Sri Raghavendra Swamy & Sri Manchalamma Devi
Sri Raghavendra Swamy
Sri Manchalamma Devi
ಶ್ರೀ
ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಸಶರೀರರಾಗಿ ಬೃಂದಾವನ ಪ್ರವೇಶ
ಮಾಡುವ ಮೊದಲು ಶ್ರೀ ಕ್ಷೇತ್ರ
ಮಂತ್ರಾಲಯದ ಕ್ಷೇತ್ರ ದೇವತೆಯಾದ
ಶ್ರೀ ದುರ್ಗಾ ರೂಪಿ ಶ್ರೀ ಮಂಚಾಲಮ್ಮನ
ಸನ್ನಿಧಾನದಲ್ಲಿ ಶ್ರಾವಣ ಹುಣ್ಣಿಮೆಯ
ಹಿಂದಿನ ಶುಕ್ರವಾರದಂದು "
ಶ್ರೀ
ವರಮಹಾಲಕ್ಷ್ಮೀ ವ್ರತ "
ವನ್ನು ವಿಶೇಷ
ಪೂಜೆಯನ್ನು ಮಾಡಿ,
ಜಗನ್ಮಾತೆಯಾದ
ಶ್ರೀ ದುರ್ಗಾದೇವಿ (
ಶ್ರೀ ಮಂಚಾಲಮ್ಮ
) ಯನ್ನು
ತದೇಕ ಚಿತ್ತದಿಂದ ನೋಡುತ್ತಾ
ಹೃದಯ ತುಂಬಿ ಆನಂದ ಭಾಷ್ಪ
ಸುರಿಸುತ್ತಾ...
ನಮೋಸ್ತು ವರದೇ ಕೃಷ್ಣೇ ಕೌಮಾರಿ ಬ್ರಹ್ಮಚಾರಿಣೀ ।
ಬಾಲಾರ್ಕ ಸದೃಶಾಕಾಯೇ ಪೂರ್ಣಚಂದ್ರ ನಿಭಾನನೇ ।।
ಭಾಸಿ ದೇವಿ ಯಥಾ ಪದ್ಮಾ ನಾರಾಯಣ ಪರಿಗ್ರಹಾ ।
ಸ್ವರೂಪೇ ಬ್ರಹ್ಮಚರ್ಯ೦ ಚ ವಿಷದಂ ತವ ಖೇಚರಿ ।।
ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ ।
ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈ: ಪೂಜ್ಯಸೇಪಿ ಚ ।।
ತ್ರೈಲೋಕ್ಯ ರಕ್ಷಣಾರ್ಥಾಯ ಮಹಿಷಾಸುರನಾಶಿನಿ ।
ಪ್ರಸನ್ನಾ ಮೇ ಸುರಶ್ರೇಷ್ಟೇ ದಯಾ೦ ಕುರು ಶಿವಾ ಭವ ।।
ಪ್ರಣಮಂತಿ ಚ ಯೇ ತ್ವಾ೦ ಹಿ ಪ್ರಭಾತೇ ತು ನರಾ ಭುವಿ ।
ನ ತೇಷಾ೦ ದುರ್ಲಭಂ ಕಿಂಚಿತ್ ಪುತ್ರತೋ ಧನತೋಪಿ ವಾ ।।
ದುರ್ಗಾತ್ತಾರಯಸೇ ದುರ್ಗೇ ತತ್ತ್ವಂ ದುರ್ಗಾಸ್ಮೃತಾ ಬುಧೈ: ।
ತ್ವಂ ಕೀರ್ತಿ: ಶ್ರೀರ್ಧೃತಿ: ಸಿದ್ಧಿ ರ್ಹ್ರೀ ವಿದ್ಯಾ ಸಂತತಿರ್ಮತಿ: ।।
ಸಂಧ್ಯಾ ರಾತ್ರಿ: ಪ್ರಭಾ ನಿದ್ರಾ ಜ್ಯೋತ್ಸ್ನಾ ಕಾಂತಿ: ಕ್ಷಮಾ ।
ದಯಾ೦ ಪ್ರಣತಶ್ಚ ತಥಾ ಮೂರ್ಧ್ನಿ ತವ ದೇವಿ ಸುರೇಶ್ವರೀ ।।
ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯಾಸತ್ಯ ಭವಸ್ವ ನಃ ।
ಶರಣಂ ಭವ ಮೇ ಶರಣ್ಯೇ ಭಕ್ತವತ್ಸಲೇ ।।
ಎಂದು ಶ್ರೀ ಗುರುಸಾರ್ವಭೌಮರು ಶ್ರೀ ದುರ್ಗಾದೇವಿ ( ಶ್ರೀ ಮಂಚಾಲಮ್ಮ ) ಯನ್ನು ಭಕ್ತಿಯಿಂದ ಪ್ರಾರ್ಥಿಸಲು ಜಗನ್ಮಾತೆಯಾದ ಶ್ರೀ ದುರ್ಗಾದೇವಿಯು ಪ್ರತ್ಯಕ್ಷಳಾಗಿ " ವತ್ಸಾ! ನಿನ್ನ ಸ್ತೋತ್ರದಿಂದ ನಾನು ಸಂತುಷ್ಟಳಾಗಿದ್ದೇನೆ. ನನ್ನ ಪತಿಯೇ ( ಶ್ರೀ ಹರಿಯೇ ) ನಿನ್ನ ಭಕ್ತಿಗೆ ಮೆಚ್ಚಿ ಕಂಬದಿಂದ ಪ್ರಾದುರ್ಭವಿಸಿ ಕ್ಷಣ ಬಿಡದೇ ನಿನ್ನಲ್ಲಿ ನೆಲೆನಿಂತಿದ್ದಾನೆಂದ ಮೇಲೆ ನಾನು ನಿನ್ನಲ್ಲಿ ಅನುಗ್ರಹ ಮಾಡುವುದು ಸ್ವಾಭಾವಿಕವೇ ಆಗಿದೆ.

ಹಿಂದೆ ನಿನ್ನ ಮನೆತನಕ್ಕೆ ( ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕಾವತಾರದಲ್ಲಿ ) ನಾನೇ ( ಶ್ರೀ ದುರ್ಗಾ ) ಕುಲದೇವತೆಯಾಗಿದ್ದಾಗಲೂ ನೀನು ನನ್ನನ್ನು ಭಕ್ತಿಯಿಂದ ಆರಾಧಿಸಿದೆ. ಈಗಲೂ ನೀನು ನನ್ನನ್ನು ನಿನ್ನ ಕುಲದೇವತೆಯನ್ನಾಗಿ ಮಾಡಿಕೊ. ನಿನ್ನ ಕಾರ್ಯಕ್ಕೆ ನಾನು ಯಾವಾಗಲೂ ಬೆಂಗಾವಲಾಗಿರುತ್ತೇನೆ.
ಮುಂದೆ ಧರ್ಮವು ಸಂಪೂರ್ಣ ಗ್ಲಾನಿಯಾಗುವ ಸ್ಥಿತಿ ಬಂದಾಗ ನಾನೇ ಅವತರಿಸಿ ಬಂದು ಧರ್ಮ ಸಂಸ್ಥಾಪನೆ ಮಾಡಬೇಕೆಂದು ನನ್ನ ಪತಿಯ ( ಶ್ರೀ ಹರಿಯ ) ಆಜ್ಞೆಯಾಗಿದೆ. ಅಲ್ಲಿಯವರೆಗೂ ಧರ್ಮ ರಕ್ಷಣೆಯ ಭಾರ ನಿನ್ನಂತವರ ಮೇಲೆ ಬಿದ್ದಿದೆ.
ಆದ್ದರಿಂದ ನಮ್ಮಿಬ್ಬರ ( ಶ್ರೀ ದುರ್ಗಾ ಮತ್ತು ಶ್ರೀ ರಾಯರ ) ಕಾರ್ಯ ಮತ್ತು ಗುರಿ ಒಂದೇ. ವಾಯುದೇವರು ನಿನ್ನೊಳು ನಿತ್ಯಾವೇಶಯುಕ್ತನಾಗಿದ್ದರಿಂದಲೂ; ವಾಯುದೇವರ ಸಂಪೂರ್ಣ ಸಹಾಯವಿರುವುದರಿಂದಲೂ ನಿನ್ನಿಂದ ಅಸಾಧಾರಣವಾದ ಕಾರ್ಯಗಳಾಗತಕ್ಕಳದ್ದಾಗಿದೆ.
ನಾನು ( ಶ್ರೀ ದುರ್ಗಾ ರೂಪಿ ಶ್ರೀ ಮಂಚಾಲಮ್ಮ ) ನಿನ್ನನ್ನು ( ಶ್ರೀ ರಾಯರನ್ನು ) ಮುಂದು ಮಾಡಿಕೊಂಡು ಇಲ್ಲೇ ಶ್ರೀ ಕ್ಷೇತ್ರ ಮಂಚಾಲೆಯಲ್ಲೇ ವಾಸವಾಗಿರುತ್ತೇನೆ.
ನೀನು ( ಶ್ರೀ ರಾಯರು ) ಮಾತ್ರ ನನ್ನ ಲಾಂಛನವಾದ ಮೇಷ ಮಸ್ತಕಗಳನ್ನು ನಿನ್ನ ಮಠದ ಮುಂದಿನ ಬಾಗಿಲಿಗೆ ನಿನಗೆ ಎದುರಾಗಿ ಪ್ರತಿಷ್ಠಾಪಿಸು. ಅದು ಎಲ್ಲಾ ಅಸುರೀ ಶಕ್ತಿಗಳಿಗೂ ಪ್ರತಿಬಂಧಕ ರೂಪವಾದುದು. ಇದಲ್ಲದೆ ನಿನ್ನಿಂದ ( ಶ್ರೀ ರಾಯರಿಂದ ) ನಾನೇನನ್ನೂ ( ಶ್ರೀ ಮಂಚಾಲಮ್ಮ ) ಅಪೇಕ್ಷಿಸುವುದಿಲ್ಲ ಎಂದು ಹೇಳಿ ಅಭಯವಿತ್ತು ಅದೃಶ್ಯಳಾದಳು!!
ಜಗನ್ನಾಥನಾದ ಶ್ರೀ ಹರಿಯಿಂದ ನಿಯುಕ್ತರಾದ ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಯರು ತಮ್ಮ ಕಾರ್ಯ ಸಾಧನೆಯಲ್ಲಿ ಜಗನ್ಮಾತೆಯಾದ ಶ್ರೀ ದುರ್ಗಾ ರೂಪಿ ಮಂಚಾಲಮ್ಮನವರ ಬೆಂಬಲ ಪೂರ್ಣವಾಗಿರುವುದನ್ನು ತಿಳಿದು ಅತ್ಯಾನಂದವಾಯಿತು. ಈ ಎಲ್ಲವೂ ಶ್ರೀ ಹರಿಯ ಪರಮಾನುಗ್ರಹವೆಂದು ತಿಳಿದು ತಮ್ಮ ಉಪಾಸ್ಯಮೂರ್ತಿಯಾದ ಶ್ರೀ ಚತುರ್ಮುಖ ಬ್ರಹ್ಮದೇವರ ಕರಾರ್ಚಿತ ಶ್ರೀ ಮೂಲರಾಮನನ್ನು ಸ್ಮರಿಸಿದರು!!
---------------
Hari Om -------------