Power of Hari Nama Reciting or Smarane
Sri Hari
Sri Narayana
ಹರಿನಾಮಸ್ಮರಣೆಯ
ಮಹತ್ವ
Power
of Hari Nama Reciting
ಭಗವಂತನ ಸ್ಮರಣೆಯನ್ನು. ಯಾವಾಗಲೂ. ಮಾಡುತ್ತಿರಬೇಕು ಇದಕ್ಕೆ ಕಾರಣವೂ ಇದೆ .
ಜನ್ಮಲಾಭಃ ಪರಂ ಪುಂಸಾಂ ಅಂತೆ ನಾರಾಯಣಸ್ಮೃತಿಃ |
ಶ್ರೀಮದ್ ಭಾಗವತ(2 -1 -6)
ಜೀವನದ ಕೊನೆಯ ಗಳಿಗೆಯಲ್ಲಿ ನಾರಾಯಣನ ಸ್ಮರಣೆ ಬರಬೇಕು . ಆಗಲೇ ಜನದ್ಮಸಾರ್ಥಕತೆ ಲಾಭ ಎನಿಸುತ್ತದೆ . ಹೀಗೆ ಅಂತ್ಯಕಾಲದಲ್ಲಿ ಸ್ಮರಣೆ ಬರಬೇಕಾದರೆ ಮನುಷ್ಯನು ಸಂತತವಾಗಿ ಹರಿಸ್ಮರಣೆ ಮಾಡುತ್ತಿರಬೇಕು..
ಜಗದ್ಗುರು ಶ್ರೀಮಧ್ವಾಚಾರ್ಯರು
ಸಂತತಂ ಚಿಂತಯೇsನಂತಂ ಅಂತಕಾಲೆ ವಿಶೇಷತಃ
ಶ್ರೀಹರಿಯ ಸ್ಮರಣೆಯ ಅಂತ್ಯಕಾಲದಲ್ಲಿ ಬರಬೇಕಾದರೆ ಅವನನ್ನು ಸದಾ ಸ್ಮರಿಸುತ್ತಿರಬೇಕು ಎಂದು ದ್ವಾದಶಸ್ತೋತ್ರ( 1 -12) ದಲ್ಲಿತಿಳಿಸಿದ್ದಾರೆ .ಹಾಗೂ ತಮ್ಮ ಇನ್ನೊಂದು ಗ್ರಂಥದಲ್ಲಿ ಹರಿಸ್ಮರಣೆ ಕುರಿತು ಹೀಗೆ. ಹೇಳುತ್ತಾರೆ .
ಸ್ಮೃತತವ್ಯಂ ಸತತಂ ವಿಷ್ಣುಃ. ವಿಸ್ಮೃತವ್ಯೋ ನ ಜಾತುಚಿತ್ |
ಸರ್ವೆ ವಿಧಿನಿಷೇಧಾಸ್ಯುರೇತರೇಯೋರೇವ ಕಿಂಕರಾಃ ||
ಶ್ರೀಹರಿಯನ್ನು. ಯಾವಾಗಲೂ ಸ್ಮರಿಸುತ್ತಿರಬೇಕು ಯಾವಕಾಲದಲ್ಲಿಯೂ ಮರೆಯಲಾಗದು .ಏಕೆಂದರೆ ಸಮಸ್ತವಾದ ವಿಹಿತಗಳ ಅನುಷ್ಠಾನವಿಧಿಯೂ ನಿಷಿದ್ಧಗಳ ನಿಷೇಧವಿಧಿಯೂ ಈ ಹರಿಸ್ಮರಣ ವಿಸ್ಮರಣಗಳ ಅಧೀನ ಎಂದು ಸದಾಚಾರಸ್ಮೃತಿಯಲ್ಲಿ.ತಿಳಿಸಿದ್ದಾರೆ .
ವಿಪದ್ವಿಸ್ಮರಣಂ ವಿಷ್ಣೋಃ ಸಂಪನ್ನಾರಾಯಣ ಸ್ಮೃತಿಃ ||
ಉಕ್ತಿಯಂತೆ ವಿಸ್ಮರಣೆ ಅಂದರೆ ಸ್ಮರಣೆ ಮಾಡದಿರುವುದು ನಿಜವಾದ ವಿಪತ್ತು ಎನಿಸುತ್ತದೆ .ಮತ್ತು ಭಗವಂತನ ಸ್ಮರಣೆಯೇ ನಿಜವಾದ ಸಂಪತ್ತು ಎಂಬುದಾಗಿ ತಿಳಿದುಬರುತ್ತದೆ .
ಹರಿಸ್ಮರಣೆ ಕುರಿತು ಶ್ರೀಮದ್ ಭಾಗವತಕಾರರು ಹೀಗೆ ಹೇಳುತ್ತಾರೆ -
ಹರಿಸ್ಮೃತಿಃ ಸರ್ವ ವಿಪದ್ವಿಮೋಕ್ಷಿಣಿ |
ಶ್ರೀಹರಿಯ ಸ್ಮರಣೆಯು.ನಮ್ಮ. ಎಲ್ಲ ವಿಪತ್ತುಗಳನ್ನು ನಾಶಮಾಡುತ್ತದೆ .
ಶೃಣ್ವನ್ ಗೃಣನ್ ಸಂಸ್ಮರಯಂಶ್ಚ ಚಿಂತಯನ್
ನಾಮಾನಿ ರೂಪಾಣಿ ಚ. ಮಂಗಲಾನಿ ತೇ |
ಕ್ರಿಯಾಸು ಯಸ್ತ್ವಚ್ಚರಣಾರವಿಂದಯೋ
ರಾವಿಷ್ಟಚಿತ್ತೋ ನ ಭವಾಯ ಕಲ್ಪತೇ ||
ಶ್ರೀಹರಿಯ ಪವಿತ್ರವಾದ. ನಾಮಗಳನ್ನು ಕೇಳುತ್ತ.ಉಚ್ಚರಿಸುತ್ತ ಸ್ಮರಿಸುತ್ತ ಧ್ಯಾನಿಸುತ್ತ ನಿತ್ಯಕರ್ಮಗಳನ್ನು ಆಚರಿಸುತ್ತ ಅವನ ಪಾದರವಿಂದಗಳಲ್ಲಿ ಇಡಲ್ಪಟ್ಟ ಚಿತ್ತವುಳ್ಳವರು ಸಂಸಾರ ಬಂಧನಕ್ಕೆ ಒಳಗಾಗುವುದಿಲ್ಲ .
ಹರಿ ನಾಮದಲ್ಲಿಯೆ ಅಂತಹ ಒಂದು ವೈಶಿಷ್ಟ್ಯವಿದೆ ಎಂದು ಶ್ರೀಕೃಷ್ಣಾಮೃತಮಹಾರ್ಣವ ಗ್ರಂಥದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ತಿಳಿಸಿದ್ದಾರೆ
ಸಕೃದುಚ್ಚಾರಿತಂ ಯೇನ ಹರಿರಿತ್ಯಕ್ಷರದ್ವಯಂ |
ಬದ್ಧಃಪರಿಕರ ಹಸ್ತೇನ ಮೋಕ್ಷಾಯ ಗಮನಂ ಪ್ರತಿ ||
ಯಾರು ಎರಡು ಎರಡು ಆಕ್ಷರಗಳಿಂದ ಕೊಡಿದ ಹರಿ ಎಂಬ ನಾಮವನ್ನು ಒಮ್ಮೆಯಾದರೂ ಭಕ್ತಿಯಿಂದ ಉಚ್ಚರಿಸುವರೋ ಅವರಿಗೆ ಮೋಕ್ಷ ಮಾರ್ಗದ ಸಾಧನಗಳು ಸಿದ್ಧ ವಾದಂತೆಯೇ ಸರಿ .
ನಾಮ್ನೋಸ್ತಿ ಯಾವತಿಶಕ್ತಿಃ ಪಾಪನಿರ್ಹರಣೇ ಹರೇಃ |
ತಾವತ್ಕರ್ತುಂ ನ ಶಕ್ನೋತಿ ಪಾತಕಂ ಪಾತಕಿಜನಃ ||
ಹರಿ ಎಂದು ಭಕ್ತಿಯಿಂದ ಕರೆದಾಕ್ಷಣ ಮಾನವನ ಅದೆಷ್ಟು ಪಾಪಗಳು ನಾಶವಾಗುವುವೋ ಅಷ್ಟು ಪಾಪಗಳನ್ನು ಪಾಪಿಯೂ ಮಾಡಲು ಸಾಧ್ಯವಿಲ್ಲ.
ಹೇ ಜಿಹ್ವೇ ಮಮ ನಿಃಸ್ನೇಹೇ ಹರಿಂ ಕಿಂ ನಾನುಭಾಷಸೇ |
ವದಸ್ವ ಕಲ್ಯಾಣಿ ಸಂಸಾರೋದಧಿ ನೌ ಹರಿಃ ||
ನನಲ್ಲಿ ಪ್ರೀತಿಯಿಲ್ಲದ ನಾಲಿಗೇಯೇ ! ನೀನು ಹರಿಯನ್ನೇಕೆ ಕೀರ್ತನೆಮಾಡುತ್ತಿಲ್ಲ ? ಎಲೈ ಮಂಗಳಸ್ವರೂಪಿಯೇ ! ಸಂಸಾರವನ್ನು ದಾಟಲು ನೌಕೆಯಂತಿರುವ ಶ್ರೀಹರಿ ನಾಮವನ್ನು ಇನ್ನು ಮೇಲಾದರೂ ಉಚ್ಚರಿಸು .
ಕೃತೇಪಾಪೇsನುತಾಪೋ ವೈ ಪುಂಸಃ. ಪ್ರಜಾಯತೇ |
ಪ್ರಾಯಶ್ಚಿತ್ತಂ ತು.ತಸ್ಯೋಕ್ತಂ ಹರಿಸಂಸ್ಮರಣಂ ಪರಮ್ ||
ತಿಳಿಯದೇ ಪಾಪಗಳನ್ನು ಮಾಡಿ ಅನಂತರ ಪಶ್ಚಾತ್ತಾಪಪಡುವ ಪುರುಷನಿಗೆ ಉತ್ತಮ ಪ್ರಾಯಶ್ಚಿತ್ತವೆಂದರೆ ಶ್ರೇಷ್ಠವಾದ ಶ್ರೀಹರಿ ಸಂಸ್ಮರಣೆಯೇ ಆಗಿದೆ.
ಹರಯೇನಮಃ ಇತ್ಯುಚ್ಚೈರ್ಮುಚ್ಯತೆ. ಸರ್ವಪಾತಕಾತ್
ಹರಯೇ ನಮಃ ಎಂಬುದಾಗಿ ಉಚ್ಛಧಧ್ವನಿಯಿಂದ ಹೇಳುವವರು ಎಲ್ಲ ಪಾತಕಗಳಿಂದ ಮುಕ್ತರಾಗುತ್ತಾರೆ
ಭಾಗವತ ಪುರಾಣ || 12-12-46
ಹರತಿ ಅಹರತಿ ಸ್ವಸ್ಮಿನ್ ಸರ್ವಗುಣಾನ್ ಇತಿ ಹರಿಃ
ಸರ್ವಗುಣಪಪೂರ್ಣನಾದ್ದರಿಂದ ಇವನು ಹರಿ.
ಸ್ವಸ್ಮರಣಾದೇವ ಭಕ್ತಾನಾಂ ಅನೇಕಜನ್ಮರ್ಜಿತಪಾಪಸಂಚಯಂ ಅಪಹರತೀತಿ ಹರಿಃ |
ಸ್ಮರಣೆಮಾತ್ರದಿಂದ ಭಕ್ತರ ಅನೇಕ ಜನ್ಮಗಳ ಪಾಪಸಮೂಹವನ್ನು ಅಪಹರಿಸುವುದರಿಂದ ಇವನು ಹರಿ .
ಚಿತ್ತಸ್ಥಃಸನ್ ಕಲಿಕೃತಾನ್ ಸರ್ವಾನ್ ಪರಿಹರತೀತಿಹರಿಃ |
ಮನಸಿನಲ್ಲಿದ್ದು ಕಲಿಕೃತವಾದ ಎಲ್ಲ. ದೋಷಗಳನ್ನು ಪರಿಹರಿಸುವುದರಿಂದ ಇವನು ಹರಿ.
ಸರ್ವಯಜ್ಞಾದಿ ಭಾಗಹರಣಾತ್ ಹರಿಃ
ಎಲ್ಲ ಯಜ್ಞಗಳ ಭಾಗವನ್ನು ಸ್ವೀಕರಿಸುವುದರಿಂದ ಇವನು ಹರಿ.
ಯೇ ಸ್ಭರಂತಿ ಸದಾ ವಿಷ್ಣುಃ ವಿಶುದ್ಧೇನಾಂತರಾತ್ಮನಾ |
ತೇ ಪ್ರಯಾಂತಿ ಭವತ್ಯಕ್ತ್ವಾ ವಿಷ್ಣುಲೋಕ ಮನಾಮಯಃ ||
ಯಾರು ನಿರ್ಮಲ ಅಂತಃಕರಣದಿಂದ ಯಾವಾಗಲೂ ಶ್ರೀಹರಿಯನ್ನು ಸ್ಮರಿಸುವರೋ ಅವರು ಸಂಸಾರವನ್ನು ಬಿಟ್ಟು ದುಃಖಾದಿದೋಷಗಳಿಲ್ಲದ ಶ್ರೀಹರಿಯ ಲೋಕವನ್ನು ಪಡೆಯುವರು ಎಂದು ಜಗದ್ಗುರು ಶ್ರೀಮಧ್ವಾಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸಿದ್ದಾರೆ .
|| ಶ್ರೀಕೃಷ್ಣಾರ್ಪಣಮಸ್ತು|
-------- Hari Om --------