to the king of trees.
Whose root is the form of
Brahma,
Middle is the form of Lord Vishnu,
And top is the
form of Lord Shiva.
Aswatha sarva papani satha janma arjithanicha,
Nudhaswa mama vrakshendra, sarva aiswarya pradho bhava|| 2
The holy fig(banyan) tree pushes away, all sins earned,
In
several hundred births, and Oh king of trees,
Please grant me
all different types of wealth.
Ayurbalam yaso varcha, praja pasu vasooni cha,
Brahma prajnam cha medham cha thwam nodehi Vanaspathe|| 3
Would you not give me, Oh product of the forest.
Long life,
fame, splendour, children, cattle and riches,
As also knowledge
of God and intellectual wisdom.
Sathatham varuno raksheth thwamarad vrushtirasrayedh,
Parithasthwam nishevantham thrunani sukhamasthu they|| 4
You are always protected by Varuna as you are rain dependent,
And
you do not allow any grass to grow in the shade round you.
another Picture of Ashwatha tree
Akshi spandham bhujaspandham duswapnam dhurvichinthanam,
Sathroonam cha samuthanam hyaswastha samaya Prabho|| 5
Oh Lord Aswatha, please control pain in the eye,
Pain of hands,
bad dreams, bad and evil thoughts,
And help me in destruction of
my enemies.
Aswathaya varenyaya sarva aiswarya pradhayine,
Namo duswapna nasaya, suswapna phala dhayine|| 6
Oh Aswatha who blesses us and grants all type of wealth,
My
salutations to you, who destroys bad dreams and grants good dreams.
Yaam drushtwa muchythe rogai,
Sprushtwa papapai pramuchyathe,
Yad ashrayath chiran jeevi,
Tham Aswatham namamyaham|| 7
I salute that Aswatha,
Seeing which diseases flee,
Touching
which sins are destroyed,
And surrendering to which,
You
get long healthy life.
Aswatha sumaha bhaga, subhaga, Priya Darshana
Ishta kamam cha may dehi shatrubhyascha parabhavam|| 8
Oh great Lord Aswatha, who is pretty and looks pretty,
Please
fulfill all my desires and give disappointment to my enemies.
Aayu prajam dhanam dhanyam soubhagyam sarva sampadam,
Dehi deva maha Vruksha, thwam aham saranam gatha|| 9
I surrender fully to you and,
So be pleased to give, oh great
tree,
Long life, sons, wealth, cereals,
Great luck all
types of wealth.
Rig yajur sama manthrathma, sarva roopi, parathpara,
Aswatho Veda moolo asou rishibhi prochyathe sada|| 10
Great sages go in search of Aswatha,
As it is the soul of Rig,
Yajur and sama Vedas,
And takes all forms, greater than the
greatest,
And is the root of all the three Vedas.
Brahmaha guruha chaiva daridhro vyadhi peeditha,
Aavarthya laksha sankhyam tham sthothram yedath sukhee bhavth|| 11
If this prayer is repeated one hundred thousand times,
Even
those cursed by Brahma or the teacher,
And those who are poor
and diseased,
Would get cured of all ills and lead
a
pleasant life.
Vyaktha avyaktha swaroopaya, srushti sthithyantha karine,
Adhi madhyanth soonyaya vishtarasravase nama|| 12
Salutations to the very stable one,
Who has clear and unclear
forms,
Who creates, looks after and destroys,
And who does
not have beginning, middle and end.
Ravim rava vadharaogye,
Shivam some Shivaya cha,
Shakthim bhoume jayarthi cha,
Vanijyarthi budhe sarana|| 13
Gurou gurum cha Vidhyarthi,
Dhanarthi bhargave sriyam,
Sarva dukha vimoksharthee,
Sarvesam mandha vasare|| 14
Sarvada sarva devam scha,
Viseshanmada somayo,
Aswatha roopino deva,
Vruksha rajo prapoojayeth|| 15
Go
round on Sundays and worshiping Sun to get heath,
Go
round on Mondays and worshiping Shiva to
get pleasant life,
Go round on Tuesdays and worshiping
Parvathi to get victory
Go round on Wednesdays and
worshiping Devas, to get luck in
business,
Go round on Thursdays and Worshiping
Guru to get good knowledge
Go round on Fridays and worshiping
Goddess Lakshmi to get wealth
Go round on Saturdays and
worshiping the greatest god to get rid of all sorrow.
Always all gods especially Saturn and the moon
Worship the
God in the form of Aswatha
And offer prayers to this Lord of all
trees.
-------- - Hari
Om --------