Lord Sri Venkateswara Swami
Sri
Srinivasa Stothra Composed by sri Vyasarajaru
*ಪ್ರಾತಃ
ಸ್ಮರಾಮಿ ರಮಯಾ ಸಹ ವೇಂಕಟೇಶಂ*
*ಮಂದಸ್ಮಿತಂ
ಮುಖ ಸರೋರುಹ ಕಾಂತಿರಮ್ಯಂ*
*ಮಾಣಿಕ್ಯ
ಕಾಂತಿ ವಿಲಸನ್ಮುಕುಟೋರ್ಧ್ವಪುಂಡ್ರಂ*
*ಪದ್ಮಾಕ್ಷ
ಲಕ್ಷ ಮಣಿ ಕುಂಡಲ ಮಂಡಿತಾಂಗಂ*
ಆ ಬಿರುದು ಬಂದ ಮುಗುಳ್ನಗೆ,ಮುಖ ಕಮಲದಲ್ಲಿ ಎದ್ದು ತೋರುವ ಚಿಮ್ಮುವ ಕಾಂತಿ,ಮಾಣಿಕ್ಯದ ಪ್ರಭೆ,ಪ್ರಸರಿಸಿದ ದಿವ್ಯವಾದ ಕಿರೀಟ,ನೆನಪನ್ನು ಮರುಕಳಿಸುವ ನಾಮ,ಕಮಲಾಕ್ಷಿಯ ಮಣಿಯ ಮಾಲೆ,ಕುಂಡಲದಿಂದ ಚೆಲುಗೊಂಡ ಆ ಮುದ್ದು ಮುಖವುಳ್ಳ,ರಮೆಯೊಡನೆ ಒಡಗೂಡಿ ನಿಂತ ಆ ಶ್ರೀನಿವಾಸನನ್ನು ಪ್ರಾತಃ ಕಾಲದಲ್ಲಿ ಸ್ಮರಿಸುವೆ ಎಂದಿದ್ದಾರೆ.ಅವನ ವೈಭವ,ಕುಂಡಲ ಮಂಡಿತ ಕರ್ಣ,ಸಾರ್ವಭೌಮತ್ವ ಸೂಚಕ ಕಿರೀಟ,ಮುಗುಳ್ನಗೆಯ ಮುಖ ಇವುಗಳು ಮನದಲ್ಲಿ ಮೂಡಿ ಬಂದಾಗಲೇ ಉತ್ಸಾಹ ಉಲ್ಲಾಸಗಳೊಡನೆ ದಿವವೂ ಪವಿತ್ರವೆನಿಸುವುದು.

*ಪ್ರಾತಃರ್ಭಜಾಮಿ
ಕರರಮ್ಯ ಸುಶಂಖಚಕ್ರಮ್*
*ಭಕ್ತಾಭಯ
ಪ್ರದಕಟಿಸ್ಥಲ ದತ್ತಪಾಣಿಮ್*
*ಶ್ರೀವತ್ಸ
ಕೌಸ್ತುಭಲಸನ್ಮಣಿ ಕಾಂಚನಾಢ್ಯಮ್*
*ಪೀತಾಂಬರಂ
ಮದನ ಕೋಟಿ ಸುಮೋಹನಾಂಗಮ್*
*
*ಶ್ರೀನಿವಾಸದೇವ*ರನ್ನು ನೆನೆಸಿಕೊಂಡವರ ನೋವುಗಳೆಲ್ಲಾ ಮಾಯವಾಗಿ ಸಂಕಲ್ಪ ಶಕ್ತಿ ಇಮ್ಮುಡಿಯಾಗವುದು.ಕಾಣಬೇಕೆಂದು ಗಂಟೆ ಗಟ್ಟಲೇ ಕಾದು,ಕಂಡ ಕೂಡಲೆ ಮರೆಯಾಗುವ ಅ ದಿವ್ಯಭವ್ಯರೂಪ ಅಪ್ರಮವಾದುದು. *ಶ್ರೀನಿವಾಸದೇವರ ಎರಡು ಕೈಗಳಲ್ಲಿ ಹೊಳೆಯುವ ಶಂಖ ಚಕ್ರಗಳಿವೆ. *ಚಕ್ರವು ಭಕ್ತರಿಗೆ ಬರುವ ಕಷ್ಟ,ಸಂಕಷ್ಟಗಳನ್ನು ತರಿದು ಹಾಕಿ ಬಿಡುವ ಶೀಘ್ರ ಆಯುಧವಾಗಿ ಭಕ್ತರ ರಕ್ಷಣೆಗೆ ಸನ್ನದ್ಧವಾದರೆ,ಶಂಖವು ಉತ್ತಮ ಜ್ಞಾನವನ್ನು ಮತ್ತು ಜಾಗೃತಿಯನ್ನೂ ನೀಡಿ,ಬದುಕಿನ ಪಲ್ಲವಿಯನ್ನು ಸುಸ್ವರಗೊಳಿಸುವುದರ ಸಂಕೇತವಾಗಿದೆ.*ಅದನ್ನು ಧರಿಸಿದ ದೇವಾಧಿದೇವನ ಆ ಆಯುಧಗಳೇ ನಮಗೆ ಭರವಸೆಯ ಭದ್ರ ಬುನಾದಿಯಾಗಿದೆ. ಆ ಕರುಣಾಮೂರ್ತಿಯ ಮತ್ತೊಂದು ಕರ ಟೊಂಕದಲ್ಲಿ ಸ್ಥಾಪಿತವಾಗಿರುವುದು.ಆತ ಭಕ್ತರಿಗಾಗಿ ಟೊಂಕಕಟ್ಟಿ ನಿಂತಿರುವ ಸಂಕೇತವಾಗಿದೆ.ಭಕ್ತರು ಸಂಸಾರ ಸಾಗರದಲ್ಲಿ ಮುಳುಗದಂತೆ ಮಾಡುವೆನೆಂದು ಸೂಚಿಸುತ್ತದೆ.
*ಶ್ರೀವತ್ಸ ಚಿಹ್ನೆಯ* ಧರಿಸಿ ಚಿನ್ಮಯನಾಗಿ ಚೇತೋಹಾರಿಯಾಗಿ ಕಾಣುತ್ತಾ ಕೌಸ್ತುಭಾಭರಣದಿಂದ ಕೌತುಕವನ್ನೇ ಕೆರಳಿಸುವ,ಹೊಳೆವ ಮಣಿಗಳ ಮಿನುಗುವ ಕಾಂತಿ ಇರುವ,ಅಪರಂಜಿಯ ಅಪರೂಪದ ಹೊಳವುಧರಿಸಿರುವ,ಚೆಲುವಾದ ಪೀತಾಂಬರ ತೊಟ್ಟಿರುವ,ಕೋಟಿ ಮನ್ಮಥರನ್ನು ಮರಳು ಮಾಡುವ ಆ ಮೋಹನಾಂಗನಾದ ಶ್ರೀನಿವಾಸನ್ನು ನಾನು ಭಜಿಸುವೆ ಎನ್ನುತ್ತಾರೆ.ಅವರ ಈ ಅಚ್ಚುಕಟ್ಟಾದ ವರ್ಣನೆ ದೈವಸಿದ್ಧಿಯ ಸಾಕ್ಷಾತ್ಕಾರದಿಂದಲೇ ರೂಪಗೊಂಡಿರಬೇಕು.
*ಪ್ರಾತಃರ್ನಮಾಮಿ
ಪರಮಾತ್ಮ ಪದಾರವಿಂದಂ*
*ಆನಂದ
ಸಾಂದ್ರನಿಲಯ್ಂ ಮಣಿನೂಪುರಾಢ್ಯಂ*
*ಏತತ್ಸಮಸ್ತ
ಜಗತಾಂ ಇತಿ ದರ್ಶಯಂತಂ*
*ವೈಕುಂಠಮತ್ರ
ಭಜತಾಂ ಕರಪಲ್ಲವೇನ*
*|| ೩
ಎಲ್ಲಕ್ಕಿಂತಲೂ ವ್ಯಾಸರಾಜರಿಗೆ ಅಪಾರವಾಗಿ ಆಕರ್ಷಕವಾದುದು ಶ್ರೀನಿವಾಸದೇವರ ಪಾದ.ಅದನ್ನು ಮುಟ್ಟಿ ಭಜಿಸಿದ ಮೇಲ್ಮಟ್ಟದ ಭಕುತಿ ಅವರದು.ಮಂಗಲ ರೂಪಿಯಾದ ಅವನ ಆ ಪಾದ ಕಮಲಗಲ ನನಪೇ ಬದುಕನ್ನು ಭವ್ಯವನ್ನಾಗಿಸಬಲ್ಲ್ದು.ಆನಂದದ ಸಾಂದ್ರತೆಯನ್ನೇ ಉಕ್ಕಿ ಹರಿಸುವ ಮಣಿಮಯ ಗೆಜ್ಜೆಗಳಿಂದ ಮಂಡಿತವಾದ ಆ ಕಮನೀಯವಾದ ಕಮಲಾಪತಿಯ ಪಾದ ಕಮಲಗಳು ಒಂದೆಡೆಯಾದರೆ ಮತ್ತೊಂದೆಡೆ ಅಭೀಷ್ಟವನ್ನೆಲ್ಲಾ ಮಳೆಗೆರೆಯುವ ಕೋಮಲವಾದ ಕರ ಮತ್ತೊಂದು ಕಡೆ.ಹೀಗೆ ಶ್ರೀನಿವಾಸದೇವರ ಕರ-ಚರಣಗಳು ಒಂದಕ್ಕೊಂದು ಮೀರಿ ಆಕರ್ಷಕವಾಗಿ ಪೂಜಿಸುವವನ ಮನವು ತೂಗುಯ್ಯಾಲೆಯಾಗಿ ಬೀಳುವಷ್ಟು ಸರ್ವಾಂಗ ಸುಂದರ.ಶ್ರೀನಿವಾಸದೇವರ ಆ ಕಳಮುಖವಾದ ಕೈ ದೂರದಿಂದ ಬಂದ ಭಕ್ತರಿಗೆ ನನ್ನ ಪಾದ ಮುಟ್ಟಿ ಭಜಿಸಿರಿ ಎಂದು ತಿಳಿಸಿ ಇದೇ ಭೂವೈಕುಂಠವೇಂದು ಕ್ಷೇತ್ರದ ಮಹಾತ್ಮೇಯನ್ನು ಒತ್ತಿ ಒತ್ತಿ ಹೇಳುತ್ತಿದೆಯೆನೋ ಎಂದಿದ್ದಾರೆ.ದೇವರನ್ನು ಭಕ್ತರು ಕಾಣಬೇಕಾದ ದೃಷ್ಟಿಯ ಪರಿಚಾಯಕವಾಗಿದೆ.

*ಶ್ರೀವ್ಯಾಸರಾಜರಿಂತ
ರಚಿತವಾದ ಶ್ರೀನಿವಾಸದೇವರ ಅಪ್ರತಿಮ
ಮಹಿಮೆಗಳುಳ್ಳ ಸರ್ವಮಂಗಲಮಯವಾದ
ಈ ಸ್ತೋತ್ರವನ್ನು ಯಾರು ಪ್ರಾತಃಕಾಲದಲ್ಲಿ
ಪಠಿಸುತ್ತಾರೋ ಅವರ ಎಲ್ಲ ಪಾಪಗಳು
ನಾಶವಾಗಿ ಅವರಿಗೆಲ್ಲರೂ
ಸನ್ಮಂಗಲವಾಗುತ್ತದೆ.*
*|| ನಾಹಂ ಕರ್ತಾ ಹರಿಃ ಕರ್ತಾ ||*
*|| ನಾಹಂ ಕರ್ತಾ ಹರಿಃ ಕರ್ತಾ ||*
*||
ಶ್ರೀಗುರ್ವಂತರ್ಗತ
ಶ್ರೀಭಾರತೀ ರಮಣ ಮುಖ್ಯಪ್ರಾಣಾಂತರ್ಗತ
ಶ್ರೀಲಕ್ಷ್ಮೀವೇಂಕಟೇಶಾರ್ಪಣಮಸ್ತು
Sri Vyasarajaru
Sri Vyasaraja is one of the Main pillars for the Madhwa Siddantha.The learned Appayya Dikshita is reported to have observed that the Great Vyasaraja -- Saved the Melon of Madhvaism from Busrting by securing it with three bands -- in the form of his three great works - 1) Nyayamrutha 2) Tatparya Chandrika 3) Tarka Tandava.
The above Venkateswara Stothra was composed by him during his visit to Tirupati and those who sincerely Chant this Stothra will get Success and ward off Completely all Sins done during the Past Karma's.

------------- Hari Om -----------