Saturday, June 6, 2020

Graha adipati for Nakshatras & its simple Dosha Parihara

Graha adipati for Nakshatras & its simple Dosha Parihara


  

ಯಾವ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಸರಳ ಪರಿಹಾರ..‌

#
ಅಶ್ವಿನಿ

ಈ ನಕ್ಷತ್ರದಲ್ಲಿ ಜನಿಸಿರುವವರಿಗೆ ವಿದ್ಯೆಕ್ಕಿಂತ ಬುದ್ದಿಮಟ್ಟ ಜಾಸ್ತಿ , ಇವರು ಇನ್ನೊಬ್ಬರ ಸ್ನೇಹ ಬೇಗ ಸಂಪಾದಿಸುತ್ತಾರೆ... ಈ ನಕ್ಷತ್ರದಅಧಿಪತಿ ಕೇತು .... ಕುಲದೇವರ ಆರಾಧನೆ ನಿತ್ಯ ಮಾಡಿ

#
ಭರಣಿ

ಭರಣಿ ನಕ್ಷತ್ರದವರಿಗೆ ನಾವು ಸಾಮಾನ್ಯ ವಾಗಿ ಹೇಳೊದು ಭರಣಿ ನಕ್ಷತ್ರ ಧರಣಿ ಆಳುತ್ತಾರೆ ಅಂತ ಇವರು ಏನೇ ಕೆಲಸ ಮಾಡಲಿ ಹತ್ತು ಸಲ ಯೊಚನೆ ಮಾಡುತ್ತಾರೆ... ಈ ನಕ್ಷತ್ರದ ಅಧಿಪತಿ ಶುಕ್ರ......‌ ದುರ್ಗಾದೇವಿ ಆರಾಧನೆ ಮಾಡಬೇಕು

#
ಕೃತ್ತಿಕಾ

ಇವರು ಒಳ್ಳೆಯ ಕೆಲಸಗಾರರು ,ಯಾವದೇ ಕೆಲಸಮಾಡಲಿ ಆ ಕೆಲಸಕ್ಕೆ ನ್ಯಾಯ ಒದಗಿಸುವರು..‌ಆದರೆ ಅಹಂ ಜಾಸ್ತಿ.. ಈ ನಕ್ಷತ್ರದ ಅಧಿಪತಿ ರವಿ ....‌ ಆದಿತ್ಯ ಹೃದಯ ಪಠಣೆ ಒಳ್ಳೆಯದು

#
ರೋಹಿಣಿ

ಈ ನಕ್ಷತ್ರ ದವರು ಉತ್ತಮ ಸ್ವಭಾವ , ಅತಿಥಿ ಸತ್ಕಾರ ಮನೋಭಾವದವರು , ಹಲವಾರು ಅಭಿರುಚಿ ಉಳ್ಳವರು... ಈ ನಕ್ಷತ್ರದ ಅಧಿಪತಿ ಚಂದ್ರ ...‌‌..ಶಿವನಿಗೆ ರುದ್ರಾಭಿಷೇಕ ಮಾಡುವದು ಒಳ್ಳೆಯದು

#
ಮೃಗಶಿರಾ

ಒಳ್ಳೆಯ ಬುದ್ಧಿವಂತಿಕೆ ಆದರೆ ಉಪಯೋಗಿಸುವದು ಕಡಿಮೆ ಆಲಸಿಗಳು . ಭೋಗ ಪ್ರೀಯರು... ಈ ನಕ್ಷತ್ರದ ಅಧಿಪತಿ ಕುಜ ... ಗಣಪತಿ ಆರಾಧನೆ , ಮಂಗಳ ಚಂಡಿಕೆ ಸ್ತೋತ್ರ ಹೇಳಿದರೆ ಒಳ್ಳೆಯದು

#
ಆರ್ದ್ರಾ

ಇವರು ಗೊಂದಲ ಮನಸ್ಥಿತಿ ಇರುವವರು.. ಬೇಗನೆ ನಿರ್ದಾರ ತೆಗೆದುಕೊಳ್ಳುವದಿಲ್ಲ . ಆದರೆ ಒಂದು ಸಲ ತೆಗೆದುಕೊಂಡ ನಿರ್ದಾರಕ್ಕೆ ಬದ್ಧರಾಗಿರುತ್ತಾರೆ...‌ ಈ ನಕ್ಷತ್ರ ದ ಅಧಿಪತಿ ರಾಹು ..‌..ಸುಬ್ರಹ್ಮಣ್ಯ ಸ್ತೋತ್ರ ನಿತ್ಯಹೇಳಿ

#
ಪುನರ್ವಸು

ಒಳ್ಳೆಯ ಸ್ವಭಾವ . ದೈವ ಭಕ್ತಿ ಎಲ್ಲರೊಂದಿಗೆ ಹಂಚಿ ತಿನ್ನುವ ಪ್ರವೃತ್ತಿ ಯವರು ..‌ ಈ ನಕ್ಷತ್ರದ ಅಧಿಪತಿ ಗುರು ದತ್ತಾತ್ರೇಯ , ಗುರುಚರಿತ್ರೆ ಪಾರಾಯಣ

#
ಪುಷ್ಯ

ಇವರು ರಾಜಕೀಯ ಇಷ್ಟ ಪಡುವವರು , ಜನ ಸೇವೆಯಲ್ಲಿ ಇರಲು ಇಷ್ಟಪಡುವರು . ಹಿರಿಯರಿಗೆ ಅಧಿಕ ಗೌರವ ಕೊಡುವವರು ...‌‌ ಈ ನಕ್ಷತ್ರದ ಅಧಿಪತಿ ಶನಿ ... ಹೆಚ್ಚಾಗಿ ನೀವು ಕೈಕಾಲು ಇಲ್ಲದವರಿಗೆ.ತಿನಿಸನ್ನು ಕೊಡಿಸಿ


#
ಆಶ್ಲೇಷಾ

ಈ ನಕ್ಷತ್ರದವರು ಆಡಂಬರ ಪ್ರೀಯರು , ಮತ್ತು ಅಲಂಕಾರಕ್ಕೆ ಮನ ಸೋಲುವವರು . ಸೌಂದರ್ಯ ಪ್ರೀಯರು... ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

#
ಮಖಾ

ಈ ನಕ್ಷತ್ರದವರು ಸ್ವಲ್ಪ ಹೆಚ್ಚೇ ಸ್ವಾಭಿಮಾನಿಗಳು , ಯಾರ ಹತ್ತಿರಾನೂ ಸಹಾಯ ಕೇಳುವದು ಕಡಿಮೆ , ಈ ನಕ್ಷತ್ರದ ಅಧಿಪತಿ ಕೇತು ಕುಲ ದೇವರ ಆರಾಧನೆ


#
ಪುಬ್ಬಾ

ಈ ನಕ್ಷತ್ರದವರು ಸ್ವಭಾವತಃ ಹಾಸ್ಯ ಪ್ರೀಯರು ಸ್ವಲ್ಪ ಸಿಟ್ಟು ಕಡಿಮೆ ತಾಳ್ಮೆ ಜಾಸ್ತಿ .... ಈ ನಕ್ಷತ್ರದ ಅಧಿಪತಿ ಶುಕ್ರ ಮಹಾಲಕ್ಷಿ ಅಷ್ಟೋತ್ತರ ಪಾರಾಯಣ

#
ಉತ್ತರಾ

ಈ ನಕ್ಷತ್ರದವರ ವ್ಯವಹಾರಿಕವಾಗಿ ತುಂಬಾ ಚತುರರು ..ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವವರು...‌ ಈ ನಕ್ಷತ್ರದ ಅಧಿಪತಿ ರವಿ ತಾಂಬೂಲ ದಾನ ಮಾಡುವದು ಒಳ್ಳೆಯದು

#
ಹಸ್ತ

ಈ ನಕ್ಷತ್ರದವರು ವಿಲಾಸಿ ಪ್ರೀಯರು , ಸ್ವಲ್ಪ ಸಿಟ್ಟು ಜಾಸ್ತಿ . ಆದರೆ ಹೃದಯವಂತರು ..‌‌ ಈ ನಕ್ಷತ್ರದ ಅಧಿಪತಿ ಚಂದ್ರ...... ಶಿವನಿಗೆ ಬಿಲ್ವ ಪತ್ರೆ ಅರ್ಚನೆ

#
ಚಿತ್ತ

ಈ ನಕ್ಷತ್ರದಲ್ಲಿ ಜನಿಸಿರುವವರು ಸಮಚಿತ್ತ ಉಳ್ಳವರು , ಕವಿಗಳು , ಸಾಹಿತ್ಯ ಅದ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರು..... ಈ ನಕ್ಷತ್ರದ ಅಧಿಪತಿ ಕುಜ ಅನ್ನದಾನ ಮಾಡುವಲ್ಲಿ ಹೋಗಿ ಕೈಲಾದ ಧನ ಸಹಾಯ ಹಾಗೂ ಸಹಾಯ ಮಾಡಿ

#
ಸ್ವಾತಿ

ಸ್ವಾತಿ ನಕ್ಷತ್ರದವರು ಮೃದು ಸ್ವಭಾವದವರು , ಬೇಗನೆ ಇನ್ನೊಬ್ಬರನ್ನು ನಂಬುವವರು . ಪರರಿಗೆ ಸಹಾಯ ಮಾಡುವವರು .. ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಆರಾಧನೆ

#
ವಿಶಾಖ

ಈ ನಕ್ಷತ್ರದವರು ಬುದ್ದಿವಂತರು ಜೊತೆಗೆ ಹಠದ ಸ್ವಭಾವ , ಯಾವದೇ ಕೆಲಸಕ್ಕೂ ತಮ್ಮ ಶ್ರಮದ ಬಗ್ಗೆ ಯೋಚಿಸುವದಿಲ್ಲ...‌‌ ಈ ನಕ್ಷತ್ರದ ಅಧಿಪತಿ ಗುರು .. ರಾಯರ ಆರಾಧನೆ ಮಾಡಿ

#
ಅನೂರಾಧ

ಈ ನಕ್ಷತ್ರದವರು ಕುಟುಂಬದ ಎಲ್ಲರ ಪ್ರೀತಿಗೆ ಪಾತ್ರರಾಗುವವರು , ಒಂದು ಕುಟುಂಬದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವರು..‌
ಈ ನಕ್ಷತ್ರದ ಅಧಿಪತಿ.... ಈ ನಕ್ಷತ್ರದ ಅಧಿಪತಿ ಶನಿ
ಬೇಳಿಗ್ಗೆ ತೈಲಾಭ್ಯಾಂಗ ಸ್ನಾನ ಮಾಡಿ

#
ಜೇಷ್ಠ

ಜಗಳತನದ ಜಾಯಮಾನವಲ್ಲದವರು , ನಿರ್ಮಲ ಸ್ವಭಾವ...ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ..

#
ಮೂಲಾ

ಈ ನಕ್ಷತ್ರದವರು ಕಲಾ ಪ್ರೀಯರು , ಎಲ್ಲರೊಂದಿಗೆ ಆರೋಗ್ಯಕರ ಸಂಬಂಧ ಹೊಂದಿರುವವರು ಆದರೆ ಇವರಿಗೆ ಆರೋಗ್ಯ ದ ತೊಂದರೆ ಜಾಸ್ತಿ ..‌ಈ ನಕ್ಷತ್ರದ ಅಧಿಪತಿ ಕೇತು ಸಾದ್ಯವಾದಾಗ ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ನಮಸ್ಕಾರ ಮಾಡಿ

#
ಪೂರ್ವಾಷಾಢ

ವಿನಯವಂತರು ಮಿತಬಾಷಿಗಳು ಬೇರೆಯವರ ದುಃಖಕ್ಕೆ ಬೇಗ ಸ್ಪಂದಿಸುವವರು ...‌ ಈ ನಕ್ಷತ್ರದ ಅಧಿಪತಿ ಶುಕ್ರ ಲಕ್ಷೀ ಅಷ್ಟೋತ್ತರ ಪಾರಾಯಣ ಮಾಡಿ

#
ಉತ್ತರಾಷಾಢ

ಸಮಯ ಚಿತ್ತದಿಂದ ನಡೆದುಕೊಳ್ಳುವವರು , ಅತೀಯಾದ ವಿನಯ ಸೌಮ್ಯ ಮಾತು .... ಈ ನಕ್ಷತ್ರದ ಅಧಿಪತಿ ರವಿ ಆದಿತ್ಯ ಹೃದಯ ಪಾರಾಯಣ ಮಾಡಿ

#
ಶ್ರವಣ

ಈ ನಕ್ಷತ್ರದವರು ತಮ್ಮ ತಪ್ಪನ್ನ ಬೇಗ ಒಪ್ಪಿಕೊಳ್ಳುವ ಮನೋಭಾವ , ಇನ್ನೋಬ್ಬರಿಗೆ ನೋವಿಗೆ ಬೇಗ ಸ್ಪಂದಿಸುವ ಮತ್ತು ಪರರಿಗೆ ಉಪಕಾರಿ...‌ ಈ ನಕ್ಷತ್ರದ ಅಧಿಪತಿ ಚಂದ್ರ
ಶಿವನಿಗೆ ರುದ್ರಾಭಿಷೇಕ ಮಾಡಿಸಿ.‌

#
ಧನಿಷ್ಠ

ಈ ನಕ್ಷತ್ರದವರು ಸ್ವಲ್ಪ ಕಠೋರ ಮಾತು , ಮಾತಿನಲ್ಲೂ ನಿಪುಣರು..‌ ಈ ನಕ್ಷತ್ರದ ಅಧಿಪತಿ ಕುಜ ...‌ ಮಂಗಳ ಚಂಡಿಕೆ ಸ್ತೋತ್ರ ಹೇಳಿ

#
ಶತಭಿಷಾ

ಈ ನಕ್ಷತ್ರದವರು ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವ ಚತುರರು....ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಸ್ತೋತ್ರ ಪಾರಾಯಣ ಮಾಡಿ

#
ಪೂರ್ವಾಭಾದ್ರ

ಈ ನಕ್ಷತ್ರದವರಿಗೆ ಶ್ರದ್ಧೆ ಜಾಸ್ತಿ ಯಾವದೇ ವಿಷಯ ಸರಿಯಾಗಿ ತಿಳಿದುಕಳ್ಳದೇ ಆಳವಾಗಿ ಅದ್ಯಯನ ಮಾಡದೇ ಒಪ್ಪಿಕೊಳ್ಳುವದಿಲ್ಲ ..ಈ ನಕ್ಷತ್ರದ ಅಧಿಪತಿ ಗುರು.... ಗುರು ಚರಿತ್ರೆ ಪಾರಾಯಣ ಮಾಡಿ

#
ಉತ್ತರಾಭಾದ್ರ

ಗತ್ತಿನ ಮಾತಿನವರು ಮಾತಿನಲ್ಲಿ ಚಾತುರ್ಯ ಉಳ್ಳವರು ಮಿತ ಬಾಷಿಗರು ..‌ಈ ನಕ್ಷತ್ರದ ಅಧಿಪತಿ ಶನಿ ಶಿವನಿಗೆ ಬುತ್ತಿ ಪೂಜೆ ಮಾಡಿಸಿ ಸಾದ್ಯವಾದಾಗ

#
ರೇವತಿ

ಈ ನಕ್ಷತ್ರದವರು ಸ್ವಭಾವತಃ ಒಳ್ಳೆಯವರು , ಆದ್ಯಾತ್ಮದ ಒಲವು ಹೊಂದಿರುವವರು , ದೇವರನ್ನು ಅಪಾರ ನಂಬುವವರು ಆದರೆ ಸ್ವಲ್ಪ ಅಹಂ ಹೊಂದಿರುವವರು..‌ ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ ಮಾಡಿ , ..

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

----------- Hari Om ---------