Ayudha Pooje
Happy Ayudha Pooja
ಆಯುಧ ಪೂಜೆ 2026 – Ayudha Pooje 2026
ಆಯುಧ ಪೂಜೆ 2026 ರ ಶುಭ ಮುಹೂರ್ತ, ಪೂಜೆ ಮಾಡುವ ರೀತಿ
ಹಾಗೂ ಅದರ
ಮಹತ್ವವೇನು.?
ನವರಾತ್ರಿ
ಹಬ್ಬದ ಕೊನೆಯ ದಿನವೆಂದು ಕರೆಯಲಾಗುವ
ಮಹಾನವಮಿ ಅಥವಾ ನವರಾತ್ರಿಯ 9ನೇ
ದಿನದಂದು ಆಯುಧ ಪೂಜೆಗೆ ವಿಶೇಷ
ಮಹತ್ವವಿದೆ. ಆಯುಧ
ಪೂಜೆಯನ್ನು ಕೇವಲ ಕರ್ನಾಟಕದಲ್ಲಿ
ಮಾತ್ರವಲ್ಲ, ತಮಿಳುನಾಡು,
ಆಂಧ್ರಪ್ರದೇಶ,
ತೆಲಂಗಾಣ ಮತ್ತು
ಕೇರಳದಲ್ಲೂ ನಡೆಸಲಾಗುತ್ತದೆ.
ನವರಾತ್ರಿ ಹಬ್ಬದ
9ನೇ ದಿನದಂದು
ಅಂದರೆ, ಮಹಾನವಮಿಯಂದು
ಕುಶಲಕರ್ಮಿಗಳು ನಿಖರತೆ ಮತ್ತು
ಸೃಜನಶೀಲತೆಗಾಗಿ ದೇವರನ್ನು
ಬೇಡಿಕೊಳ್ಳುತ್ತಾ ತಮ್ಮ ಉಪಕರಣಗಳಿಗೆ
ಪೂಜೆಯನ್ನು ಸಲ್ಲಿಸುತ್ತಾರೆ.
ಆಯುಧ ಪೂಜೆ
ಹಿಂದೆಲ್ಲಾ ಕೇವಲ ಶಸ್ತ್ರಾಸ್ತ್ರಗಳ
ಪೂಜೆಯಾಗಿತ್ತು. ಈ
ದಿನದಂದು ರಾಜರು ತಮ್ಮ ಆಯುಧಗಳಿಗೆ
ಪೂಜೆಯನ್ನು ಮಾಡುತ್ತಿದ್ದರು.
ಆದರೆ,
ಇದೀಗ ಎಲ್ಲಾ
ರೀತಿಯ ಉಪಕರಣಗಳಿಗೂ ಪೂಜೆಯನ್ನು
ಮಾಡಲಾಗುತ್ತದೆ. ಆಯುಧ
ಪೂಜೆಯು ಕೌಶಲ್ಯ ಮತ್ತು ನಾವೀನ್ಯತೆಯನ್ನು
ಗೌರವಿಸುವ ಪೂಜೆಯಾಗಿದೆ.
2026ರ ಆಯುಧ ಪೂಜೆಯನ್ನು
ಅಕ್ಟೋಬರ್ 20 ರಂದು
ಮಂಗಳವಾರದ ದಿನ ಮಾಡಲಾಗುವುದು.
2026ರ ಆಯುಧ ಪೂಜೆಯ
ಕುರಿತು ಸಂಪೂರ್ಣ ಮಾಹಿತಿ ಹೀಗಿದೆ.
1. ಆಯುಧ
ಪೂಜೆ 2026ರ
ಶುಭ ಮುಹೂರ್ತ:
- ಆಯುಧ
ಪೂಜೆ ದಿನಾಂಕ: 2026ರ
ಅಕ್ಟೋಬರ್20ರಂದು,
ಮಂಗಳವಾರ
-
ನವಮಿ ತಿಥಿ
ಪ್ರಾರಂಭ: 2026ರ
ಅಕ್ಟೋಬರ್ 19ರಂದು
ಸೋಮವಾರ ಹಗಲು 10:51 am ರಿಂದ
-
ನವಮಿ ತಿಥಿ
ಮುಕ್ತಾಯ: 2026ರ
ಅಕ್ಟೋಬರ್ 20ರಂದು,
ಮಂಗಳವಾರ ಹಗಲು
12:50 pm ರವರೆಗೆ
-
ಆಯುಧ ಪೂಜೆಗೆ
ಶುಭ ಸಮಯ: ವಿಜಯ
ಮುಹೂರ್ತ 2026ರ
ಅಕ್ಟೋಬರ್ 20ರಂದು,
ಮಂಗಳವಾರ ಮಧ್ಯಾಹ್ನ
02:02 pm ರಿಂದ
02:49 pm ರವರೆಗೆ
(ಅವಧಿ :
47 ನಿಮಿಷಗಳು)
2. ಆಯುಧ
ಪೂಜೆ ಮಹತ್ವವೇನು.?
ಆಯುಧ ಪೂಜೆಯ ದಿನದಂದು ನಾವು ಕೆಲಸದ ವೇಳೆ ಬಳಸುವ ಉಪಕರಣಗಳನ್ನು, ಯಂತ್ರೋಪಕರಣಗಳನ್ನು ಅಥವಾ ಆಯುಧಗಳನ್ನು ಪೂಜಿಸುವುದರಿಂದ ಅದರ ಬಗ್ಗೆ ಗೌರವದ ಭಾವನೆ ಮೂಡುತ್ತದೆ. ತೃಪ್ತಿಯ ಭಾವನೆಯನ್ನು ಹುಟ್ಟು ಹಾಕುತ್ತದೆ. ಈ ಪೂಜೆಯನ್ನು ಮಾಡುವುದಕ್ಕೂ ಮುನ್ನ ಯಂತ್ರೋಪಕರಣಗಳನ್ನು ಶುಚಿಗೊಳಿಸಲಾಗುತ್ತದೆ. ಅದಕ್ಕೆ ಅರಿಶಿನ, ಕುಂಕುಮ ಅಥವಾ ಶ್ರೀಗಂಧದ ತಿಲಕವನ್ನಿಟ್ಟು, ಹೂವುಗಳಿಂದ ಅಲಂಕರಿಸಲಾಗುತ್ತದೆ. ಇದು ನಾವು ಬಳಸುವ ಯಂತ್ರೋಪಕರಣಗಳಿಗೆ, ಉಪಕರಣಗಳಿಗೆ ಗೌರವವನ್ನು ಸೂಚಿಸುವ ವಿಧಾನವಾಗಿದೆ. ನಮ್ಮಲ್ಲಿ ಅವುಗಳ ಮಹತ್ವವನ್ನು ಹೆಚ್ಚಿಸುತ್ತದೆ. ನಾವು ಮಾಡುವ ಕೆಲಸದ ಮೇಲೆ ಒಲವನ್ನು ಹೆಚ್ಚಿಸುವ ಕೆಲಸವನ್ನು ಈ ಆಯುಧ ಪೂಜೆ ಮಾಡುತ್ತದೆ.
PIC-1
3. ಆಯುಧ
ಪೂಜೆಯನ್ನು ಮಾಡುವುದು ಹೇಗೆ.?
1) ಈ
ದಿನ ಮನೆ ಅಥವಾ ಕೆಲಸದ ಸ್ಥಳವನ್ನು
ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.
2) ಮಾವಿನ
ಎಲೆ ತೋರಣಗಳನ್ನು ಮುಂಭಾಗದ
ಬಾಗಿಲಲ್ಲಿ ನೇತು ಹಾಕಲಾಗುತ್ತದೆ.
3) ವಾಹನಗಳನ್ನು
ತೊಳೆಯಲಾಗುತ್ತದೆ ಮತ್ತು ಉಪಕರಣಗಳು
ಮತ್ತು ಸಲಕರಣೆಗಳನ್ನು
ಸ್ವಚ್ಛ ಗೊಳಿಸಲಾಗುತ್ತದೆ.
4) ದೇವತೆಗಳ
ಪ್ರತಿಮೆಗಳು ಮತ್ತು ಚಿತ್ರಗಳನ್ನು
ಅಲಂಕರಿಸಿ, ಅದಕ್ಕೆ
ಅರಶಿನ, ಕುಂಕುಮ
ಹಾಗೂ
ಶ್ರೀಗಂಧವನ್ನು ತಿಲಕದ ರೀತಿ ಇಡಬೇಕು.
5) ಆಯುಧ
ಪೊಜೆಯಲ್ಲಿ ಗಣೇಶ, ಲಕ್ಷ್ಮಿ
ಮತ್ತು ಸರಸ್ವತಿ ದೇವಿಯನ್ನು
ಪೂಜಿಸಲಾಗುತ್ತದೆ.
6) ತಾಜಾ
ಹೂವುಗಳಿಂದ ಅಲಂಕಾರವನ್ನು
ಮಾಡಲಾಗುತ್ತದೆ.
7) ಬಾಳೆ
ಗಿಡಗಳನ್ನು ಕಟ್ಟಲಾಗುತ್ತದೆ.
8) ಏಕಾಗ್ರತೆ
ಮತ್ತು ಜ್ಞಾನದ ಆಶೀರ್ವಾದವನ್ನು
ಪಡೆಯುವ ಸಲುವಾಗಿ ಬರೆಯುವ ಉಪಕರಣಗಳು,
ಪುಸ್ತಕಗಳು
ಮತ್ತು ಲ್ಯಾಪ್ ಟಾಪ್ಗಳನ್ನು
ದೇವತೆಗಳ ಮುಂದೆ ಇಟ್ಟು ಪೂಜೆಯನ್ನು
ಮಾಡಲಾಗುತ್ತದೆ.
9) ಮಂಡಕ್ಕಿ,
ಬೆಲ್ಲ ಹಾಗೂ
ಕಡಲೆ ಕಾಳುಗಳನ್ನು ಮಿಶ್ರಣ ಮಾಡಿ
ಪ್ರಸಾದವನ್ನು ತಯಾರಿಸಲಾಗುತ್ತದೆ.
10) ಹಣ್ಣುಗಳು,
ಬಿಳಿ ಕುಂಬಳಕಾಯಿ
ಮತ್ತು ಹೂವುಗಳನ್ನು ದೇವರಿಗೆ
ಅರ್ಪಿಸಲಾಗುತ್ತದೆ.
11) ಈ
ದಿನ ವಾಹನಗಳಿಗೂ ಪೂಜೆಯನ್ನು
ಮಾಡಲಾಗುತ್ತದೆ. ವಾಹನವನ್ನು
ಪೂಜಿಸಿದ ಬಳಕ ಅದರ ಚಕ್ರದ ಕೆಳಗೆ
ನಿಂಬೆ ಹಣ್ಣುಗಳನ್ನು ಇಟ್ಟು ಅದರ
ಮೇಲೆ ವಾಹನವನ್ನು ಚಲಾಯಿಸುವ
ಮೂಲಕ ವಾಹನ ಪೂಜೆಯನ್ನು
ಪೂರ್ಣಗೊಳಿಸಲಾಗುತ್ತದೆ.
ಆಯುಧ
ಪೂಜೆಯ ದಿನ ಉಪಕರಣಗಳನ್ನು
ಪೂಜಿಸುವುದರಿಂದ ಅವುಗಳ ಮೇಲೆ
ದೇವರ ಶಕ್ತಿ ಮತ್ತು ಆಶೀರ್ವಾದ
ಉಳಿಯುತ್ತದೆ. ಅವುಗಳನ್ನು
ಬಳಸಿಕೊಂಡು ಯಾವುದೇ ಕೆಲಸಗಳನ್ನು
ಮಾಡಿದರೂ ಅದರಂದ ನಮಗೆ ಯಶಸ್ಸು
ದೊರೆಯುತ್ತದೆ ಎನ್ನುವ ನಂಬಿಕೆಯಿದೆ.
------------------------- Hari Om -----------------------












