Tuesday, February 23, 2021

Bhishma Ekadasi & Vishnu Sahasranama Jayanthi day - 23rd February 2021

 

 Bhishma Ekadasi & Vishnu Sahasranama Jayanthi day - 23rd February 2021

 

                                                            Sri Bhishmacharyaru 

ಭೀಷ್ಮ ಏಕಾದಶಿ ಅಂದೇ ವಿಷ್ಣು ಸಹಸ್ರನಾಮ ಜಯಂತಿ

on 23rd February 2021


Bhisma Ekadasi and Vishnu Sahasra Nama Jayanthi falls on 23rd February 2021

 

Bhishma informs the Power of Vishnu Sahasranama:



ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು.

. ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ

. ವಿಷ್ಣುಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.

. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

. ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

. ವಿಷ್ಣುಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

. ಶುದ್ಧಮನದಿಂದ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ.

. ವಿಷ್ಣುಸಹಸ್ರನಾಮ ಅಂದರೆ ಮಹಾವಿಷ್ಣುವಿನ ಸಹಸ್ರನಾಮ ಪಠನ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಕ್ಯಾನ್ಸೆರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತವರಣವೇ ಬದಲಾಗುತ್ತದೆ. ಮನೆಯವ ಮೈಯಲ್ಲಿ ಮನಸ್ಸಲ್ಲಿ ಆಧ್ಯಾತ್ಮದ ಶಕ್ತಿಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ಅಂಥ ಒಂದು ವಿಶೇಷ ಶಕ್ತಿ ಇದೆ.

೧೦. ವಿಷ್ಣುಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲವಯಸ್ಸಿನವರು ಪಠಿಸಬಹುದಾಗಿದೆ.

11.
ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪರಣ ಮಾಡಿ ಬರಬಹುದು . ಸಮಯ ವಿಲ್ಲದವರು ತಮ್ಮ ತಮ್ಮ ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗು ನಮ್ಮ ಸುತ್ತ ಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.

12. *
ಪ್ರಾಕೃತಿಕ ಸಮತೋಲನಕ್ಕಾಗಿ,
ಗ್ರಾಮದ ಶಾಂತಿಗಾಗಿ,
ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ

ನಿತ್ಯ ಪಠಿಸೋಣ*
***

ಮನುಷ್ಯನ ಆಯಸ್ಸು ನೂರು ವರ್ಷ…

ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.

ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ.
****

ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ .…


ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀ ರಾಮಾನುಜರ ಬಳಿ ದೂರು ಕೊಟ್ಟರು.


ಇದನ್ನು ಕೇಳಿದ ಶ್ರೀ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..


ವಿಚಾರ ತಿಳಿದ ಶ್ರೀ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು…


ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ... ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ... ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು ಭೂತ-ಭೃತ್: ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ ಶ್ರೀ ಭೂತ-ಭೃತ್ಯಯೇ ನಮಃ ಅನ್ನುವಂತೆ ಉಪದೇಶಿಸಿದರು..


ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು…


ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ .…


ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..


ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು...

▬▬▬
ஜ۩۞۩ஜ▬▬▬*▬▬▬ஜ۩۞۩ஜ▬▬
ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು
'
ಸರ್ವೇ ಜನಾಃ ಸುಖಿನೋ ಭವಂತು'

ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು*
▬▬▬
ஜ۩۞۩ஜ▬▬▬▬▬▬ஜ۩۞۩ஜ▬▬▬


------------ Hari OM ------------

No comments:

Post a Comment