ಪುಷ್ಕರ – Pushkara ---- Holy Bathing
Ganges River at Haridwar
Holy Bathing on 12 Specific Rivers during
Pushkara timings & its Virtue of Benefits
ಗಂಗಾದಿ
ಮೊದಲಾದ ೧೨ ಪವಿತ್ರ ನದಿಗಳಲ್ಲಿ
ಸಾರ್ಧತ್ರಿಕೋಟಿ ತೀರ್ಥ ಸಹಿತ
ಪುಷ್ಕರನು ನಿವಾಸಮಾಡುವ ಕಾಲಕ್ಕೆ
"ಪುಷ್ಕರ"
ಎಂದು
ಹೆಸರು.
ಮೇಷ
ಮೊದಲಾದ ೧೨ ರಾಶಿಗಳಲ್ಲಿ ದೇವಗುರ
ಬೃಹಸ್ಪತಿ ಸಂಚರಿಸುವ ಸಮಯದಲ್ಲಿ
ಪುಷ್ಕರನು ಆಯಾ ನದಿಗಳಲ್ಲಿ
ವಾಸಿಸುವನು.
Ganges River
Bhima River
ಬೃಹಸ್ಪತಿಯು
ಒಂದೊಂದು ವರ್ಷ ಒಂದೊಂದು ರಾಶಿಯಲ್ಲಿ
ಸಂಚರಿಸುವನು.
ಆಗ
ಆಯಾ ನದಿಗಳಲ್ಲಿ ಮೂರುವರೆಕೋಟಿ
ತೀರ್ಥಗಳಿಂದ ಸಹಿತನಾದ ಪುಷ್ಕರನು
(ತೀರ್ಥರಾಜ)
ಹಾಗೂ
ಸಕಲಮುನಿಗಳು ವಾಸಿಸುವರು.
Brahmaputra River
Cauvery River
ಆದಕಾರಣ
ವ್ರವೇಶ ದಿನದಿಂದ ೧೨ ದಿನಗಳು-ಆದಿಪುಷ್ಕರ
ಎಂದೂ,
ಕೊನೆಯ
೧೨ ದಿನಗಳು-ಅಂತ್ಯ
ಪುಷ್ಕರ ಎಂದು ಪ್ರಸಿದ್ಧಿಯಾಗಿದೆ.
ಈ
ದಿನಗಳಲ್ಲಿ ನದೀ ತೀರ್ಥಗಳಲ್ಲಿ
ಮಾಡುವ ಕ್ಷೇತ್ರೋವಾಸ,
ತೀರ್ಥ
ಶ್ರಾದ್ಧ/-ಸ್ನಾನ-
ದಾನ-
ವ್ರತ-ಜಪ-ತಪ-ಪೂಜಾದಿಗಳೆಲ್ಲವೂ
ಅನಂತ ಫಲಪ್ರದವಾಗಿದೆ.
೬೦
ಸಾವಿರ ವರ್ಷ ಗಂಗೆಯಲ್ಲಿ ಮಿಂದ
ಫಲ ಪುಷ್ಕರ ಸಮಯದಲ್ಲಿ ಒಂದು ದಿನ
ಸ್ನಾನ ಮಾಡಿದರೆ ಬರುವುದು.
Krishna River
೧)
ಮೇಷ ರಾಶಿ
ಯಲ್ಲಿ ಪ್ರವೇಶ ಮಾಡಿದಾಗ ಗಂಗಾ
ನದಿಗೆ ಪುಷ್ಕರ
೨)
ವೃಷಭ ರಾಶಿ
ಯಲ್ಲಿ ಪ್ರವೇಶ ಮಾಡಿದಾಗ ನರ್ಮದಾ
ನದಿಗೆ ಪುಷ್ಕರ
೩)
ಮಿಥುನ
ರಾಶಿ ಯಲ್ಲಿ ಪ್ರವೇಶ ಮಾಡಿದಾಗ
ಸರಸ್ವತಿ ನದಿಗೆ ಪುಷ್ಕರ
೪)
ಕರ್ಕಾಟಕ
ರಾಶಿ ಯಲ್ಲಿ ಪ್ರವೇಶ ಮಾಡಿದಾಗ
ಯಮುನಾ ನದಿಗೆ ಪುಷ್ಕರ
೫)
ಸಿಂಹ ರಾಶಿ
ಯಲ್ಲಿ ಪ್ರವೇಶ ಮಾಡಿದಾಗ ಗೋದಾವರೀ
ನದಿಗೆ ಪುಷ್ಕರ
೬)
ಕನ್ಯಾ
ರಾಶಿ ಯಲ್ಲಿ ಪ್ರವೇಶ ಮಾಡಿದಾಗ
ಕೃಷ್ಣಾ ನದಿಗೆ ಪುಷ್ಕರ
೭)
ತುಲಾ ರಾಶಿ
ಯಲ್ಲಿ ಪ್ರವೇಶ ಮಾಡಿದಾಗ ಕಾವೇರಿ
ನದಿಗೆ ಪುಷ್ಕರ
೮)
ವೃಶ್ಚಿಕ
ರಾಶಿ ಯಲ್ಲಿ ಪ್ರವೇಶ ಮಾಡಿದಾಗ
ಭೀಮಾರಥಿ ನದಿಗೆ ಪುಷ್ಕರ
೯)
ಧನುರ್
ರಾಶಿ ಯಲ್ಲಿ ಪ್ರವೇಶ ಮಾಡಿದಾಗ
ಪುಷ್ಕರವಾಹಿನಿ (ಬ್ರಹ್ಮಪುತ್ರಾ)
ನದಿ ಗೆ
ಪುಷ್ಕರ
೧೦)
ಮಕರ ರಾಶಿ
ಯಲ್ಲಿ ಪ್ರವೇಶ ಮಾಡಿದಾಗ ತುಂಗಭದ್ರಾ
ನದಿಗೆ ಪುಷ್ಕರ
೧೧)
ಕುಂಭ ರಾಶಿ
ಯಲ್ಲಿ ಪ್ರವೇಶ ಮಾಡಿದಾಗ ಸಿಂಧು
ನದಿಗೆ ಪುಷ್ಕರ
೧೨)
ಮೀನ ರಾಶಿ
ಯಲ್ಲಿ ಪ್ರವೇಶ ಮಾಡಿದಾಗ ಪ್ರಣೀತಾ
ನದಿಗೆ ಪುಷ್ಕರ
Narmada River
Narmada River-another pic
ಮೇಷೇ ಗಂಗಾ
ವೃಷೇ ರೇವಾ ಗತೇ ಯುಗ್ಮೇ ಸ್ರಸ್ವತಿ
ಯಮುನಾ
ಕರ್ಕಟೇ ಚೈವ ಗೊದಾವರ್ಯಪಿ
ಸಿಂಹಗೇ!!
ಕನ್ಯಾಯಾಂ
ಕೃಷ್ಣವೇಣೀ ಚ ಕಾವೇರಿ ಚ
ತುಲಾಗತೇ
ವೃಸ್ಚಿಕೇ
ಸ್ಯಾದ್ಭೀಮರಥೀ ಸಿಂಧುಃ ಪ್ರಣಿತಾ
ತಟಿನೀ ಝುಷೇ
ಮೇಷೇಗುರೌ
ಪ್ರವಿಷ್ಟೇ ಗಂಗಾ ಪುಷ್ಕರಯುತಾ
ಭವತೀತಿವತ್
ಸರ್ವತ್ರಾನ್ವಯಃ!!
ಜನ್ಮ
ಪ್ರಭೃತಿ ಯತ್ಪಾಪಂ ಸ್ತ್ರೀಯಾ
ವಾ ಪುರುಷೇಣ ವಾ
ಪುಷ್ಕರೇ
ಸ್ನಾತಮಾತ್ರಸ್ಯ ಸರ್ವಮೇವ
ಪ್ರಣಶ್ಯತಿ!!
ಸ್ತ್ರೀಯರಾಗಲಿ
ಪುರುಷರಾಗಲೀ ಹುಟ್ಟಿದಾರಾಭ್ಯ
ಮಾಡಿದ ಪಾಪಗಳು
ಪುಷ್ಕರ
ಸಮಯದಲ್ಲಿ ಸ್ನಾನ ಮಾಡುವುದರಿಂದ
ಅನಂತ ಪುಣ್ಯಫಲಗಳು ಪ್ರಾಪ್ತವಾಗುತ್ತವೆ.
Pranahita River
Pranahita River - another Pic
ಸಮುದ್ರ
ಸೇರದ ನದಿಗಳಲ್ಲಿ ಮಿಂದರೆ ಮೂರು
ದಿನ ಉಪವಾಸ ಮಾಡಿದ ಫಲ,
ಸಮುದ್ರ
ಸೇರುವ ನದಿಗಳಲ್ಲಿ ೧೫ ದಿನದ
ಫಲ,
ತಿಂಗಳು
ಉಪವಾಸ ಗೈದ ಫಲ ಸಮುದ್ರ ಸ್ನಾನದಿಂದ,
೬ ತಿಂಗಳ
ಫಲ ಗೋದಾವರಿಯ ಮಜ್ಜನದಿಂದ,
ಗಂಗಾ
ಸ್ನಾನದಿಂದ ಒಂದು ವರ್ಷ ಉಪವಾಸದ
ಫಲ, ಅದುವೇ
ಭಕ್ತಿಯಿಂದ ಒಂದು ಬಾರಿ ವಿಷ್ಣು
ಪಾದೋದಕ ಸೇವಿಪ ಮನುಜ ಪೊಂದುವ ೧೨
ವರ್ಷ ಉಪವಾಸದ ಫಲ, ಇದೇ
ತೀರ್ಥದ ಮಹಿಮೆ.
Saraswathi River
Sindhu River
Yamuna River
ಇದೇ ಏಪ್ರಿಲ್ 21, 2023 ರ ಶುಕ್ರವಾರ ರಾತ್ರಿ 5:30 ಗಂಟೆಗೆ ಗುರು ಮೇಷ ರಾಶಿ ಪ್ರವೇಶ
ಮಾಡುತ್ತಿದ್ದಾರೆ. ಈ ವರ್ಷ ಗಂಗಾ ನದಿ ಪುಷ್ಕರ ನಡೆಯುತ್ತದೆ.
2023 ---- ಪುಷ್ಕರದ ಅವಧಿ : ಏಪ್ರಿಲ್ 22, 2023 ಶನಿವಾರ ದಿಂದ
ಮೇ 3, 2023 ಬುಧವಾರ -- ಗಂಗಾ ನದಿ
---------- Hari Om ----------