Tuesday, September 21, 2021

Mahalaya Pitrupaksha - 2021

 

Mahalaya Pitru Paksha


Starts from 21st September 2021 to 6th October 2021


The 15-day period of Pitru Paksha or Shrarddha Paksha is considered to be an auspicious time when our ancestors come to stay with us. It is believed that angry ancestors can cause severe harm to your life, so it is very important to take care of dos and don’ts.

Importance:
1. Rites performed for each of the 15 days of the fortnight are considered important and equal to that being performed in holy places like Gaya Kshetra
2. Thila (Sesame seeds) Tharpana and Pinda Pradhana (rice ball) offerings are made to departed ancestors during the fortnight
3. Those ancestors who had lost their lives in an unnatural manner or by accident or suicide would also be able to get the offerings, which would not be possible at other times
4. Those whose death dates are not known, and annual rites cannot be performed too, will benefit by these offerings
5. Offerings made would give peace to the ancestors and they would bestow their blessings for health, longevity, knowledge, and wealth on those who perform, according to the sacred scriptures (Shastras)
6. Rites when not performed by the descendants for their ancestors would make them aimlessly wander in the earth plane, infuriating them

Do’s and Don’ts


1. It is recommended to do Thila Tharpana every day of the Mahalaya Paksha except Ekadashi day
2. Perform Mahalya Chataka Shrarddha for Sarva Piturs at least one day within paksha period
3. Donate proper Satvik food and other useful items to Brahmanas, it helps in reducing the guilt of your known or unknown mistakes
4. Satvik Bhojana is advised to be taken during this paksha. Surely avoid onion, ginger, and garlic during this time
5. Organise daily prayer(s) to keep a peaceful and positive environment at home. It makes your ancestors feel happy and relaxed
6. It is believed that the ancestors can come in any form to check on you, so, never send anyone back with empty hands. Treat even the beggars and poor people nicely
7. According to the Sanathana Dharma, no new works begin in this period. Even, the purchase of new clothes, Jewellery, gadgets and etc., are prohibited
8. During Pitru Paksha, marriages, inaugurations and any kind of celebration are avoided. Either postpone such occasions or plan accordingly
9. Overseas travel and long journeys are to be avoided. Pilgrimages can be undertaken.

 


Pitru Devathegalu & Mahalaya Pitru Paksha


ಪಿತೃದೇವತೆಗಳು


ಒಮ್ಮೆ ದೇವತೆಗಳು ತಮ್ಮನ್ನು ಸೃಷ್ಟಿಸಿದ ಬ್ರಹ್ಮನನ್ನೇ ಮರೆತು ತಮ್ಮ ತಮ್ಮ ವೈಭವ ಸುಖಗಳಲ್ಲಿ ತಲ್ಲೀನರಾದರು. ಇದರಿಂದ ಕುಪಿತನಾದ ಬ್ರಹ್ಮನು - ನಿಮ್ಮನ್ನು ಅಜ್ಞಾನವು ಆವರಿಸಲಿ ಎಂದು ಶಪಿಸಿದನು.
ಚಿಂತಿತರಾದ ದೇವತೆಗಳು ತಮ್ಮ ತಪ್ಪನ್ನರಿತು ಬ್ರಹ್ಮನನ್ನು ಪ್ರಾರ್ಥಿಸಿದಾಗ ನೀವು ಪಿತೃದೇವತೆಗಳನ್ನು ಪೂಜಿಸಿ ಶಾಪವಿಮುಕ್ತರಾಗಿರಿ ಎಂಬುದಾಗಿ ಅನುಗ್ರಹಿಸಿದನು.

ಅಂದಿನಿಂದ ದೇವತೆಗಳು ಸಹ ಪಿತೃದೇವತೆಗಳನ್ನು ಪೂಜಿಸುತ್ತಿದ್ದಾರೆ. ಮತ್ತು ಪಿತೃಗಳು ದೇವತೆಗಳಿಗಿಂತ ಉನ್ನತಸ್ಥಾನದಲ್ಲಿದ್ದಾರೆ.(ಗುರು ಸ್ಥಾನದಲ್ಲಿ)ದೇವಪುತ್ರರೇ ಆದರೂ ಪಿತೃಗಳು ದೇವತೆಗಳನ್ನು ಮಕ್ಕಳೇ ಎಂದು ಸಂಭೋದಿಸಿದರು.

ಪಿತೃದೇವತೆಗಳಲ್ಲಿ ಏಳು ಮುಖ್ಯ ಗುಂಪುಗಳಿವೆ. ಇವರಲ್ಲಿ ಸುಕಾಲರು, ಅಂಗಿರಸರು, ಸುಸ್ವಧರು ಮತ್ತು ಸೋಮಪರು ಎಂಬ ನಾಲ್ವರು ಮೂರ್ತರು ಅಂದರೆ ಇವರಿಗೆ ಕರ್ಮಜನ್ಯವಾದ ದಿವ್ಯ ಶರೀರವಿರುತ್ತದೆ. ವೈರಾಜರು, ಅಗ್ನಿಷ್ಟಾತ್ತರು ಮತ್ತು ಬಹಿ೯ಷದರು ಅಮೂರ್ತರು ಅಂದರೆ ಇವರು ಯಾವ ರೂಪವನ್ನಾದರೂ ಧರಿಸಬಲ್ಲ ಕಾಮರೂಪಿಗಳು. ಈ ಅಮೂರ್ತ ಪಿತೃಗಳೇ ಶ್ರೇಷ್ಠರು. ಪವಿತ್ರವಾದ ಅಗ್ನಿಯ ಮೂಲಕ ತರ್ಪಣ ಮುಂತಾದವುಗಳನ್ನು ಸ್ವೀಕರಿಸುವವರು ಸಾಗ್ನಿಗಳು. ಪವಿತ್ರ ಅಗ್ನಿಯಿಲ್ಲದೆ ಬರೇ ತರ್ಪಣ ಮುಂತಾದವುಗಳನ್ನು ಸ್ವೀಕರಿಸುವವರು ನಿರಗ್ನಿಗಳು.

ಈ ಸಪ್ತ ಪಿತೃಗಳಿಗೆ ಅಧೀನರಾಗಿ ಇಪ್ಪತ್ತೊಂದು ಪಿತೃಗಣಗಳಿವೆ. ಕವ್ಯವನು ಮಾನವ ಪಿತೃಗಳಿಗೆ ಈ ಇಪ್ಪತ್ತೊಂದು ಪಿತೃಗಣಗಳು ತಲುಪಿಸುತ್ತಾರೆ. ಈ ಮಾನವ ಪಿತೃಗಳು ಪುಣ್ಯಲೋಕದಲ್ಲಿರಬಹುದು ಅಥವಾ ಕರ್ಮಭ್ರಷ್ಟರಾಗಿ ನಾಯಿ, ನರಿ, ಮನುಷ್ಯ, ರಾಕ್ಷಸ ಮುಂತಾದ ಯೋನಿಗಳಲ್ಲಿ ಜನಿಸಿರಬಹುದು ಅಥವಾ ಪ್ರೇತರೂಪದಲ್ಲಿರಬಹುದು.

ಪಿತೃಗಳ ಪವಿತ್ರ ಸ್ಥಳಗಳು ಅಮಾವಾಸ್ಯೆ, ಕುತಪಕಾಲ(ಹಗಲಿನ 8ನೆಯ ಕಾಲ), ಆಕಾಶ, ದಕ್ಷಿಣದಿಕ್ಕು, ಬೆಳ್ಳಿ, ಅಪಸವ್ಯ, ನೀರು, ಎಳ್ಳು, ದಬೆ೯, ಹಸುವಿನ ಹಾಲು, ಸಿಹಿ ಪದಾರ್ಥಗಳು, ಬಿಸಿ ಬಿಸಿ ಆಹಾರ, ತಾಮ್ರ, ಜೇನುತುಪ್ಪ, ಗೋಧಿ, ಗಯಾಶ್ರಾದ್ಧ ಮುಂತಾದವುಗಳು.


ಪಿತೃಗಳು ಬಿಸಿಬಿಸಿ ಆಹಾರವನ್ನು ಇಷ್ಪಡುವುದರಿಂದ ಅವರನ್ನು ಉಷ್ಣಪರು ಎಂದು ಕರೆಯುತ್ತಾರೆ.

ಪಿತೃಕಾರ್ಯವನ್ನು ಅಪರಾಹ್ಣದಲ್ಲೇ ಮಾಡಬೇಕು ಬೇರೆ ಸಮಯದಲ್ಲಿ ಮಾಡಿದರೆ ಆ ಶ್ರಾದ್ಧ ಫಲವನ್ನು ರಾಕ್ಷಸರು ಪಡೆಯುತ್ತಾರೆ.

ನಮ್ಮ ವಂಶದಲ್ಲಿ ಬಹಳ ಪುತ್ರರು ಜನಿಸಬೇಕು. ಏಕೆಂದರೆ ಅವರಲ್ಲಿ ಒಬ್ಬನಾದರೂ ಗಯಾದಲ್ಲಿ ಶ್ರಾದ್ಧ ಮಾಡಬಹುದು ಎಂದು ಪಿತೃಗಳು ಅನುಗಾಲವೂ ಚಿಂತಿಸುತ್ತಿರುತ್ತಾರೆ. ಆದ್ದರಿಂದ ಗಯಾದಲ್ಲಿರುವ ವಟ ವೃಕ್ಷದ ಕೆಳಗೆ ಶ್ರಾದ್ಧ ಮಾಡಿದರೆ ಶ್ರಾದ್ಧದ ಫಲವು ಅಕ್ಷಯವಾಗುತ್ತದೆ. ಅಲ್ಲದೆ ಕರ್ತೃವಿನ ಮುಂದಿನ ಪೀಳಿಗೆಯ ಯಾರೂ ಪ್ರೇತರಾಗುವುದಿಲ್ಲ. ಪಿತೃಗಳು ಎಂದರೆ ಪಾಲಿಸುವವರು ಎಂದರ್ಥ.

ಪಿತೃಗಣಗಳು ದಕ್ಷ ಪುತ್ರಿ ಸ್ವಧಾನನ್ನು ಮದುವೆಯಾದರು. ಪಿತೃದೇವತೆಗಳಿಗೆ ಕವ್ಯವನ್ನು ಅರ್ಪಿಸುವಾಗ ಸ್ವಧಾ ಎಂದು ಹೇಳಬೇಕು.

ಯಾವ ಮನೆಯಲ್ಲಿ ಸ್ವಾಹಾಕಾರಗಳು ಮತ್ತು ಸ್ವಧಾಕಾರಗಳು ಕೇಳಿಸುವುದಿಲ್ಲವೋ ಆ ಮನೆಯು ಸ್ಮಶಾನಕ್ಕೆ ಸಮಾನವೆಂದು ಹೇಳುತ್ತಾರೆ.

ಯಮನು ಪಿತೃಗಣಗಳ ಅಧಿಪತಿಯಾಗಿರುವುದರಿಂದ ಅವನನ್ನು ಶ್ರಾದ್ದ ದೇವ ಎಂದು ಕರೆಯುತ್ತಾರೆ.

ಕಾಲ

ಪಿತೃಗಳಿಗೆ ಶುಕ್ಲಪಕ್ಷವು ರಾತ್ರಿಯಾಗಿಯೂ, ಕೃಷ್ಣಪಕ್ಷವು ಹಗಲಾಗಿಯೂ ಇರುತ್ತದೆ. ಅಂದರೆ ಮಾನವನ ಒಂದು ಮಾಸವು ಪಿತೃಗಳಿಗೆ ಒಂದು ಅಹೋರಾತ್ರಿಯಾಗಿರುತ್ತದೆ. ಈ ಕಾಲಮಾನದಲ್ಲಿ ಪಿತೃಗಳ ಪೂರ್ಣಾಯಸ್ಸು 3000 ವರ್ಷಗಳು.

ಪಿತೃದೇವತೆಗಳು ಮಾನವರಿಗೆ ದೇವತೆಗಳಿಗಿಂತ ಹತ್ತಿರದಲ್ಲಿದ್ದು ಬಹುಬೇಗ ತೃಪ್ತರಾಗಿ ದೇವತೆಗಳಿಗಿಂತ ಮೊದಲು ವರವನ್ನು ಕೊಡುತ್ತಾರೆ.
ಅದಕ್ಕೆ ಹೇಳೋದು ಏನನ್ನು ಮರೆತರೂ ಮಾಡಿದರೂ ಶ್ರಾದ್ಧವನ್ನು ಮರೆಯಬಾರದು ಎಂದು.

ಶ್ರಾದ್ಧದ ದಿನ ಹಬ್ಬ ಹರಿ ದಿನಗಳನ್ನು ಪಕ್ಕಕ್ಕೆ ಇಟ್ಟು ಶ್ರಾದ್ಧವನ್ನು ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.

ಶ್ರಾದ್ಧಗಳು

ನಾಂದೀ ಶ್ರಾದ್ಧ / ವೃದ್ಧಿ ಶ್ರಾದ್ಧ / ಅಭ್ಯುದಯ ಶ್ರಾದ್ಧ - ಮದುವೆ, ಉಪನಯನ ಮುಂತಾದ ಸಂಸ್ಕಾರಗಳಲ್ಲಿ ಮಾಡುವುದು ಪಿತೃಗಳ ಆಶೀರ್ವಾದಕೋಸ್ಕರ.(ನಂದತಿ ದೇವತಾ ಇತಿ ನಾಂದೀ). ಈ ಶ್ರಾದ್ಧ ದಲ್ಲಿ ಎಳ್ಳಿನ ಬದಲು ಅಕ್ಕಿಯನ್ನು ಉಪಯೋಗಿಸುತ್ತಾರೆ ಮತ್ತು ಇದನ್ನು ಪ್ರಾತಃಕಾಲದಲ್ಲಿ ಮಾಡುತ್ತಾರೆ. ಈ ಶ್ರಾದ್ಧದಲ್ಲಿ ಮನುಷ್ಯ ಮಾತೃಕೆಯರನ್ನು(ಮಾತೃ, ಪಿತಾಮಹಿ ಮತ್ತು ಪ್ರಪಿತಾಮಹಿ) ಮತ್ತು ದೇವಮಾತೃಕೆಯರನ್ನು (ಬ್ರಾಹ್ಮೀ, ಮಾಹೇಶ್ವರಿ, ವೈಷ್ಣವಿ, ಕೌಮಾರಿ,ಇಂದ್ರಾಣಿ, ಮಾಹೆಂದ್ರಿ, ವಾರಾಹಿ ಮತ್ತು ಚಾಮುಂಡಾ) ಪೂಜಿಸಿ ನಂತರ ಪಿತೃಗಳನ್ನು ಪೂಜಿಸುತ್ತಾರೆ.

ಸಪಿಂಡೀಕರಣ ಶ್ರಾದ್ಧ

ಮೃತನು ಸತ್ತ 12ನೆ ದಿನ ಮತ್ತು ಒಂದು ವರ್ಷದ ಬಳಿಕ ಮಾಡುವ ಶ್ರಾದ್ಧ.
ಅಷ್ಟಕ ಶ್ರಾದ್ಧ, ಏಕೋದಿಷ್ಟ ಶ್ರಾದ್ಧ, ಪಾರ್ವಣ ಶ್ರಾದ್ಧ, ನಿತ್ಯ ಶ್ರಾದ್ಧ, ಕಾಮ್ಯ ಶ್ರಾದ್ದ, ಗೋಷ್ಠ ಶ್ರಾದ್ಧ, ಶುದ್ದಿ ಶ್ರಾದ್ಧ, ಕರ್ಮಾಂಗ ಶ್ರಾದ್ಧ, ದೈವಿಕ ಶ್ರಾದ್ಧ, ಮತ್ತು ಇತರೇ

ಪಿತೃಸ್ಥಾನದಲ್ಲಿರುವ ಬ್ರಾಹ್ಮಣನ ಕೈಯಲ್ಲಿ ಅನ್ನವನ್ನು ಹೋಮ ಮಾಡುವುದೇ ಪಾಣಿಹೋಮ. ಪಾಣಿ ಎಂದರೆ ಕೈ.(ಪಾಣಿ ಮುಖಾವೈ ಪಿತರಃ)

ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸದೆ ಮಾಡಿದ ವೈದಿಕ ಕರ್ಮಗಳೆಲ್ಲಾ ರಾಕ್ಷಸರ ಪಾಲಾಗುತ್ತದೆ.
ಸರ್ವೇಷಾಂ ಧಾನ್ಯ ರಾಶೀನಾಂ ತಿಲಾಃ ಪಾಪ ಪ್ರಣಾಶನಾಃ ಎಂಬಂತೆ ಧಾನ್ಯಗಳಲ್ಲಿ ತಿಲವೇ ಶ್ರೇಷ್ಠ ಮತ್ತು ಪಾಪನಾಶಕ.ಮದುವೆಮಾಡಿ ಎರಡು ತಿಂಗಳಾಯಿತು ತಂದೆಯ(ತಾಯಿಯ)ತಿಥಿ ಬಂದಿದೆ. ಮಾಡಬಹುದೇ? ಎಂದು ಪ್ರಶ್ನೆ ಮಾಡುವುದು ಪರಮ ಮೂಖ೯ತನ.

ತಿಲ ದಾನ ಪುಣ್ಯದಾಯಕ, ಅದರಲ್ಲೂ ಮಾಘಮಾಸದಲ್ಲಿ ಎಳ್ಳನ್ನು ದಾನ ಮಾಡಿದರೆ ಪರಮಪುಣ್ಯ...



Importance and inner Secrets of --- Mahalaya Amavasya




                                                                    Page 1 of 2


                                                                  Page 2 of 2



Mahalaya Paksha – Sarva Pitru’s from 14.09.19 to 28.09.19

" ಮಹಾಲಯ ಪಕ್ಷಾರಂಭ "

(
ದಿನಾಂಕ : 14.09.19 - 28.09.19 ವರೆಗೆ ಪಕ್ಷಮಾಸ )

"
ಶ್ರಾದ್ಧದ ಮಹತ್ವ - ಒಂದು ಚಿಂತನೆ "

"
ಶ್ರಾದ್ಧ " ಯೆಂದರೆ...

"
ಶ್ರದ್ಧಯಾ ಕ್ರೀಯತೇ ಕರ್ಮ ಇತಿ ಶ್ರಾದ್ಧಮ್ " - ಶ್ರದ್ಧೆಯಿಂದ ಆಚರಿಸುವ ಕಾರ್ಯವೇ " ಶ್ರಾದ್ಧ " ಎಂದು ಕರೆಸಿಕೊಳ್ಳುತ್ತದೆ. ಅತ್ಯಂತ ನಿಷ್ಠೆಯಿಂದ ಪಿಂಡ ಪ್ರದಾನ ಮಾಡಿ ಪಿತೃ ದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ದನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ತನ್ನ ಪಿತೃಗಳಿಗೆ ಸದ್ಗತಿಯು ದೊರೆಯಲಿದೆಯೆಂದು ಪ್ರಾರ್ಥಿಸಬೇಕು.

ಕರ್ಮಭೂಮಿ ಯೆನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ " ಶ್ರಾದ್ಧ " ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದನ್ನು " ಪಿತೃ ಯಜ್ಞ " ಎಂದು ಕರೆಯುತ್ತಾರೆ.

"
ಬ್ರಹ್ಮಾಂಡ ಪುರಾಣ " ದಲ್ಲಿ...

ಪಿತೃನ್ಯೂದ್ಧಿಶ್ಯ ವಿಪ್ರೇಭ್ಯೋ ದತ್ತಾಂ ಶ್ರಾದ್ಧಮುದಾಹೃತಮ್ ।।

ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು - ಹೊತ್ತು - ಸಾಕಿ - ಸಲುಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ - ತಾಯಿ - ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನ - ಜಲಾದಿಗಳನ್ನು ಕೊಡುವ ಪಿತೃ ಕಾರ್ಯಕ್ಕೆ " ಶ್ರಾದ್ಧ " ಎಂದು ಹೆಸರು.

"
ಶ್ರಾದ್ಧ ಕಲ್ಪಲತಾ " ದಲ್ಲಿ....

ಪಿತೃನುದ್ಧಿಶ್ಯೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ ।
ಬ್ರಾಹ್ಮಣೈರ್ಯತ್ಸ್ವೀಕರಣಂ ತತ್ ಶ್ರಾದ್ಧಮ್ ।।

ಪಿತೃಗಳನ್ನುದ್ಧೇಶಿಸಿ ಶ್ರದ್ಧೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಬ್ರಾಹ್ಮಣರು ಸ್ವೀಕರಿಸುವುದಕ್ಕೆ " ಶ್ರಾದ್ಧ " ಎಂದು ಹೆಸರು.

ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯವನ್ನು ತನ್ನ ಪಿತೃಗಳನ್ನುದ್ಧೇಶಿಸಿ ಕೊಡುವ " ಪಿಂಡ ಪ್ರದಾನ " ಕ್ರಿಯೆಗೆ " ಶ್ರಾದ್ಧ " ಎಂದು ಹೆಸರು.

ಇಲ್ಲಿ ಕೆಲವರು ಪ್ರಶ್ನೆ ಮಾಡುವುದುಂಟು...

ನಮ್ಮನ್ನಗಲಿ ಹೋದ ಪಿತೃಗಳಿಗೆ ನಾವು ಕೊಡುವ ಜಲಾಂಜಲಿ - ಪಿಂಡ ಪ್ರಧಾನದಿಂದ ತೃಪ್ತಿಯಾಗುವುದು ಹೇಗೆ? ಅವರಿಗೆ ನಾವು ಕೊಟ್ಟಿದ್ದು ತಲುಪುವುದು ಹೇಗೆ?

ಇದಕ್ಕೆ ಉತ್ತರ ಹೀಗಿದೆ...

ನಾವು ಕೊಟ್ಟ ಅನ್ನವನ್ನು ಅಂದರೆ...

ಅದರ ಸಾರ ಭಾಗವನ್ನು ವಸು - ರುದ್ರ - ಆದಿತ್ಯ ತದಂತರ್ಗತ ಭಾರತೀ ರಾಮಣ ಮುಖ್ಯಪ್ರಾಣಾಂತರ್ಗತ ಪ್ರದ್ಯುಮ್ನ - ಸಂಕರ್ಷಣ - ವಾಸುದೇವ ರೂಪಿ ಭಗವಂತನು ಸ್ವೀಕರಿಸಿ ಅದನ್ನು ನಮ್ಮ ಪಿತೃಗಳು ಯಾವ ಯೋನಿಯಲ್ಲಿ ಎಲ್ಲಿ ಇರುವರೋ ಅಲ್ಲಿ ಅವರಿಗೆ ಆಹಾರ ರೂಪವಾಗಿ ಸೂಕ್ತ ರೀತಿಯಲ್ಲಿ ಕೊಟ್ಟು ಸಂತೋಷ ಪಡಿಸುತ್ತಾನೆ.

ಶ್ರಾದ್ಧ ಕರ್ತೃವಿನ ತಂದೆಯು / ಪಿತೃಗಳು ದೇವತ್ವವನ್ನು ಹೊಂದಿದ್ದರೆ ಆ ಅನ್ನವು ಅಮೃತವಾಗಿ, ಪಶುವಾಗಿದ್ದರೆ ಹುಲ್ಲಾಗಿ, ಸರ್ಪವಾಗಿದ್ದರೆ ವಾಯು ರೂಪವಾಗಿ, ಹದ್ದು ಮೊದಲಾದವಾಗಿದ್ದರೆ ಮಾಂಸವಾಗಿ, ಮನುಷ್ಯನಾಗಿದ್ದರೆ ಯೋಗ್ಯ ಅನ್ನವಾಗಿ ಅವರಿಗೆ ತಲುಪುತ್ತದೆ.

ಪಿತೃಗಳ ( ತಂದೆ - ತಾಯಿ - ಹಿರಿಯರು ) ತೃಪ್ತಿಗಾಗಿ ಶ್ರಾದ್ಧ ಕರ್ಮವನ್ನು ಮಾಡಲೇಬೇಕು ಎಂದು " ಕೂರ್ಮ ಪುರಾಣ " ದಲ್ಲಿ...

ಶ್ರಾದ್ಧಾತ್ಪರಾತ್ಪರಾನ್ನಾಸ್ತಿ ಶ್ರೇಯಸ್ಕರ ಮುದಾಹೃತಮ್ ।
ತಸ್ಮಾತ್ ಸರ್ವ ಪ್ರಯತ್ನೇನ ಶ್ರಾದ್ಧ೦ ಕುರ್ಯಾದ್ವಿಚಕ್ಷಣಃ ।।

ಮಾನವರಿಗೆ ತಮ್ಮ ಪಿತೃಗಳ ಶಾಸ್ತ್ರೋಕ್ತವಾದ ಶ್ರಾದ್ಧ ಕರ್ಮಕ್ಕಿಂತ ಶ್ರೇಯಸ್ಕರವಾದ ಕಾರ್ಯವು ಯಾವುದೂ ಇಲ್ಲ. ಆದುದರಿಂದ ವಿವೇಕಿಗಳೂ; ಜ್ಞಾನಿಗಳೂ ಸರ್ವ ಪ್ರಯತ್ನದಿಂದ ಶ್ರಾದ್ಧವನ್ನು ಮಾಡಬೇಕು.

"
ಯಮ ಸ್ಮೃತಿ "

ಯೇ ಯಜಂತಿ ಪಿತೃನ್ ದೆವಾನ್ ಬ್ರಾಹ್ಮಣಾ: ಸರ್ವ ಕಾಮದಾನ್ ।
ಸರ್ವ ಭೂತಾಂತರಾತ್ಮಾನ್ ವಿಷ್ಣುಮೇವ ಯಜಂತಿ ತೇ ।।

ಯಾವ ಬ್ರಾಹ್ಮಣನು ಎಲ್ಲಾ ಇಷ್ಟಾರ್ಥವನ್ನು ಕೊಡುವವರಾದ ಪಿತೃಗಳನ್ನೂ; ದೇವತೆಗಳನ್ನೂ ಪೂಜಿಸುವರೋ ಅವರು ಎಲ್ಲಾ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ನಿಯಾಮಕನಾದ ಶ್ರೀ ಮಹಾವಿಷ್ಣುವನ್ನೇ ಪೂಜಿಸುತ್ತಾರೆ!!

ಶ್ರಾದ್ಧ ಕರ್ಮವನ್ನು ಮಾಡದಿದ್ದರೆ ಏನಾಗುತ್ತದೆ? ಎಂದು ಕೇಳುವವರಿಗೆ..

"
ಹಾರಿತ ಸ್ಮೃತಿ " ಯು ಹೀಗೆ ಉತ್ತರಿಸುತ್ತದೆ...

ನ ಸಂತಿ ಪಿತರಶ್ಚೇತಿ ಕೃತ್ವಾ ಮನಸಿ ಯೋ ನರಃ ।
ಶ್ರಾದ್ಧ೦ ನ ಕುರುತೇ ತತ್ರ ತಸ್ಯ ರಕ್ತ೦ ಪಿಬಂತಿ ತೇ ।।

ಯಾವ ಮನುಷ್ಯರು ಪಿತೃಗಳೂ ಅಥವಾ ತಂದೆ - ತಾಯಿಗಳ ದೇಹವನ್ನು ಸುಟ್ಟು ಭಸ್ಮ ಮಾಡಿದ ಮೇಲೆ ಅವರಿಗೆ ಹೊಟ್ಟೆ ಇಲ್ಲ ಎಂಬ ಭಾವನೆಯಿಂದ ಪಿತೃಗಳ ಶ್ರಾದ್ಧಾದಿಗಳನ್ನು ಮಾಡುವುದಿಲ್ಲವೋ ಅಂಥವರ ಪಿತೃಗಳು ಸಿಟ್ಟಾಗಿ ನಾಸ್ತಿಕರ ರಕ್ತವನ್ನು ಕುಡಿಯುತ್ತಾರೆ.

ಇನ್ನು ಶ್ರಾದ್ಧವನ್ನು ಮಾಡುವವರು ನ್ಯಾಯದಿಂದ ಹಣದಿಂದಲೇ ಮಾಡಬೇಕೆಂದು " ಮಾರ್ಕಂಡೇಯ ಪುರಾಣ " ಈ ಕೆಳಗಿನಂತೆ ಖಚಿತ ಪಡಿಸಿದೆ.

ಅನ್ಯಾಯೋಪಾರ್ಜಿತೈರ್ವಿತ್ತೈ: ಯತ್ ಶ್ರಾದ್ಧ೦ ಕ್ರೀಯತೇ ನರೈ:
ತೃಪ್ಯಂತಿ ತೇನ ಚಾಂಡಾಲಾ: ಪುಲ್ಕಸಾದ್ಯಾಶ್ಚಯೋನಯಃ ।।

ಮಾನವರು ಅನ್ಯಾಯ - ಅಧರ್ಮದಿಂದ ಹಣವನ್ನು ಗಳಿಸಿ ಅದರಿಂದ ಶ್ರಾದ್ಧ ಮಾಡಿದರೆ ಆ ಶ್ರಾದ್ಧದಿಂದ ಚಾಂಡಾಲ - ಪುಲಸ್ಕ ( ಬ್ರಾಹ್ಮಣನಿಗೆ ಕ್ಷತ್ರೀಯ ಜಾತಿಯಲ್ಲಿ ಹುಟ್ಟಿದ ಮಿಶ್ರ ಜಾತಿಯವ ) ಮುಂತಾದ ಪಾಪಿಗಳಿಗೆ ತೃಪ್ತಿಯಾಗುವುದೇ ಹೊರತು ಪಿತೃಗಳಿಗೆ ತೃಪ್ತಿಯಾಗುವುದೇ ಇಲ್ಲ!!
***

ಈ ಪವಿತ್ರವಾದ ಪಿತೃ ಯಜ್ಞದಲ್ಲಿ ಶ್ರೀ ಜನಾರ್ದನ ರೂಪಿಯಾದ ಶ್ರೀ ಪರಮಾತ್ಮನನ್ನೇ " ಶ್ರಾದ್ಧಾ ಸ್ವಾಮಿ " ಎಂದು ಭಾವಿಸಿಬೇಕು.

ಶ್ರಾದ್ಧದಲ್ಲಿ ಬಳಸುವ ಎಳ್ಳು - ದರ್ಭೆ ಮೊದಲಾದ ಪದಾರ್ಥಗಳಲ್ಲಿ ಶ್ರೀ ಜನಾರ್ದನನು ಒಂದೊಂದು ರೂಪದಿಂದ ನೆಲೆಸುವನು.

ವಿಶ್ವೇ ದೇವತೆಗಳ ಅಂತರ್ಯಾಮಿಯಾಗಿ 3555 ರೂಪಗಳಿಂದ ಶ್ರಾದ್ಧ ಕರ್ಮಕ್ಕೆ ಯಾವ ವಿಘ್ನಗಳು ಬರದಂತೆ ಶ್ರೀ ಜನಾರ್ದನನು ಶ್ರಾದ್ಧ ಕರ್ಮವನ್ನು ರಕ್ಷಿಸುವನು.

ಶ್ರೀ ಜನಾರ್ದನನ ಹೆಸರೇ ಇದನ್ನು ಹೇಳುತ್ತದೆ...

= 3
ನಾ = 5
ರ್ದ = 5
= 5

ಶ್ರಾದ್ಧ ಕಾಲದಲ್ಲಿ ಪಠಿಸಬೇಕಾದವುಗಳು...

. ಶ್ರೀ ಪದ್ಮ ಪುರಾಣಾಂತರ್ಗತ ಔರ್ಧ್ವ ದೇಹಿಕ ಶ್ರೀ ರಾಮ ಸ್ತೋತ್ರ
. ಕಾಠಕೋಪನಿಷತ್
. ಶ್ರೀ ವಿಜಯವಿಠ್ಠಲ ವಿರಚಿತ " ಪೈತೃಕ ಸುಳಾದಿ "
. ಶ್ರೀ ಜಗನ್ನಾಥದಾಸ ಕೃತ " ಪಿತೃ ಗಣ ಸಂಧಿ "

ಹೀಗೆ ಶ್ರೀ ಜನಾರ್ದನನ ರೂಪಗಳು.

ನರಕೋದ್ಧಾರ ಇದರಿಂದ ಸತ್ಯ ಪಿತೃಗಳಿಗೆ ।
ನರಕಾತೀತ ನಮ್ಮ ವಿಜಯವಿಠ್ಠಲ ಸುಳಿವಾ ।।


---------------- Hari Om ---------------

Friday, September 10, 2021

Ganesha Aarathi song

 

                                                                        Lord Ganesha

 

ಶ್ರೀ ಗಣಪತಿ ಆರತಿ -- Sri Ganapati Aarathi Song


"
ಸುಖಕರ್ತಾ ದುಃಖಹರ್ತಾ" ಎಂಬ ಮರಾಠಿ ಭಾಷೆಯ ಈ ಆರತಿ ಹಾಡು ಸಮಸ್ತ ಭಾರತೀಯರನ್ನು ಧಾರ್ಮಿಕವಾಗಿ ಒಂದುಗೂಡಿಸಿದ ಹಾಡು. ಶ್ರೀಗಣೇಶೋತ್ಸವದಲ್ಲಿ ಈ ಆರತಿ ಇಲ್ಲದೇ ಪೂಜೆ ಪೂರ್ಣವಾಗಲಾರದು ಎಂಬ ಭಾವನೆ ಇದೆ. ತಿಲಕರು ಇದೇ ಆರತಿಯನ್ನು ಹೇಳುತ್ತಿದ್ದರು ಎಂಬ ಪ್ರತೀತಿ ಇದೆ. ಈ ಒಂದು ಪದ್ಯವನ್ನು ಜಗತ್ತಿನಾದ್ಯಂತ ಜಾತಿ-ಮತ-ಪಂಥವನ್ನು ಮೀರಿ ಎಲ್ಲರೂ ಹಾಡುತ್ತಾರೆ. ಇದು ಸಂಸ್ಕೃತಿಯ ಪ್ರತೀಕವಾಗಿದೆ. ಕೋಟ್ಯಾಂತರ ಜನ ಹೇಳುವದರ ಮೂಲಕ ಈ ಆರತಿಪದ ಮಂತ್ರಕ್ಕೆ ಸಮನಾದ ಪ್ರಾತಿನಿಧ್ಯವನ್ನು ಪಡೆದಿದೆ. ಭಕ್ತಿಯ ಸಂಕೇತವಾಗಿದೆ. ಈ ಪದದೊಂದಿಗೆ ಕೆಲವು ಮಂತ್ರಗಳನ್ನೂ ಸೇರಿಸಿ ಹಾಡುವದು ಸಂಪ್ರದಾಯ ಅಲ್ಲದೇ ಮನೆ-ಮಂದಿರಗಳಲ್ಲಿ ಪರಿವಾರದೊಂದಿಗೆ ಎಲ್ಲರೂ ಸೇರಿ ಹಾಡುವಾಗ ವಿಶೇಷ ಆನಂದವನ್ನು ಕೊಡುತ್ತದೆ. ಭಕ್ತಿಯ ತನ್ಮಯತೆಯನ್ನು ಮೂಡಿಸುತ್ತದೆ.

 

                                                                 Sri Vinayaka swamy

 

ಸುಖಕರ್ತಾ ದುಃಖಹರ್ತಾ ವಾರತಾ ವಿಘ್ನಾ ಚಿ | ನುರವಿ ಪುರವಿ ಪ್ರೇಮ ಕೃಪಾ ಜಯಾ ಚಿ |
ಸರ್ವಾಂಗಿ ಸುಂದರ ಉಟಿ ಶೇಂದುರಾಚಿ | ಕಂಠಿ ಝಳಕೆ ಮಾಳ ಮುಕ್ತಾಫಳಾ ಚಿ || 1 ||

ಜಯದೇವ ಜಯದೇವ ಜಯ ಮಂಗಲಮೂರ್ತಿ | ದರ್ಶನಮಾತ್ರೇ ಮನಃಕಾಮನಾ ಪೂರತಿ || ||

ರತ್ನಖಚಿತ ಫರಾ ತುಜ ಗೌರಿಕುವರಾ | ಚಂದನಾ ಚಿ ಉಟಿ ಕುಂಕುಮ ಕೇಶರಾ |
ಹೀರೆಜಡಿತ ಮುಗುಟ ಶೋಭತೋ ಬರಾ | ರುಣಝುಣತಿ ನೂಪೂರೆ ಚರಣೀ ಘಾಗರಿಯಾ || 2 ||

ಜಯದೇವ ಜಯದೇವ ಜಯ ಮಂಗಲಮೂರ್ತಿ | ದರ್ಶನಮಾತ್ರೇ ಮನಃಕಾಮನಾ ಪೂರತಿ |

ಲಂಬೋದರ ಪೀತಾಂಬರ ಫಣಿವರಬಂಧನಾ | ಸರಳ ಸೋಂಡ ವಕ್ರತುಂಡ ತ್ರಿನಯನಾ |
ದಾಸ ರಾಮಾ ಚಾ ವಾಟ ಪಾಹೆ ಸದನಾ | ಸಂಕಟಿ ಪಾವಾವೆ ನಿರ್ವಾಣೀ ರಕ್ಷಾವೆ ಸುರವರ ವಂದನಾ || 3 ||

ಜಯದೇವ ಜಯದೇವ ಜಯ ಮಂಗಲಮೂರ್ತಿ | ದರ್ಶನಮಾತ್ರೇ ಮನಃಕಾಮನಾ ಪೂರತಿ |

ಪ್ರಾರ್ಥನಾ

ಘಾಲೀನ ಲೋಟಾಂಗಣ ವಂದೀನ ಚರಣ | ಡೋಳ್ಯಾನಿ ಪಾಹೀನ ರೂಪ ತುಝೆ |
ಪ್ರೇಮೇ ಆಲಿಂಗಿನ ಆನಂದೇ ಪೂಜಿನ | ಭಾವೇ ಓವಾಳೀನ ಮ್ಹಣೇ ನಾಮಾ || 1 ||

 

                                                               Lord Ganesha

 

 

ತ್ವಮೇವ ಮಾತಾ ಪಿತಾ ತ್ವಮೇವ | ತ್ವಮೇವ ಬಂಧುಶ್ಚ ಸಖಾ ತ್ವಮೇವ |
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ | ತ್ವಮೇವ ಸರ್ವಂ ಮಮ ದೇವದೇವ || 2 ||

ಕಾಯೇನ ವಾಚಾ ಮನಸೇಂದ್ರಿಯೇರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ | ನಾರಾಯಣಾಯೇತಿ ಸಮರ್ಪಯಾಮಿ || 3 ||

ಅಚ್ಯುತಂ ಕೇಶವಂ ರಾಮನಾರಾಯಣಂ | ಕೃಷ್ಣ ದಾಮೋದರಂ ವಾಸುದೇವಂ ಹರಿಮ್ |
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ | ಜಾನಕೀ ನಾಯಕಂ ರಾಮಚಂದ್ರಂ ಭಜೇ || 4 ||

ಹರೇರಾಮ ಹರೇರಾಮ ರಾಮರಾಮ ಹರೇಹರೇ |
ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ||

ಹರೇರಾಮ ಹರೇರಾಮ ರಾಮರಾಮ ಹರೇಹರೇ |
ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ||

ಹರೇರಾಮ ಹರೇರಾಮ ರಾಮರಾಮ ಹರೇಹರೇ |
ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ||

 

                                                                   Another Picture


            

श्री गणेशजी की आरती

जय गणेश, जय गणेश, जय गणेश, देवा .
माता जाकी पारवती, पिता महादेवा ..

एकदन्त, दयावन्त, चारभुजाधारी,
माथे पर तिलक सोहे, मूसे की सवारी .
पान चढ़े, फूल चढ़े और चढ़े मेवा,
लड्डुअन का भोग लगे, सन्त करें सेवा ..



अंधे को आँख देत, कोढ़िन को काया,
बाँझन को पुत्र देत, निर्धन को माया .
सूर’ श्याम शरण आए, सफल कीजे सेवा,
जय गणेश जय गणेश जय गणेश देवा ..


Very Effective God for any Obstacles one face and pray with full Faith One will achieve anything Successfully with Ease.


            ---------- Hari Om -----------