ಸಕ್ಕರೆ
ಬದಲು ಬೆಲ್ಲ ಏಕೆ ಬಳಸಬೇಕು--
Use Jaggery instead of Sugar
ಕಬ್ಬಿನ ರಸವನ್ನು ಬತ್ತಿಸಿ ಬೆಲ್ಲವನ್ನು ತಯಾರಿಸಲಾಗುತ್ತದೆ. ಬೆಲ್ಲವನ್ನು ತಯಾರಿಸುವಾಗ, ಕಬ್ಬಿನಲ್ಲಿ
ಇರುವ ವಿವಿಧ ಪೋಷಕಾಂಶಗಳು, ಖನಿಜಗಳು, ಲವಣಗಳು ಮತ್ತು ಜೀವಸತ್ವಗಳು ಬೆಲ್ಲದಲ್ಲಿ
ಉಳಿಯುತ್ತವೆ. ಬೆಲ್ಲವು ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮುಂತಾದ
ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ ಮತ್ತು ಇದು ವಿಟಮಿನ್-ಬಿ, ಕ್ಯಾಲ್ಸಿಯಂ, ಸತು, ರಂಜಕ ಮತ್ತು
ತಾಮ್ರದಂತಹ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಬೆಲ್ಲ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ
ಇಲ್ಲಿ ಮಾಹಿತಿ ನೀಡಲಾಗಿದೆ.
Jaggery is made by drying Sugarcane juice. While making Jaggery, various Nutrients,
Minerals, Salts and Vitamins present in Sugarcane remain in the Jaggery. Jaggery is rich in
Nutrients like Iron, Magnesium, Potassium, Manganese and contains important elements
like Vitamin-B, Calcium, Zinc, Phosphorus and Copper.
Here is information about the benefits of eating Jaggery.
ಬೆಲ್ಲದ
ಲಾಭಗಳು ಕೆಳಗಿನಂತಿವೆ --
Some of the Uses
of Using Jaggery
ಹಿಮೋಗ್ಲೋಬಿನ್
ಹೆಚ್ಚಿಸುತ್ತದೆ...
Increases Hemoglobin
Levels
ಬೆಲ್ಲವನ್ನು
ತಿನ್ನುವುದು ರಕ್ತಹೀನತೆ ನಿವಾರಣೆಗೆ
ಪ್ರಯೋಜನಕಾರಿ. 100 ಗ್ರಾಂ
ಬೆಲ್ಲದಲ್ಲಿ 11 ಮಿಗ್ರಾಂ
ಕಬ್ಬಿಣಾಂಶವಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗುವುದು ರಕ್ತಹೀನತೆಗೆ ಕಾರಣವಾಗುತ್ತದೆ.
ಅಂತಹ ಸಂದರ್ಭದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಬೆಲ್ಲವು ತುಂಬಾ
ಉಪಯುಕ್ತವಾಗಿದೆ.
Eating Jaggery is beneficial in treating anemia. 100 grams of Jaggery contains 11 mg of
iron. Decrease in hemoglobin in the blood leads to anemia. Jaggery is very useful in
increasing the amount of hemoglobin in such a case. It is also a Blood purifier.
ರಕ್ತದೊತ್ತಡವನ್ನು
ಹತೋಟಿಯಲ್ಲಿಡುತ್ತದೆ… Controls
Blood Pressure
ಬೆಲ್ಲ
ತಿನ್ನುವುದರಿಂದ ರಕ್ತದೊತ್ತಡವನ್ನು
ಸರಿಯಾಗಿ ಕಾಯ್ದುಕೊಳ್ಳಲು ಸಹಾಯ
ಮಾಡುತ್ತದೆ.
ಬೆಲ್ಲದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿರುವ ಕಾರಣ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
Eating Jaggery helps in maintaining proper Blood Pressure. Jaggery keeps Blood pressure
under control as it is rich in Potassium.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ… Improves Digestion
ಬೆಲ್ಲವು
ಜೀರ್ಣಕ್ರಿಯೆಯನ್ನು ಸುಧಾರಿಸಲು
ಸಹಾಯ ಮಾಡುತ್ತದೆ. ಅಲ್ಲದೆ
ಬೆಲ್ಲವನ್ನು ನಿಯಮಿತವಾಗಿ
ತಿನ್ನುವುದರಿಂದ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
Jaggery
helps improve Digestion. Also eating Jaggery
regularly cleans the Stomach and
relieves from Constipation.
ಬೆಲ್ಲವು ತೂಕವನ್ನು ಇಳಿಸಿಕೊಳ್ಳಲು, ಹೊಟ್ಟೆಯ ಸಮಸ್ಯೆಯನ್ನು ಶಮನ
ಮಾಡಿಕೊಳ್ಳಲು ಬಳಸಲಾಗುತ್ತದೆ. ಇದರಲ್ಲಿರುವ ಪೌಷ್ಟಿಕ ಸತ್ವಗಳು ರೋಗ ನಿರೋಧಕ
ಶಕ್ತಿಯನ್ನು ಹೊಂದಿದೆ.
ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಅದ್ಭುತವಾದ ಮನೆಮದ್ದಾಗಿದೆ. ಸಾಮಾನ್ಯವಾಗಿ ಶೀತ, ಹೊಟ್ಟೆ ಅಸ್ವಸ್ಥತೆ, ಮುಟ್ಟಿನ ನೋವು, ಸೆಳೆತ, ಆತಂಕ , ತಲೆನೋವು, ಊದಿಕೊಂಡ ಪಾದಗಳು ಇನ್ನು ಅನೇಕ ಸಮಸ್ಯೆಗಳಿಗೆ ಬೆಲ್ಲವು ಅತ್ಯುತ್ತಮವಾದ ಮನೆಮದ್ದಾಗಿ ನಮ್ಮ ಹಿರಿಯರ ಕಾಲದಿಂದಲೂ ಬಳಸುತ್ತಾ ಬಂದ್ದಿದ್ದೇವೆ.
Jaggery has immunity power and is a wonderful home remedy. Generally, we have been
using Jaggery as an excellent home remedy for Cold, Stomach Discomfort, Menstrual pain,
Muscle cramps, Anxiety, Headache, Swollen Feet and many other problems since the time of our Elders.
ನಿಮ್ಮ ಶೀತವನ್ನು ಪರಿಣಾಮಕಾರಿಯಾಗಿ ಹೊಡೆದೋಡಿಸಲು ಶುಂಠಿಯ ರಸದೊಂದಿಗೆ ಬೆಲ್ಲವನ್ನು ಬೆರಸಿ ಸೇವಿಸಿ.
Mix Jaggery with ginger juice to fight your cold effectively.
ಹೆಚ್ಚು ಶಕ್ತಿ ಹೊಂದಲು ಬೆಲ್ಲವನ್ನು ತುಪ್ಪದೊಂದಿಗೆ ತೆಗೆದುಕೊಳ್ಳಬಹುದು.
Jaggery can be taken with Ghee to have more power.
ನಿಮ್ಮ ಆಯಾಸ ಮತ್ತು ಉಸಿರಾಟದ ತೊಂದರೆಗೆ ಬೆಲ್ಲವನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಸೇವಿಸಲಾಗುತ್ತದೆ.
ಎಳ್ಳಿನೊಂದಿಗೆ ಬೆಲ್ಲ ಸೇವನೆ ಮಾಡಿದಾಗ ಮಹಿಳೆಯರಲ್ಲಿ ಕಾಣಿಸುವ ಡಿಸ್ಮೆನೋರಿಯಾ ಸಮಸ್ಯೆಗೆ
ಚಿಕಿತ್ಸಕವಾಗಿ ಕಾರ್ಯ ನಿರ್ವಹಿಸುತ್ತದೆ.
Jaggery mixed with mustard oil is consumed for your tiredness and shortness of breath.
When Jaggery is consumed with Sesame seeds, it works therapeutically for dysmenorrhea
in women.
ಮಹಿಳೆಯರಿಗೆ ಉಪಯುಕ್ತ… Useful for Females or Women
ಬೆಲ್ಲ
ತಿನ್ನುವುದು ಎಲ್ಲಾ ವಯಸ್ಸಿನ
ಮಹಿಳೆಯರಿಗೆ ಉಪಯುಕ್ತವಾಗಿದೆ.
ಗೋಚರಿಸುತ್ತದೆ.
It appears Eating Jaggery is useful for women of all ages since it increases their
Hemoglobin Level.
---------- Hari Om ----------