Sunday, December 10, 2023

Dhanvantari - God of Medicine

 

ಧನ್ವಂತರಿ ಜಯಂತಿ / Dhanvantari Jayanthi   


                          

                                Dhanvantari - God of Medicine


 

Sunday-10th December 2023

ಇದೇ ಡಿಸೆಂಬರ್ 10, 2023 ರವಿವಾರ. ಕಾರ್ತಿಕ ಮಾಸದ ಕೃಷ್ಣ ಪಕ್ಷ ತ್ರಯೋದಶಿಯ ದಿನ ಧನ್ವಂತರಿ ಜಯಂತಿ ಆಚರಿಸಲಾಗುತ್ತದೆ.‌


ಆರೋಗ್ಯ : ಧನ್ವಂತರಿ ಆರಾಧನೆಯಿಂದ ಆರೋಗ್ಯ ವೃದ್ಧಿ

ಧನ್ವಂತರಿ ಹಿಂದೂ ಸಂಪ್ರದಾಯದಲ್ಲಿ ಮಹಾವಿಷ್ಣು ವಿನ ಅವತಾರ. ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಆಯುರ್ವೇದದ ದೇವತೆ ಕೂಡ ಧನ್ವಂತರಿ. ಹಿಂದೂ ಸಂಪ್ರದಾಯದಲ್ಲಿ ಆಯುರಾರೋಗ್ಯ ಬಯಸುವವರು ಧನ್ವಂತರಿಯನ್ನು ಪ್ರಾರ್ಥಿಸುವುದು ಸಾಮಾನ್ಯ. ‌

ಧನ್ವಂತರಿಯು ಭಾರತೀಯ ವೈದ್ಯ ಪದ್ಧ ತಿಯ ಮೊದಲ ವೈದ್ಯನೆಂಬ ಪ್ರತೀತಿ ಹಾಗೂ ನಂಬಿಕೆ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿ ಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾ ರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ.


ಸಮುದ್ರ ಮಥನದ ಕಾಲದಲ್ಲಿ ಸುರಾ, ಕೌಸ್ತುಭ, ಅಪ್ಸರಾ ಉಚ್ಛೆಶ್ರವಸ್ಸು, ಕಲ್ಪವೃಕ್ಷ, ಕಾಮಧೇನು, ಐರಾವತ, ಪಾರಿಜಾತ ಲಕ್ಷ್ಮೀ, ಹಾಲಾಹಲ, ಚಂದ್ರ, ಅಮೃತ ಹಾಗೂ ಧನ್ವಂತರಿ ಉದ್ಭವ ಆಯಿತೆಂಬುದು ಪುರಾಣೇತಿಹಾಸ.



ಕ್ಷೀರೋದಮಥನೋದೂತಂ ದಿವ್ಯ ಗಂಧಾನು ಲೇಪಿತಂ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ


ಎಂಬ ಶ್ಲೋಕದಂತೆ ಕ್ಷೀರ ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ.

ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು, ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ.

 

                                                                   Lord Dhanvantari

 

ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ

1) ಧನು +ಏವ+ಅಂತಃ+ಅರಿ=ಧನ್ವಂತರಿ (ಸರ್ಜನ್‌), ಧನ್ವಂ ಈಯರ್ತಿ ಗತ್ಛತೀತಿ ಧನ್ವಂತರೀ ಎಂದೂ ಹೇಳಲಾಗಿದೆ. ಭಾರತೀಯ ವೈದ್ಯ ಪದ್ಧತಿಯ ಲ್ಲಿಯೂ ನಿಖರವಾಗಿ ಔಷಧ ಸಾಧ್ಯ ಹಾಗೂ ಶಸ್ತ್ರ ಸಾಧ್ಯ ರೋಗಗಳ ವಿವರಣೆ ಇದೆ. ಅವುಗಳಲ್ಲಿ ಶಸ್ತ್ರ ಚಿಕಿತ್ಸಾ ಪಿತಾಮಹನಾಗಿ ಧನ್ವಂತರಿಯನ್ನು ಉಲ್ಲೇಖಿಸಲಾಗಿದೆ. ಧನ್ವಂತರಿಯು ತನ್ನ ಶಿಷ್ಯ ವರ್ಗಗಳಿಗೆ ಶಸ್ತ್ರ ಚಿಕಿತ್ಸಾ ಸಹಿತ ಆಯುರ್ವೇದದ ಉಪದೇಶವನ್ನು ಮಾಡಿದ್ದನೆಂದೂ ಅವುಗಳಲ್ಲಿ ಸುಶ್ರುತಾಚಾರ್ಯರು ಶಸ್ತ್ರ ಚಿಕಿತ್ಸಾ ಪಾರಂಗತರಾದರೆಂದೂ ಹೇಳಲಾಗಿದೆ. ಅವರನ್ನು ಕಸಿ ಅಥವಾ ಪ್ಲಾಸ್ಟಿಕ್‌ ಸರ್ಜರಿಯ ಪಿತಾಮಹ ಎಂದೂ ಹೇಳ ಲಾಗಿದೆ.

2) ಧನುಷಾ+ತರತೇ+ತಾರಯತೇ +ಪಾಪಾತ್‌=ಧನ್ವಂತರಿ (ಪಾಪ ವಿಮುಕ್ತಿ) ಎಂಬುದು ಧನ್ವಂತರಿ ಪದದ ನಿಷ್ಪತ್ತಿಯಾಗಿದೆ.

 

                                                             Origin of Lord Dhanvantari 

 

ನಮಾಮಿ ಧನ್ವಂತರಿಮ್‌ ಆದಿದೇವಂ ಸುರಾ ಸುರೈರ್ವಂದಿತ ಪಾದಪದ್ಮಂ ಲೋಕೇಜರಾಋಗ್‌ ಭಯ ಮೃತ್ಯುನಾಶಂ ದಾತಾರಮೀಶಂ ವಿವಿಧೌಷಧೀನಾಂ ಧನ್ವಂತರೀ ರಮಾನಾಥಮ್‌ ಸರ್ವ ರೋಗ ವಿನಾಶಕಮ್‌. ಆಯುರ್ವೇದ ಪ್ರವಕ್ತಾರಮ್‌ ವಂದೇ ಪೀಯೂಷ ದಾಯಕಮ್‌.


ಎಂಬ ಶ್ಲೋಕದೊಂದಿಗೆ ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಆರಂಭಿಸಿದರೆ ದಿನವಿಡೀ ಚೈತನ್ಯಪೂರ್ಣತೆ ಉಳಿಯುತ್ತದೆ ಎನ್ನಲಾಗಿದೆ. ಧನ್ವಂತರಿ ಸುಪ್ರಭಾತ, ಧನ್ವಂತರಿ ಪ್ರಪತ್ತಿ, ಧನ್ವಂತರಿ ಸ್ಮತಿಗಳಲ್ಲಿ ಧನ್ವಂತರಿ ದೇವರ ವಿಶೇಷತೆಯನ್ನು ಬಣ್ಣಿಸಲಾಗಿದೆ.


ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ಧನ್ವಂತರಿಯನ್ನು ಸದಾ ಭಜಿಸಿದರೆ ಯಾವುದೇ ರೋಗ ರುಜಿನಗಳೂ ಕಾಡುವುದಿಲ್ಲ. ಹಾಗೆಯೇ ಇನ್ನೊಂದೆಡೆ ಧನ್ವಂತರೀ ದಿವೋ ದಾಸನೆಂಬ ಕಾಶೀರಾಜನು ಸಹ ಧನ್ವಂತರಿ ಯಾಗಿದ್ದು ಮಹರ್ಷಿ ಭಾರಧ್ವಾಜರ ಶಿಷ್ಯನೆಂದೂ ಹೇಳಲಾಗಿದೆ.


ಒಟ್ಟಿನಲ್ಲಿ ಆರೋಗ್ಯ ಪರಿಪಾಲಕನಾಗಿ ಸಕಲ ಚಿಕಿತ್ಸಾ ಸೂತ್ರ ನೀಡಿದ ದೇವ ಧನ್ವಂತರಿಯ ಪೂಜಾ ಮಹೋತ್ಸವವು ತನ್ನದೇ ಆದ ಮಹತ್ವವನ್ನು ಹೊಂದಿದೆ.


ಈ ಧನ್ವಂತರಿ ಮಹೋತ್ಸವದ ದಿನ ಧನ್ವಂತರಿ ಹೋಮಹವನ ಹಾಗೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರಸಾದ ರೂಪವಾಗಿ ಸುಮಧುರ ಗಂಧದ ಸಪಾದ ಭಕ್ಷ್ಯವನ್ನು ಹೋಲುವ ತಿನಿಸನ್ನು ಸಹ ಅರ್ಚಿಸಿ ಭಕ್ಷಿಸಲಾಗುತ್ತದೆ. ‌ ‌ 


 

ಭಗವಾನ್ ಧನ್ವಂತರಿ ಕಥೆ


ಧನ್ವಂತರಿ ಜಯಂತಿಯನ್ನು ಆಚರಿಸುವ ಹಿಂದೆ ಒಂದು ಪ್ರಮುಖವಾದ ಕಥೆಯಿದೆ. ಹಿಂದೆ ದೇವರಾಜ ಇಂದ್ರನ ಅಸಭ್ಯ ವರ್ತನೆಯ ಪರಿಣಾಮವಾಗಿ, ಮಹರ್ಷಿ ದೂರ್ವಾಸರು ಮೂರು ಲೋಕಗಳಿಗೆ ಅಮರವಾಗುವಂತೆ ಶಾಪ ನೀಡಿದ್ದರು, ಇದರಿಂದಾಗಿ ಅಷ್ಟಲಕ್ಷ್ಮಿ ಭೂಮಿಯಿಂದ ದೂರ ಹೋದಳು. ಇದರಿಂದ ವಿಚಲಿತರಾದ ದೇವತೆಗಳು ಮೂರು ಲೋಕಗಳಲ್ಲಿ ಶ್ರೀಗಳನ್ನು ಸ್ಥಾಪಿಸಲು ತ್ರಿದೇವರ ಬಳಿಗೆ ಹೋಗಿ ಈ ಬಿಕ್ಕಟ್ಟನ್ನು ಹೋಗಲಾಡಿಸಲು ಮಾರ್ಗವನ್ನು ಕೇಳಿದರು.


ಮಹಾದೇವನು ದೇವತೆಗಳಿಗೆ ಸಮುದ್ರ ಮಂಥನವನ್ನು ಸೂಚಿಸಿದನು, ಅದನ್ನು ದೇವತೆಗಳು ಮತ್ತು ರಾಕ್ಷಸರು ಸಂತೋಷದಿಂದ ಸ್ವೀಕರಿಸಿದರು. ಸಾಗರವನ್ನು ಮಂಥನ ಮಾಡುವ ಪಾತ್ರದಲ್ಲಿ ಮಂದಾರಚಲ ಪರ್ವತವನ್ನು ಮುಖ್ಯವಾಗಿಸಿ, ಸರ್ಪರಾಜನಾದ ವಾಸುಕಿಯನ್ನು ಹಗ್ಗವಾಗಿಸಲಾಯಿತು. ವಾಸುಕಿಯ ತಲೆಯನ್ನು ರಾಕ್ಷಸರಿಗೆ ನೀಡಲಾಯಿತು ಮತ್ತು ಬಾಲವನ್ನು ದೇವತೆಗಳು ಹಿಡಿದು ಮಥಿಸಲು ಪ್ರಾರಂಭಿಸಿದರು. ‌ 

 

ಸಾಗರದ ಮಂಥನದಿಂದ ಹದಿನಾಲ್ಕು ಪ್ರಮುಖ ರತ್ನಗಳು ಉತ್ಪತ್ತಿಯಾದವು, ಅದರಲ್ಲಿ ಭಗವಂತ ಧನ್ವಂತರಿಯು ಹದಿನಾಲ್ಕನೆಯ ರತ್ನದ ರೂಪದಲ್ಲಿ ಕಾಣಿಸಿಕೊಂಡನು. ಅವನು ತನ್ನ ಕೈಯಲ್ಲಿ ಅಮೃತದ ಮಡಕೆಯನ್ನು ಹಿಡಿದಿದ್ದನು. ಭಗವಾನ್ ವಿಷ್ಣುವು ಅವನನ್ನು ದೇವತೆಗಳ ವೈದ್ಯ ಮತ್ತು ಸಸ್ಯಗಳು ಮತ್ತು ಔಷಧಿಗಳ ಅಧಿಪತಿಯಾಗಿ ನೇಮಿಸಿದನು. ಇವುಗಳ ವರದಾನವಾಗಿ ಎಲ್ಲಾ ಮರ-ಗಿಡಗಳಿಗೂ ಚಿಕಿತ್ಸಾ ಶಕ್ತಿ ದೊರಕಿತು.


--------------- Hari Om -------------


 



 


No comments:

Post a Comment