ಅಕ್ಷಯ ತೃತೀಯ--ಅಕ್ಷಯ ತೃತೀಯ ಮಹತ್ವ
ಅಕ್ಷಯ ತೃತೀಯ ಹಿಂದೂ ಧರ್ಮದ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ.
Akshaya Tritiya – Importance of Akshaya
Tritiya
ಅಕ್ಷಯಂ ಕರ್ಮ ಯಸ್ಮಿನ್ ಪರೇ ಸ್ವರ್ಪಿತಂ
ಪ್ರಕ್ಷಯಂ
ಯಾನ್ತಿ ದುಃಖಾನಿ ಯನ್ನಾಮತಃ
।
ಅಕ್ಷರೋ
ಯೋಽಜರಃ ಸರ್ವದೈವಾಮೃತಃ
ಕುಕ್ಷಿಗಂ
ಯಸ್ಯ ವಿಶ್ವಂ ಸದಾಽಜಾದಿಕಮ್ ।
Akshaya according to Dasaru
ಕ್ಷಯ ಅಂದರೆ ನಾಶ. ನಾಶವಿಲ್ಲದ್ದು ಅಕ್ಷಯ.
ನಾಶವಾಗುವದು ತಾತ್ಕಾಲಿಕ. ನಾಶವಾಗದ್ದು ಶಾಶ್ವತ. ಮಾಡುವ ಕೆಲಸವಿರಲಿ, ಬೇಡುವ ಫಲವಿರಲಿ. ಎಲ್ಲದರಲ್ಲಿಯೂ ಎರಡು ವಿಧ. - ಕ್ಷಯ ಮತ್ತು ಅಕ್ಷಯ.
ಲೌಕಿಕ ಸಾಧನೆ, ಲೌಕಿಕ ಫಲ - ಎರಡೂ ಕ್ಷಯ - ತಾತ್ಕಾಲಿಕ.
ಪಾರಮಾರ್ಥಿಕ ಸಾಧನೆ, ಪರಮ ಪುರುಷಾರ್ಥ ಫಲ - ಈ ಎರಡೂ ಅಕ್ಷಯ. ನಾಶವಾಗದ ಸಾಧನೆ, ಮತ್ತು ಮೋಕ್ಷವೆಂಬ ಶಾಶ್ವತ ಸುಖಕ್ಕೆ ಕಾರಣ.
ಅಕ್ಷಯ ತೃತಿಯಾ - ಬಂಗಾರ ಕೊಂಡಿಟ್ಟುಕೊಳ್ಳಿ ಎನ್ನುತ್ತಾರೆ ಮನೆಯಲ್ಲಿ ಹಿರಿಯರು.
ಏನದು ಬಂಗಾರ? ಎಂಥ ಬಂಗಾರ?
ಮತ್ತೆ ಆಭರಣದ ಬಂಗಾರವಾದರೆ - ಅದು ತಾತ್ಕಾಲಿಕ. ಇಂದು ನಮ್ಮದು, ನಾಳೆ ಮತ್ತೊಬ್ಬರದು. ಶಾಶ್ವತ, ನಾಶವಾಗದ ಬಂಗಾರ ಕೊಳ್ಳಿ ಎನ್ನುತ್ತಾರೆ ಜ್ಞಾನಿಗಳು.
' ರಂಗನಾಥನ ದಿವ್ಯ ಮಂಗಳ ನಾಮವೆಂಬ ಬಂಗಾರವಿಡಬಾರೆ' ಇದು ನಿನಗೊಪ್ಪುವ ಬಂಗಾರ. ಇದನ್ನೇ ಇಡು, ತೊಡು. ಶಾಶ್ವತ ಸುಖ ಸೂರಾಡು.- ಎನ್ನುತ್ತಾರೆ ಪುರಂದರವಿಠಲನಿಗೆ ಅತಿ ಪ್ರಿಯದಾಸರು.
ಹರಿನಾಮ ತಂದು ಕೊಡುವಂಥ ಸುಖವೇ ನಿಜವಾದ ಬಂಗಾರದಂಥ ಸುಖ. ಅದಕ್ಕೂ ಮಿಗಿಲೂ ಹೌದು. ಯಾಕೆ?
ಕಲಿಯುಗದಲ್ಲಿ ಹರಿನಾಮವೇ ಸಾಧಕ, ಮತ್ತೆ ತಾರಕ.
ಶರೀರ ನಾಶವಾಗುತ್ತದೆ. ಅದಕ್ಕಾಗಿ ಶರೀರ ವಿರುವವರೆಲ್ಲಾ ಕ್ಷರರು. ಲಕ್ಷ್ಮೀದೇವಿ ಅಪ್ರಾಕೃತ ಶರೀರೆ. ನಾಶವಿಲ್ಲ ಅವಳ ಶರೀರಕ್ಕೆ.ಅವಳು 'ಅಕ್ಷರ'ಳು. ಈ ಕ್ಷರ ಅಕ್ಷರರಿಗಿಂತ ನಾನು ಉತ್ತಮ, ಪುರುಷೋತ್ತಮ. ಎಂದು ಸರ್ವೋತ್ತಮ ಶ್ರೀ ಕೃಷ್ಣ ಗೀತೆಯಲ್ಲಿ ಸಾರುತ್ತಾನೆ. ಶ್ರೀ ಹರಿಯೇ ಕೃಷ್ಣ. ಅದಕ್ಕಾಗಿ ಹರಿನಾಮವೇ ಶ್ರೇಷ್ಠ. ಅದುವೇ ಬಂಗಾರ. ಅದಕ್ಕಾಗಿ ಈ ಬಂಗಾರ ಕೊಂಡುಕೊಳ್ಳಿ. ಹರಿನಾಮ ನಾಲಿಗೆ ಮೇಲಿರಲಿ ಎನ್ನುತ್ತಾರೆ ಹಿರಿಯರು.
ಮತ್ತೆ ಅಕ್ಷಯ ಫಲ ಕೊಡುವವನು ಶ್ರೀ ಹರಿಯೇ. ನಾವು ಪರಮಾತ್ಮನಿಗೆ ಕೊಡುವದು ಕ್ಷಯ ಮತ್ತು ಮಿತ. ಅದೂ ಅವನದೇ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ.
ಆದರೆ ಆತನು ಕೊಡುವದು - ಅಕ್ಷಯ, ಅಮಿತ. ಅದಕ್ಕಾಗಿ ದಾಸರು ಹೇಳಿದ್ದು - ಕೊಟ್ಟಿದುದ ಅನಂತ ಮಡಿ ಮಾಡಿ ಕೊಡುವ.
ಆಪತ್ತಿನಲ್ಲಿ ದ್ರೌಪದಿ ಕೊಟ್ಟದ್ದೇನು?
ಭಕ್ತಿ ಪುಷ್ಪ. ಕೃಷ್ಣ ಮರಳಿ ಕೊಟ್ಟದ್ದು ಅಕ್ಷಯ ವಸ್ತ್ರ ತೊಳೆದಿಟ್ಟ ಅಕ್ಷಯಪಾತ್ರೆಯಿಂದ ಅಕ್ಷಯ ಅಡಿಗೆ, ದ್ರೌಪದಿಗೆ ದೊರಕಿಸಿ ಕೊಟ್ಟಿದ್ದು ಶ್ರೀ ಕೃಷ್ಣನೇ.
ಒಪ್ಪಿಡಿ ಅವಲಕ್ಕಿಗೆ, ಕುಚೇಲನಿಗೆ ಅಖಿಳಾರ್ಥವ ಕೊಟ್ಟ ಕರುಣಾನಿಧಿ.
ತರಳ ಧ್ರುವರಾಯನಿಗೆ, ಭಕ್ತ ವಿಭೀಷಣನಿಗೆ ಅಕ್ಷಯ ಪಟ್ಟವನ್ನಿತ್ತ.
ಅಹಲ್ಯೆ ಅಕ್ಷಯ ಸೌಭಾಗ್ಯ, ಶಬರಿ ಸದ್ಗತಿ, ಪಡೆದರು. ಹನುಮಂತ ದೇವರು ಬೇಡಿ ನಿಜ ಭಕುತಿ ಪಡೆದವರು. ಜಯ ವಿಜಯರು ಅಕ್ಷಯ ಸುಖದ ಸದ್ಗತಿ ಪಡೆದರು.
ಅಕ್ಷಯ ದಾತನಿಂದ, ಅಕ್ಷಯ ಸುಖ ಪಡೆದವರ ಪಟ್ಟಿ ಅಕ್ಷಯವಾಗಿ ಬೆಳೆಯುತ್ತದೆ.
ಕೊನೆಗೆ ಮುಕ್ತರಿಗೆ ಯಾರು ಗತಿ?
ಶ್ರೀ ಮದಾಚಾರ್ಯರು ಹೇಳುತ್ತಾರೆ -
ಆನಂದದಶ್ಚ ಮುಕ್ತಾನಾಂ ಸ ಏವ ಏಕೋ ಜನಾರ್ದನಃ'
ಏಕಮೇವ ಅದ್ವೀತೀಯ ಜನಾರ್ಧನ
ಶ್ರೀ ವಿಷ್ಣುವೇ ಮುಕ್ತರಿಗೆ ಶಾಶ್ವತ ಅಕ್ಷಯ ಆನಂದ ಕೊಡುವವನು.
ಸಾಡೇತೀನಿ ಶುಭಮುಹೂರ್ತದ ಮಂಗಲಕರ ಶುಭದಿನ ಅಕ್ಷಯ ತೃತೀಯಾ. ಮಾಡಿದ ಪುಣ್ಯ, ಕೇಳಿದ ಫಲ ಅಕ್ಷಯವಾಗುವ ದಿನ.
ಹಿರಿಯರು ಹೇಳಿದಂತೆ ಇಂದು ಬಂಗಾರ ಕೊಳ್ಳೋಣ. ಕೂಡಿಸಿ ಉಳಿಸಿ ಬೆಳೆಸೋಣ. ಹರಿನಾಮವೆಂಬ. ೨೪ ಕ್ಯಾರೆಟ್ ಗೂ ಅನಂತಮಡಿ ಮಿಗಿಲಾದ, ದಿವ್ಯ ಬಂಗಾರ - ಉಚ್ಛರಿಸಿದವರಿಗೆ ಅಕ್ಷಯ ಸುಖ ಕೊಡುವ. ಲಕ್ಷ್ಮೀ ನರಸಿಂಹನ ನಾಮ
ವೆಂಬ ಚೊಕ್ಕಬಂಗಾರ ಕೊಂಡಿಟ್ಟು, ಹೃದಯದಲ್ಲಿ ಉಳಿಸಿ ಬೆಳೆಸೋಣ.
ಎಲ್ಲರಿಗೂ ಅಕ್ಷಯತೃತೀಯಾ ಹಬ್ಬದ ಶುಭ ಹಾರೈಕೆಗಳು.(ಮುಂಚಿತವಾಗಿ ಸಂಚಿತ ಕಳೆಯಲು ಸಂತರ ಸಂಗಡ ಸಾಧನೆಯಾಗಲು ಸಂಗತಿ ಇದು ತಾನೇ?
ಶ್ರೀ ಕೃಷ್ಣಾರ್ಪಣಮಸ್ತು ----------- Hari Om ----------
Wishes
ಅಕ್ಷಯ ತೃತೀಯ ಮಹತ್ವ:
ಅಕ್ಷಯ ತೃತೀಯ ಹಬ್ಬವು ಮುಖ್ಯವಾಗಿ ಅದೃಷ್ಟದ ಹಬ್ಬ ಎನ್ನಲಾಗುತ್ತದೆ. ಈ ದಿನ ಗಳಿಸಿದ ಪುಣ್ಯ ಎಂದಿಗೂ ಮುಗಿಯುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗೆಯೇ, ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಬಹುದು. ಪ್ರತಿ ತಿಂಗಳ ಶುಕ್ಲ ಪಕ್ಷದ ತೃತೀಯಾ ದಿನ ಮಂಗಳಕರವಾಗಿದ್ದರೂ, ವೈಶಾಖ ಮಾಸದ ತೃತೀಯಾವನ್ನು ಹೆಚ್ಚು ಶ್ರೇಷ್ಠ ಎನ್ನಲಾಗುತ್ತದೆ. ಈ ದಿನ ಪಂಚಾಂಗವನ್ನು ನೋಡದೆ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಈ ದಿನ ಪ್ರಾರಂಭಿಸಿದ ಕೆಲಸಗಳು ಸಹ ಉತ್ತಮ ಫಲಿತಾಂಶವನ್ನು ನೀಡುತ್ತವೆ. ಈ ಅಕ್ಷಯ ತೃತೀಯ ಆಚರಣೆ ಹಿಂದೆ ಅನೇಕ ಮಹತ್ವವಿದೆ. ಈ ಅಕ್ಷಯ ತೃತೀಯದ ಕಥೆ ಏನು ಎಂಬುದು ಇಲ್ಲಿದೆ.
ಬಡ ವ್ಯಕ್ತಿಯ ಕಥೆ:
ಅಕ್ಷಯ ತೃತೀಯಕ್ಕೆ ಸಂಬಂಧಿಸಿದ ಅನೇಕ ಕಥೆಗಳು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಪ್ರಸಿದ್ಧವಾಗಿವೆ. ಭವಿಷ್ಯ ಪುರಾಣದ ಪ್ರಕಾರ, ಧರ್ಮ ಎಂಬ ಧಾರ್ಮಿಕ ವ್ಯಕ್ತಿ ಶಕಲ್ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದ. ಆತ ಧರ್ಮನಿಷ್ಠ, ಸತ್ಯವಂತ ಮತ್ತು ದಯೆಗೆ ಹೆಸರಾಗಿದ್ದ, ಆದರೆ ತುಂಬಾ ಬಡವನಾಗಿದ್ದನು. ಇದರಿಂದ ಅವನು ಯಾವಾಗಲೂ ತೊಂದರೆ ಮತ್ತು ಚಿಂತಿತನಾಗಿರುತ್ತಿದ್ದ. ಆದರೆ ಒಂದು ದಿನ ಅವನು ಅಕ್ಷಯ ತೃತೀಯದಂದು ಗಂಗಾ ತೀರಕ್ಕೆ ಹೋಗಿ ತಮ್ಮ ಪೂರ್ವಜರಿಗೆ ನೈವೇದ್ಯವನ್ನು ಸಲ್ಲಿಸಿ, ತನಗೆ ಬಂದ ಹಣದಲ್ಲಿಯೇ ಇತರರಿಗೆ ಸಹ ದಾನ ಮಾಡುತ್ತಿದ್ದ. ಆದರೆ ಅವನ ಬಡತನ ಮಾತ್ರ ಎಂದಿಗೂ ಕಮ್ಮಿ ಆಗಿರಲಿಲ್ಲ.
ಹೀಗಿರುವಾಗ ಸ್ವಲ್ಪ ದಿನಗಳ ನಂತರ ಆತ ಮರಣ ಹೊಂದುತ್ತಾನೆ.ಅವನೇ ಮುಂದಿನ ಜನ್ಮದಲ್ಲಿ ಕುಶವತಿ ನಗರದ ಶ್ರೀಮಂತ ಕ್ಷತ್ರಿಯ ಕುಟುಂಬದಲ್ಲಿ ಜನಿಸುತ್ತಾನೆ. ಅಕ್ಷಯ ತೃತೀಯದಂದು ಮಾಡಿದ ಶುಭ ಕಾರ್ಯಗಳಿಂದಾಗಿ ಅವನು ಅತ್ಯಂತ ಸುಂದರ, ಧಾರ್ಮಿಕ ಮತ್ತು ದಾನಶೀಲ ರಾಜನಾದನು. ತನ್ನ ಆಳ್ವಿಕೆಯಲ್ಲಿಯೂ ಬ್ರಾಹ್ಮಣರಿಗೆ ಅನ್ನ, ಭೂಮಿ, ಗೋವು ಮತ್ತು ಚಿನ್ನವನ್ನು ದಾನ ಮಾಡಿದನು. ಅವನು ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಸತ್ಕರ್ಮಗಳ ಫಲವನ್ನು ಶಾಶ್ವತ ಫಲಗಳ ರೂಪದಲ್ಲಿ ಪಡೆದನು. ಅಕ್ಷಯ ತೃತೀಯದಂದು ಶುಭ ಕಾರ್ಯಗಳನ್ನು ಮಾಡುವವರಿಗೆ ಅವರ ಪುಣ್ಯ ಫಲಗಳು ಎಲ್ಲಾ ಜನ್ಮದಲ್ಲೂ ಸಿಗುತ್ತದೆ ಎನ್ನಲಾಗುತ್ತದೆ.
ಈ ವರ್ಷ ಎಪ್ರಿಲ್ 30 ಬುಧವಾರದಂದು ಅಕ್ಷಯ ತೃತೀಯವನ್ನು ಆಚರಿಸಲಾಗುವುದು ಮತ್ತು ಜ್ಯೋತಿಷ್ಯದ ಪ್ರಕಾರ ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯದಂದು ಇದನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಬಹಳ ಮುಖ್ಯವಾಗಿದೆ. ಅಕ್ಷಯ ತೃತೀಯದಂದು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಚಿನ್ನವನ್ನು ಸಹ ಖರೀದಿಸಲಾಗುತ್ತದೆ. ಆದರೆ ಚಿನ್ನದ ಹೊರತಾಗಿ, ನೀವು ಖರೀದಿಸುವುದರಿಂದ ಪ್ರಯೋಜನ ಪಡೆಯುವ ಕೆಲವು ವಸ್ತುಗಳೂ ಇವೆ.
Significance of Akshaya Tritiya
-
ಭೂಮಿಗೆ ಬಂದಿದ್ದ ಗಂಗೆ:
ಇನ್ನೊಂದು ಕಥೆಗಳ ಪ್ರಕಾರ, ಅಕ್ಷಯ ತೃತೀಯವನ್ನು ತ್ರೇತಾಯುಗದಲ್ಲಿ ಆರಂಭಿಸಲಾಯಿತು. ಗಂಗಾ ದೇವಿ ಸ್ವರ್ಗದಿಂದ ಭೂ ಲೋಕಕ್ಕೆ ಇಳಿದು ಬಂದ ದಿನವೇ ಅಕ್ಷಯ ತೃತೀಯ ಎಂದೂ ಸಹ ಹೇಳಲಾಗುತ್ತದೆ. ಇನ್ನು ಎಲ್ಲರಿಗೂ ಗೊತ್ತಿರುವಂತೆ ಸಂಪತ್ತಿನ ಒಡೆಯ ಕುಬೇರ. ಈ ಕುಬೇರನಿಗೆ ಅಷ್ಟೈಶ್ವರ್ಯಗಳು ಸಿಕ್ಕ ದಿನ ಈ ಅಕ್ಷಯ ತೃತೀಯವಂತೆ. ಲಕ್ಷ್ಮಿಯಿಂದ ಸಂಪತ್ತು ಪಡೆದು ಕುಬೇರ ಶ್ರೀಮಂತನಾದ ಎನ್ನಲಾಗುತ್ತದೆ.
ಅಕ್ಷಯ ತೃತೀಯ ದಿನದ ಮಹಿಮೆಗಳು ಹೀಗಿದೆ:
ನಂಬಿಕೆಗಳ ಪ್ರಕಾರ ಇಂದಿನಿಂದ ತ್ರೇತಾಯುಗ ಆರಂಭವಾಯಿತು ಎನ್ನಲಾಗುತ್ತದೆ. ಅಲ್ಲದೇ, ತಾಯಿ ಅನ್ನಪೂರ್ಣ ಜನಿಸಿದ ದಿನ ಇದು ಎನ್ನುವ ಪ್ರತೀತಿ ಸಹ ಇದೆ. ಮಹರ್ಷಿ ಪರಶುರಾಮರ ಜನ್ಮದಿನವೂ ಇದೇ ದಿನ. ಈ ದಿನದಂದು ಶ್ರೀಕೃಷ್ಣನ ಬಾಲ್ಯದ ಗೆಳೆಯ ಸುದಾಮನ ಭೇಟಿಯೂ ಆಗಿದ್ದ ಹಾಗೂ ಆತನಿಗೆ ಅಷ್ಟೈಶ್ವರ್ಯಗಳನ್ನ ದಯಪಾಲಿಸಿದ್ದ. ಮಹಾಭಾರತದ ಕಾಲದಲ್ಲಿ ದುರ್ಯೋಧನನು ದ್ರೌಪದಿಯನ್ನು ವಸ್ತ್ರಾಪಹರಣ ಮಾಡಿದ ದಿನ ಅಕ್ಷಯ ತೃತೀಯ ಮತ್ತು ಶ್ರೀ ಕೃಷ್ಣನು ದ್ರೌಪದಿಯ ಕೂಗನ್ನು ಕೇಳಿ ಅವಳನ್ನು ರಕ್ಷಿಸಿದ ಎನ್ನಲಾಗುತ್ತದೆ.
Chandana alankara to Rayaru on Akshaya tritiya day
-
ಅಕ್ಷಯ ತೃತೀಯ ಮಹತ್ವ:
ಅಕ್ಷಯ ತೃತೀಯ ಹಿಂದೂ ಧರ್ಮದ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕವಾಗಿ, ಈ ದಿನವು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಲ್ಲಿ ಬರುತ್ತದೆ ಮತ್ತು ಹಿಂದೂ ಟ್ರಿನಿಟಿಯಲ್ಲಿ ರಕ್ಷಕನಾದ ಭಗವಾನ್ ವಿಷ್ಣುವಿನೊಂದಿಗೆ ನಿಕಟ ಸಂಬಂಧ ಹೊಂದಿದೆ. ಭಕ್ತರು ಜಪ (ಪಠಣ), ಯಜ್ಞ (ತ್ಯಾಗ), ಮತ್ತು ದಾನ-ಪುಣ್ಯ (ದಾನ) ನಂತಹ ವಿವಿಧ ಪವಿತ್ರ ಆಚರಣೆಗಳಲ್ಲಿ ತೊಡಗುತ್ತಾರೆ, ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ನಂಬಲಾಗಿದೆ.
ಇದಲ್ಲದೆ, ಇದು ತ್ರೇತಾ ಯುಗದ ಐತಿಹಾಸಿಕ ಆರಂಭವನ್ನು ಸಹ ಸೂಚಿಸುತ್ತದೆ. ಆರ್ಥಿಕವಾಗಿ, ಅಕ್ಷಯ ತೃತೀಯವು ಚಿನ್ನದ ಮಾರಾಟದಲ್ಲಿ ಹೆಚ್ಚಳವನ್ನು ನೋಡುತ್ತದೆ, ಏಕೆಂದರೆ ಈ ದಿನದಂದು ಚಿನ್ನವನ್ನು ಖರೀದಿಸುವುದು ನಿರಂತರ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಭಾವಿಸಲಾಗಿದೆ. ದೇಶಾದ್ಯಂತ ಇರುವ ಜ್ಯುವೆಲರ್‌ಗಳು ಈ ದಿನಕ್ಕಾಗಿ ತಿಂಗಳುಗಳ ಮುಂಚೆಯೇ ತಯಾರು ಮಾಡುತ್ತಾರೆ, ವಿಶೇಷ ರಿಯಾಯಿತಿಗಳನ್ನು ನೀಡುತ್ತಾರೆ ಮತ್ತು ಗ್ರಾಹಕರನ್ನು ಆಕರ್ಷಿಸಲು ಹೊಸ ಸಂಗ್ರಹಗಳನ್ನು ಪ್ರಾರಂಭಿಸುತ್ತಾರೆ.
--------------- Hari Om --------------