Parijatha -- ಪಾರಿಜಾತ
ಪುಷ್ಪ ಗಳಲ್ಲಿ ಶ್ರೇಷ್ಠವಾದ ಹೂ ಪಾರಿಜಾತ – Parijatha – The Best Flower & its significance
Among all the Flowers Parijatha flower is considered to be the Best and Powerful. It has been described in Old Indian Scriptures of several thousands of Years ago.
ಸಮುದ್ರ ಮಥನ ಸಮಯದಲ್ಲಿ ಪಾರಿಜಾತ ಗಿಡ ಉದ್ಭವಿಸಿತು. ಪಾರಿಜಾತ ಗಿಡವನ್ನು ಇಂದ್ರನು ತಂದು ತನ್ನ ಉದ್ಯಾನವನದಲ್ಲಿ ನೆಡುತ್ತಾನೆ. ಆದ್ದರಿಂದ ಇದು ಸ್ವರ್ಗ ಲೋಕದ ಹೂವು, ದೇವಲೋಕದ ಪುಷ್ಪ ,ಎಂದು ಪ್ರಸಿದ್ಧಿ ಪಡೆದಿದೆ. ಹರಿವಂಶ ಪುರಾಣದಲ್ಲಿ ಇದನ್ನು ಕಲ್ಪವೃಕ್ಷ ಎಂದು ಕರೆಯಲಾಗಿದೆ. ಸಮುದ್ರ ಮಥನದಲ್ಲಿ ದೊರೆತ ಕಾರಣ ಪಾರಿಜಾತ ದೈವಿಕ ಶಕ್ತಿಯುಳ್ಳ ಮರ ಎಂದು ನಂಬಲಾಗಿದೆ.
ಪೌರಾಣಿಕ_ಹಿನ್ನೆಲೆ:-
ತ್ರೇತಾಯುಗದಲ್ಲಿ
ಸೀತಾಮಾತೆಗೆ ಪಾರಿಜಾತದ ಹೂಗಳು
ಎಂದರೆ ಬಹಳ ಪ್ರಿಯ, ರಾಮ
ಲಕ್ಷ್ಮಣರ ಜೊತೆ ವನವಾಸದಲ್ಲಿದ್ದಾಗ,
ಪಾರಿಜಾತದ
ಹೂವುಗಳನ್ನು ಬಿಡಿಸಿ ಮಾಲೆ
ಮಾಡಿಕೊಂಡು ಇಷ್ಟಪಟ್ಟು
ಧರಿಸುತ್ತಿದ್ದಳಂತೆ.
ಹಾಗಾಗಿ ಈ
ಹೂವನ್ನು ಶೃಂಗಾರ ಹಾರ-
ಹರ ಸಿಂಗಾರ
ಎಂದು ಕರೆಯುತ್ತಾರೆ.
ಇನ್ನೊಂದು
ಕಥೆಯ ಪ್ರಕಾರ ಇಂದ್ರನು ಸ್ವರ್ಗದಲ್ಲಿ
ಪಾರಿಜಾತ ಗಿಡವನ್ನು ನೆಟ್ಟ ಮೇಲೆ
ಸುಗಂಧಭರಿತ ಸುಂದರವಾದ ಹೂಗಳು
ಗಿಡದ ತುಂಬಾ ಅರಳಿದ ಪುಷ್ಪವನ್ನು
ನೋಡುವುದೇ ಒಂದು ಸೊಬಗು.
ಒಮ್ಮೆ
ದ್ವಾರಕಾದಲ್ಲಿ ಕೃಷ್ಣ ರುಕ್ಮಿಣಿಯರು
ಉಯ್ಯಾಲೆಯಲ್ಲಿ ಜೊತೆಯಾಗಿ
ಕುಳಿತಿರುವಾಗ, ನಾರದರು
ಸುಂದರವಾದ ಪಾರಿಜಾತದ ಹೂವಿನ
ಮಾಲೆಯೊಂದಿಗೆ ಬಂದು ಶ್ರೀಕೃಷ್ಣನಿಗೆ
ಕೊಡುಗೆಯಾಗಿ ಕೊಟ್ಟರು.
ಕೃಷ್ಣನು
ಅದನ್ನು ಪ್ರೀತಿಯಿಂದ ತನ್ನ ಪಟ್ಟದ
ರಾಣಿ ರುಕ್ಮಿಣಿಗೆ ಹಾಕಿ ಸಂತೋಷ
ಪಟ್ಟನು. ರುಕ್ಮಿಣಿ
ಕೊರಳಲ್ಲಿ ಹಾರವನ್ನು ನೋಡಿದ
ನಾರದರು, ಮಾತೇ
ಈ ಪಾರಿಜಾತವನ್ನು ಧರಿಸಿದ ನೀವು,
ಕೃಷ್ಣನ
ಉಳಿದೆಲ್ಲ ಪತ್ನಿಯರಿಗಿಂತ
ಸುಂದರವಾಗಿ ಕಾಣುತ್ತೀರಿ ಎಂದರು.
ಈ ವಿಷಯ
ಅಂತಪುರದಲ್ಲಿದ್ದ ಕೃಷ್ಣನ
ಪ್ರೀತಿಯ ಪತ್ನಿ ಸತ್ಯಭಾಮೆಗೆ
ತಿಳಿಯಿತು. ಅವಳು
ಕೃಷ್ಣನಲ್ಲಿ, ನನಗೆ
ಪಾರಿಜಾತ ಪುಷ್ಪದ ಮರವೇ ಬೇಕು
ಎಂದು ಹಠ ಹಿಡಿಯುತ್ತಾಳೆ.
ಕೃಷ್ಣನು
ಸ್ವರ್ಗದ ಸ್ವತ್ತು ನಾವು ಭೂಲೋಕಕ್ಕೆ
ತರಬಾರದು ಎಂದು ಎಷ್ಟು ಹೇಳಿದರೂ
ಕೇಳಲಿಲ್ಲ. ಶ್ರೀಕೃಷ್ಣನು
ಸತ್ಯಭಾಮಾ ಸಹಿತ ಸ್ವರ್ಗಲೋಕಕ್ಕೆ
ಹೋಗಿ ಪಾರಿಜಾತ ವೃಕ್ಷ ಕೊಡುವಂತೆ
ಇಂದ್ರನನ್ನು ಕೇಳುತ್ತಾನೆ.
ಇಂದ್ರನು
ಕೊಡುವುದಿಲ್ಲ ಎಂದಾಗ ಕೃಷ್ಣನು,
ಇಂದ್ರ ನೊಂದಿಗೆ
ಯುದ್ಧ ಮಾಡಿ ಇಂದ್ರನು ಸೋತು,
ಮನಸ್ಸಿಲ್ಲದ
ಮನಸ್ಸಿನಿಂದ ಪಾರಿಜಾತ ವೃಕ್ಷವನ್ನು
ಕೃಷ್ಣನಿಗೆ ಕೊಡುತ್ತಾನಂತೆ.
ಸ್ವರ್ಗದ
ಸ್ವತ್ತನ್ನು ಭೂಲೋಕಕ್ಕೆ ಭಾಗ
ಮಾಡುವುದು ಇಂದ್ರನಿಗೆ ಇಷ್ಟವಿರಲಿಲ್ಲ.
ಕೃಷ್ಣನು
ಪಾರಿಜಾತವನ್ನು ಭೂಲೋಕಕ್ಕೆ ತಂದ
ಮೇಲೆ, ಬಹಳ
ಬೇಸರಗೊಂಡ ಇಂದ್ರನು,
ಪಾರಿಜಾತ
ವೃಕ್ಷದ ಹೂಗಳು ರಾತ್ರಿ ಮಾತ್ರ
ಅರಳಲಿ ಸೂರ್ಯೋದಯವಾಗುತ್ತಿದ್ದಂತೆ
ಬಾಡಿ
ಉದುರಿ ಕೆಳಗೆ ಬೀಳಲಿ ಎಂದು ಶಾಪ
ಕೊಟ್ಟನು. ಇತ್ತ
ಶ್ರೀಕೃಷ್ಣನು ಸತ್ಯಭಾಮಾಗೆ
ಬುದ್ಧಿ ಕಲಿಸಬೇಕೆಂದು ಪಾರಿಜಾತ
ಗಿಡವನ್ನು ಸತ್ಯಭಾಮೆ ಇಷ್ಟದಂತೆ
ಅವಳ ಮನೆಯಂಗಳದಲ್ಲಿ ನೆಟ್ಟನು.
ಅದರ ಹೂವುಗಳನ್ನು
ಪಟ್ಟದರಸಿ ರುಕ್ಮಿಣಿ ಮನೆಯಂಗಳದಲ್ಲಿ
ಬೀಳುವಂತೆ ಮಾಡುತ್ತಾನೆ.
ಈ ಉದುರಿದ
ಹೂಗಳನ್ನೆಲ್ಲ ಆರಿಸಿಕೊಂಡು
ರುಕ್ಮಿಣಿ ದೇವರ ಪೂಜೆಗೆ ಹಾಗೂ
ತನ್ನ ಅಲಂಕಾರಕ್ಕೆ ಉಪಯೋಗಿಸುತ್ತಿದ್ದಳು.
ಉದುರಿದ
ಹೂವುಗಳನ್ನು ದೇವರಿಗೆ ಏರಿಸುವುದಿಲ್ಲ
ಆದರೆ, ಉದುರಿ
ಬಿದ್ದ ಹೂವನ್ನು, ದೇವರಿಗೆ
ಅಲಂಕರಿಸುವ ಪುಷ್ಪಗಳಲ್ಲಿ ಪಾರಿಜಾತ
ಮತ್ತು ರಂಜದ ಹೂವುಗಳು ಶ್ರೇಷ್ಠವಾದುದು
ಎಂದು ಪರಿಗಣಿಸಿದ್ದಾರೆ.(ರಂಜದ
ಹೂವನ್ನು ಬಕುಳ ಪುಷ್ಪವೆಂದು
ಕರೆಯುತ್ತಾರೆ.
ಈ
ಪಾರಿಜಾತದ ಹೂವಿನ ಕುರಿತು ಇನ್ನೂ
ಒಂದು ದಂತ ಕಥೆ ಇದೆ:-
ಪಾರಿಜಾತಕ
ಎಂಬ ಸುಂದರ ರಾಜಕುಮಾರಿ ಇದ್ದಳು.
ಅವಳು ಆಕಾಶದಲ್ಲಿ
ಬೆಳಗುವ ಸೂರ್ಯನನ್ನು ತುಂಬಾ
ಇಷ್ಟಪಟ್ಟಳು. ಆದರೆ
ಸೂರ್ಯದೇವ ಅವಳ ಪ್ರೀತಿಯನ್ನು
ತಿರಸ್ಕರಿಸಿದ. ಇದರಿಂದ
ಬೇಸರಗೊಂಡ ಪಾರಿಜಾತಕ ಆತ್ಮಹತ್ಯೆ
ಮಾಡಿಕೊಂಡಳು. ಆ
ಬೂದಿಯ ರಾಶಿಯಲ್ಲಿ ಹುಟ್ಟಿದ
ಗಿಡವೇ ಈ ಪಾರಿಜಾತ ವೃಕ್ಷ.
ಈ ಗಿಡದಲ್ಲಿ
ಅರಳಿದ ಪಾರಿಜಾತಕ ರಾಜಕುಮಾರಿ
ಹೂವುಗಳಿಗೆ, ಬೆಳಿಗ್ಗೆ
ಸುಂದರವಾಗಿ ಅರಳಿ, ತಾನು
ಇಷ್ಟಪಟ್ಟು ಪ್ರೀತಿಸಿದ ಸೂರ್ಯನ
ಮುಖವನ್ನು ನೋಡಿದ ಕೂಡಲೇ ಅವಳಿಗೆ
ನೋವಾಗುತ್ತಿತ್ತು. ಆದ
ಕಾರಣ ಪಾರಿಜಾತ ಸೂರ್ಯಾಸ್ತದ
ಮೇಲೆ ಅರಳಿ ಸೂರ್ಯೋದಯದ ಬೆಳಗಿನ
ಸಮಯ ಬೇಸರದಿಂದ ಬಾಡಿ ಉದುರಿ
ಬೀಳುತ್ತದೆ ಎಂದು ಹೇಳುತ್ತಾರೆ.
ಈ ಕಾರಣಕ್ಕಾಗಿ,
ಪಾರಿಜಾತ
ಪ್ರೇಮಿಗಳ ಮರ, ದುಃಖ
ಕೊಡುವ ಮರ ಎಂದು ಹೇಳುತ್ತಾರೆ.
ಇಂತಹ
ಸುಗಂಧಭರಿತ ಸುಂದರವಾದ ಪಾರಿಜಾತದ
ಮರದ ಬೇರು, ಎಲೆ,
ತೊಗಟೆ,
ಹೂವು,
ಎಲ್ಲವೂ
ಔಷಧಯುಕ್ತವಾಗಿದೆ.
ಸುಗಂಧವನ್ನು
ಈ ಹೂವಿನಿಂದಲೇ ತಯಾರಿಸುತ್ತಾರೆ.
ಬಿಳಿ ಮೋಹಕ
ಬಣ್ಣದ ದಳ ಹಾಗೂ ಕಿತ್ತಲೆ ಬಣ್ಣದ
ತೊಟ್ಟಿರುವ ಈ ಹೂವು ನಕ್ಷತ್ರದಂತೆ
ಎಲ್ಲರನ್ನು ಆಕರ್ಷಿಸುತ್ತಿದೆ.
ಸ್ವರ್ಗದ 5
ವೃಕ್ಷಗಳಲ್ಲಿ
ಪಾರಿಜಾತವು ಒಂದು,
(ಅಶ್ವತ್ತ,
ಅರಳಿ ಅಥವಾ
ಅರಣಿ, ಅತ್ತಿಮರ,
ಶಮೀವೃಕ್ಷ
, ಪಾರಿಜಾತ,
) ಪಾರಿಜಾತದ
ಎಲೆಗಳು ತಂಪಾಗಿರುವ ಕಾರಣ,
ಮನುಷ್ಯನ
ದೇಹದ ಯಾವುದೇ ಭಾಗದಲ್ಲಿ ಉರಿ,
ಊತ,
ತುರಿಕೆಗೆ,
ಪಾರಿಜಾತ
ಎಲೆಗಳಿಂದ ತಯಾರಿಸಿದ ಎಣ್ಣೆ
ಬಳಸು ವುದರಿಂದ ಕಡಿಮೆಯಾಗುತ್ತದೆ.
ಮತ್ತು ಮಲಬದ್ಧತೆ
,ಜಾಂಡಿಸ್,
ಪಿತ್ತ ಮುಂತಾದ
ತೊಂದರೆಗಳಿಗೆ ಇದರ ಬೀಜವನ್ನು
ಔಷಧಿಯಾಗಿ ಬಳಸುತ್ತಾರೆ.
ಹೀಗೆ ಹಲವಾರು
ಔಷಧಿಗೆ ಉಪಯುಕ್ತವಾಗಿದೆ,
ಇದರ ತೊಗಟೆ
ಜ್ವರಕ್ಕೆ ಉತ್ತಮವಾದ ಔಷಧಿ.
ಈ
ಎಲ್ಲಾ ಗುಣಗಳಿಂದಾಗಿ ಪಾರಿಜಾತ
ಮರ ಹಾಗೂ ಬಿಡುವ ಹೂಗಳು ಭಾರತೀಯರಿಗೆ
ಮಹತ್ವಪೂರ್ಣವಾದ,
ಪವಿತ್ರ
ಸಂಕೇತದ ವೃಕ್ಷವಾಗಿದೆ.
ಆದಕಾರಣ
ಅಯೋದ್ಯದಲ್ಲಿ ರಾಮಮಂದಿರದ ಭೂಮಿ
ಪೂಜೆಯಲ್ಲಿ ನಮ್ಮ ದೇಶದ ಪ್ರಧಾನಿ
ನರೇಂದ್ರ ಮೋದಿಯವರು ಪಾರಿಜಾತದ
ಸಸಿಯನ್ನು ನೀಡುವುದರ ಮೂಲಕ
ಕಾರ್ಯವನ್ನು ಸಂಪನ್ನ ಗೊಳಿಸಿದರು.
ಇದು ಸೀತಾಮಾತೆಗೆ
ಬಹಳ ಪ್ರಿಯವಾದ ಹೂವು ಆದಕಾರಣ
ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ
ಶುಭ ಸಂಕೇತವಾಗಿ ಈ ಸಸಿಯನ್ನು
ನೆಡಲಾಯಿತು.
ಅಚ್ಯುತಂ
ಕೇಶವಂ ರಾಮ ನಾರಾಯಣಂ ಕೃಷ್ಣ
ದಾಮೋದರಂ ವಾಸುದೇವಂ ಹರಿಂ!
ಶ್ರೀಧರಂ
ಮಾಧವಂ ಗೋಪಿಕಾವಲ್ಲಭಂ ಜಾನಕಿ
ನಾಯಕಂ ರಾಮಚಂದ್ರಂ ಭಜೆ !
Medicinal Values of Parijatha Tree its Leaf , Bark , Stem , Seeds and Flower
The Juice of its Leaves is bitter and saline in taste and
provides effective relief in the treatment of several types
of inflammation and fever including malaria, intermittent
fever, common cough and cold.
The juice of its Leaves when mixed with a little sugar
is a good medicine for treatment of stomach ailments
of children.
In the treatment of skin diseases and constipation, the
seeds of the Parijatha tree are used.
The plant is also useful for dyeing. The flowers can be
used as a source of yellow dye for clothes. They are
also used to make perfume owing to its rich aroma.
The leaves are anti-bacterial, anti-inflammatory, anti-
pyretic, anti-oxidative and anti-fungal.
The flowers are diuretic, anti-oxidative, anti-
inflammatory and sedative.
The flower oil is also very prominently used as a
perfume.
The flower has a very strong fragrance, hence is used for
making incense sticks.
------- Hari Om -------