Friday, June 7, 2024

Facts about Hinduism

 

Facts about Hinduism.



1) Hinduism is the oldest Religion in the world. The earliest documents on Hinduism date back to 5,500 BCE.

2) No one knows – or cares to know – who started Hinduism. There is no one founder of Hinduism; it’s a way of life. The Religion has evolved throughout the years and will continue to do so.

3) Time is separated into four yugas. At the end of the fourth Yuga, all humans will die in an apocalypse, and a new era will come about. Each YUGA lasts thousands of years, with one cycle lasting 4.32 billions years. Right now, we’re living in the second half of the final Yuga. But don’t worry – the apocalypse won’t come for another 300 years.

4) With the concept of Yuga , Hindus believe in a circular concept of time, rather than linear. This explains why Re-incarnation is a central tenant of Hinduism.

5) Hinduism is the Third Largest Religion in the World. More than 1 billion people consider themselves Hindus, and 80% of all Hindus Live in INDIA.

6) Sanskrit is the oldest language in the world, the “Mother of all Languages.” Every Hindu book is written in Sanskrit, and it is said that Sanskrit is the language of the Demi-Gods.

7) Speaking of gods, Hinduism is not a true polytheism. Hindus believe in one god, Brahma, who is manifested in thousands of other gods. It’s up to each Hindu which god they worship.

8) Hindus have three main gods named The Trimurti. Brahma is the creator of the universe, Vishnu is the preserver of the universe, and Shiva destroys the world in order for the world to recreate.

9) Basic concepts of mathematics, like the number zero, the decimal system, infinity and pi, were first used by Hindus.

10) The number 108 is the most sacred number for Hindus. It’s the ratio of the Sun’s distance from earth to the Sun’s diameter, as well as the ratio of the Moon’s distance from Earth to the Moon’s diameter.

11) Most Hindus are strict Vegetarians. Cows are also viewed as Sacred animals. Knowing they will never be eaten by Hindus, Cows roam the streets of India.

12) Thank your Lucky stars for Hinduism – they invented the concept of marriage.

13) The word “Hinduism” doesn’t mean anything, since Hinduism did not start out as a religion. It’s a made-up word used by Greeks and Arabs to describe those who are from the “Sindhu” river. The way of life these people follow is called Hinduism.

14) The ultimate goal for Hindus is to attain salvation.

15) Rivers are viewed as sacred. But no other river is worshiped as much as the Ganges River. Every person’s sin is washed away in the river when he/she bathes in the Ganges, who is also considered a goddess.

16) Aum or Om is considered the first sound from the conscious mind, and the sound that birthed the universe.

17) If you go to an acupuncturist, thank the Hindus (and the Chinese) for the invention of acupuncture.

18) Saffron is the official color of Hinduism, and the saffron flag is the official flag of Hindus.

19) The Lotus Flower is a special flower for Hindus. It represents “Good-will, Peace, Prosperity and Happiness.”

20) Kumbh Mela is a pilgrimage Hindus take to the confluence of the Ganges and Yamuna rivers. They go there in order to wash their sins away and help bring salvation. In 2013, 30 million people celebrated Kumbh Mela, making it the largest gathering of human beings in World history. 

 

----------------- Hari Om   ----------------- 


Wednesday, June 5, 2024

21 Scientific Truths Hidden in Hinduism

 


ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು..!


21 Scientific Truths Hidden in Hinduism



1 ) ಹೆಂಗಸರು ಏಕೆ ಕಾಲುಂಗುರವನ್ನು ಹಾಕಿ ಕೊಳ್ಳುತ್ತಾರೆ?

ಕಾಲುಂಗುರ ಹಾಕಿ ಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಅದೇನೆಂದರೆ ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಈ ಕಾಲುಂಗುರವನ್ನು ಹಾಕಿ ಕೊಳ್ಳುತ್ತಾರೆ. ಇದರಲ್ಲಿರುವ ನರವು ನೇರವಾಗಿ ಗರ್ಭಾಶಯ, ಹೃದಯವನ್ನು ಸಂಪರ್ಕಿಸುತ್ತದೆ. ಇದಕ್ಕೆ ಕಾಲುಂಗುರವನ್ನು ಹಾಕಿ ಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುತ್ತದೆ. ಇದರಿಂದ ಗರ್ಭಕೋಶಕ್ಕೆ ನಿರಂತರವಾಗಿ ರಕ್ತ ಪೂರೈಕೆಯು ಸರಾಗವಾಗಿ ಸಾಗುತ್ತದೆ ಮತ್ತು ಋತು ಚಕ್ರವು ಯಾವುದೇ ದೋಷಗಳಿಲ್ಲದೆ ನಡೆಯುತ್ತದೆ. ಬೆಳ್ಳಿಯು ಅತ್ಯುತ್ತಮವಾದ ವಾಹಕವಾಗಿದ್ದು, ಇದು ಭೂಮಿಯಲ್ಲಿನ ಧೃವೀಯ ಶಕ್ತಿಗಳನ್ನು ಎಳೆದು ಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ.

2 ) ನಾವೇಕೆ ತುಳಸಿ ಗಿಡಗಳನ್ನು ಪೂಜಿಸುತ್ತೇವೆ?

ಹಿಂದೂ ಧರ್ಮವು "ತುಳಸಿ" ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. "ಪವಿತ್ರ ತುಳಸಿ" ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲೂ ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕ, ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯ ಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣ ಬಹುದು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆ್ಯಂಟಿ ಬಯೋಟಿಕ್.


ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿ ಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟ ಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.



3 ) ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ:

ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳು ಆಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿ ಕೊಂಡು ಬಂದಿರುತ್ತದೆ (ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ) ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ (ಇದನ್ನು ಕರುಣಾ ಎಂದು ಕರೆಯುತ್ತಾರೆ) ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು, ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಮನಸ್ಸು, ಹೃದಯಗಳೆರಡುನ್ನೂ ಬೆಸೆಯುತ್ತದೆ. ಇದೇ ಕ್ರಿಯೆಯನ್ನು ಹಸ್ತ ಲಾಘವ ಮಾಡುವ ಮೂಲಕ ಹಾಗೂ ಅಪ್ಪಿ ಕೊಳ್ಳುವ ಮೂಲಕ ಸಹ ಮಾಡ ಬಹುದು.


ಮೆದುಳಿನಿಂದ ಆರಂಭವಾಗುವ ನರಗಳು ನಿಮ್ಮ ಇಡೀ ದೇಹದ ತುಂಬಾ ಹರಡಿ ಕೊಂಡಿರುತ್ತವೆ. ಈ ನರಗಳು ನಿಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ. ಯಾವಾಗ ನೀವು ನಿಮ್ಮ ಕೈ ಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ "ಧಾರಕಗಳಾಗಿ" ಕಾರ್ಯ ನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿಯನ್ನು ನೀಡುವ ಅಂಶವಾಗಿ ಗುರುತಿಸಲ್ಪಡುತ್ತದೆ.



4 ) ನೆಲದ ಮೇಲೆ ಕುಳಿತು ಊಟ ಮಾಡುವುದು:

ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಅದು ಯೋಗ ಸಾಧನೆಯ ಒಂದು ಆಸನವೆನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಹೇಳುವಂತೆ ಇದು ಸುಖವಾಗಿ ಅಂದರೆ ಯಾವುದೇ ನೋವಿಲ್ಲದೆ ಕೂರ ಬಹುದಾದ ಆಸನ. ಈ ಆಸನದಲ್ಲಿ ಕೂರುವುದರಿಂದ ರಕ್ತ ಪರಿಚಲನೆಯು ಯಾವುದೇ ಅಡೆತಡೆಗಳಿಲ್ಲದೆ ನಡೆದು, ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನೇ ನಾವು ಕುರ್ಚಿಯ ಮೇಲೆ ಕುಳಿತು ಅಥವಾ ನಿಂತು ಊಟ ಮಾಡುವುದರಿಂದ ನಮಗೆ ಈ ಪ್ರಯೋಜನಗಳು ಸಿಗುವುದಿಲ್ಲ.



5 ) ಹಣೆಗೆ ತಿಲಕ ಹಚ್ಚುವ ಕ್ರಮ:

 
ಪುರಾತನ ಕಾಲದಿಂದಲು ಹಣೆಯ ಮೇಲೆ ಎರಡು ಹುಬ್ಬುಗಳ ನಡುವಿನ ಭಾಗದಲ್ಲಿ ನೆಲೆಸಿರುವ ಸ್ಥಳವನ್ನು ಮಾನವ ದೇಹದ ಪ್ರಧಾನ ನರಕೇಂದ್ರವೆಂದು ಪರಿಗಣಿಸಲಾಗಿದೆ. ತಿಲಕವು ದೇಹದಲ್ಲಿನ ಶಕ್ತಿಯು ಪೋಲಾಗುವುದನ್ನು ತಡೆಯುತ್ತದೆ. ಎರಡು ಹುಬ್ಬುಗಳ ನಡುವೆ ಇಡುವ ಕೆಂಪು "ಕುಂಕುಮ"ವು ದೇಹದಲ್ಲಿನ ಶಕ್ತಿಯನ್ನು ಮರು ಸಂಚಯಗೊಳಿಸುತ್ತದೆ ಮತ್ತು ಏಕಾಗ್ರತೆಯ ವಿವಿಧ ಘಟ್ಟಗಳನ್ನು ನಿಯಂತ್ರಿಸುತ್ತದೆ.

6 ) ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ:

ಮಕ್ಕಳಿಗೆ ಕಿವಿ ಚುಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈದ್ಯರು ಸಹ ಈ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತ ಪಡಿಸಿದ್ದಾರೆ. ಏಕೆಂದರೆ ಇದು ಚುಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬೌದ್ಧಿಕ ಬೆಳವಣಿಗೆ ಮತ್ತು ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಿಸಿ ಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ. ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕಿವಿಗಳಿಗೆ ಫ್ಯಾಶನ್ ಆಗಿ ತೋರುವ ಕಿವಿಯೋಲೆಗಳನ್ನು ಧರಿಸುತ್ತಾರೆ.

7 ) ಭಾರತೀಯ ಮಹಿಳೆಯರು ಏಕೆ ಬಳೆಗಳನ್ನು ಧರಿಸುತ್ತಾರೆ?

ಸಾಮಾನ್ಯವಾಗಿ ಮನುಷ್ಯರಲ್ಲಿ ಮೊಣಕೈ ಭಾಗವು ಅತಿ ಹೆಚ್ಚು ಸಕ್ರಿಯವಾಗಿರುವ ಭಾಗವಾಗಿದೆ. ಇದರ ಜೊತೆಗೆ ಇದೇ ಭಾಗದಲ್ಲಿನ ನಾಡಿಯನ್ನು ಪರೀಕ್ಷಿಸಿಯೇ ಜನರಿಗೆ ಬರುವ ವಿವಿಧ ಕಾಯಿಲೆಗಳನ್ನು ಗುರುತಿಸ ಬಹುದು. ಮಹಿಳೆಯರು ಬಳೆಗಳನ್ನು ತಮ್ಮ ಅಂಗೈಗೆ ಧರಿಸಿ ಕೊಳ್ಳುವುದು ತಿಳಿದ ವಿಚಾರವೇ. ಇದರಿಂದ ಬಳೆಗಳ ನಿರಂತರ ಘರ್ಷಣೆಯು ಈ ಭಾಗದ ಮೇಲೆ ಆಗುತ್ತಿರುತ್ತದೆ. ಆಗ ಇದು ದೇಹದಲ್ಲಿನ ರಕ್ತ ಪರಿಚಲನೆಯು ಅಧಿಕಗೊಳ್ಳುತ್ತದೆ. ಕೆಲವೊಮ್ಮೆ ನಮ್ಮ ದೇಹದಲ್ಲಿ ಸೃಷ್ಟಿಯಾಗುವ ವಿದ್ಯುತ್ ನಮ್ಮ ತ್ವಚೆಯ ಮೂಲಕ ಹೊರ ಬರುತ್ತದೆ, ಆಗ ಬಳೆಗಳು ಅದನ್ನು ಎಳೆದು ಕೊಂಡು ಪುನಃ ನಮ್ಮ ದೇಹಕ್ಕೆ ರವಾನಿಸುತ್ತವೆ. ಏಕೆಂದರೆ ಬಳೆಗಳು ದುಂಡಗೆ ವೃತ್ತಾಕಾರವಾಗಿ ಇರುವುದರಿಂದ ವಿದ್ಯುತ್ ಇತರ ಕಡೆ ಪ್ರವಾಹಿಸಲು ಸಾಧ್ಯವಾಗದೆ ಮರಳಿ ದೇಹಕ್ಕೆ ರವಾನೆಯಾಗುತ್ತದೆ.

 


 

8 ) ದೇವಾಲಯಗಳಲ್ಲಿ ಘಂಟೆಗಳು ಏಕೆ ಇರುತ್ತವೆ?

ಜನರು ದೇವಾಲಯಗಳಿಗೆ ಭೇಟಿ ನೀಡಿದಾಗ ಗರ್ಭಗುಡಿಯನ್ನು ಪ್ರವೇಶಿಸುವ ಮೊದಲು ಘಂಟೆಯನ್ನು ಬಾರಿಸುತ್ತಾರೆ. ಕಾರಣವೇನೆಂದರೆ ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದಲ್ಲದೆ ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ವೈಜ್ಞಾನಿಕವಾಗಿ ಇದನ್ನು ವಿವರಿಸ ಬೇಕೆಂದರೆ ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ಈ ಘಂಟೆಯನ್ನು ಯಾವ ಪ್ರಕಾರ ಮಾಡಿರುತ್ತಾರೆ ಎಂದರೆ ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆಯಂತೆ. ನಾವು ಯಾವಾಗ ಘಂಟೆಯನ್ನು ಹೊಡೆಯುತ್ತೇವೆಯೋ, ಆಗ ಅದು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿ ಧ್ವನಿಸುತ್ತದೆ.

9 ) ಗಂಡಸರ ತಲೆಯ ಮೇಲೆ ಶಿಖೆ:

ಆಯುರ್ವೇದದ ಆದಿ ತಜ್ಞನಾದ ಸುಶ್ರುತ ಋಷಿಯು ತಲೆಯಲ್ಲಿನ ಅತ್ಯಂತ ಸೂಕ್ಷ್ಮ ಭಾಗವನ್ನು "ಅಧಿಪತಿ ಮರ್ಮ" ಎಂದು ಗುರುತಿಸಿದ್ದನು. ಇದು ಎಲ್ಲಾ ನರಗಳು ಕೂಡುವ ಭಾಗವಾಗಿದೆ. ಶಿಖೆಯು ಈ ಭಾಗವನ್ನು ರಕ್ಷಿಸುತ್ತದೆ. ಇದು ಮೆದುಳಿನ ಕೆಳಗೆ ಇರುವ ಬ್ರಹ್ಮರಂಧ್ರವನ್ನು ಕಾಪಾಡುತ್ತದೆ. ಇಲ್ಲಿಗೆ ದೇಹದ ಕೆಳಭಾಗದಿಂದ ಬರುವ ಸುಶುಮ್ನಾ ನಾಡಿಯು ಸಂಪರ್ಕಿಸುತ್ತದೆ. ಯೋಗದಲ್ಲಿ ಬ್ರಹ್ಮ ರಂಧ್ರವು ಏಳು ಚಕ್ರಗಳಲ್ಲಿಯೇ ಅತ್ಯಂತ ಶ್ರೇಷ್ಟವಾದ ಚಕ್ರವಾಗಿರುತ್ತದೆ. ಇದು ಸಾವಿರ ದಳಗಳ ಕಮಲಕ್ಕೆ ಸರಿಸಮವೆಂಬ ಭಾವನೆ ಯೋಗಿಗಳಲ್ಲಿ ಇದ್ದು, ಜ್ಞಾನ ಕೇಂದ್ರದಂತೆ ಕೆಲಸ ಮಾಡುತ್ತದೆ. ಶಿಖೆಯು ಈ ಕೇಂದ್ರವನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ಓಜಸ್ಸು ಎಂಬ ಶಕ್ತಿಯನ್ನು ಸಂರಕ್ಷಿಸುತ್ತದೆ.

10 ) ನಾವೇಕೆ ವಿಗ್ರಹಗಳನ್ನು ಪೂಜಿಸುತ್ತೇವೆ?

ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟ ಪಡಿಸಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರ ಮನುಷ್ಯನು ತಾನು ನೋಡುವುದರ ಆಧಾರದ ಮೇಲೆ ಆಲೋಚನೆಗಳನ್ನು ಹೊಂದುತ್ತಾನಂತೆ. ಒಂದು ವೇಳೆ ನಿಮ್ಮ ಮುಂದೆ ಮೂರು ವಸ್ತುಗಳು ಇದ್ದಲ್ಲಿ, ಅದರಲ್ಲಿ ಯಾವ ವಸ್ತುವನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳು ಬದಲಾಗುತ್ತವೆಯಂತೆ. ಈ ಕಾರಣವಾಗಿಯೇ ಪ್ರಾಚೀನ ಕಾಲದಲ್ಲಿ ಮೂರ್ತಿ ಪೂಜೆಯು ಆರಂಭಗೊಂಡಿತು. ಯಾವಾಗ ಜನರು ದೇವರನ್ನು ಮೂರ್ತಿಯ ರೂಪದಲ್ಲಿ ನೋಡಲು ಆರಂಭಿಸಿದರೋ, ಆಗಲೇ ಅವರ ಮನಸ್ಸನ್ನು ಏಕ ಚಿತ್ತದಿಂದ ದೇವರ ಮೇಲೆ ನೆಲೆಗೊಳಿಸಲು ಸಾಧ್ಯವಾಗುತ್ತ ಹೋಯಿತು. ಇದರಿಂದ ಅವರ ಧ್ಯಾನಕ್ಕೆ ಯಾವುದೇ ಭಂಗ ಬರುತ್ತಿರಲಿಲ್ಲ ಮತ್ತು ಅವರಲ್ಲಿ ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತಿತ್ತು.

11 ) ಸೂರ್ಯ ನಮಸ್ಕಾರ:

ಹಿಂದೂಗಳು ಸೂರ್ಯ ಭಗವಾನ್‍ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಇದನ್ನು ಮಾಡುತ್ತಾರೆ. ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳ ಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿ ಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು ಸದುಪಯೋಗ ಪಡಿಸಿ ಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

12 ) ನಾವೇಕೆ ಉಪವಾಸವಿರುತ್ತೇವೆ?

ಉಪವಾಸದ ಹಿಂದಿನ ತತ್ವವು ಆಯುರ್ವೇದದಲ್ಲಿ ಅಡಗಿದೆ. ಈ ಪ್ರಾಚೀನ ವೈದ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳೇ ಆಗಿರುತ್ತದೆ ಎಂದು ಹೇಳುತ್ತದೆ. ಈ ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರ ಬಹುದು. ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ.


ಒಂದು ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಈ ಅವಧಿಯಲ್ಲಿ ನಿಯಮಿತವಾಗಿ ನಿಂಬೆ ರಸವನ್ನು ಸೇವಿಸುವುದರಿಂದ ದೇಹದಲ್ಲಿ ವಾಯು ತುಂಬಿ ಕೊಳ್ಳುವ ಸಮಸ್ಯೆಯು ತಲೆದೋರುವುದಿಲ್ಲ. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದ್ಲಲಿ ಶೇ. 80%ರಷ್ಟು ನೀರು ಮತ್ತು ಶೇ. 20%ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಈ ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿ ಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳನ್ನು ಹಾಗು ಇತ್ಯಾದಿಗಳನ್ನು ಇದು ಸರಿ ಪಡಿಸುತ್ತದೆ.



13 ) ನಮಸ್ಕಾರ ಮಾಡಲು ಎರಡು ಅಂಗೈಗಳನ್ನು ಜೋಡಿಸುವುದು:

ಹಿಂದೂ ಸಂಪ್ರದಾಯದಲ್ಲಿ ಅತಿಥಿಗಳನ್ನು ಅಥವಾ ಹಿರಿಯರನ್ನು ಕಂಡಾಗ ಅವರನ್ನು ಸ್ವಾಗತಿಸಲು "ನಮಸ್ಕಾರ" ಮುದ್ರೆ ಎಂದರೆ ಎರಡು ಅಂಗೈಗಳನ್ನು ಜೋಡಿಸುವ ಕ್ರಿಯೆಯನ್ನು ಮಾಡಲಾಗುತ್ತದೆ. ಇನ್ನು ಇದರ ಹಿಂದಿನ ವೈಜ್ಞಾನಿಕ ಸತ್ಯಾಂಶವನ್ನು ನೋಡುವುದಾದರೆ, ನಮಗೆ ತಿಳಿದು ಬರುವುದು ಇಷ್ಟು. ಎರಡು ಕೈಗಳ ಅಂಗೈಗಳನ್ನು ಪರಸ್ಪರ ಜೋಡಿಸುವುದರಿಂದ ಹತ್ತು ಬೆರಳುಗಳು ಪರಸ್ಪರ ಕೂಡುತ್ತವೆ. ಆಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ತಾಕುತ್ತವೆ. ಇದರಿಂದ ನಮಗೆ ಪರಿಚಯವಾಗುವ ವ್ಯಕ್ತಿಯ ಹೆಸರನ್ನು ದೀರ್ಘಕಾಲ ನಾವು ನೆನಪಿನಲ್ಲಿ ಇಟ್ಟು ಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಾವು ದೈಹಿಕವಾಗಿ ಆ ವ್ಯಕ್ತಿಯನ್ನು ಸ್ಪರ್ಶಿಸಲು ಹೋಗದ ಕಾರಣ, ಯಾವುದೇ ಕೀಟಾಣುಗಳು ಸಹ ನಮ್ಮ ಸಂಪರ್ಕಕ್ಕೆ ಬರುವುದಿಲ್ಲ.

 

 

14 ) ಸಾಮಾನ್ಯವಾಗಿ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದು:

ಸಾಮಾನ್ಯವಾಗಿ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದರಿಂದ ಅದೃಷ್ಟವು ನಮಗೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹಿಂದಿನ ಕಾಲದಲ್ಲಿ ನಾಣ್ಯಗಳನ್ನು ಬಹುತೇಕ ತಾಮ್ರದಲ್ಲಿಯೇ ಮಾಡಲಾಗುತ್ತಿತ್ತು. ಆದರೆ ಇಂದು ಸ್ಟೇನ್‍ಲೆಸ್ ಸ್ಟೀಲ್‍ನಲ್ಲಿ ಮಾಡಲಾಗುತ್ತಿದೆ. ತಾಮ್ರವು ಒಂದು ಅದ್ಭುತವಾದ ಲೋಹವಾಗಿದ್ದು, ಮಾನವನ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಪ್ರಯೋಜನಕಾರಿಯಾದ ತಾಮ್ರದ ನಾಣ್ಯಗಳನ್ನು ನದಿಯಲ್ಲಿ ಎಸೆಯುವುದರಿಂದ ನದಿಯ ನೀರು ಶುದ್ಧವಾಗುವುದರ ಜೊತೆಗೆ ಆ ಮೂಲಕ ಸ್ವಲ್ಪ ತಾಮ್ರವು ನಮ್ಮ ದೇಹವನ್ನು ಸೇರುವ ವ್ಯವಸ್ಥೆಯನ್ನು ನಮ್ಮ ಪೂರ್ವಜರು ಮಾಡಿದ್ದರು. ಇದು ಒಂದು ಸಂಪ್ರದಾಯವಾಗಿ ಇಂದಿಗೂ ನಡೆದು ಕೊಂಡು ಬಂದಿದೆ.

15 ) ಹಣೆಗೆ ಸಿಂಧೂರ ಅಥವಾ ಕುಂಕುಮ ಹಚ್ಚುವುದು:

ಮದುವೆಯಾದ ಹೆಂಗಸರು ಹಣೆಯಲ್ಲಿ ಧರಿಸುವ ಸಿಂಧೂರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಏಕೆಂದರೆ ಸಿಂಧೂರವನ್ನು ಅರಿಶಿಣ- ಸುಣ್ಣ ಮತ್ತು ಪಾದರಸದ ಲೋಹಗಳನ್ನು ಸೇರಿಸಿ ಮಾಡಿರುತ್ತಾರೆ. ಪಾದರಸವು ಸ್ವಾಭಾವಿಕವಾಗಿ ರಕ್ತದ ಒತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಲೈಂಗಿಕಾಸಕ್ತಿಯನ್ನು ಸಹ ಕೆರಳಿಸುತ್ತದೆ. ಇದರಿಂದಾಗಿಯೇ ವಿಧವೆಯರು ಸಿಂಧೂರವನ್ನು

ಧರಿಸಲು ಸಂಪ್ರದಾಯ ನಿಷೇಧ ಹೇರಿರುವುದು.ಸಿಂಧೂರವನ್ನು ಹಚ್ಚಿ ಕೊಳ್ಳುವಾಗ ಪಿಟ್ಯುಟರಿ ಗ್ರಂಥಿಗಳವರೆಗೆ ಹಚ್ಚಿ ಕೊಂಡರೆ ಒಳ್ಳೆಯದು. ಏಕೆಂದರೆ ಈ ಗ್ರಂಥಿಗಳಲ್ಲಿಯೇ ನಮ್ಮ ಭಾವನೆಗಳೆಲ್ಲವು ಕ್ರೋಢೀಕರಣಗೊಳ್ಳುವುದು. ಪಾದರಸವು ಒತ್ತಡ ಮತ್ತು ಆಯಾಸವನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ತನ್ನಲ್ಲಿ ಹೊಂದಿದೆ.

16 ) ನಾವೇಕೆ ಅರಳಿ ಮರವನ್ನು ಪೂಜಿಸುತ್ತೇವೆ?

"ಅರಳಿ ಮರ" ಅಥವಾ "ಅಶ್ವತ್ಥ ವೃಕ್ಷ" ಎಂದು ಕರೆಯಲ್ಪಡುವ ಮರವನ್ನು ನಾವು ಸಾಮಾನ್ಯವಾಗಿ ಎಲ್ಲಾ ಊರುಗಳ ನಾಗರ ಕಟ್ಟೆ, ಅಶ್ವತ್ಥ ಕಟ್ಟೆ, ದೇವಾಲಯಗಳ ಬಳಿಯಲ್ಲಿ ಕಾಣುತ್ತೇವೆ. ನಿಜ ಹೇಳ ಬೇಕೆಂದರೆ ಇದು ಸಾಮಾನ್ಯ ಮನುಷ್ಯರಿಗೆ ನೆರಳನ್ನು ಬಿಟ್ಟರೆ ಬೇರೇನು ನೀಡುವುದಿಲ್ಲ. ಇದರಲ್ಲಿ ರುಚಿಕರವಾದ ಹಣ್ಣು ನೀಡುವುದಿಲ್ಲ. ಆದರೂ ಒಬ್ಬ ಸಾಮಾನ್ಯ ಹಳ್ಳಿಯವರು ಅಥವಾ ಜನರು ಸಹ ಇದನ್ನು ಬೆಳೆಸಿ, ಪೋಷಿಸಿ, ಇದರ ರಕ್ಷಣೆಗೆ ನಿಂತಿರುತ್ತಾರೆ ಎಂದರೆ ಅಂತಹದು ಏನಿದೆ ಈ ಮರದಲ್ಲಿ? ಹೌದು, ಇದೆ ಅದನ್ನೆ ನಮ್ಮ ಪೂರ್ವಿಕರು ಕಂಡು ಹಿಡಿದಿದ್ದು, ಈ ಮರವು ರಾತ್ರಿ ಸಮಯದಲ್ಲಿ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿದೆ. ಇಂತಹ ಮರವು ಮನುಕುಲಕ್ಕೆ ಅತ್ಯಾವಶ್ಯಕವೆಂದು ಪರಿಗಣಿಸಿಯೇ, ಅಶ್ವತ್ಥ ವೃಕ್ಷಕ್ಕೆ ಇದಕ್ಕೆ ತ್ರಿಮೂರ್ತಿಗಳ ಆವಾಸ ಸ್ಥಾನವೆಂದು ಕರೆದು ಇದನ್ನು ಪೂಜಿಸಲು ತಿಳಿಸಿದ್ದಾರೆ.



17 ) ನವರಾತ್ರಿಗಳು ಏಕೆ ಇವೆ?

ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದಿನ ಜೀವನಕ್ಕೂ ಮತ್ತು ಇಂದಿನ ಜೀವನಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು- ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ನೀವು ಎಂದಾದರು ಆಲೋಚಿಸಿದ್ದೀರೇ? ನಾವೇಕೆ ವರ್ಷಕ್ಕೆ ಒಂದು ದೀಪಾವಳಿ, ಹೋಳಿಯನ್ನು ಆಚರಿಸುತ್ತೇವೆ ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. ಹೌದು ವಸಂತ ನವರಾತ್ರಿ ಮತ್ತು ಶರನ್ನಾವರಾತ್ರಿ ಎಂದು ನಾವು ಆಚರಿಸುತ್ತೇವೆ. ಈ ಎರಡು ಮಾಸಗಳು ಋತು ಬದಲಾವಣೆಯನ್ನು ಹೊಂದಿರುವ ಮಾಸಗಳಾಗಿದ್ದು, ನಮ್ಮ ಆಹಾರ ಸೇವನೆಯ ಕ್ರಮವು ಈ ಅವಧಿಯಲ್ಲಿ ಪರಸ್ಪರ ಬದಲಾವಣೆಯಿಂದ ಕೂಡಿರುತ್ತದೆ. ನವರಾತ್ರಿಗಳು ನಮ್ಮನ್ನು ನಾವು ಈ ಆಹಾರ ಪದ್ಧತಿಗೆ ಹೊಂದಿ ಕೊಳ್ಳುವಂತೆ ಮಾಡುವ ಗುಣಗಳನ್ನು ಹೊಂದಿದೆ.


ಅದು ಹೇಗೆಂದರೆ ಆಸ್ತಿಕ ಭಕ್ತಸಮೂಹವು ಈ ನವರಾತ್ರಿಗಳ ಸಂದರ್ಭದಲ್ಲಿ ಉಪವಾಸವಿರುತ್ತಾರೆ. ಇದರಿಂದ ಅವರು ಹೊಸ ಆಹಾರ ಶೈಲಿಗೆ ಒಗ್ಗಿ ಕೊಳ್ಳುತ್ತಾರೆ. ಈ ಅವಧಿಯಲ್ಲಿ ಜನರು ಉಪ್ಪು ಮತ್ತು ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ಮತ್ತು ದೃಢ ನಿರ್ಧಾರದ ಶಕ್ತಿಯನ್ನು (ಉಪವಾಸ ಮಾಡುವುದರಿಂದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿಯು ಹೆಚ್ಚಾಗುತ್ತದೆ) ಹೆಚ್ಚಿಸುತ್ತದೆ ಮತ್ತು ಕೊನೆಗೆ ಆ ಋತುವಿನಲ್ಲಿ ಸಂಭವಿಸುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.



18 ) ಖಾರದ ಜೊತೆಗೆ ಆರಂಭ ಮತ್ತು ಸಿಹಿಯ ಜೊತೆಗೆ ಮುಕ್ತಾಯ:

ನಮ್ಮ ಪೂರ್ವಿಕರು ನಮಗೆ ಹೇಳಿರುವುದು ಹೀಗೆ; ಊಟ ಮಾಡುವಾಗ ಖಾರವನ್ನು ಸೇವಿಸಿ ಆರಂಭಿಸಿ, ಮುಕ್ತಾಯ ಮಾಡುವಾಗ ಸಿಹಿಯನ್ನು ಸೇವಿಸಿ ಎಂದು. ಇದರ ಹಿಂದಿನ ಕಾರಣವೇನೆಂದರೆ, ಖಾರವು ನಮ್ಮ ಹೊಟ್ಟೆಯಲ್ಲಿ ಜೀರ್ಣ ಮಾಡುವಂತಹ ಆಮ್ಲಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರಿಂದ ಜೀರ್ಣ ಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತದೆ. ಇನ್ನೂ ಸಿಹಿ ತಿಂಡಿಗಳು ಅಥವಾ ಕಾರ್ಬೋಹೈಡ್ರೇಟ್‍ಗಳು ಜೀರ್ಣ ಕ್ರಿಯೆಯನ್ನು ಕೆಳಗೆ ಎಳೆಯುವ ಸಾಮರ್ಥ್ಯವನ್ನು ಹೊಂದಿವೆ. ಇದರಿಂದಾಗಿ ಜೀರ್ಣವಾದ ಆಹಾರವು ಸರಾಗವಾಗಿ ಕರುಳುಗಳಲ್ಲಿ ಸಾಗಿ ಹೋಗುತ್ತದೆ. ಇದಕ್ಕಾಗಿಯೇ ಸಿಹಿಯನ್ನು ಕಡೆಯಲ್ಲಿ ಸೇವಿಸಿ ಎಂದು ಹೇಳುವುದು.

19 ) ಕೈಗಳಿಗೆ ಮೆಹಂದಿ/ಹೆನ್ನಾವನ್ನು ಹಚ್ಚಿ ಕೊಳ್ಳುವುದು:

ಕೈಗಳಿಗೆ ಅಲಂಕಾರವನ್ನು ನೀಡುವುದರ ಜೊತೆಗೆ ಮೆಹಂದಿಯು ತನ್ನಲ್ಲಿರುವ ಔಷಧೀಯ ಗುಣಗಳಿಂದ ಖ್ಯಾತಿ ಪಡೆದಿದೆ. ಮದುವೆಯು ಅತ್ಯಂತ ಒತ್ತಡಕಾರಿಯಾಗಿರುವ ಸಂಗತಿ ಎಲ್ಲರಿಗೂ ತಿಳಿದ ವಿಚಾರವೇ. ಈ ಒತ್ತಡವು ತಲೆನೋವು ಮತ್ತು ಜ್ವರವನ್ನು ತರ ಬಹುದು. ಆದ್ದರಿಂದ ಮದುವೆ ದಿನ ಹತ್ತಿರ ಬಂದಾಗ ವಧುವಿಗೆ ಮೆಹಂದಿಯನ್ನು ಹಚ್ಚುತ್ತಾರೆ. ಇದರಿಂದ ವಧುವಿಗೆ ಒತ್ತಡವು ಕಡಿಮೆಯಾಗುತ್ತದೆ ಮತ್ತು ಆಕೆಯ ದೇಹಕ್ಕೆ ಇದು ತಂಪನ್ನು ನೀಡಿ, ನರಗಳು ಒತ್ತಡಕ್ಕೊಳಗಾಗುವುದನ್ನು ತಡೆಯುತ್ತದೆ. ಆದ್ದರಿಂದಲೇ ಮೆಹಂದಿಯನ್ನು ನರಗಳು ಕೊನೆಗೊಳ್ಳುವ ಭಾಗದಲ್ಲಿ ಅಂದರೆ, ಅಂಗೈ ಮತ್ತು ಅಂಗಾಲುಗಳಿಗೆ ಹಚ್ಚುತ್ತಾರೆ.



20 ) ದೀಪಾವಳಿಯ ಆಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಸ್ವಚ್ಛತಾ ಕಾರ್ಯಗಳು:

ದೀಪಾವಳಿಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಅಂದರೆ ಚಳಿಗಾಲದ ಆರಂಭ ಕಾಲದಲ್ಲಿ ಬರುತ್ತದೆ. ಆಗ ತಾನೇ ಮಳೆಗಾಲವು ಮುಗಿದಿರುತ್ತದೆ. ಈ ಕಾಲದಲ್ಲಿ ಮಳೆಗಾಲವು ಎಲ್ಲರಿಗೂ ತಿಳಿದಂತೆ ಪ್ರತಿಯೊಂದಕ್ಕೂ ಹಾನಿಯನ್ನು ಮಾಡಿರುತ್ತದೆ. ಸುಮಾರು ಮನೆಗಳು ಇದರಿಂದ ಹಾನಿಗೆ ಒಳಗಾಗಿರುತ್ತವೆ ಮತ್ತು ದುರಸ್ತಿ ಕಾರ್ಯವು ನಡೆಯ ಬೇಕಾಗಿರುತ್ತದೆ. ಆದ್ದರಿಂದ ಚಳಿಗಾಲದ ಆರಂಭದಲ್ಲಿ ಬರುವ ಈ ಹಬ್ಬದ ನೆಪದಲ್ಲಿ ಸುಮಾರು ಜನರು ತಮ್ಮ ಮನೆಗಳನ್ನು ದುರಸ್ತಿ ಮಾಡಿ ಕೊಳ್ಳುತ್ತಾರೆ. ಮನೆಗೆ ಸುಣ್ಣ - ಬಣ್ಣ ಬಳಿದು ಅಂದವನ್ನು ಸಹ ಹೆಚ್ಚಿಸುತ್ತಾರೆ. ಜೊತೆಗೆ ಚಳಿಗಾಲದ ಉಡುಗೆ -ತೊಡುಗೆಗಳನ್ನು ಸಹ ಕೊಂಡು ಕೊಳ್ಳುತ್ತಾರೆ.

 



21 ) ಉತ್ತರಕ್ಕೆ ತಲೆ ಇಟ್ಟು ಏಕೆ ಮಲಗ ಬಾರದು? ಇದರ ಹಿಂದೆ ಒಂದು ಕಟ್ಟು ಕತೆಯಿದೆ.

ಅದೇನೆಂದರೆ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ದೆವ್ವ ಅಥವಾ ಭೂತಗಳನ್ನು ಆಹ್ವಾನ ನೀಡಿದಂತೆ ಎಂಬುದು. ಆದರೆ ವಿಜ್ಞಾನವು ಹೇಳುವುದೇನೆಂದರೆ ಮಾನವ ದೇಹಕ್ಕೆ ತನ್ನದೇ ಆದ ಕಾಂತ ಕ್ಷೇತ್ರವು ಇರುತ್ತದೆ (ಇದನ್ನು ಹೃದಯದ ಕಾಂತ ಅಥವಾ ಮ್ಯಾಗ್ನೆಟಿಕ್ ಕ್ಷೇತ್ರ ಎಂದು ಸಹ ಕರೆಯುತ್ತಾರೆ. ಏಕೆಂದರೆ ರಕ್ತ ಪರಿಚಲನೆಯ ಕಾರಣವಾಗಿ) ಮತ್ತು ಭೂಮಿಯೇ ಒಂದು ದೊಡ್ಡ ಸೂಜಿಗಲ್ಲು ಅಥವಾ ಮ್ಯಾಗ್ನೆಟ್. ಯಾವಾಗ ನಾವು ಉತ್ತರಕ್ಕೆ ತಲೆ ಇಟ್ಟು ಮಲಗುತ್ತೇವೆಯೋ, ಆಗ ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದು ಕೊಳ್ಳುತ್ತದೆ.


ಇದರಿಂದ ಮುಂದೆ ರಕ್ತದೊತ್ತಡ ಮತ್ತು ಹೃದ್ರೋಗದಂತಹ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಈ ಕಾಂತ ಕ್ಷೇತ್ರದ ಸಮತೋಲನವನ್ನು ಕಾಯ್ದು ಕೊಳ್ಳುವುದು ಅತ್ಯಗತ್ಯ. ಇದರ ಜೊತೆಗೆ ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಕಬ್ಬಿಣಾಂಶವಿರುತ್ತದೆ. ನಾವು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಆ ಕಾಂತ ಕ್ಷೇತ್ರದಿಂದ ಆಕರ್ಷಣೆಯಾಗುವ ನಮ್ಮ ದೇಹದ ಕಬ್ಬಿಣಾಂಶವು ತಲೆಯಲ್ಲಿ ಶೇಖರಗೊಳ್ಳುತ್ತದೆ. ಇದರಿಂದ ತಲೆನೋವು , ಅಲ್ಜೀಮರ್ ಕಾಯಿಲೆ, ಪ್ರಜ್ಞಾ ಶೂನ್ಯತೆ ( ಅರಿವಿನ ಕೊರತೆ), ಪಾರ್ಕಿನ್‍ಸನ್ ಕಾಯಿಲೆ ಮತ್ತು ಮೆದುಳಿನ ಕಾರ್ಯ ಕ್ಷೀಣಿಸುವ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.



ॐ ಹಿಂದುತ್ವದ ವಿಚಾರಧಾರೆ ॐ


ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು


! ಶ್ರೀಕೃಷ್ಣಾರ್ಪಣಮಸ್ತು ! ----------- Hari Om -----------